Tag: ಕರ್ನಾಟಕ ಎಲೆಕ್ಷನ್ 2023

  • ಮತ್ತೆ ಎದ್ದು ಓಡುತ್ತೇನೆ, ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ – ನಿಖಿಲ್‌

    ಮತ್ತೆ ಎದ್ದು ಓಡುತ್ತೇನೆ, ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ – ನಿಖಿಲ್‌

    ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ (Sumalatha) ಅವರ ಎದುರು ಸೋತಿದ್ದ ಜೆಡಿಎಸ್‌ ಮುಖಂಡ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ (Karnataka Election) ಸೋಲನುಭವಿಸಿದ್ದಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ (Congress) ಅಭ್ಯರ್ಥಿ ಇಕ್ಬಾಲ್ ಹುಸೇನ್ ಎದುರು 10,715 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್‌ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ ಜೆಡಿಎಸ್‍ಗೆ ಶಾಕ್ – 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಗೆಲುವು

    ನಿಖಿಲ್‌ ಪ್ರತಿಕ್ರಿಯೆ ಏನು?
    ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆ.

    ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಹೆಚ್.ಡಿ ದೇವೇಗೌಡ ಸಾಹೇಬರಿಂದ, ತಂದೆ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ. ಇದನ್ನೂ ಓದಿ: ನಾನು ಜೈಲಲ್ಲಿದ್ದಾಗ ಸೋನಿಯಾ ಗಾಂಧಿ ಭೇಟಿಯಾಗಲು ಬಂದಿದ್ದನ್ನು ಎಂದೂ ಮರೆಯಲ್ಲ: ಡಿಕೆಶಿ ಭಾವುಕ

    ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನ ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು ಎಂದು ಬರೆದುಕೊಂಡಿದ್ದಾರೆ.

  • ಮತಗಳಿಗೆ ಮಾತ್ರ ಸೀಮಿತವಾಗಿದ್ದೇವೆ, ನಮಗೂ ಅವಕಾಶ ಕೊಡಿ – BJPಗೆ ಒಬಿಸಿ ನಾಯಕರ ಮನವಿ

    ಮತಗಳಿಗೆ ಮಾತ್ರ ಸೀಮಿತವಾಗಿದ್ದೇವೆ, ನಮಗೂ ಅವಕಾಶ ಕೊಡಿ – BJPಗೆ ಒಬಿಸಿ ನಾಯಕರ ಮನವಿ

    ನವದೆಹಲಿ: ಮುಂಬರುವ ವಿಧಾನಸಭೆ (Assembly Election) ಮತ್ತು ಲೋಕಸಭೆ ಚುನಾವಣೆಯಲ್ಲಿ (Parliamentary Election) ಒಬಿಸಿಯಲ್ಲಿರುವ (OBC) ಸಮುದಾಯಗಳಿಗೆ ಕ್ಷೇತ್ರಗಳ ಸಂಖ್ಯೆ ಹೆಚ್ಚಿಸುವಂತೆ 40ಕ್ಕೂ ಅಧಿಕ ಹಿಂದುಳಿದ ವರ್ಗಗಳ ನಾಯಕರ ನಿಯೋಗ ಬಿಜೆಪಿ (BJP) ಹೈಕಮಾಂಡ್ ನಾಯಕರನ್ನ ಮನವಿ ಮಾಡಿದೆ.

    ದೆಹಲಿಯಲ್ಲಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಸೇರಿ ಹಲವು ನಾಯಕರನ್ನು ಭೇಟಿ ಮಾಡಿದ ಒಬಿಸಿ ನಾಯಕರ ನಿಯೋಗ, ಸಣ್ಣ ಸಣ್ಣ ಸಮುದಾಯಗಳ ನಾಯಕರನ್ನ ಗುರುತಿಸಿ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಒಬಿಸಿ ನಾಯಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: `ಏಕರೂಪ ನಾಗರಿಕ ಸಂಹಿತೆ’ ಕುರಿತು ಚರ್ಚಿಸಲು ಫೆ.12ರಂದು ಮುಸ್ಲಿಮರ ಬೃಹತ್ ಸಮಾವೇಶ

    ಈ ಬಗ್ಗೆ ಮಾತನಾಡಿದ ಮರಾಠ ಸಂಘದ ರಾಜ್ಯಾಧ್ಯಕ್ಷ ಶಾಮಸುಂದರ್ ಗಾಯಕವಾಡ್, ಲೋಕಸಭೆ ವಿಧಾನಸಭೆ ಚುನಾವಣೆಯಲ್ಲಿ ಒಬಿಸಿ ಅಭ್ಯರ್ಥಿಗಳನ್ನ ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಶೇ.35 ಒಬಿಸಿ, ಎಸ್ಸಿ – ಎಸ್ಟಿ ಮತಗಳು (SCST Community Vote) ಶೇ.23, ಲಿಂಗಾಯತ ಶೇ.16, ಒಕ್ಕಲಿಗ ಶೇ.11, ಬ್ರಾಹ್ಮಣರು ಶೇ.4 ರಷ್ಟಿದ್ದಾರೆ. ಈ ಪೈಕಿ ಒಬಿಸಿ ಶೇ.20ಕ್ಕೂ ಅಧಿಕ ಜನರು ಬಿಜೆಪಿಗೆ (BJP) ಮತ ಚಲಾಯಿಸುತ್ತಿದ್ದಾರೆ. ಎಸ್ಸಿ ಎಸ್ಟಿ ಶೇ.15, ಒಕ್ಕಲಿಗ ಮತ್ತು ಲಿಂಗಾಯತ ಸೇರಿ ಶೇ.17 ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಮತ ಪ್ರಮಾಣದಲ್ಲಿ ಒಬಿಸಿ ಜನರೇ ಹೆಚ್ಚು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಅದಾಗ್ಯೂ ನಮ್ಮನ್ನ ನಿರ್ಲಕ್ಷಿಸಿ ಕೇವಲ ವೀರಶೈವ ಲಿಂಗಾಯತ, ಒಕ್ಕಲಿಗರು, ಬ್ರಾಹ್ಮಣರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಿಂದುಳಿದ ವರ್ಗಗಳಲ್ಲಿರುವ ಸಮುದಾಯಗಳನ್ನ ಕೇವಲ ಮತಕ್ಕಾಗಿ ಸೀಮಿತಗೊಳಿಸಲಾಗಿದೆ. ನಮಗೆ ಹೆಚ್ಚಿನ ಸ್ಥಾನಮಾನ ಸಿಗುತ್ತಿಲ್ಲ ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ 15ರ ಬದಲು 75 ಕ್ಷೇತ್ರಗಳಲ್ಲಿ ಒಬಿಸಿಯಲ್ಲಿರುವ ಚಿಕ್ಕ ಪುಟ್ಟ ಸಮುದಾಯಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಅವರು ಒತ್ತಾಯಿಸಿದರು. ಇದನ್ನೂ ಓದಿ: Earthquakeː ಟರ್ಕಿಯಲ್ಲಿ ಸಿಲುಕಿರೋದು ಬೆಂಗಳೂರು ಟೆಕ್ಕಿಯಲ್ಲ- ಕನ್ನಡಿಗರ ರಕ್ಷಣೆಗೆ ಮುಂದಾದ ಸರ್ಕಾರ

    ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲ ರಾಜ್ಯಧ್ಯಕ್ಷ ಎಲ್. ನಾಗರಾಜ್ ಆಚಾರ್ ಮಾತನಾಡಿ, ಬಹಳಷ್ಟು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಪಕ್ಷಕ್ಕಾಗಿ ದುಡಿದ್ದೇವೆ, ಹಿಂದುಳಿದ ವರ್ಗದಲ್ಲಿರುವ ಬಹುತೇಕ ಸಮುದಾಯಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿವೆ. ಈ ಹಿನ್ನಲೆ ಆ ವರ್ಗಗಳಿಗೆ ಆದ್ಯತೆ ನೀಡಬೇಕು. ಬೇರೆ ಬೇರೆ ವಿಭಾಗಗಳಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದರು.

    ವಿಶ್ವಕರ್ಮ ಮುಖಂಡ ಹಾಗೂ 2018ರ ಚುನಾವಣೆ ಮಂಡ್ಯ ಪರಾರ್ಜಿತ ಅಭ್ಯರ್ಥಿ ಡಿ.ವೆಂಕಟೇಶ ಮಾತನಾಡಿ, ನಮ್ಮ ಒಬಿಸಿಯಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಎಲ್ಲ ದೊಡ್ಡ ಪ್ರಮಾಣದಲ್ಲಿಲ್ಲ. ಯಾವ ಕ್ಷೇತ್ರದಲ್ಲೂ ನಿರ್ಣಾಯಕವಾಗಿಲ್ಲ. ಆದ್ದರಿಂದ ನಮ್ಮ ಸಮುದಾಯದ ನಾಯಕರಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

    ನಿಯೋಗದಲ್ಲಿ ಮರಾಠ, ಗಾಣಿಗ, ಕುರುಬ, ಗೊಲ್ಲ, ವಿಶ್ವಕರ್ಮ, ಕಂಬಾರ, ಬಲಿಜ, ಈಡಿಗ, ನೇಕಾರ, ಸೇರಿ ಇನ್ನು ಹಲವು ಸಮುದಾಯದ ನಾಯಕರು ಇದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮರ್ಥ ಅಭ್ಯರ್ಥಿಗಳಿದ್ದಾಗ ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸಲ್ಲ -HDK

    ಸಮರ್ಥ ಅಭ್ಯರ್ಥಿಗಳಿದ್ದಾಗ ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸಲ್ಲ -HDK

    ರಾಯಚೂರು: ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾಗ, ನಾವು ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಹಾಸನದಲ್ಲಿ (Hassan) ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನ (Raichur) ಕಲ್ಮಲಾ ಗ್ರಾಮದಲ್ಲಿಂದು ಮಾತನಾಡಿದ್ದಾರೆ. ಇದನ್ನೂ ಓದಿ: ನನ್ನ ರಾಜಕೀಯ ನಿವೃತ್ತಿ ಜೊತೆಗೆ ನನ್ನ ಆಸೆ ಆಕಾಂಕ್ಷೆಗಳು ನಿವೃತ್ತವಾಗಿವೆ: ಎಸ್.ಎಂ.ಕೃಷ್ಣ

    ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ನಾಲ್ಕು-ಐದು ಜನ ಹೇಳಿದ ತಕ್ಷಣ ಅವರು ಹೇಳಿದಂತೆ ಆಗಲ್ಲ. ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾಗ, ನಾವು ಕುಟುಂಬದಿಂದ ಯಾರನ್ನು ಸ್ಪರ್ಧೆಗೆ ಇಳಿಸಲ್ಲ. ಕೆಲವರಿಗೆ ವೈಯಕ್ತಿಕ ಪ್ರೀತಿ ವಿಶ್ವಾಸವಿರುತ್ತೆ. ಹಾಗಾಗಿ, ಅಭಿಮಾನದಿಂದ ಮಾತನಾಡಿದ್ದಾರೆ. ಅಭಿಮಾನದಿಂದ ಮಾತನಾಡಿದ್ದು ಎಲ್ಲಾ ಅಭಿಪ್ರಾಯವೆಂದು ತೀರ್ಮಾನಿಸಲು ಆಗಲ್ಲ. ಇನ್ನುಳಿದಿದ್ದು ಮನೆಯಲ್ಲಿ ಕುಳಿತು ಮತ್ತು ಪಕ್ಷದ ಚೌಕಟ್ಟಿನಲ್ಲಿ ಕುಳಿತು ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಚುನಾವಣೆಗೆ (Election) ಸಂಬಂಧಿಸಿದಂತೆ ಬಿ.ಫಾರ್ಮ್ ದೇವೇಗೌಡರು ಕೊಡ್ತಾರೆ. ಅಂತಿಮವಾಗಿ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿ.ನರಸೀಪುರದಲ್ಲಿ ಕೊನೆಗೂ ಚಿರತೆ ಸೆರೆ – ಸ್ಥಳದಲ್ಲೇ ಕೊಂದುಹಾಕಿ ಅಂತಾ ಜನರ ಪಟ್ಟು

    ಕುಮಾರಸ್ವಾಮಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರಲ್ಲ. ಯಾವುದೇ ರೀತಿಯ ಸಂಘರ್ಷವೂ ಆಗಲ್ಲ. ಎಲ್ಲಾ ಕ್ಲಿಯರ್ ಮಾಡಲು, ಸಮಸ್ಯೆಗಳು ಏನು ಇಲ್ಲ. ಯಾರೂ ಕುತೂಹಲ, ಆತಂಕಕ್ಕೆ ಒಳಗಾಗೋದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k