ಬೆಂಗಳೂರು: ಇದು ಕಾಂಗ್ರೆಸ್ ಗೆಲುವಿನ ಜೊತೆಗೆ ಜನರ ಗೆಲುವು. ಹಳ್ಳಿಜನ ಅಷ್ಟೇ ಅಲ್ಲ. ಪಟ್ಟಣದ ಜನರ ಒಲವು ಕಾಂಗ್ರೆಸ್ ಕಡೆಗೆ ವಾಲುತ್ತಿದೆ. ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ಶಾಸಕರಿಗೆ ಸಹಜವಾಗಿ ಹೆಚ್ಚಿನ ಅವಕಾಶ ಇರುತ್ತದೆ. ಆದರೆ ಅದನ್ನು ಮೀರಿ ಜನ ನಮ್ಮ ಕಡೆ ಒಲವು ತೋರಿದ್ದಾರೆ. ಜನ ನಮ್ಮ ಮೇಲೆ ವಿಶ್ವಾಸ ಇಡುತ್ತಿದ್ದಾರೆ. ಅವರ ವಿಶ್ವಾಸ ಉಳಿಸುವಂತ ಆಡಳಿತ ಮುಂದಿನ ದಿನಗಳಲ್ಲಿ ಕೊಡುತ್ತೇವೆ ಎಂದು ಹೇಳಿದರು.

ಐಟಿ, ಇಡಿ, ಬೇನಾಮಿ ಆಸ್ತಿ ವಿಚಾರದಲ್ಲಿ ಏನೇನು ಆಗುತ್ತಿದೆ. ದೆಹಲಿ ಮಟ್ಟದಲ್ಲಿ ಏನೇನು ಆಗುತ್ತಿದೆ ಎಲ್ಲಾ ಗೊತ್ತಿದೆ. ಯಾರ್ಯಾರು ದೆಹಲಿಗೆ ಹೋಗಿ ಏನು ಮಾಡುತ್ತಿದಾರೆ ಎಲ್ಲಾ ಗೊತ್ತಿದೆ. ಸಿಎಂ, ಸಚಿವರು, ಶಾಸಕರು ಅವರ ಕ್ಷೇತ್ರದಲ್ಲೆಲ್ಲಾ ಏನೇನಾಗಿದೆ ಎಲ್ಲಾ ಗೊತ್ತಿದೆಯಲ್ಲ ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ
ಕುಮಾರಸ್ವಾಮಿ ಮಕ್ಮಲ್ ಟೋಪಿ ಎಂಬ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಟೋಪಿ ಹಾಕಲಿ. ನಾನು ಡೈಲಿ ಪಾದಯಾತ್ರೆಗೆ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಹೊಸ ಶೂ ತಗೆದುಕೊಂಡಿದ್ದೇನೆ ಎಂದು ತಮ್ಮ ಶೂ ಕಡೆ ನೋಡಿಕೊಂಡು ಹೆಚ್‍ಡಿಕೆ ಬಗ್ಗೆ ವ್ಯಂಗ್ಯವಾಡಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ ನಡೆದಿತ್ತು. 58 ಪುರಸಭೆ, 57 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಹಲವು ಕಡೆ ಇನ್ನೂ ಮತ ಎಣಿಕೆ ನಡೆಯುತ್ತಿದೆ. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK









