Tag: ಕರ್ನಾಟಕ ಚುನಾವನೇ 2018

  • ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಸೋಲಿಗೆ ಇವಿಎಂ ಮೆಷಿನ್ ಕಾರಣ ಅಂದ್ರು ಮೊಯಿದ್ದೀನ್ ಬಾವಾ!

    ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಸೋಲಿಗೆ ಇವಿಎಮ್ ಮಿಷನ್ ಕಾರಣ ಅಂತ ಮಂಗಳೂರು ಉತ್ತರ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವ ಆರೋಪಿಸಿದ್ದಾರೆ.

    ಫಲಿತಾಂಶ ಹೊರಬರುತ್ತಿದ್ದಂತೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಮ್ ಮೆಷಿನ್ ನಲ್ಲಿ ಲೋಪ ಇದೆ. ಕೇವಲ 8 ಸಾವಿರ ಹಿಂದೂಗಳ ಮತಗಳು ಮಾತ್ರಾ ಇದೆ. ಮಿಷಿನ್ ನಲ್ಲಿ ಮೋಸ ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೇನೆ ಹತ್ತು ದಿನದ ಹಿಂದೆ ಬಂದವರು ಗೆಲ್ಲುವುದರ ಹಿಂದೆ ಮೋಸ ಇದೆ ಅಂತ ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಎದುರು ಬಾವಾ ಸೋಲು ಕಂಡಿದ್ದಾರೆ.

     

     

  • ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೆಡಿಎಸ್ ಕಾರ್ಯಕರ್ತನಿಗೆ ಥಳಿತ!

    ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೆಡಿಎಸ್ ಕಾರ್ಯಕರ್ತನಿಗೆ ಥಳಿತ!

    ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಕರ್ತನಿಗೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ನಡೆದಿದೆ.

    ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪರ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡುತ್ತಿದ್ರು. ಈ ವೇಳೆ ಜೆಡಿಎಸ್ ಬಾವುಟ ಹಾರಿಸಿ ಕಾರ್ಯಕರ್ತರೊಬ್ಬರು ಘೋಷಣೆ ಕೂಗಿದ್ದರು. ಇದರಿಂದ ಆಕ್ರೋಶಗೊಂದ ರೈತ ಸಂಘದ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿದತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಕ್ರೈಂ ಸಿಟಿ ಅಂದ ಪ್ರಧಾನಿಗೆ ರಮ್ಯಾ ಗುದ್ದು – ವಾರಣಾಸಿ, ಗೋರಖ್‍ಪುರಕ್ಕಿಂತ ಬೆಂಗ್ಳೂರೇ ಉತ್ತಮ ಅಂದ್ರು ಮಾಜಿ ಸಂಸದೆ

    ಕ್ರೈಂ ಸಿಟಿ ಅಂದ ಪ್ರಧಾನಿಗೆ ರಮ್ಯಾ ಗುದ್ದು – ವಾರಣಾಸಿ, ಗೋರಖ್‍ಪುರಕ್ಕಿಂತ ಬೆಂಗ್ಳೂರೇ ಉತ್ತಮ ಅಂದ್ರು ಮಾಜಿ ಸಂಸದೆ

    ಬೆಂಗಳೂರು: ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಮತ್ತೆ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

    ಬೆಂಗಳೂರನ್ನು ಕ್ರೈಂ ಸಿಟಿ, ಗೂಂಡಾ ಸಿಟಿ, ಗಾರ್ಬೆಜ್ ಸಿಟಿ ಅಂತೆಲ್ಲಾ ಕರೆದಿದ್ದ ಮೋದಿಗೆ ನಿಮ್ಮ ವಾರಣಾಸಿ, ಗೋರಖ್‍ಪುರ, ಲಖನೌ ನಗರಗಳಿಗಿಂತ ಬೆಂಗಳೂರು ಬಹುಪಾಲು ಉತ್ತಮ ಎಂದು ಫೇಸ್‍ಬುಕ್‍ನಲ್ಲಿ ಕಾಲೆಳೆದಿದ್ದಾರೆ. ಇದನ್ನೂ ಓದಿ: Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ

    ಅಲ್ಲದೇ `ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಅಂತ ವಿಡಿಯೋವೊಂದನ್ನು ಅಪ್‍ಲೋಡ್ ಮಾಡಿ ತಿರುಗೇಟು ನೀಡಿದ್ದಾರೆ.

    ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಪ್ರವಾಸಕ್ಕೆ ಆಗಮಿಸುತ್ತಿರುವ ಮೋದಿ ಇತ್ತೀಚೆಗೆ ಬೆಂಗಳೂರಿಎ ಬಂದು ಸಮಾವೇಶದಲ್ಲಿ ಮಾತನಾಡಿದ್ದರು. ಈ ವೇಳೆ ಬೆಂಗಳೂರು ಸಿಟಿ ಕ್ರೈಂ ಸಿಟಿಯಾಗಿದೆ ಎಂದು ಹೇಳಿಕೆ ನೀಡಿದ್ದರು.

    https://www.youtube.com/watch?v=C7RVNlHe930

  • ಚಾಮುಂಡೇಶ್ವರಿ ಪ್ರಚಾರದ ಸಿಎಂ ಆಹ್ವಾನಕ್ಕೆ ಕಿಚ್ಚ ಪ್ರತಿಕ್ರಿಯೆ

    ಚಾಮುಂಡೇಶ್ವರಿ ಪ್ರಚಾರದ ಸಿಎಂ ಆಹ್ವಾನಕ್ಕೆ ಕಿಚ್ಚ ಪ್ರತಿಕ್ರಿಯೆ

    ಯಾದಗಿರಿ: ಸಿಎಂ ಪರ ಬದಾಮಿಗೆ ಪ್ರಚಾರಕ್ಕೆ ಹೋಗಲ್ಲ ಅಂತ ಹೇಳಿದ್ದ ನಟ ಕಿಚ್ಚ ಅವರನ್ನು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರಕ್ಕೂ ಕರೆದಿದ್ದಾರೆ ಅಂತ ಸುದೀಪ್ ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಪ್ರಚಾರಕ್ಕಾಗಿ ಸುರಪುರ ಹೆಲಿಪ್ಯಾಡಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಸಿಎಂ ಪ್ರಚಾರಕ್ಕೆ ಚಾಮುಂಡೇಶ್ವರಿಗೆ ಕರೆದಿದ್ದಾರೆ. ಆದ್ರೆ ಈ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಕ್ಷೇತ್ರದ ನಾಲ್ಕು ಕಡೆ ಅಂದ್ರೆ ಸುರಪುರ, ಕಕ್ಕೇರಾ, ಹುಣಸಗಿ ಹಾಗೂ ಕೊಡೆಕಲ್ ದಲ್ಲಿ ಪ್ರಚಾರ ಮಾಡಲಿರುವ ಸುದೀಪ್ ಅವರು, ವೈಯಕ್ತಿಕವಾಗಿ ನಾನು ನನ್ನ ಸಹೋದರ ರಾಜುಗೌಡ ಪರ ಪ್ರಚಾರ ಮಾಡಲು ಬಂದಿದ್ದೆನೆ. ಈ ಚುನಾವಣೆಯಲ್ಲಿ ರಾಜುಗೌಡ ಗೆಲ್ಲುತ್ತಾರೆ. ಬಾದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ರಾಜು ಗೌಡ ಅವರು ಇವತ್ತಿಂದ ಪರಿಚಯವಲ್ಲ. ಬಹಳ ಹಳೇ ಕಾಲದಿಂದಲೂ ನನಗೆ ಪರಿಚಯವಿದ್ದಾರೆ. ನಮ್ಮದೇ ಕುಟುಂಬ ಅವನು. ಹೀಗಾಗಿ ರಾಜು ಎಲ್ಲಿರ್ತಾನೋ ಅಲ್ಲೇ ಇರ್ತಿವಿ ನಾವು. ಒಂದು ಕ್ರಿಕೆಟ್ ಮೈದಾನದಲ್ಲಿ ನಾವಿಬ್ಬರು ಪರಿಚಯವಾದ್ವಿ. ಅಲ್ಲಿಂದ ಇಲ್ಲಿಯವರೆಗೂ ನಾವು ಒಂದೇ ಕುಟುಂಬದವರಂತೆ ಬೆಳೆಯುತ್ತಿದ್ದೇವೆ ಅಂದ್ರು. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ರಾಜು ಗೌಡ ನಾವಿಲ್ದೇನೆ ಗೆಲ್ತಾರೆ. ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಒಳ್ಳೆಯ ಕೆಲಸಗಳನ್ನು ಕೂಡ ಮಾಡಿ ಹೆಸರು ಮಾಡಿದ್ದಾರೆ. ಎಲ್ಲಾ ಕಡೆಯೂ ಪ್ರಚಾರದಿಂದಲೇ ಒಬ್ಬ ವ್ಯಕ್ತಿ ಗೆಲ್ತಾನೆ ಅಂದ್ರೆ ಜನರು ದಡ್ಡರಾಗುತ್ತಾರೆ. ಜನಗಳು ಅವರ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ಒಂದು ಬೆಂಬಲ ಅಂತ ಅಂದುಕ್ಕೊಳ್ಳಿ ಅಷ್ಟೇ. ಅವರನ್ನು ಗೆಲ್ಲಿಸಿ ಅನ್ನೋ ಅಧಿಕಾರ ನಮಗಿಲ್ಲ ಅಂತ ಅಂತ ಕಿಚ್ಚ ಹೇಳಿದ್ರು. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಯಾವುದೇ ಪಕ್ಷದ ಪರ ನಾನು ಪ್ರಚಾರ ಮಾಡಲು ಹೋಗಲ್ಲ, ವ್ಯಕ್ತಿಯ ಪರವಷ್ಟೇ ಪ್ರಚಾರಕ್ಕೆ ತೆರಳುತ್ತೇನೆ. ಬದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುತ್ತೇನೆ ಅಂತ ನಾನು ಎಲ್ಲೂ ಹೇಳಿಕೊಂಡಿಲ್ಲ. ರಾಜು ಗೌಡ ಪರಿಚಯವಾಗಿದ್ದ ಸಮಯದಿಂದಲೇ ನನಗೆ ಶ್ರೀರಾಮುಲು ಕೂಡ ಪರಿಚಯ. ಅವರೂ ಕೂಡ ನಮ್ಮ ಸಹೋದರ ಇದ್ದಂಗೆ. ಹೀಗಾಗಿ ಅವರ ವಿರುದ್ಧ ನಾನ್ಯಾಕೆ ಪ್ರಚಾರ ಮಾಡಲಿ. ಆದ್ರೆ ಶ್ರೀರಾಮುಲು ಪ್ರಚಾರಕ್ಕೆ ಕರೆದ್ರೆ ಖಂಡಿತವಾಗಿ ಹೋಗ್ತೀನಿ ಅಂದ್ರು. ಇದನ್ನೂ ಓದಿ: ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

  • ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಮೂರು ಬಾರಿ ಗೆದ್ದು ಏನ್ ಮಾಡಿದ್ರಿ- ಗ್ರಾಮಸ್ಥರ ಪ್ರಶ್ನೆಗಳಿಂದ ಬೇಸತ್ತು ನಿಮ್ಮ ಮತವೇ ಬೇಡವಂದ್ರು ಶಾಸಕ ರಾಜು ಕಾಗೆ

    ಬೆಳಗಾವಿ: ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದೀರಿ? ಎರಡು ಅವಧಿಯಲ್ಲಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ? ಲೆಕ್ಕ ಕೊಡಿ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

    ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಹಾಲಿ ಬಿಜೆಪಿ ಶಾಸಕ ರಾಜೂ ಕಾಗೆಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ನಮ್ಮ ಗ್ರಾಮಕ್ಕೆ ಏನ್ ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

    ಗ್ರಾಮಸ್ಥರ ಆಕ್ರೋಶಕ್ಕೆ ರಾಜು ಕಾಗೆ ಬೇಸತ್ತು ನಿಮ್ಮ ಮತ ನನಗೆ ಬೇಡ ಎಂದು ಮತ್ತೊಮ್ಮೆ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಇದರಿಂದ ವಿಚಲಿತಗೊಂಡ ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ನೀವು ಕಾಲು ಇಡಬೇಡಿ. ನಿಮ್ಮಿಂದ ಅಭಿವೃದ್ಧಿ ಸಾಧ್ಯವಿಲ್ಲ. ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಗರಂ ಆದ ರಾಜು ಕಾಗೆ ನೀವೇನ್ ಓಟ್ ಹಾಕ್ ಬೇಡಿ ಹೋಗ್ರಿ ಅಂತ ಸಿಡಿಮಿಡಿಗೊಂಡ್ರು.

    ಈ ವೇಳೆ ಸ್ವಲ್ಪ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಮರು ಉತ್ತರ ನೀಡದೆ ತಲೆ ತಗ್ಗಿಸಿದ ಹಾಲಿ ಶಾಸಕ ರಾಜೂ ಕಾಗೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸತತ 4 ಬಾರಿ ಶಾಸಕರಾಗಿರುವ ಶಾಸಕ ರಾಜು, ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂಬ ಆರೋಪ ಇದೀಗ ಮುಳುವಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

  • ಅನಂತ್‍ಕುಮಾರ್, ಸಂತೋಷ್ ವಿರುದ್ಧ ಗರಂ – ಬಳ್ಳಾರಿ ಟೂರ್ ಕೈಬಿಟ್ಟ ಅಮಿತ್ ಶಾ

    ಅನಂತ್‍ಕುಮಾರ್, ಸಂತೋಷ್ ವಿರುದ್ಧ ಗರಂ – ಬಳ್ಳಾರಿ ಟೂರ್ ಕೈಬಿಟ್ಟ ಅಮಿತ್ ಶಾ

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದ ಕಡೆ ಗಳಿಗೆಯಲ್ಲಿ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿರೋ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ.

    ರಾತ್ರಿ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರೋ ನಿವಾಸದಲ್ಲಿ 2 ಗಂಟೆ ನಡೆದ ಸಭೆಯಲ್ಲಿ, ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವಿಶೇಷ ಅಂದ್ರೆ ನಿನ್ನೆ ಬೆಂಗಳೂರಲ್ಲೇ ಇದ್ರೂ ಯಡಿಯೂರಪ್ಪ ಮಾತ್ರ ಶಾ ಭೇಟಿಯಾಗಲು ಬರಲೇ ಇಲ್ಲ. ಉಸ್ತುವಾರಿ ಮುರಳೀಧರ್ ರಾವ್, ಚುನಾವಣಾ ಉಸ್ತುವಾರಿಗಳಾದ ಪಿಯೂಷ್ ಗೋಯಲ್, ಪ್ರಕಾಶ್ ಜಾವ್ಡೇಕರ್ ಜೊತೆಗಿದ್ರು.

    ಇಂದು ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಶಾ ನಿವಾಸದಲ್ಲಿ ಇಬ್ಬರ ಜೊತೆಗೂ ಪ್ರತ್ಯೇಕ ಸಭೆ, ಸಂಧಾನ ನಡೆಸ್ತಾರೆ. ವರುಣಾದಲ್ಲಿ ತಮ್ಮ ಮಗನಿಗೆ ಟಿಕೆಟ್ ತಪ್ಪಲು ಅನಂತ್‍ಕುಮಾರ್ ಕಾರಣ ಅನ್ನೋ ಸಿಟ್ಟು ತಣ್ಣಾಗಾಗಿಲ್ಲ. ಇದೇ ಕಾರಣಕ್ಕೆ ಯಡಿಯೂರಪ್ಪ ಪ್ರಚಾರದಿಂದಲೂ ದೂರ ಉಳಿದಿದ್ದು, ಇಂದು ಹಾಸನ ಜಿಲ್ಲೆ ಮತ್ತು ಬೆಂಗಳೂರಲ್ಲಿ ನಿಗದಿಯಾಗಿರೋ ಪ್ರಚಾರದಲ್ಲಿ ಭಾಗಿಯಾಗ್ತಾರ ಇಲ್ವೋ ಅನ್ನೋದು ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

    ಇತ್ತ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಪ್ರಯೋಗಿಸ್ತಿರೋ ರೆಡ್ಡಿ ಬ್ರದರ್ಸ್ ಅಸ್ತ್ರಕ್ಕೆ ಅಮಿತ್ ಶಾ ಅಂಜಿದಂತಿದೆ. ಇಂದು ನಿಗದಿಯಾಗಿದ್ದ ಬಳ್ಳಾರಿ ಪ್ರವಾಸವನ್ನು ಕೊನೆ ಕ್ಷಣದಲ್ಲಿ ಶಾ ರದ್ದುಪಡಿಸಿದ್ದಾರೆ. ಬಿಜೆಪಿಗೂ ರೆಡ್ಡಿಗೂ ಸಂಬಂಧವಿಲ್ಲವೆಂದು ಶಾ ಹೇಳಿದ್ದರೂ ಗಣಿಧಣಿಯ ಸಹೋದರರು ಸೇರಿ 6 ಮಂದಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಂದು ವೇಳೆ ಗಣಿನಾಡಿಗೆ ಹೋದ್ರೆ ರೆಡ್ಡಿಗಳೊಂದಿಗಿನ ನಂಟನ್ನು ಒಪ್ಪಿಕೊಂಡಂತಾಗುತ್ತೆ ಅನ್ನೋದು ಶಾ ಆತಂಕವಾಗಿದ್ದು, ಇಂದು ಕೊಪ್ಪಳ ಜಿಲ್ಲೆಗಷ್ಟೇ ಶಾ ಹೋಗ್ತಾರೆ ಅನ್ನೂ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಚುನಾವಣೆಗಾಗಿಯೇ ಶಾ ಕರೆಸಿಕೊಂಡಿರುವ ಉತ್ತರ ಭಾರತದ ಬಿಜೆಪಿ ನಾಯಕರು ಗಂಟು ಮೂಟೆ ಸಮೇತ ಆಗಮಿಸಿದ್ದಾರೆ. ಎಲೆಕ್ಷನ್ ಮುಗಿಯೋವರೆಗೆ ಕರ್ನಾಟಕದಲ್ಲೇ ಠಿಕಾಣಿ ಹೂಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.