Tag: ಕರ್ನಾಟಕ ರಕ್ಷಣಾ ವೇದಿಕೆ

  • ಇಂಗ್ಲಿಷ್ ಬೋರ್ಡ್‍ಗಳು ಉಡೀಸ್- ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ

    ಇಂಗ್ಲಿಷ್ ಬೋರ್ಡ್‍ಗಳು ಉಡೀಸ್- ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ

    – ಇಂಗ್ಲಿಷ್, ಹಿಂದಿ ಬೋರ್ಡ್ ಹರಿದು ಆಕ್ರೋಶ

    ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ (Kannada Board) ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (Karnataka Rakshana Vedike) ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಾಣವನ್ನೂ ಲೆಕ್ಕಿಸದೇ ಬೃಹತ್ ಜಾಹೀರಾತು ಫಲಕ ಏರಿ ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ.

    ಕರವೇ ನಾರಾಯಣಗೌಡ (Karave Narayana Gowda) ಬಣದ ಕಾರ್ಯಕರ್ತರು ನಾಮಫಲಕ ಮಹಾ ಅಭಿಯಾನ ಆರಂಭಿಸಿದ್ದು, ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಅಂಗಡಿ ಹಾಗೂ ಮಾಲ್‍ಗಳ ನಾಮಫಲಕಗಳಲ್ಲಿ 60% ಆದ್ಯತೆ ಕೊಡಬೇಕು. ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳನ್ನು ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು

    ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಮಾಲ್ ಒಂದರ ಮುಂಭಾಗದ ಫ್ಲೈಓವರ್ ಮೇಲೆ ನಿಂತು ಮಾಲ್ ಕಡೆಗೆ ಚಪ್ಪಲಿ ತೂರಿದ್ದಾರೆ. ಮಾಲ್‍ಗಳಿಗೆ ರಕ್ಷಣೆ ಒದಗಿಸಲಾಗಿದ್ದು, 100ಕ್ಕೂ ಹೆಚ್ಚು ಪೊಲೀಸರು ಮಾಲ್ ಬಳಿ ಸುತ್ತುವರಿದಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಕನ್ನಡ ಇಲ್ಲದ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಅಲ್ಲದೇ ನಾಮಫಲಕಗಳನ್ನು ಒಡೆದು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿನೂ ತೋರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಲಕ್ಷ್ಮಿಪ್ರಸಾದ್, ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ 500 ಪೊಲೀಸರನ್ನು ನಿಯೋಜಿಸಲಾಗಿದೆ. 10 ಬಿಎಂಟಿಸಿ ಬಸ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ಆದೇಶ ಇರುವುದರಿಂದ ರ‍್ಯಾಲಿಗೆ ಅವಕಾಶ ಕೊಡುವುದಿಲ್ಲ. ಇದನ್ನೂ ಮೀರಿ ರ್ಯಾಲಿಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

  • ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

    ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

    ಬೆಳಗಾವಿ: ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕಗಳನ್ನು ಹರಿದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ನಗರದ ವಿವಿಧ ಬಡಾವಣೆಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರವೇ (ಟಿ‌.ಎ‌‌.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ರಾಣಿ ಚನ್ನಮ್ಮನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಬೈಕ್ ಡಿಕ್ಕಿ- ವೃದ್ಧನ ತಲೆಯಲ್ಲಿದ್ದ ದಿನಸಿ ಚೀಲಕ್ಕೆ ಕೈತಾಗಿ ಬಿದ್ದಾಕೆಯ ಮೇಲೆ ಹರಿದ ಬಸ್!

    ಆಂಗ್ಲ ಭಾಷೆಯಲ್ಲಿದ್ದ ಹಲವು ಫಲಕಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಅವರನ್ನು ತಡೆಯಲು ಪೊಲೀಸರು ಯತ್ನಿಸಿದಾಗ, ಪರಸ್ಪರ ವಾಗ್ವಾದ ನಡೆಯಿತು‌.

    ವೃತ್ತದಲ್ಲೇ ಪ್ರತಿಭಟನೆ ಮುಂದುವರಿಸಿದ್ದ 50ಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು. ಸದ್ಯ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚೀಟಿ ತೋರಿಸಿ ಮಹಿಳೆಯ ಮಾಂಗಲ್ಯ ಕದ್ದೊಯ್ದ ಕಳ್ಳ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

  • ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ

    ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ

    ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಉಳಿಸಿ (#SaveNandini) ಅಭಿಯಾನ ಜೋರಾಗುತ್ತಿದೆ. ಇದರ ಮಧ್ಯೆ ಅಮುಲ್ (Amul) ಆನ್‍ಲೈನ್‍ನಲ್ಲಿ ವಿಸ್ತರಣೆಗೊಳ್ಳುತ್ತಿದೆ. ಅತ್ತ ಕೆಎಂಎಫ್ (KMF)- ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ಜಟಾಪಟಿ ಜೋರಾಗುತ್ತಿದೆ.

    ಬೆಂಗಳೂರಲ್ಲಿ ಅಮುಲ್ ವಿರುದ್ಧ ಧಿಕ್ಕಾರದ ಕೂಗು ಮೊಳಗಿದೆ. ಅಮುಲ್ ಉತ್ಪನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು. ಅಮುಲ್ ಚೀಸ್, ಅಮುಲ್ ಬೆಣ್ಣೆ, ತುಪ್ಪ ಹೀಗೆ ಅಮುಲ್ ಪ್ರಾಡಕ್ಟ್ ಗಳನ್ನು ನೆಲಕ್ಕೆಸೆದು ಆಕ್ರೋಶ ಹೊರಹಾಕಿದ್ರು. ಮಗದೊಂದು ಕಡೆಗೆ ಅಮುಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ

    ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‍ (Mysuru Bank Circle) ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಮುಲ್ ಉತ್ಪನ್ನ ಆನ್‍ಲೈನ್ ಮಾರಾಟ ಖಂಡಿಸಿದೆ. ಶೀಘ್ರದಲ್ಲಿಯೇ ಅಮುಲ್ ಫ್ಯಾಕ್ಟರಿ, ಅಮುಲ್ ಹಾಲಿನ ಮಾರಾಟ ಘಟಕಕ್ಕೆ ದಾಳಿ ಮಾಡೋದಾಗಿ ಕನ್ನಡ ಪರ ಸಂಘಟನೆ ಎಚ್ಚರಿಕೆ ನೀಡಿದೆ.

    ನಂದಿನಿ (Nandini) ಯನ್ನು ಮುಚ್ಚುವ ಹುನ್ನಾರ.. ರಾಜಕೀಯ ಷಡ್ಯಂತ್ರ ಅಂತಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಕೊನೆಗೆ ಅಮುಲ್ ಹೆಸರು ಬೋರ್ಡ್ ಇರುವ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ಪ್ರತಿಭಟನೆಕಾರರನ್ನು ವಶಕ್ಕೆ ಪಡೆದುಕೊಂಡ್ರು.  ಇದನ್ನೂ ಓದಿ: ಬೆಂಗಳೂರು ಮಾರುಕಟ್ಟೆಗೆ ಅಮುಲ್‌ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ

    ಹೆಚ್‍ಡಿಕೆ ವ್ಯಂಗ್ಯ: ಬಿಜೆಪಿ ಅವರಿಗೆ ಅಮುಲ್ ಪರಿಣಾಮದ ಮಾಹಿತಿ ಇಲ್ಲ. ಬಿಜೆಪಿ ಅವರ ಕಣ್ಣಿಗೆ ಮೋದಿ ಬಿಟ್ಟರೆ ಏನೂ ಕಾಣಲ್ಲ ಅಂತ ಹೆಚ್‍ಡಿಕೆ (HD Kumaraswamy) ಟೀಕಿಸಿದ್ದಾರೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೆ ಇದ್ರೆ ನಂದಿನಿ ಮುಳುಗಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಅತ್ತ ಸಿಎಂ ಬೊಮ್ಮಾಯಿ (Basavaraj Bommai) ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ನಂಬರ್ 1 ಆಗಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಂದಿನಿ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಅಮುಲ್ ಕಿಡಿ ಜ್ವಾಲೆಯಾಗಿ ಹಬ್ಬಿದೆ. ಕನ್ನಡಿಗರ ಆಕ್ರೋಶ ಸ್ಫೋಟಗೊಂಡಿದೆ. ನಂದಿನಿ ಉಳಿಸಿ ಅಮುಲ್ ತೊಲಗಿಸಿ ಕ್ಯಾಂಪೇನ್ ಜೋರಾಗಿ ಸದ್ದು ಮಾಡುತ್ತಿದೆ.

  • ಬೂಟ್ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡಲು ಮುಂದಾದ ಕರವೇ

    ಬೂಟ್ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡಲು ಮುಂದಾದ ಕರವೇ

    ಉಡುಪಿ: ರಾಜ್ಯದ 23 ಜಿಲ್ಲೆಗಳ 122 ಡಯಾಲಿಸಿಸ್ ಘಟಕಗಳಲ್ಲಿ ಸಮಸ್ಯೆಗಳಿದ್ದು, ಅದನ್ನು ಕೂಡಲೇ ಬಗಹರಿಸಬೇಕು ಎಂದು ಒತ್ತಾಯಿಸಿ ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಡಯಾಲಿಸಿಸ್ ಯಂತ್ರಗಳನ್ನು ಸರಿಪಡಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬ ಸುದ್ದಿ ತಿಳಿದು, ಬೂಟ್‌ ಪಾಲಿಶ್‌ ಮಾಡಿ ಸರ್ಕಾರದ ಖಾತೆಗೆ ಹಣ ಜಮೆ ಮಾಡುವ ವಿನೂತನ ಪ್ರತಿಭಟನೆ ನಡೆಸುತ್ತಿದೆ.

    ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನಾಕಾರರು ಬೂಟ್ ಪಾಲೀಶ್‌ ಮಾಡಿ ಹಣ ಸಂಗ್ರಹ ಮಾಡುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಐದು ಡಯಾಲಿಸಿಸ್ ಯಂತ್ರಗಳು ಸ್ಥಗಿತವಾಗಿವೆ. ಗುತ್ತಿಗೆ ವಹಿಸಿಕೊಂಡಿರುವ ಬಿಆರ್‌ಎಸ್ ಸಂಸ್ಥೆ ಸಿಬ್ಬಂದಿಗೆ ಸಂಬಳ ಕೊಡುತ್ತಿಲ್ಲ. ಬೂಟ್ ಪಾಲಿಶ್, ಚಪ್ಪಲಿಗಳನ್ನು ಶುಚಿಗೊಳಿಸಿ ಬಂದ ಹಣವನ್ನು ರಾಜ್ಯ ಸರ್ಕಾರದ ಖಾತೆಗೆ ಜಮೆ ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕರವೇ ಪ್ರವೀಣ್ ಶೆಟ್ಟಿ ಬಣದಿಂದ ವಿನೂತನ ಪ್ರತಿಭಟನೆ ನಡೆಯುತ್ತಿದ್ದು, ಇಂದು ಅಹೋರಾತ್ರಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಿ.ಆರ್.ಶೆಟ್ಟಿ ಸಂಸ್ಥೆ ರಾಜ್ಯದ ಎಲ್ಲಾ ಡಯಾಲಿಸಿಸ್ ಘಟಕಗಳನ್ನು ನಿರ್ವಹಣೆ ಮಾಡುತ್ತಿವೆ. ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂಸ್ಥೆ ಪರಿಕರಗಳನ್ನು ಸರಿಪಡಿಸುತ್ತಿಲ್ಲ. ಇದನ್ನೂ ಓದಿ: ಎಲ್ಲೂ ವೀಕ್‌ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್‌ ಆದೆ: ರವಿಚಂದ್ರನ್‌ ಭಾವುಕ

    ಪಬ್ಲಿಕ್ ಟಿವಿ ಜೊತೆ ಅನ್ಸಾರ್ ಅಹಮ್ಮದ್ ಮಾತನಾಡಿ, ಎರಡು ದಿನದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಜಿಲ್ಲಾಡಳಿತ ಸುಮ್ಮನಿದೆ. ಸರ್ಕಾರಕ್ಕೆ ಕಿವಿ ಕೇಳುತ್ತಿಲ್ಲ. ಜನ ಪ್ರತಿನಿಧಿಗಳಿಗೆ ಬಿದ್ದೇ ಹೋಗಿಲ್ಲ. ಇವತ್ತು ನಾಳೆ ಬೂಟ್ ಪಾಲಿಶ್‌ ಮಾಡಿ ಧನ ಸಂಗ್ರಹಿಸಿ ಸರ್ಕಾರಕ್ಕೆ ಸಾರ್ವಜನಿಕರ ಹಣ ನೀಡುತ್ತೇವೆ. ವಿಭಿನ್ನವಾಗಿ ಪ್ರತಿಭಟನೆ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತೇವೆ. ಸಂಕಷ್ಟಕ್ಕೆ ಸರ್ಕಾರಕ್ಕೆ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿ ಟಾಂಗ್‌ ನೀಡಿದ್ದಾರೆ.

  • ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಯಿಸುವುದು ಪ್ರಜಾಸತ್ತೆಯ ಮೌಲ್ಯಕ್ಕೆ ವಿರುದ್ಧ: ನಾರಾಯಣಗೌಡ

    ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಯಿಸುವುದು ಪ್ರಜಾಸತ್ತೆಯ ಮೌಲ್ಯಕ್ಕೆ ವಿರುದ್ಧ: ನಾರಾಯಣಗೌಡ

    ಬೆಂಗಳೂರು: ವಿಧಾನಮಂಡಳದ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಯಿಸುವ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದದ್ದು. ಈ ರೀತಿಯ ಉದಾಹರಣೆ ಕರ್ನಾಟಕದ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ನಡೆಯ ಮೂಲಕ ಕೆಟ್ಟ ಪರಂಪರೆಯೊಂದನ್ನು ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಧಾನಮಂಡಳದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಇರುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ. ಲೋಕಸಭೆ ಸ್ಪೀಕರ್ ಕರೆಯಿಸುವ ಮೂಲಕ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ಅಣಕ. ಲೋಕಸಭೆ ಮತ್ತು ವಿಧಾನಸಭೆ ಎರಡೂ ಕೂಡ ಜನಪ್ರತಿನಿಧಿಗಳ ಸಭೆ. ಒಂದು ಹೆಚ್ಚು, ಒಂದು ಕಡಿಮೆಯಲ್ಲ. ಎರಡೂ ಕೂಡ ಭಾರತ ಸಂವಿಧಾನದ ಪ್ರಕಾರವೇ ನಡೆಯುತ್ತದೆ. ವಿಧಾನಮಂಡಳದಲ್ಲಿ ಲೋಕಸಭೆ ಸ್ಪೀಕರ್ ಕರೆಯಿಸುವ ಔಚಿತ್ಯವಾದರೂ ಏನು? ಈ ಸಂಪ್ರದಾಯ ಹುಟ್ಟುಹಾಕುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರನ್ನು ಮನೆ ಬಾಗಿಲಿಗೆ ಬರಮಾಡಿಕೊಳ್ಳಲಿದ್ದಾರೆ ಹೆಚ್‍ಡಿಕೆ  

    ಒಕ್ಕೂಟ ಸರ್ಕಾರ ಭಾರತ ಗಣರಾಜ್ಯದ ಒಕ್ಕೂಟ ತತ್ತ್ವಗಳನ್ನು ಒಂದೊಂದಾಗಿ ಮುರಿಯುತ್ತ ಬರುತ್ತಿದೆ. ಎಲ್ಲ ವಿಷಯದಲ್ಲೂ ಏಕತ್ವವನ್ನು ಹೇರುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಬರುತ್ತಿದೆ. ಕರ್ನಾಟಕ ಸರ್ಕಾರವೂ ಈ ಖೆಡ್ಡಾಗೆ ಬಿದ್ದು ತನ್ನತನವನ್ನು ಕಳೆದುಕೊಳ್ಳಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪಲ್ಸ್ ಪೋಲಿಯೋ ಮಾದರಿಯಲ್ಲಿ ಜಾನುವಾರುಗಳಿಗೆ ಲಸಿಕೆ: ಪ್ರಭು ಚವ್ಹಾಣ್

    ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಸಭಾಧ್ಯಕ್ಷರು ಕೂಡಲೇ ನಾಳಿನ ಜಂಟಿ ಅಧಿವೇಶವನ್ನು ರದ್ದುಗೊಳಿಸಬೇಕು. ಲೋಕಸಭೆ ಸ್ಪೀಕರ್ ಜತೆ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿಕೊಳ್ಳಲಿ. ಕರ್ನಾಟಕ ವಿಧಾನಮಂಡಳದ ಪಾವಿತ್ರ್ಯತೆಯನ್ನು ಹಾಳುಗೆಡಹುವುದು ಬೇಡ ಎಂದು ಕಟುವಾಗಿ ಹೇಳಿದ್ದಾರೆ.

  • ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಹೋಗಲಿ’

    ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಹೋಗಲಿ’

    – ಸಚಿವ ನಾರಾಯಣಗೌಡ ಪ್ರತಿಕೃತಿ ದಹಿಸಿ ಮಂಡ್ಯದಲ್ಲಿ ಪ್ರತಿಭಟನೆ

    ಮಂಡ್ಯ: ಮಹಾರಾಷ್ಟ್ರದ ಪರ ಜೈಕಾರ ಕೂಗಿರುವುದಕ್ಕೆ ಸಚಿವ ನಾರಾಯಣಗೌಡ ವಿರುದ್ಧ ಆಕ್ರೋಶ ತೀವ್ರಗೊಂಡಿದ್ದು, ಸಚಿವರ ಪ್ರತಿಕೃತಿ ದಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

    ನಗರದ ಮಹಾವೀರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಚಿವ ನಾರಾಯಣ ಗೌಡರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಎಂದರೆ ಮಂಡ್ಯ ಎನ್ನುವಷ್ಟರ ಮಟ್ಟಿಗೆ ಹೆಸರಿದೆ. ಹೀಗಿರುವಾಗ ಈ ನೆಲದಲ್ಲಿ ನಿಂತುಕೊಂಡು ಸಚಿವ ನಾರಾಯಣಗೌಡರು ಮಹಾರಾಷ್ಟ್ರಕ್ಕೆ ಜೈಕಾರ ಕೂಗುವುದು ಖಂಡನೀಯ. ಭಾಷೆ ಹಾಗೂ ನೆಲದ ವಿಚಾರದಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.

    ಸಚಿವರಿಗೆ ಮಹಾರಾಷ್ಟ್ರದ ಮೇಲೆ ಅಭಿಮಾನ ಇದ್ದರೆ ಅಲ್ಲಿಯೇ ಹೋಗಿ ಇರಲಿ. ಅದನ್ನು ಬಿಟ್ಟು ಇಲ್ಲಿ ಮಹಾರಾಷ್ಟ್ರದ ಪರ ಘೋಷಣೆ ಕೂಗುವುದು ತಪ್ಪು. ನಾರಾಯಣಗೌಡರು ಎಸಗಿರುವ ಈ ಅನ್ಯಾಯಕ್ಕೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರಕ್ಕೆ ಹೋಗಲಿ ಎಂದು ಘೋಷಣೆ ಕೂಗಿದರು. ಇದೇ ವೇಳೆ ನಾರಾಯಣಗೌಡ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

  • ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    – ಹಾವೇರಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

    ಹಾವೇರಿ: ಕೇರಳ ಸರ್ಕಾರ ಉದ್ದೇಶಪೂರ್ವಕವಾಗಿ ಅಲ್ಲಿನ ಪಟ್ಟಭದ್ರ ನಾಡದ್ರೋಹಿ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಯಡಿಯೂರಪ್ಪನವರ ವಿರುದ್ಧ ಹೋರಾಟ ಮಾಡಿಸಿ ರಾಜ್ಯಕ್ಕೆ ಅವಮಾನ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಆಕ್ರೋಶ ವ್ಯಕ್ತಪಡಿಸಿದರು.

    ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರು ತಡೆದು ಪ್ರತಿಭಟನೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಯಡಿಯೂರಪ್ಪನವರ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ 6 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದನ್ನು ಕನ್ನಡಿಗರು ಯಾವತ್ತೂ ಸಹಿಸುವುದಿಲ್ಲ. ಕೂಡಲೇ ಕೇರಳ ಸರ್ಕಾರ ಕರ್ನಾಟಕದ ಮುಖ್ಯಮಂತ್ರಿಗಳ ಹಾಗೂ ಕನ್ನಡಿಗರಿಗೆ ಕ್ಷಮೆಯಾಚಿಸಬೇಕು. ಅಲ್ಲದೆ ಇತ್ತೀಚೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರ ಮೇಲೆ ಪೊಲೀಸರ ಕಣ್ಣೆದುರಿನಲ್ಲಿಯೇ ಹಲ್ಲೆ ಮಾಡಲಾಗಿದೆ. ಇದು ಕೇರಳ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಕೂಡಲೇ ಕೇರಳ ಸರ್ಕಾರ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಂಡು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಮಂಜುನಾಥ ಓಲೇಕಾರ ಒತ್ತಾಯಿಸಿದರು.

    ಸಿಎಂ ಯಡಿಯೂರಪ್ಪನವರು ಕೇರಳ ಪ್ರವಾಸ ಕೈಗೊಂಡಾಗ ಅಲ್ಲಿನ ಸರ್ಕಾರ ಸೂಕ್ತ ಭದ್ರತೆ ಒದಗಿಸದೇ ವ್ಯವಸ್ಥಿತವಾಗಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದೆ ಎಂದು ಮಂಜುನಾಥ್ ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ನೂರಅಹ್ಮದ್ ಲಕ್ಷ್ಮೇಶ್ವರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲ್ತಾಫ ನದಾಫ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಸಿ.ಬಿ. ದೊಡ್ಡಗೌಡರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾದೇವಪ್ಪ ಹೆಡಿಗ್ಗೊಂಡ, ಜಿಲ್ಲಾ ಕರವೇ ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಹಾವೇರಿ ತಾಲೂಕು ಅಧ್ಯಕ್ಷ ಫಕ್ಕೀರೇಶ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.

  • ಸನ್ನಿಲಿಯೋನ್ ಪರ, ವಿರೋಧ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ: ಕರವೇ

    ಸನ್ನಿಲಿಯೋನ್ ಪರ, ವಿರೋಧ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ: ಕರವೇ

    ಬೆಂಗಳೂರು: ಸನ್ನಿ ಲಿಯೋನ್ ಕಾರ್ಯಕ್ರಮದ ಪರ, ವಿರೋಧ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ಕರವೇ ಸಂಘಟನೆಯ ಹೆಸರನ್ನು ಯಾರೇ ದುರ್ಬಳಕೆ ಮಾಡಿದರೂ ಅದಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ತಿಳಿಸಿದ್ದಾರೆ ಎಂದು ಪೋಸ್ಟ್ ಪ್ರಕಟಿಸಿದೆ.

    ಪೋಸ್ಟ್ ನಲ್ಲಿ ಏನಿದೆ?
    ಕೆಲವು ಮಾಧ್ಯಮಗಳಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಕರವೇ ಟಿಕೆಟ್ ಗಳನ್ನು ಕಾಯ್ದಿರಿಸಿದೆ ಅನ್ನುವ ಸುದ್ದಿ ಬಂದಿದೆ ಮತ್ತು ಕೆಲವು ಮಾಧ್ಯಮಗಳಲ್ಲಿ ಕರವೇ ಈ ಕಾರ್ಯಕ್ರಮದ ವಿರುದ್ಧ ಪ್ರತಿಭಟಿಸುತ್ತಿದೆ ಅನ್ನುವ ಸುದ್ದಿ ಬಂದಿದೆ. ನಮ್ಮ ಸಂಘಟನೆಗೂ ಸನ್ನಿ ಲಿಯೋನ್ ಕಾರ್ಯಕ್ರಮದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಸುದ್ದಿ ಪ್ರಕಟಿಸುವ ಮುನ್ನ ಕರವೇಯ ಅಧಿಕೃತ ವಕ್ತಾರರ ಬಳಿ ಮಾಹಿತಿ ಸಂಗ್ರಹಿಸಿ ಪ್ರಕಟಿಸುವುದು ಒಳಿತು. ತಪ್ಪು ಸುದ್ದಿ ಹಂಚುವುದು ನ್ಯಾಯ ಸಮ್ಮತವಲ್ಲ.

    ಕರವೇ ಸಂಘಟನೆಯ ಹೆಸರನ್ನು ಯಾರೇ ದುರ್ಬಳಕೆ ಮಾಡಿದರೂ ಅದಕ್ಕೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ತಿಳಿಸಿದ್ದಾರೆ. ಇದೇ ನಿಟ್ಟಿನಲ್ಲಿ ನಾರಾಯಣಗೌಡರು ರಾಜ್ಯ ಪೋಲೀಸ್ ಮಹಾ ನಿರ್ದೇಶಕರಿಗೆ ಮತ್ತು ಆಯುಕ್ತರ ಜೊತೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಗ್ಳೂರಲ್ಲಿ ಪ್ರತಿಭಟನೆ

    ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಬೆಂಗ್ಳೂರಲ್ಲಿ ಪ್ರತಿಭಟನೆ

    ಬೆಂಗಳೂರು: ಬಾಲಿವುಡ್ ಮೋಹಕ ನಟಿ ವಿರುದ್ಧ ಮತ್ತೊಮ್ಮೆ ಬೆಂಗಳೂರಲ್ಲಿ ಪ್ರತಿಭಟನೆ ನಡೆದಿದೆ. ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸಬಾರದು ಎಂದು ಸನ್ನಿ ಲಿಯೋನ್ ಹಾಗೂ ನಿರ್ಮಾಪಕ ಡಿ.ಸಿ ವಾಡಿ ಉದಯನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ವೀರ ಮಹಾದೇವಿ ಐತಿಹಾಸಿಕ ಚಿತ್ರವಾಗಿದೆ. ಹೀಗಾಗಿ ಈ ಚಿತ್ರದಲ್ಲಿ ನೀಲಿ ತಾರೆ ಸನ್ನಿ ಲಿಯೋನ್ ನಟಿಸಬಾರದು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ವೀರ ಮಹಾದೇವಿ ಚಿತ್ರ ಪಂಚ ಭಾಷೆಗಳಲ್ಲಿ ತಯಾರಾಗುತ್ತಿದ್ದು, ಒಟ್ಟು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ರೆಡಿಯಾಗುತ್ತಿದೆ.

    ಹೊಸ ವರ್ಷ ಆಚರಣೆಗೆ ಸಿಲಿಕಾನ್ ಸಿಟಿಗೆ ಬಾಲಿವುಡ್ ಮೋಹಕ ನಟಿ ಸನ್ನಿಲಿಯೋನ್ ಅವರು ಬರುವುದನ್ನು ನಿಷೇಧಿಸಿದ್ದು, ಇತ್ತೀಚೆಗಷ್ಟೇ ಮತ್ತೆ ಅವರ ಎಂಟ್ರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ನವೆಂಬರ್ 3 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ನೈಟ್ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸನ್ನಿ, ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಲಿದ್ದು, ಆದ್ರೆ ಇದೀಗ ಸನ್ನಿ ಎಂಟ್ರಿಗೆ ಕನ್ನಡ ರಕ್ಷಣಾ ವೇದಿಕೆ ಯುವಸೇನೆ ವಿರೋಧ ವ್ಯಕ್ತಪಡಿಸಿತ್ತು.

    `ವೀರ ಮಹಾದೇವಿ’ ಚಿತ್ರದಲ್ಲಿ ಸನ್ನಿಲಿಯೋನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದು ಅಪರಾಧ ಯಾವುದೇ ಕಾರಣಕ್ಕೂ ಈ ಚಿತ್ರದಲ್ಲಿ ಸನ್ನಿ ನಟಿಸಬಾರದು. ಹೀಗಾಗಿ ಈ ಚಿತ್ರದ ವಿರುದ್ಧ ಹೋರಾಟ ಮಾಡುತ್ತೀವಿ. ಸನ್ನಿ ಲಿಯೋನ್ ಎಲ್ಲಿಗೆ ಬಂದರೂ ನಾವು ಅವರನ್ನ ತಡೆ ಮಾಡ್ತೀವಿ. ಇದು ನಮ್ಮ ಸಂಸ್ಕೃತಿ ವಿಚಾರ. ಹೀಗಾಗಿ ನಾವು ಅದನ್ನ ವಿರೋಧಿಸ್ತೀವಿ. ಆದ್ರೆ ನಾವು ಕಾರ್ಯಕ್ರಮವನ್ನ ವಿರೋಧ ಮಾಡುತ್ತಿಲ್ಲ. ಬದಲಾಗಿದೆ ಸನ್ನಿ ಲೀಯೊನ್ ಅವರನ್ನ ಮಾತ್ರ ವಿರೋಧಿಸುತ್ತೇವೆ ಅಂತ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕರವೇ ಯುವಸೇನೆಯ ಹರೀಶ್ ಹೇಳಿದ್ದರು.

    ಸನ್ನಿ ಲಿಯೋನ್ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಬಾರದು. ಅವರ ಹಿನ್ನೆಲೆ ನೋಡಿದ್ರೆ ಬರೋದು ಬೇಡ ಅನ್ನಿಸುತ್ತೆ. ಸನ್ನಿ ಲಿಯೋನ್ `ನೀಲಿ ಚಿತ್ರದ ತಾರೆ’. ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ನಮ್ಮದು ಸಂಸ್ಕೃತಿಯ ನಾಡು. ಇದ್ರಿಂದ ನಮ್ಮ ಹಿಂದೂ ಸಂಸ್ಕೃತಿಗೆ ಹಾಳಾಗುತ್ತೆ ಅಂತ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv