Tag: ಕರ್ನಾಟಕ ಚುನಾವನೆ 2018

  • ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ- ಅನಂತ್ ಕುಮಾರ್

    ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ- ಅನಂತ್ ಕುಮಾರ್

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕವಾಗಿ ಹೊರಬಿದ್ದಿದ್ದು, ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಅಂತ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

    ಸುದ್ದಿಗಾರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಅಂದ್ರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಅನ್ನೋದು ಮೋದಿಯವರ ಉಚ್ಛಾರ, ಅಮಿತ್ ಶಾ ಅವರ ಒಂದು ಮುಂದಾಳತನ ಹಾಗೂ ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕದ ಜನ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ ಅಂದ್ರು.

    ಜನ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ ಕೂಡ ಗಣನೀಯವಾಗಿ ಗೆದ್ದಿದೆ. ಆದ್ರೆ ಕಾಂಗ್ರೆಸ್ ವಿರೋಧಿ ಮತ ಇಂದು ಜನ ಕೊಟ್ಟಿರುವುದರಿಂದ ಇಲ್ಲಿ ಮುಂದಿನ ಹೆಜ್ಜೆ ಏನಾಗಬೇಕು ಅಂತ ನಾವು ನಮ್ಮ ಕೇಂದ್ರೀಯ ನಾಯಕರುಗಳ ಜೊತೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಅಂತ ಹೇಳಿದ್ರು.

  • ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಬಿಗ್ ಬಾಸ್ ಸೀಸನ್ 5ನ ಕಾರ್ಯಕ್ರಮದ ಸ್ಪರ್ಧಿ ನಿವೇದಿತಾ ಗೌಡ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 192ರಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ಮೈಸೂರಿನ ದಟ್ಟಗಳ್ಳಿ ಕನಕದಾಸ ನಗರದಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ಪೋಷಕರ ಜೊತೆ ಹೋಗಿ ನಿವೇದಿತಾ ಗೌಡ ಮತದಾನ ಮಾಡಿದ್ದಾರೆ. ಇಂದು ನಿವೇದಿತಾ ಗೌಡ ಹುಟ್ಟಿದ ದಿನವಾಗಿದೆ. ಇಂದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ತಾನು ಹುಟ್ಟಿದ ದಿನದಂದೇ ಮೊದಲ ಮತದಾನ ಮಾಡಿದ್ದ ಖುಷಿಯಲ್ಲಿದ್ದು, ತುಂಬಾ ಸಂತಸವಾಗಿದೆ. ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರ ತಾಯಿ ಮತ್ತು ನಿವೇದಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

    https://www.instagram.com/p/Biqkvm8hxZN/?hl=en&taken-by=chandanshettyofficial

  • ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆದ ಮತದಾನ ಭರ್ಜರಿಯಿಂದ ಸಾಗುತ್ತಿದ್ದು, ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು ಆಗಿದ್ದು, ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮಹಿಳೆ ಗಾಬರಿಗೊಂಡಿದ್ದಾರೆ.

    ಇಂದು ಮತದಾನ ಮಾತದಾನ ಮಾಡಲು ಬಸ್ಸಮ್ಮ ಕೊಳಿವಾಡನ ಮತಗಟ್ಟೆ 38 ರ ಕೇಂದ್ರಕ್ಕೆ ಬಂದಿದ್ದಾರೆ. ಆಗ ಚುನಾವಣಾಧಿಕಾರಿಗಳು ನಿಮ್ಮ ಮತಚಲಾಯಿಸಿದೆ ಎಂದು ಹೇಳಿದ್ದಾರೆ. ಮತದಾನದಿಂದ ವಂಚಿತಳಾದ ಬಸ್ಸಮ್ಮ ಚುನಾವಣೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಬಸ್ಸಮ್ಮ ಹೆಸರಿನಲ್ಲಿ ಯಾರು ಮತಚಲಾಯಿಸದ್ದಾರೆಂಬ ಅನುಮಾನ ಮೂಡಿದೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.

  • ವಿಶ್ವಕ್ಕೆ ಗುರು ಭಾರತ, ಪ್ರಜೆಯಾಗಿ ಮತದಾನ ಮಾಡಿದ್ದೇನೆ: ನಟ ಉಪೇಂದ್ರ

    ವಿಶ್ವಕ್ಕೆ ಗುರು ಭಾರತ, ಪ್ರಜೆಯಾಗಿ ಮತದಾನ ಮಾಡಿದ್ದೇನೆ: ನಟ ಉಪೇಂದ್ರ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಹಿರಿಯರು, ಮಹಿಳೆಯರು, ಯುವಕರು ಹಾಗೂ ಸಿನಿಮಾ ನಟ-ನಟಿಯರು ಮತದಾನ ಮಾಡುತ್ತಿದ್ದು, ನಟ, ನಿರ್ದೇಶಕ ಉಪೇಂದ್ರ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಪಕ್ಷ ಮಾಡುವಾಗಲೂ ಪ್ರಜೆಯಾಗಿ ಮಾಡಿದ್ದೇನೆ. ನಾಯಕನಾಗಿ ಅಲ್ಲ. ಪ್ರಜೆಗಳಿಗೂ ನಾನು ಇದೇ ಹೇಳಿದ್ದಾನೆ.

    ಇವತ್ತು ಒಂದು ದಿನ ನಾನು ಪ್ರಜೆ. ಪ್ರತಿ 5 ವರ್ಷಗೊಮ್ಮೆ ಮತದಾನ ಮಾಡಲು ಅವಕಾಶ ಬರುತ್ತದೆ. ಆದ್ದರಿಂದ ನನಗೆ ಇಂದು ವೋಟ್ ಮಾಡಲು ತುಂಬಾ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ರಾಜಕೀಯದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಜ್ಯ ರಾಜಕೀಯದ ಬಗ್ಗೆ ಪ್ರಜೆಗಳಿಗೆ ತಿಳಿದಿದ್ದರು. ಇಂದು 60% ಜನರು ಮತದಾನ ಮಾಡುತ್ತಾರೆ ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿದೆ.

    ಈ ದೇಶದವರು ತಮ್ಮ ಭರವಸೆಯನ್ನು ಕಳೆದುಕೊಂಡಿಲ್ಲ. ಈ ದೇಶ ಗ್ರೇಟೆಸ್ಟ್ ಆಗಿದೆ. ಇಲ್ಲಿ ಎಲ್ಲಾ ವಿಚಾರಗಳಿಗೂ ಆಧರಣೆ ಇದೆ. ಆದ್ದರಿಂದ ವಿಶ್ವದ ಗುರು ಈ ದೇಶ. ಇದೊಂದು ಭರವಸೆಯ ದೇಶವಾಗಿದೆ. ಈ ದೇಶದಲ್ಲಿ ಎಷ್ಟೇ ಬಡತನ, ಕಷ್ಟ ಇದ್ದರೂ ಬೇರೆ ಶ್ರೀಮಂತ ದೇಶಕ್ಕೆ ಹೋಗಿ ಬಂದಾಗ ಬೇಸರವಾಗುತ್ತದೆ. ಆದ್ದರಿಂದ ನಿಜವಾಗಿಯೂ ಭಾರತದವರು ತುಂಬಾ ಖುಷಿಯಾಗಿದ್ದಾರೆ ಎನ್ನಿಸುತ್ತದೆ ಎಂದ್ರು.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

  • ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಹುಬ್ಬಳ್ಳಿ: ನಾನು ಈ ಬಾರಿ ವೋಟು ಹಾಕೋದು ಬೇಡ ಅಂತ ತೀರ್ಮಾನ ಮಾಡಿದ್ದೆ, ಆದರೆ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟು ಹಾಕ್ತೀನಿ ಎಂದು ಚಂದ್ರಕಾಂತ ಮೆಹರವಾಡಿ ಹೇಳಿದ್ದಾರೆ.

    ಭಾನುವಾರ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಕಾಂತ ಮೆಹರವಾಡಿ ಹೆಸರನ್ನ ಪ್ರಸ್ತಾಪಿಸಿ, ಹುಬ್ಬಳ್ಳಿಗೂ ನನಗೂ ಅವಿನಾಭಾವ ಸಂಬಂಧ ಇದೆ ಅಂತ ಹೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಚಂದ್ರಕಾಂತ ನನ್ನನ್ನು ಭೇಟಿಯಾಗಿದ್ದರು. ಅವರ ಪತ್ನಿ ಗರ್ಭಿಣಿ ಕಷ್ಟದಲ್ಲಿದ್ದಾರೆ ಅಂತ ತಿಳಿದು ಸಹಾಯ ಮಾಡಿದೆ. ಇದೀಗ ಆ ಕುಟುಂಬ ನೆಮ್ಮದಿಯಿಂದ ಜೀವನ ಮಾಡುತ್ತಿದೆ ಎಂದು ಪ್ರಸ್ತಾಪ ಮಾಡಿದ್ದರು.

    ಈ ಬಗ್ಗೆ ಚಂದ್ರಕಾಂತ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೋದಿಯನ್ನು ಹೊಗಳಿ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಟೈಲರಿಂಗ್ ಮಷಿನ್ ಕೂಡ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಬರೀ ಸುಳ್ಳು ಭರವಸೆ ಕೊಟ್ಟರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ಯಾರು ಈ ಚಂದ್ರಕಾಂತ್ ಮೆಹರವಾಡಿ?
    ಚಂದ್ರಕಾಂತ್ ಮೆಹರವಾಡಿ ಹುಬ್ಬಳ್ಳಿಯ. ನೇಕಾರ ನಗರ ನಿವಾಸಿ. 20 ವರ್ಷ ಹಿಂದೆ ದುಡಿಮೆಗಾಗಿ ಪತ್ನಿ ಶೋಭಾ ಜೊತೆ ಗುಜರಾತ್ ಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಶೋಭಾ ಅವರನ್ನ ಆಸ್ಪತ್ರೆಗೆ ದಾಖಲಿಸಿದಾಗ ಹೆಣ್ಣು ಮಗು ಜನನವಾಯಿತು.

    ಆಗ ಆಸ್ಪತ್ರೆ ಬಿಲ್ ಕಟ್ಟುವಷ್ಟು ಹಣ ಚಂದ್ರಕಾಂತ್ ಅವರ ಬಳಿ ಇರಲಿಲ್ಲ. ಆಗ ಸೆಕ್ಯೂರಿಟಿ ಸೂಚನೆ ಮೇರೆಗೆ ಮೋದಿ ಅವರ ಮನೆಗೆ ಚಂದ್ರಕಾಂತ್ ಹೋದಾಗ ಗುಜರಾತ್ ಸಿಎಂ ಆಗಿದ್ದ ಮೋದಿ ಮನೆಯಲ್ಲಿದ್ದರು. ಮೋದಿ ಬಳಿ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟ ಚಂದ್ರಕಾಂತ್ ಅವರಿಗೆ ಒಂದು ಪತ್ರವನ್ನ ಮೋದಿ ನೀಡುತ್ತಾರೆ. ಆ ಪತ್ರದ ಸಹಾಯದಿಂದ ಉಚಿತವಾಗಿ ಆಸ್ಪತ್ರೆಯ ಎಲ್ಲಾ ಸೌಲಭ್ಯ ಸಿಕ್ಕಿತ್ತು.