Tag: ಕರ್ನಲ್

  • ಗೆಳೆಯನ ಪತ್ನಿಯನ್ನ ನೋಡ್ತಿದ್ದಂತೆ ಕಾಮ ಪಿಶಾಚಿಯಾದ ಕರ್ನಲ್

    ಗೆಳೆಯನ ಪತ್ನಿಯನ್ನ ನೋಡ್ತಿದ್ದಂತೆ ಕಾಮ ಪಿಶಾಚಿಯಾದ ಕರ್ನಲ್

    – ಗೆಳೆಯನಿಗೆ ನಶೆ ಪದಾರ್ಥ ನೀಡಿ, ಪತ್ನಿಯ ಮೇಲೆ ರೇಪ್

    ಲಕ್ನೋ: ಮನೆಗೆ ಪತ್ನಿ ಜೊತೆ ಬಂದ ಗೆಳೆಯನಿಗೆ ಮದ್ಯದಲ್ಲಿ ನಶೆ ಪದಾರ್ಥ ನೀಡಿ, ಮಹಿಳೆಯನ್ನ ಅತ್ಯಾಚಾರಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರನಲ್ಲಿ ನಡೆದಿದೆ. ಪತ್ನಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸೆಂಟ್ರಲ್ ಆರ್ಡಿನೆನ್ಸ್ ಡಿಪಾರ್ಟ್‍ಮೆಂಟ್ ಕರ್ನಲ್ ಗೆಳೆಯನ ಪತ್ನಿಯನ್ನ ಅತ್ಯಾಚಾರಗೈದ ಆರೋಪಿ. ಕೆಲ ದಿನಗಳ ಹಿಂದೆ ಕರ್ನಲ್ ತನ್ನ ಸರ್ಕಾರಿ ಬಂಗಲೆಗೆ ಗೆಳೆಯ ಮತ್ತು ಆತನ ಪತ್ನಿಯನ್ನ ಔತಣಕೂಟಕ್ಕೆ ಆಹ್ವಾನಿಸಿದ್ದನು. ಗೆಳೆಯನ ಪತ್ನಿಯನ್ನ ನೋಡುತ್ತಿದ್ದಂತೆ ವಿಕೃತನಾದ ಕರ್ನಲ್ ಮದ್ಯದಲ್ಲಿ ನಶೆ ಪದಾರ್ಥ ಸೇರಿಸಿ ಸ್ನೇಹಿತನಿಗೆ ನೀಡಿದ್ದಾನೆ. ಇನ್ನು ಮದ್ಯ ಸೇವಿಸಿದ ಗೆಳೆಯ ನಿದ್ದೆಗೆ ಜಾರುತ್ತಿದ್ದಂತೆ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಸಂತ್ರಸ್ತೆ ಪತಿ ದೂರಿನನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯ ಬಂಧಿಸುವ ಪ್ರಯತ್ನದಲ್ಲಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಂಡವನ್ನ ರಚಿಸಲಾಗಿದೆ. ರಾತ್ರಿ ಸುಮಾರು 9 ಗಂಟೆಗೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ ಎಂದು ಕಾನ್ಪುರ ಎಸ್.ಪಿ. ರಾಜಕುಮಾರ್ ಅಗರ್ವಾಲ್ ಹೇಳಿದ್ದಾರೆ.

  • ನಿವೃತ್ತ ಕರ್ನಲ್ ಮನೆ ಮೇಲೆ ಡಿಆರ್‍ಐ ದಾಳಿ: ಸಿಕ್ಕಿರುವ ವಸ್ತುಗಳನ್ನು ನೋಡಿದ್ರೆ ಶಾಕ್ ಆಗುತ್ತೆ

    ನಿವೃತ್ತ ಕರ್ನಲ್ ಮನೆ ಮೇಲೆ ಡಿಆರ್‍ಐ ದಾಳಿ: ಸಿಕ್ಕಿರುವ ವಸ್ತುಗಳನ್ನು ನೋಡಿದ್ರೆ ಶಾಕ್ ಆಗುತ್ತೆ

    ಮೀರತ್: ನಿವೃತ್ತ ಕರ್ನಲ್ ಮನೆಗೆ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ದಾಳಿ ನಡೆಸಿ ಭಾರೀ ಪ್ರಮಾಣದ ಆಯುಧಗಳನ್ನು ವಶಪಡಿಸಿಕೊಂಡಿದೆ.

    ಶನಿವಾರ ಉತ್ತರಪ್ರದೇಶದ ಮೀರತ್ ನಲ್ಲಿರುವ ನಿವೃತ್ತ ಕರ್ನಲ್ ದೇವೇಂದ್ರ ಸಿಂಗ್ ನಿವಾಸದ ಮೇಲೆ ಡಿಆರ್‍ಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ 40 ರೈಫಲ್, 50 ಸಾವಿರ ಮದ್ದುಗುಂಡುಗಳು, ಪಿಸ್ತೂಲ್, 1 ಕೋಟಿ ರೂ. ನಗದು ಹಣ ಸಿಕ್ಕಿದೆ.

    16 ಗಂಟೆಗಳ ಪರಿಶೀಲನೆಯಲ್ಲಿ ಕಂಟೈನರ್‍ನಲ್ಲಿ ತುಂಬಿದ್ದ 117 ಕೆಜಿ ಮಾಂಸ, ಪ್ರಾಣಿಗಳ ತಲೆಬುರಡೆಗಳು, ಕೊಂಬುಗಳು, ಚರ್ಮಗಳು ಸಿಕ್ಕಿವೆ.

    ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ವಿದೇಶಿ ರೈಫಲ್ ಗಳು ಸಿಕ್ಕಿದೆ. ಈ ರೈಫಲ್‍ಗಳಿಗೆ ಯಾವುದೇ ಲೈಸನ್ಸ್ ಇಲ್ಲ. ಇದೇ ವೇಳೆ ಮಗನಾಗಿರುವ ರಾಷ್ಟ್ರಮಟ್ಟದ ಶೂಟರ್ ಪ್ರಶಾಂತ್ ಬಿಶ್ನೋಯಿ ಬಗ್ಗೆ ವಿಚಾರಿಸಿದ್ದು, ದೇವೇಂದ್ರ ಸಿಂಗ್ ಯಾವುದೇ ಮಾಹಿತಿ ನೀಡಿಲ್ಲ. ಆತ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲು ಪ್ರಶಾಂತ್ ಬಿಶ್ನೋಯಿ ಮನೆಯಿಂದ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.