Tag: ಕರ್ನಾಟಕ ಚುನಾವಣೆ ಫಲಿತಾಂಶ

  • ಭಟ್ಕಳ-ಹೊನ್ನಾವರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ – ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ

    ಭಟ್ಕಳ-ಹೊನ್ನಾವರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ – ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ

    ಕಾರವಾರ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress), ಬಿಜೆಪಿ (BJP) ಚುನಾವಣೆ ಸಂದರ್ಭದಲ್ಲಿ ಶುರುವಾದ ಜಗಳಗಳು ಫಲಿತಾಂಶ ಬಂದಮೇಲೂ ಮುಂದುವರಿದಿದೆ. ಬಿಜೆಪಿಯ ಸುನೀಲ್ ನಾಯ್ಕರನ್ನ ಕಾಂಗ್ರೆಸ್‌ನ ಮಂಕಾಳುವೈದ್ಯ ದೊಡ್ಡ ಅಂತರದಲ್ಲಿ ಸೋಲಿಸಿದ ನಂತರ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಒಳ ಜಗಳ ಇದೀಗ ಬೀದಿಗೆ ಬಂದಿದೆ.

    ಜಿಲ್ಲೆಯ ಹೊನ್ನಾವರದ ಮೂರ್ಕಣಿ ಗ್ರಾಮದಲ್ಲಿ ಕಿಡಿಗೇಡಿಗಳು ಬಿಜೆಪಿ ಕಾರ್ಯಕರ್ತ ಮಾರುತಿ ನಾಯ್ಕ ಎಂಬವರ ಎಲೆಕ್ಟ್ರಿಕ್ ಮಳಿಗೆಗೆ ಬೆಂಕಿ ಹಚ್ಚಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ನರಸಿಂಹ ಸಣ್ಣತಮ್ಮ ಎಂಬುವವರ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಪಟಾಕಿ ಕಿಡಿ ಕಾರಿನ ಶಡ್‌ಗೆ ಬೆಂಕಿ ಹೊತ್ತಿಕೊಂಡು ಕಾರು ಅಲ್ಪಪ್ರಮಾಣದಲ್ಲಿ ಸುಟ್ಟಿದ್ದು ಬೆಂಕಿ ನಂದಿಸಲಾಗಿದೆ. ಆದ್ರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: Karnataka Election 2023: ಇವರೇ ನಿಮ್ಮ ಜಿಲ್ಲೆಯ ಶಾಸಕರು, ಒಂದು ಕ್ಲಿಕ್‌ನಲ್ಲಿದೆ ಸಂಪೂರ್ಣ ಮಾಹಿತಿ

    ಇನ್ನೂ ಮುರುಡೇಶ್ವರ ವ್ಯಾಪ್ತಿಯ ಶಿರಾಲಿಯ ಬಿಜೆಪಿ ಮುಖಂಡ ರಾಮಚಂದ್ರ ನಾಯ್ಕ ಎಂಬವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಹಲ್ಲೆ ಮಾಡಿದ್ದು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

    ಸದ್ಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಚುನಾವಣಾ ಫಲಿತಾಂಶದ ನಂತರ ಹಲ್ಲೆ, ಗಲಾಟೆಗೆ ತಿರುಗಿದ್ದು ಮುಂದಿನ ದಿನದಲ್ಲಿ ಯಾವ ಹಂತ ತಲುಪಲಿದೆಯೋ ಎಂಬ ಆತಂಕ ಸಾಮಾನ್ಯ ಜನರನ್ನ ಕಾಡುವಂತೆ ಮಾಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಬಿಜೆಪಿಗೆ ದೊಡ್ಡಪೆಟ್ಟು ಬಿದ್ದಿದೆ: ಎಂ.ಪಿ ರೇಣುಕಾಚಾರ್ಯ

  • Karnataka Election 2023: ಇವರೇ ನಿಮ್ಮ ಜಿಲ್ಲೆಯ ಶಾಸಕರು, ಒಂದು ಕ್ಲಿಕ್‌ನಲ್ಲಿದೆ ಸಂಪೂರ್ಣ ಮಾಹಿತಿ

    Karnataka Election 2023: ಇವರೇ ನಿಮ್ಮ ಜಿಲ್ಲೆಯ ಶಾಸಕರು, ಒಂದು ಕ್ಲಿಕ್‌ನಲ್ಲಿದೆ ಸಂಪೂರ್ಣ ಮಾಹಿತಿ

    ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ 135, ಬಿಜೆಪಿ 66, ಜೆಡಿಎಸ್‌ 19 ಹಾಗೂ 4 ಮಂದಿ ಪಕ್ಷೇತರರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 224 ವಿಧಾನಸಭಾ ಕ್ಷೇತ್ರಗಳ ಜಿಲ್ಲಾವಾರು ಮಾಹಿತಿ ಇಲ್ಲಿದೆ.

    ಬೆಂಗಳೂರು ನಗರ (Bengaluru City)

    ಬೆಂಗಳೂರು ಗ್ರಾಮಾಂತರ (Bengaluru Rural)

    ಬೆಳಗಾವಿ (Belagavi)

     

    ಬಾಗಲಕೋಟೆ (Bagalkot)

    ಬಳ್ಳಾರಿ (Bellary)

    ಬೀದರ್‌ (Bidar)

    ಚಾಮರಾಜನಗರ (Chamarajanagar)

    ಚಿಕ್ಕಬಳ್ಳಾಪುರ (Chikkaballapur)

    ಚಿಕ್ಕಮಗಳೂರು (Chikkamagaluru)

    ಚಿತ್ರದುರ್ಗ (Chitradurga)

    ದಕ್ಷಿಣ ಕನ್ನಡ (Dakshina Kannada)

    ದಾವಣಗೆರೆ (Davanagere)

    ಧಾರವಾಡ (Dharwad)

    ಗದಗ (Gadag)

    ಹಾಸನ (Hassan)

    ಹಾವೇರಿ (Haveri)

    ಕಲಬುರಗಿ (Kalaburagi)

    ಕೊಡಗು (Kodagu)

    ಕೋಲಾರ (Kolar)

    ಕೊಪ್ಪಳ (Koppal)

    ಮಂಡ್ಯ (Mandya)

    ಮೈಸೂರು (Mysuru)

    ರಾಯಚೂರು (Raichur)

    ರಾಮನಗರ (Ramanagar)

    ಶಿವಮೊಗ್ಗ (Shivamogga)

    ತುಮಕೂರು (Tumkur)

    ಉಡುಪಿ (Udupi)

    ಉತ್ತರ ಕನ್ನಡ (Uttar Kannada)

    ವಿಜಯಪುರ (Vijayapura)

    ವಿಜಯನಗರ (Vijayanagara)

    ಯಾದಗಿರಿ (Yadgir)

  • ಭದ್ರಕೋಟೆ ಛಿದ್ರಗೊಳಿಸಿದ ಕೈ – ಕೊಡಗಿನಲ್ಲಿ ಬಿಜೆಪಿಗೆ ಹೀನಾಯ ಸೋಲು

    ಭದ್ರಕೋಟೆ ಛಿದ್ರಗೊಳಿಸಿದ ಕೈ – ಕೊಡಗಿನಲ್ಲಿ ಬಿಜೆಪಿಗೆ ಹೀನಾಯ ಸೋಲು

    ಮಡಿಕೇರಿ: ಬಿಜೆಪಿ (BJP) ಭದ್ರಕೋಟೆ ಎಂದೇ ಭಾವಿಸಲಾಗಿದ್ದ ಕೊಡಗಿನ (Kodagu) ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ.

    ವಿರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ ಬೋಪಯ್ಯ ಸೋಲುಕಂಡಿದ್ದರೆ, ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಸೋಲು ಕಂಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಬಿಜೆಪಿ ಭದ್ರಕೋಟೆ ಕೊಡಗು ಛಿದ್ರಗೊಳಿಸಿದ ಕಾಂಗ್ರೆಸ್‌ LIVE Updates

    ವಿರಾಜಪೇಟೆಯಲ್ಲಿ ಕೆ.ಜಿ ಬೋಪಯ್ಯ ವಿರುದ್ಧ ಕಾಂಗ್ರೆಸ್ (Congress) ಅಭ್ಯರ್ಥಿ ಪೊನ್ನಣ್ಣ ಗೆಲುವು ಸಾಧಿಸಿದ್ದರು. ಅಪ್ಪಚ್ಚು ರಂಜನ್ ವಿರುದ್ಧ ಮಂತರ್‌ಗೌಡ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲುಗೆ ಹೀನಾಯ ಸೋಲು