– ಮುಲ್ಲಾ, ಮುಸ್ಲಿಂ ಗುರುಗಳ ಗೌರವಧನ ಹೆಚ್ಚಿಸಿದ್ದಾರೆ – ಕೃಷ್ಣ ಮೇಲ್ದಂತೆ, ತುಂಗಭದ್ರಾ ಯೋಜನೆಗೆ ಬಿಡಿಗಾಸು ಕೊಟ್ಟಿಲ್ಲ ಎಂದು ಎಂಎಲ್‌ಸಿ ಕಿಡಿ
ಬೆಳಗಾವಿ: ಇದು ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು ಎಂದು ರಾಜ್ಯ ಬಜೆಟ್ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈವರೆಗಿನ ಸಿಎಂ ಮಾಡಿದ ಸಾಲಕ್ಕಿಂತಲೂ ಹೆಚ್ಚಿನ ಸಾಲ ಮಾಡಿದ್ದಾರೆ. 4 ಲಕ್ಷ ಕೋಟಿ ಅಷ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಸಾಲ 1.27 ಲಕ್ಷ ಕೋಟಿ. ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ಕೊಟ್ಟಿದ್ದರೆ ತೆರಿಗೆ ಸಂಗ್ರಹ ಆಗ್ತಿತ್ತು. ಕಳೆದ ವರ್ಷ 3.22 ಲಕ್ಷ ಕೋಟಿ ಖರ್ಚು ಮಾಡ್ತೇವಿ ಅಂತಾ ಹೇಳಿದ್ರು. ಇದುವರೆಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶೇ.55 ರಷ್ಟು ಖರ್ಚು ಮಾಡಿದ್ದಾರೆ. ಇನ್ನುಳಿದ 45 ದಿನದಲ್ಲಿ ಉಳಿದ 45 ರಷ್ಟು ಖರ್ಚು ಮಾಡಲು ಸಾಧ್ಯವಾಯ್ತು ಎಂದು ಬೇಸರ ಹೊರಹಾಕಿದ್ದಾರೆ.
ಸರ್ಕಾರದ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ. ನೀರು, ವಿದ್ಯುತ್, ಪ್ರಾಪರ್ಟಿ, ಬಿತ್ತನೆ, ಬೀಯರ್, ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವುದು ಚಾರುವಾಕನ ನೀತಿ ಆಗಿತ್ತು. ನಾನು ಸಿಎಂ ಕೇಳ್ತೀನಿ, ನೀವು ಸಾಲ ಮಾಡಿದ್ದೀರಿ. ತುಪ್ಪ ಯಾರು ತಿನ್ನುತ್ತಿದ್ದಾರೆ? ಜನರ ಮೇಲೆ ಸಾಲ ಹೊರಿಸಿದೀರಿ. ನಿಮ್ಮ ಸರ್ಕಾರದಲ್ಲಿ ತುಪ್ಪ ತಿಂತಿರೋರು ಯಾರು ಎಂದು ಪ್ರಶ್ನಿಸಿದ್ದಾರೆ.
ಈ ಬಜೆಟ್‌ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್‌ನ ಕೋಮುವಾದಿ ರಾಜಕಾರಣ ತೋರಿಸುತ್ತದೆ. ಮುಸ್ಲಿಮರ ಸರಳ ಮದುವೆಗೆ ಐವತ್ತು ಸಾವಿರ. ವೋಟ್ ತಗೊಳ್ಳೋವಾಗ ಹಿಂದೂಗಳು ಬೇಕು ನಿಮಗೆ. ಅಧ್ಯಕ್ಷರು ನಾವು ಹಿಂದೂವಾಗಿ ಹುಟ್ಟಿದ್ದೇವೆ ಅಂತಾರೆ. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದು ಸಾಕಾಗಿಲ್ವಾ? ಬೇರೆ ಜಾತಿಯಲ್ಲಿ ಬಡವರು ಇಲ್ವಾ? ಅವರಿಗೆ ಯಾಕೆ ಶುಲ್ಕ ಕಡಿತವಿಲ್ಲ? ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು ಎಂದು ಸರ್ಕಾರದ ಕಾಲೆಳೆದಿದ್ದಾರೆ.
ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸ್ ವಾಪಸ್ ತೆಗೆಯುತ್ತೀರಿ. ಮುಸ್ಲಿಮರಿಗೆ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಆಗಿದೆ. ಮುಲ್ಲಾ, ಮುಸ್ಲಿಂ ಗುರುಗಳ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಕಳೆದ ವರ್ಷವೂ ಬಜೆಟ್‌ನಲ್ಲಿ ಹೇಳಿದ್ರು, ಆದ್ರೆ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟರೂ ಇವರು ಆರೋಪ ಮಾಡ್ತಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲ. ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.
-ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆ ಸಾಬೀತುಪಡಿಸಿದ ಬಜೆಟ್
ಬೀದರ್: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಈ ಸಾಲಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಯೋಜನೆ ರೂಪಿಸಲು ಅವಕಾಶ ನೀಡಲಾಗಿದ್ದು, ಇದು ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಸಾಬೀತು ಪಡೆಸುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಶ್ಲಾಘಿಸಿದ್ದಾರೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಮಿಸ್ ಆಗಿದ್ದು ಏನು..?
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,367 ಶಿಕ್ಷಕರ ಹುದ್ದೆಗಳ ಭರ್ತಿಯೂ ಶಿಕ್ಷಕರ ಕೊರತೆಯನ್ನು ನಿವಾರಿಸಲಿದೆ. ತೊಗರಿ ಬೆಳೆಗೆ 450 ರೂ. ಪ್ರೋತ್ಸಾಹ ಧನ ಹೆಚ್ಚಿಸಿದ್ದು, ನಮ್ಮ ಭಾಗದ ರೈತರ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕವು ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕ ವೃದ್ಧಿಸುವ ಉದ್ದೇಶವನ್ನು ಹೊಂದಿದೆ. ಒಟ್ಟು 873 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ವ್ಯವಸ್ಥೆ ಬಲಪಡಿಸುವ ಮತ್ತು ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ವಿಭಾಗ ಆರಂಭಿಸುತ್ತಿರುವ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದರು.ಇದನ್ನೂ ಓದಿ: ಫ್ಯಾನ್ಸ್ ಜೊತೆ ಬರ್ತ್‌ಡೇ ಆಚರಿಸಿದ ರಾಧಿಕಾ ಪಂಡಿತ್
ಬೆಂಗಳೂರು: ದಾಖಲೆಯ 16ನೇ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತುಕೊಟ್ಟಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಿದ್ದಾರೆ.
ಹೌದು. ಹಿಂದುಳಿದ ವರ್ಗಗಳ (Backward class) ನಿರುದ್ಯೋಗಿಗಳಿಗೆ ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನ ಖರೀದಿಸಿ, ಆಹಾರ ಕಿಯೋಸ್ಕ್ (ಆಹಾರ ಮಳಿಗೆ) ಆರಂಭಿಸಲು ಗರಿಷ್ಠ 3 ಲಕ್ಷ ರೂ. ಸಹಾಯಧನವನ್ನ ನಿಗಮಗಳ ಮೂಲಕ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?
ಮುಂದುವರಿದು.. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಕಟ್ಟಡ ದುರಸ್ತಿ ಮಾಡಲು 25 ಕೋಟಿ ರೂ. ಒದಗಿಸಲಾಗುವುದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು IAS, IPS, KAS, KSPS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಢಲು ಬೆಂಗಳೂರು ನಗರದಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳನ್ನು ಪ್ರಾರಂಬಿಸಲಾಗವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಮಡಾ ಕೇಸ್| ಸಿಎಂ ಪತ್ನಿ, ಬೈರತಿಗೆ ಸುರೇಶ್‌ಗೆ ಬಿಗ್ ರಿಲೀಫ್ – ಇಡಿ ತನಿಖೆಯೇ ರದ್ದು
ಬೆಂಗಳೂರು: 2025-26ರ ಆಯವ್ಯಯವನ್ನು (Karnataka Budget 2025) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದರು. 4.09 ಲಕ್ಷ ಕೋಟಿ ಗಾತ್ರದ ಬಜೆಟ್‌ನ ಒಟ್ಟು ಆದಾಯ ಗಳಿಕೆ ಮತ್ತು ವೆಚ್ಚವನ್ನು ರೂಪಾಯಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಎಲ್ಲಿಂದ ಬರುತ್ತದೆ ಮತ್ತು ಯಾವುದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ವಿವರ ಹೀಗಿದೆ.
ಸರ್ಕಾರಕ್ಕೆ ಆದಾಯ ಹೇಗೆ ಬರುತ್ತದೆ? (ಪೈಸೆಗಳಲ್ಲಿ)
ರಾಜ್ಯ ತೆರಿಗೆ ಆದಾಯ- 52 ಪೈಸೆ
ಸಾಲ- 27 ಪೈಸೆ
ಕೇಂದ್ರದ ತೆರಿಗೆ ಪಾಲು- 13 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವ- 4 ಪೈಸೆ
ಒಟ್ಟು- 100 ಪೈಸೆ (ಒಂದು ರೂಪಾಯಿ)
ಯಾವ ಭಾಗಕ್ಕೆ ಎಷ್ಟು ಹಂಚಿಕೆ? (ಪೈಸೆಗಳಲ್ಲಿ)
ಸಾಲ ಮರುಪಾವತಿ- 18 ಪೈಸೆ
ಇತರ ಸಾಮಾನ್ಯ ಸೇವೆ- 18 ಪೈಸೆ
ಸಮಾಜ ಕಲ್ಯಾಣ- 15 ಪೈಸೆ
ಇತರ ಆರ್ಥಿಕ ಸೇವೆಗಳು- 14 ಪೈಸೆ
ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ- 14 ಪೈಸೆ
ಶಿಕ್ಷಣ- 10 ಪೈಸೆ
ಆರೋಗ್ಯ- 5 ಪೈಸೆ
ಇತರ ಸಾಮಾಜಿಕ ಸೇವೆಗಳು- 3 ಪೈಸೆ
ನೀರು ಪೂರೈಕೆ ಮತ್ತು ನೈರ್ಮಲ್ಯ- 3 ಪೈಸೆ
ಒಟ್ಟು- 100 ಪೈಸೆ (ಒಂದು ರೂಪಾಯಿ)
ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿರುವ 16ನೇ ಬಜೆಟ್‌ನಲ್ಲಿ ಕೊಡಗು ಜಿಲ್ಲೆಯ ವಿವಿಧ ಆಸ್ಪತ್ರೆಗಳ (Kodagu Hospitals) ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ (Karnataka Budget 2025) ರಾಜ್ಯದ ವಿವಿಧ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಒಟ್ಟು 650 ಕೋಟಿ ರೂ. ಘೋಷಿಸಲಾಗಿದೆ. ಈ ಪೈಕಿ ಪೊನ್ನಂಪೇಟೆಯಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಲಾಗುವುದು, ಕುಶಾಲನಗರ ತಾಲೂಕು ಆಸ್ಪತ್ರೆಯನ್ನು ನವೀಕರಣಗೊಳಿಸಲಾಗುವುದು ಹಾಗೂ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ
ಅಲ್ಲದೇ ಗೋಣಿಕೋಪ್ಪ, ವಿರಾಜಪೇಟೆ ಮಡಿಕೇರಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ 20 ಕೋಟಿ ರೂ. ವೆಚ್ಚದಲ್ಲಿ ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿ ಪ್ರಾರಂಭಿಸಲಾಗುವುದು. ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?
2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಸಂಸ್ಕರಿಸಲು ನೆರವಾಗುವಂತೆ ಲ್ಯಾಂಪ್ಸ್ (LAMPS) ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳ ರೂಪದಲ್ಲಿ ತಲಾ 5 ಲಕ್ಷ ರೂ. ಸಹಾಯಧನ ನೀಡಲಾಗುವುದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ
ಬೆಂಗಳೂರು: 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಬಾರಿ ಕೃಷಿ ಕ್ಷೇತ್ರಕ್ಕೂ ಬಂಪರ್ ಕೊಡುಗೆಗಳನ್ನ ಘೋಷಣೆ ಮಾಡಿದ್ದಾರೆ.
ಹನಿ ಮತ್ತು ತುಂತುರು ನೀರಾವರಿ (Drip and sprinkler irrigation) ಘಟಕ ಅಳವಡಿಕೆಗೆ ಕೃಷಿ ಇಲಾಖೆಯಿಂದ ಒಟ್ಟು 1.81 ಲಕ್ಷ ರೈತರಿಗೆ 440 ಕೋಟಿ ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಹೊಸ ಘೋಷಣೆಗಳೇನು?
* ರೈತ ಸಮೃದ್ಧಿ ಯೋಜನೆಯಡಿ 10 ಕೃಷಿ ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳ ಅಭಿವೃದ್ಧಿ ಮಾಡಲಾಗುವುದು.
* ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 428 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ರೈತರಿಗೆ ಸಹಾಯಧನ ಸೌಲಭ್ಯ ಕಲ್ಪಿಸುವುದು.
* ತೊಗರಿ ಉತ್ಪಾದನೆ ಉತ್ತೇಜನಕ್ಕೆ 88 ಕೋಟಿ ರೂ. ಒದಗಿಸಲಾಗುವುದು.
* ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಲಾಗುವುದು.
* ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ ಗುರಿ ಹೊಂದಲಾಗಿದೆ.
* ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪಿಸಲಾಗುವುದು.
* ಕೃಷಿ ಹವಾಮಾನ ವಲಯಗಳ ವರ್ಗೀಕರಣವನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚನೆ ಮಾಡಲಾಗುವುದು.
* ರೈತರ ಜೀವನೋಪಾಯ ಸುಧಾರಣೆಗೆ ಸಮಗ್ರ ಮಳೆಯಾಶ್ರಿತ ಕೃಷಿ ನೀತಿ ಜಾರಿ.
* ಕೃಷಿ ಇಲಾಖೆಯ 58 ಪ್ರಯೋಗಾಲಯಗಳ ಬಲವರ್ಧನೆ.
* 20 ಕೋಟಿ ರೂ. ವೆಚ್ಚದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್‌ಗಳ ಸ್ಥಾಪನೆ ಮಾಡುವುದರ ಜೊತೆಗೆ ಉತ್ತರ ಕನ್ನಡ ಜಿಲ್ಲೆ, ಜೋಯಿಡಾ ತಾಲ್ಲೂಕನ್ನು ಸಾವಯವ ತಾಲ್ಲೂಕಾಗಿ ಪರಿವರ್ತಿಸಲು ಕ್ರಮ.
* ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮೀಸಲಿಡಲಾಗುವುದು
* ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್ ಸೌಲಭ್ಯ ಕಲ್ಪಿಸಲಾಗುವುದು
* ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು
* ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪಿಸುವ ಕುರಿತು ಕಾರ್ಯಸಾಧ್ಯತ ವರದಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು.
ರಾಜ್ಯ ತೆರಿಗೆ ಆದಾಯ- 52 ಪೈಸೆ ಸಾಲ- 27 ಪೈಸೆ ಕೇಂದ್ರದ ತೆರಿಗೆ ಪಾಲು-13 ಪೈಸೆ ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ ರಾಜ್ಯ ತೆರಿಗೆಯೇತರ ರಾಜಸ್ವ- 4 ಪೈಸೆ
ಒಟ್ಟು – 100 ಪೈಸೆ (ಒಂದು ರೂಪಾಯಿ)
8 months agoMarch 7, 2025 2:34 pm
ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?
ಶಿಕ್ಷಣ ಇಲಾಖೆ- 45286 ಕೋಟಿ (10%)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ- 34955 ಕೋಟಿ (8%)
ಇಂಧನ- 26896 ಕೋಟಿ (6%)
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್- 26735 ಕೋಟಿ (6%)
ನೀರಾವರಿ- 22181 ಕೋಟಿ (5%)
ನಗರಾಭಿವೃದ್ಧಿ ಮತ್ತು ವಸತಿ- 21405 ಕೋಟಿ (5%)
ಒಳಾಡಳಿತ ಮತ್ತು ಸಾರಿಗೆ- 20625 ಕೋಟಿ (5%)
ಆರೋಗ್ಯ ಮತ್ತು ಕುಟುಂಬ- 17473 ಕೋಟಿ (4%)
ಕಂದಾಯ- 17201 ಕೋಟಿ (4%)
ಸಮಾಜ ಕಲ್ಯಾಣ- 16955 ಕೋಟಿ (4%)
ಲೋಕೋಪಯೋಗಿ- 11841 ಕೋಟಿ (3%)
ಆಹಾರ-ನಾಗರಿಕ ಸರಬರಾಜು- 8275 ಕೋಟಿ (2%)
ಕೃಷಿ-ತೋಟಗಾರಿಕೆ- 7145 ಕೋಟಿ (2%)
ಪಶುಸಂಗೋಪನೆ-ಮೀನುಗಾರಿಕೆ- 3977 ಕೋಟಿ (1%)
ಇತರೆ- 1,49,857 ಕೋಟಿ (35%)
8 months agoMarch 7, 2025 1:57 pm
ಬಜೆಟ್ ಭಾಷಣ ಮುಕ್ತಾಯ
3 ಗಂಟೆ 25 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ಸಿಎಂ
ಒಂದು ಗಾಜಿನ ಲೋಟ ನೀರು ಕುಡಿದ ಸಿದ್ದರಾಮಯ್ಯ
8 months agoMarch 7, 2025 1:48 pm
ಒಲಿಂಪಿಕ್ಸ್‌ಗೆ ತಯಾರಾಗುವ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.
ಗುರಿ-ಒಲಿಂಪಿಕ್ ಪದಕ ಯೋಜನೆಯಡಿ ಒಲಿಂಪಿಕ್ಸ್ 2028 ಗೆ ತಯಾರಿ ಕೈಗೊಳ್ಳಲು ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ದಂತೆ ಪ್ರೋತ್ಸಾಹ ಧನ ವಿತರಣೆ. ಈ ವರ್ಷಕ್ಕೆ 6 ಕೋಟಿ ರೂ. ನೆರವು.
ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಹಾಗೂ ಬುಡಕಟ್ಟು ಜನಾಂಗದವರಿಗೆ ಕ್ರೀಡಾಕೂಟ ಆಯೋಜನೆಗೆ 2 ಕೋಟಿ ರೂ.
8 months agoMarch 7, 2025 1:46 pm
ಕೊಡಗು ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಹಾನಿಯಾಗಿರುವ ರಸ್ತೆ ಮತ್ತು ಸೇತುವೆಗಳ ಪುನರ್ ನಿರ್ಮಾಣ
8 months agoMarch 7, 2025 1:45 pm
ದಕ್ಷಿಣ ಕನ್ನಡ, ವಿಜಯಪುರ, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಒಟ್ಟು 6 ಸೇತುವೆ ನಿರ್ಮಾಣಕ್ಕೆ ಅನುಮೋದನೆ
8 months agoMarch 7, 2025 1:43 pm
ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ 83 ಕೋಟಿ ರೂ. ಅನುದಾನ
8 months agoMarch 7, 2025 1:41 pm
ಗ್ರಾಪಂ ಗಳಲ್ಲಿ ಇ-ಸ್ವತ್ತು ಅಭಿಯಾನ
ಗ್ರಾಮ ಪಂಚಾತಿತಿಗಳಲ್ಲಿ ‘ಇ-ಸ್ವತ್ತು ಅಭಿಯಾನ’ ಆರಂಭ
ಪಂಚತಂತ್ರ ತಂತ್ರಾಂಶ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಿಗೂ ವಿಸ್ತರಣೆ. ಹಿರಿಯ ಅಧಿಕಾರಿಗಳಿಂದ ‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮ ಆರಂಭ
8 months agoMarch 7, 2025 1:39 pm
ನನ್ನ ವೃತ್ತಿ, ನನ್ನ ಆಯ್ಕೆ
ʻನನ್ನ ವೃತ್ತಿ, ನನ್ನ ಆಯ್ಕೆʼ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ
ಯುವನಿಧಿ ಫಲಾನುಭವಿ ಯುವಕರಿಗೆ Industry Linkage Cell ಅಡಿ ಭವಿಷ್ಯ ಕೌಶಲ್ಯ ತರಬೇತಿ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ
ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳ ಸ್ಥಾಪನೆ
ಮಧುಗಿರಿ, ಇಂಡಿ, ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ನೂತನ GTTC ಸ್ಥಾಪನೆ
ಬಿಬಿಎಂಪಿ ವ್ಯಾಪ್ತಿಯ ಸುರಂಗ ಮಾರ್ಗ ರಸ್ತೆಗೆ ಅನುದಾನ ಘೋಷಣೆ
ಸುರಂಗ ಮಾರ್ಗದ ಯೋಜನೆಗೆ 19000 ಕೋಟಿ ರೂ. ಈ ಸಾಲಿನಲ್ಲಿ ಘೋಷಣೆ
ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ವೆಚ್ಚ ಮಾಡಲು ನಿರ್ಧಾರ
ಉತ್ತರ ದಕ್ಷಿಣ ಮತ್ತು ಪೂರ್ವ ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳ ನಿರ್ಮಾಣ
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಕೈಗೊಳ್ಳಲಾಗುವ 21 ಯೋಜನೆಗಳಿಗೆ 1,800 ಕೋಟಿ ಘೋಷಣೆ
8 months agoMarch 7, 2025 12:21 pm
500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ
8 months agoMarch 7, 2025 12:19 pm
ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50 ಸಾವಿರ ಪ್ರೋತ್ಸಾಹಧನ
8 months agoMarch 7, 2025 12:18 pm
ಮಹಿಳಾ ಸ್ವಸಹಾಯ ಸಂಘ ವ್ಯಾಪ್ತಿಗೆ ಇಂದಿರಾ ಕ್ಯಾಂಟೀನ್
ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ಹೊಣೆ
8 months agoMarch 7, 2025 12:15 pm
ಅಬಕಾರಿ ಇಲಾಖೆಗೆ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದ ಸರ್ಕಾರ
40 ಸಾವಿರ ಕೋಟಿ ಆದಾಯ ಸಂಗ್ರಹಣೆ ಟಾರ್ಗೆಟ್
ಕಳೆದ ಸಲ 38,500 ಕೋಟಿ ಟಾರ್ಗೆಟ್ ನೀಡಲಾಗಿತ್ತು. (ಆದ್ರೆ 36,500 ಕೋಟಿ ಮಾತ್ರ ಕಳೆದ ಬಾರಿ ಸಂಗ್ರಹ)
ಈ ಸಲ ಸುಮಾರು ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆ ಟಾರ್ಗೆಟ್
ಈ ಮೂಲಕ ಮದ್ಯದ ದರಗಳ ಏರಿಕೆಯ ಸುಳಿವು ನೀಡಿದ ಸರ್ಕಾರ
8 months agoMarch 7, 2025 12:11 pm
ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುವ ಜನಾಂಗದವರಿಗೆ ನೇರ ನೇಮಕಾತಿ ಭಾಗ್ಯ
13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ,
ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು.
8 months agoMarch 7, 2025 12:07 pm
ಕನ್ನಡ ಸಿನಿಮಾಗಳ ಪ್ರೋತ್ಸಾಹಕ್ಕೆ ಸರ್ಕಾರಿ OTT
8 months agoMarch 7, 2025 12:04 pm
ರಾಜ್ಯದಲ್ಲಿ 100 ನಾಡಕಚೇರಿ ನಿರ್ಮಾಣ
8 months agoMarch 7, 2025 11:58 am
ಬೆಂಗಳೂರಿಗೆ 9 ಸಾವಿರ ಬಸ್ ಸೇರ್ಪಡೆ
2 ವರ್ಷಗಳ ಮೆಟ್ರೋ ಹೆಚ್ಚುವರಿ ಮಾರ್ಗಗಳ ವಿಸ್ತರಣೆ
ನಮ್ಮ ಮೆಟ್ರೋ ದೇವನಹಳ್ಳಿ ವರೆಗೆ ವಿಸ್ತರಣೆ
ವರ್ತೂರು-ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ 234 ಕೋಟಿ
ಬೆಂಗಳೂರಿನ ಹಜ್ ಭವನದಲ್ಲಿ KSOU ಸ್ಥಾಪನೆ
8 months agoMarch 7, 2025 11:57 am
2026 ಕ್ಕೆ ವಿಜಯಪುರದಲ್ಲಿ ಏರ್‌ಪೋರ್ಟ್ ಆರಂಭ
8 months agoMarch 7, 2025 11:54 am
ಕಂಬಳ, ಎತ್ತಿನಬಂಡಿ ಓಟ, ಮಲ್ಲಕಂಬ ಸ್ಪರ್ಧೆಗಳಿಗೆ ಉತ್ತೇಜನ
8 months agoMarch 7, 2025 11:52 am
ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್
8 months agoMarch 7, 2025 11:52 am
ಜೈನ, ಬೌದ್ಧ, ಸಿಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ
8 months agoMarch 7, 2025 11:43 am
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ
ಸರ್ಕಾರಿ ಗುತ್ತಿಗೆಗಳಲ್ಲಿ 2b ವರ್ಗಕ್ಕೂ ಮೀಸಲಾತಿ ಘೋಷಣೆ
2 ಕೋಟಿ ಒಳಗಿನ ಕಾಮಗಾರಿಗಳಿಗೆ ಮೀಸಲಾತಿ
ಸಮುದಾಯದ ಹೆಸರು ಹೇಳದೆ 2b ಎಂದು ಉಲ್ಲೇಖಿಸಿರುವ ಸಿಎಂ
8 months agoMarch 7, 2025 11:42 am
ಕೃಷಿ ಕ್ಷೇತ್ರಕ್ಕೆ ಕೊಡುಗೆ
ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ‘ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ’ ಸ್ಥಾಪನೆ
8 months agoMarch 7, 2025 11:40 am
ಅರ್ಚಕರಿಗೆ ತಸ್ತೀಕ್ ಮೊತ್ತ ಹೆಚ್ಚಳ
ದೇವಾಲಯದ ಆಸ್ತಿ ಸಂರಕ್ಷಣೆಗೆ ಬರಲಿದೆ ಭೂ ವರಾಹ
ಒತ್ತುವರಿಯಾಗಿರುವ 328 ದೇವಾಲಯದ ಆಸ್ತಿ ಸಂರಕ್ಷಣೆಗೆ ಕ್ರಮ
8 months agoMarch 7, 2025 11:35 am
ನಿವೃತ್ತಿ ಹೊಂದಿದ ಕುಸ್ತಿಪಟುಗಳ ಮಾಶಾಸನ ಹೆಚ್ಚಳ
ಅಂತಾರಾಷ್ಟ್ರೀಯ ಕುಸ್ತಿಪಟುಗಳಿಗೆ 6 ಸಾವಿರ ರೂ. ಹೆಚ್ಚಳ
ರಾಷ್ಟ್ರೀಯ ಕುಸ್ತಿಪಟು- 5 ಸಾವಿರ ರೂ.ಗೆ ಹೆಚ್ಚಳ
ರಾಜ್ಯಮಟ್ಟದ ಕುಸ್ತಿ ಪಟು- 4500 ರೂ.ಗೆ ಹೆಚ್ಚಳ
8 months agoMarch 7, 2025 11:35 am
ಬೀದಿಬದಿ ವ್ಯಾಪಾರಿಗಳಿಗೆ 1 ಲಕ್ಷ ಸಾಲಕ್ಕೆ ಸಹಾಯಧನ
8 months agoMarch 7, 2025 11:32 am
ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ
ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ಯಲಬುರ್ಗಾ, ಜೇವರ್ಗಿ, ಯಾದಗಿರಿಯಲ್ಲಿ ನರ್ಸಿಂಗ್ ಕಾಲೇಜು ಕೋಲಾರದಲ್ಲಿ ವೈದ್ಯಕೀಯ ಕಾಲೇಜು
8 months agoMarch 7, 2025 11:28 am
ಕರ್ನಟಕ ನಕ್ಸಲ್ ಮುಕ್ತ ರಾಜ್ಯ
ಬಜೆಟ್‌ನಲ್ಲಿ ಘೋಷಣೆ ಮಾಡಿದ ಸಿಎಂ
ನಕ್ಸಲ್ ನಿಗ್ರಹ ಪಡೆ ವಿಸರ್ಜಿಸುವ ಘೋಷಣೆ
8 months agoMarch 7, 2025 11:26 am
ಗರ್ಭ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ
8 months agoMarch 7, 2025 11:26 am
ರಾಜ್ಯಕ್ಕೂ ಬರಲಿದೆ ವಾಟರ್ ಮೆಟ್ರೋ
ಮಂಗಳೂರಿನಲ್ಲಿ ವಾಟರ್ ಮೆಟ್ರೋಗೆ ಪ್ಲ್ಯಾನ್
ಬಜೆಟ್‌ನಲ್ಲಿ ಪ್ರಸ್ತಾಪ
ಮಂಗಳೂರಲ್ಲಿ ಅಂತಾರಾಷ್ಟ್ರೀಯ ಕ್ರೂಸ್ ಆರಂಭ
8 months agoMarch 7, 2025 11:23 am
ಬೆಂಗಳೂರಿಗೆ ಬಂಪರ್ ಗಿಫ್ಟ್
ಬೆಂಗಳೂರು ಅಭಿವೃದ್ಧಿ ಅನುದಾನ 7,000 ಕೋಟಿ ರೂ.ಗೆ ಏರಿಕೆ
ಟನಲ್ ಯೋಜನೆಗೆ 40 ಸಾವಿರ ಕೋಟಿ
8 months agoMarch 7, 2025 11:22 am
ಮಹಿಳೆಯ ಸ್ವ ಉದ್ಯೋಗಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಅಕ್ಕಾ ಕೆಫೆ, ಕ್ಯಾಂಟಿನ್
8 months agoMarch 7, 2025 11:19 am
ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು
ರಾಜ್ಯದಲ್ಲಿ 2,500 ಕೋಟಿ ವೆಚ್ಚದಲ್ಲಿ 500 ಹೊಸ ಪಬ್ಲಿಕ್ ಶಾಲೆಗಳ ನಿರ್ಮಾಣ
ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲು
8 months agoMarch 7, 2025 11:16 am
ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ
ಎಸ್‌ಸಿ ಸಮುದಾಯದ ಉಪಯೋಜನೆಗೆ(ಎಸ್‌ಸಿಎಸ್‌ಪಿ) – 29,992 ಕೋಟಿ ರೂ
ಎಸ್‌ಟಿ ಸಮುದಾಯದ ಉಪಯೋಜನೆಗೆ(ಎಸ್‌ಟಿಪಿ) – 12,026 ಕೋಟಿ ರೂ ಅನುದಾನ
ಒಟ್ಟು ಈ ಬಜೆಟ್‌ನಲ್ಲಿ ಎಸ್‌ಸಿಎಸ್ಪಿ-ಟಿಎಸ್ಪಿ ಅನುದಾನ ಘೋಷಣೆ – 42,018 ಕೋಟಿ ರೂ.
8 months agoMarch 7, 2025 11:15 am
ಸಿಎಂ ಬಜೆಟ್ ಓದಿನ ಮಧ್ಯೆ ಒಳ ಮೀಸಲಾತಿ ಕೊಡಲುವಂತೆ ಘೋಷಣೆ
ವೀಕ್ಷಕರ ಗ್ಯಾಲರಿಯಲ್ಲಿದ್ದ ದಲಿತಪರ ಸಂಘಟನೆಗಳ ಮುಖಂಡರಿಂದ ಘೋಷಣೆ
8 months agoMarch 7, 2025 11:14 am
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಮೊತ್ತದ ಹೊಸ ಯೋಜನೆಗಳನ್ನು KKRDB ಮೂಲಕ ಅನುಷ್ಠಾನ
ಬಯಲು ಸೀಮೆ, ಮಲೆನಾಡು, ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗೆ 83 ಕೋಟಿ ಅನುದಾನ
ಗಡಿ ಅಭಿವೃದ್ಧಿ ಪ್ರಾಧಿಕಾರವನ್ನ ಯೋಜನಾ ಇಲಾಖೆ ವ್ಯಾಪ್ತಿಗೆ ತರಲು ನಿರ್ಧಾರ
8 months agoMarch 7, 2025 11:09 am
ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು 6 ದಿನಗಳಿಗೆ ವಿಸ್ತರಣೆ
8 months agoMarch 7, 2025 11:08 am
ಮಹಿಳಾ ಸ್ವಸಹಾಯ ಸಂಘಗಳಿಂದ ಆಯ್ದ 50 ಕಡೆ ಶಿಶು ಪಾಲನೆಗಾಗಿ ವಾತ್ಯಲ್ಯ ಕೇಂದ್ರ ಸ್ಥಾಪನೆ
8 months agoMarch 7, 2025 11:07 am
ಮೈಸೂರು ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ
120 ಕೋಟಿ ವೆಚ್ಚ
8 months agoMarch 7, 2025 11:07 am
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ ಅನುಗ್ರಹ ಯೋಜನೆ
ಹಸು, ಕರುಗಳ ಸಾವಿನ ಪರಿಹಾರ ಧನ 10ರಿಂದ 15 ಸಾವಿರಕ್ಕೆ ಹೆಚ್ಚಳ ಕುರಿ, ಮೇಕೆ ಮೃತಪಟ್ಟರೆ ಪರಿಹಾರ ಧನ 5ರಿಂದ 7.5 ಸಾವಿರಕ್ಕೆ ಹೆಚ್ಚಳ
8 months agoMarch 7, 2025 11:04 am
ಕರಾವಳಿಯಲ್ಲಿ ಭೂಕುಸಿತ ತಡೆಗೆ ತಡೆಗೋಡೆ
8 months agoMarch 7, 2025 11:03 am
5 ಸಾವಿರ ಸರ್ಕಾರಿ ಶಾಲೆಗಳಲ್ಲಿ LKG-UKG
8 months agoMarch 7, 2025 10:58 am
ವನ್ಯಜೀವಿ ದಾಳಿಯಿಂದ ಮೃತಪಟ್ಟರೆ 20 ಲಕ್ಷ ಪರಿಹಾರ
8 months agoMarch 7, 2025 10:57 am
ಬೆಂಗಳೂರು ವಿವಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗೆ ಹೆಸರು
8 months agoMarch 7, 2025 10:56 am
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು
8 months agoMarch 7, 2025 10:55 am
ಗರ್ಭಕಂಠದ ಕ್ಯಾನ್ಸರ್ ತಡೆಗೆ 14 ವರ್ಷದ ಕೆಳಗಿನ ಮಕ್ಕಳಿಗೆ HPV ಲಸಿಕೆ
8 months agoMarch 7, 2025 10:52 am
ಆಯುಷ್ಮಾನ್ ಭಾರತದಡಿ 5 ಲಕ್ಷ ಚಿಕಿತ್ಸಾ ವೆಚ್ಚ
ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ
8 months agoMarch 7, 2025 10:50 am
ಮದ್ಯದಂಗಡಿಗಳಿಗೆ ಹೊಸ ಲೈಸೆನ್ಸ್ ನೀಡಲು ನಿರ್ಧಾರ
ಇ-ಹರಾಜಿನ ಮೂಲಕ ಪರವಾನಗಿ ನೀಡಲು ಕ್ರಮ
40 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ಅಬಕಾರಿ ಸ್ಲ್ಯಾಬ್ ಗಳನ್ನ ತರ್ಕಬದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆ
8 months agoMarch 7, 2025 10:49 am
ಬಜೆಟ್‌ನಲ್ಲಿ ತೆರಿಗೆ ಸಂಗ್ರಹ ಗುರಿಯ ಪ್ರಸ್ತಾಪ
ವಾಣಿಜ್ಯ ತೆರಿಗೆ – 1,20,000 ಕೋಟಿ
ಅಬಕಾರಿ ತೆರಿಗೆ – 40,000 ಕೋಟಿ
ನೋಂದಣಿ ಮತ್ತು ಮುದ್ರಾಂಕ ಶುಲ್ಕ – 28,000 ಕೋಟಿ ರೂ
ಮೋಟಾರು ವಾಹನ ತೆರಿಗೆ – 15,000 ಕೋಟಿ ರೂ
ಇತರೆ ತೆರಿಗೆಗಳಿಂದ – 5,100 ಕೋಟಿ ಸಂಗ್ರಹ ಗುರಿ
8 months agoMarch 7, 2025 10:46 am
ಅನ್ನಭಾಗ್ಯ ಅಕ್ಕಿ ನೀಡುವ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ
ಹೊಸ ನ್ಯಾಯಬೆಲೆ ಅಂಗಡಿಗಳು ಅವಶ್ಯಕತೆಗೆ ಅನುಗುಣವಾಗಿ ಓಪನ್
8 months agoMarch 7, 2025 10:44 am
ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ಸಹಾಯ ಧನ ಹೆಚ್ಚಳ
ಅಂಗನವಾಡಿ ಸಹಾಯಕರಿಗೆ 750 ರೂ. ಸಹಾಯ ಧನ ಹೆಚ್ಚಳ
8 months agoMarch 7, 2025 10:44 am
ಬಿಸಿಯೂಟ ತಯಾರಿಕರಿಗೆ 1 ಸಾವಿರ ಗೌರವ ಧನ ಹೆಚ್ಚಳ
8 months agoMarch 7, 2025 10:43 am
ಪ್ರಾಥಮಿಕ, ಫ್ರೌಡಾ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು, ಉಪನ್ಯಾಸರಿಗೆ 2 ಸಾವಿರ ಗೌರವ ಧನ ಹೆಚ್ಚಳ
8 months agoMarch 7, 2025 10:42 am
ಮದರಸಾದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ
SSLC ಪರೀಕ್ಷೆ ಬರೆಯಲು ಅವಕಾಶ
ಕಂಪ್ಯೂಟರ್ ಸ್ಮಾರ್ಟ್ ಬೋರ್ಡ್ ವ್ಯವಸ್ಥೆ
8 months agoMarch 7, 2025 10:40 am
ಮೈಸೂರಲ್ಲಿ 500 ಕೋಟಿ ವೆಚ್ಚದಲ್ಲಿ ಫಿಲ್ಮ್ ಸಿಟಿ
8 months agoMarch 7, 2025 10:38 am
ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕದರ ನಿಗದಿ
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ಗೆ 200 ರೂ. ನಿಗದಿ
8 months agoMarch 7, 2025 10:36 am
ಶಾಲಾ ಮಕ್ಕಳಿಗೆ ರಾಗಿ ಮಿಲ್ಟ್ ಯೋಜನೆ ವಿಸ್ತರಣೆ.
ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ನೀಡುತ್ತಿರೋ ಯೋಜನೆ
3 ದಿನಗಳಿಂದ 5 ದಿನ ರಾಗಿ ಹೆಲ್ತ್ ಮಾಲ್ಟ್ ವಿಸ್ತರಣೆ
100 ಕೋಟಿ ವೆಚ್ಚ, 25% ಸರ್ಕಾರದಿಂದ ಹಣ ಭರಿಸಲಾಗುತ್ತದೆ.
8 months agoMarch 7, 2025 10:36 am
ಅಲ್ಪಸಂಖ್ಯಾತ ಸರಳ ವಿವಾಹಕ್ಕೆ 50 ಸಾವಿರ
8 months agoMarch 7, 2025 10:35 am
ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ 319 ಕೋಟಿ
8 months agoMarch 7, 2025 10:34 am
50 ಸಾವಿರ ರೈತರಿಗೆ ಸಹಾಯ ಧನ
ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯ ಧನ ಒದಗಿಸಲು 428 ಕೋಟಿ ಅನುದಾನ
ಈ ವರ್ಷ 5 ಸಾವಿರ ಕಿರು ಸಂಸ್ಕಾರಣಾ ಘಟಕ ಸ್ಥಾಪನೆ
12 ಸಾವಿರ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು
8 months agoMarch 7, 2025 10:32 am
ಈ ಬಾರಿಯೂ ಕೊರತೆ ಬಜೆಟ್ ಮಂಡನೆ
19,262 ಕೋಟಿ ರೂ. ಕೊರತೆ ಬಜೆಟ್
8 months agoMarch 7, 2025 10:31 am
ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಹೈಟೆಕ್
8 months agoMarch 7, 2025 10:30 am
ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ
ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ
ಈ ಯೋಜನೆ ಅಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ, ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ
8 months agoMarch 7, 2025 10:29 am
ವೃತ್ತಿ ತೆರಿಗೆ ಏರಿಕೆ
200 ರೂ. ರಿಂದ 300 ರೂ.ಗೆ ವೃತ್ತಿ ತೆರಿಗೆ ಏರಿಕೆ
8 months agoMarch 7, 2025 10:29 am
ವಾಣಿಜ್ಯ ತೆರಿಗೆಯ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿ 1,20,000 ಕೋಟಿ ರೂ.
8 months agoMarch 7, 2025 10:28 am
4,09,549 ಕೋಟಿ ಗಾತ್ರದ ಬಜೆಟ್
8 months agoMarch 7, 2025 10:25 am
ಈ ಬಾರಿಯೂ ಅತೀ ಹೆಚ್ಚು ಸಾಲದ ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ
ಈ ಬಾರಿ 1,16,000 ಕೋಟಿ ರೂ. ಸಾಲ ಮಾಡುವುದಾಗಿ ಪ್ರಸ್ತಾಪ
8 months agoMarch 7, 2025 10:17 am
2025-26ನೇ ಸಾಲಿನ ಬಜೆಟ್ ಮಂಡನೆ ಆರಂಭ
ತಮ್ಮ 16ನೇ ಆಯವ್ಯಯ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ
8 months agoMarch 7, 2025 10:11 am
ಸಿಎಂ ಅವರನ್ನ ಗಾಲಿ ಕುರ್ಚಿಯಲ್ಲಿ ಕರೆದುಕೊಂಡು ಹೋದ ಸಂತೋಷ್ ಲಾಡ್
8 months agoMarch 7, 2025 10:10 am
ಸಂಪುಟ ಸಭೆ ಮುಕ್ತಾಯ
ಬಜೆಟ್‌ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ
8 months agoMarch 7, 2025 10:07 am
ಈ ಬಾರಿಯ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರೂ.
8 months agoMarch 7, 2025 10:05 am
ಸರ್ಕಾರದ ಶೂನ್ಯ ಸಾಧನೆ, ವೈಫಲ್ಯಗಳ ವಿರುದ್ಧ ಬಿಜೆಪಿ-ಜೆಡಿಎಸ್ ಧರಣಿ
8 months agoMarch 7, 2025 10:03 am
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ವಿಪಕ್ಷ ನಾಯಕರಿಂದ ಪ್ರತಿಭಟನೆ
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧಿಕ್ಕಾರ..
8 months agoMarch 7, 2025 9:58 am
ನಿಂತು ಬಜೆಟ್ ಬ್ಯಾಗ್ ತೋರಿಸಿ ಆನಂತರ ವ್ಹೀಲ್ ಚೇರ್‌ನಲ್ಲಿ ಕ್ಯಾಬಿನೆಟ್‌ಗೆ ತೆರಳಿದ ಸಿಎಂ
8 months agoMarch 7, 2025 9:57 am
ಬಜೆಟ್ ಪ್ರತಿ ಹಿಡಿದು ವಿಧಾನಸೌಧಕ್ಕೆ ಸಿಎಂ ಆಗಮನ
8 months agoMarch 7, 2025 9:52 am
ಸಿಎಂ ಸಿದ್ದರಾಮಯ್ಯಗೆ ಬಜೆಟ್ ಪ್ರತಿ ಹಸ್ತಾಂತರ
2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದು ದಾಖಲೆಯ 16ನೇ ಬಜೆಟ್. ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಸಿಎಂಗೆ ಬಜೆಟ್ ಪ್ರತಿ ಇರುವ ಸೂಟ್ ಕೇಸ್ ಹಸ್ತಾಂತರಿಸಿದ್ದಾರೆ.
ಬೆಂಗಳೂರು: 2025-26ನೇ ಸಾಲಿನಲ್ಲಿ 40,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ (Excise Department) ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ದಾಖಲೆಯ 16ನೇ ಬಜೆಟ್ (Karnataka Budget 2025) ಮಂಡಿಸಿದ ಸಿಎಂ, 2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು 36,500 ಕೋಟಿ ರೂ.ಗಳ ರಾಜಸ್ವ ನಿರೀಕ್ಷಿಸಲಾಗಿದೆ. ಅದರಂತೆ 2025-26ನೇ ಸಾಲಿಗೆ 40,000 ಕೋಟಿ ರೂ.ಗಳ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ವಿವಿಗೆ ಪ್ರಧಾನಿ ಮನಮೋಹನ್ ಸಿಂಗ್ ಎಂದು ಮರುನಾಮಕರಣ
ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸುವುದರೊಂದಿಗೆ ಸರ್ಕಾರವು ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಿದೆ. 2025-26ರಲ್ಲಿಯೂ ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಅಭಿವೃದ್ಧಿಯ ಬಜೆಟ್ ಇದು, ಗ್ಯಾರಂಟಿ ಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ: ಸಿಎಂ
ಜೊತೆಗೆ ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಇ-ಹರಾಜಿನ (ಆನ್‌ಲೈನ್) ಮೂಲಕ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಹೆಚ್ಚುವರಿ ರಾಜಸ್ವ ಸಂಗ್ರಹಣೆಯಾಗುವ ನಿರೀಕ್ಷೆಯಿದೆ. ಇಲಾಖೆಯ ಎಲ್ಲಾ ಸೇವೆಗಳಿಗೆ ಸರ್ಕಾರವು ತಂತ್ರಾಂಶ ಸಿದ್ಧಪಡಿಸಿ ಆನ್‌ಲೈನ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಇದು ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಸಿಎಂ ತಿಳಿಸಿದರು. ಇದನ್ನೂ ಓದಿ: ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಇಲ್ಲ – ಆಹಾರ ಸಚಿವ ಮುನಿಯಪ್ಪ ಹೇಳಿದ್ದೇನು?
ಬೆಂಗಳೂರು: ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಮಂಡಿಸೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ (Vidhana Soudha) ರೈತ ಮುಖಂಡರ ಜೊತೆ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಮಾರ್ಚ್ 3 ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಮಾರ್ಚ್ 3 ರಂದು ರಾಜ್ಯಪಾಲರು ಜಂಟಿ ಸದನವನ್ನ ಉದ್ದೇಶಿ ಮಾತನಾಡಲಿದ್ದಾರೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಮಾರ್ಚ್ 7 ರಂದು ಬಜೆಟ್ ಮಂಡನೆ ಮಾಡ್ತೀನಿ ಎಂದು ತಿಳಿಸಿದ್ದಾರೆ.
ಈ ಬಜೆಟ್ ನಲ್ಲಿ ಜನರಿಗೆ ಬೆಲೆ ಏರಿಕೆ ಶಾಕ್ ನಿಂದ ಮುಕ್ತಿ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಲೆ ಏರಿಕೆ ಕೇಂದ್ರ-ರಾಜ್ಯ ಸರ್ಕಾರ ಮಾಡಬೇಕು. ಬೆಲೆ ಏರಿಕೆ ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಭಾರ ಇರುತ್ತದೆ. ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಒತ್ತು ಕೊಡಬೇಕು. ರಾಜ್ಯ ಸರ್ಕಾರ ಎನ್ ಮಾಡಬೇಕೋ ಅದನ್ನ ಮಾಡುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ರೈಲಿನ ಟಾಯ್ಲೆಟ್‌ನಲ್ಲಿ ಖೋಟಾನೋಟು – ಪಶ್ಚಿಮ ಬಂಗಾಳಕ್ಕೆ ತೆರಳಲಿರೋ ಬೆಂಗ್ಳೂರು ಪೊಲೀಸ್ರು