Tag: ಕರ್ನಾಟಕ ಸರಕಾರ

  • ‘ಮುಟ್ಟಿ’ನ ಯೋಜನೆಗೆ ‘ಕಾಂತಾರ’ ನಟಿ ಸಪ್ತಮಿ ರಾಯಭಾರಿ

    ‘ಮುಟ್ಟಿ’ನ ಯೋಜನೆಗೆ ‘ಕಾಂತಾರ’ ನಟಿ ಸಪ್ತಮಿ ರಾಯಭಾರಿ

    ರ್ನಾಟಕ ಸರಕಾರವು  (Government of Karnataka) ಇಂದು ‘ಮೈತ್ರಿ ಮುಟ್ಟಿನ ಕಪ್’  (Maitri MUttina Cup Yojana) ಯೋಜನೆಯನ್ನು ಜಾರಿ ಮಾಡಿದೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಯೋಜನೆಯ ರಾಯಭಾರಿ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ  (Saptami Gowda) ಕೂಡ ಭಾಗಿಯಾಗಿದ್ದರು.

    ಮೈತ್ರಿ ಮುಟ್ಟಿನ ಕಪ್ ಯೋಜನೆಯ ಕುರಿತಂತೆ ಮಾತನಾಡಿದ ಸಪ್ತಮಿ ಗೌಡ, ಮುಟ್ಟಿನ ಸಂದರ್ಭದಲ್ಲಿ ಆಗುವ ತೊಂದರೆಗಳ ಕುರಿತು ಸಪ್ತಮಿ ಗೌಡ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಈ ಯೋಜನೆಯ ಕುರಿತಂತೆ ಅವರು ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಿದರು.  ಮುಟ್ಟಿನ ಕಪ್ ಉಪಯೋಗದ ಬಗ್ಗೆಯೂ ಅವರು ಮಾತನಾಡಿದರು.

    ಕಾಂತಾರ ಸಿನಿಮಾದ ಯಶಸ್ಸಿನ ನಂತರ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಸಪ್ತಮಿ ಭಾಗಿಯಾಗಿದ್ದಾರೆ. ಸ್ವತಃ ಅವರು ಕೂಡ ವೈಯಕ್ತಿಕವಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇದೀಗ ಸರಕಾರ ಯೋಜನೆಯಲ್ಲೂ ಅವರು ಭಾಗಿಯಾಗಿ, ಮಹಿಳೆಯರ ಮುಟ್ಟಿನ ಸಮಸ್ಯೆಯ ಕುರಿತಂತೆ ಜಾಗೃತಿಗೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಪ್ರಸ್ತಾಪ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಅವರ ಚೊಚ್ಚಲ ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಳ್ಳಲಾಗಿದೆ. ಈ ಇಬ್ಬರು ಕಲಾವಿದರು ನಿಧನರಾದಾಗ ಸಾರ್ಥಕ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ ಇವರ ಆ ಸೇವೆಯನ್ನು ಪರಿಗಣಿಸಿ, ಸಾರ್ವಜನಿಕರಿಗೆ ಪ್ರೇರೇಪಿಸುವಂತಹ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಇದನ್ನೂ ಓದಿ : 125 ಸಿನಿಮಾಗಳಿಂದ 200 ಚಿತ್ರಗಳಿಗೆ ಸಬ್ಸಿಡಿ ಏರಿಕೆ: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

    ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಸಂಚಾರಿ ವಿಜಯ್ ನಿಧನರಾದಾಗ ಅವರ ಅಂಗಾಂಗ ದಾನ ಮಾಡಿದ್ದರು. ಹೀಗಾಗಿ ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು, ಇದಕ್ಕೆ ಪೂರಕವಾಗಿ ಈಗಾಗಲೇ ಬೆಂಗಳೂರಿನಲ್ಲಿರುವ  Institute of Gastroenterology and Organ Transplant ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ

    ಅಂಗಾಂಗ ಮರುಪಡೆಯುವಿಕೆಯ ರಾಯಭಾರಿಗಳಂತೆ ಒಂದು ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಅವರ ಹೆಸರನ್ನು ಸರಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿದೆ.