Tag: ಕರ್ತವ್ಯ ಸಮಯ

  • ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    ಮುಂಬೈ: ಮಹಾರಾಷ್ಟ್ರದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿ ಇನ್ಮುಂದೆ 12 ಗಂಟೆಗಳ ಬದಲಿಗೆ ಎಂಟು ಗಂಟೆಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸುಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ಪಾಂಡೆ ಆದೇಶ ಹೊರಡಿಸಿದ್ದಾರೆ.

    Women Cops

    ಸಾಮಾನ್ಯವಾಗಿ ಪುರುಷರು ಹಾಗೂ ಮಹಿಳಾ ಸಿಬ್ಬಂದಿ 12 ಗಂಟೆಗಳ ಕಾಲ ಕಾರ್ಯನಿರ್ವಸುತ್ತಾರೆ. ಆದರೆ ಮಹಿಳಾ ಪೊಲೀಸ್ ಸಿಬ್ಬಂದಿ ಕೆಲಸವನ್ನು ಕಡಿಮೆ ಮಾಡುವ ಸಲುವಾಗಿ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಮುಂದಿನ ಆದೇಶದವರೆಗೂ ಮಹಿಳೆಯರು ಇನ್ಮುಂದೆ 8 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬಹುದು. ಯುನಿಟ್ ಕಮಾಂಡರ್‌ಗಳು ಆದೇಶವನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    Women Cops

    ಮಹಿಳಾ ಅಧಿಕಾರಿಗಳಿಗೆ ಉತ್ತಮ ಕೆಲಸ-ಜೀವನದ ಸಮತೋಲನವನ್ನು ಒದಗಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಮುನ್ನ ನಾಗಪುರ ನಗರ, ಅಮರಾವತಿ ನಗರ ಮತ್ತು ಪುಣೆ ಗ್ರಾಮಾಂತರದಲ್ಲಿ ಕೂಡ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಇದನ್ನೂ ಓದಿ: ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಆದರೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಥವಾ ಉಪ ಪೊಲೀಸ್ ಆಯುಕ್ತರ ಅನುಮತಿಯೊಂದಿಗೆ ಮಾತ್ರ ತುರ್ತು ಸಂದರ್ಭಗಳಲ್ಲಿ ಅಥವಾ ಹಬ್ಬಗಳ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯ ಕರ್ತವ್ಯದ ಸಮಯವನ್ನು ಹೆಚ್ಚಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.