ಮೈಸೂರು: ನಾನು ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಹಣವನ್ನು ತಾವೇ ಉಳಿಸಿಕೊಂಡಿದ್ದರೆ ಸಂತೋಷವಿತ್ತು. ಆದರೆ ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಲು ಹೋಗಿ ಸೋತಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ. ಯಾರಾದರು ಅವರ ಬೆನ್ನುತಟ್ಟಿ ನನ್ನ ವಿರುದ್ಧ ನಿಲ್ಲವಂತೆ ಹೇಳಿದರೂ ಅವರು ಹಾಗೇ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹೈಕಮಾಂಡ್ ಹಾಗೂ ಪಕ್ಷದ ನಿಧಾರವನ್ನು ಪಾಲಿಸುತ್ತೇನೆ. ನಮ್ಮ ಪಕ್ಷ ಏನು ತೀರ್ಮಾನ ಕೈಗೊಂಡಿದೆಯೋ ಅದಕ್ಕೆ ನಮ್ಮ ಸಹಮತವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾವಿದೆ ಎಂದು ಎಚ್.ಪಿ.ಮಂಜುನಾಥ್ ಮೂರು ಬಾರಿ ಹೇಳಿದರು.
ಬೆಂಗಳೂರು: ಶನಿವಾರ ವಿಧಾನ ಸಭೆಯಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಒಂದು ಕಡೆ ನಡೆದಿದ್ರೆ, ಇತ್ತ ಕಾಂಗ್ರೆಸ್ ತಮ್ಮ ಶಾಸಕರಿಗೆ ಬಿಜೆಪಿ ನಾಯಕರು ಕರೆ ಮಾಡಿ ಆಫರ್ ನೀಡಿರುವ ಆಡಿಯೋ ಟೇಪ್ ಗಂಟೆಗೆ ಒಂದರಂತೆ ಬಿಡುಗಡೆಯಾಗುತಿತ್ತು. ಈ ಆಡಿಯೋಗಳ ಪೈಕಿ ನನ್ನ ಪತ್ನಿಗೆ ಕರೆ ಮಾಡಿ ಆಫರ್ ನೀಡಿದ್ದಾರೆ ಎನ್ನಲಾದ ಟೇಪ್ ನಕಲಿ ಎಂದು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಆಪ್ತ ಎಂಎಲ್‍ಸಿ ಪುಟ್ಟಸ್ವಾಮಿ ಹಾಗೂ ಪುತ್ರ ವಿಜಯೇಂದ್ರ ಇಬ್ಬರೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಆಫರ್ ನೀಡಿದೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.
ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ಮಾನ್ಯರೇ,
ಇವತ್ತು ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಫೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ದಿಕ್ಕಾರ.
ಈ ಆಡಿಯೋ ಟೇಪ್ ಫೇಕ್…. ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರಿಯಲಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಶಾಸಕರು, ಸದ್ಯ ನಾನು ಬೆಂಗಳೂರಿನಲ್ಲಿದ್ದೇನೆ. ನನ್ನ ಅಧಿಕೃತ ಫೇಸ್‍ಬುಕ್ ಪೇಜ್‍ನ್ನು ಪುತ್ರ ನಿರ್ವಹಣೆ ಮಾಡ್ತಾನೆ. ನನ್ನ ಪೇಜ್‍ನಲ್ಲಿ ಬರೆದುಕೊಂಡಿರುವ ಮಾಹಿತಿಗಳೆಲ್ಲವೂ ಸತ್ಯ ಅಂತಾ ತಿಳಿಸಿದ್ದಾರೆ.
ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರಿಗೆ ಯಡಿಯೂರಪ್ಪ, ಶ್ರೀರಾಮುಲು ಮತ್ತು ಮುರಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‍ಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಆಡಿಯೋ ಕ್ಲಿಪ್‍ಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಅದು ನಮ್ಮ ಧ್ವನಿಯೇ ಅಲ್ಲ. ತಂತ್ರಜ್ಞಾನ ಮತ್ತು ಮಿಮಿಕ್ರಿ ಕಲಾವಿದರಿಂದ ಮಾಡಿಸಿರುವ ಸಾಧ್ಯತೆಗಳಿವೆ ಅಂತಾ ಎಲ್ಲ ಆರೋಪಗಳನ್ನು ನಿರಾಕರಣೆ ಮಾಡಿದ್ದಾರೆ.
ಬೆಂಗಳೂರು: ಶಾಸಕರೊಬ್ಬರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಶನಿವಾರ ವಿಧಾನಸಭೆಯಲ್ಲಿ ನಡೆದಿದೆ.
ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ಅವರ ನಾದಿನಿಯ ಪತಿ. ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಿದ್ದಲ್ಲದೇ, ಅವರ ಗೆಲುವಿಗೆ ಶಿವಕುಮಾರ್ ಶ್ರಮಿಸಿದ್ದರು. ಹೀಗಾಗಿ ಅವರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಾ.ಎಚ್.ಡಿ.ರಂಗನಾಥ್ ಅವರು, ಒಟ್ಟು 58,697 ಮತ ಪಡೆದು ಜಯಸಾಧಿಸಿದ್ದರು. ಬಿಜೆಪಿಯ ಡಾ.ಕೃಷ್ಣಕುಮಾರ ಅವರು 53,097 ಮತ ಪಡೆದು 5,600 ಮತಗಳ ಅಂತರದಲ್ಲಿ ಸೋತಿದ್ದರು.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿವೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿಶೇಷ ಸಂದರ್ಶನ ನೀಡಿದ್ದು, ಅಧಿಕಾರಕ್ಕಾಗಿ ನಾವು ಒಂದಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಒಂದಾಗಿದೆ ಎಂಬುವುದು ನಮ್ಮ ವಿರೋಧಿಗಳ ಮಾತು. ಆದ್ರೆ ತತ್ವ ಸಿದ್ದಾತಗಳ ಅಡಿಯಲ್ಲಿ ಒಂದಾಗಿದ್ದೇವೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು. ಸಂವಿಧಾನ ಬಾಹಿರ ಮತ್ತು ಅಕ್ರಮವಾಗಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ ವಿರುದ್ಧ ಹೋರಾಟ ಮಾಡುವ ಸಲುವಾಗಿ ಎರಡೂ ಪಕ್ಷಗಳು ಒಂದಾಗಿವೆ ಅಂತಾ ತಿಳಿಸಿದ್ರು.
ಈ ಹಿಂದೆ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಜನಪರ ಯೋಜನೆಗಳನ್ನು ತಂದಿದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಸಹ ರಾಜ್ಯದ ಜನರಿಗೂ ತಲುಪಿವೆ. ಆದ್ರೂ ಚುನಾವಣೆಯಲ್ಲಿ ಅನಿರೀಕ್ಷಿತವಾದ ಫಲಿತಾಂಶ ಹೊರಬಂದಿದ್ದು, ನಾವು ಎಲ್ಲಿ ಎಡವಿದ್ದು, ನಮ್ಮ ನ್ಯೂನತೆಗಳು ಏನು ಎಂಬುದರ ಬಗ್ಗೆ ಗ್ರೌಂಡ್ ಲೆವಲ್‍ನಿಂದ ಮಾಹಿತಿ ಪಡೆದುಕೊಂಡು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದೇವೆ. ಇಂತಹ ಕಾರಣಗಳಿಗೆ ನಮಗೆ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಆಗಿಲ್ಲ ಎಂಬುದನ್ನು ಈ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸಿದ್ರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಎಲ್ಲಿಯೂ ಹಿನ್ನಡೆಯಾಗಿಲ್ಲ. ಶೇಕಡಾವಾರು ಮತಗಳನ್ನು ನೋಡಿದ್ರೆ ಹೆಚ್ಚಿನ ಮತಗಳು ಕಾಂಗ್ರೆಸ್‍ಗೆ ಲಭಿಸಿದ್ದು, ಜಾತ್ಯಾತೀತ ಪಕ್ಷಗಳು ಸಹ ನಮ್ಮೊಂದಿಗಿವೆ. ಬಿಜೆಪಿ ಅಧಿಕಾರದ ದುರಾಸೆಯಿಂದಾಗಿ ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ನೀಡುವಂತೆ ಮಾಡಿತು. ಆದ್ರೂ ವಿಶ್ವಾಸಮತ ಯಾಚನೆಗೂ ಮುನ್ನವೇ ಬಿಜೆಪಿ ಸೋಲೊಪ್ಪಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.
ಬೆಂಗಳೂರು: ಬಹುಮತ ಸಾಬೀತು ಪಡಿಸುವುದು ಕಷ್ಟ ಎಂದು ನಮಗೆ ಬೆಳಗ್ಗೆ ಗೊತ್ತಾಗಿತ್ತು. ಅಲ್ಲದೇ, ಬಿ.ಎಸ್.ಯಡಿಯೂಪ್ಪ ಅವರು ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿಗೆ ಜನಾದೇಶವಿತ್ತು. ಆದರೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಲು ಕುತಂತ್ರ ನಡೆದಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಕಾದುನೋಡಿ ಎಂದು ಹೇಳಿದ್ದಾರೆ.
Let us not forget bottom line: BJP increased MLAs 2 1/2 times to 104 and first past the post. Two big losers banded together and are slated to form the govt. In other words let us get our act together and pool our brains. Soon then we can discredit completely Ali bibi &her chors
ನಾಯಿ-ನರಿಗಳಂತೆ ಕಚ್ಚಾಡುತ್ತಿದ್ದವರು ಈಗ ಒಂದಾಗಿದ್ದಾರೆ. ಈ ಅಪವಿತ್ರ ಮೈತ್ರಿ ಹೆಚ್ಚು ದಿನ ಉಳಿಯಲ್ಲ. ನಾಳೆಯಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಕಚ್ಚಾಡುತ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿಟಿ ರವಿ ನಮ್ಮದು ರಾಜಮಾರ್ಗ, ಶಾರ್ಟ್ ಕರ್ಟ್ ಇಲ್ಲದೇ ಬಹುಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಮುಂದುವರಿಸಿ 1996 ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಬಹುಮತಗಳಿಸಲು ವಿಫಲವಾದಾಗ ರಾಜೀನಾಮೆ ನೀಡಿದ್ದರು ಎಂದಿದ್ದರು.
ವಾಜಪೇಯಿ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಮಾಧ್ಯಮಗಳು ಕರ್ನಾಟಕದಲ್ಲೂ ಇತಿಹಾಸ ಮರುಕಳಿಸುತ್ತಾ ಎಂದು ಕೇಳಿದ್ದಕ್ಕೆ, ಆಗಿನ ಪರಿಸ್ಥಿತಿ ಈಗ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದರು.
ಬೆಂಗಳೂರು: ನಾವು ಐದು ವರ್ಷ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಶಿವಾಜಿ ನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಿಳಿಸಿದ್ದಾರೆ.
ಬಿಎಸ್‍ವೈ ರಾಜೀನಾಮೆ ನೀಡಿದ ಬಳಿಕ ಸಂಜೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಸಭೆ ನಗರದ ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ಹೋಟೆಲ್ ನಲ್ಲಿ ನಡೆಯಿತು. ಸಭೆಯ ಬಳಿಕ ಮಾತನಾಡಿದ ರೋಷನ್ ಬೇಗ್, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ನಮ್ಮ ಸರ್ಕಾರಕ್ಕೆ ಯಾವುದೇ ಭಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೋಟೆಲ್ ನಲ್ಲಿ ಎರಡು ಪಕ್ಷಗಳ ಮುಖಂಡರು ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ.
ಈ ಸಭೆಯಲ್ಲಿ ಗುಲಾಂ ನಬಿ ಅಜಾದ್, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಾ ಜಿ.ಪರಮೇಶ್ವರ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹಿರಿಯ ನಾಯಕರು ಹಾಜರಾಗಿದ್ದರು.
ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರನ್ನು ಸೆಳೆಯಲು ಬಿ.ಎಸ್.ಯಡಿಯೂರಪ್ಪ ಅವರು ಸ್ವಾಮೀಜಿಗಳ ಮೊರೆ ಹೋಗಿದ್ದಾರೆ.
ರಾಜ್ಯದ ಕೆಲವು ಲಿಂಗಾಯಿತ ಮಠದ ಸ್ವಾಮೀಜಿಗಳ ಜೊತೆ ಬಿಎಸ್‍ವೈ ಮಾತುಕತೆ ನಡೆಸಿದ್ದು, ಅವರ ಮೂಲಕ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ. ಹಿಂದೂ ಧರ್ಮದ ಉಳಿವಿಗೆ ಬಿಎಸ್‍ವೈ ಗೆ ಬೆಂಬಲ ನೀಡಬೇಕು ಎಂದು ಸ್ವಾಮೀಜಿಗಳು ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‍ಗೆ ಕರೆ ಮಾಡಿ ಬಿ.ಎಸ್.ಯಡಿಯೂರಪ್ಪಗೆ ಬೆಂಬಲ ಸೂಚಿಸಬೇಕೆಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಾಮೀಜಿಗಳು ತಮ್ಮ ಶಾಸಕರಿಗೆ ಕರೆ ಮಾಡಿ ಶನಿವಾರ ನಡೆಯಲಿರುವ ವಿಶ್ವಾಸ ಮತಯಾಚನೆಯ ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಸುಪ್ರೀಂ ತೀರ್ಪಿನಂತೆ ಬಿಜೆಪಿ ಶನಿವಾರ ಬಹುಮತ ಸಾಬೀತು ಪಡಿಸುವ ಒತ್ತಡಕ್ಕೆ ಸಿಲುಕಿದ್ದು, ಸದ್ಯ ಪಕ್ಷದ ಸದಸ್ಯರಲ್ಲಿ ಈ ವಿಶ್ವಾಸ ಕಡಿಮೆ ಆಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.
ಚಿಕ್ಕಮಗಳೂರು ಶಾಸಕ ಸಿಟಿ ರವಿ, 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಹುಮತ ಸಾಬೀತು ಪಡಿಸುವ ವಿಚಾರವನ್ನು ಪ್ರಸ್ತಾಪ ಮಾಡಿದ ಕಾರಣ ಈಗ ಈ ಮೇಲಿನ ಪ್ರಶ್ನೆ ಎದ್ದಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ನಮ್ಮದು ರಾಜಮಾರ್ಗ, ಶಾರ್ಟ್ ಕರ್ಟ್ ಇಲ್ಲದೇ ಬಹುಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಮುಂದುವರಿಸಿ 1996 ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಬಹುಮತಗಳಿಸಲು ವಿಫಲವಾದಾಗ ರಾಜೀನಾಮೆ ನೀಡಿದರು ಎಂದರು.
ವಾಜಪೇಯಿ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಮಾಧ್ಯಮಗಳು ಕರ್ನಾಟಕದಲ್ಲೂ ಇತಿಹಾಸ ಮರುಕಳಿಸುತ್ತಾ ಎಂದು ಕೇಳಿದ್ದಕ್ಕೆ, ಆಗಿನ ಪರಿಸ್ಥಿತಿ ಈಗ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದರು.
ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಎಂದು ಆರೋಪ ಮಾಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ. ಯಾವ ಶಾಸಕರ ಪತ್ನಿ, ಮಕ್ಕಳು ರಮ್ಯಾ ಬಳಿ ಬಂದು ಜೀವ ಬೆದರಿಕೆಯ ಅಳಲು ತೋಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಇದೇ ವೇಳೆ ಸವಾಲು ಎಸೆದರು.
ಒಂದು ವೇಳೆ ಜೀವ ಬೆದರಿಕೆ ಇರುವುದು ಬಹಿರಂಗ ಪಡಿಸಿದರೆ ತಾವೇ ಸ್ವತಃ ಡಿಜಿ ಅವರ ಮೂಲಕ ಶಾಸಕರಿಗೆ ರಕ್ಷಣೆ ಕೊಡಿಸುತ್ತೇನೆ. ಅಲ್ಲದೇ ರಮ್ಯಾ ಅವರಿಗೂ ಜೀವ ಬೆದರಿಕೆ ಇದ್ದರೆ ಅವರಿಗೂ ರಕ್ಷಣೆ ಕೊಡುವಂತೆ ನಾನು ಡಿಜಿಗೆ ಮನವಿ ಮಾಡಲಿದ್ದೇನೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಮಧ್ಯರಾತ್ರಿಯೇ ನಮ್ಮನ್ನ ಹೈದ್ರಾಬಾದ್‍ಗೆ ಕರೆತಂದಿದ್ದೀರಿ, ನಾವೇನು ತಪ್ಪಿಸಿಕೊಂಡು ಹೋಗಿತ್ತಿದ್ವಾ ಎಂದು ಪ್ರಶ್ನಿಸುವ ಮೂಲಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.
ಅಡ್ಡ ಮತದಾನ ಹಾಗೂ ಕುದುರೆ ವ್ಯಾಪಾರದ ಭೀತಿಯಿಂದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರು ಹೈದರಾಬಾದ್ ಹೊಟೇಲ್ ಗೆ ಕರೆ ತಂದಿದ್ದಾರೆ. ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಸುಪ್ರೀಂ ಕೋರ್ಟ್ ಆದೇಶದವರೆಗೂ ಕಾಯಬಹುದು ಅಂತಾ ನಾವು ನಿಮಗೆ ಹೇಳಿದ್ದೇವು. ಆದರೂ ನೀವು ಕೇಳಲೇ ಇಲ್ಲ. ರಸ್ತೆ ಮಾರ್ಗವಾಗಿ ನಮ್ಮನ್ನ ಕರೆ ತಂದಿದ್ದೀರಿ. ದೂರ ಪ್ರಯಾಣ ಮಾಡಿ ಬೇಸತ್ತಿದ್ದೇವೆ. ನಮಗೆ ನಮ್ಮ ಮೊಬೈಲ್ ನೀಡಿ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಹೊಟೇಲ್ ಗೆ ಕರೆದುಕೊಂಡು ಹೋಗುವ ಏಕ ಪಕ್ಷೀಯ ನಿರ್ಧಾರ ಕೆಲ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ನಮಗೆ ಆತಂಕ ಇತ್ತು, ನೀವು ಏನು ಹೇಳಿದರೂ ನಾನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ನಿಮ್ಮನ್ನ ಕರೆದುಕೊಂಡು ಬಂದಿದ್ದೇವೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ನಡೆಯಲಿದೆ. ಹೀಗಾಗಿ, ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಮರಳಿ, ತಡರಾತ್ರಿ ಹೊತ್ತಿಗೆ ಹೊಟೇಲ್‍ಗೆ ಹೋಗಿ ಅಲ್ಲಿಂದ ಬೆಳಿಗ್ಗೆ ನೇರವಾಗಿ ವಿಧಾನ ಸೌಧಕ್ಕೆ ಹೋಗೋಣ ಎಂದು ಡಿ.ಕೆ.ಶಿವಕುಮಾರ್ ಹೊಟೇಲ್‍ನಲ್ಲಿ ಸಭೆ ನಡೆಸಿ ಹೇಳಿದ್ದಾರೆ.
ಕೊನೆಯ ಕ್ಷಣದವರೆಗೂ ನಿಮಗೆ ಬಿಜೆಪಿ ನಾಯಕರಿಂದ ಕರೆ ಬರಹುದು. ನೀವು ಎಚ್ಚರಿಕೆಯಿಂದ ಇರಬೇಕು. ಬಹುಮತ ಸಾಬೀತು ಪಡಿಸುವ ವೇಳೆ ಬಿಎಸ್‍ವೈ ಸರ್ಕಾರದ ವಿರುದ್ಧ ಇರುವಂತೆ ಶಾಸಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಹಾವೇರಿ: ಸಿದ್ದರಾಮಯ್ಯ ನನಗಿಂತ 13 ವರ್ಷದ ಬಚ್ಚಾ, ಅವನಿಂದ ಕಾಂಗ್ರೆಸ್‍ಗೆ ಏನು ಅನುಕೂಲವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ನಾನು ಸೋತಿದ್ದೇನೆ. ಆದರೆ, ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. 1996 ರಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ. ಇದು ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು ಎಂದು ಅವರು ದೂರಿದ್ದಾರೆ.
ನನ್ನ ಸೋಲಿಗೆ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡದಿರುವುದೇ ಕಾರಣ. ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ನಾನು ಹರಕೆಯೆ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಅಂತ ತಮ್ಮ ಪರ ಪ್ರಚಾರಕ್ಕೆ ಬಾರದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.