Tag: ಕರ್ನಾಟಕ ಬಂದ್

  • ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್

    ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್

    ಕೊಪ್ಪಳ: ಡಿವೈಎಸ್‍ಪಿ ಕೊರಳಪಟ್ಟಿ ಹಿಡಿದು ಜಗ್ಗಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸಂಗಣ್ಣ ಕರಡಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಸೋಮವಾರ ಕರ್ನಾಟಕ ಬಂದ್ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಸಂಸದರು ಹಾಗೂ ಸಂಸದರ ಪುತ್ರ ಪೊಲೀಸರ ವಿರುದ್ಧ ಗಲಾಟೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ನಗರ ಠಾಣೆಯ ಸಿಪಿಐ ರವಿ ಉಕ್ಕುಂದ ದೂರು ನೀಡಿದ್ದರು.

    ರವಿ ಉಕ್ಕುಂದ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಠಾಣೆಯಲ್ಲಿ ಸಂಸದ ಸಂಗಣ್ಣ ಕರಡಿ, ಪುತ್ರ ಅಮರೇಶ್ ಕರಡಿ ಸೇರಿದಂತೆ 38 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

     

    ಸೋಮವಾರ ಬೆಳಗ್ಗೆ ಒತ್ತಾಯಪೂರ್ವಕವಾಗಿ ಬಿಜೆಪಿಯವರು ಅಂಗಡಿಗಳನ್ನು ಬಂದ್ ಮಾಡಿಸಿದ್ದರು. ಈ ವೇಳೆಯಲ್ಲಿ ಪರವಾನಿಗೆ ಇಲ್ಲದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅನುಮತಿ ಪಡೆಯದ ಹಿನ್ನೆಲೆ ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಂಸದ ಸಂಗಣ್ಣ ಕರಡಿ ಮತ್ತು ಪುತ್ರ ಅಮರೇಶ್, ಪೊಲಿಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಠಾಣೆಯಲ್ಲಿ ಕರ್ತವ್ಯ ನಿರತ ಡಿವೈಎಸ್‍ಪಿ ಎಸ್ ಎಮ್ ಸಂದಿಗವಾಡ್ ಅವರನ್ನು ಸಂಗಣ್ಣ ಕರಡಿ ಎಳೆದಾಡಿದ್ದಾರೆ. ಇತ್ತ ತಂದೆ ಜೊತೆಯಲ್ಲಿದ್ದ ಪುತ್ರ ಸಹ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.

  • ಪೊಲೀಸ್ರಿಗೆ ಅವಾಜ್ ಹಾಕಿ ಬಲವಂತವಾಗಿ ವಾಹನ ತಡೆದ ಕೆಜಿ ಬೋಪಯ್ಯ

    ಪೊಲೀಸ್ರಿಗೆ ಅವಾಜ್ ಹಾಕಿ ಬಲವಂತವಾಗಿ ವಾಹನ ತಡೆದ ಕೆಜಿ ಬೋಪಯ್ಯ

    ಮಡಿಕೇರಿ: ಇಂದು ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ವ್ಯಾಪಕ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸುವ ಪ್ರಯತ್ನ ಮಾಡ್ತಿದ್ದಾರೆ.

    ಇಂದು ಬೆಳಗ್ಗೆಯಿಂದಲೂ ಮಡಿಕೇರಿ ನಗರಕ್ಕೆ ಆಗಮಿಸುತ್ತಿರುವ ವಾಹನಗಳನ್ನು ಶಾಸಕ, ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಡೆಯುತ್ತಿದ್ದಾರೆ. ಶಾಸಕರು ಬಲವಂತವಾಗಿ ವಾಹನಗಳನ್ನು ತಡೆಯುತ್ತಿದ್ದರಿಂದ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ರು. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ರು ಲೆಕ್ಕಿಸದ ಮಾಜಿ ಸ್ಪೀಕರ್ ವಾಹನಗಳನ್ನು ತಡೆಯುತ್ತಿದ್ದಾರೆ.

    ಮುಖ್ಯಮಂತ್ರಿಗಳು ನುಡಿದಂತೆ ನಡೆಯಬೇಕು. ಚುನಾವಣಾ ಪೂರ್ವದಲ್ಲಿ ಹೇಳಿದಂತೆ ಸಾಲಮನ್ನಾ ಮಾಡಬೇಕು. ಜಿಲ್ಲೆಯ ಎಲ್ಲ ರೈತರು, ಸ್ಥಳೀಯರು ಸ್ಪಂದನೆ ಮಾಡಿದ್ದಾರೆ. ಆದ್ರೆ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚಾಗಿದೆ. ಪೊಲೀಸರು ಪ್ರವಾಸಿಗರ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ. ಪೊಲೀಸರ ದಬ್ಬಾಳಿಕೆಗೆ ಹೆದರುವವರು ನಾವಲ್ಲ ಅಂತಾ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

    ವಾಹನಗಳ ತಡೆಯಿಂದ ಪ್ರಯಾಣಿಕರು ಅನುಭವಿಸುವಂತಾಗಿದೆ. ಸ್ಥಳದಲ್ಲಿ 20ಕ್ಕೂ ಅಧಿಕ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದ್ದಾರೆ.

  • ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ – ಡಿವೈಎಸ್‍ಪಿ ಮೇಲೆ ಕೈ ಮಾಡಿದ ಸಂಸದ ಸಂಗಣ್ಣ ಕರಡಿ

    ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಹೈಡ್ರಾಮ – ಡಿವೈಎಸ್‍ಪಿ ಮೇಲೆ ಕೈ ಮಾಡಿದ ಸಂಸದ ಸಂಗಣ್ಣ ಕರಡಿ

    – ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪುತ್ರ ಅಮರೇಶ್ ಕರಡಿ

    ಕೊಪ್ಪಳ: ಬಿಜೆಪಿಯವರ ಆಟೋ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ನೂರಾರು ಬೆಂಬಲಿಗರೊಂದಿಗೆ ನಗರ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಸಂಸದ ಸಂಗಣ್ಣ ಕರಡಿ ಮತ್ತು ಪುತ್ರ ಅಮರೇಶ್, ಪೊಲಿಸರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಠಾಣೆಯಲ್ಲಿ ಕರ್ತವ್ಯ ನಿರತ ಡಿವೈಎಸ್‍ಪಿ ಎಸ್ ಎಮ್ ಸಂದಿಗವಾಡ್ ಅವರನ್ನು ಸಂಗಣ್ಣ ಕರಡಿ ಎಳೆದಾಡಿದ್ದಾರೆ. ಇತ್ತ ತಂದೆ ಜೊತೆಯಲ್ಲಿದ್ದ ಪುತ್ರ ಸಹ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

    ಬೆಳಗ್ಗೆ ಒತ್ತಾಯಪೂರ್ವಕವಾಗಿ ಬಿಜೆಪಿಯವರು ಅಂಗಡಿಗಳನ್ನು ಬಂದ್ ಮಾಡಿಸ್ತಿದ್ರು. ಈ ವೇಳೆಯಲ್ಲಿ ಪರವಾನಿಗೆ ಇಲ್ಲದ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ನಗರ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನಗರ ಠಾಣೆಯ ಇನ್ಸ್ ಪೆಕ್ಟರ್ ರವಿ ಉಕ್ಕುಂದ ವಿರುದ್ಧ ಘೋಷಣೆ ಕೂಗಿದ್ದಾರೆ. ನಗರ ಠಾಣೆಯ ಬಾಗಿಲು ಮುಂದೆ ಕುಳಿತು ಸಂಸದ ಸಂಗಣ್ಣ ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕಲ್ಲು – ಧಾರವಾಡದಲ್ಲಿ ಬಸ್ ಮೇಲೆ ಕಲ್ಲು ತೂರಾಟ

    ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟೀನ್‍ಗೆ ಕಲ್ಲು – ಧಾರವಾಡದಲ್ಲಿ ಬಸ್ ಮೇಲೆ ಕಲ್ಲು ತೂರಾಟ

    – ದಾವಣಗೆರೆಯಲ್ಲಿ ಪೊಲೀಸರ ಜೊತೆ ಬಿಜೆಪಿ ಜಟಾಪಟಿ

    ಚಿತ್ರದುರ್ಗ/ ಧಾರವಾಡ / ದಾವಣಗೆರೆ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕಾರದ 24 ಗಂಟೆಯೊಳಗೆ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿ ಈಗ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಇಂದು ಬಿಜೆಪಿ ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವಡೆ ಕಲ್ಲು ತೂರಾಟ ಸಹ ನಡೆದಿದೆ.

    ಧಾರವಾಡದಲ್ಲಿ ಒತ್ತಾಯಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸಲು ಯತ್ನಿಸಿದ್ದಾರೆ. ಮೂರು ಬಸ್‍ಗಳ ಮೇಲೆ ಕಲ್ಲು ತೂರಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ಬಸ್‍ಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಈ ವೇಳೆ ನಗರದ ಕೋರ್ಟ್ ವೃತ್ತದಲ್ಲಿ ಪ್ರಯಾಣಿಕರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

    ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಜಕರ್ತರು ದಾಂಧಲೆ ನಡೆಸಿದ್ದಾರೆ. ಇಲ್ಲಿನ ಯೂನಿಯನ್ ಪಾರ್ಕ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಿಜೆಪಿ ಕಾರ್ಯಕರ್ತರಾದ ಶಂಭು, ಮಂಜು, ರವಿ ಎಂಬವರನ್ನ ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ದಾವಣಗೆರೆಯಲ್ಲಿ ಸಹ ಒತ್ತಾಯಪೂರ್ವಕ ಬಂದ್ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಬಂದ್ ಮಾಡದಂತೆ ಸೂಚನೆ ನೀಡಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

  • ಪ್ರತಿಭಟನೆಯಲ್ಲಿ ಟೈರ್ ಒದೆಯಲು ಹೋಗಿ ಕಾರ್ಯಕರ್ತನ ಕಾಲಿಗೆ ತಗುಲಿದ ಬೆಂಕಿ!

    ಪ್ರತಿಭಟನೆಯಲ್ಲಿ ಟೈರ್ ಒದೆಯಲು ಹೋಗಿ ಕಾರ್ಯಕರ್ತನ ಕಾಲಿಗೆ ತಗುಲಿದ ಬೆಂಕಿ!

    ಧಾರವಾಡ: ಬಂದ್ ಪ್ರತಿಭಟನೆಯಲ್ಲಿ ಟೈರ್ ಗೆ ಬೆಂಕಿ ಹಚ್ಚುವ ವೇಳೆ ಕಾರ್ಯಕರ್ತನ ಕಾಲಿಗೆ ಆ ಬೆಂಕಿ ತಗುಲಿದ ಘಟನೆ ನಗರದ ಜ್ಯೂಬಿಲಿ ಸರ್ಕಲ್‍ನಲ್ಲಿ ನಡೆದಿದೆ.

    ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಸಾಲಮನ್ನಾ ಮಾಡದ್ದಕ್ಕೆ ಬಿಜೆಪಿ ಇಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಬಸವರಾಜ್ ಇಂದೂರ ಹೊತ್ತಿ ಉರಿಯುತ್ತಿದ್ದ ಟೈರ್ ಗೆ ಒದೆಯಲು ಹೋಗಿ ಬಲಗಾಲಿಗೆ ಬೆಂಕಿ ತಗುಲಿದೆ.

    ಬೆಂಕಿ ಹತ್ತಿದ್ದ ಕೂಡಲೇ ಬಸವರಾಜು ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಬಿಜೆಪಿ ಕಾರ್ಯಕರ್ತರು ಆ ಬೆಂಕಿ ನಂದಿಸಿದ್ದಾರೆ. ಟೈರ್ ಗೆ ಪೆಟ್ರೋಲ್ ಹಾಕುವಾಗ ಈ ಘಟನೆ ನಡೆದ ನಂತರ ಪೊಲೀಸರು ಆ ಟೈರ್ ಗಳನ್ನು ಅಲ್ಲಿಂದ ತೆರವುಗೊಳಿಸಿದರು.

  • ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಮೈಸೂರು: ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಸ್‍ಗಳನ್ನು ತಡೆಯಲು ಮುಂದಾಗಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಬನ್ನಿಮಂಟಪ ಡಿಪೋ ಬಳಿ ಪ್ರತಿಭಟನೆ ನಡೆಸಲಾಗುತಿತ್ತು. ಆಗ ಸಂಸದ ಪ್ರತಾಪ್ ಸಿಂಹ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ತಕ್ಷಣ ಪೊಲೀಸರು ಬಂದು ಪ್ರತಾಪ್ ಸಿಂಹ ಹಾಗೂ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.

    ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ಜನರ ಮುಲಾಜಿನಲ್ಲಿ ಇಲ್ಲ ಎಂದರೆ ಏನರ್ಥ? ಜನರ ಮುಲಾಜಿನಲ್ಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ. ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಸಾಲಮನ್ನ ಭರವಸೆ ನೀಡಿದ್ದರು. ಅವರು ಭರವಸೆಯಂತೆ ಸಾಲಮನ್ನ ಮಾಡಲಿ. ಯಡಿಯೂರಪ್ಪ ಒಂದು ಲಕ್ಷದವರೆಗೆ ಸಾಲಮನ್ನ ಮಾಡಲು ಮುಂದಾಗಿದ್ದರು. ಅದೇ ರೀತಿ ನೀವು ಸಾಲಮನ್ನಾ ಮಾಡುವುದಾಗಿ ನೀಡಿದ್ದ ಹೇಳಿಕೆಯನ್ನು ಉಳಿಸಿಕೊಳ್ಳಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆಗೆ ಮೈಸೂರಿನಲ್ಲಿ ಕನ್ನಡ ಪರ ಸಂಘಟನೆ ಹಾಗೂ ರೈತಪರ ಸಂಘಟನೆಗಳು ಬೆಂಬಲ ಸೂಚಿಸಲಿಲ್ಲ. ಇನ್ನೂ ಕರ್ನಾಟಕ ಬಂದ್ ಗೆ ಹೋಟೆಲ್ ಮಾಲೀಕರ ಸಂಘದಿಂದ ಬೆಂಬಲ ಇಲ್ಲ. ಅಲ್ಲದೇ ಮೈಸೂರು ಲಾರಿ ಮಾಲೀಕರ ಸಂಘದಿಂದಲೂ ನೈತಿಕ ಬೆಂಬಲ ಮಾತ್ರ ನೀಡುತ್ತಿದ್ದು, ಮೈಸೂರು ಥಿಯೇಟರ್ ಮಾಲೀಕರಿಂದ ಬಂದ್‍ಗೆ ಬೆಂಬಲ ಸೂಚಿಸಿದ್ದು, ಥಿಯೇಟರ್ ಮಾಲೀಕರು ಬೆಳಗಿನ ಪ್ರದರ್ಶನ ಮಾತ್ರ ರದ್ದು ಮಾಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ರಿಂದ ಮಾಹಿತಿ ನೀಡಿದ್ದಾರೆ.

    ಸಾಂಸ್ಕೃತಿಕ ನಗರಿಯಲ್ಲಿ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ಇದ್ದು, ಜನಜೀವನ ಎಂದಿನಂತೆ ಸಾಗತ್ತಿದೆ. ಸಾರಿಗೆ ಬಸ್‍ಗಳು ರಸ್ತೆಗಿಳಿದು ಸೇವೆ ಆರಂಭಿಸಿದ್ದು, ನಗರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚರಿಸುತ್ತಿದೆ. ಆಟೋ ಹಾಗೂ ಇತರೆ ಸಾರಿಗೆ ಕೂಡ ಇಂದು ಲಭ್ಯವಿದೆ. ಹಾಲು, ದಿನಪತ್ರಿಕೆಗಳು ಎಂದಿನಂತೆ ಲಭ್ಯವಿದ್ದು, ರಸ್ತೆಯಲ್ಲಿ ವಾಹನಗಳು ದಿನ ನಿತ್ಯದಂತೆ ಸಂಚರಿಸುತ್ತಿದೆ. ಸದ್ಯದವರೆಗೆ ಮೈಸೂರಿಗೆ ಬಂದ್ ಬಿಸಿ ತಟ್ಟಿಲ್ಲ.

    ಕೆಎಸ್ ಆರ್ ಟಿ ಸಿ ಬಸ್ ತಡೆದ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.

  • ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆ: ಇಂದು ನಸುಕಿನ ಜಾವ ಜಮಖಂಡಿ ಶಾಸಕ, ಹಿರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್‍ನ್ನು ಬಿಜೆಪಿ ಹಿಂಪಡೆದಿದೆ.

    ಹಿರಿಯ ರಾಜಕಾರಣಿಗಳು, ಅಪಾರ ಬೆಂಬಲಿಗರನ್ನು ಹೊಂದಿರುವ ಶಾಸಕರು ಇಂದು ಸಾವನ್ನಪ್ಪಿದ್ದು, ಕ್ಷೇತ್ರದ ಜನರು ತಮ್ಮ ನೆಚ್ಚಿನ ಜನನಾಯಕರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪಕ್ಷ ಕರೆ ನೀಡಿದ್ದ ಬಂದ್ ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತೇರದಾಳ ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡ ಸಿದ್ದು ಸವದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಗೆಲುವ ಸಾಧಿಸಿದ್ರು. ಬದಾಮಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವು ಸಾಧಿಸಿದ್ರೆ, ಇತ್ತ ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಗೆಲುವನ್ನು ಕಂಡಿದ್ರು. ಈ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ದೆಹಲಿಗೆ ತೆರಳಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿ ಹಿಂದಿರುವ ವೇಳೆ ಅಪಘಾತ ಸಂಭವಿಸಿದೆ.

  • ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ವಿರುದ್ಧ ಸಿಟ್ಟು – ಬಿಜೆಪಿಯಿಂದ ಇಂದು ಕರ್ನಾಟಕ ಬಂದ್

    ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ವಿರುದ್ಧ ಸಿಟ್ಟು – ಬಿಜೆಪಿಯಿಂದ ಇಂದು ಕರ್ನಾಟಕ ಬಂದ್

    ಬೆಂಗಳೂರು: ಚುನಾವಣೆಗೂ ಮುನ್ನ ಸಾಲ ಮನ್ನಾ ಮಾಡ್ತೀನಿ ಅಂದಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗ ಯೂ ಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ಇವತ್ತು ಕರ್ನಾಟ ಬಂದ್‍ಗೆ ಕರೆ ಕೊಟ್ಟಿದೆ. ಆದ್ರೆ ಬಿಜೆಪಿ ಕರೆ ಕೊಟ್ಟ ಇವತ್ತಿನ ಬಂದ್ ಯಶಸ್ವಿಯಾಗೋದು ಅನುಮಾನ.

    ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಿಜೆಪಿ ಕರೆ ನೀಡಿರುವ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ. ಕೆಲವೇ ಕೆಲವು ಜಿಲ್ಲೆಗಳಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದ, ದಕ್ಷಿಣ ಕನ್ನಡದಲ್ಲೇ ಬಂದ್‍ಗೆ ಬೆಂಬಲ ದೊರೆತಿಲ್ಲ.

    ಇತ್ತ ಬೆಂಗಳೂರಿನಲ್ಲೂ ಬಂದ್ ಇರುವುದಿಲ್ಲ. ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ಹೋಟೆಲ್‍ಗಳು, ಮಾಲ್‍ಗಳು, ಸಿನಿಮಾ ಪ್ರದರ್ಶನ ಎಂದಿನಂತೆ ಇರಲಿದೆ. ಇನ್ನು ರಾಜ್ಯಾದ್ಯಂತ ಯಾವುದೇ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಲ್ಲದೆ ಬಂದ್ ಮಾಡುವ, ಪ್ರತಿಭಟನೆ ಮಾಡುವ ರೈತ ಸಂಘಟನೆಗಳಿಗೆ ಬೆಂಬಲ ನೀಡೋದಾಗಿ ತಿಳಿಸಿದೆ.

  • ಸೋಮವಾರ ಕರ್ನಾಟಕ ಬಂದ್: ಏನು ಇರುತ್ತೆ? ಏನ್ ಇರಲ್ಲ? ಬಂದ್ ಎಲ್ಲಿ ಇರುತ್ತೆ?

    ಸೋಮವಾರ ಕರ್ನಾಟಕ ಬಂದ್: ಏನು ಇರುತ್ತೆ? ಏನ್ ಇರಲ್ಲ? ಬಂದ್ ಎಲ್ಲಿ ಇರುತ್ತೆ?

    ಬೆಂಗಳೂರು: ಸೋಮವಾರ ನಡೆಯಲಿರುವ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರೆ, ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಬಂದ್ ಇರುತ್ತೋ ಇಲ್ಲವೋ ಎನ್ನುವ ಗೊಂದಲ ಉಂಟಾಗಿದೆ.

    ರೈತರ ಸಂಕಷ್ಟ ನಿವಾರಣೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಕುರಿತು ನಿರ್ಧಾರ ಪ್ರಕಟಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಅಲ್ಲದೇ ಸಿಎಂ ಕುಮಾರಸ್ವಾಮಿಯವರು ಸದನದಲ್ಲಿ ಬಹುಮತ ಸಾಬೀತು ಮಾಡುವ ವೇಳೆ ವಿರೋಧಿ ಪಕ್ಷದ ನಾಯಕ ಬಿಎಸ್‍ವೈ ಅವರು ಸೋಮವಾರ ಬಂದ್ ಕರೆ ನೀಡಿ ಸಭಾತ್ಯಾಗ ಮಾಡಿದ್ದರು. ಬಳಿಕ ಬಿಜೆಪಿ ಬಂದ್ ಕರೆ ನೀಡಿಲ್ಲ. ರೈತರು ಕರೆ ನೀಡಿದ್ದು, ಈ ಬಂದ್ ಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ರಾಜ್ಯದ ಜನತೆಗೆ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.

    ಬಿಜೆಪಿ ಪಕ್ಷದ ಹೋರಾಟ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು, ನಾನು ಕೂಡಾ ರೈತ ಮಗ, ಬಹುಮತ ಇಲ್ಲ ಎಂದರೂ ಸಾಲ ಮನ್ನಾ ಮಾಡುತ್ತೇನೆ. ಸಾಲ ಮನ್ನಾ ನಿರ್ಧಾರದಿಂದ ಹಿಂದೆ ಸರಿಯಲ್ಲ. ಒಂದು ವೇಳೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.

    ನಾಳಿನ ಬಂದ್ ಗೆ ಹಲವು ಸಂಸ್ಥೆಗಳು ಬೆಂಬಲ ನೀಡಿದರೆ ಮತ್ತು ಕನ್ನಡ ಹೋರಾಟ ಒಕ್ಕೂಟ, ಚಲನಚಿತ್ರ ಮಂಡಲಿ ಹಲವು ಸಂಸ್ಥೆಗಳು ಬೆಂಬಲ ನಿರಾಕರಿಸಿದೆ. ಇದೇ ವೇಳೆ ನಾಳೆ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆ ನಡೆಯುವುದರಿಂದ ಬಂದ್ ಮಾಡದಿರಲು ಬಿಜೆಪಿ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಬಿಜಿಪಿ ಶಾಸಕ ಶ್ರೀರಾಮುಲು ಅವರು, ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಸಿಎಂ ಕುಮಾರಸ್ವಾಮಿ ವಿರುದ್ಧ ಈಗ ರಾಜ್ಯ ಬಂದ್ ಮೂಲಕ ರೈತರು ಧ್ವನಿ ಎತ್ತುತ್ತಿದ್ದು, ಮಾತು ತಪ್ಪಿದ ಸರ್ಕಾರದ ವಿರುದ್ಧ ವಿಧಾನಸೌಧದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ. ಬೆಂಗಳೂರು ಹೊರತುಪಡಿಸಿ ಇಡೀ ರಾಜ್ಯಾದ್ಯಂತ ಬಂದ್ ಆಚರಿಸಲಾಗುತ್ತದೆ ಎಂದಿದ್ದಾರೆ.

    ಬೆಂಗಳೂರಿನಲ್ಲಿ ನಾಳೆ ಬಂದ್ ಬಹುತೇಕ ಅನುಮಾನವಾಗಿದ್ದು ಎಂದಿನಂತೆ ಬಸ್, ಆಟೋ, ಟ್ಯಾಕ್ಷಿ ಎಂದಿನಂತೆ ಓಡಾಟ ನಡೆಸಲಿದೆ. ಅಲ್ಲದೇ ಶಾಲಾ ಕಾಲೇಜುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಬಂದ್ ಮಾಡುವವರಿಗೆ ಎಚ್ಚರಿಕೆ ನೀಡಿ ನಾಳೆ ಯಾವುದೇ ಬಂದ್ ಗೆ ಅವಕಾಶವಿಲ್ಲ. ಒಂದು ವೇಳೆ ಬಂದ್ ಗೆ ಮುಂದಾದರೆ, ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಲಾಗುತ್ತದೆ. ಈ ಕುರಿತು ನಗರದ ಎಲ್ಲಾ ಡಿಸಿಪಿಗಳಿಗೂ ಬಂದ್ ಮಾಡುವವರ ವಿರುದ್ಧ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹೋಟೆಲ್ ಬಂದ್: ಕರ್ನಾಟಕ ಹೋಟೆಲ್ ಮಾಲೀಕರಿಂದ ಬಂದ್‍ಗೆ ಬೆಂಬಲ ವ್ಯಕ್ತವಾಗಿದ್ದು, ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ ಅವರು, ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿದ್ದು, ರೈತರಿಗಾಗಿ ಬೆಂಬಲ ನೀಡಲಿದ್ದೇವೆ ಹೊರತು ಪಕ್ಷ ನೋಡಿ ಅಲ್ಲ. ನಾಳಿನ ಪರಿಸ್ಥಿತಿ ನೋಡಿಕೊಂಡು ಬಂದ್ ಮಾಡುವಂತೆ ಎಲ್ಲಾ ಹೋಟೆಲ್‍ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕನ್ನಡ ಒಕ್ಕೂಟ : ಬಂದ್ ಕರ್ನಾಟಕ ಹೋರಾಟ ಸಂಘಟನೆಗಳ ಬೆಂಬಲವಿಲ್ಲ ಎಂದು ತಿಳಿದ್ದು, ಈ ಕುರಿತು ಮಾಹಿತಿ ನೀಡಿರುವ ಸಂಘದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು, ನಾಳಿನ ಬಂದ್ ವಿಚಾರ ನನಗೆ ಗೊತ್ತಿಲ್ಲ, ನಮಗೆ ಯಾರು ಹೇಳಿಲ್ಲ. ಯಡಿಯೂರಪ್ಪ ಯಾರಿಗೆ ಹೇಳಿದ್ದಾರೋ ನಮಗೆ ಗೊತ್ತಿಲ್ಲ. ಯಡಿಯೂರಪ್ಪನಿಗೂ ಮುಂಚೆ ನಾವು ರೈತರ ಪರವಾಗಿ ಇದ್ದೀವಿ. ನಾವು ಯಡಿಯೂರಪ್ಪ ವಿರುದ್ಧ ಅಪಪ್ರಚಾರ ಮಾಡಲ್ಲ. ನಮ್ಮ ವಿರುದ್ಧ ಅವರು ಏನು ಬೇಕಿದ್ದರೂ ಅಪಪ್ರಚಾರ ಮಾಡಲಿ. ಮೊದಲಿನಿಂದಲೂ ರೈತರ ಪರವಾಗಿ ನಾವು ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.

    ಫಿಲ್ಮ್ ಚೇಂಬರ್ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬಂದ್ ಗೆ ಬೆಂಬಲ ಸೂಚಿಸಿಲ್ಲ. ಎಂದಿನಂತೆ ಚಲನಚಿತ್ರ ಪ್ರದರ್ಶನ ಇರಲಿದೆ. ಹಾಗೂ ಚಿತ್ರೀಕರಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಇಲ್ಲ. ಸ್ವಯಂ ಪ್ರೇರಿತರಾಗಿ ಯಾರಾದರೂ ಬೆಂಬಲ ಸೂಚಿಸಿದರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.

    ಕಬ್ಬು ಬೆಳೆಗಾರರ ಸಂಘ: ಸಾಲಮನ್ನಾಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್‍ಗೆ ಕರೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬೆಂಬಲ ಇಲ್ಲ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿರುವ ಅವರು ಬಿಜೆಪಿ ಬಂದ್ ರೈತರ ಸಾಲ ಮನ್ನಾ ವಿಚಾರ ಕುರಿತು ಆಗಿದ್ದರೂ ಬಂದ್ ಕರೆ ನೀಡಿರುವ ಸಂಘಟನೆಗಳು ಮಾಹಿತಿ ನೀಡಿಲ್ಲ. ನಮ್ಮ ರಾಜ್ಯ ಸಮಿತಿ ಮುಖಂಡರ ಜೊತೆ ಚರ್ಚೆ ಮಾಡಿ, ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಅವರ ಅಭಿಪ್ರಾಯದ ಗಮಿನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ತಿಳಿಸಿದ್ದಾರೆ.

    ಇನ್ನುಳಿದಂತೆ ರಾಜ್ಯದ ಬಹುತೇಕ ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಪ್ರಮುಖವಾಗಿ ಉಡುಪಿ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಚಿತ್ರದುರ್ಗ, ಕೋಲಾರ ಸೇರಿ ಹಲವೆಡೆ ಬಂದ್ ಕರೆ ನೀಡಲಾಗಿದೆ. ಆದರೆ ಮೈಸೂರು, ಧಾರವಾಡದಲ್ಲಿ ಬಂದ್ ನಡೆಯುವುದು ಅನುಮಾನವಿದ್ದು, ಬಂದ್‍ಗೆ ಬೆಂಬಲ ಇಲ್ಲ ಎಂದು ಕನ್ನಡ ಪರ ಸಂಘಟನೆ, ರೈತ ಪರ ಸಂಘಟನೆಗಳು, ಹೋಟೆಲ್ ಮಾಲೀಕರ ಸಂಘ ಹೇಳಿದೆ. ಸಾರಿಗೆ ಸಂಚಾರ ಕೂಡ ಎಂದಿನಂತೆ ಇರಲಿದ್ದು ಶಾಲಾ-ಕಾಲೇಜುಗಳಿಗೂ ರಜೆ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಹೇಳಿದ್ದಾರೆ.

     

  • ಪ್ರಣಾಳಿಕೆಗೆ ತಕ್ಕಂತೆ ನಡೆಯದಿದ್ದರೆ ಪ್ರತಿಭಟನೆ ಎದುರಿಸಿ: ಶ್ರೀರಾಮುಲು

    ಪ್ರಣಾಳಿಕೆಗೆ ತಕ್ಕಂತೆ ನಡೆಯದಿದ್ದರೆ ಪ್ರತಿಭಟನೆ ಎದುರಿಸಿ: ಶ್ರೀರಾಮುಲು

    ರಾಯಚೂರು: ಪ್ರಣಾಳಿಕೆಯನ್ನು ಕಾರ್ಯರೂಪಕ್ಕೆ ತರಬೇಕು, ಇಲ್ಲದಿದ್ದರೆ ಒಂದು ಕ್ಷಣ ಕೂಡ ನೀವು ಅಧಿಕಾರದಲ್ಲಿ ಉಳಿಯದಂತೆ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ವಿಧಾನ ಪರಿಷತ್ ಪದವಿಧರ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಜಿಲ್ಲೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

    ರೈತರ ಸಾಲ ಮನ್ನಾ ಮಾಡದಿದ್ದರೆ ವಿಧಾನಸಭೆ ಹೊರಗೆ ಹಾಗೂ ಒಳಗೆ ಹೋರಾಟ ಮಾಡುತ್ತೇವೆ. ಹೋರಾಟ ಮಾಡುವ ಹಕ್ಕಿದೆ. ಮುಖ್ಯಮಂತ್ರಿಗಳಾಗಿ ಅವರು ಏನು ಕ್ರಮಬೇಕಾದರೂ ತಗೆದುಕೊಳ್ಳಲಿ. ಬೆಂಗಳೂರು ಹೊರತುಪಡೆಸಿ ರಾಜ್ಯದ ವಿವಿಧೆಡೆ ಬಂದ್ ಕೈಗೊಳ್ಳಲಾಗುವುದು. ರೈತರಿಗಾಗಿ ನಾವು ಹೋರಾಟ ಮಾಡುತ್ತಿದ್ದು ಅವರು ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿಯು ಕಾಂಗ್ರೆಸ್ ಹಾಗೂ ಜೆಡಿಎಸ್ ಗಿಂತ ಹೆಚ್ಚು ಸ್ಥಾನ ಪಡೆದಿತ್ತು. ನಾವು ರೈತರ ಸಾಲ ಮನ್ನಾ ಮಾಡುತ್ತಿದ್ದೇವು. ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಮುಖ್ಯಮಂತ್ರಿ ಆಗುತ್ತಿದ್ದಂತೆ ಪ್ರಣಾಳಿಕೆ ಕೈಚೆಲ್ಲುತ್ತಿದ್ದಾರೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ವಾಮಮಾರ್ಗದಿಂದ ರಚನೆಯಾದ ಸರ್ಕಾರಕ್ಕೆ ಮಂತ್ರಿ ಮಂಡಲ ರಚನೆ ಕಷ್ಟವಾಗುತ್ತಿದೆ. ಸಮ್ಮಿಶ್ರ ಸರ್ಕಾರಕ್ಕೆ ಬಹಳ ದಿನ ನಡೆಯುವುದಿಲ್ಲ, ಮುಂದೆ ನಾವೇ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.