Tag: ಕರ್ನಾಟಕ ಬಜೆಟ್ 2018

  • ಹಾಸನದ ಬಜೆಟ್ ಅಂದ ಬಿಜೆಪಿಯವರಿಗೆ ಸಿಎಂ ಎಚ್‍ಡಿಕೆ ಖಡಕ್ ತಿರುಗೇಟು

    ಹಾಸನದ ಬಜೆಟ್ ಅಂದ ಬಿಜೆಪಿಯವರಿಗೆ ಸಿಎಂ ಎಚ್‍ಡಿಕೆ ಖಡಕ್ ತಿರುಗೇಟು

    ಬೆಂಗಳೂರು: ಹಾಸನದ ಬಜೆಟ್ ಅಂತ ಹೇಳುತ್ತಿರೋ ಬಿಜೆಪಿಯವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಿರುಗೇಟು ನೀಡಿದ್ದಾರೆ.

    ವಿಧಾನೌಧದಲ್ಲಿ ಮಾತನಾಡಿದ ಅವರು, ಇಂದು ಅವರು ಹಾಸನದ ಬಜೆಟ್ ಅಂತಾರೆ. ಹಾಸನದ ಹೊರ ವರ್ತುಲ ರಸ್ತೆಯ ಕಾಮಗಾರಿಗೆ 30 ಕೋಟಿ ಹಣ ಇಟ್ಟಿದ್ದೇವೆ. ಹಾಸನದ ಶಾಸಕರು ರೇವಣ್ಣ ಅವರಲ್ಲ ಅಂದ್ರು.

    ಹಾಸನದಲ್ಲಿರುವುದು ಬಿಜೆಪಿ ಶಾಸಕರು. ಹೀಗಾಗಿ ಬಿಜೆಪಿ ನಾಯಕರುಗಳಿಗೆ ಹೇಳುತ್ತಿದ್ದೇನೆ ಕಾಮಗಾರಿಗೆ ಇಟ್ಟಂತಹ ಹಣ ಬೇಡವೆಂದ್ರೆ ವಾಪಾಸ್ ತಗೋತೀವಿ. ಬಿಜೆಪಿ ಶಾಸಕರ ವಿರೋಧವಿದ್ರೆ, ಆ 30 ಕೋಟಿ ರೂ, ಪ್ರಾಜೆಕ್ಟ್ ನ ವಾಪಾಸ್ ತಗೋಬೇಕಾದ್ರೆ ತೆಗೆಯಲು ಸಿದ್ಧನಿದ್ದೇನೆ. ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಏನು ಕೊಟ್ಟಿದ್ದೇನೆ ನಾನು, ಎಲ್ಲವನ್ನು ಲೆಕ್ಕ ಹಾಕಿದ್ರೆ ಕೊಟ್ಟಿರುವಂತಹ ಹಣ 150 ರಿಂದ 200 ಕೋಟಿ ಬರಬಹುದು ಅಂತ ಹೇಳಿದ್ರು.

    ಎರಡು ತಿಂಗಳಾದ್ರೂ ಅವಕಾಶ ಕೊಡಿ. ಈಗಾಗ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳಾಗಿದೆ ಅಷ್ಟೇ. ಹೀಗಾಗಿ ಎರಡು ತಿಂಗಳು ಅವಕಾಶ ಕೊಡಿ. ಆಮೇಲೆ ನಮ್ಮ ಕಾರ್ಯಕ್ರಮಗಳನ್ನು ನೊಡಿವಿರಿ ಎಂದು ವಿರೋಧ ಪಕ್ಷದ ಅಂದ್ರೆ ಬಿಜೆಪಿ ಸದಸ್ಯರಿಗೆ ಹೇಳಿದ್ದೆ. ಆದ್ರೆ ಪಾಪ ಅವರು ರೈತರ ಸಾಲಮನ್ನಾ, ರೈತರ ಸಾಲಮನ್ನಾ ಅಂತ ಹೇಳಿಕೊಂಡು ಬಂದ್ರು. ನಾವು ಸಾಲಮನ್ನಾ ಘೋಷಣೆ ಮಾಡಿರುವುದು ಅಷ್ಟೇ ಅಲ್ಲ. ನಾವೇನು ಯೋಜನೆಗಳನ್ನು ಮಾಡಿದ್ದೇವೆ ಅನ್ನೋದರ ಕಾಪಿನೂ ನಮ್ಮಲ್ಲಿದೆ ಅಂತ ಕಿಡಿಕಾರಿದ್ರು.

    ಪ್ರತೀ ರೈತ ಯಾರು ಹಿಂದೆ ಸಾಲ ತೀರಿಸಿ ಮತ್ತೆ ಹೊಸದಾಗಿ ಸಾಲ ತೆಗೆದುಕೊಂಡಿದ್ದಾರೋ ಅವನ ಖಾತೆಗೂ 25 ಸಾವಿರಗಳನ್ನು ಹಾಕಲು ಕಾರ್ಯಕ್ರಮ ಕೊಟ್ಟಿದ್ದೇವೆ. ಇದು ನಾವು ಹೇಳದೇ ಇರುವಂತಹ ವಿಚಾರವಾಗಿದೆ. ಇದು ಪಾಪ ಬಿಜೆಪಿ ನಾಯಕರುಗಳಿಗೆ ಗೊತ್ತಿಲ್ಲ. ಓದಬೇಕಾದ್ರೆ ಅವರಿಗೆ ಅರ್ಥ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಪಾಪ ಓದಬೇಕಾದ್ರೆ ಅವರು ಯಾವ ಲೋಕದಲ್ಲಿ ಇದ್ರೋ ಗೊತ್ತಿಲ್ಲ ಅಂತ ಬಿಜೆಪಿ ವಿರುದ್ಧ ಗರಂ ಆದ್ರು.

  • ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಏನು ಸಿಕ್ಕಿದೆ? ಹೊಸ ಯೋಜನೆಗಳು ಏನು?

    ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಏನು ಸಿಕ್ಕಿದೆ? ಹೊಸ ಯೋಜನೆಗಳು ಏನು?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ನಲ್ಲಿ 2018-19ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 425 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಂಡಿಸಿದ್ದಾರೆ.

    ಹೊಸ ಯೋಜನೆಗಳು
    ಮಹಾಕವಿ ಕುವೆಂಪುರವರ ಮೈಸೂರಿನ ನಿವಾಸ `ಉದಯರವಿ’ಯನ್ನು ರಾಷ್ಟ್ರಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿ ಪಡಿಸುವುದು. ಮಹಾಕವಿಯ ದರ್ಶನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸ್ಮಾರಕದ ಉದ್ದೇಶ.

    ಭಾರತದ ಗ್ರಾಮೀಣ ಜನಪದ ಮತ್ತು ಸಾಂಸ್ಕೃತಿಕ ಕಲೆಗಳನ್ನು, ಕರ್ನಾಟಕದ ಜನರಿಗೆ ಹಾಗೂ ಕನ್ನಡ ನಾಡಿನ ಜನಪದ ಸಂಸ್ಕೃತಿಯನ್ನು ಇಡೀ ಭಾರತಕ್ಕೆ ಪರಿಚಯಿಸುವ `ಜನಪದ ಸಾಂಸ್ಕೃತಿಕ ಭಾರತ’ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನ.


    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು ಪ್ರಕಟಿಸಿರುವ ಪುಸ್ತಕಗಳನ್ನು ನಾಡಿನ ಜನತೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಪುಸ್ತಕ ಸಂಸ್ಕೃತಿ ಬೆಳೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ `ಪುಸ್ತಕ ಜಾಥಾ’ ಕಾರ್ಯಕ್ರಮವನ್ನು 1.5 ಕೋಟಿ ರೂ.ಗಳ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.

    ವಿವಿಧ ಅಕಾಡೆಮಿಗಳು ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನದ ಹೆಚ್ಚಳ.

    ಗಡಿ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ 50 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

    ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನವಾಗಿ ಅಧ್ಯಯನ ಪೀಠ ಸ್ಥಾಪನೆ.

    ಕನ್ನಡ ತಂತ್ರಾಂಶ ಅಭಿವೃದ್ಧಿ ಹಾಗೂ ಕನ್ನಡ ತಾಂತ್ರಿಕ ವಿಷಯಗಳಲ್ಲಿ ಸಂಶೋಧನೆ ನಡೆಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಫೆಲೋಷಿಪ್ ನೀಡುವುದು.

    ಕನ್ನಡದ ನವೋದಯ ಕಾವ್ಯದ ಪ್ರವರ್ತಕ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ `ಕಟ್ಟುವೆವು ನಾವು ಹೊಸ ನಾಡೊಂದನ್ನು’ ಎನ್ನುವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

    ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ ಮತ್ತು ರಂಗ ಶಿಕ್ಷಣಕ್ಕೆ ಅನುಕೂಲವಾಗುವಂತೆ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕೇಂದ್ರದ ಪ್ರಾರಂಭ.

  • ಸರ್ಕಾರಕ್ಕೆ ಒಂದು ರೂ. ಬಂದಿದ್ದು ಎಲ್ಲಿಂದ? ಎಲ್ಲಿಗೆ ಹೋಗಿದೆ?

    ಸರ್ಕಾರಕ್ಕೆ ಒಂದು ರೂ. ಬಂದಿದ್ದು ಎಲ್ಲಿಂದ? ಎಲ್ಲಿಗೆ ಹೋಗಿದೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ 1 ರೂ. ಬಂದಿದ್ದು ಹೇಗೆ, ಹೋಗಿದ್ದು ಎಲ್ಲಿಗೆ ಎಂಬುದರ ಮಾಹಿತಿ ಇಲ್ಲಿದೆ.

    ಸರ್ಕಾರಕ್ಕೆ 1 ರೂ. ಬಂದಿದ್ದು ಎಲ್ಲಿಂದ?
    ರಾಜ್ಯ ತೆರಿಗೆಯೇತರ ರಾಜಸ್ವ – 4 ಪೈಸೆ
    ಕೇಂದ್ರ ಸರ್ಕಾರದ ಅನುದಾನ – 7 ಪೈಸೆ
    ಕೇಂದ್ರ ತೆರಿಗೆ ಪಾಲು – 17 ಪೈಸೆ
    ಸಾರ್ವಜನಿಕ ಲೆಕ್ಕ(ನಿವ್ವಳ) – 3 ಪೈಸೆ
    ರಾಜ್ಯ ತೆರಿಗೆ ಆದಾಯದಿಂದ 50 ಪೈಸೆ ಜಿಎಸ್‍ಟಿ ನಷ್ಟ ಪರಿಹಾರ ಒಳಗೊಂಡಿದೆ.
    ಸಾಲ – 19 ಪೈಸೆ

     

    1 ರೂ. ಹೋಗಿದ್ದು ಎಲ್ಲಿಗೆ?
    ಅರೋಗ್ಯ – 4 ಪೈಸೆ
    ಇತರೆ ಸಾಮಾಜಿಕ ಸೇವೆಗಳು – 6 ಪೈಸೆ
    ಸಮಾಜ ಕಲ್ಯಾಣ – 9 ಪೈಸೆ
    ಸಾಲ ತೀರಿಕೆ – 13 ಪೈಸೆ
    ಶಿಕ್ಷಣ – 12 ಪೈಸೆ
    ನೀರು ಪೂರೈಕೆ ಮತ್ತು ನೈರ್ಮಲ್ಯ – 3 ಪೈಸೆ
    ಇತರೆ ಸಾಮಾನ್ಯ ಸೇವೆಗಳು – 17 ಪೈಸೆ
    ಕೃಷಿ, ನೀರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ -20 ಪೈಸೆ
    ಇತರೆ ಆರ್ಥಿಕ ಸೇವೆಗಳು – 15 ಪೈಸೆ

  • 2018-19ನೇ ಸಾಲಿನ ಹೊಸ ಯೋಜನೆಗಳು- ಸಾಫ್ಟ್ ವೇರ್, ವಿಜ್ಞಾನಕ್ಕೆ ಏನು ಸಿಕ್ಕಿದೆ?

    2018-19ನೇ ಸಾಲಿನ ಹೊಸ ಯೋಜನೆಗಳು- ಸಾಫ್ಟ್ ವೇರ್, ವಿಜ್ಞಾನಕ್ಕೆ ಏನು ಸಿಕ್ಕಿದೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯ ಕೊನೆಯ ಬಜೆಟ್ ನ್ನು ಇಂದು ಮಂಡಿಸಿದರು. ಚುನಾವಣೆಯನ್ನು ದೃಷ್ಟಿಯಲ್ಲಿಯೇ ಬಜೆಟ್‍ನ್ನು ಮಂಡಿಸಲಾಗಿದೆ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟಾರೆಯಾಗಿ 247 ಕೋಟಿ ರೂ.ಗಳನ್ನು ಅನುದಾನವನ್ನು ಮೀಸಲಿರಿಸಲಾಗಿದೆ.

    ರಾಜ್ಯದಲ್ಲಿ ನವೋದ್ಯಮಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಕಲಬುರಗಿಯಲ್ಲಿ ದೇಶ್‍ಪಾಂಡೆ ಫೌಂಡೇಷನ್‍ರವರ ಸಹಯೋಗದೊಂದಿಗೆ ಒಂದು ಇನ್‍ಕ್ಯೂಬೇಷನ್ ಸೆಂಟರ್ ಅನ್ನು 5 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ.

    ಹಾರ್ಡ್‍ವೇರ್ ಉಪಕರಣಗಳು ಮತ್ತು ಸೆಮಿಕಂಡಕ್ಟರ್ ಚಿಪ್‍ಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು India Electronics and Semiconductor Association (IESA) ಸಹಯೋಗದೊಂದಿಗೆ Semiconductor fabless Accelerator Lab (SFAL)ನ್ನು ಸ್ಥಾಪನೆ.

    ಕೃಷಿ ವಲಯದಲ್ಲಿ ವಿಶ್ವಾಸಪೂರ್ವಕ ನವೀನ ಆವಿಷ್ಕಾರಗಳನ್ನು ಉತ್ತೇಜಿಸುವ ಹಾಗೂ ಪೋಷಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಂಸ್ಥೆಯಾದ Centre for Cellular and Molecular Platforms (C-CAMP)ನ ಸಹಯೋಗದೊಂದಿಗೆ ಅಗ್ರಿ-ಇನ್ನೋವೇಷನ್ ಕೇಂದ್ರವೊಂದನ್ನು ಸ್ಥಾಪನೆ. ರಾಜ್ಯದಲ್ಲಿ ವಿವಿಧ ವಲಯಗಳಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ನಾವೀನ್ಯತಾ ಪ್ರಾಧಿಕಾರ’ Karnataka Innovation Authority (KIA)ವನ್ನು ಸ್ಥಾಪನೆ.

    ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು/ ಉದ್ದಿಮೆಗಳು/ ನವೋದ್ಯಮಗಳನ್ನು ವಿಶೇಷ ಗಮನದಲ್ಲಿ ಇಟ್ಟುಕೊಂಡು ಉತ್ಪನ್ನ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಐಪಿ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಹೊಸ ಯೋಜನೆಯನ್ನು ಪ್ರಾರಂಭ. ಪೇಟೆಂಟ್‍ಗಳ ವಿವರಗಳನ್ನು ಒಂದೆಡೆ ಸಂಗ್ರಹಿಸಿ ತಾಳೆ ನೋಡಲು ಹಾಗೂ ಪೇಟೆಂಟ್ ವಿನಿಮಯಕ್ಕೆ ಅನುಕೂಲವಾಗುವಂತೆ ಪೇಟೆಂಟ್‍ಗಳ ಭಂಡಾರವನ್ನು ಸೃಜನೆಗೆ ನಿಧಿ ಮೀಸಲು. ಇದು ನಾವಿನ್ಯತೆಯನ್ನು ಉತ್ತೇಜಿಸಲು ನೆರವಾಗಲಿದೆ. ಉದ್ಯಮಗಳ ವಿನ್ಯಾಸ ಹಾಗೂ ಉತ್ಪನ್ನಗಳ ವಿನ್ಯಾಸವನ್ನು ಉತ್ತೇಜಿಸುವ ಉದ್ದೇಶದಿಂದ ‘ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಡಿಸೈನ್’ಅನ್ನು ಸ್ಥಾಪನೆ. ಸೂಕ್ತ ಕಾನೂನು ಜಾರಿಯಾಗುವವರೆಗೆ ಹೊಸ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಕಾನೂನಿನ ಚೌಕಟ್ಟಿನೊಳಗೆ ತರುವ ಉದ್ದೇಶದಿಂದ ‘ಲೀಗಲ್ ಫ್ರೇಮ್‍ವರ್ಕ್ ಫಾರ್ ಇನ್ನೊವೇಶನ್’ಅನ್ನು ಸ್ಥಾಪಿಸಲಾಗುವುದು. ಇದರಿಂದ ಅಂತಹ ತಂತ್ರಜ್ಞಾನಗಳನ್ನು ರಾಜ್ಯದಲ್ಲಿ ಅಳವಡಿಸಲು ಅನುಕೂಲವಾಗಲಿದೆ.

    ದೀರ್ಘ ಅವಧಿಯ ಹೆರಿಗೆ ರಜೆ ಅಥವಾ ವ್ಯಾಸಂಗ ರಜೆಯಲ್ಲಿ ತೆರಳುವ ಐಟಿ ವಲಯದ ಮಹಿಳೆಯರು ಮತ್ತೆ ಉದ್ಯೋಗ ಕೈಗೊಳ್ಳಲು ಆತ್ಯಾಧುನಿಕ ತಂತ್ರಜ್ಞಾನದ ಕೌಶಲ್ಯದ ಕೊರತೆ ಅಡ್ಡಿಯಾಗುತ್ತಿರುವುದು ಕಂಡುಬಂದಿದೆ. ಇಂತಹ ಮಹಿಳೆಯರಿಗೆ ನೆರವಾಗಲು ಅವರ ಕೌಶಲ್ಯ ಅಭಿವೃದ್ಧಿಗೆ ನಿರ್ದಿಷ್ಟ ಕಾರ್ಯಕ್ರಮಗಳ ರಚನೆ. ವಿಜ್ಞಾನ ಮತ್ತು ಎಂಜಿನಿಯರಿಂಗ್‍ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನವನ್ನು ಪ್ರಾರಂಭಿಸಲು 1 ಕೋಟಿ ರೂ. ಅನುದಾನ.

    ಬೆಳಗಾವಿಯಲ್ಲಿ 3 ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ 3-ಡಿ ತಾರಾಲಯವನ್ನು ನಿರ್ಮಾಣ. 2018-19ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಒಟ್ಟಾರೆಯಾಗಿ 247 ಕೋಟಿ ರೂ. ಹಣ ಮೀಸಲು.

     

  • ಪ್ರಾಣಿ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 2 ಸಾವಿರ ರೂ. ಮಾಸಾಶನ- ಅರಣ್ಯ ಇಲಾಖೆಯ ಹೊಸ ಯೋಜನೆಗಳು ಇಲ್ಲಿವೆ

    ಪ್ರಾಣಿ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ 2 ಸಾವಿರ ರೂ. ಮಾಸಾಶನ- ಅರಣ್ಯ ಇಲಾಖೆಯ ಹೊಸ ಯೋಜನೆಗಳು ಇಲ್ಲಿವೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವು ಹೊಸ ಯೋಜನೆಗಳನ್ನ ಘೋಷಣೆ ಮಾಡಲಾಗಿದೆ. ಇಲಾಖೆಗೆ ಒಟ್ಟಾರೆ 1,949 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

    2018-19ನೇ ಸಾಲಿನ ಹೊಸ ಯೋಜನೆಗಳು:
    * ಸರ್ಕಾರ ನದಿಗಳನ್ನು ಸಂರಕ್ಷಿಸಲು ಉದ್ದೇಶಿಸಿದ್ದು, ನದಿಗಳ ಜಲಾನಯನ ಪ್ರದೇಶವನ್ನು ಜಲಾನಯನ ತತ್ವದ ಆಧಾರದನ್ವಯ ಉಪಚರಿಸಿ ನದಿಗಳ ಇಕ್ಕೆಲಗಳಲ್ಲಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಇಲಾಖೆಗಳ, ಸರ್ಕಾರೇತರ ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಬೃಹತ್ ಪ್ರಮಾಣದ ಗಿಡ ನೆಡುವ ಕಾರ್ಯಕ್ರಮ.
    * ಇದರಿಂದ ನದಿಗಳ ನೀರಿನ ಸೆಲೆ ಮತ್ತು ನೀರಿನ ಒಳಹರಿವು ಹೆಚ್ಚಳ. 10 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಕ್ರಮ.
    * ರೈತರು ಬೆಳೆದ ಮರಗಳ ಮಾರಾಟದಲ್ಲಿನ ಅಡಚಣೆಗಳನ್ನು ನಿವಾರಿಸಿ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಮರ ಸಂಗ್ರಹಾಲಯಗಳ ಸ್ಥಾಪನೆ.

     

    * ರೈತರು ಬೆಳೆದ ಮರಗಳನ್ನು ಡಿಪೋಗಳಲ್ಲಿ ಅರಣ್ಯ ಇಲಾಖೆ ಮತ್ತು ಎ.ಪಿ.ಎಂ.ಸಿ.ಯ ಸಮನ್ವಯದೊಂದಿಗೆ ಬಹಿರಂಗ ಹರಾಜಿನಲ್ಲಿ ಮಾರಾಟ- 5 ಕೋಟಿ ರೂ. ಅನುದಾನ.
    * ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪ್ರಸ್ತುತ ನೀಡುತ್ತಿರುವ 5 ಲಕ್ಷ ರೂ. ಎಕ್ಸಗ್ರೇಷಿಯಾ ಜೊತೆಗೆ ಮೃತರ ಕುಟುಂಬಕ್ಕೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನ.
    * ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿಯ ಅನುದಾನದಡಿಯಲ್ಲಿ 96 ಕೋಟಿ ರೂ.ಗಳ ವೆಚ್ಚದಲ್ಲಿ 42 ನಿರಂತರ ಪರಿವೇಷ್ಟಕ ವಾಯುಗುಣಮಟ್ಟ ಮಾಪನ ಕೇಂದ್ರಗಳ(Continuous Air Quality Monitoring Stations) ಸ್ಥಾಪನೆ.

  • ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ರಾಜ್ಯ ಬಜೆಟ್ 2018- ಸಾಲ ಮನ್ನಾ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಸಾಲದಿಂದ ಬೇಸತ್ತ ರೈತರಿಗೆ ಸಿಹಿ ¸ಸುದ್ದಿ ನೀಡಿದ್ದಾರೆ. ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ಹಲವು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಗೆ ಒಟ್ಟು 5,849 ಕೋಟಿ ರೂ. ಒದಗಿಸಲಾಗಿದೆ.

    ಸತತ ಬರಗಾಲದಿಂದ ಕಂಗೆಟ್ಟ ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಸರ್ಕಾರ 8165 ಕೋಟಿ ರೂ. ವೆಚ್ಚದಲ್ಲಿ ಸಾಲ ಮನ್ನಾ ಯೋಜನೆ ಘೋಷಿಸಿದೆ.

    ಇದರಿಂದ ರಾಜ್ಯದಲ್ಲಿ 22,27,506 ರೈತರಿಗೆ ಅನುಕೂಲವಾಗಿದೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ.

    ಸಾಲ ಮನ್ನಾ ಪ್ರಮುಖ ಅಂಶಗಳು ಹೀಗಿವೆ:
    2015ರ ಸೆಪ್ಟೆಂಬರ್ 30ಕ್ಕೆ ಸುಸ್ತಿಯಾಗಿರುವ ಎಲ್ಲಾ ಬಗೆಯ ಕೃಷಿ ಸಾಲಗಳ ಅಸಲನ್ನು 2017ರ ಮಾರ್ಚ್ 31ರೊಳಗೆ ಪಾವತಿಸದ ರೈತರ 124.70 ಕೋಟಿ ರೂ. ಮೊತ್ತದ ಪೂರ್ಣ ಬಡ್ಡಿ ಮನ್ನಾ.
    ಕಳೆದ 4 ವರ್ಷಗಳ ಅವಧಿಯಲ್ಲಿ 10.7 ಲಕ್ಷ ರೈತರ 2359 ಕೋಟಿ ರೂ. ಬಡ್ಡಿ ಮನ್ನಾ
    2017ರ ಜೂನ್ 20ಕ್ಕೆ ಅನ್ವಯವಾಗುವಂತೆ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ. ವರೆಗಿನ ಸಾಲ ಮನ್ನಾ.
    ಇದರಿಂದ ರಾಜ್ಯದ 22,27,506 ರೈತರ ಒಟ್ಟು 8165 ಕೋಟಿ ರೂ. ಸಾಲ ಮನ್ನಾ ಆಗಿದೆ.

    ಹೊಸ ಯೋಜನೆಗಳು:
    ಕೃಷಿ ಹೊಂಡಗಳು ಮತ್ತು ಪಾಲಿ ಹೌಸ್ ಗಳ ನಿರ್ಮಾಣ, ಮಣ್ಣು ಕಾರ್ಡ್ ವಿತರಣೆ.
    ಹನಿ ನೀರಾವರಿಗೆ ಎಲ್ಲಾ ವರ್ಗದ ರೈತರಿಗೂ 90% ಸಹಾಯಧನ, ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ಕೃಷಿ ಸಲಕರಣೆ ಬಾಡಿಗೆಗೆ ನೀಡಿಕೆ, ಹಾಲು ಉತ್ಪಾದನಾ ಸಹಾಯಧನ.
    ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಸ್ಥಾಪನೆ.
    ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಕೋಟಿ ರೂ. ವೆಚ್ಚದಲ್ಲಿ ಗೋದಾಮು ನಿರ್ಮಾಣ.
    ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ನೀಡಲಾಗ್ತಿದೆ. ಇದರ ಜೊತೆ 3% ಬಡ್ಡಿ ದರದಲ್ಲಿ 3 ರಿಂದ 10 ಲಕ್ಷದವರೆಗೆ ಸಾಲ.

    ಖುಷ್ಕಿ ಭೂಮಿಯ ಸಂಕಷ್ಟಗಳನ್ನ ನೇರವಾಗಿ ಪರಿಹರಿಸಲು ರೈತರಿಗೆ ನೇರ ಆದಾಯ ನೆರವು ನೀಡುವ ‘ರೈತ ಬೆಳಕು’ ಎಂಬ ವಿಶಿಷ್ಟ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾರಂಭ.
    2018-19ರಿಂದ ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಪ್ರತಿ ವರ್ಷ ಪ್ರತಿ ರೈತನಿಗೆ ಗರಿಷ್ಠ 10 ಸಾವಿರ ರೂ.
    ಪ್ರತಿ ಹೆಕ್ಟೇರ್‍ಗೆ 5 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ವರ್ಗಾವಣೆ.
    ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ. ಖರ್ಚು, ಅಂದಾಜು 70 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನ.

    ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2018-19ನೇ ಸಾಲಿಗೆ ರಾಜ್ಯದ ಪಾಲು ಭರಿಸಲು 845 ಕೋಟಿ ರೂ. ಅನುದಾನ.
    2018-19ನೇ ಸಾಲಿನಲ್ಲಿ ಸಿರಿಧಾನ್ಯಗಳ ವಿಸ್ತೀರ್ಣ 60 ಸಾವಿರ ಹೆಕ್ಟೇರ್‍ಗೆ ಹೆಚ್ಚಿಸಲು ವಿಶೇಷ ಕಾರ್ಯಕ್ರಮ- 24 ಕೋಟಿ ರೂ. ಅನುದಾನ.
    ನೆಲಗಡಲೆ ಬೆಳೆಯುವ ರೈತರಿಗೆ 50 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್.
    ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ ನೀಡಲು 20 ಕೋಟಿ ರೂ.
    ಕೃಷಿ ಚಟುವಟಿಕೆ ಸಮಯದಲ್ಲಿ ಹಾವು ಕಡಿತದಿಂದ ಆಕಸ್ಮಿಕ ಮರಣ ಹೊಂದಿದ ರೈತರ ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ನೀಡುತ್ತಿರುವ ಪರಿಹಾರ 2 ಲಕ್ಷ ರೂ.ಗೆ ದ್ವಿಗುಣ
    ಹುಲ್ಲು ಮೆದೆ/ಬಣವೆಗಳು ಆಕಸ್ಮಿಕ ಬೆಂಕಿಯಿಂದ ನಷ್ಟವಾಗುವ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರ ದ್ವುಗುಣ- ಗರಿಷ್ಠ 20 ಸಾವಿರ ರೂ.
    ಚಾಮರಾಜನಗರದಲ್ಲಿ ನೂತನ ಕರಷಿ ಕಾಲೇಜು ಸ್ಥಾಪನೆ.