Tag: ಕರ್ನಾಟಕ ಬಜೆಟ್ 2023

  • 8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ

    8 ತಿಂಗಳು ಎಲ್ಲಾ ಶಾಸಕರು ಸಹಕರಿಸಿ- ಸಿದ್ದರಾಮಯ್ಯ ಮನವಿ

    ಬೆಂಗಳೂರು: ಎಂಟು ತಿಂಗಳು ಎಲ್ಲಾ ಶಾಕರು ಸಹಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ.

    ಬಿಜೆಟ್ ಮಂಡನೆಗೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ (CLP Meeting) ಮಾತನಾಡಿದ ಸಿಎಂ, ಗ್ಯಾರಂಟಿಗಳ ಜಾರಿ ಕಾರಣದಿಂದಾಗಿ ಮೊದಲಿನಂತೆ ಶಾಸಕರಿಗೆ (MLA) ನೂರಾರು ಕೋಟಿ ಅನುದಾನ ಕೊಡುವುದು ಕಷ್ಟವಾಗುತ್ತದೆ. 5-10 ಕೋಟಿ ಅನುದಾನಕ್ಕೇನು ಸಮಸ್ಯೆ ಇಲ್ಲ, ಅದನ್ನ ಕೊಡುತ್ತೇನೆ. ಹೀಗಾಗಿ ಮುಂದಿನ ಬಜೆಟ್ ವರೆಗೆ 8 ತಿಂಗಳ ಕಾಲ ಸಹಕರಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: Karnataka Budget 2023: ಬೆಂಗಳೂರಿಗೆ ಸಿಂಹಪಾಲು ಸಾಧ್ಯತೆ- ಗರಿಗೆದರಿದ ಹಲವು ನಿರೀಕ್ಷೆಗಳು

    ಗ್ಯಾರಂಟಿ ಯೋಜನೆಗಳೆ ನಮಗೆ ಆಕ್ಸಿಜನ್. ಲೋಕಸಭಾ ಚುನಾವಣೆವರೆಗೆ (Loksabha Election) ಗ್ಯಾರಂಟಿ ಯೋಜನೆಗಳೆ ನಮ್ಮನ್ನು ಕೈ ಹಿಡಿಯಬೇಕಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸಿಕೊಡಿ. ಜನರ ಮನಸ್ಸಿಗೆ ಮುಟ್ಟುವಂತೆ ಅದನ್ನ ಪ್ರಚಾರ ಮಾಡಿ ಅದೇ ನಿಮ್ಮನ್ನು ಕೈ ಹಿಡಿಯುತ್ತೆ ಎಂದು ಇದೇ ವೇಳೆ ಸಿಎಂ ಅವರು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಚುರುಕು- ರೆಡಿಯಾಗ್ತಿದೆ 50 ಕೋಟಿ ವೆಚ್ಚದ DPR

    ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಚುರುಕು- ರೆಡಿಯಾಗ್ತಿದೆ 50 ಕೋಟಿ ವೆಚ್ಚದ DPR

    ಬೆಂಗಳೂರು: ಹಳೇ ಮೈಸೂರು ಭಾಗದ ರಾಮನಗರದಿಂದ (Ramanagara) ಈ ಬಾರಿ ಹಿಂದುತ್ವದ ಬಲವಾದ ಗಾಳಿ ಬೀಸುವುದು ಫಿಕ್ಸ್ ಆದಂತಿದೆ. ರಾಮನಗರದ ರಾಮದೇವರ ಬೆಟ್ಟದಲ್ಲಿ (Ramadevara Betta) ರಾಮಮಂದಿರ ನಿರ್ಮಾಣ ಸಂಬಂಧ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

    ರಾಮದೇವರ ಬೆಟ್ಟದಲ್ಲಿ ಭವ್ಯ ರಾಮಮಂದಿರ (Ram Mandir) ನಿರ್ಮಾಣಕ್ಕೆ ಸರ್ಕಾರ ಸಮಗ್ರ ಯೋಜನಾ ವರದಿ ಸಿದ್ಧಪಡಿಸುತ್ತಿದೆ. ಬಜೆಟ್‌ನಲ್ಲಿ (Karnataka Budget 2023) ರಾಮಮಂದಿರ ನಿರ್ಮಾಣ ಘೋಷಣೆ ಮಾಡಿದ್ದ ಸರ್ಕಾರ, ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು 50 ಕೋಟಿ ರೂ. ಅನುದಾನ ಬಿಡುಗಡೆಗೆ ಮುಂದಾಗಿದೆ.

    BASAVARAJ BOMMAI 1

    ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಾಥಮಿಕವಾಗಿ 50 ಕೋಟಿ ರೂ. ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಯವರ ಅನುಮತಿಯಷ್ಟೇ ಬಾಕಿಯಿದೆ.

    ಅಯೋಧ್ಯೆಯ ರಾಮಮಂದಿರ ಮಾದರಿಯಲ್ಲಿ 19 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ 50 ಕೋಟಿ ರೂ. ವೆಚ್ಚ ಮಾಡಲಾಗ್ತಿದೆ. ಏಸ್ತೆಟಿಕ್ ಆರ್ಕಿಟೆಕ್ಸ್ನ ಖ್ಯಾತ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ನೇತೃತ್ವದ ತಂಡ ರಾಮಮಂದಿರದ ವಿನ್ಯಾಸ ಸಿದ್ಧಪಡಿಸುತ್ತಿದೆ. ಇದನ್ನೂ ಓದಿ: ಡ್ರಗ್ಸ್ ದಂಧೆ ಕೇಸ್ – ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು

    ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ (Ashwath Narayan) ಈ ಸಂಬಂಧ ಅಧಿಕಾರಿಗಳೊಂದಿಗೆ ಮೂರು ಸುತ್ತಿನ ಸಭೆ ನಡೆಸಿದ್ದು, ಸಾರ್ವಜನಿಕರಿಂದಲೂ ದೇಣಿಗೆ ಅಥವಾ ಅಗತ್ಯ ಸಾಮಗ್ರಿ ಸಂಗ್ರಹದ ಬಗ್ಗೆಯೂ ಚರ್ಚಿಸಿದ್ದಾರೆ.

    ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗೋದಕ್ಕೂ ಮುನ್ನವೇ ಮಾರ್ಚ್ 3ನೇ ವಾರದಲ್ಲಿ ರಾಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮೂಲಕ ಶಿಲಾನ್ಯಾಸಕ್ಕೆ ಪ್ಲಾನ್ ಮಾಡಲಾಗಿದೆ. ಇದನ್ನೂ ಓದಿ: 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ: ಸಂಡೂರಿನಲ್ಲಿ ಚಾಣಕ್ಯ ಕಿಡಿ

    ರಾಮಮಂದಿರದ ಜತೆಗೆ ಶ್ರೀರಾಮ ದ್ವಾರಾ, ರಾಮಮಂದಿರ ಪೆವಿಲಿಯನ್, ಅಶೋಕವನ, ಶ್ರೀರಾಮ ಪಥ ಮ್ಯೂಸಿಯಂ, ಜಟಾಯು ಗ್ಯಾಲರಿ ನಿರ್ಮಿಸಲು ಉದ್ದೇಶಿಸಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೊಮ್ಮಾಯಿ ಬಜೆಟ್ : ಶಂಕರ್ ನಾಗ್ ಹೆಸರಿನಲ್ಲಿ ಟ್ಯಾಕ್ಸಿ, ಆಟೋ ನಿಲ್ದಾಣ

    ಬೊಮ್ಮಾಯಿ ಬಜೆಟ್ : ಶಂಕರ್ ನಾಗ್ ಹೆಸರಿನಲ್ಲಿ ಟ್ಯಾಕ್ಸಿ, ಆಟೋ ನಿಲ್ದಾಣ

    ನ್ನಡ ಸಿನಿಮಾ ರಂಗದ ಹೆಸರಾಂತ ನಟ ಶಂಕರ್ ನಾಗ್ (Shankar Nag) ಅವರ ಹೆಸರಿನಲ್ಲಿ ಸರಕಾರ ಸಾಕಷ್ಟು ಕೆಲಸ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಅದರಲ್ಲೂ ಮೆಟ್ರೋ ನಿಲ್ದಾಣಗಳಿಗೆ ಅವರ ಹೆಸರು ಇಡಬೇಕು, ಶಂಕರ್ ಕನಸಿನ ನಂದಿಬೆಟ್ಟದಲ್ಲಿಯ ರೂಪ್ ವೇ ಚಾಲನೆ ಕೊಡಬೇಕು ಮತ್ತು ಅದಕ್ಕೆ ಶಂಕರ್ ನಾಗ್ ಅವರ ಹೆಸರನ್ನೇ ಇಡಬೇಕು ಎನ್ನುವುದು ಆಗ್ರಹವಾಗಿತ್ತು. ಕೊನೆಗೂ ಅದು ಹಾಗೆಯೇ ಉಳಿದುಕೊಂಡಿದೆ.

    ಆದರೆ, ಈ ಬಾರಿಯ ಬಜೆಟ್ (Karnataka Budget 2023) ನಲ್ಲಿ ಸರಕಾರವು ಶಂಕರ್ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಿದ್ದು, ಅದನ್ನು ಆಯವ್ಯಯ 2023-24ರಲ್ಲಿ ಸೇರಿಸಲಾಗಿದೆ. ನಗರ ಹಾಗೂ ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ, ಖ್ಯಾತ ನಟರಾದ ದಿವಗಂತ ಶಂಕರ್ ನಾಗ್ ಅವರ ಹೆಸರಿನಲ್ಲಿ ಟ್ಯಾಕ್ಸಿ (Taxi) ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದೆ.

    ಈಗಾಗಲೇ ಇರುವ ಬಹುತೇಕ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣಗಳಿಗೆ ಶಂಕರ್ ನಾಗ್ ಅವರ ಹೆಸರೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಶಂಕರ್ ನಾಗ್ ಆಟೋ ಅಥವಾ ಟ್ಯಾಕ್ಸಿ ನಿಲ್ದಾಣಗಳನ್ನು ನೋಡಬಹುದು. ಇದೀಗ ಬಜೆಟ್ ನಲ್ಲೂ ಇಂಥದ್ದೊಂದು ಯೋಜನೆಯನ್ನು ಘೋಷಿಸಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣ ಆಗಬೇಕು ಎನ್ನುವುದು ಶಂಕರ್ ನಾಗ್ ಅವರ ಕನಸಾಗಿತ್ತು. ಅದೀಗ ನನಸಾಗಿದೆ. ನಂದಿಬೆಟ್ಟದಲ್ಲಿ ರೂಪ್‍ ವೇ ಕೂಡ ಶಂಕರ್ ಕನಸು. ಇಂತಹ ದೊಡ್ಡ ಯೋಜನೆಗಳಿಗೆ ಶಂಕರ್ ನಾಗ್ ಹೆಸರನ್ನು ಇಡಲಿ ಎನ್ನುವುದು ಅವರ ಅಭಿಮಾನಿಗಳ ಆಗ್ರಹವಾಗಿತ್ತು. ಆದರೆ, ಬಜೆಟ್‍ ನಲ್ಲಿ ಇದ್ಯಾವುದೂ ಘೋಷಣೆಯಾಗಲಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Karnataka Budget 2023: ದೋಣಿಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಇಂಜಿನ್‌ ಅಳವಡಿಕೆಗೆ 50 ಸಾವಿರ ಸಹಾಯಧನ

    Karnataka Budget 2023: ದೋಣಿಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಇಂಜಿನ್‌ ಅಳವಡಿಕೆಗೆ 50 ಸಾವಿರ ಸಹಾಯಧನ

    ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ (Fish Boats) ಪೆಟ್ರೋಲ್/ಡೀಸೆಲ್ (Petrol, Diesel) ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು ಎಂದು ಬೊಮ್ಮಾಯಿ (Basavaraj Bommai) ಘೋಷಿಸಿದರು.

    ಸೀಮೆಎಣ್ಣೆ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಅದರ ಬೆಲೆಯ ಏರಿಳಿತದಿಂದ ದೋಣಿಗಾರರಿಗೆ ಉಂಟಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಮುಂದಿನ 2 ವರ್ಷಗಳಲ್ಲಿ ಎಲ್ಲಾ ಸೀಮೆಎಣ್ಣೆ ಆಧಾರಿತ ದೋಣಿಗಳಲ್ಲಿ ಪೆಟ್ರೋಲ್/ಡೀಸೆಲ್ ಆಧಾರಿತ ಮೋಟಾರ್ ಇಂಜಿನ್ ಅನ್ನು ಅಳವಡಿಸಲು ತಲಾ 50 ಸಾವಿರ ರೂ. ನಂತೆ ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ 40 ಕೋಟಿ ರೂ. ಗಳನ್ನು ಮೀಸಲಿಡಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದಿನ 2 ವರ್ಷಗಳ ಅವಧಿಗೆ ಸೀಮೆಎಣ್ಣೆ ಸಹಾಯಧನ ಮುಂದುವರೆಸಲಾಗುವುದು ಎಂದು ತಿಳಿಸಿದರು.

    ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಉತ್ತೇಜಿಸಲು 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನ ಮಂತ್ರಿ ʻಮತ್ಸ್ಯ ಸಂಪದʼ ಯೋಜನೆಯೊಂದಿಗೆ ಸಂಯೋಜಿಸಿ ʻ ಮತ್ಸ ಸಿರಿʼ ವಿಶೇಷ ಯೋಜನೆಯನ್ನು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ರೂಪಿಸಲಾಗಿದೆ. ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ದೋಣಿ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಇದನ್ನೂ ಓದಿ: Karnataka Budget 2023- ಪ್ರತಿ ಗ್ರಾಮ ಪಂಚಾಯತ್‍ಗೆ 60 ಲಕ್ಷ ರೂ.ಗಳಷ್ಟು ಅನುದಾನ

    ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಒಟ್ಟಾರೆ 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ. ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ 400 ಕೋಟಿ ರೂ. ಒದಗಿಸಲಾಗಿದೆ. ಕೃಷಿ ಯಾಂತ್ರೀಕರಣ ಉತ್ತೇಜಿಸಲು 2,037 ಕೋಟಿ ರೂ., ಒದಗಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ 2,900 ಕೋಟಿ ರೂ. ಮಾರುಕಟ್ಟೆ ನೆರವು ನೀಡಲಾಗಿದೆ ಹಾಗೂ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ 962 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಘೋಷಿಸಿದರು.

    ಇದರೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ʻಭೂ ಸಿರಿ’ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ ನೀಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್ ನ 7,500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ.

    ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಏಷ್ಯಾದಲ್ಲಿಯೇ 2ನೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟದಲ್ಲಿ ನಬಾರ್ಡ್ ಯೋಜನೆಯಡಿ 75 ಕೋಟಿ ರೂ. ಗಳ ವೆಚ್ಚದಲ್ಲಿ ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಿಸಲಾಗುವುದು. ಇದನ್ನೂ ಓದಿ: Karnataka Budget – ಟಾರ್ಗೆಟ್‌ ಮೀರಿ ಅಬಕಾರಿ ಆದಾಯ ಭರ್ಜರಿ ಸಂಗ್ರಹ

    ಆವರ್ತ ನಿಧಿಗೆ ಬಲ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಧಾನ್ಯಗಳಿಗೆ, ರೈತರಿಗೆ ತ್ವರಿತವಾಗಿ ಹಣಪಾವತಿ ಮಾಡಲು ಸ್ಥಾಪಿಸಿರುವ ಆವರ್ತ ನಿಧಿಯನ್ನು ನಮ್ಮ ಸರ್ಕಾರದ ಕಾಲಾವಧಿಯಲ್ಲಿ 2,000 ಕೋಟಿ ರೂ. ಗಳವರೆಗೆ ಹೆಚ್ಚಿಸಲಾಗುವುದೆಂದು 2020-21ನೇ ಸಾಲಿನಲ್ಲಿ ಘೋಷಿಸಲಾಗಿತ್ತು. ಪ್ರಸ್ತುತ ಆವರ್ತ ನಿಧಿ ಮತ್ತು ಕರ್ನಾಟಕ ಆಹಾರ ನಿಗಮಕ್ಕೆ ಧಾನ್ಯಗಳ ಖರೀದಿಗೆ ಬಿಡುಗಡೆ ಮಾಡಿರುವ ಅನುದಾನ ಸೇರಿ ಒಟ್ಟು 1,000 ಕೋಟಿ ರೂ. ಗಳಿದ್ದು, 2022-23ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 1.000 ಕೋಟಿ ಗಳನ್ನು ಒದಗಿಸಲಾಗಿದೆ. ಪ್ರಸಕ್ತ ಆಯವ್ಯಯದಲ್ಲಿ 1,500 ಕೋಟಿ ರೂ. ಗಳನ್ನು ಒದಗಿಸಿ, 3,500 ಕೋಟಿ ಗಳಿಗೆ ಏರಿಸಲಾಗುವುದು. ಇದು ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚಿನ ಗಾತ್ರದ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Karnataka Budget 2023- ಪ್ರತಿ ಗ್ರಾಮ ಪಂಚಾಯತ್‍ಗೆ 60 ಲಕ್ಷ ರೂ.ಗಳಷ್ಟು ಅನುದಾನ

    Karnataka Budget 2023- ಪ್ರತಿ ಗ್ರಾಮ ಪಂಚಾಯತ್‍ಗೆ 60 ಲಕ್ಷ ರೂ.ಗಳಷ್ಟು ಅನುದಾನ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಬಾರಿ ಮಂಡಿಸಿದ ರಾಜ್ಯ ಬಜೆಟ್‍ (Karnataka Budget 2023) ನಲ್ಲಿ ಪ್ರತಿ ಗ್ರಾಮ ಪಂಚಾಯತ್‍ಗೆ 22 ರಿಂದ 60 ಲಕ್ಷ ಅನುದಾನವನ್ನು ಘೋಷಣೆ ಮಾಡಿದ್ದಾರೆ.

    ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಮತ್ತು ಜನರಿಗೆ ಗ್ರಾಮ ಪಂಚಾಯಿತಿಗಳ ಮುಖಾಂತರ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅವಕಾಶ ಮಾಡಲಾಗುವುದು. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಗೆ, ಜನಸಂಖ್ಯೆ ಆಧರಿಸಿ 12 ಲಕ್ಷ ರೂ. ಗಳಿಂದ 35 ಲಕ್ಷ ರೂ. ಗಳವರೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ.

    2023-24ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ (Grama Panchayat) ಗೆ 22 ರಿಂದ 60 ಲಕ್ಷ ರೂ. ಗಳಷ್ಟು ಅನುದಾನ ಲಭ್ಯಪಡಿಸಲು 780 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ಒದಗಿಸಲಾಗುವುದು. ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರಸಕ್ತ ಸಾಲಿನಲ್ಲಿ 2,070 ಕೋಟಿ ರೂ. ಗಳ ವೆಚ್ಚದಲ್ಲಿ 4,504 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: Karnataka Budget 2023: ರೈತರಿಗೆ ಬಂಪರ್‌ ಗಿಫ್ಟ್‌ – 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ

    ಗ್ರಾಮೀಣ ಭಾಗದ ರಸ್ತೆಗಳ ಮತ್ತು ಕೃಷಿ ಭೂಮಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ, ನರೇಗಾ ಜೊತೆಗೆ ಸಂಯೋಜಿಸಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 25 ಕಿ.ಮೀ. ನಂತೆ ಒಟ್ಟಾರೆಯಾಗಿ 5,000 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು 300 ಕೋಟಿ ರೂ. ವೆಚ್ಚ ಮಾಡಲಾಗುವುದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳೆಯರ ಅನುಕೂಲಕ್ಕಾಗಿ ಬೆಂಗ್ಳೂರಿನಲ್ಲಿ 250 ಸುಸಜ್ಜಿತ ‘She Toilet’ ನಿರ್ಮಾಣ

    ಮಹಿಳೆಯರ ಅನುಕೂಲಕ್ಕಾಗಿ ಬೆಂಗ್ಳೂರಿನಲ್ಲಿ 250 ಸುಸಜ್ಜಿತ ‘She Toilet’ ನಿರ್ಮಾಣ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ 20203-24ನೇ ಸಾಲಿನ ಬಜೆಟ್ (Karnataka Budget 2023) ಮಂಡನೆ ಮಾಡುತ್ತಿದ್ದು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 9,698 ಕೋಟಿ ರೂ. ಗಳ ಅನುದಾನ ಘೋಷಿಸಿದರು.

    ಬೆಂಗಳೂರು ಮಹಾನಗರದ ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ ‘ She Toilet’ ಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಹೇಳಿದರು.

    ಈ ಸಂಕೀರ್ಣದಲ್ಲಿ ಶೌಚಾಲಯಗಳು, ಫೀಡಿಂಗ್ ರೂಂಗಳು, ಮೊಬೈಲ್ ಚಾರ್ಜಿಂಗ್, ತುರ್ತು ಎಸ್‍ಓಎಸ್ ಸೌಲಭ್ಯಗಳು ಇತ್ಯಾದಿಯನ್ನು ಒಳಗೊಂಡಂತೆ, ಆಧುನಿಕ ವಿನ್ಯಾಸದೊಂದಿಗೆ 50 ಕೋಟಿ ರೂ. ಗಳಲ್ಲಿ ನಿರ್ಮಿಸಲಾಗುವುದು. ಇದನ್ನೂ ಓದಿ: ಬಜೆಟ್: ಸಮಸ್ತ ಕರ್ನಾಟಕ ಜನತೆ ಹೆಸರಲ್ಲಿ ಅರ್ಚನೆ ಮಾಡಿಸಿದ ಸಿಎಂ

    ಒಟ್ಟಿನಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 20203-24ನೇ ಸಾಲಿಗೆ 9,698 ಕೋಟಿ ರೂ. ಗಳ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿ ಸರ್ಕಾರದ ಕಡೇ ಬಜೆಟ್- ಬೊಮ್ಮಾಯಿ ಬಜೆಟ್‌ನಲ್ಲಿ ಏನಿರಬಹುದು?

    ಬಿಜೆಪಿ ಸರ್ಕಾರದ ಕಡೇ ಬಜೆಟ್- ಬೊಮ್ಮಾಯಿ ಬಜೆಟ್‌ನಲ್ಲಿ ಏನಿರಬಹುದು?

    ಬೆಂಗಳೂರು: ಶುಕ್ರವಾರ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರಕ್ಕೆ ಕಡೆಯ ಬಜೆಟ್ (Budget), ಎಲೆಕ್ಷನ್ ಬಜೆಟ್. ಕಾಂಗ್ರೆಸ್ ಪ್ರಣಾಳಿಕೆಗೆ ಟಕ್ಕರ್ ಕೊಡುವ ಜನಪ್ರಿಯ ಯೋಜನೆಗಳನ್ನೊಳಗೊಂಡ ಬಜೆಟ್ ಕೊಡುವತ್ತ ಸಿಎಂ ಬೊಮ್ಮಾಯಿ ಚಿತ್ತವಿದೆ. ಎಲೆಕ್ಷನ್‌ಗೂ ಬೂಸ್ಟ್, ಪಕ್ಷಕ್ಕೂ ಬೂಸ್ಟ್ ಎಂಬ ಸೂತ್ರದ ಛಾಯೆ ಬಜೆಟ್ ಮೇಲೆ ಬೀಳುವ ಸಾಧ್ಯತೆಯಿದೆ.

    ವಿಧಾನಸಭೆಯಲ್ಲಿ ಶುಕ್ರವಾರ ಬೆಳಗ್ಗೆ 10:30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ 2ನೇ ಬಜೆಟ್ ಮಂಡಿಸಲಿದ್ದಾರೆ. ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿಗಿಂತ ಹೆಚ್ಚು ಸಂಗ್ರಹವಾಗಿದೆ ಎನ್ನಲಾಗಿದ್ದು, ಬಜೆಟ್ ಗಾತ್ರ ಸುಮಾರು 3 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ ಇದೆ. 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget 2023-24) ನಿರೀಕ್ಷೆಗಳೂ ಹೆಚ್ಚು, ಸವಾಲುಗಳೂ ಹೆಚ್ಚು. ಪಕ್ಕಾ ಚುನಾವಣಾ ಲೆಕ್ಕಾಚಾರಗಳೊಂದಿಗೆ ಆಯವ್ಯಯ ಮಂಡನೆಗೆ ಮುಂದಾಗಿದ್ದಾರೆ ಸಿಎಂ.

    ಉಚಿತ ಘೋಷಣೆಗಳನ್ನೂ ಒಳಗೊಂಡ ಜನತೆಗೆ ತೆರಿಗೆ ಹೊರೆ ಇಲ್ಲದ ಬಜೆಟ್ ಮಂಡನೆಗೆ ಪ್ಲಾನ್ ಮಾಡಿದ್ದು, ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಜನಪ್ರಿಯ ಉಚಿತ ಸ್ಕೀಮ್‌ಗಳೂ ಹೆಚ್ಚಿರುವ ಸಾಧ್ಯತೆ ಇದೆ. ರೈತರು, ಕಾರ್ಮಿಕರು, ಮಹಿಳೆಯರು, ಎಸ್‌ಸಿ, ಎಸ್‌ಟಿ, ಹಿಂದುಳಿದ ಜಾತಿ ವರ್ಗಗಳ ಕಲ್ಯಾಣಕ್ಕೆ ಒತ್ತು ಕೊಡುವ ಸಾಧ್ಯತೆ ಇದೆ.

    ಬೊಮ್ಮಾಯಿ ಬಜೆಟ್ ನಿರೀಕ್ಷೆಗಳೇನು?
    * ಕಾಂಗ್ರೆಸ್‌ನ ಗೃಹ ಲಕ್ಷ್ಮಿ ಯೋಜನೆಗೆ ಸೆಡ್ಡು ಹೊಡೆಯಲು ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
    * ಪ್ರತಿ ಕುಟುಂಬದ ಗೃಹಿಣಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಸ್ತ್ರೀ ಶಕ್ತಿ ಯೋಜನೆ ಜಾರಿ ಸಾಧ್ಯತೆ.
    * ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ 3 ಲಕ್ಷದದಿಂದ 5 ಲಕ್ಷ ರೂ.ಗೆ ಹೆಚ್ಚಳ ಸಾಧ್ಯತೆ.
    * ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘಗಗಳ ಮೂಲಕ ಸಾಲ ಯೋಜನೆ ಜಾರಿ ಸಾಧ್ಯತೆ.
    * ರಾಜ್ಯದೆಲ್ಲೆಡೆ ನಮ್ಮ ಕ್ಲಿನಿಕ್‌ಗಳ ಹೆಚ್ಚಳ, ಹೋಬಳಿ ಮಟ್ಟದ ತನಕ ನಮ್ಮ ಕ್ಲಿನಿಕ್.
    * ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ.
    * ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳ ಸ್ಥಾಪನೆ ಸಾಧ್ಯತೆ.
    * ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೆಚ್ಚು ಹಣ ಮೀಸಲಿಡುವ ಘೋಷಣೆ ಸಾಧ್ಯತೆ.
    * ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಯೋಜನೆ ಘೋಷಣೆ ಸಾಧ್ಯತೆ.
    * ಕುಲ ಕಸುಬು ಆಧಾರಿತ ಸಮುದಾಯಗಳಿಗೆ ಸಹಾಯಧನ ಸಾಧ್ಯತೆ.
    * ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ ಸಾಧ್ಯತೆ. ಇದನ್ನೂ ಓದಿ: ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

    ಈ ನಡುವೆ ಸಾಲ ಮನ್ನಾದಂತಹ ಬಜೆಟ್ ಘೋಷಣೆಗೆ ಕೈ ಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೆಲ ಅಭಿವೃದ್ಧಿ ನಿಗಮಗಳಲ್ಲಿ ಪಡೆದಿರುವ ಸಾಲಮನ್ನಾಗೆ ಬೇಡಿಕೆ ಪ್ರಸ್ತಾಪ ಇದೆ. ಆದರೆ ಕೆಲ ಸಬ್ಸಿಡಿ ಇಳಿಕೆ ವಿಚಾರದಲ್ಲಿ ಕ್ರಮಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರದ ನಿಲುವು, ಸಾಲಮನ್ನಾ ಯೋಜನೆಗಿಂತ ಸುಧಾರಣಾ ಕ್ರಮಗಳತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಒಲವು ವ್ಯಕ್ತಪಡಿಸಿರುವ ಕಾರಣದಿಂದಾಗಿ ಸಾಲಮನ್ನಾ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಬೊಮ್ಮಾಯಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    2018ರಲ್ಲಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪೂರ್ಣ ಆಗಲಿಲ್ಲ. ಸಿದ್ದರಾಮಯ್ಯ ಅಧಿಕಾರ ಹೋಗಿ ಇನ್ನೊಂದು ಬಜೆಟ್ ಬಂತು. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಇನ್ನೊಂದು ಬಜೆಟ್ ಆಗಿದ್ದು, ಅಂದು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದರು. ಹೀಗಾಗಿ ಬೊಮ್ಮಾಯಿ ಬಜೆಟ್ 4-5 ತಿಂಗಳ ಎಲೆಕ್ಷನ್ ಬಜೆಟ್ ಆಗಿದ್ದು, ಮುಂದೆಯೂ ಬಿಜೆಪಿ ಸರ್ಕಾರ ಬಂದರೆ ಮಾತ್ರ ಅವರ ಬಜೆಟ್ ಭದ್ರವಾಗಿರುತ್ತದೆ. ಒಟ್ಟಿನಲ್ಲಿ ಎಲೆಕ್ಷನ್ ಬಜೆಟ್ ಆದರೂ ಜನಪ್ರಿಯ ಯೋಜನೆಗಳ ಘೋಷಣೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಬೊಮ್ಮಾಯಿ ಕಡೆಯ ಆಟ ಹೇಗೆ ಜನರನ್ನು ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

    ಬಜೆಟ್‌ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ಅನುದಾನ: ಬೊಮ್ಮಾಯಿ ಭರವಸೆ

    ಬೆಂಗಳೂರು: ಆರ್ಯ ವೈಶ್ಯ ನಿಗಮ ಮಂಡಳಿ ಮತ್ತು ಬ್ರಾಹ್ಮಣ ನಿಗಮ ಮಂಡಳಿಗೆ (Brahmins Corporation Board) ಈ ಬಜೆಟ್ (Budget 2023) ನಲ್ಲಿ ತಲಾ 10 ಕೋಟಿ ಅನುದಾನ ನೀಡುತ್ತೇನೆ. ಸ್ಥಗಿತಗೊಂಡಿರೋ ವಿದ್ಯಾರ್ಥಿ ವೇತನ (Scholarship) ಬಿಡುಗಡೆಗೂ ಆದೇಶ ನೀಡುತ್ತೇನೆ ಅಂತಾ ಸಿಎಂ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ (JDS) ಸದಸ್ಯರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು. ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ. ಹೆಚ್ಚು ಅನುದಾನಕ್ಕೆ ಮನವಿ ಮಾಡಿದ್ದೇವೆ. ಆದರೂ ಅನುದಾನ ಕೊಟ್ಟಿಲ್ಲ. ಎರಡು ಸಮಾಜಕ್ಕೂ ಈ ಸರ್ಕಾರ ಅನ್ಯಾಯ ಮಾಡಿದೆ. ಕುಮಾರಸ್ವಾಮಿ (HD Kumaraswamy) ಸಿಎಂ ಆಗಿದ್ದಾಗ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಾಮನ್ ಸಿಎಂ ಎಲ್ಲಾ ವರ್ಗಕ್ಕೂ ಕಾಮನ್ ಸಿಎಂ ಆಗಿ ಕೆಲಸ ಮಾಡಬೇಕು ಆಗ್ರಹಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಕಳ್ಳತನ ತಡೆಯಲು ವಿಜಿಲೆನ್ಸ್ ಪಡೆ ಸ್ಥಾಪನೆ: ಬೊಮ್ಮಾಯಿ

    ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬ್ರಾಹ್ಮಣ ನಿಗಮದಲ್ಲಿ 6 ಕೋಟಿ ಇದೆ. ಇದನ್ನ ಬಳಕೆ ಮಾಡಿಕೊಳ್ಳಿ. ಆರ್ಯ ವೈಶ್ಯ ನಿಗಮದಲ್ಲಿ ಅನುದಾನ ಇದೆ. ಹೆಚ್ಚುವರಿ ಅನುದಾನ ಕೊಡ್ತೀವಿ. ಆರ್ಯ ವೈಶ್ಯ ನಿಗಮ ಉತ್ತಮವಾಗಿ ಕೆಲಸ ಮಾಡುತ್ತಿದೆ. ಎಲ್ಲವನ್ನೂ ಆನ್‌ಲೈನ್ ವ್ಯವಸ್ಥೆಯಲ್ಲಿ ಮಾಡುತ್ತಿದೆ. ಆರ್ಯ ವೈಶ್ಯ ನಿಗಮ ಮತ್ತು ಬ್ರಾಹ್ಮಣ ನಿಗಮಕ್ಕೆ ಈ ಬಜೆಟ್ ನಲ್ಲಿ ತಲಾ 10 ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಶುಕ್ರವಾರದ್ದು ಚುನಾವಣಾ ಪ್ರಣಾಳಿಕೆ ಬಜೆಟ್ ಎಂದು ನಮಗೆ ಗೊತ್ತಿದೆ: ಡಿ.ಕೆ ಶಿವಕುಮಾರ್

    ಅಲ್ಲದೇ ವಿದ್ಯಾರ್ಥಿ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೊಮ್ಮಾಯಿ ಬಜೆಟ್ – ಯುಪಿ ಮಾದರಿಯಲ್ಲಿ ಮಹಿಳೆಯರ ಮನ ಗೆಲ್ಲೋಕೆ ಪ್ಲಾನ್‌?

    ಬೊಮ್ಮಾಯಿ ಬಜೆಟ್ – ಯುಪಿ ಮಾದರಿಯಲ್ಲಿ ಮಹಿಳೆಯರ ಮನ ಗೆಲ್ಲೋಕೆ ಪ್ಲಾನ್‌?

    ಬೆಂಗಳೂರು: ಚುನಾವಣಾ ವರ್ಷದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಬಜೆಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಏಕೆಂದರೆ ಈ ಬಜೆಟ್‌ನಲ್ಲಿ (Karnataka Budget 2023) ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಸರ್ಕಾರ ಪ್ಲಾನ್‌ ಮಾಡಿದೆ ಎನ್ನಲಾಗುತ್ತಿದೆ.

    ಈಗಾಗಲೇ ಜೆಡಿಎಸ್ (JDS) ಪಂಚರತ್ನ ಯಾತ್ರೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ (Women Self Help Group Society) ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದೆ, ಕಾಂಗ್ರೆಸ್ (Karnataka Congress) ಅಧಿಕಾರಕ್ಕೆ ಬಂದ್ರೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನ ಘೋಷಣೆ ಮಾಡುವ ಮೂಲಕ ಮಹಿಳೆಯರ ಮನಗೆಲ್ಲೋಕೆ ಬೊಮ್ಮಾಯಿ ಪ್ಲಾನ್‌ ಮಾಡಿದ್ದಾರಾ? ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ.

    ಕೊರೊನಾ ಸಮಯದಲ್ಲಿ ಯೋಗಿ ಸರ್ಕಾರ (Uttar Pradesh Government) ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನ ಘೋಷಣೆ ಮಾಡಿತ್ತು. ಅದರಂತೆ ರಾಜ್ಯದಲ್ಲೂ ಮಹಿಳೆಯರ ಓಲೈಕೆಗೆ ಬೊಮ್ಮಾಯಿ ಪ್ಲಾನ್‌ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆ ಬಜೆಟ್ ನಲ್ಲಿ ಮಹಿಳೆಯರಿಗೆ ಈ ವರ್ಷ ಬಂಪರ್ ನಿರೀಕ್ಷೆಗಳ ಸಾಧ್ಯತೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

    ಬೊಮ್ಮಾಯಿ ಬಜೆಟ್ ಪ್ಲಾನ್‌ ಏನು?: ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಅಥವಾ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಅನುದಾನ ನೀಡುವ ಸಾಧ್ಯತೆ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ವಿಶೇಷ ಆರ್ಥಿಕ ಸಹಾಯ ಯೋಜನೆ ಜಾರಿ ಸಾಧ್ಯತೆ. ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ ಮಾಡೋ ಬಗ್ಗೆ ಚಿಂತನೆ. ಇದನ್ನೂ ಓದಿ: ಸೌಹಾರ್ದ ಕ್ರಿಕೆಟ್ ಆಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಜೆಪಿ ಕೇಂದ್ರ ಸಚಿವ

    ಮಹಿಳೆಯರ ಆರೋಗ್ಯಕ್ಕಾಗಿ ವಿಶೇಷ ಯೋಜನೆ ಘೋಷಣೆ ಸಾಧ್ಯತೆ. ರೈತ ಮಹಿಳೆ ಪ್ರೋತ್ಸಾಹ ಧನ, ಅಥವಾ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಘೋಷಣೆ ಸಾಧ್ಯತೆ. ಹಿಂದುಳಿದ ವರ್ಗದ ಮಹಿಳಾ ಉದ್ಯಮಿಗಳಿಗೆ ಉದ್ಯಮ ಪ್ರಾರಂಭಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ. ಪದವಿ ವಿದ್ಯಾರ್ಥಿನಿಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಹೆಚ್ಚಳ ಸಾಧ್ಯತೆ. ವಿಧವಾ ವೇತನ, ಅಸಿಡ್ ದಾಳಿಗೆ ಒಳಗಾದ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಶಾಸನ ಹೆಚ್ಚಳ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k