Tag: ಕರ್ನಾಕಟ ಚುನಾವಣೆ

  • ಜೆಡಿಎಸ್‌ಗೆ ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್ ಖಾತೆಗೆ ಸೇರುತ್ತೆ: ಮೋದಿ

    ಜೆಡಿಎಸ್‌ಗೆ ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್ ಖಾತೆಗೆ ಸೇರುತ್ತೆ: ಮೋದಿ

    ರಾಮನಗರ: ಜೆಡಿಎಸ್‌ಗೆ (JDS) ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್‌ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರಗಳ ನಾಟಕ ನೋಡಿದ್ದೀರಿ. ಕೇವಲ ಲೂಟಿ ಮಾಡಲು ಜಗಳಗಳಾಗಿವೆ ಹೊರತು ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.

    ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾಗಿದೆ. ಹೊರಗಿನ ನೋಟಕ್ಕಷ್ಟೇ ಎರಡು, ಒಳಗಡೆ ಎರಡೂ ಒಂದೇ ಆಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತವೆ. ಜೆಡಿಎಸ್ ಅಂತೂ 15-20 ಸೀಟ್ ಸಿಕ್ಕರೂ ಕಿಂಗ್ ಮೇಕರ್ ಆಗುತ್ತೇವೆ ಎಂಬ ಕನಸು ಕಾಣುತ್ತದೆ. ಜೆಡಿಎಸ್ ಗೆದ್ದರೆ ಒಂದೇ ಕುಟುಂಬ ಉದ್ಧಾರ ಆಗುತ್ತದೆ. ಆದರೆ ಕರ್ನಾಟಕದ ಲಕ್ಷಾಂತರ ಕುಟುಂಬಕ್ಕೆ ನಷ್ಟವಾಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಬರಲಿದೆ ಎಂದರು.

    ನರೇಂದ್ರ ಮೋದಿ ಭಾಷಣ ಆರಂಭದಲ್ಲಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿಯ ಜನ್ಮ ಇದೇ ಭೂಮಿಯಲ್ಲಿ ಆಗಿದೆ. ಎಲ್ಲಾ ಸಂತಶ್ರೇಷ್ಠರಿಗೆ ವಂದನೆ ಮಾಡುತ್ತೇನೆ ಎಂದರು. ಈ ಬಾರಿಯ ಚುನಾವಣೆ ಬಹಳ ವಿಶೇಷವಾಗಿದೆ. ವಿಕಾಸವನ್ನು ಕರ್ನಾಟಕವನ್ನು ದೇಶದ ನಂಬರ್ 1 ಮಾಡುವ ಚುನಾವಣೆಯಾಗಿದೆ. ಈ ಯಜ್ಞದ ಸಂಕಲ್ಪವನ್ನು ಬಿಜೆಪಿಯೇ ಪೂರ್ಣ ಮಾಡಬಹುದು ಎಂದರು.

    ಕಾಂಗ್ರೆಸ್-ಜೆಡಿಎಸ್ ದೃಶ್ಯದಲ್ಲಿ ಕರ್ನಾಟಕ ಕೇವಲ ಒಂದು ಎಟಿಎಂ ಆಗಿದೆ. ಆದರೆ ಬಿಜೆಪಿಗೆ ದೇಶದ ವಿಕಾಸದ ಮಹತ್ವಪೂರ್ಣ ಅಭಿವೃದ್ಧಿಯ ಎಂಜಿನ್ ಆಗಿದೆ. ಕಾಂಗ್ರೆಸ್ ಬಂದರೆ ಕೆಲವರ ವಿಶೇಷ ಕುಟುಂಬಕ್ಕೆ ಮಾತ್ರ ಅನುಕೂಲ ಆಗಲಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

    ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದಾಗ ರಾಮನಗರ ಜಿಲ್ಲೆಯ 3 ಲಕ್ಷ ಜನರ ಬ್ಯಾಂಕ್ ಅಕೌಂಟ್ ತೆರೆಯಲಾಗುವುದು. ಬಿಜೆಪಿ ಸರ್ಕಾರ ಬಂದಾಗ ಜೀವನ್ ವೀಮಾ ತೆರೆಯಲಾಗುವುದು. ಅಟಲ್ ಪೆನ್ಶನ್ ತರಲಾಗುವುದು. ಮನೆ ನಿರ್ಮಾಣ ಆಗಲಿದೆ. ನೀರಿನ ವ್ಯವಸ್ಥೆ ಆಗಲಿದೆ. ಮಹಿಳೆಯರಿಗೆ ಶೌಚಾಲಯ, ಫ್ರೀ ಗ್ಯಾಸ್ ಕನೆಕ್ಷನ್ ಆಗಲಿದೆ. ಫ್ರೀ ರೇಷನ್ ಸಿಗಲಿದೆ. ಡಬಲ್ ಎಂಜಿನ್ ಸರ್ಕಾರ ಎಂದರೆ ಎಲ್ಲರ ಸರ್ಕಾರ, ಬಡವರ ಸೇವೆ ಮಾಡುವ ಸರ್ಕಾರ ಎಂದರು. ಇದನ್ನೂ ಓದಿ: ಪ್ರಿಯಾಂಕಾ – ರಾಹುಲ್ ಗಾಂಧಿ ಬಿಜೆಪಿಗೆ ಅಡಿಷನಲ್ ಸ್ಟಾರ್ ಪ್ರಚಾರಕರು: ಸಿ.ಟಿ ರವಿ

    ಇದು ರೇಷ್ಮೆ ನಾಡು, ರೇಷ್ಮೆ ರೈತರಿಗೂ ಲಾಭ ಸಿಕ್ಕಿದೆ ಅಂದ್ರೆ ಅದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಿಂದ. ರೇಷ್ಮೆ ರೈತರಿಗೆ ಪ್ರತಿ ಟನ್‌ಗೆ 10 ಸಾವಿರ ರೂ. ಸಹಾಯ ಕೊಡುತ್ತದೆ. ಇದರಿಂದ ಆದಾಯ ಹೆಚ್ಚಳವಾಗಿದೆ. ಬಿಜೆಪಿ ಪ್ರಯತ್ನದಿಂದಾಗಿ ರೇಷ್ಮೆಯ ರಫ್ತು ಹೆಚ್ಚಾಗಿದೆ ಎಂದು ಹೇಳಿದರು.

    ಕಾಂಗ್ರೆಸ್‌ನ ಗ್ಯಾರಂಟಿ, ಸುಳ್ಳಿನ ವಾರಂಟಿ ಆಗಿದೆ. ಹಿಮಾಚಲ ಪ್ರದೇಶದಲ್ಲಿ ಮನೆಯ ಪ್ರತಿ ಮಹಿಳೆಯರಿಗೆ 1 ಸಾವಿರ ರೂ. ಕೊಡುತ್ತೇವೆ ಎಂದಿದ್ದರು. ಆದರೆ ಯೋಜನೆ ಇವತ್ತಿನ ವರೆಗೂ ಜಾರಿಯಾಗಿಲ್ಲ. ಅಲ್ಲಿದ್ದ ಬಿಜೆಪಿಯ ಜನಪರ ಯೋಜನೆಯನ್ನೂ ರದ್ದು ಮಾಡಿದೆ. ಕಾಂಗ್ರೆಸ್‌ನ ನೀತಿಗಳು ಎಂದರೆ ರಿವರ್ಸ್ ಗೇರ್ ಇದ್ದ ಹಾಗೆ. ಕರ್ನಾಟಕ ರಿವರ್ಸ್ ಗೇರ್‌ನಲ್ಲಿ ಹೋಗಲು ಸಾಧ್ಯವಿಲ್ಲ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ, ಡಬಲ್ ಶಕ್ತಿಯ ಜೊತೆ ಮುಂದೆ ಹೋಗಬೇಕಾದ ಸರ್ಕಾರ ಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರದಿಂದ ಗಲಾಟೆ ಬಂದ್, ಕಾಂಗ್ರೆಸ್ ಜೆಡಿಎಸ್‌ನಿಂದ ತುಷ್ಟೀಕರಣದ ರಾಜಕಾರಣ: ಯೋಗಿ ಕಿಡಿ

  • ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಚಿತ್ರದುರ್ಗ: ಬದಾಮಿ ಕ್ಷೇತ್ರವು ಬಾರಿ ಜಿದ್ದಾಜಿದ್ದಿನ ಕ್ಷೇತ್ರ. ಹೀಗಾಗಿ ಅಂತಹ ಜಿದ್ದಾಜಿದ್ದಿನ ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗಲ್ಲ ಎಂದು ನಟ ಯಶ್ ನಾಯಕನಟ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಬಹಿರಂಗ ಪ್ರಚಾರದ ವೇಳೆ ಮಾತನಾಡಿದ ಅವರು, ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಬಹುತೇಕ ಎರಡು ಕಡೆಯ ಅಭ್ಯರ್ಥಿಗಳು ಆತ್ಮೀಯರಾಗಿತ್ತಾರೆ. ಹೀಗಾಗಿ ಅಂತಹ ಕ್ಷೇತ್ರಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಅಷ್ಟೇ ಅಲ್ಲದೇ ಶ್ರೀರಾಮುಲು ನನಗೆ ಆತ್ಮೀಯರು ಅವರು ಸಾಮೂಹಿಕ ಮದುವೆ, ಇತರೆ ಕಾರ್ಯಕ್ರಮದ ಮೂಲಕ ಜನಸೇವೆ ಮಾಡಿದ್ದಾರೆ. ಹೀಗಾಗಿ ಅವರ ಕೆಲಸ ಇಷ್ಟವಾಗಿ ರಾಮುಲುರವರು ಪ್ರಚಾರಕ್ಕೆ ಆಹ್ವಾನ ನೀಡಿದ್ರಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕಿರುವುದರಿಂದ ಆ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಇದಕ್ಕೆ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

    ರಾಮುಲು ಜೊತೆ ಕೈಜೋಡಿಸಿ ಅಭಿವೃದ್ಧಿ ಪರ ನಿರಂತರ ಹೋರಾಟ ನಡೆಸುತ್ತೇನೆ. ನಾನು ಯಾವುದೇ ಪಕ್ಷದ ಪರ ಪ್ರಚಾರವಿಲ್ಲ. ನನಗೆ ಆತ್ಮೀಯ ಅಭ್ಯರ್ಥಿಗಳ ಪರ ಮಾತ್ರ ಪ್ರಚಾರ ಮಾಡುವೆ ಎಂದ್ರು. ಇದೇ ವೇಳೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅಜಾ ಕೂಗಿದಾಗ ಭಾಷಣವನ್ನು ನಿಲ್ಲಿಸುವಂತೆ ಮಾಜಿ ಸಂಸದೆ ಶಾಂತ ಹೇಳಿದರಿಂದ ಭಾಷಣವನ್ನು ಮೊಟಕುಗೊಳಿಸಿ ಅಜಾನ್ ಮುಗಿದ ನಂತರ ಭಾಷಣವನ್ನು ಯಶ್ ಮುಂದುವರೆಸಿ ಧಾರ್ಮಿಕ ಪ್ರಾರ್ಥನೆಗೆ ಗೌರವ ಸಲ್ಲಿಸಬೇಕು ಎಂದಿದ್ದಾರೆ.