Tag: ಕರ್ತವ್ಯ ಲೋಪ

  • ಕರ್ತವ್ಯ ಲೋಪ ಆರೋಪ – ಮೂವರು ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು

    ಕರ್ತವ್ಯ ಲೋಪ ಆರೋಪ – ಮೂವರು ಪಿಎಸ್‌ಐ ಸೇರಿ ಐವರು ಪೊಲೀಸರ ಅಮಾನತು

    ತುಮಕೂರು: ಕರ್ತವ್ಯ ಲೋಪ (Dereliction Of Duty) ಎಸಗಿದ ಹಿನ್ನೆಲೆ ಮೂವರು ಪಿಎಸ್‌ಐ (PSI) ಸೇರಿ ಒಟ್ಟು ಐವರು ಪೊಲೀಸರನ್ನು (Police) ತುಮಕೂರು (Tumakuru) ಎಸ್ಪಿ ಕೆವಿ ಅಶೋಕ್ ಅಮಾನತುಗೊಳಿಸಿ (Suspension) ಆದೇಶ ಹೊರಡಿಸಿದ್ದಾರೆ.

    ತುರುವೇಕೆರೆ (Turuvekere) ಠಾಣಾ ಪಿಎಸ್‌ಐಗಳಾದ ಗಣೇಶ್ ಹಾಗೂ ರಾಮಚಂದ್ರ ಮತ್ತು ಹೆಡ್‌ಕಾನ್ಸ್ಟೇಬಲ್ ರಘುನಂದನ್ ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆಯೊಬ್ಬರು ನಾಪತ್ತೆಯಾದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ಕುಡಿದು ವಾಹನ ಚಾಲನೆ ಮಾಡಿದ್ರೆ ಜಪ್ತಿಯಾಗುತ್ತೆ ವಾಹನ

    ಇನ್ನೊಂದು ಪ್ರಕರಣದಲ್ಲಿ ಬಡವನಹಳ್ಳಿ ಠಾಣಾ ಪಿಎಸ್‌ಐ ನಾಗರಾಜು ಹಾಗೂ ಎಎಸ್‌ಐ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ. ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದ ದೂರನ್ನು ದಾಖಲಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಹಿನ್ನೆಲೆಯಲ್ಲಿ ಎಸ್ಪಿ ಅಶೋಕ್ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕೊರಿಯರ್‌ಗಳು ಅಂಚೆ ಕಚೇರಿ ಕಾಯ್ದೆ ವ್ಯಾಪ್ತಿಗೆ – ಇನ್ಮುಂದೆ ಸರ್ಕಾರವೂ ನಿಮ್ಮ ಪತ್ರಗಳನ್ನು ತೆರೆದು ನೋಡ್ಬೋದು

  • ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ – 7 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

    ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ – 7 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು

    ಚಾಮರಾಜನಗರ: ಜಿಲ್ಲೆಯ ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದ್ ಕುಮಾರ್ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣೆಯ ಎಎಸ್‍ಐ ಕೂಸಪ್ಪ, ಸೈಯದ್ ರಫಿ, ಪ್ರಸಾದ್, ಅಬ್ದುಲ್ ಖಾದರ್ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಮಹಾದೇವಸ್ವಾಮಿ, ಮಹೇಶ್, ಡಿವೈಎಸ್‌ಪಿ ಕಚೇರಿಯ ರೇವಣ್ಣಸ್ವಾಮಿ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.

    ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿರುವ ಚೆಕ್‌ಪೋಸ್ಟ್‌ಗಳ ಕಂದಾಯ ವಿಭಾಗದ 6  ಮಂದಿ  ನೌಕರರನ್ನು ಶನಿವಾರ ಡಿಸಿ ಅಮಾನತುಗೊಳಿಸಿದ್ದರು.

  • ಕರ್ತವ್ಯ ಲೋಪ, ಚಿಕ್ಕಮಗಳೂರು ಡಿಎಚ್‍ಓ ಅಮಾನತು

    ಕರ್ತವ್ಯ ಲೋಪ, ಚಿಕ್ಕಮಗಳೂರು ಡಿಎಚ್‍ಓ ಅಮಾನತು

    ಚಿಕ್ಕಮಗಳೂರು: ಕರ್ತವ್ಯ ಲೋಪದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.

    ಡಾ.ಪ್ರಭು ಅಮಾನತುಗೊಂಡ ಅಧಿಕಾರಿ. ಚಿಕ್ಕಮಗಳೂರಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸರ್ಕಾರದ ಆದೇಶ ಅನುಸಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಿತ್ತು. ಆದರೆ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿತ್ತು.

    ಈ ಹಿನ್ನೆಲೆ ಕಡತಗಳು ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಮಾರ್ಗಸೂಚಿಗೆ ಅನುಗುಣವಾಗಿ ಕ್ರಮ ವಹಿಸದಿರುವುದು ಕಂಡುಬಂದಿದೆ. ಈ ಹಿನ್ನೆಲೆ ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ಮಾಡದೆ, ದೈನಂದಿನ ಕಾರ್ಯನಿರ್ವಹಣೆ ಮತ್ತು ಕಡತ ಮಂಡನೆಯಲ್ಲಿ ಸ್ವತಃ ಲಿಖಿತವಾಗಿ ಅಭಿಪ್ರಾಯ ಸೂಚಿಸದೆ ಸರ್ಕಾರಿ ಸೇವೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಡಾ.ಪ್ರಭು ಆಮಾನತುಗೊಂಡಿದ್ದಾರೆ.

  • ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ, ದನಕಾಯೋಕೆ ಹೋಗಿ – ಅಧಿಕಾರಿಗೆ ಜಿ.ಪಂ ಅಧ್ಯಕ್ಷ ಕ್ಲಾಸ್

    ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ, ದನಕಾಯೋಕೆ ಹೋಗಿ – ಅಧಿಕಾರಿಗೆ ಜಿ.ಪಂ ಅಧ್ಯಕ್ಷ ಕ್ಲಾಸ್

    – ಕೆಲಸ ಮಾಡಕ್ಕೆ ಆಗಲ್ಲ ಅಂದ್ರೆ ಟ್ರಾನ್ಸ್ಫರ್ ಮಾಡಿಸಿಕೊಂಡು ಹೋಗಿ

    ಚಿಕ್ಕಬಳ್ಳಾಪುರ: “ಥೂ ನಿಮ್ಮನ್ನ ಬೈದು ನಮಗೆ ಬಿಪಿ ಬರುತ್ತೆ. ದನಕಾಯೋಕೆ ಹೋಗಿ, ಕೆಲಸ ಮಾಡಕೆ ಆಗಲ್ಲ ಅಂದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ” ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಜಿಲ್ಲಾ ಮಟ್ಟದ ಕ್ರೀಡಾ ಯುವಜನಸೇವಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕ್ರೀಡಾ ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪಗೆ ಜಿ.ಪ ಅಧ್ಯಕ್ಷ ಎಚ್.ವಿ ಮಂಜುನಾಥ್ ಹಾಗೂ ಜಿ.ಪ ಸದಸ್ಯರು ಸೇರಿದಂತೆ ಜಿ.ಪ ಸಿಇಓ ಸಹ ತರಟೆಗೆ ತೆಗೆದುಕೊಂಡರು.

    ನಿಮ್ಮ ಕೈಯಲ್ಲಿ ಕೆಲಸ ಮಾಡೋಕೆ ಆಗೋದಿಲ್ಲ ಅಂದರೆ ವರ್ಗಾವಣೆ ಮಾಡಿಕೊಂಡು ಹೊರಟು ಹೋಗಿ ಎಂದರು. ಬಳಿಕ ಅಧ್ಯಕ್ಷರು ಹಾಗೂ ಸದಸ್ಯರ ದೂರುಗಳಿಂದ ಎಚ್ಚೆತ್ತಾ ಜಿಲ್ಲಾ ಪಂಚಾಯತ್ ಸಿಇಓ ಗುರುದತ್ ಹೆಗಡೆ ಅವರು ರುದ್ರಪ್ಪರನ್ನ ಸೇವೆಯಿಂದ ವಿಮುಕ್ತಿಗೊಳಿಸಿ, ಬೇರೆಯವರನ್ನ ನಿಯೋಜಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.

    ಚಿಂತಾಮಣಿ ನಗರದ ಕ್ರೀಡಾಂಗಣದಲ್ಲಿನ ಮಳಿಗೆಗೆಳ ಬಾಡಿಗೆ ಒಂದೂವರೆ ಕೋಟಿ ಬಾಕಿ ಇದ್ದು, ಎರಡು ವರ್ಷಗಳಿಂದ ಹಣ ವಸೂಲಿ ಮಾಡದೇ ರುದ್ರಪ್ಪ ಕರ್ತವ್ಯಲೋಪ ತೋರಿದ್ದಾರೆ. ಈ ಬಗ್ಗೆ ಕೇಳಿದರೆ ಕ್ಷೇತ್ರದ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಇದಕ್ಕೆ ತಡೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದು, ಇದರಿಂದ ಕೆರಳಿದ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ಕ್ರೀಡಾಂಗಣಗಳಲ್ಲಿನ ಶೌಚಾಲಯಗಳ ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳದ ನಿರ್ವಹಣೆ ಸಹ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಜಿ.ಪ ಸದಸ್ಯರು ರುದ್ರಪ್ಪ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ರೋಸಿ ಹೋದ ಜಿ.ಪಂ ಅಧ್ಯಕ್ಷ ಮಂಜುನಾಥ್ ಅವರು ಪ್ರತಿ ಬಾರಿ ಸಭೆಯಲ್ಲೂ ಇದೇ ವಿಷಯ ಬಗ್ಗೆ ಚರ್ಚೆ ನಡೆಯುತ್ತದೆ. ಪದೇ ಪದೇ ಚರ್ಚೆ ಆಗುತ್ತಿದ್ದರೂ ನೀವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಯಾಗಲು ನಿಮಗೆ ಅರ್ಹತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕರ್ತವ್ಯದ ಸಮಯ ಮರೆತ ವೈದ್ಯರಿಗೆ ನೋಟಿಸ್ ಜಾರಿ

    ಕರ್ತವ್ಯದ ಸಮಯ ಮರೆತ ವೈದ್ಯರಿಗೆ ನೋಟಿಸ್ ಜಾರಿ

    ಚಿತ್ರದುರ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವೈದ್ಯರಿಗೆ ಜಿಲ್ಲಾಧಿಕಾರಿಯೊಬ್ಬರು ನೋಟಿಸ್ ಜಾರಿಗೊಳಿಸಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲಾ ವೈದ್ಯಾಧಿಕಾರಿ ಜಯಪ್ರಕಾಶ್, ಡಾ.ರವೀಂದ್ರ, ಡಾ.ಬಸವರಾಜ್, ಡಾ.ಮೋಹನ್, ಡಾ.ವೆಂಕಟೇಶ್, ಡಾ.ಸತೀಶ್ ಹಾಗೂ ಡಾ.ಆನಂದಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿ ವಿ.ವಿ.ಜೋತ್ನ್ನಾ ನೋಟಿಸ್ ನೀಡಿದ್ದಾರೆ.

    ಇಂದು ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಸುಮಾರು 10.30 ಗಂಟೆಯಾದರೂ ಆಸ್ಪತ್ರೆಗೆ ಹಾಜರಾಗದ 7 ವೈದ್ಯರ ವಿರುದ್ಧ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಅವರಿಗೆ ನೋಟಿಸ್ ನೀಡಿದ್ದು, ಸಂಜೆಯ ಒಳಗಾಗಿ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.