ಧಾರವಾಡ: ಸೆಪ್ಟೆಂಬರ್ 1 ರಿಂದ 20 ರವರೆಗೆ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ಅಡಿಯಲ್ಲಿ ಸೇನಾ ಭರ್ತಿಗಾಗಿ ದೈಹಿಕ ಪರೀಕ್ಷೆ ನಡೆಯಲಿವೆ. ಈ ದೈಹಿಕ ಪರೀಕ್ಷೆಗೆ ಸಾಕಷ್ಟು ವಿದ್ಯಾರ್ಥಿಗಳು ಹೋಗಲು ತಯಾರಿ ನಡೆಸಿದ್ದಾರೆ. ಆದರೆ ಈಗ ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಆರಂಭವಾಗಿದೆ.
ಧಾರವಾಡ ಕರ್ನಾಟಕ ವಿವಿಯ ಪದವಿ ಪರೀಕ್ಷೆಗಳು ಕೂಡಾ ಇದೇ ಸಮಯದಲ್ಲಿ ಇವೆ. ಈಗಾಗಲೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 20ರವರೆಗೆ ಕರ್ನಾಟಕ ವಿವಿ ಪರೀಕ್ಷಾ ದಿನಾಂಕ ಘೋಷಣೆ ಮಾಡಿ ಆಗಿದೆ. ಆದರೆ ಇದೇ ಸಮಯದಲ್ಲಿ ಸೇನಾ ಭರ್ತಿಯ ದೈಹಿಕ ಪರೀಕ್ಷೆ ಇವೆ. ಕರ್ನಾಟಕ ವಿವಿ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಈಗ ಪದವಿ ಪರೀಕ್ಷೆ ಬರೆಯಬೇಕೋ ಅಥವಾ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ. ಹೀಗಾಗಿ ಕರ್ನಾಟಕ ವಿವಿಯ ಮೌಲ್ಯ ಮಾಪನ ಕುಲಸಚಿವರಿಗೆ ಮನವಿ ಕೊಟ್ಟು ಸೆಪ್ಟೆಂಬರ್ 20ರ ನಂತರ ಪದವಿ ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: 12 ಸಾವಿರ ರೂ. ಒಳಗಿನ ಚೀನಿ ಫೋನ್‌ಗಳನ್ನು ನಿಷೇಧಿಸಲ್ಲ: ಕೇಂದ್ರ ಸರ್ಕಾರ
ಕರ್ನಾಟಕ ವಿವಿ ಕೂಡಾ ಈ ಹಿಂದೆ ಇದೇ ವಿಚಾರವಾಗಿ ಕೊಟ್ಟ ಅರ್ಜಿಯನ್ನು ಆಲಿಸಿದೆ. ಆದರೆ 2 ದಿನ ಮಾತ್ರ ಅಗ್ನಿಪಥ್ ದೈಹಿಕ ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಆದರೆ ದಿನ ಕಳೆದಂತೆ ಹೆಚ್ಚು ಮನವಿ ಬರುತ್ತಿರುವುದರಿಂದ ಸಮಸ್ಯೆ ಆರಂಭವಾಗಿದೆ. ಎರಡು ಅಥವಾ ಮೂರು ದಿನ ಪರೀಕ್ಷೆ ಮುಂದೂಡಬಹುದು. ಆದರೆ 20 ದಿನ ಪರೀಕ್ಷೆ ದಿನಾಂಕ ಬದಲಾವಣೆ ಮಾಡುವುದು ಕಷ್ಟ ಎಂದು ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ಕೃಷ್ಣ ಮೂರ್ತಿ ಹೇಳ್ತಾರೆ. ಅದರಲ್ಲಿ ಮತ್ತೆ ಬೇರೆ ಸಮಸ್ಯೆ ಬಂದರೆ ಅದಕ್ಕೂ ನಾವು ಪರೀಕ್ಷೆ ಸಮಯ ಬದಲಾವಣೆ ಮಾಡಬೇಕಾಗಿದ್ದು, ಈ ಬಗ್ಗೆ ಕುಲಪತಿಗಳ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಗ್ರಾಮ ಈಗ ಯೂಟ್ಯೂಬ್ ಹಬ್ – ಬೀದಿ ಬೀದಿಯಲ್ಲೂ ಸಿಗ್ತಾರೆ ಕ್ರಿಯೇಟರ್‌ಗಳು
Live Tv
[brid partner=56869869 player=32851 video=960834 autoplay=true]
ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗ್ತಾರೆ. ಅವರು ಬಂದಾಗ ಅವರಿಗೆ ಉಳಿದುಕೊಳ್ಳಲು ವಸತಿ ನಿಲಯವೊಂದು ನಿರ್ಮಾಣ ಮಾಡಲಾಗಿದೆ. ಅದುವೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ. ಇದು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿ ನಿಲಯವಾಗಿದ್ದರೂ, ಇದನ್ನು ಕರ್ನಾಟಕ ವಿವಿ ಸುಪರ್ದಿಗೆ ನೀಡಲಾಗಿದೆ. ಕರ್ನಾಟಕ ವಿವಿಯ ಸಿಬ್ಬಂದಿಯೇ ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಾರೆ.
ವಸತಿ ನಿಲಯದಲ್ಲಿ ಕೆಲಸ ಮಾಡುವ ಕ್ಲರ್ಕ್ ಮೇಡಂ ಶಿಲ್ಪಾ ಏರೆಸಿಮೇ ಇಲ್ಲಿ ಬರುವ ವೃತ್ತಿ ನಿರತ ಹಾಗೂ ವಿದ್ಯಾರ್ಥಿನಿಯರ ಬಾಡಿಗೆ ಹಣವನ್ನ ಬ್ಯಾಂಕಿಗೆ ಕಟ್ಟಬೇಕು. ಆದರೆ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಇವರು ಸಿಕ್ಕಿ ಬಿದ್ದಿದ್ದಾರೆ. ಈ ವಸತಿ ನಿಲಯದಲ್ಲಿ ಬಂದು ತಂಗುವ ಅತಿಥಿಗಳಿಗೆ ಪ್ರತಿ ದಿನಕ್ಕೆ 60 ರೂಪಾಯಿ ಬಾಡಿಗೆ ಇದೆ. ಇಲ್ಲಿ ಬಂದು ತಂಗುವವರು ಬ್ಯಾಂಕಿಗೆ ಹೋಗಿ ಹಣ ಕಟ್ಟಿ ಬರಬೇಕು. ಆದರೆ ಈ ಕ್ಲರ್ಕ್ ಅಮ್ಮಾ ಅದನ್ನು ಬ್ಯಾಂಕಿಗೆ ಕಟ್ಟದೇ ತನ್ನ ಜೇಬಿಗೆ ಇಳಿಸುತ್ತಿರುವುದು ಕಂಡು ಬಂದಿದೆ.
ಬಂದವರು ಯಾರು, ಅವರ ಗುರುತಿನ ಚೀಟಿ ಕೂಡಾ ಇಲ್ಲದೇ ಅವರಿಗೆ ಇಲ್ಲಿ ದಾಖಲಾತಿ ನೀಡಲಾಗುತ್ತಿದೆ. ಇಲ್ಲಿ ಒಬ್ಬ ಗೆಸ್ಟ್ ತಂಗಿದರೆ ಅವರಿಗೆ ಪ್ರತಿ ತಿಂಗಳಿಗೆ 1,800 ಬಾಡಿಗೆ ಇರುತ್ತದೆ. ಪ್ರತಿ ತಿಂಗಳು ಇಲ್ಲಿ 150 ಕ್ಕೂ ಹೆಚ್ಚು ಅತಿಥಿಗಳು ಬಂದು ಇರುತ್ತಾರೆ. ಆದರೆ ಅದರಲ್ಲಿ ಅರ್ಧ ಹಣ ಇದೇ ಕ್ಲರ್ಕ್ ಲಪಟಾಯಿಸುತ್ತಿದ್ದು, ಇದರಿಂದ ಸರ್ಕಾರಕ್ಕೆ ಸೇರಬೇಕಾಗಿದ್ದ ಹಣದಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಹಣ ಗುಳುಂ ಮಾಡಲಾಗುತ್ತಿದೆ.
ನೆಟ್-ಸೆಟ್ ಪರೀಕ್ಷೆಗಳಿದ್ದಾಗ ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಒಂದು ದಿನ ಬಂದು ಹೋಗುವ ಗೆಸ್ಟ್ ಗಳ ಲೆಕ್ಕವೇ ಇಲ್ಲಿ ಇಲ್ಲದಂತಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡುವ ವೇಳೆ ಕ್ಲರ್ಕ್, 4 ದಿನ ವಸತಿ ನಿಲಯದಲ್ಲಿ ಬಂದು ಇರುವ ಆ ವಿದ್ಯಾರ್ಥಿನಿಯ ಹಣ ಪಡೆದು, ಬ್ಯಾಂಕಿಗೆ ಕೂಡಾ ಕಟ್ಟಿಲ್ಲ. ಪ್ರತಿ ದಿನಕ್ಕೆ 60 ರಂತೆ ನಾಲ್ಕು ದಿನದ 240 ಹಣ ಕಟ್ಟಿರುವ ವಿದ್ಯಾರ್ಥಿನಿ ಜೊತೆ ಮಾತನಾಡಿರುವ ಕ್ಲರ್ಕ್ ಮೇಡಮ್, ವಿದ್ಯಾರ್ಥಿನಿ ಕೊಟ್ಟ ಹಣವನ್ನ ಬ್ಯಾಂಕ್ ಚಲನ್ ನಲ್ಲಿ ಸುತ್ತಿ ಇಟ್ಟುಕೊಂಡಿದ್ದಾಳೆ. ಇನ್ನು ಆ ವಿದ್ಯಾರ್ಥಿನಿ ಅಲ್ಲಿ ಬಂದು ಇದ್ದಳೋ, ಅಥವಾ ಇಲ್ಲವೋ ಎಂದು ಕೂಡಾ ಮೇಡಮ್‍ಗೆ ಗೊತ್ತೇ ಇಲ್ಲ. ಸರ್ಕಾರಿ ಸಂಬಳ ಪಡೆಯುವ ಶಿಲ್ಪಾ ಮೇಡಮ್ ಗೆ ಗಿಂಬಳ ಕೂಡಾ ಬೇಕೇ ಬೇಕು.
ಒಟ್ಟಿನಲ್ಲಿ ಸರ್ಕಾರಕ್ಕೆ ಕಟ್ಟುವ ಹಣ ಎಲ್ಲಾ ಮೇಡಮ್ ಅವರ ಪರ್ಸ್‍ನಲ್ಲಿ ಇಳಿಯುತ್ತಿದ್ದು, ಪ್ರತಿ ವರ್ಷ ಇವರು ಮಾಡಿದ ಈ ಕೆಲಸದಿಂದ ಸರ್ಕಾರಕ್ಕೆ 2 ಲಕ್ಷ ನಷ್ಟ ಆಗುತ್ತಿದೆ. ಇದರ ಹಿಂದೆ ಇನ್ನು ಎಷ್ಟು ಜನರು ಕೂಡಿ ಇದನ್ನು ಮಾಡುತ್ತಿದ್ದಾರೆ. ಅನ್ನೋದನ್ನು ಕರ್ನಾಟಕ ವಿವಿ ಆಡಳಿತ ಮಂಡಳಿಯೇ ತನಿಖೆ ನಡೆಸಬೇಕಿದೆ.
ಕ್ಲರ್ಕ್ ಹಾಗೂ ವಿದ್ಯಾರ್ಥಿನಿ ನಡುವೆ ನಡೆದ ಮಾತುಕತೆ: ವಿದ್ಯಾರ್ಥಿನಿ: ಮೇಡಮ್ ಹಾಸ್ಟೇಲ್ ಅಡ್ಮಿಷನ್ ಆಗಬೇಕಿತ್ತು. ಕ್ಲರ್ಕ್ ಶಿಲ್ಪಾ: ಇಲ್ಲ ಕೊಡಲ್ಲ, ಯಾರು ನೀವು?
ವಿದ್ಯಾರ್ಥಿನಿ: ನಾನು ಬಿಕಾಂ ಮುಗಿಸಿದ್ದೇನೆ, ಈಗ ಎಂಕಾಂ ಮಾಡೋಕೇ ಬಂದಿದ್ದೆನೆ, ಸ್ವಲ್ಪ ತೊಂದರೆ ಇರುವ ಕಾರಣ 10 ದಿನ ಇಲ್ಲೇ ಇರಬೇಕಾಗಿದೆ. ಕ್ಲರ್ಕ್ ಶಿಲ್ಪಾ: ಟೆನ್ ಡೇಸ್ ಅಷ್ಟೇನಾ? ಇದೇ ಯುನಿವರ್ಸಿಟಿ ಸ್ಟುಡೆಂಟಾ! ಮತ್ತೇ ಯುನಿಫಾರ್ಮ್‍ನಲ್ಲಿ ಬಂದಿರಲ್ಲ?
ವಿದ್ಯಾರ್ಥಿನಿ: ಮೊದಲು ನಾನು ಬೇರೆ ಕಾಲೇಜಿನಲ್ಲಿ ಓದ್ತಿದ್ದೆ, ಆ ಕಾಲೇಜಿನ ಡ್ರೆಸ್ ಇದು ಮೇಡಮ್. ಕ್ಲರ್ಕ್ ಶಿಲ್ಪಾ: 10 ಡೇಸ್ ಇರ್ತಿರಾ ಅಂದ ಮೇಲೆ ಹಾಲ್‍ನಲ್ಲಿ ಇರ್ತಿರಾ?
ವಿದ್ಯಾರ್ಥಿನಿ: ನಡೆಯುತ್ತೆ ಮೇಡಮ್. ಕ್ಲರ್ಕ್ ಶಿಲ್ಪಾ: ನಡೀತದಾ, ಓಕೆ ಹಾಗಿದ್ರೆ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಿ.
ವಿದ್ಯಾರ್ಥಿನಿ: ನಾಳೆ ತಂದು ಕೊಡುತ್ತೇನೆ ಮೇಡಂ, ಸದ್ಯಕ್ಕೆ ಅಮೌಂಟ್ ಕೊಟ್ಟು ಹೋಗ್ತೇನೆ. ಕ್ಲರ್ಕ್ ಶಿಲ್ಪಾ: ಸರಿ ಕೊಟ್ಟು ಹೋಗಿ, ಒಂದು ಆಧಾರ ಜೆರಾಕ್ಸ್ ಇಲ್ವಾ, ನಿಮ್ಮ ಹೆಸರೆನು?
ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ ಕ್ಲರ್ಕ್ ಶಿಲ್ಪಾ: 10 ಡೇಸ್ ಅಷ್ಟೇ ಇರಬೇಕು. ಮತ್ತೆ ವರ್ಷಗಟ್ಟಲೆ ಇರೋ ಹಾಗಿಲ್ಲ.
ವಿದ್ಯಾರ್ಥಿನಿ: ನಾನು ಪಿಜಿಯಲ್ಲಿ ಇದ್ದೆ ಮೇಡಮ್, ಸ್ವಲ್ಪ ಪ್ರಾಬ್ಲಂ ಆಗಿದೆ. ಅದಕ್ಕೆ ಇಲ್ಲಿ ಬಂದಿದ್ದೇನೆ. ಕ್ಲರ್ಕ್ ಶಿಲ್ಪಾ: ಹೌದಾ, ಹಾಲ್‍ನಲ್ಲಿರಬೇಕು ನೋಡಿ
ವಿದ್ಯಾರ್ಥಿನಿ: ಮೇಡಂ ಹಾಲ್ ಎಲ್ಲಿದೆ? ಕ್ಲರ್ಕ್ ಶಿಲ್ಪಾ: ಮೇಲಿದೆ, ನೋಡ್ಕೊಂಡ್ ಬರ್ತಿರಾ,
ವಿದ್ಯಾರ್ಥಿನಿ: ಅಮೌಂಟ್ ಎಷ್ಟು ಮೇಡಮ್, ನಾನು 10 ದಿನ ಇರುತ್ತೇನೆ. ಸದ್ಯ 5 ದಿನದ ಅಮೌಂಟ್ ತಗೊಳ್ಳಿ ಮೇಡಮ್, ಕ್ಲರ್ಕ್ ಶಿಲ್ಪಾ: ಹೌದಾ ಓಕೆ.. ನಿಮ್ ಆಧಾರ್ ಕಾರ್ಡ್ ಜೆರಾಕ್ಸ್ ಬೇಕಲ್ವ.. ನಾಳೆ ತಗೊಂಡ ಬರ್ತಿರಾ..?
ವಿದ್ಯಾರ್ಥಿನಿ: ಸರಿ ಮೇಡಮ್ ಕ್ಲರ್ಕ್ ಶಿಲ್ಪಾ: ಹೆಸರು ಹೇಳ್ರಿ ನಿಮ್ದು,
ವಿದ್ಯಾರ್ಥಿನಿ: ಸೌಮ್ಯ ಪತ್ರಿಮಠ ಕ್ಲರ್ಕ್ ಶಿಲ್ಪಾ: ಯಾವ ಊರು ನಿಮ್ದು
ವಿದ್ಯಾರ್ಥಿನಿ: ದೇಗುನ ಹಳ್ಳಿ ಕ್ಲರ್ಕ್ ಶಿಲ್ಪಾ: ಎಲ್ಲಿದೆ ಅದು
ವಿದ್ಯಾರ್ಥಿನಿ: ಕಿತ್ತೂರ ತಾಲೂಕು ಮೇಡಮ್ ಕ್ಲರ್ಕ್ ಶಿಲ್ಪಾ: ಇಲ್ಲೊಂದು ಸಹಿ ಮಾಡಿ, ನಾಳೆ ಬರಬೇಕು ಮತ್ತೆ.. ಬಂದು ಆಧಾರ್ ಕಾರ್ಡ್ ಜೆರಾಕ್ಸ್ ಕೊಡಬೇಕು. ನಿಮ್ ಜೊತೆ ಬಂದವರು ಎಲ್ಲಿರುತ್ತಾರೆ?
ವಿದ್ಯಾರ್ಥಿನಿ: ಅವರು ಲೋಕಲ್ ಮೇಡಮ್.. ಕ್ಲರ್ಕ್ ಶಿಲ್ಪಾ: ಲೋಕಲ್ಲ.. ನಾಳೆ ಬರಬೇಕು.. ಆಧಾರ್ ಕಾರ್ಡ್ ಜೆರಾಕ್ಸ್ ತನ್ನಿ. ಒಂದು ವೇಳೆ ನಾನು ನಾಳೆ ಇಲ್ಲದೇ ಇದ್ದರೂ ಡೋರ್ ಕೆಳಗೆ ಹಾಕಿ.. ಚೇಂಜ್ ಕೊಡಿ ಚೇಂಜ್ ಬೇಕು. ಇದು ಅಂಗಡಿ ಅಲ್ಲ, ಚಲನ್ ತುಂಬಿಸೋದು ಅಷ್ಟೇ ಕೆಲಸ ಇಲ್ಲಿ. ಯಾವುರು ನಿಮ್ದು..?
ವಿದ್ಯಾರ್ಥಿನಿ: ದೇಗುನಹಳ್ಳಿ ಕ್ಲರ್ಕ್ ಶಿಲ್ಪಾ: ಎಲ್ಲದು?
ವಿದ್ಯಾರ್ಥಿನಿ: ಕಿತ್ತೂರ್ ಕ್ಲರ್ಕ್ ಶಿಲ್ಪಾ: ಬೆಳಗಾವಿಯಾ
ಪಕ್ಕದ ಗೆಳತಿ ಬಳಿ ಚೆಂಜ್ ತೆಗೆದುಕೊಂಡ ವಿದ್ಯಾರ್ಥಿನಿ ಮೇಡಮ್ ಬಳಿ ಕೊಡುತ್ತಾಳೆ.
ವಿದ್ಯಾರ್ಥಿನಿ: ಬಿಸಿಎಂ ಹಾಸ್ಟೆಲ್‍ಗೆ ಅರ್ಜಿ ಹಾಕಿದ್ದೇನೆ ಕ್ಲರ್ಕ್ ಶಿಲ್ಪಾ: ಬಿಸಿಎಂಗೆ ಹಾಕಿದ್ದಿರಾ?
ವಿದ್ಯಾರ್ಥಿನಿ: ಮೇಡಮ್ ಸದ್ಯಕ್ಕೆ 250 ರೂ ಇವೆ.. ಅಷ್ಟೇ ಚಲನ್ ನಲ್ಲಿ ತುಂಬಿದ್ರೆ ನಡೆಯುತ್ತಾ! ಕ್ಲರ್ಕ್ ಶಿಲ್ಪಾ: ನಾನು ನಿನ್ ಚಲನ್ ಬರೆದಿಲ್ಲಾ, ನಾನು ಆಧಾರ್ ಕಾರ್ಡ್ ಕೊಟ್ಟ ಮೇಲೆ ಚಲನ್ ಬರೆಯುವೆ.. ಇದು ಹಾಗೆ ದುಡ್ ಜೊತೆ ಚಲನ್ ಇಟ್ಕೊತೆನೆ, ನಾಳೆ ಕೊಡ್ರಿ..
ವಿದ್ಯಾರ್ಥಿನಿ ಗೆಳತಿ: ಇವತ್ತು ಇಷ್ಟು ದುಡ್ಡು ಇಟ್ಕೊಂಡ್ ಬಿಡಿ ಮೇಡಮ್ ಕ್ಲರ್ಕ್ ಶಿಲ್ಪಾ: ಇವತ್ತು ಇಷ್ಟೇ ತಗೊತೀನಿ, ನಾಳೆ ಉಳಿದ ದುಡ್ಡು ಕೊಡಿ, ನಿಮ್ ಚಲನ್ ಈಗಲೇ ತುಂಬಲ್ಲ, ನಾಳೆ ನೀವು ಬಂದು ಆಧಾರ್ ಕಾರ್ಡ್ ಕೊಟ್ಟ ಮೇಲೆ ತುಂಬ್ತನೆ..
ವಿದ್ಯಾರ್ಥಿನಿ: ಮೇಡಮ್ ರೂಂ ಎಲ್ಲಿದೆ ಕ್ಲರ್ಕ್ ಶಿಲ್ಪಾ: ನೋಡಿ ಬನ್ನಿ ಮೇಲಿದೆ ಹಾಲ್, ಮೇಲೆ ಹತ್ತಿ ಹೋಗಿ
ಮೈಸೂರು: ಕರ್ನಾಟಕ ಮುಕ್ತ ವಿವಿ ಮಾನ್ಯತೆ ಕಳೆದುಕೊಂಡು 4 ವರ್ಷಗಳೆ ಕಳೆದಿದೆ. ಇನ್ನು ಮೂರು ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುವ ವಿಚಾರವು, ಇದೀಗ ಬೆಳಕಿಗೆ ಬಂದಿದ್ದು ಸ್ವತ: ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯವರೇ ಟ್ವೀಟ್ ಮೂಲಕ, ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದಾರೆ.
ಯಾರು, ಏನೇ ಮಾಡಿದ್ರು ಇನ್ನೆರಡು ಶೈಕ್ಷಣಿಕ ವರ್ಷ ಮಾನ್ಯತೆ ಸಿಗೋದು ಕಷ್ಟ ಎನ್ನುತ್ತಿರೋ ಅಧಿಕಾರಿಗಳ ಮಾತುಗಳಿಂದ, ಮುಕ್ತ ವಿವಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ಮಧ್ಯೆ ಮುಂದಿನ ದೆಹಲಿ ಪ್ರವಾಸದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿರುವ ಸಿಎಂ, ಮಾನ್ಯತೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮುಕ್ತ ವಿವಿ ಯುಜಿಸಿ ನಿಯಮಗಳನ್ನ ಉಲ್ಲಂಘಿಸಿರುವುದನ್ನ ನೋಡಿದರೆ, ಸದ್ಯಕ್ಕೆ ಮುಕ್ತ ವಿವಿಗೆ ಮಾನ್ಯತೆ ಸಿಗೋದು ಕಷ್ಟಸಾಧ್ಯ. ಹೀಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನ ಪ್ರಭ, ಮುಕ್ತ ವಿವಿಗೆ ಮಾನ್ಯತೆ ಸಿಗುವ ವಿಚಾರವಾಗಿ, ಯಾರು ಏನೂ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.
2013ರಲ್ಲಿ ಮಾನ್ಯತೆ ಕಳೆದುಕೊಂಡಿರುವ ಮುಕ್ತ ವಿವಿ. 2017-18 ಹಾಗೂ 2018-19 ಸಾಲಿಗೂ ಮಾನ್ಯತೆ ಪಡೆಯುವುದು ಅನುಮಾನವಾಗಿದೆ. ಅಲ್ಲದೆ ಮುಕ್ತ ವಿವಿಗೆ ಯುಜಿಸಿಯಿಂದ ಹೊಸ ನಿಯಮವಳಿಗಳು ಬಂದರೆ ಮಾತ್ರ ಮಾನ್ಯತೆ ಸಿಗಲು ಅವಕಾಶ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ವಿವಿಯಲ್ಲಿ ಪದವಿ ಪಡೆದವರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಈ ವಿಚಾರವಾಗಿ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಕ್ತ ವಿವಿ ಮಾನ್ಯತೆ ರದ್ದಾಗಲು ಸರ್ಕಾರ ಕಾರಣವಲ್ಲ. ಹಿಂದೆ ಇದ್ದ ಕುಲಪತಿಗಳ ಮಾಡಿದ ತಪ್ಪಿನಿಂದಾಗಿ ಮಾನ್ಯತೆ ರದ್ದಾಗಿದೆ. ಈ ಬಗ್ಗೆ ಈಗಾಗಲೆ ಕೇಂದ್ರಕ್ಕೆ ಪತ್ರ ಬರೆದಿದ್ದು. ಮುಂದಿನ ಬಾರಿ ದೆಹಲಿ ಭೇಟಿಯ ಸಂದರ್ಭದಲ್ಲಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
Its already made clear that UGC is unwilling to clear the cases view of violations by KSOU..No one can is able to do anything.