Tag: ಕರ್ನಾಟಕ ರಾಜ್ಯಪಾಲ

  • ಆರೋಗ್ಯ ಸೇವೆ ದೇವರ ಸೇವೆ: ರಾಜ್ಯಪಾಲ ಗೆಹ್ಲೋಟ್‌

    ಆರೋಗ್ಯ ಸೇವೆ ದೇವರ ಸೇವೆ: ರಾಜ್ಯಪಾಲ ಗೆಹ್ಲೋಟ್‌

    ಬೆಂಗಳೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಪ್ರಮುಖ. ಆರೋಗ್ಯ ಸೇವೆ ದೇವರ ಸೇವೆ. ದೇವರ ಸೇವೆ ಮಾಡಲು ಆರಿಸಿಕೊಂಡ ಮಾರ್ಗ, ಸಮಾಜವನ್ನು ಆರೋಗ್ಯವಾಗಿ ಮತ್ತು ರೋಗ ಮುಕ್ತವಾಗಿಡಬೇಕೆಂಬ ವೈದ್ಯರ ಸಂಕಲ್ಪ ಶ್ಲಾಘನೀಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

    ಭಾರತೀಯ ಆರ್ಥೊಡಾಂಟಿಕ್ ಸೊಸೈಟಿ ಮತ್ತು ಬೆಂಗಳೂರು ಆರ್ಥೊಡಾಂಟಿಕ್ ಗ್ರೂಪ್ ಸಹಯೋಗದಲ್ಲಿ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಸೀಳು ಮತ್ತು ಕ್ರಾನಿಯೋಫೇಶಿಯಲ್ ಆರ್ಥೊಡಾಂಟಿಕ್ಸ್ ರಾಷ್ಟ್ರೀಯ ಸಮ್ಮೇಳನ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

    ಹುಟ್ಟಿನಿಂದಲೇ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ದೈಹಿಕ ವೈಪರೀತ್ಯ ಮಾತ್ರವಲ್ಲ, ಇದಕ್ಕಿಂತ ಹೆಚ್ಚಾಗಿ ಈ ಸಮಸ್ಯೆ ಅವರ ಜೀವನದ ಮೇಲೆ ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ 700 ಮಕ್ಕಳಲ್ಲಿ 1 ಮಗುವಿಗೆ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಹುಟ್ಟುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯೊಂದಿಗೆ ಜನಿಸುತ್ತಾರೆ ಎಂದು ತಿಳಿದು ಬಂದಿದೆ ಎಂದರು.

    ಜನ್ಮಜಾತ ಸೀಳು ತುಟಿ ಮತ್ತು ಅಂಗುಳಿನ ವಿರೂಪತೆಯನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಎದುರಿಸುತ್ತಿರುವ ಪರಿಸ್ಥಿತಿಗಳು ಅವರಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಬಹಳ ಗಂಭೀರ ಮತ್ತು ಶಾಶ್ವತ ಸ್ವಭಾವವನ್ನು ಹೊಂದಿರಬಹುದು. ಈ ಸವಾಲುಗಳನ್ನು ಎದುರಿಸಲು ಒಂದು ಸಮಗ್ರ ವಿಧಾನದ ಅಗತ್ಯವಿದೆ. ಬಾಧಿತ ಮಗುವಿಗೆ ತಾಯಿಯ ಸಹಾಯದ ಅಗತ್ಯವಿದೆ. ಆರ್ಥೊಡಾಂಟಿಕ್, ಓರಲ್ ಸರ್ಜನ್, ಪೀಡಿಯಾಟ್ರಿಕ್ ಡೆಂಟಿಸ್ಟ್, ನರ್ಸಿಂಗ್, ಸ್ಪೀಚ್ ಥೆರಪಿಸ್ಟ್ ಮತ್ತು ಸೈಕಲಾಜಿಕಲ್ ಕೌನ್ಸೆಲರ್‌ಗಳ ಬೆಂಬಲವು ಅವನ ಜೀವನಕ್ಕೆ ನಗು ತರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಈ ಸಮ್ಮೇಳನದಲ್ಲಿ ವಿವಿಧ ವಿಶೇಷತೆಗಳ ತಜ್ಞರು ಅರ್ಥಪೂರ್ಣ ಚರ್ಚೆಯನ್ನು ನಡೆಸುತ್ತಾರೆ. ತಮ್ಮ ಜ್ಞಾನ ಮತ್ತು ಅನುಭವವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದು ಈ ಮಕ್ಕಳ ಜೀವನದಲ್ಲಿ ನಗುವನ್ನು ತರಲು ಸಹಾಯಕವಾಗುತ್ತದೆ. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ನಿರ್ವಹಣಾ ವಲಯದಲ್ಲಿ ಸಾಂಸ್ಥಿಕ ಬದ್ಧತೆ ಮತ್ತು ದೀರ್ಘಾವಧಿಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

    ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಬಾಧಿತವಾಗಿರುವ ಪ್ರತಿಯೊಂದು ಮಗುವೂ ಸಕಾಲಿಕ ಮತ್ತು ಗುಣಮಟ್ಟದ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸೌಲಭ್ಯಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಸಂಸ್ಥೆಗಳಿಗೆ ಮನವಿ ಮಾಡಿದರು. ಇದನ್ನೂ ಓದಿ: ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

    ದಯಾನಂದ ಸಾಗರ್ ಸಂಸ್ಥೆಗಳ ಅಧ್ಯಕ್ಷ ಡಾ. ಡಿ.ಹೇಮಚಂದ್ರ ಸಾಗರ್, ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಮತ್ತು ಕಾರ್ಯದರ್ಶಿ ಡಾ. ಸಂಜಯ್ ಲಾಭ್, ದಯಾನಂದ ಸಾಗರ್ ಸಂಸ್ಥೆಗಳ ಕಾರ್ಯದರ್ಶಿ ಗಾಲಿಸ್ವಾಮಿ, ಜಂಟಿ ಕಾರ್ಯದರ್ಶಿ ಟಿಂಟಿಶಾ ಹೆಚ್. ಸಾಗರ್, ಪ್ರಾಂಶುಪಾಲ ಡಾ. ಹೇಮಂತ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರ ಬಿಟ್ಟುಹೋದ ವಿಮಾನ – ಗೆಹ್ಲೋಟ್‌ ಗರಂ

    10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರ ಬಿಟ್ಟುಹೋದ ವಿಮಾನ – ಗೆಹ್ಲೋಟ್‌ ಗರಂ

    ಬೆಂಗಳೂರು: ಹೈದರಾಬಾದ್‌ಗೆ (Hyderabad) ತೆರಳಬೇಕಿದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅವರು 10 ನಿಮಿಷ ತಡವಾಗಿ ಏರ್‌ಪೋರ್ಟ್‌ಗೆ (Bengaluru Airport) ಆಗಮಿಸಿದ್ದಕ್ಕೆ, ಅವರನ್ನೇ ವಿಮಾನ ಬಿಟ್ಟು ಹೋಗಿರುವ ಘಟನೆ ನಡೆದಿದೆ.

    ಗುರುವಾರ ಮಧ್ಯಾಹ್ನ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದ್ದು, ರಾಜ್ಯಪಾಲರು (Karnataka Governor) ಗರಂ ಆಗಿದ್ದಾರೆ. ನಾನು ರಾಜ್ಯದ ಪ್ರಥಮ ಪ್ರಜೆ. ನನಗೆ ಅಗೌರವ ಉಂಟಾಗಿದೆ. ನನ್ನ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ. 10 ನಿಮಿಷ ತಡವಾದರೆ, ಕಾಯಬೇಕಿತ್ತು. ಹಾಗಂಥ ನನ್ನ ಬಿಟ್ಟು ಹೋಗ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ಪಂದಿಸುವುದು ನಿಮ್ಮ ಕರ್ತವ್ಯ, ಎಷ್ಟು ಸಾಧ್ಯವೋ ಅಷ್ಟು ಶಾಸಕರ ಕೆಲಸ ಮಾಡಿಕೊಡಿ: ಸಿದ್ದರಾಮಯ್ಯ

    ಗೆಹ್ಲೋಟ್ ಅವರು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟ್ಟಿದ್ದರು. ಮಧ್ಯಾಹ್ನ 2 ಗಂಟೆಗೆ ಏರ್‌ಏಶಿಯಾ ವಿಮಾನದ ಮೂಲಕ ಹೋಗಬೇಕಿತ್ತು. ಆದರೆ 15 ನಿಮಿಷ ತಡವಾಗಿ ಏರ್‌ಪೋರ್ಟ್ ತಲುಪಿದ್ದಾರೆ.

    ಅಷ್ಟರಲ್ಲಿ ವಿಮಾನ ರಾಜ್ಯಪಾಲರ ಬಿಟ್ಟು ಹಾರಾಟ ನಡೆಸಿತ್ತು. ಇದರಿಂದ ಕೋಪಗೊಂಡ ರಾಜ್ಯಪಾಲರು ಅಧಿಕಾರಗಳ ಕರೆಸಿ ಮಾತನಾಡಿದ್ದಾರೆ. ಅಲ್ಲದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ ವಿಮಾನ ಕಂಪನಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ

    ಇಷ್ಟೆಲ್ಲಾ ಆದ ಬಳಿಕ 3:30 ರ ವಿಮಾನದಲ್ಲಿ ಹೈದರಾಬಾದ್‌ ತಲುಪಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯಪಾಲರು ಕಾರ್ಯಕ್ರಮದಲ್ಲಿ ತಡವಾಗಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೂಸ್ಟರ್‌ ಡೋಸ್ ಪಡೆದ ರಾಜ್ಯಪಾಲ – ಲಸಿಕೆ ಪಡೆಯಲು ಜನತೆಗೆ ಕರೆ

    ಬೂಸ್ಟರ್‌ ಡೋಸ್ ಪಡೆದ ರಾಜ್ಯಪಾಲ – ಲಸಿಕೆ ಪಡೆಯಲು ಜನತೆಗೆ ಕರೆ

    ಬೆಂಗಳೂರು: ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆದುಕೊಂಡರು.

    ನಂತರ ಅವರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ರಾಜ್ಯಪಾಲರು, ಕೊರೊನಾ ಮಹಾಮಾರಿಯಿಂದ ಮುಕ್ತಿಯಾಗಲು ಲಸಿಕೆ ಅವಶ್ಯಕತೆ ಇದೆ. ಲಸಿಕೆ ಪಡೆಯೋದು ಅವಶ್ಯವಾಗಿದೆ. ರಾಜ್ಯದ ಜನ ಲಸಿಕೆ ಪಡೆಯಬೇಕು. ಕೊರೊನಾದಿಂದ‌ ಮುಕ್ತವಾಗಲು ಲಸಿಕೆ ಮುಖ್ಯ ಎಂದು ಸಲಹೆ ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೇ ಇಲ್ಲ: ಸಚಿವ ಸುಧಾಕರ್‌ ಸ್ಪಷ್ಟನೆ

    ದೆಹಲಿಯಲ್ಲಿ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದಿದ್ದೇನೆ. ಇಂದು ಬೂಸ್ಡರ್ ಡೋಸ್ ಪಡೆದಿದ್ದೇನೆ. ಪ್ರಮಾಣ ಪತ್ರವನ್ನು ನನಗೆ ನೀಡಿದ್ದಾರೆ. ಇಡೀ ದೇಶದಲ್ಲಿ ‌ಲಸಿಕೆ ಅಭಿಯಾನ ನಡೆಯುತ್ತಿದೆ. ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಮುಂದಿದೆ. ಈ ಕಾರ್ಯಕ್ಕೆ ಸಿಎಂ ಹಾಗೂ ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರು ಲಸಿಕೆ ಪಡೆಯಬೇಕು. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಹೇಳಿದರು.

    ರಾಜ್ಯದಲ್ಲಿ 4.89 ಕೋಟಿ ಜನರು ಮೊದಲ ಡೋಸ್, 3.98 ಕೋಟಿ ಜನರು ಎರಡನೇ ಡೋಸ್ ಪಡೆದಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.81.5 ಮಂದಿಗೆ ಎರಡೂ ಡೋಸ್ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ 5T ಸೂತ್ರ: ಪ್ರಧಾನಿ ಮೆಚ್ಚುಗೆ