Tag: ಕರ್ನಾಟಕ ಚುನಾವಣೆ2018

  • ಹೊಸ ಗೇಮ್ ಪ್ಲಾನ್ ನೊಂದಿಗೆ ರಣತಂತ್ರಕ್ಕಿಳಿದ ಬಿಜೆಪಿ!

    ಹೊಸ ಗೇಮ್ ಪ್ಲಾನ್ ನೊಂದಿಗೆ ರಣತಂತ್ರಕ್ಕಿಳಿದ ಬಿಜೆಪಿ!

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರು ಸರ್ಕಾರ ರಚನೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹೊಸ ಗೇಮ್ ಪ್ಲಾನ್ ಮಾಡಿದೆ.

    ಆಪರೇಷನ್ ಫ್ಲವರ್ ಹೆಸರಿನಡಿ ಬಿಜೆಪಿ ಹೈಕಮಾಂಡ್ ರಣತಂತ್ರಕ್ಕಿಳಿದಿದೆ. ಈಗಾಗಲೇ ಆಪರೇಷನ್ ಫ್ಲವರ್ ಗೆ ನಾಲ್ಕು ತಂಡ ರಚನೆಯಾಗಿದ್ದು, ಈ ಮೂಲಕ ಮೆಗಾ ಆಪರೇಷನ್ ಫ್ಲವರ್ ನಡೆಯಲಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಮೂರು ರಾಜ್ಯ ನಾಯಕರ ತಂಡ, ಕೇಂದ್ರ ನಾಯಕರ ತಂಡ ಹಾಗೂ ಬಿಎಸ್ ವೈ ನೇತೃತ್ವದಲ್ಲಿ ಒಂದು ತಂಡ, ಶ್ರೀರಾಮುಲು ನೇತೃತ್ವದಲ್ಲಿ ಒಂದು ತಂಡ, ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಒಂದು ತಂಡ ಹಾಗೂ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದೆ. ಒಟ್ಟು ನಾಲ್ಕು ತಂಡಗಳಲ್ಲಿ ಆಪರೇಷನ್ ಫ್ಲವರ್ ಗೆ ಬಿಜೆಪಿ ಕೈ ಹಾಕಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

  • ರಾಜ್ಯಾದ್ಯಂತ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ರಾಜ್ಯಾದ್ಯಂತ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಸಂಜೆ ನಗರ ಸೇರಿದಂತೆ ರಾಜ್ಯದ ಹಲವೆಡೆ ವರುಣಾ ಅಬ್ಬರಿಸುತ್ತಿದ್ದಾನೆ. ಇಂದೂ ಕೂಡ ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ್ಯತೆಗಳಿವೆ.

    ಶುಕ್ರವಾರ ಸಂಜೆ ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್, ಜಾಲಹಳಿ, ನೆಲಮಂಗಲ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದ ಸ್ಟೇಜ್‍ಗೆ ಹಾಕಲಾಗಿದ್ದ ತಗಡುಗಳು ಹಾರಿಹೋಗಿದ್ದು, ಪ್ಯಾಲೇಸ್ ಬಳಿ ಆಲದ ಮರವೊಂದು ನೆಲಕ್ಕುರುಳಿದೆ.

    ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗಿದ್ರಿಂದ ವಾಹನ ಸವಾರರು ತೀವ್ರ ಪ್ರಯಾಸಪಟ್ರು. ಚಿಕ್ಕೋಡಿಯ ಹಾರೂಗೇರಿಯಲ್ಲಿ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯಿಂದ 122ರ ಪಿಂಕ್ ಮತಗಟ್ಟೆ ಬ್ಯಾನರ್ ನಾಶವಾಗಿದೆ.

    ಮಂಗಳೂರು, ಉಡುಪಿಯಲ್ಲೂ ಗಾಳಿ ಸಹಿತ ಭಾರೀ ಮಳೆಯಾಗಿದ್ರಿಂದ, ಜನ ಕತ್ತಲಲ್ಲಿ ಕಳೆಯಬೇಕಾಯ್ತು. ಮಂಡ್ಯ ತಾಲೂಕಿನಲ್ಲಿ ರಾತ್ರಿ ಮಳೆಯಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಾಗಾಗಿ ಇಂದು ಚಿಕ್ಕ ಮಂಡ್ಯ ಗ್ರಾಮದಲ್ಲಿ ಬೆಳಗ್ಗೆ ಅಧಿಕಾರಿಗಳು ಮೇಣದ ಬತ್ತಿ ಬೆಳಕಿನಲ್ಲಿ ಮತಯಂತ್ರಗಳನ್ನು ಸಿದ್ಧಪಡಿಸಿಕೊಂಡರು.

  • ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾದಾಮಿ ಅಭಿವೃದ್ಧಿಗೆ ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ- ಯಾವೆಲ್ಲ ಭರವಸೆಗಳಿವೆ?

    ಬಾಗಲಕೋಟೆ: ಕಾಂಗ್ರೆಸ್‍ನಿಂದ ಬಾದಾಮಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಬೆನ್ನೆಲ್ಲೇ ಬಿಜೆಪಿ ಕೂಡ ಬಾದಾಮಿಯ ಮುನ್ನೋಟ ಕೈಪಿಡಿ ಬಿಡುಗಡೆ ಮಾಡಿದೆ.

    24*7 ವಿದ್ಯುತ್ ಪೂರೈಕೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕೆಂದೂರು ಕೆರೆ ಹೂಳೆತ್ತುವುದು, ರಸ್ತೆಗಳ ಕಾಂಕ್ರಿಟೀಕರಣ, ಕೆರೂರುನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ, ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರತಿ ಬ್ಲಾಕ್‍ಗೆ ಉಚಿತ ಆಂಬುಲೆನ್ಸ್ ಸೇವೆ, ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.

    ಕೈಪಿಡಿ ಬಿಡುಗಡೆ ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಿದ್ದರಾಮಯ್ಯಗೆ ಹಣದಿಂದ ಗೆಲ್ಲುವ ಅಹಂಕಾರ ತುಂಬಿದೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನ ಪಾಪದ ಮೂಟೆ ಅವರನ್ನು ಬಾದಾಮಿಯಲ್ಲಿ ಸೋಲಿಸುತ್ತೆ ಅಂತ ವಾಗ್ದಾಳಿ ನಡೆಸಿದ್ದಾರೆ.

  • ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ರಾಯಚೂರು: ಪ್ರಧಾ ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲಾ ಅಂತ ಗುಜರಾತನ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

    ರಾಯಚೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಗ್ನೇಶ್, ನಾಟಕ ಬಂದ್ ಮಾಡಿ ಬಡವರಿಗೆ ಹಾಗು ದಲಿತರಿಗೆ ಊಟ ನೀಡಿ ಅಂತ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿಗಳಿಗೆ ಈಗ ದಲಿತರ ಬಗ್ಗೆ ಪ್ರೇಮವಾಗಿದೆ. ಗುಜರಾತ್ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗು ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಕರ್ನಾಟಕ ಚುನಾವಣೆ ಬಂದಾಗ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ಸಫಾಯಿ ಕರ್ಮಚಾರಿ ಕೆಲಸ ಮಾಡುವುದನ್ನು ಬಿಡಿಸಲು ಟೆಕ್ನಾಲಾಜಿ ತೆಗೆದುಕೊಂಡು ಬನ್ನಿ. ರೋಹಿತ್ ವೇಮಲು ಹತ್ಯೆ ಮಾಡಿ ಈಗ ನಾಟಕ ಮಾಡುತ್ತೀರಿ, ನೀವು ಮನುವಾದಿ. ಪ್ರಧಾನ ಮಂತ್ರಿ ಮೋದಿ ನಾಲ್ಕು ವರ್ಷ ಬ್ಯಾಂಕುಗಳ ಕೊಳ್ಳೆ ಹೊಡೆದಿದ್ದಾರೆ. ಇವರು ಚೌಕಿದಾರರಲ್ಲ ದೇಶದ ನಂಬರ್ ಕಳ್ಳ ಅಂತಾ ಕಟು ಪದಗಳಿಂದ ಟೀಕಿಸಿದ್ರು.

  • ಊರಿನ ಅಭಿವೃದ್ಧಿಗೆ ಏನ್ ಮಾಡಿದ್ದೀರಾ.. ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ಹಲ್ಲೆ!

    ಊರಿನ ಅಭಿವೃದ್ಧಿಗೆ ಏನ್ ಮಾಡಿದ್ದೀರಾ.. ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ ಗ್ರಾಮಸ್ಥರ ಮೇಲೆ ಹಲ್ಲೆ!

    ಚಾಮರಾಜನಗರ: ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಮೇಲೆಯೇ ಹಲ್ಲೆ ನಡೆಸಿದ ಘಟನೆ ಚಾಮರಾಜನಗರದ ಜಿಲ್ಲೆಯ ಹನೂರು ಕ್ಷೇತ್ರದ ಕೌದಳ್ಳಿಯಲ್ಲಿ ನಡೆದಿದೆ.

    ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ನರೇಂದ್ರ ಬೆಂಬಲಿಗರು ಗ್ರಾಮಕ್ಕೆ ಮತ ಕೇಳಲು ಬಂದಿದ್ದರು. ಈ ವೇಳೆ ಗ್ರಾಮಸ್ಥರು, ಅಭಿವೃದ್ಧಿ ಮಾಡದೇ ಮತ ಕೇಳಲು ಬಂದಿದ್ದೀರಾ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಚುನಾವಣೆ ಬಂದಾಗ ಮಾತ್ರ ಬರ್ತೀರಾ ಬೇರೆ ದಿನ ಎಲ್ಲಿಗೆ ಹೋಗಿರುತ್ತೀರಾ. ಗ್ರಾಮದ ಅಭಿವೃದ್ಧಿಗೆ ಏನು ಮಾಡಿದ್ದೀರಾ? ನಾವು ಯಾಕೆ ಮತ ಹಾಕಬೇಕು? ಅಂತ ಗ್ರಾಮಸ್ಥರು ಶಾಸಕನ ಬೆಂಬಲಿಗರಿಗೆ ಪ್ರಶ್ನೆ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಹೋದಲ್ಲೆಲ್ಲಾ ಪ್ರಶ್ನೆಗಳನ್ನು ಕೇಳುವ ಮೂಲಕ ಗ್ರಾಮ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕನ ಬೆಂಬಲಿಗರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯನ್ನು ಖಂಡಿಸಿ ಗ್ರಾಮಸ್ಥರು ಬೆಂಬಲಿಗರ ಕಾರಿನ ಮೇಲೆ ಕಲ್ಲು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.