Tag: ಕರ್ನಾಟಕ ವಿಧಾನ ಪರಿಷತ್‌

  • ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ

    ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಅಪರ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಎಸ್. ನಿರ್ಮಲಾ ಅವರಿಗೆ ಹೊಸದಾಗಿ ಸೃಜನೆಯಾಗಿರುವ ಕಾರ್ಯದರ್ಶಿ-2 ಹುದ್ದೆಗೆ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.

    ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (Karnataka Legislative Council) ಅಧಿಕಾರಿ ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಗಳು, 2021ರ ನಿಯಮ 6(i)ರ ಪ್ರಕಾರ ಮಾನ್ಯ ವಿಶೇಷ ಮಂಡಳಿಗೆ ಪ್ರದತ್ತವಾಗಿರುವ ಅಧಿಕಾರದ ರೀತ್ಯಾ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿ ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು)ನಿಯಮಗಳು, 2024ರ (2ನೇ ತಿದ್ದುಪಡಿ) ಅನ್ವಯ ಅಪರ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ನಿರ್ಮಲಾ ಇವರನ್ನು ಹೊಸದಾಗಿ ಸೃಜನೆಯಾಗಿರುವ ಕಾರ್ಯದರ್ಶಿ-2 ಹುದ್ದೆಗೆ ಸ್ಥಾನಕ್ಕೆ ಬಡ್ತಿ ನೀಡಿ ನೇಮಕ ಮಾಡಲಾಗಿದೆ ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಅವರು ತಿಳಿಸಿದ್ದಾರೆ.

     

  • ವಿಧಾನ ಪರಿಷತ್‌ ಚುನಾವಣೆ – 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

    ವಿಧಾನ ಪರಿಷತ್‌ ಚುನಾವಣೆ – 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

    ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ (Karnataka Legislative Council Elections) ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

    ಕಾಂಗ್ರೆಸ್‌ನಿಂದ 7, ಬಿಜೆಪಿಯಿಂದ 3, ಜೆಡಿಎಸ್‌ನಿಂದ 1 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ: ಡಿಕೆಶಿ

    ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತ್ ಕುಮಾರ್, ಬಿಲ್ಕೀಸ್ ಬಾನು‌, ಜಗದೇವ್ ಗುತ್ತೇದಾರ್, ಗೋವಿಂದ್ ರಾಜು, ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.

    ಬಿಜೆಪಿಯಿಂದ ಸಿ.ಟಿ.ರವಿ, ರವಿಕುಮಾರ್, ಎಂ.ಜಿ.ಮೂಳೆ ಆಯ್ಕೆ ಆಗಿದ್ದಾರೆ. ಜೆಡಿಎಸ್‌ನಿಂದ ಜವರಾಯೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

  • 6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಚುನಾವಣೆ – ಜೂ.3 ಕ್ಕೆ ಮತದಾನ

    6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಚುನಾವಣೆ – ಜೂ.3 ಕ್ಕೆ ಮತದಾನ

    ಬೆಂಗಳೂರು: 6 ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ (Karnataka Legislative Council ) ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಜೂ.3 ಕ್ಕೆ ಮತದಾನ ನಡೆಯಲಿದ್ದು, 6 ರಂದು ಮತ ಎಣಿಕೆ ನಡೆಯಲಿದೆ.

    ಯಾವ್ಯಾವ ಕ್ಷೇತ್ರಗಳಿಗೆ ಚುನಾವಣೆ?
    ಬೆಂಗಳೂರು ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಾಸ್ ರೇಪಿಸ್ಟ್ ಪರ ಪ್ರಧಾನಿ ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ: ರಾಹುಲ್ ಗಾಂಧಿ

    ಚಂದ್ರಶೇಖರ್‌ ಬಿ.ಪಾಟೀಲ್‌, ಆಯನೂರು ಮಂಜುನಾಥ್‌, ಎ.ದೇವೇಗೌಡ, ವೈ.ಎ.ನಾರಾಯಣಸ್ವಾಮಿ, ಎಸ್‌.ಎಲ್‌.ಭೋಜೇಗೌಡ, ಮರಿತಿಬ್ಬೇಗೌಡ ಅವರ ಅವಧಿ ಜೂ.21 ರಂದು ಮುಗಿಯಲಿದೆ.