Tag: ಕರ್ನಾಟಕ ವಿಧಾನಸಭೆ ಚುನಾವಣೆ 2018

  • ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ನಾಮಪತ್ರ ಸಲ್ಲಿಕೆ ಮಾಡಿದ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಎಷ್ಟು?

    ಬೆಂಗಳೂರು: ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು (Candidates) ಈಗಾಗಲೇ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದೆ.

    ರಾಜಕೀಯ ಕುಬೇರರು:
    ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ.
    * ಚರಾಸ್ತಿ ಮೌಲ್ಯ 372 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ.
    * ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ
    * ಸಾಲ 71 ಕೋಟಿ ರೂ.
    * ಕಾರುಗಳ ಮೌಲ್ಯ 1.72 ಕೋಟಿ ರೂ.

    ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ.
    * 750 ಗ್ರಾಂ ಚಿನ್ನ, ಸಾಲ 17 ಕೋಟಿ
    * ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ
    * ಕುಮಾರಸ್ವಾಮಿ ವಿರುದ್ಧ 5 ಕ್ರಿಮಿನಲ್ ಕೇಸ್

    ಹೆಚ್‌ಡಿ ರೇವಣ್ಣ, ಹೊಳೆನರಸೀಪುರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ – 43.37 ಕೋಟಿ ರೂ.
    * 9 ಕೋಟಿ ರೂ. ಸಾಲ ಮಾಡಿರುವ ರೇವಣ್ಣ
    * ಪತ್ನಿ ಹೆಸರಲ್ಲಿ 38 ಕೋಟಿ ರೂ. ಮೌಲ್ಯದ ಆಸ್ತಿ (5 ಕೋಟಿ ಸಾಲ)
    * 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರೆಟ್ ವಜ್ರ

    ವಿಜಯೇಂದ್ರ, ಶಿಕಾರಿಪುರ ಅಭ್ಯರ್ಥಿ:
    * 103 ಕೋಟಿ ರೂ. ಮೌಲ್ಯದ ಆಸ್ತಿ
    * ಒಂದು ಟ್ರ್ಯಾಕ್ಟರ್, ಒಂದು ಟಿಲ್ಲರ್
    * ಪತ್ನಿ ಹೆಸರಲ್ಲಿ 21 ಕೋಟಿ ರೂ. ಮೌಲ್ಯ ಆಸ್ತಿ

    ಎಂಬಿ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ:
    * 105 ಕೋಟಿ ರೂ. ಮೌಲ್ಯದ ಆಸ್ತಿ ಇದೆ
    * 34 ಕೋಟಿ ರೂ. ಸಾಲ ಹೊಂದಿದ್ದಾರೆ
    * 5 ಕ್ರಿಮಿನಲ್ ಕೇಸ್ ಇದೆ

    ಆರ್ ಅಶೋಕ್, ಪದ್ಮನಾಭನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ.
    * ಒಟ್ಟು ಸಾಲ 97.78 ಲಕ್ಷ ರೂ.
    * ಪತ್ನಿಯಿಂದಲೇ 42 ಲಕ್ಷ ರೂ. ಸಾಲ

    ಮುನಿರತ್ನ, ಆರ್‌ಆರ್ ನಗರ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 270 ಕೋಟಿ ರೂ.
    * ಚರಾಸ್ತಿ ಮೌಲ್ಯ – 31.34 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 239.29 ಕೋಟಿ ರೂ.
    * ಸಾಲದ ಮೊತ್ತ – 93.48 ಕೋಟಿ ರೂ.
    * ಪತ್ನಿ ಹೆಸರಲ್ಲಿ 22 ಕೋಟಿ ರೂ. ಮೌಲ್ಯದ ಆಸ್ತಿ ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಹೊಸಬರಿಗೆ ಮಣೆ – ಕರ್ನಾಟಕ ಬಿಜೆಪಿಯಿಂದ ಗುಜರಾತ್‌ ದಾಖಲೆ ಬ್ರೇಕ್‌

    ಉದಯ್ ಗರುಡಾಚಾರ್, ಚಿಕ್ಕಪೇಟೆ ಅಭ್ಯರ್ಥಿ:
    * ಒಟ್ಟು ಆಸ್ತಿ ಮೌಲ್ಯ 200.44 ಕೋಟಿ ರೂ.
    * 22 ಕೆಜಿ ಚಿನ್ನಾಭರಣ ಹೊಂದಿದ್ದಾರೆ
    * ಸಾಲದ ಪ್ರಮಾಣ – 47.63 ಕೋಟಿ ರೂ.

    ಅರುಣಾಲಕ್ಷ್ಮಿ, ಬಳ್ಳಾರಿ ನಗರ ಅಭ್ಯರ್ಥಿ:
    * 200 ಕೋಟಿ ರೂ. ಮೌಲ್ಯದ ಆಸ್ತಿ
    * ಚರಾಸ್ತಿ ಮೌಲ್ಯ – 96.23 ಕೋಟಿ ರೂ.
    * ಸ್ಥಿರಾಸ್ತಿ ಮೌಲ್ಯ – 104.38 ಕೋಟಿ ರೂ.
    * 16.44 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದನ್ನೂ ಓದಿ: ಲಿಂಬಾವಳಿ, ರಾಮದಾಸ್‌ಗೆ ಟಿಕೆಟ್‌ ಮಿಸ್‌- ಬಿಜೆಪಿಯ10 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

  • ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ

    ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ

    ಬೆಂಗಳೂರು: ಕಾಂಗ್ರೆಸ್ ಅವರು ಅಧಿಕಾರಕ್ಕೆ ಬರೋದಿಲ್ಲ. ಇಲ್ಲದೆ ಇರೋ ಸೀಟಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗುದ್ದಾಡುತ್ತಿದ್ದಾರೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಯವರು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.

    ನಾನು ಸಿಎಂ ಆಕಾಂಕ್ಷಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಇಲ್ಲದೆ ಇರೋ ಸೀಟಿಗೆ ಇಬ್ಬರು ಗುದ್ದಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಅಧಿಕಾರಕ್ಕಾಗಿ, ಸಿಎಂ ಆಗೋಕೆ ಮಾತ್ರ ಈ ಹೋರಾಟ ನಡೆಯುತ್ತಿದೆ ಅಂತ ಕಿಡಿಕಾರಿದರು.

    ಜನರಿಗೆ ಕಾಂಗ್ರೆಸ್ (Congress) ಏನು ಒಳ್ಳೆಯದು ಮಾಡಿಲ್ಲ. ಸಿದ್ದರಾಮಯ್ಯ ಹೇಳಿಕೆಯಲ್ಲಿ ಆಶ್ಚರ್ಯ ಏನೂ ಇಲ್ಲ. ಕಾಂಗ್ರೆಸ್ ಅಂತರಂಗದಲ್ಲಿ ನಡೆಯೋ ಪ್ರತಿಬಿಂಬ ಅದು. ಡಿಕೆ ಶಿವಕುಮಾರ್ ನಾನೇ ಸಿಎಂ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆಶೀರ್ವಾದ ಮಾಡಿ ಅಂತ ಹೇಳ್ತಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯ ನಾನೇ ಸಿಎಂ ಅಂತ ಹೇಳ್ತಿದ್ದಾರೆ. ಮುಖ್ಯಮಂತ್ರಿ ಮಾಡೋರು ಜನ. ಜನರ ಮನಸ್ಸಿನಲ್ಲಿ ಇವರು ಇಬ್ಬರು ಇಲ್ಲ ಅಂತ ಲೇವಡಿ ಮಾಡಿದ್ರು. ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ: ಡಿಕೆಶಿನ ಹೈಕಮಾಂಡ್ ಸಿಎಂ ಮಾಡಲ್ಲ ಹೇಳಿಕೆಗೆ ಸಿದ್ದು ಸ್ಪಷ್ಟನೆ

    ಡಿ.ಕೆ ಶಿವಕುಮಾರ್ ಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದೆ. ಜನರನ್ನ ಮಾತಿನಿಂದ ಮರಳು ಮಾಡೋ ಪ್ರಯತ್ನ ಕಾಂಗ್ರೆಸ್ ಮಾಡ್ತಿದೆ. ಇಂತಹ ಬಹಳ ಜನ ನಾಯಕರನ್ನ ಕರ್ನಾಟಕದ ಜನ ನೋಡಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಬಹಳಷ್ಟು ನಡೆದಿದೆ. ಅದು ಏನ್ ನಡೆದಿದೆ ಅಂತ ಅವರಿಗೆ ಗೊತ್ತು. ಇಬ್ಬರು ಕೂಡಾ ಕನಸಿನಲ್ಲಿ ಸಿಎಂ ಸ್ಥಾನವನ್ನ ಪಡೆಯೋಕೆ ಕನಸು ಕಾಣ್ತಿದ್ದಾರೆ. ಅವರ ಕನಸು ನನಸಾಗದೇ ಇರೋ ಕನಸು ಅದು ಎಂದು ಭವಿಷ್ಯ ನುಡಿದರು.

    ಜನರ ಪಲ್ಸ್ ಏನ್ ಇದೆಯೋ ನಮ್ಮ ಶಾಸಕರ ಪಲ್ಸ್ ಅದೇ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಜನರ ಪಲ್ಸ್ ಏನಿದೆ ಅಂತ ಹೇಳೋಕೆ ಸಿದ್ದರಾಮಯ್ಯ ಭವಿಷ್ಯಗಾರರಲ್ಲ. ಫಲಿತಾಂಶ ಬಂದಾಗ ಜನರ ಪಲ್ಸ್ ಗೊತ್ತಾಗುತ್ತೆ. ಜನರ ಬೆಂಬಲ ಇದ್ದರೆ ಮಾತ್ರ ಶಾಸಕರು ಆಗೋಕೆ ಸಾಧ್ಯ ಎಂದರು.

  • ಚುನಾವಣೆ ನೀತಿ ಸಂಹಿತೆ ಜಾರಿಯಾಗ್ತಿದೆ, ನನ್ನೆಲ್ಲ ಪ್ರವಾಸ ರದ್ದು ಮಾಡಿದ್ದೇನೆ: ಸಿಎಂ

    ಚುನಾವಣೆ ನೀತಿ ಸಂಹಿತೆ ಜಾರಿಯಾಗ್ತಿದೆ, ನನ್ನೆಲ್ಲ ಪ್ರವಾಸ ರದ್ದು ಮಾಡಿದ್ದೇನೆ: ಸಿಎಂ

    – ಏಪ್ರಿಲ್ 7ರಂದು ಮೋದಿ ಮೈಸೂರಿಗೆ

    ಬೆಂಗಳೂರು: ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಾಗುತ್ತಿದೆ. ಹೀಗಾಗಿ ನಾನು ನನ್ನ ಎಲ್ಲಾ ಪ್ರವಾಸಗಳನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗ್ತಿದೆ, ನನ್ನೆಲ್ಲ ಪ್ರವಾಸ ರದ್ದು ಮಾಡಿದ್ದೇನೆ. ಇನ್ನು ಏನಿದ್ರೂ ನಾನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಪಕ್ಷದ ಚಟುವಟಿಕೆಯಿಂದ ನಡೆಸುವ ರ್ಯಾಲಿಗಳಲ್ಲಿ, ಪ್ರಚಾರಗಳಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು. ಇದೆಲ್ಲವೂ ನಿರೀಕ್ಷಿತ ಇವೆ. ಕಳೆದ ಸಲ 27 ರಂದು ದಿನಾಂಕ ಘೋಷಣೆ ಆಗಿತ್ತು. ನೀತಿ ಸಂಹಿತೆ ಜಾರಿಯಾಗಲಿದೆ. ಎಲ್ಲ ಪಕ್ಷಗಳಿಗೂ ನೀತಿ ಸಂಹಿತೆ ಅನ್ವಯವಾಗಲಿದೆ ಎಂದು ಹೇಳಿದರು.

    ಮೋದಿ (narendra Modi) ಯವರು ಏಪ್ರಿಲ್ 9 ರಂದು ಮೈಸೂರಿಗೆ ಬರುತ್ತಾರೆ. ಹುಲಿಗಳ ಸಂರಕ್ಷಣಾ ದಿನಾಚರಣೆಗೆ ಬರುತ್ತಾರೆ. ಅದು ಮೊದಲೇ ನಿಗಿದಿ ಆಗಿದ್ದ ಕಾರ್ಯಕ್ರಮವಾಗಿದೆ. ನನಗೆ ಈ ಬಾರಿ ನಮಗೆ ಬಹುಮತ ಬರುವ ವಿಶ್ವಾಸ ಇದೆ. ಇನ್ಮುಂದೆ ನನ್ನ ಪ್ರವಾಸಗಳನ್ನು ಪಕ್ಷ ನಿಗದಿ ಮಾಡುತ್ತೆ ಎಂದರು.

    ಡಿಕೆಶಿ ಅವರು ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ನಮ್ಮ ಎಲ್ಲಾ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಇದು ಅವರ ಪರಿಸ್ಥಿತಿ ಏನು ಅಂತ ತೋರಿಸುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ – ಜಿಲ್ಲಾ ಪ್ರವಾಸ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ವಾಪಸ್

    ಒಳಮೀಸಲಾತಿ ಹಂಚಿಕೆ ನ್ಯಾಯ ಸಮ್ಮತವಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ನಡೆಯುತ್ತಿರುವ ಪ್ರತಿಭಟನೆಗಳು ಕಾಂಗ್ರೆಸ್ ಪ್ರೇರಿತವಾಗಿದೆ. ಒಳ ಮೀಸಲಾತಿ ಜಾರಿಯಾಗುತ್ತೆ, ಅದೆಲ್ಲ ಆಗುವಂತಹ ಪ್ರಕ್ರಿಯೆಗಳು. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ ಎಂದು ಹೇಳಿದರು.

  • ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ- 2018ರ ಚುನಾವಣೆಯಲ್ಲಿ ಗೆದ್ದ ಮಹಿಳೆಯರು ಯಾರು?, ಸೋತವರೆಷ್ಟು?

    ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ- 2018ರ ಚುನಾವಣೆಯಲ್ಲಿ ಗೆದ್ದ ಮಹಿಳೆಯರು ಯಾರು?, ಸೋತವರೆಷ್ಟು?

    ಬೆಂಗಳೂರು: ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳು ಬಹಳ ಕಡಿಮೆ. ಇದಕ್ಕೆ ರಾಜಕೀಯ ಕ್ಷೇತ್ರವೂ ಹೊರತಾಗಿಲ್ಲ. ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ತುಂಬಾ ಕಡಿಮೆ. ಕಳೆದ (2018) ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರ ಪೈಕಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇತ್ತು. 2018ರಲ್ಲಿ 224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಲ್ಲಿ ಜಯದ ನಗೆ ಬೀರಿದ್ದು, ಕೇವಲ ಕೆಲವೇ ಮಂದಿ ಮಾತ್ರ. ಇಲ್ಲೇ ಅರ್ಥವಾಗುತ್ತೆ, ಕರ್ನಾಟಕ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸಿಗುವ ಪ್ರಾತಿನಿಧ್ಯ ಎಷ್ಟು ಎಂದು.

    ಈಗ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕರ್ನಾಟಕ ಎದುರು ನೋಡುತ್ತಿದೆ. ಈ ಬಾರಿಯಾದರೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. ಈ ಹೊತ್ತಿನಲ್ಲಿ, ಕಳೆದ ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೇಗಿತ್ತು? ಎಷ್ಟು ಮಹಿಳೆಯರು ಸ್ಪರ್ಧೆ ಮಾಡಿದ್ದರು? ಗೆದ್ದವರು ಯಾರು ಎಂಬುದನ್ನು ತಿಳಿಯೋಣ. ಅದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾರಿಗೂ ಬಹುಮತ ನೀಡಿರಲಿಲ್ಲ. ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇತ್ತ ಕಾಂಗ್ರೆಸ್ ಭಾಗಶಃ ಆಡಳಿತ ವಿರೋಧಿ ಅಲೆಯಲ್ಲಿ ಕೇವಲ 80 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿತ್ತು. ಇನ್ನು ಜೆಡಿಎಸ್ 37, ಬಿಸ್‍ಪಿ 1, ಕೆಪಿಜೆಪಿ 1, ಪಕ್ಷೇತರ 1 ಕ್ಷೇತ್ರದಲ್ಲಿ ಗೆದ್ದಿತ್ತು.

    ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕೃತಿ ಸಚಿವೆಯಾಗಿದ್ದ ಉಮಾಶ್ರೀ ಅವರಿಗೆ 2018ರ ಚುನಾವಣೆಯಲ್ಲಿ ಸೋಲಾಗಿತ್ತು. ಗುಂಡ್ಲುಪೇಟೆ ವಿಧಾನಸಭೆಯ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದ ಮಾಜಿ ಸಚಿವ ಮಹದೇವ ಪ್ರಸಾದ್ ಪತ್ನಿ, ಸಚಿವೆಯಾಗಿದ್ದ ಗೀತಾ ಮೋಹನಕುಮಾರಿ ಅವರು ಸಹ ಸೋತಿದ್ರು. ಇನ್ನು ಸತತ ಸೋಲುಗಳಿಂದ ಕೆಂಗಟ್ಟಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆದ್ದು ಬೀಗಿದ್ದರು.

    2018ರಲ್ಲಿ 224 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಒಟ್ಟು 219 ಮಹಿಳೆಯರು ಸ್ಪರ್ಧೆ ಮಾಡಿದ್ದರು. ಈ ಪೈಕಿ ಕೇವಲ ಏಳು ಜನರು ಮಾತ್ರ ವಿಧಾನಸಭೆ ಪ್ರವೇಶಿದ್ದಾರೆ. ಇದರಲ್ಲಿ 200 ಮಹಿಳಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ವಿಧಾನಸಭಾ ಒಟ್ಟು ಸ್ಥಾನಗಳ ಪೈಕಿ ಶೇ.3.2ರಷ್ಟು ಮಹಿಳೆಯರಿದ್ದರು.

    ಗೆದ್ದವರು ಯಾರು?:
    1. ಶಶಿಕಲಾ ಜೊಲ್ಲೆ: 2018 ರಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್ ಅಭ್ಯರ್ಥಿ ಕಾಕಾಸಾಹೇಬ ಪಾಟೀಲ್ ವಿರುದ್ಧ 8506 ಮತಗಳ ಅಂತರದಿಂದ ಗೆಲುವಿನ ಪತಾಕೆ ಹಾರಿಸಿದರು.
    2. ಅಂಜಲಿ ನಿಂಬಾಳ್ಕರ್: ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್‍ನ ಅಂಜಲಿ ನಿಂಬಾಳ್ಕರ್ ಅವರು ಬಿಜೆಪಿಯ ವಿಠಲ್ ಹಲಗೇಕರ್ ವಿರುದ್ಧ ಸ್ಪರ್ಧಿಸಿ 5,133 ಮತಗಳ ಅಂತರದಿಂದ ಕಿರೀಟ ತನ್ನದಾಗಿಸಿಕೊಂಡರು.

    3. ರೂಪಾಲಿ ನಾಯ್ಕ್: ಕಾರವಾರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾಲಿ ನಾಯ್ಕ್ ಅವರು ಜೆಡಿಎಸ್‍ನ ಆನಂದ್ ಅಸ್ನೋಟಿಕರ್ ವಿರುದ್ಧ 14 ಸಾವಿರ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು.
    4. ಲಕ್ಷ್ಮಿ ಹೆಬ್ಬಾಳ್ಕರ್– ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಿಜೆಪಿ ಅಭ್ಯರ್ಥಿ ಸಂಜಯ್ ಪಾಟೀಲ್ ವಿರುದ್ಧ 51,724 ಮತಗಳ ಅಂತರದಿಂದ ಗೆಲುವು ಕಂಡರು.

    5. ಕನೀಜ್ ಫಾತಿಮಾ- ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‍ನ ಕನೀಜ್ ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ವಿರುದ್ಧ ಸ್ಪರ್ಧಿಸಿ 5,940 ಮತಗಳ ಅಂತರದಿಂದ ಗೆಲುವು ಕಂಡರು.
    6. ಕೆ.ಪೂರ್ಣಿಮಾ ಶ್ರೀನಿವಾಸ್– ಹಿರಿಯೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಡಿ. ಸುಧಾಕರ್ ವಿರುದ್ಧ 12,875 ಮತಗಳ ಅಂತರದಿಂದ ಗೆಲುವಿನ ಮಾಲೆಗೆ ಕೊರಳೊಡ್ಡಿದರು.

    7. ಎಂ.ರೂಪಕಲಾ– ಕೆಜಿಎಫ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರೂಪಕಲಾ ಎಂ ಅವರು ಬಿಜೆಪಿಯ ಅಶ್ವಿನಿ ಸಂಪಂಗಿ ವಿರುದ್ಧ ಸ್ಪರ್ಧಿಸಿ 40,827 ಮತಗಳ ಅಂತರದಿಂದ ಗೆಲುವು ಕಂಡರು. ಇದನ್ನೂ ಓದಿ: ಅತಂತ್ರ ಪ್ರಜಾ ತೀರ್ಪು; 2018ರ ವಿಧಾನಸಭಾ ಚುನಾವಣೆಯಲ್ಲೇನಾಗಿತ್ತು?

    8. ಸೌಮ್ಯಾ ರೆಡ್ಡಿ– 2018ರ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಜಯನಗರದ ಬಿಜೆಪಿ ಅಭ್ಯರ್ಥಿ ನಿಧನರಾಗಿದ್ದರು. ಹಾಗಾಗಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಿಕೆ ಮಾಡಲಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸೌಮ್ಯರೆಡ್ಡಿಯವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ.ಎನ್ ಪ್ರಲ್ಹಾದ್ ಬಾಬು ಅವರನ್ನು 3,885 ಮತಗಳ ಅಂತರದಿಂದ ಸೋಲಿಸಿದರು.

    9. ಅನಿತಾ ಕುಮಾರಸ್ವಾಮಿ: ರಾಮನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿಯವರು ಬಿಜೆಪಿಯ ಎಲ್ ಚಂದ್ರಶೇಖರ್ ವಿರುದ್ಧ 1,09,137 ಮತಗಳ ಅಂತರದಿಂದ ಗೆಲುವು ಕಂಡರು. ಇದಲ್ಲದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಾಮ ನಿರ್ದೇಶನಗೊಂಡಿದ್ದ ಆಂಗ್ಲೋ ಇಂಡಿಯನ್ ಪ್ರತಿನಿಧಿ ವಿನಿಷಾನೆರೋ ಪ್ರಸ್ತುತ ವಿಧಾನಸಭೆ ಶಾಸಕಿಯಾಗಿದ್ದಾರೆ.

    ಉಪ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ: ಕುಂದಗೋಳ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಎಸ್‍ಐ ಚಿಕ್ಕನಗೌಡರನ್ನು 1,601 ಮತಗಳ ಅಂತರದಿಂದ ಸೋಲಿಸಿದರು. ಆರ್.ಆರ್.ನಗರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿಯಾಗಿದ್ದ ದಿ. ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಸ್ಪರ್ಧೆ ಮಾಡಿದ್ದರು. ಆದ್ರೆ ಬಿಜೆಪಿಯ ಮುನಿರತ್ನ ವಿರುದ್ಧ ಸೋಲಾಗಿತ್ತು.

    ಇನ್ನು ಬಸವಕಲ್ಯಾಣಕ್ಕೆ ನಡೆದ ಉಪಚುನಾವಣೆಯಲ್ಲಿ ದಿ.ನಾರಾಯಣ್ ರಾವ್ ಅವರ ಪತ್ನಿ ಮಾಲಾ ನಾರಾಯಣ್ ರಾವ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋತಿದ್ದರು. ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಅಮ್ಮಜಮ್ಮಾ ಸ್ಪರ್ಧೆ ಮಾಡಿ, ಬಿಜೆಪಿಯ ಅಭ್ಯರ್ಥಿ ವಿರುದ್ಧ ಸೋತಿದ್ದರು.

    ಸೋತವರು: ತೇರದಾಳ- ಉಮಾಶ್ರೀ (ಕಾಂಗ್ರೆಸ್), ಕುಮಟಾ- ಶಾರದ ಶೆಟ್ಟಿ (ಕಾಂಗ್ರೆಸ್), ಮೂಡಿಗೆರೆ- ಮೋಟಮ್ಮ (ಕಾಂಗ್ರೆಸ್), ಕೆಜಿಎಫ್- ಅಶ್ವಿನಿ ಸಂಪಂಗಿ (ಬಿಜೆಪಿ), ರಾಜಾಜಿನಗರ – ಜಿ. ಪದ್ಮಾವತಿ (ಕಾಂಗ್ರೆಸ್), ಪುತ್ತೂರು – ಶಕುಂತಳಾ ಶೆಟ್ಟಿ (ಕಾಂಗ್ರೆಸ್) ಸೇರಿದಂತೆ ಒಟ್ಟು 211 ಮಂದಿ ಮಹಿಳೆಯರು ಚುನಾವಣಾ ಅಖಾಡಕ್ಕಿಳಿದು ಸೋಲು ಕಂಡಿದ್ದಾರೆ.

  • ತೆನೆ ಹೊತ್ತ ಮಹಿಳೆ ಹಿಡಿದ ‘ಕೈ’ ವಿಲವಿಲ!

    ತೆನೆ ಹೊತ್ತ ಮಹಿಳೆ ಹಿಡಿದ ‘ಕೈ’ ವಿಲವಿಲ!

    -ಅರುಣ್ ಬಡಿಗೇರ್

    ರಾಜ್ಯದ ಸದ್ಯದ ರಾಜಕೀಯದ ಚಿತ್ರಣ ಕೊಟ್ಟೋನು ಕೋಡಂಗಿ ಇಸ್ಕೊಂಡವನು ವೀರಭದ್ರ ಅನ್ನೋ ಹಾಗಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡೋದಕ್ಕೆ ಕಾಂಗ್ರೆಸ್ ಎಲ್ಲವನ್ನೂ ಜೆಡಿಎಸ್‍ಗೆ ತ್ಯಾಗ ಮಾಡಿತ್ತು. ಮುಖ್ಯಮಂತ್ರಿ ಕುರ್ಚಿಯನ್ನೂ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟು, 5 ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರುತ್ತಾರೆ ಅಂತಾ ಒಪ್ಪಂದದ ಪ್ರತಿಯನ್ನೂ ಮಾಧ್ಯಮಗಳ ಮುಂದೆ ಕಾಂಗ್ರೆಸ್ ತೋರಿಸಿ ತಾನು ಮಾತಿಗೆ ಕಟಿಬದ್ಧ ಅನ್ನೋದನ್ನ ಸಾರಿ ಸಾರಿ ಹೇಳಿತ್ತು. ಜೊತೆಗೆ ಅನ್‍ಕಂಡಿಷನಲ್ ಸಪೋರ್ಟ್ ಮಾಡೋದಾಗಿ ಕಾಂಗ್ರೆಸ್ ಮಾತು ಕೊಟ್ಟಿತ್ತು. ಆದ್ರೆ, ಕಾಂಗ್ರೆಸ್ ಈಗ ಮಾತು ತಪ್ಪಿದೆ.

    ಮಾತು ತಪ್ಪಿದ ಕಾಂಗ್ರೆಸ್..?
    ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್ ಎಡವಿದೆ. ತನಗೆ ಬೇಕಾಗಿರೋ ಎಲ್ಲ ನಿಗಮ-ಮಂಡಳಿಗಳನ್ನ ತನ್ನ ನಾಯಕರಿಗೆ ಹಂಚಿದೆ. ಮೈತ್ರಿ ಧರ್ಮದ ಪ್ರಕಾರ ನಿಗಮ-ಮಂಡಳಿ ಹಂಚಿಕೆ ಮೊದಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬೇಕಿತ್ತು. ಆದ್ರೆ, ಯಾವುದೇ ಚರ್ಚೆ ನಡೆಸದೇ ತನಗೇ ಇಷ್ಟ ಬಂದ ಹಾಗೆ ಹಂಚಿಕೆ ಮಾಡಿದೆ. ಇದಲ್ಲದೆ, ಯಾವ ಖಾತೆಯನ್ನು ಯಾವ ಪಕ್ಷ ಹೊಂದಿದೆಯೋ ಆ ಖಾತೆಗೆ ಸಂಬಂಧಿಸಿದ ನಿಗಮ-ಮಂಡಳಿಗಳನ್ನು ಆ ಪಕ್ಷಕ್ಕೇ ಕೊಡಬೇಕು ಅನ್ನೋದು ಮೈತ್ರಿ ಧರ್ಮದಲ್ಲಿ ನಡೆದಿದ್ದ ಮಾತುಕತೆ. ಆದರೆ, ಕಾಂಗ್ರೆಸ್ ತನ್ನ ಅಸಮಾಧಾನಿತ ಶಾಸಕರನ್ನು ಸಮಾಧಾನ ಪಡಿಸಲು ಮೈತ್ರಿ ಧರ್ಮ ಮೀರಿ ಹೋಗಿದೆ.

    ಸೀಟು ಹಂಚಿಕೆ ಹೋಯ್ತು, ಫ್ರೆಂಡ್ಲಿ ಫೈಟ್ ಬಂತು..!
    ಅಪ್ಪಿ ಮುದ್ದಾಡಿ ದೋಸ್ತಿ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ, ಲೋಕಸಭೆಯಲ್ಲೂ ನಮ್ಮ ದೋಸ್ತಿ ಹೀಗೆ ಅಂದಿದ್ದರು. ಆದ್ರೆ, ಈಗ ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ. 3:1ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಬಿಜೆಪಿಯನ್ನ ಬಗ್ಗು ಬಡಿಯೋದೇ ನಮ್ಮ ಗುರಿ ಅಂತೆಲ್ಲ ಬಿಲ್ಡಪ್ ಕೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಫ್ರೆಂಡ್ಲಿ ಫೈಟ್ ಮಾಡೋದಕ್ಕೆ ಮುಂದಾಗಿದ್ದಾರೆ. ಅಂದ್ರೆ, 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡೋಕೆ ನಿರ್ಧರಿಸಿದೆ. ಇದಕ್ಕೆ ಕಾರಣ, 28 ಲೋಕಸಭಾ ಸೀಟುಗಳಲ್ಲಿ ಈ ಹಿಂದಿನ ಮಾತಿನಂತೆ 3:1ರ ಅನುಪಾತದಲ್ಲಿ 9 ರಿಂದ 10 ಸೀಟುಗಳನ್ನ ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಡಬೇಕಿತ್ತು. ಆದ್ರೆ, ಕಾಂಗ್ರೆಸ್ ಇದಕ್ಕೆ ಮಣೆ ಹಾಕುತ್ತಿಲ್ಲ. ಹಾಗಾಗಿ ಜೆಡಿಎಸ್ 28 ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡೋದಕ್ಕೆ ನಿರ್ಧರಿಸಿದೆ.

    ದೋಸ್ತಿಗಳ ಫ್ರೆಂಡ್ಲಿ ಫೈಟ್… ಬಿಜೆಪಿಗೆ ರೈಟ್..!
    ಜೆಡಿಎಸ್ ನಿರ್ಧಾರ ಮಾಡಿರೋ ಹಾಗೆ, ಲೋಕಸಭೆಯಲ್ಲಿ 28 ಕ್ಷೇತ್ರಗಳಲ್ಲಿ ಫ್ರೆಂಡ್ಲಿ ಫೈಟ್ ಮಾಡಿದರೆ ಅದರ ಲಾಭ ಬಿಜೆಪಿಗೆ ಆಗೋದ್ರಲ್ಲಿ ಯಾವುದೇ ಅನುಮಾನವವಿಲ್ಲ. ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಾಗಿ ಹೋರಾಟ ಮಾಡೋದಕ್ಕೂ, ಪ್ರತ್ಯೇಕವಾಗಿ ಹೋರಾಟ ಮಾಡೋದಕ್ಕೂ ಬಹಳ ವ್ಯತ್ಯಾಸವಾಗುತ್ತೆ. ಜೆಡಿಎಸ್‍ಗೆ ಕನಿಷ್ಠ ಅಂದ್ರೂ 5 ಲೋಕಸಭಾ ಸೀಟುಗಳಲ್ಲಿ ಒಂಟಿಯಾಗಿ ಹೋರಾಟ ಮಾಡೋ ಸಾಮಥ್ರ್ಯವಿದೆ. ಅದನ್ನ ಹೊರತು ಪಡಿಸಿದರೆ, ಇನ್ನೂ ಹೆಚ್ಚಿನ ಸೀಟುಗಳನ್ನು ಗೆಲ್ಲಲೇ ಬೇಕು ಅಂದ್ರೆ, ಅದಕ್ಕೆ ಕಾಂಗ್ರೆಸ್ ಬೆಂಬಲ ಬೇಕೇ ಬೇಕಾಗುತ್ತೆ. ಅದೇ ರೀತಿಯಾಗಿ ಕಾಂಗ್ರೆಸ್‍ಗೂ ಕೂಡ ಈಗಿರೋ 10 ಸೀಟುಗಳನ್ನ ಇನ್ನೂ ಹೆಚ್ಚಿಸಿಕೊಳ್ಳಬೇಕಾದ್ರೆ, ಜೆಡಿಎಸ್ ಸಪೋರ್ಟ್ ಬೇಕೇ ಬೇಕಾಗುತ್ತೆ. ಹಾಗಾಗಿ ದೋಸ್ತಿಗಳು ಸೀಟು ಹಂಚಿಕೆ ಮಾಡಿಕೊಳ್ಳದೆ ಪ್ರತಿಷ್ಠೆಗಿಳಿದು ಫ್ರೆಂಡ್ಲಿ ಫೈಟ್ ಮಾಡಿದ್ದೇ ಆದಲ್ಲಿ ಬಿಜೆಪಿ ಇದರ ಲಾಭ ಪಡೆದುಕೊಳ್ಳೋದ್ರಲ್ಲಿ ಯಾವುದೇ ಡೌಟ್ ಇಲ್ಲ.

    ಸೀಟಿಗಾಗಿ ಬ್ಲ್ಯಾಕ್ ಮೇಲ್ ಮಾಡ್ತಿದೆಯಾ ಜೆಡಿಎಸ್..?
    ಬಸವರಾಜ್ ಹೊರಟ್ಟಿ, ಹೆಚ್‍ಡಿ ರೇವಣ್ಣ, ಅನ್ನದಾನಿ ಮೊದಲಾದ ಶಾಸಕರು ಕೊಡ್ತಿರೋ ಹೇಳಿಕೆಗಳು ಒಂದು ರೀತಿ ಕಾಂಗ್ರೆಸ್‍ಗೆ ಬ್ಲ್ಯಾಕ್‍ಮೇಲ್ ಮಾಡುವ ಹಾಗಿದೆ. ಕಾಂಗ್ರೆಸ್ ಮೈತ್ರಿ ಧರ್ಮ ನಿಭಾಯಿಸುತ್ತಿಲ್ಲ. ಹಾಗಾಗಿ ಜೆಡಿಎಸ್ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ಮಾಡೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದೀವಿ ಅಂತಾ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಮಾಧ್ಯಮಕ್ಕೆ ಹೇಳಿಕೆ ಕೊಡ್ತಿದ್ದಂಗೆ, ಜೆಡಿಎಸ್‍ನ ಒಬ್ಬೊಬ್ಬರೇ ನಾಯಕರು ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನ ಕೊಡೋಕೆ ಶುರು ಮಾಡಿದ್ದಾರೆ. ಮೈತ್ರಿ ಧರ್ಮದ ಬಗ್ಗೆ ಪ್ರಶ್ನಿಸಲು ಹೊರಟಿದ್ದಾರೆ. ಸಿದ್ದರಾಮಯ್ಯನವರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಕೂಸು ಚಿವುಟಿ, ತೊಟ್ಟಿಲು ತೂಗೋ ಕೆಲಸ ಮಾಡ್ತಿದ್ದಾರಾ ಸಿದ್ದರಾಮಯ್ಯ.?
    ದೊಡ್ಡ ಗೌಡರ ಮೇಲೆ ಮೊದಲಿನಿಂದಲೂ ಸಿದ್ದರಾಮಯ್ಯನವರಿಗೆ ಎಲ್ಲಿಲ್ಲದ ಕೋಪ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದು ಇದೇ ಕಾರಣಕ್ಕೆ. ಜೆಡಿಎಸ್‍ನಲ್ಲಿದ್ದಿದ್ದರೆ ಸಿದ್ದರಾಮಯ್ಯನವರು `ಅಪ್ಪನಾಣೆ’ಗೂ ಸಿಎಂ ಆಗೋ ಚಾನ್ಸೇ ಇರಲಿಲ್ಲ. ಸಿಎಂ ಆಗಲೇ ಬೇಕು ಅನ್ನೋ ಛಲದಿಂದ ಕಾಂಗ್ರೆಸ್ ಸೇರಿ ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರವನ್ನೂ ನಡೆಸಿದ್ರು. ಬಿಜೆಪಿ ಮಾಡಿಕೊಂಡ ಸ್ವಯಂಕೃತ ಎಡವಟ್ಟಿನ ಲಾಭ ಸಿದ್ದರಾಮಯ್ಯನವರಿಗೆ ಆಗಿರೋದನ್ನ ಯಾರೂ ತಳ್ಳಿಹಾಕೋ ಹಾಗಿಲ್ಲ. ಹೀಗಿದ್ದಾಗಲೂ ಕಳೆದ ಬಾರಿಯ ಚುನಾವಣೆಯಲ್ಲಿ ದೊಡ್ಡ ಗೌಡ್ರನ್ನ ಬಾಯಿಗೆ ಬಂದಂಗೆ ಮಾತನಾಡಿ, ಚುನಾವಣೆಯಲ್ಲಿ ಪಕ್ಷವೂ ಸೋಲನುಭವಿಸಬೇಕಾಯ್ತು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು ಹೀನಾಯವಾಗಿ ಸೋಲಬೇಕಾಯ್ತು.

    ಕಾಂಗ್ರೆಸ್‍ನ ಹೈಕಮಾಂಡ್ ಮಾತಿಗೆ ತಲೆಬಾಗಿ, ಅನಿವಾರ್ಯವಾಗಿ ಮೈತ್ರಿ ಸರ್ಕಾರಕ್ಕೆ ಜೈ ಅಂದು ಸಿಎಂ ಕುರ್ಚಿಯನ್ನ ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿದ್ರು ಸಿದ್ದರಾಮಯ್ಯ. ಆದ್ರೆ, ಒಳಗೊಳಗೆ ಸಿದ್ದರಾಮಯ್ಯನವರಿಗೆ ಈ ಸರ್ಕಾರ ಇಷ್ಟವಿರಲಿಲ್ಲ. ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ವೇಳೆಯಲ್ಲೂ ತಮ್ಮ ಕಾರ್ಯಕರ್ತರ ಮುಂದೆ, ಈ ಸರ್ಕಾರ ಲೋಕಸಭಾ ಚುನಾವಣೆವರೆಗೂ ಮಾತ್ರ ಅಂತಾನೂ ಹೇಳಿದ್ರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯೋದು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲವೋ ಏನೋ ಗೊತ್ತಿಲ್ಲ. ಅವರ ಶಿಷ್ಯಂದಿರೇ ಈಗ ಅಸಮಾಧಾನಿತ ಶಾಸಕರಾಗಿರೋದ್ರಿಂದ ನೇರವಾಗಿ ಸಿದ್ದರಾಮಯ್ಯನವರೇ ಇದೆಲ್ಲ ಆಟ ಆಡಿಸುತ್ತಿದ್ದಾರಾ ಅನ್ನೋ ಅನುಮಾನ ಬರದೇ ಇರದು. ಜೊತೆಗೆ, ಅಸಮಾಧಾನಗೊಳ್ಳುವಂತೆ ಮಾಡಿ, ಎಲ್ಲರನ್ನೂ ಸಮಾಧಾನ ಮಾಡೋ ರೀತಿ ಮಾತನಾಡಿ ತಾವೇ ಪಕ್ಷದಲ್ಲಿ ಕಿಂಗ್, ತಾವು ಸೋತಿದ್ದರೂ ಪಕ್ಷದಲ್ಲಿ ಎಲ್ಲ ನಾಯಕರು ತಾವು ಹೇಳಿದ್ರೆ ಮಾತು ಕೇಳ್ತಾರೆ ಅನ್ನೋ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸೋ ಯೋಚನೆಯೂ ಈ ಬೆಳವಣಿಗೆಯ ಹಿಂದಿರಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    -ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    ಕೋಲಾರ: ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ, ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತೆ. ಮುಂದಿನ ವರ್ಷ ನಾವೇ ಅಧಿಕಾರಕ್ಕೆ ಬರೋರು ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

    ಇಲ್ಲಿನ ಬೈರೇಗೌಡನಗರದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ರಾಜ್ಯದಲ್ಲಿ ಅತಂತ್ರ ಸರ್ಕಾರವಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಮತ್ತೆ ಪ್ರಚಾರಕ್ಕೆ ಸಿದ್ಧರಾಗಬೇಕು. ಹಿಂದಿನ ಚುನಾವಣೆಯ ಅಹಿತಕರ ಘಟನೆ ಮರೆತು ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಾನು ಇನ್ನು ಮುಂದೆ ಕ್ಷೇತ್ರದಲ್ಲಿದ್ದು ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಅಂತಾ ಅಂದ್ರು.

     

    ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ವರ್ತೂರ್ ಪ್ರಕಾಶ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಹೀಗಾಗಿ ಆತ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಆಗಮಿಸಿದ್ದ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಬಾಡೂಟ ಸಿದ್ಧ ಪಡಿಸಲಾಗಿತ್ತು. 1,200ಕ್ಕೂ ಹೆಚ್ಚು ಕಾರ್ಯಕರ್ತರು ಬಾಡೂಟ ಸವಿದಿದ್ದಾರೆ.

    ಕಾಂಗ್ರೆಸ್‍ನಲ್ಲಿ 80 ಜನ ಹಿರಿಯ ಶಾಸಕರಿದ್ದಾರೆ. ಅವರಲ್ಲಿ 20 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತದೆ. 60 ಜನ ಶಾಸಕರು ಹಾಗೇ ಉಳಿಯುತ್ತಾರೆ. ಹುದ್ದೆಗಳ ಹಂಚಿಕೆ ಸಮಸ್ಯೆಯಿಂದಾಗಿ 2019ರಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • 37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    ಬೆಂಗಳೂರು: 37 ಜನ ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತದೆಯೇ ಎಂದು ಮಾಜಿ ಪ್ರದಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

    ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ನಿರ್ಧಾರ ಕೈಗೊಳ್ಳಲು ನಮಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಯಬೇಕು ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯಲ್ಲಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಲಹೆ ನೀಡಿರುವೆ. ನಾವು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

    ನಗರಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಬಂದಿದ್ದಾರೆ. ತೃತೀಯ ರಂಗದ ನಿರ್ಧಾರಗಳ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಪಕ್ಷದ ಅಧ್ಯಕ್ಷ ಎನ್ನುವುದಕ್ಕಿಂತ ಹೆಚ್ಚಾಗಿ ತಂದೆಯಾಗಿ ಆರ್ಶೀವಾದ ಮಾಡಿರುವೆ. ಇದು ನಮ್ಮ ಕರ್ತವ್ಯ ಎಂದರು.

    ಅಮೋಘ ನಿವಾಸದಲ್ಲಿ ಸಂಭ್ರಮ:
    ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪದ್ಮನಾಭನಗರದ ಅಮೋಘ ನಿವಾಸದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮನೆಯ ಮುಂಭಾಗವು ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದೆ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸಹೋದರಿ ಮನೆಯ ಮುಂದಿನ ತುಳಸಿ ಪೂಜೆ ಮಾಡಿದ್ದು, ಬೆಳಗ್ಗೆಯಿಂದಲೇ ಕುಟುಂಬಸ್ಥರು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ.

    ನಿವಾಸದ ಸುತ್ತಮುತ್ತ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಮಂಗಳವಾರ ರಾತ್ರಿ ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ತಡರಾತ್ರಿಯವರೆಗೆ ದೇವೇಗೌಡರು ಸಮಾಲೋಚನೆಯಲ್ಲಿ ತೊಡಗಿದ್ದರು. ಸದ್ಯ ಅವರ ನಿವಾಸಕ್ಕೆ  ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.

  • ರೋಷನ್ ಬೇಗ್‍ರನ್ನು ಡಿಸಿಎಂ ಮಾಡಿ: ಮುಸ್ಲಿಂ ಸಂಘಟನೆಗಳಿಂದ ಬೇಡಿಕೆ

    ರೋಷನ್ ಬೇಗ್‍ರನ್ನು ಡಿಸಿಎಂ ಮಾಡಿ: ಮುಸ್ಲಿಂ ಸಂಘಟನೆಗಳಿಂದ ಬೇಡಿಕೆ

    ಬೆಂಗಳೂರು: ನಮ್ಮ ಸಮುದಾಯದ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದೆ.

    ಈ ಹಿಂದೆ ವೀರಶೈವ ಸಮಾಜದ ಮುಖಂಡರು ತಮ್ಮ ಸಮಾಜದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಮತ್ತು 5 ಮಂದಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಈ ಬೆನ್ನಲ್ಲೆ, ಶಿವಾಜಿನಗರದ ಶಾಸಕ ಆರ್.ರೋಷನ್ ಬೇಗ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಮುಸ್ಲಿಂ ಸಂಘಟನೆಗಳ ಒಕ್ಕೂಟದ ಪ್ರಧಾನ ಸಂಚಾಲಕ ಸಮಿಉಲ್ಲಾ ಖಾನ್ ಒತ್ತಾಯಿಸಿದ್ದಾರೆ.

    ರಾಜಕೀಯದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಕಾಂಗ್ರೆಸ್‍ನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಕರಾವಳಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡಲ್ಲ, ಸಮಸ್ಯೆ ಇದ್ರೆ ಕರೆ ಮಾಡಿ: ಎಚ್‍ಡಿಕೆ

    ಕರಾವಳಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡಲ್ಲ, ಸಮಸ್ಯೆ ಇದ್ರೆ ಕರೆ ಮಾಡಿ: ಎಚ್‍ಡಿಕೆ

    ಮಂಗಳೂರು: ಕರಾವಳಿ ಜನತೆ ಸೌಹಾರ್ದತೆಯಿಂದ ಬದುಕಬೇಕು. ಕ್ಷುಲ್ಲಕ ವಿಚಾರದಲ್ಲಿ ದ್ವೇಷ ಸಾಧಿಸಿ ಅಮಾಯಕರನ್ನು ಬಲಿ ಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಪತ್ನಿ ಅನಿತಾ ಅವರೊಂದಿಗೆ ಇಂದು ಎಚ್‍ಡಿಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಗೌರವಿಸಿದರು.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾವೋದ್ವೇಗದ ವಿಚಾರಕ್ಕೆ ಒತ್ತು ಕೊಟ್ಟು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ನಾನು ಕರಾವಳಿ ಭಾಗದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ಇದಕ್ಕೆ ಇಲ್ಲಿನ ಯುವಕರ ಸಹಕಾರ ಬೇಕು. ಏನೇ ಸಮಸ್ಯೆ ಇದ್ದರೂ ನನಗೆ ಕರೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಐದು ವರ್ಷ ಸುಭದ್ರ ಸರ್ಕಾರ ನಡೆಸಲು ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಹಿರಿಯರನ್ನು ಭೇಟಿ ಮಾಡುತ್ತಿರುವೆ. ನಾವು ಕಾಂಗ್ರೆಸ್ ಜತೆ ಸರ್ಕಾರ ರಚನೆ ಮಾಡುತ್ತಿರವುದನ್ನು ಅಪವಿತ್ರ ಮೈತ್ರಿ ಎಂದು ಅನೇಕರು ಟೀಕೆ ಮಾಡಿದ್ದಾರೆ. ಆದರೆ, ಇಲ್ಲಿ ಪವಿತ್ರ ಅಪವಿತ್ರ ಮಾತು ಬರುವುದಿಲ್ಲ. ಶಾಸಕರ ಸಂಖ್ಯಾಬಲ ಇದ್ದರೆ ಮಾತ್ರ ಸರ್ಕಾರ ಉಳಿಯುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು.

    ನಮ್ಮ ಕುಟುಂಬ ದೇವರ ಮೇಲೆ ನಂಬಿಕೆ ಇಟ್ಟಿದ್ದು, ದೇವರ ಅನುಗ್ರಹದಿಂದಲೇ ರಾಜ್ಯದ ಜವಾಬ್ದಾರಿ ಸಿಕ್ಕಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ನೀಡಿ ಆರ್ಥಿಕ ಪರಿಸ್ಥಿತಿ ಏರಿಕೆಯಾಗಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿರುವೆ ಎಂದು ಕುಮಾರಸ್ವಾಮಿ ಹೇಳಿದರು.

  • ಬುಧವಾರ ಸಂಜೆ 4.30ಕ್ಕೆ ಎಚ್‍ಡಿಕೆ ಪ್ರಮಾಣವಚನ: ಈ ಸಮಯದಲ್ಲೇ ಯಾಕೆ?

    ಬುಧವಾರ ಸಂಜೆ 4.30ಕ್ಕೆ ಎಚ್‍ಡಿಕೆ ಪ್ರಮಾಣವಚನ: ಈ ಸಮಯದಲ್ಲೇ ಯಾಕೆ?

    ಬೆಂಗಳೂರು: ಕೈಯಲ್ಲಿ ನಿಂಬೆಹಣ್ಣು ಇಲ್ಲದೇ ಮನೆಯಿಂದ ಹೊರನಡೆಯದ ಹೆಚ್‍ಡಿ ರೇವಣ್ಣ, ಕೊಂಚ ಮೂಡ್ ಔಟ್ ಆದ್ರೂ ರಾಜ್ಯದ ಹೊರ ರಾಜ್ಯದ ಜ್ಯೋತಿಷಿಗಳ ಕೈಯಲ್ಲಿ ಜಾತಕ ಓದಿಸೋ ದೊಡ್ಡ ಗೌಡ್ರು. ಹೀಗಿರುವಾಗ ದೊಡ್ಡ ಗೌಡ್ರ ಮನೆ ಮಗ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮುಹೂರ್ತ ಎಂತದ್ದು ಇರಬಹುದು ಅನ್ನೋ ಕುತೂಹಲ ಹಲವರಲ್ಲಿದೆ.

    ಹೆಚ್‍ಡಿಕೆ ಪ್ರಮಾಣ ವಚನ ಸಮಾರಂಭ ಬುಧವಾರ ಸಂಜೆ ನಾಲ್ಕು ಗಂಟೆಯ ಬಳಿಕ ನಡೆಯಲಿದ್ದು ಅದು ಅಮೃತ ಸಿದ್ಧಿ ಯೋಗದ ಮುಹೂರ್ತವಂತೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ 10 ಗಂಟೆಗೆ ಸಮಯ ಚೆನ್ನಾಗಿದ್ದರೂ ಸಂಜೆಯ ವೇಳೆ ನವಮಿ ಪೂರ್ವ ಫಲ್ಗುಣಿ ಅಮೃತ ಸಿದ್ಧಿ ಯೋಗದಲ್ಲಿಯೇ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸಾಮಾನ್ಯವಾಗಿ ಅಮೃತ ಸಿದ್ಧಿ ಯೋಗ ಎಂದರೆ ಸ್ಥಿರ, ಚಂಚಲತೆ ಇರುವುದಿಲ್ಲ. ಇದಕ್ಕಾಗಿಯೇ ಈ ಸಮಯದಲ್ಲಿಯೇ ಋಷಿ ಮುನಿಗಳು ಯೋಗ ಸಿದ್ಧಿಗಾಗಿ ತಪಸ್ಸಿಗಾಗಿ ಕುಳಿತುಕೊಂಡ ಐತಿಹ್ಯ ಇದೆ. ಚಂಚಲತೆ ಇಲ್ಲದೇ, ಸ್ಥಿರತೆ ಇರಲಿ, ಮೈತ್ರಿ ಸರ್ಕಾರದಲ್ಲಿ ತೊಡಕಾಗದಿರಲಿ ಎಂದು ಈ ಸಮಯದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

    ಆರಂಭದಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ಈಗ ಸ್ಥಳ ಬದಲಾಗಿದ್ದು, ಬುಧವಾರ ಸಂಜೆ 4.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: 11.30ಕ್ಕೆ ಸರಿಯಾಗಿ ಎಚ್‍ಡಿಕೆಯನ್ನು ಆಯ್ಕೆ ಮಾಡಿದ್ದು ಯಾಕೆ: ರೇವಣ್ಣ ಹೇಳ್ತಾರೆ ಓದಿ

    ಒಬ್ಬಂಟಿಯಾಗಿ ರೇವಣ್ಣ ಪ್ರಮಾಣವಚನ:
    ಗ್ರಹ, ಕಾಲ ನೋಡಿಯೇ ಮುಂದುವರಿಯುವ ಜೆಡಿಎಸ್‍ನ ಎಚ್.ಡಿ.ರೇವಣ್ಣ ಶನಿವಾರ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಕುಳಿತುಕೊಳ್ಳಿ ಸಂಜೆ 4 ಗಂಟೆ ಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ ಎಂದು ತಿಳಿಸಿದರು. ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.