Tag: ಕರ್ನಾಟಕ ಬೈ ಎಲೆಕ್ಷನ್

  • ಇಂದಿನ ಮತದಾನದ ಮೇಲೆ ನಿಂತಿದೆ ಸರ್ಕಾರದ ಭವಿಷ್ಯ- 3 ಪಕ್ಷಗಳ ಲೆಕ್ಕಾಚಾರವೇನು?

    ಇಂದಿನ ಮತದಾನದ ಮೇಲೆ ನಿಂತಿದೆ ಸರ್ಕಾರದ ಭವಿಷ್ಯ- 3 ಪಕ್ಷಗಳ ಲೆಕ್ಕಾಚಾರವೇನು?

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂದು ಮತದಾರ ಪ್ರಭು ಬರೆಯುವ ಹಣೆಬರಹದ ಮೇಲೆ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ. ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದು ಸರ್ಕಾರ ಉಳಿಸಿಕೊಳ್ಳುವ ಆಸೆಯಲ್ಲಿದೆ.

    ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ. 8ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ಸರ್ಕಾರ ಭದ್ರ ಮತ್ತು ಮೂರುವರೆ ವರ್ಷಗಳ ಕಾಲ ಸ್ಥಿರವಾಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. 6ಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿದ್ರೂ ಸದ್ಯಕ್ಕೆ ಸೇಫ್ ಆಗಿರಬಹುದು. ಮುಂಬರುವ ರಾಜರಾಜೇಶ್ವರಿನಗರ, ಮಸ್ಕಿ ಕ್ಷೇತ್ರಗಳಲ್ಲಿ ಗೆಲ್ಲಲು ಸಿದ್ಧತೆ ನಡೆಸಿಕೊಳ್ಳುವುದು.

    ಇತ್ತ ಅನರ್ಹರನ್ನು ಸೋಲಿಸಿ ಸರ್ಕಾರ ಬೀಳಿಸಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ಅದಕ್ಕಾಗಿ ಕೈ ಪಕ್ಷದ ಮುಖಂಡರು ಭರ್ಜರಿ ಪ್ರಚಾರ ಕೂಡ ಮಾಡಿದರು. ಬಿಜೆಪಿ 6ಕ್ಕಿಂತ ಕಡಿಮೆ ಸ್ಥಾನ ಬಂದ್ರೆ ಸರ್ಕಾರ ರಚಿಸಲು ಪ್ಲಾನ್ ಮಾಡಿಕೊಳ್ಳುವುದು. ಮೈತ್ರಿಗೆ ಬೆಂಬಲ ನೀಡುವಂತೆ ಪಕ್ಷೇತರ ಶಾಸಕ ನಾಗೇಶ್ ಮತ್ತು ಬಿಎಸ್‍ಪಿಯ ಮಹೇಶ್ ಸೆಳೆಯುವುದು. ಕಾಂಗ್ರೆಸ್‍ನ ಪ್ಲಾನ್ ಯಶಸ್ಸು ಏನಿದ್ರೂ ಬಿಜೆಪಿ ಸೋಲಿನಲ್ಲಿ ಇದೆ.

    ಚುನಾವಣಾ ಪ್ರಚಾರದಲ್ಲಿ ಮೈತ್ರಿಯ ಬಗ್ಗೆ ಗೊಂದಲದಲ್ಲೇ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ ಫಲಿತಾಂಶದ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಬಿಜೆಪಿ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಮೈತ್ರಿಗೆ ಓಪನ್ ಅಪ್ ಆಗುವುದು. ಪರಿಸ್ಥಿತಿ ನೋಡಿಕೊಂಡು ಯಾರ ಜತೆ ಮೈತ್ರಿ ಅನ್ನೋದನ್ನ ತೀರ್ಮಾನಿಸುವುದು. ಸಿದ್ದರಾಮಯ್ಯರನ್ನ ದೂರ ಇಟ್ಟು ಸರ್ಕಾರ ರಚನೆಗೆ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

    ಜೆಡಿಎಸ್ ಪ್ಲಾನ್ ಯಶಸ್ವಿಗೂ ಬಿಜೆಪಿ ಸೋಲಲೇ ಬೇಕಿದೆ. ಆದ್ರೆ ಸದ್ಯಕ್ಕೆ ಈ ಮೈತ್ರಿ ಯಶಸ್ಸು ತುಂಬಾ ದೂರದ ಮಾತು ಎಂಬ ಮಾತು ಜೆಡಿಎಸ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಹಾಗಾಗಿ ಆತುರಪಡದೇ ಕಾದು ನೋಡಿ ಮೈತ್ರಿ ದಾಳ ಉರುಳಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಒಟ್ಟಾರೆ ಈಗಾಗಲೇ ಮೂರು ಪಕ್ಷಗಳು ರಿಸಲ್ಟ್ ಬಳಿಕ ಏನು ಮಾಡಬಹುದು ಎಂಬ ಲೆಕ್ಕಾಚಾರ ಮಾಡಿಕೊಂಡಿವೆ. ಆದ್ರೆ ಅಂತಿಮವಾಗಿ ಮತದಾರರ ಒಲವು ಯಾರ ಕಡೆ ಇದೆ ಎಂಬುವುದು ಬಹಿರಂಗವಾಗುವುದಕ್ಕೆ ಡಿಸೆಂಬರ್ 9 ರವರೆಗೆ ಕಾಯಲೇಬೇಕಿದೆ.

  • ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್‍ನಲ್ಲಿ ಜಟಾಪಟಿ

    ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಕಾಂಗ್ರೆಸ್‍ನಲ್ಲಿ ಜಟಾಪಟಿ

    ಬೆಂಗಳೂರು: ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಉಪಸಮರದ ಸಮಯದಲ್ಲಿ ಕಾಂಗ್ರೆಸ್ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಶಿವಾಜಿನಗರದ ಟಿಕೆಟ್ ಯಾರಿಗೆ ನೀಡಬೇಕೆಂಬ ವಿಚಾರದಲ್ಲಿ ಕಳೆದೊಂದು ವಾರದಿಂದ ಕಾಂಗ್ರೆಸ್ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿವೆ.

    ವಿಪಕ್ಷ ನಾಯಕ ಸಿದ್ದರಾಮಯ್ಯನವರು ಶಿವಾಜಿನಗರದ ಟಿಕೆಟ್ ನ್ನು ರಿಜ್ವಾನ್ ಅರ್ಷದ್ ಅವರಿಗೆ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ರಿಜ್ವಾನ್ ಅರ್ಷದ್ ಅವರಿಗೆ ಎರಡು ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲಾಗಿದೆ. ಈಗ ಮತ್ತೆ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡೋದು ಬೇಡ ಎಂದು ಮೂಲ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ಹಾಕಿದ್ದಾರೆ. ಸಲೀಂ ಅಹಮ್ಮದ್ ಅಥವಾ ಹುಸೇನ್‍ಗೆ ಟಿಕೆಟ್ ನೀಡುವಂತೆ ಮೂಲ ಕಾಂಗ್ರೆಸ್ಸಿಗರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರತಿಯೊಂದು ವಿಚಾರದಲ್ಲಿ ಸಿದ್ದರಾಮಯ್ಯರದದೆ ಮೇಲುಗೈ ಏಕೆ? ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲ್ಲಲಿಲ್ಲ. ಪದೇ ಪದೇ ಒಬ್ಬರಿಗೆ ಅವಕಾಶ ನೀಡೋದು ಸರಿ ಅಲ್ಲ. ಬೇರೆಯವರಿಗೂ ಅವಕಾಶ ನೀಡಬೇಕೆಂದು ಮೂಲ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

  • ಕಾಂಗ್ರೆಸ್-ಜೆಡಿಎಸ್ ಗೆ ಕೌಂಟರ್ ಕೊಡಲು ಯಡಿಯೂರಪ್ಪ ಪ್ಲಾನ್

    ಕಾಂಗ್ರೆಸ್-ಜೆಡಿಎಸ್ ಗೆ ಕೌಂಟರ್ ಕೊಡಲು ಯಡಿಯೂರಪ್ಪ ಪ್ಲಾನ್

    ಶಿವಮೊಗ್ಗ: ಸ್ವಕ್ಷೇತ್ರ ಮತ್ತು ಚುನಾವಣಾ ಕಣದಲ್ಲಿರುವ ಪುತ್ರ ಬಿ.ವೈ.ರಾಘವೇಂದ್ರರನ್ನು ಗೆಲ್ಲಿಸಲು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಭದ್ರಕೋಟೆಯಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಲು ಒಂದರ ನಂತರ ಒಂದು ರಣತಂತ್ರಗಳನ್ನು ಪ್ರಯೋಗಿಸುತ್ತಿದೆ. ಸರ್ಕಾರದ ಬಹುತೇಕ ಸಚಿವರು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.

    ಶಿವಮೊಗ್ಗದಲ್ಲಿ ಈಗಾಗಲೇ ನಾವು ಗೆಲುವು ಸಾಧಿಸಿದ್ದೇವೆ. ನಾನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದೇನೆ. ಬಿ.ವೈ.ರಾಘವೇಂದ್ರ ಸಹ 3 ಲಕ್ಷಕ್ಕೂ ಮತಗಳ ಅಂತರದಿಂದ ಗೆಲುವು ಕಾಣುತ್ತಾರೆ ಎಂದು ಯಡಿಯೂರಪ್ಪ ಬಳ್ಳಾರಿಯಲ್ಲಿ ಹೇಳಿದ್ದರು. ಮಗನ ಪರವಾಗಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಯಡಿಯೂರಪ್ಪನವರು ಭದ್ರಾವತಿಯಲ್ಲಿ ಒಟ್ಟು 6 ಸಮುದಾಯಗಳ ಜೊತೆ ಸಭೆ ನಡೆಸಲಿದ್ದಾರೆ. ಇದೇ ಭದ್ರಾವತಿಯಲ್ಲಿ ಸಿಎಂ ಕುಮಾರಸ್ವಾಮಿ ಕೂಡ ಬಹಿರಂಗ ಸಭೆಯನ್ನು ಆಯೋಜಿಸಿದ್ದಾರೆ.

    ಶಿವಮೊಗ್ಗದಲ್ಲಿ ಸಿಎಂ ನಡೆಸುತ್ತಿರುವ ಸತತ ಬಹಿರಂಗ ಸಭೆಗಳಿಗೆ ಯಡಿಯೂರಪ್ಪ ಏಕಕಾಲದಲ್ಲಿ ವಿವಿಧ ಸಮುದಾಯಗಳ ಸಭೆಯನ್ನು ಆಯೋಜನೆ ಮಾಡಿದ್ದಾರೆ. ಇಂದಿನ ಸಭೆಯ ಮೂಲಕ ಇಬ್ಬರು ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv