ಜೈಪುರ್: ಬಲಪಂಥೀಯ ರಜಪೂತ ಸಂಘಟನೆ ಕರ್ಣಿ ಸೇನೆಯ (Karni Sena) ರಾಜಸ್ಥಾನದ (Rajasthan) ಅಧ್ಯಕ್ಷ ಭನ್ವರ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿದೆ. ಉದಯಪುರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ವೇದಿಕೆಯಿಂದ ಕೆಳಗೆ ಬರುತ್ತಿದ್ದಂತೆ ಗುಂಡು ಹಾರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಮಕ್ರಾನಾ, ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ. ಸಿಂಗ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಹಾರಿಸಿದ ಗುಂಡು ಅವರ ಬೆನ್ನಿಗೆ ತೂರಿದೆ. ವೈದ್ಯರು ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ಣಿ ಸೇನೆಯು ರಜಪೂತ ಮತಗಳನ್ನು ಗುರಿಯಾಗಿಸಿಕೊಂಡು ಸರಣಿ ಕಾರ್ಯಕ್ರಮಗಳು ಮತ್ತು ಸಭೆಗಳನ್ನು ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ದ್ವೇಷ – ಚಾಕುವಿನಿಂದ ಇರಿದು ನರ್ಸ್ ಹತ್ಯೆ
ಮುಂಬೈ: ವಿವಾದಗಳಿಂದ ಸುದ್ದಿಯಾಗಿದ್ದ ಬಾಲಿವುಡ್‍ನ ಪದ್ಮಾವತಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸೆನ್ಸಾರ್ ಬೋರ್ಡ್ ನಲ್ಲಿ ಪದ್ಮಾವತಿ ಸಿನಿಮಾದ ಅರ್ಜಿ ತಿರಸ್ಕೃತವಾಗಿದ್ದು, ಚಿತ್ರತಂಡ ಅನಿವಾರ್ಯ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಆದರೆ ಯಾವ ದಿನದಂದು ಸಿನಿಮಾ ತೆರೆಕಾಣಲಿದೆ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿಲ್ಲ.
ಕಳೆದ ಮೂರು ದಿನಗಳಿಂದ ಸಿನಿಮಾದ ರಿಲೀಸ್ ದಿನವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿತ್ತಿತ್ತು. ಆದರೆ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಇಂದು ಬಾಲಿವುಡ್ ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ಖಚಿತಪಡಿಸಿದ್ದಾರೆ.
ಸೆನ್ಸಾರ್ ಬೋರ್ಡ್ ಹೇಳಿದ್ದೇನು?:
ಸೆನ್ಸಾರ್ ಬೋರ್ಡ್ ಸಿನಿಮಾಗೆ ಅನುಮತಿ ಕೋರಿ ಚಿತ್ರತಂಡ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಚಿತ್ರತಂಡ ಅವಶ್ಯಕ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲಿಸದೇ ಅಪೂರ್ಣವಾದ ಮಾಹಿತಿಯನ್ನು ಸಲ್ಲಿಸಿದೆ. ಇನ್ನೂ ಸಿನಿಮಾ ರಜಪೂತ ನಾಡಿದ ಧೀರ ಮಹಿಳೆ ರಾಣಿ ಪದ್ಮಾವತಿ ಐತಿಹಾಸಿಕ ಕಥೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಳಸಲಾಗಿರುವ ದೃಶ್ಯಗಳಿಗೆ ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಸೆನ್ಸಾರ್ ಬೋರ್ಡ್ (ಸಿಬಿಎಫ್‍ಸಿ) ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ.
ಪದ್ಮಾವತಿ ಸಿನಿಮಾ ನಿರ್ಮಾಣ ಸಂಸ್ಥೆ ವೈಕಾಮ್ 18ಮೋಷನ್ ದಿನಾಂಕ ಮೂಂದೂಡಿರುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಹಾಗಾದರೆ ನಿರ್ಮಾಣ ಸಂಸ್ಥೆ ಮಾಧ್ಯಮಗಳಿಗೆ ತಿಳಿಸಿದ್ದು ಹೀಗೆ
“ಪದ್ಮಾವತಿ ಸಿನಿಮಾವನ್ನು ಡಿಸೆಂಬರ್ 1ರಂದು ತೆರೆಕಾಣಲು ಸಕಲ ತಯಾರಿಗಳನ್ನು ಮಾಡಿಕೊಂಡಿತ್ತು. ರಜಪೂತ ಸಂಸ್ಥಾನದ ಶೌರ್ಯ, ಘನತೆ ಮತ್ತು ಸಂಪ್ರದಾಯಿಕ ಎಲ್ಲ ವೈಭವವನ್ನು ಚಿತ್ರಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರಕಥೆ ನೋಡುಗರಿಗೆ ಹೆಮ್ಮೆಯನ್ನುಂಟು ಮಾಡಲಿದ್ದು, ಭಾರತೀಯರ ಸಾಹಸ ಪರಾಕ್ರಮವನ್ನು ಚಿತ್ರ ಒಳಗೊಂಡಿದೆ. ನಾವು ದೇಶದ ನಾಗರಿಕರಾಗಿದ್ದು, ದೇಶದ ಶಾಸನಬದ್ಧ ಕಾನೂನುಗಳನ್ನು ಪಾಲನೆ ಮಾಡುವುದರ ಜೊತೆಗೆ ಗೌರವ ನೀಡಬೇಕು. ಸೆನ್ಸಾರ್ ಬೋರ್ಡ್ ಸಿನಿಮಾಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವಂತೆ ತಿಳಿಸಿದೆ. ಹಾಗಾಗಿ ಬೋರ್ಡ್ ಕೇಳಿರುವ ದಾಖಲಾತಿಗಳನ್ನು ಒದಗಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಸಿನಿಮಾ ತೆರೆಕಾಣುವ ದಿನಾಂಕವನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ದಿನಾಂಕವನ್ನು ಅಭಿಮಾನಿಗಳಿಗೆ ತಿಳಿಸಲಾಗುತ್ತದೆ. ನಮ್ಮ ಬ್ಯಾನರ್ ಅಡಿಯಲ್ಲಿ `ಟಾಯ್ಲೆಟ್ ಏಕ್ ಪ್ರೇಮ್ ಕಥಾ’, ಭಾಗ್ ಮಿಲ್ಕಾ ಭಾಗ್, ಕ್ವೀನ್ ಸೇರಿದಂತೆ ಯಶಸ್ವಿ ಸಿನಿಮಾಗಳು ತೆರೆಕಂಡಿವೆ.” ಎಂದು ತಿಳಿಸಿದೆ.
ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.
ಬಿಜೆಪಿ, ಕಾಂಗ್ರೆಸ್ಸಿನಿಂದ ವಿರೋಧ: ಪದ್ಮಾವತಿ ಸಿನಿಮಾವನ್ನು ಗುಜರಾತಿನಲ್ಲಿ ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಇಲ್ಲವೇ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡೋದು ಒಳ್ಳೆಯದು. ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವುದರಿಂದ ಸಿನಿಮಾದಿಂದಾಗಿ ಗಲಾಟೆಗಳು ಉಂಟಾಗಬಹುದು. ಒಂದು ವೇಳೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಜನತೆಯ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ವಕ್ತಾರ ಜಡೇಜಾ ತಿಳಿಸಿದ್ದಾರೆ. ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಜನರ ಭಾವನೆಗೆ ಧಕ್ಕೆ ಬಂದಿರುವ ವಿಚಾರವನ್ನು ತೆಗೆದು ಹಾಕಬೇಕೆಂದು ರಾಜಸ್ಥಾನದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸಿನಿಮಾ ಬಿಡುಗಡೆ ಕುರಿತು ಸ್ಪಷ್ಟಣೆ ಕೇಳಿ ಪತ್ರವನ್ನು ಬರೆದಿವೆ. ಸಿನಿಮಾ ಬಿಡುಗಡೆ ಆಗುವುದರಿಂದ ಯಾವುದೇ ಸಮುದಾಯದ ಜನರಿಗೆ ನೋವುಂಟು ಆಗಬಾರದು. ಈ ಹಿನ್ನೆಲೆಯಲ್ಲಿ ಪದ್ಮಾವತಿ ಸಿನಿಮಾ ಒಳಗೊಂಡಿರುವ ಕಥಾ ಹಂದರವನ್ನು ಪರಿಶೀಲಿಸಲು ಹಿರಿಯ ಇತಹಾಸ ತಜ್ಞರು, ಸಿನಿಮಾ ನಿರ್ಮಾಪಕರು ಒಳಗೊಂಡಿರುವ ಸಮಿತಿ ರಚಿಸಲಾಗುತ್ತಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.
ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.
#BreakingNews: #Padmavati release postponed… Viacom18 Motion Pictures, the studio behind #Padmavati, has voluntarily deferred the release date of the film from 1 December 2017… We will announce the revised release date of the film in due course: Official statement.
Update: Viacom18 Motion Pictures, the studio behind @FilmPadmavati has voluntarily deferred the release date of the film from December 1st 2017. Producers to announce new release date soon. 🙏🏻 #WeSupportPadmavati@ShobhaIyerSantpic.twitter.com/Czxmnbaesi
— Ranveerians Worldwide ❤️ ✨08.09.24 🎀 (@RanveeriansFC) November 19, 2017