Tag: ಕರ್ನಾಟಕ ಬಂದ್

  • ಕರ್ನಾಟಕ ಬಂದ್ ಬಿಸಿ- ರಸ್ತೆಗೆ ಇಳಿಯಲ್ಲ ಖಾಸಗಿ ಬಸ್, ಆಟೋ ಟ್ಯಾಕ್ಸಿ

    ಕರ್ನಾಟಕ ಬಂದ್ ಬಿಸಿ- ರಸ್ತೆಗೆ ಇಳಿಯಲ್ಲ ಖಾಸಗಿ ಬಸ್, ಆಟೋ ಟ್ಯಾಕ್ಸಿ

    – ಎಂದಿನಂತೆ ಇರುತ್ತೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಶಾಲೆ

    ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್‍ಗೆ 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ನೀಡಿವೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.

    ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ ವೆರಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ. ಆದರೆ ಟೌನ್‍ಹಾಲ್‍ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಪ್ರತಿಭಟನಾಕಾರರು ಕೇಂದ್ರ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ಜಾಥಾ ನಡೆಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

    ಬಂದ್‍ನ ಸ್ವರೂಪ ಹೇಗಿರಲಿದೆ?
    > ಎರಡು ಲಕ್ಷ ಆಟೋಗಳು ರಸ್ತೆಗೆ ಇಳಿಯುವುದಿಲ್ಲ
    > ಒಂದೂವರೆ ಲಕ್ಷ ಓಲಾ, ಊಬರ್ ಟ್ಯಾಕ್ಸಿ ಸಂಚಾರ ಬಂದ್
    > 25 ಸಾವಿರ ಮ್ಯಾಕ್ಸಿಕ್ಯಾಬ್, 10 ಸಾವಿರ ಏರ್‍ಪೋರ್ಟ್ ಟ್ಯಾಕ್ಸಿ
    > ಕೆಎಸ್‍ಟಿಡಿಸಿ, ಮೇರು, ಮೆಗಾ ಕ್ಯಾಬ್‍ಗಳಿಂದಲೂ ಬಂದ್‍ಗೆ ಬೆಂಬಲ
    > ಸರ್ಕಾರಿ ಕಾರು ಓಡಿಸುವ ಚಾಲಕರು ಬಂದ್‍ಗೆ ಬೆಂಬಲ (ಸಚಿವರಿಗೂ ಬಿಸಿ)
    > ನಿಂತಲ್ಲೇ ನಿಲ್ಲಲಿವೆ 9 ಸಾವಿರ ಖಾಸಗಿ ಬಸ್ ಸೇರಿ ಆರು ಲಕ್ಷ ವಾಹನ
    > 4 ಲಕ್ಷ ಸದಸ್ಯರಿರುವ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಬೆಂಬಲ
    > ಬಟ್ಟೆಯಂಗಡಿ, ಚಾಟ್ಸ್ , ತರಕಾರಿ ಹೂವು ಹಣ್ಣು ಇರಲ್ಲ
    > ಬೀದಿ ಬದಿ ಹೋಟೆಲ್, ಚಾಟ್ಸ್ ಇರಲ್ಲ

    ಏನೇನು ಇರುತ್ತೆ?
    > ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸೇವೆ (ನೈತಿಕ ಬೆಂಬಲ, ಪರಿಸ್ಥಿತಿ ನೋಡಿಕೊಂಡು ತೀರ್ಮಾನ)
    > ನಮ್ಮ ಮೆಟ್ರೋ ರೈಲು ಸೇವೆ
    > ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು (ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ)
    > ಬ್ಯಾಂಕ್, ಹೋಟೆಲ್, ಶಾಪಿಂಗ್ ಮಾಲ್ (ನೈತಿಕ ಬೆಂಬಲ)
    > ಎಪಿಎಂಸಿ, ಲಾರಿ ಸಂಚಾರ ಯಥಾಸ್ಥಿತಿ ಇರಲಿದೆ (ನೈತಿಕ ಬೆಂಬಲ)
    > ಸಿನಿಮಾ ಥಿಯೇಟರ್, ಸಿನಿಮಾ ಶೂಟಿಂಗ್ (ನೈತಿಕ ಬೆಂಬಲ)
    > ಎಂದಿನಂತೆ ನಾಳೆಯೂ ಸರ್ಕಾರಿ ಕಚೇರಿ (ಸರ್ಕಾರಿ ನೌಕರರಿಂದ ನೈತಿಕ ಬೆಂಬಲ)
    > ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಪೇಪರ್

    ಈ ಮಧ್ಯೆ, ಬಳ್ಳಾರಿ ಮತ್ತು ಹಾಸನ ಜಿಲ್ಲೆಯಲ್ಲಿ ಹಲವರು ಸಂಘಟನೆಗಳು ಬಂದ್ ನಡೆಸುವುದಾಗಿ ಹೇಳಿವೆ. ಆದರೆ ಮೈಸೂರು, ಕಲಬುರಗಿ ಸೇರಿದಂತೆ ಬಹುತೇಕ ಜಿಲ್ಲೆಗಳ ಸಂಘಟನೆಗಳು ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ. ಬಂದ್ ನಡೆಸಲ್ಲ. ಆದರೆ ಸಾಂಕೇತಿಕ ಪ್ರತಿಭಟನೆ ಮಾಡುತ್ತಿವೆ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.

    ಮೊದಲ ಬಾರಿಗೆ ನಾಳೆಯ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಹಾಗೂ ಪ್ರವೀಣ್ ಶೆಟ್ಟಿ ಬಣ ಬೆಂಬಲ ನೀಡಿಲ್ಲ. 1999ರಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವರದಿ ಜಾರಿ ಆಗಬೇಕು. ಆದರೆ ನಾಳೆಯ ಬಂದ್‍ಗೆ ತಮ್ಮ ಬೆಂಬಲ ಇಲ್ಲ ಎಂದು ಕರವೇ ನಾಯಕರು ಸ್ಪಷ್ಟಪಡಿಸಿದ್ದಾರೆ.

    ಬೆಂಗ್ಳೂರು ವಿವಿ ಪರೀಕ್ಷೆ ಮುಂದೂಡಿಕೆ:
    ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಅಂತ ಬೆಂಗಳೂರು ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

  • ಬಂದ್ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

    ಬಂದ್ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

    ಬೆಂಗಳೂರು: ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್‍ಗೆ ಕರ್ನಾಟಕ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟದೆ. ಈ ಒಕ್ಕೂಟದ ಕರೆಗೆ ಕನ್ನಡ ಪರ ಸಂಘಟನೆಗಳಲ್ಲೆ ವಿರೋಧ ವ್ಯಕ್ತವಾಗುತ್ತಿದೆ. ಬಂದ್ ಬೇಡಾ ಎಂದು ಬಂದ್ ವಿರೋಧಿಸಿ ಬೆಂಗಳೂರಿನ ಟೌನ್‍ಹಾಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಕರ್ನಾಟಕ ಹೋರಾಟಗಾರರ ಒಕ್ಕೂಟ, ಕರ್ನಾಟಕ ಕ್ರಾಂತಿರಂಗ ಮತ್ತು ಸರ್ವ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿವೆ. ಟೌನ್ ಹಾಲ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ ಅವರು, ನಾಳೆ ನಡೆಯುವ ಬಂದ್, ಜೋಕರ್ ಗಳ ಬಂದ್ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲಿಂಗೇಗೌಡ ಕಿಡಿಕಾರಿದರು.

    ಕರ್ನಾಟಕ ಹೋರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಇದೊಂದು ಅವೈಜ್ಞಾನಿಕ ಬಂದ್. ರೈತರಿಗೆ, ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವ ಬಂದ್ ಇದು. ಕೆಲ ಸಂಘಟನೆ ಅವರು ತೀರ್ಮಾನ ತಗೊಂಡು ಬಂದ್ ಮಾಡುತ್ತಿದ್ದಾರೆ. ನಮ್ಮನ್ನು ಯಾರು ಕೇಳಿಲ್ಲ, ಕರೆದಿಲ್ಲ ಅವರಷ್ಟೇ ತೀರ್ಮಾನ ಮಾಡಿಕೊಂಡಿದ್ದಾರೆ. ಬಂದ್‍ಗೆ ನಮ್ಮ ಬೆಂಬಲ ಇಲ್ಲ. ಬಂದ್ ಬೇಡಾ ಉದ್ಯೋಗಕ್ಕಾಗಿ ಮಾಡ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಆಗಿ ಜಾರಿಗೆ ಬರಬೇಕು ಅಷ್ಟೇ. ನಾಳೆ ಯಾರಾದರೂ ಅಂಗಡಿ ಮುಚ್ಚುಸಿದ್ರೆ, ಬಲವಂತವಾಗಿ ತೊಂದರೆ ಕೊಟ್ಟರೆ ಕಲ್ಲು, ದೊಣ್ಣೆ ತಗೊಂಡು ಹೊಡೆಯಿರಿ ಎಂದು ಕಿಡಿಕಾರಿದರು.

  • ಕರ್ನಾಟಕ ಬಂದ್‍ಗೆ ಕರವೇ ಬೆಂಬಲವಿಲ್ಲ: ನಾರಾಯಣಗೌಡ

    ಕರ್ನಾಟಕ ಬಂದ್‍ಗೆ ಕರವೇ ಬೆಂಬಲವಿಲ್ಲ: ನಾರಾಯಣಗೌಡ

    ಬೆಳಗಾವಿ/ಚಿಕ್ಕೋಡಿ: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿರುವ ಫೆಬ್ರವರಿ 13ರ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡುವುದಿಲ್ಲ ಎಂದು ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

    ಬಂದ್ ಕುರಿತು ಚಿಕ್ಕೋಡಿಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನಾರಾಯಣಗೌಡರು, ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವಾಗಿ ಕರವೇ ಹೋರಾಟ ಮುಂದುವರಿಯಲಿದೆ. ಆದರೆ ನಾಳೆ ನಡೆಯುವ ಬಂದ್‍ಗೆ ಯಾವುದೇ ಬೆಂಬಲವನ್ನು ಕರವೇ ನೀಡುವುದಿಲ್ಲ. ಕೆಲ ಕನ್ನಡ ಸಂಘಟನೆಗಳು ಮಾತು ಮಾತಿಗೂ ಬಂದ್ ಕರೆ ನೀಡುತ್ತಿವೆ. ಇದರ ನಷ್ಟ ಕನ್ನಡಿಗರಿಗೆ ಆಗುತ್ತಿದೆ ಎಂದು ತಿಳಿಸಿದರು.

    ಮಾರ್ಚ್ ತಿಂಗಳಲ್ಲಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಬೃಹತ್ ರ‍್ಯಾಲಿಯನ್ನು ಕರವೇ ಆಯೋಜನೆ ಮಾಡಲಿದೆ. ರ‍್ಯಾಲಿ ಮೂಲಕ ಮುಖ್ಯಮಂತ್ರಿಗಳಿಗೆ ವರದಿ ಜಾರಿ ಮಾಡಬೇಕು ಎಂದು ಒತ್ತಡ ಹಾಕಲಾಗುವುದು ಹಾಗೂ ನಾಳೆಯ ಬಂದ್‍ನಲ್ಲಿ ಯಾವುದೇ ಕರವೇ ಕಾರ್ಯಕರ್ತರು ಭಾಗವಹಿಸುವುದಿಲ್ಲ ಎಂದು ನಾರಾಯಣಗೌಡ ಸ್ಪಷ್ಟ ಪಡಿಸಿದರು.

  • ಕರ್ನಾಟಕ ಬಂದ್ – ಏನು ಇರುತ್ತೆ? ಏನು ಇರಲ್ಲ? ಬೆಂಬಲ ನೀಡಿದವರು ಯಾರು?

    ಕರ್ನಾಟಕ ಬಂದ್ – ಏನು ಇರುತ್ತೆ? ಏನು ಇರಲ್ಲ? ಬೆಂಬಲ ನೀಡಿದವರು ಯಾರು?

    ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವಾಗಿ ಫೆ.13 ಗುರುವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬರೋಬ್ಬರೀ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ.

    ಯಾರೆಲ್ಲಾ ಬೆಂಬಲ ನೀಡುತ್ತಿದ್ದಾರೆ?
    ಬರೋಬ್ಬರಿ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ. ಕನ್ನಡ ಸಂಘಟನೆಗಳ ಒಕ್ಕೂಟ, ಓಲಾ-ಉಬರ್ ಕಾರು ಚಾಲಕರ ಸಂಘ, ಚಾಲಕರ ಸಂಘಟನೆಗಳ ಒಕ್ಕೂಟ, ಆಟೋ-ಟ್ಯಾಕ್ಸಿ ಚಾಲಕರ ಸಂಘ ಕರ್ನಾಟಕ ಬಂದ್‍ಗೆ ಬೆಂಬಲ ಸೂಚಿಸಿದೆ. ಇತ್ತ ನಮ್ಮ ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ದಲಿತ ಪರ ಸಂಘಟನೆಗಳ ಒಕ್ಕೂಟ, ಮಹಿಳಾ ಸಂಘಟನೆಗಳ ಒಕ್ಕೂಟ, ರೈತ ಹೋರಾಟ ಸಂಘಗಳು, ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ.

    ಬೀದಿವ್ಯಾಪಾರಿಗಳ ಸಂಪೂರ್ಣ ಬೆಂಬಲ:
    ಬೀದಿ ಬದಿ ಹೋಟೆಲ್, ಬಟ್ಟೆಯಂಗಡಿ, ಪಾನಿಪೂರಿ ಅಂಗಡಿ, ಬೀದಿ ಬದಿ ತರಕಾರಿ, ಹೂವು, ಹಣ್ಣಿನಂಗಡಿ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ 4,80,000 ಹಾಗೂ ಬೆಂಗಳೂರಿನಲ್ಲಿ 80 ಸಾವಿರ ಬೀದಿ ವ್ಯಾಪಾರಿಗಳು ಗುರುವಾರ ವ್ಯಾಪಾರ ಸ್ಥಗಿತಗೊಳಿಸಲಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್‍ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬೀದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಇ ರಂಗಸ್ವಾಮಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶಾಲಾ-ಕಾಲೇಜು ರಜೆ ಇರುತ್ತಾ?
    ಹೀಗಾಗಿ ಸಾರಿಗೆ ಬಸ್‍ಗಳ, ಆಟೋಗಳ ಸಂಚಾರ ಇರುತ್ತಾ? ಇಲ್ಲವಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಇರುತ್ತಾ ಎನ್ನುವ ಬಗ್ಗೆ ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಫೆ. 12ರಂದು ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದು ಅನೇಕ ಸಂಘಟನೆಗಳು ಹೇಳುತ್ತಿವೆ. ಹೀಗಾಗಿ ಫೆ. 13ರಂದು ಬಂದ್‍ಗೆ ಇನ್ನು ಹೆಚ್ಚು ಬೆಂಬಲ ವ್ಯಕ್ತವಾದರೆ ಬೆಂಗಳೂರು ಸ್ಥಬ್ಧವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇತ್ತ ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಫೆಡರಲ್ ಅಸೋಸಿಯೇಶನ್ ಬಂದ್‍ಗೆ ನೈತಿಕ ಬೆಂಬಲಕ್ಕೆ ನೀಡುವ ಸಾಧ್ಯತೆ ಇದೆ. ಆದರೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಬಂದ್ ಮಾಡಬೇಕಾ? ಇಲ್ವ? ಎಂದು ತೀರ್ಮಾನ ಮಾಡುತ್ತೇವೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಅಜೇಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಮಾಲ್‍ಗಳು ಇಲ್ಲಿಯವರಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾಲ್ ಮುಚ್ಚಬೇಕಾ? ತೆಗೆಯಬೇಕಾ ಎನ್ನುವುದು ಸ್ಪಷ್ಟವಾಗಿಲ್ಲ. ಮಾಲ್‍ಗಳ ಮಾಲೀಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮಾಲ್‍ಗಳಿಗೆ ಎಂದಿನಂತೆ ನೆಟ್ ಹಾಕಿ ರಕ್ಷಿಸಲು ತೀರ್ಮಾನ ಮಾಡಲಾಗಿದ್ದು, ಮಾಲ್ ಮುಂದೆ ಕನ್ನಡ ಬಾವುಟ ಹಾಕಬೇಕು, ನೈತಿಕ ಬೆಂಬಲ ಕೊಡಬೇಕೆಂದು ಕನ್ನಡಪರ ಸಂಘಟನೆಗಳು ಮಾಲ್ ಮಾಲೀಕರ ನಡುವೆ ಚರ್ಚೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.

    ಖಾಸಗಿ ಬಸ್ ಅಸೋಸಿಯೇಷನ್‍ಗೆ ಬಂದ್ ಮಾಡುವಂತೆ ಯಾರು ಪ್ರಸ್ತಾವನೆಯೇ ನೀಡಿಲ್ಲ. ಕನ್ನಡ ಪರ ಸಂಘಟನೆಗಳ ಬಂದ್ ಕರೆ ಬಗ್ಗೆ ಮಾಹಿತಿಯೇ ಇಲ್ಲ. ಕನ್ನಡಕ್ಕಾಗಿ ಬಂದ್ ಮಾಡಿದ್ದರೆ ಒಳಿತು. ನಮ್ಮನ್ನು ಯಾವುದಾದರೂ ಸಂಘಟನೆಯವರು ಕರೆ ಮಾಡಿ ಬೆಂಬಲ ಕೇಳಿದರೆ ತೀರ್ಮಾನ ಮಾಡುತ್ತೇವೆ ಎಂದು ಖಾಸಗಿ ಬಸ್ ಅಸೋಸಿಯೇಷನ್‍ಗೆ ಕಾರ್ಯದರ್ಶಿ ಸತ್ಯಪ್ಪ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ಇನ್ನು ಅಂತಿಮ ತೀರ್ಮಾನ ಮಾಡಿಲ್ಲ. ಆದರೆ ನೈತಿಕ ಬೆಂಬಲ ಈಗಲೂ ಇದೆ ಎಂದು ಸಂಘದ ಅಧ್ಯಕ್ಷ ರಾಧಕೃಷ್ಣ ಹೊಳ ಪ್ರತಿಕ್ರಿಯಿಸಿದ್ದಾರೆ.

    ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಬೆಂಬಲವಿಲ್ಲ:
    ಬಂದ್‍ಗೆ ಬೆಂಬಲ ಕೊಡಬೇಕೋ? ಬೇಡವೋ ಎಂದು ಇಂದು ಸಂಜೆ ನಿರ್ಧಾರ ಪ್ರಕಟಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಪ್ರವೀಣ್ ಕುಮಾರ್ ಶೆಟ್ಟಿ ಅವರು ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಕೆಲ ಬೆರಳಿಕೆ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟರೆ ಬಂದ್ ಆಗಲ್ಲ. ಬಂದ್‍ನಿಂದ ಕನ್ನಡಿಗರಿಗೆ ಹೊರೆಯಾಗುತ್ತೆ ಬಿಟ್ಟರೆ ಇದರಿಂದ ಸರೋಜಿನಿ ಮಹಿಷಿ ವರದಿ ಜಾರಿಯಾಗಲ್ಲ. ಈ ವರದಿ ಜಾರಿಯನ್ನು ಮುಖ್ಯಮಂತ್ರಿಗಳೇ ಜಾರಿ ಮಾಡಬೇಕಿದೆ. ಹೀಗಾಗಿ ಮುಖ್ಯಮಂತ್ರಿಗಳನ್ನ ಎಚ್ಚರಿಸುವ ಕೆಲಸ ಆಗಬೇಕಿದೆ. ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಬಂದ್ ಬಗ್ಗೆ ನಾವು ಗಮನ ಹರಿಸಿಲ್ಲ. ಇದೇ ವರದಿ ಜಾರಿಗೆಗೆ ಆಗ್ರಹಿಸಿ ನಾವು ಅತ್ತಿಬೆಲೆಯಿಂದ ಜಾಥ ನಡೆಸಿ ಸಿಎಂಗೆ ಮನವಿ ಮಾಡ್ತೇವೆ. ಜಾಥ ನಡೆಸುವ ಕುರಿತು ಶೀಘ್ರದಲ್ಲೇ ದಿನಾಂಕ ಪ್ರಕಟ ಮಾಡ್ತೇವೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿಕೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಕರ್ನಾಟಕ ಬಂದ್‍ಗೆ ಸಾಥ್ – ಓಲಾ, ಉಬರ್, ಆಟೋ, ಟ್ಯಾಕ್ಸಿ ಇರಲ್ಲ

    ಕರ್ನಾಟಕ ಬಂದ್‍ಗೆ ಸಾಥ್ – ಓಲಾ, ಉಬರ್, ಆಟೋ, ಟ್ಯಾಕ್ಸಿ ಇರಲ್ಲ

    ಬೆಂಗಳೂರು: ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಓಲಾ ಉಬರ್ ಆಟೋ ಹಾಗೂ ಟ್ಯಾಕ್ಸಿಗಳು ಅಂದು ಬಂದ್ ಆಗಲಿದೆ ಎಂದು ಓಲಾ, ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.

    ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗಕ್ಕಾಗಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಫೆಬ್ರವರಿ 13ಕ್ಕೆ 100ನೇ ದಿನಕ್ಕೆ ಕಾಲಿಡಲಿದೆ. ಹಾಗಾಗಿ ಫೆಬ್ರವರಿ 13ಕ್ಕೆ ಕನ್ನಡಪರ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಈ ಬಂದ್‍ಗೆ ನಮ್ಮ ಬೆಂಬಲವು ಇದೆ ಎಂದು ಪಾಷಾ ತಿಳಿಸಿದ್ದಾರೆ.

    ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷ ಚಳುವಳಿ ನಾಗೇಶ್ ನಮ್ಮನ್ನು ಭೇಟಿ ಮಾಡಿ ಹೋರಾಟದ ವಾಸ್ತವಾಂಶ ತಿಳಿಸಿ ಬಂದ್‍ಗೆ ಬೆಂಬಲಿಸಲು ಮನವಿ ಮಾಡಿದ್ದರು. ಹಾಗಾಗಿ ಈ ಹೋರಾಟ ನಮಗೆ ಅತ್ಯವಶ್ಯಕ ಎಂದು ತಿಳಿದು ಆ ದಿನ ನಾವು ನಮ್ಮ ಓಲಾ, ಉಬರ್ ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಮತ್ತು ಆದರ್ಶ ಆಟೋ ಯೂನಿಯನ್ ಮಂಜುನಾಥ್, ಪೀಸ್ ಆಟೋ ಯೂನಿಯನ್ ರಘು ನಾರಾಯಣ್, ಜೈ ಭಾರತ ಚಾಲಕರ ಸಂಘದ ಚಂದ್ರ ಕುಮಾರ್, ಜೈ ಕ.ರ.ವೇ ಚಾಲಕ ಘಟಕದ ಬಾಬು, ಸಾರಥಿ ಸೇನೆ ಶಬರಿನಾಥ್ ಹಾಗೂ ಇನ್ನಿತರೆ ಆಟೋ ಮತ್ತು ಟ್ಯಾಕ್ಸಿ ಸಂಘಟನೆಯ ಮುಖಂಡರ ಜೊತೆ ಸಭೆ ನೆಡೆಸಿ ಫೆಬ್ರವರಿ 13ರ ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

    ಹೀಗಾಗಿ ನಮ್ಮ ಸೇವೆಗಳು ಫೆಬ್ರವರಿ 13ರ ಬೆಳಗ್ಗೆ 6 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ಇರುವುದಿಲ್ಲ ಎಂದು ತನ್ವೀರ್ ಪಾಷಾ ಅವರು ತಿಳಿಸಿದ್ದಾರೆ.

    ಏನಿದು ಸರೋಜಿನಿ ಮಹಿಷಿ ವರದಿ?
    1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು. ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.

    1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ. ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

  • ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಬೆಂಗಳೂರು: ಫೆಬ್ರವರಿ 13ಕ್ಕೆ ಕರ್ನಾಟಕ ಸ್ತಬ್ಧವಾಗಲಿದ್ದು, ಅಂದು ಯಾವುದೇ ಓಲಾ, ಊಬರ್, ಆಟೋ, ಟ್ಯಾಕ್ಸಿಗಳು, ರಸ್ತೆಗಿಳಿಯಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಅಖಂಡ ಕರ್ನಾಟಕ ಮುಷ್ಕರಕ್ಕೆ ಕರೆ ನೀಡಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, 400ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಓಲಾ, ಊಬರ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘ, ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆ, ವಿವಿಧ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ಸಿಕ್ಕಿದೆ.

    ಅಂದು ಬೆಳಗ್ಗೆ 11 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂಪಾರ್ಕ್ ತನಕ ಬೃಹತ್ ರ‍್ಯಾಲಿ ಮಾಡಲಾಗುತ್ತೆ. ವರದಿ ಜಾರಿಗೆ ಆಗ್ರಹಿಸಿ ನಗರದ ಮೌರ್ಯ ಸರ್ಕಲ್ ಬಳಿ ಕಳೆದ 96 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಇದೇ 13ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

    ಏನಿದು ಸರೋಜಿನಿ ಮಹಿಷಿ ವರದಿ?
    1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು.

    ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.

    1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ.

    ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

  • ಫೆ.19ರಂದು ಕರ್ನಾಟಕ ಬಂದ್: ಕನ್ನಡ ಸಂಘಟನೆಗಳಿಂದ ಕರೆ

    ಫೆ.19ರಂದು ಕರ್ನಾಟಕ ಬಂದ್: ಕನ್ನಡ ಸಂಘಟನೆಗಳಿಂದ ಕರೆ

    ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕನ್ನಡ ಸಂಘಟನೆಗಳು ಫೆ.19 ರಂದು ಕರ್ನಾಟಕ ಬಂದ್‍ಗೆ ಕರೆಕೊಟ್ಟಿವೆ.

    ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್ ನಡೆಯಲಿದ್ದು ಅಂದು ಬೆಳಗ್ಗೆ 10 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಕನ್ನಡ ಸಂಘಟನೆಗಳು ಮುಂದಾಗಿವೆ.

    ಹೋಟೆಲ್, ಖಾಸಗಿ ಬಸ್ಸುಗಳು, ಶಿಕ್ಷಣ ಸಂಸ್ಥೆಗಳು, ಪೆಟ್ರೋಲ್ ಬಂಕ್, ಬಿಡಿಎ, ನಗರ ಸಭೆ, ಐಟಿ-ಬಿಟಿ ಕಂಪೆನಿಗಳು ಮುಚ್ಚಬೇಕು. ಇಲ್ಲದಿದ್ದರೆ ಬಂದ್ ವೇಳೆ ಏನೇ ವ್ಯತ್ಯಾಸ ಆದರೂ ನಾವು ಹೊಣೆ ಅಲ್ಲ ಎಂದ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಬಂದ್ ವಿರುದ್ಧ ಕಿಡಿ:
    ಬಂದ್‍ಗೆ ಕರೆ ನೀಡಿದ್ದಕ್ಕೆ ಕನ್ನಡ ಸಂಘಟನೆಗಳಿಂದಲೇ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ಬಾರಿಯೂ ವಾಟಾಳ್ ನಾಗರಾಜ್ ಬಂದ್‍ಗೆ ಕರೆ ನೀಡುತ್ತಾರೆ. ಆದರೆ ಈ ಬಂದ್ ಚಾಳಿಯಿಂದ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಬಂದ್‍ಗೆ ನಮ್ಮ ಸಂಪೂರ್ಣ ವಿರೋಧ ಇದೆ. ವಾಟಾಳ್ ನಾಗರಾಜ್ ನಮಗೆ ಗುರುಗಳು ಇದ್ದಹಾಗೆ. ಅವರು ಪ್ರತಿ ಬಾರಿ ಬಂದ್ ಮಾಡಿ ಸಾಧಿಸೋದಾದರೂ ಏನು? ಬಂದ್ ಮಾಡಿದರೆ ಪ್ರಯೋಜನವಿಲ್ಲ ಎಂದು ನಾಗೇಶ್ ಗೌಡ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಕ್ಷಿಣ ಕನ್ನಡದಲ್ಲಿ ಬಂದ್‍ಗೆ ಬೆಂಬಲ ನೀಡದ ಖಾಸಗಿ ಬಸ್ ಮಾಲೀಕರು

    ದಕ್ಷಿಣ ಕನ್ನಡದಲ್ಲಿ ಬಂದ್‍ಗೆ ಬೆಂಬಲ ನೀಡದ ಖಾಸಗಿ ಬಸ್ ಮಾಲೀಕರು

    ಮಂಗಳೂರು: ಮಂಗಳವಾರ ಹಾಗೂ ಬುಧವಾರ ದೇಶಾದ್ಯಂತ ನಡೆಯಲಿರುವ ಕಾರ್ಮಿಕರ ಮುಷ್ಕರಕ್ಕೆ ದಕ್ಷಿಣ ಕನ್ನಡದ ಖಾಸಗಿ ಬಸ್ ಮಾಲೀಕರು ಬೆಂಬಲ ನೀಡದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

    ಮೋಟಾರು ವಾಹನ ಮಸೂದೆ, ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಒಟ್ಟು ಹನ್ನೇರಡು ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಗಳು ಮಂಗಳವಾರ ಹಾಗೂ ಬುಧವಾರ ಎರಡು ದಿನ ಮುಷ್ಕರಕ್ಕೆ ಕರೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಾರ್ಮಿಕರು ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡದ ಖಾಸಗಿ ಬಸ್ ಮಾಲೀಕರು ಮುಷ್ಕರಕ್ಕೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

    ಕಾರ್ಮಿಕ ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಬಂದ್‍ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಖಾಸಗಿ ಬಸ್ ಮಾಲಿಕರು ಸಭೆ ನಡೆಸಿದರು. ಈ ವೇಳೆ ಮುಷ್ಕರಕ್ಕೆ ನಮ್ಮ ಬೆಂಬಲ ಇಲ್ಲ. ಮಂಗಳೂರಿನಲ್ಲಿ ಎಂದಿನಂತೆ ಖಾಸಗಿ ಬಸ್ ಸಂಚಾರ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

    ದಕ್ಷಿಣ ಕನ್ನಡದಲ್ಲಿ ಕಾರ್ಮಿಕರ ಮುಷ್ಕರಕ್ಕೆ ಕಮ್ಯುನಿಸ್ಟ್ ಬೆಂಬಲಿತ ಕಾರ್ಮಿಕ ಸಂಘಟನೆಗಳಿಂದ ಮಾತ್ರ ಬೆಂಬಲ ವ್ಯಕ್ತವಾಗಿದೆ. ಬೀದಿ ಬೀದಿ ವ್ಯಾಪಾರಸ್ಥರ ಸಂಘದಿಂದ ಕೂಡ ಬಂದ್‍ಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದೆ. ಅಷ್ಟೇ ಅಲ್ಲದೆ ನಾಳಿನ ಪರಿಸ್ಥಿತಿಯ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಇತರೇ ಸಂಘಟನೆಗಳು ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ್ ಬಂದ್: ಕರ್ನಾಟಕದಲ್ಲಿ ಮೂರುವರೆ ಸಾವಿರ ಕೋಟಿ ನಷ್ಟ

    ಭಾರತ್ ಬಂದ್: ಕರ್ನಾಟಕದಲ್ಲಿ ಮೂರುವರೆ ಸಾವಿರ ಕೋಟಿ ನಷ್ಟ

    ಬೆಂಗಳೂರು: ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ನಿಂದ ಕರ್ನಾಟಕ ರಾಜ್ಯದಲ್ಲಿ ಮೂರುವರೆ ಸಾವಿರ ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಹೇಳಿದೆ.

    ಇನ್ನೂರು ಕೋಟಿ ರೂ. ನೇರವಾಗಿ ಲಾಸ್ ಆಗಿದ್ದರೆ, ಮೂವತ್ತು ಕೋಟಿ ರೂ. ಬರೀ ಪೆಟ್ರೋಲ್ ಬಂಕ್ ಗಳಿಂದ ಬರುವ ಆದಾಯ ನಷ್ಟವಾಗಿದೆ. ಕೈಗಾರಿಕೆಗಳಿಂದ ಬರುವ ನಿತ್ಯದ 160 ಕೋಟಿ ರೂ. ನಷ್ಟವಾಗಿದೆ ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಸುಧಾಕರ್ ಎಸ್.ಶೆಟ್ಟಿ ಹೇಳಿದ್ದಾರೆ.

    ಬಂದ್ ನಿಂದ ಯಾವ ಪ್ರಯೋಜನವೂ ಇಲ್ಲ. ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಇಳಿಸಲೇಬೇಕು. ಸೆಸ್ ಇಳಿಸಲು ಮೀನಾಮೇಷ ಎಣಿಸುವುದು ಬೇಡ. ಕೈಗಾರಿಕೆಗಳಿಗೆ ಸೇರಿದಂತೆ ಇಡೀ ವ್ಯಾಪಾರಿ ಸಮೂಹಕ್ಕೆ ಬಂದ್ ನಿಂದ ಭಾರೀ ನಷ್ಟವಾಗಿದೆ ಎಂದು ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಡಿಕೆಯ ವೋಟ್ ಹಾಕಿಲ್ಲ ಹೇಳಿಕೆ ಅಪ್ರಬುದ್ಧ: ಬಸವರಾಜ ರಾಯರೆಡ್ಡಿ

    ಎಚ್‍ಡಿಕೆಯ ವೋಟ್ ಹಾಕಿಲ್ಲ ಹೇಳಿಕೆ ಅಪ್ರಬುದ್ಧ: ಬಸವರಾಜ ರಾಯರೆಡ್ಡಿ

    ಬೆಂಗಳೂರು: ಉತ್ತರ ಕರ್ನಾಟಕದ ಜನ ವೋಟ್ ಹಾಕಿಲ್ಲ ಅನ್ನೋ ಸಿಎಂ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಚಿವ ರಾಯರೆಡ್ಡಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೋಟ್ ಹಾಕಿಲ್ಲ ಎನ್ನುವ ಹೇಳಿಕೆ ಅಪ್ರಬುದ್ಧ ಹೇಳಿಕೆ. ಅಂತಹ ಹೇಳಿಕೆ ಸಿಎಂ ಮಾತಾಡಿದ್ರೆ ಅ ಮಾತನ್ನು ಸಿಎಂ ವಾಪಸ್ ತೆಗೆದುಕೊಳ್ಳಬೇಕು ಎಂದರು.

    ಉತ್ತರ ಕರ್ನಾಟಕಕ್ಕೆ ಸಚಿವರು ಕಡಿಮೆ ಇದೆ. ಪಕ್ಷದ ಅಧ್ಯಕ್ಷರು, ಸಿಎಂ, ಡಿಸಿಎಂ, ಹೆಚ್ಚು ಸಚಿವರು ದಕ್ಷಿಣ ಭಾಗದಲ್ಲೇ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕಕ್ಕೆ ಹೆಚ್ಚು ನೀಡಬೇಕು. ಉತ್ತರ ಕರ್ನಾಟಕದ ಬಗ್ಗೆ ಉತ್ತಮವಾಗಿ ಮಾತಾಡೋದನ್ನು ಸಿಎಂ ಕಲಿಯಬೇಕು ಎಂದರು.

    ಕೆಲ ಮಠಾಧೀಶರು, ಸಂಘಟನೆಗಳ ಸದಸ್ಯರು ಉತ್ತರ ಕರ್ನಾಟಕ ಬಂದ್ ಮಾಡುತ್ತಿದ್ದಾರೆ. ಇದೊಂದು ಅಧರ್ಮದ ಕೆಲಸ. ಬಂದ್ ಮಾಡಿ ಅಖಂಡ ಕರ್ನಾಟಕ ಒಡೆಯಬೇಡಿ. ನೆಗಡಿ ಬಂದ್ರೆ ಮೂಗು ಕೊಯ್ದರೆ ಆಗುತ್ತಾ? ಉತ್ತರ ಕರ್ನಾಟಕ ಇಬ್ಬಾಗ ಮಾಡಿದ್ರೆ ಮೂಗು ಕೊಯ್ದ ರೀತಿ ಆಗುತ್ತೆ. ಬಂದ್ ಕರೆ ರಾಜಕೀಯ ಪ್ರೇರಿತ. ಕೆಲವೊಂದು ಗೊಂದಲ ಇರಬಹುದು. ಅದನ್ನು ನಿವಾರಣೆ ಮಾಡಲು ಸಿಎಂಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

    ಜನರು ಕೂಡಾ ಬಂದ್ ಗೆ ಬೆಂಬಲ ನೀಡಬಾರದು. ಶ್ರೀರಾಮಲು, ಉಮೇಶ್ ಕತ್ತಿ ಇಂತಹ ಕೆಲಸಕ್ಕೆ ಹೋಗಬಾರದು. ರಾಜಕೀಯಕ್ಕೆ ಇಬ್ಬಾಗದ ಮಾತನ್ನು ಯಾರೂ ಆಡಬಾರದು. ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿಲ್ಲ. ಸಿದ್ದರಾಮಯ್ಯ ಬಜೆಟ್ ನ ಮುಂದುವರಿದ ಭಾಗವಾಗಿದ್ದು, ಯೋಜನೆ ತಯಾರು ಮಾಡೋವಾಗ ಎಲ್ಲ ಭಾಗ ನೋಡಿ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ನಾನು ಮತ್ತೆ ಭತ್ಯೆ ವಾಪಸ್ ನೀಡುವಂತೆ ಕೇಳಿದ್ದು ಯಾಕೆ: ಕಾರಣ ತಿಳಿಸಿದ ಬಸವರಾಜ ರಾಯರೆಡ್ಡಿ

    ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ಜೆಡಿಎಸ್ ಕೆಲ ಜಿಲ್ಲೆಯಲ್ಲಿ ಪ್ರಾಬಲ್ಯ ಇದೆ. ಮತ ಒಡೆದು ಹೋಗಬಾರದು ಅನ್ನೋದು ನಮ್ಮ ಚಿಂತನೆ. ಹೀಗಾಗಿ ಮೈತ್ರಿ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.

    ಸಚಿವ ಜಿಟಿ ದೇವೇಗೌಡ ಸಿಂಡಿಕೇಟ್ ಸದಸ್ಯರ ನೇಮಕಾತಿ ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರ್ಹ ವ್ಯಕ್ತಿಗಳನ್ನ ಸಿದ್ದರಾಮಯ್ಯ ನೇಮಕ ಮಾಡಿದ್ದರು. ಆದರೆ ಉನ್ನತ ಶಿಕ್ಷಣ ಸಚಿವರಾದ ಜಿಟಿ ದೇವೇಗೌಡ ಅವರು ಅರ್ಹರಿಲ್ಲದವರನ್ನ ನೇಮಕ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಚಿವರ ಹೇಳಿಕೆ ಸರಿಯಲ್ಲ. ಸಚಿವರು ವಿಷಯವನ್ನ ತಿಳಿದುಕೊಂಡು ಮಾತನಾಡಬೇಕು. ಒಬ್ಬೇ ಒಬ್ಬ ಅನರ್ಹ ವ್ಯಕ್ತಿಗಳನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಕೆಲವೊಬ್ಬರು ರಾಜಕೀಯ ವ್ಯಕ್ತಿಗಳ ನೇಮಕ ಆಗಿರಬಹುದು. ಉಳಿದಂತೆ ಅರ್ಹರನ್ನೆ ನೇಮಕ ಮಾಡಲಾಗಿದೆ. ಸಚಿವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿ ಟಾಂಗ್ ನೀಡಿದರು.

    https://www.youtube.com/watch?v=ets0C4vasfM