Tag: ಕರೇಗುಡ್ಡ

  • ಕರೇಗುಡ್ಡ ಗ್ರಾಮ ವಾಸ್ತವ್ಯ ಅಂತ್ಯ-ಉಜಳಂಬದತ್ತ ಸಿಎಂ

    ಕರೇಗುಡ್ಡ ಗ್ರಾಮ ವಾಸ್ತವ್ಯ ಅಂತ್ಯ-ಉಜಳಂಬದತ್ತ ಸಿಎಂ

    ರಾಯಚೂರು: ಜಿಲ್ಲೆಯಲ್ಲಿ ನಾಡದೊರೆ ಮುಖ್ಯಮಂತ್ರಿಗಳು ಬುಧವಾರ ಗ್ರಾಮ ವಾಸ್ತವ್ಯ ಮಾಡಿದರು. ಸಿಎಂ ಜನತಾ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿ ದೂರು, ಮನವಿಗಳನ್ನು ಸಲ್ಲಿಸಿ ಹಲವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಆದರೆ ಗ್ರಾಮ ವಾಸ್ತವ್ಯಕ್ಕೆ ಪ್ರತಿಭಟನೆಯ ಬಿಸಿ ಕೂಡ ತಟ್ಟಿತ್ತು.

    ಸಾರಿಗೆ ಬಸ್ ಮೂಲಕ ಕರೇಗುಡ್ಡಕ್ಕೆ ಹೊರಟ ಸಿಎಂ ನಂತರ ಮಾರ್ಗದುದ್ದಕ್ಕೂ ಬರುವ ಗ್ರಾಮಗಳಲ್ಲಿ ಬಸ್ ನಿಲ್ಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸೋದಾಗಿ ಭರವಸೆ ನೀಡಿದರು. ಸುಮಾರು 3 ಗಂಟೆ ಸುಮಾರಿಗೆ ಕರೇಗುಡ್ಡ ತಲುಪಿದ ಸಿಎಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದು ಜನತಾ ದರ್ಶನದಲ್ಲಿ ಬ್ಯುಸಿಯಾದರು.

    ರಾತ್ರಿ 10 ಗಂಟೆವರೆಗೆ ನಡೆದ ಜನತಾ ದರ್ಶನದಲ್ಲಿ ಒಟ್ಟು 1,462 ಮನವಿಗಳು ಬಂದಿದೆ. ಇದೇ ವೇಳೆ ಮಾತನಾಡಿದ ಸಿಎಂ, ಬಿಜೆಪಿ ಸರ್ಟಿಫಿಕೇಟ್ ಗೋಸ್ಕರ ಕಾರ್ಯಕ್ರಮ ಮಾಡುತ್ತಿಲ್ಲ. ಹೆಲಿಕಾಪ್ಟರ್‍ನಲ್ಲಿ ಹೋದರೆ 12 ಲಕ್ಷ ಖರ್ಚಾಗುತ್ತೆ. ಹೀಗಾಗಿ ಗುರುವಾರ ರಸ್ತೆ ಮಾರ್ಗವಾಗಿಯೇ ಬಸವಕಲ್ಯಾಣಕ್ಕೆ ಹೋಗುತ್ತೇನೆ ಎಂದರು.

    10.30ರಿಂದ ಜನತಾ ದರ್ಶನ ವೇದಿಕೆಯಿಂದ ಹೊರಟ ಸಿಎಂ ಕುಮಾರಸ್ವಾಮಿ 5 ನಿಮಿಷ ರೆಸ್ಟ್ ಮಾಡಿದರು. ನಂತರ ಅಧಿಕಾರಿಗಳ ಜೊತೆ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ರು. ತಡವಾಗಿದರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಸಮಯವನ್ನು ಮೊಟಕುಗೊಳಿಸಲಾಯ್ತು. ಕೇವಲ ಎರಡೇ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯ್ತು. ಒಟ್ಟು 40 ನಿಮಿಷ ಕಾರ್ಯಕ್ರಮ ವೀಕ್ಷಿಸಿ ಬಳಿಕ ಶಾಲೆಯತ್ತ ಹೊರಟರು. ಅತ್ತ ಮಕ್ಕಳು ಸಿಎಂಗಾಗಿ ಮಧ್ಯರಾತ್ರಿವರೆಗೂ ಊಟಕ್ಕಾಗಿ ಕಾದು ಕುಳಿತಿದ್ದರು. ಬಳಿಕ ತಡವಾಗಿ ಶಾಲೆಗೆ ಬಂದ ಸಿಎಂ ಐವರು ಮಕ್ಕಳು ಮತ್ತು ಅಧಿಕಾರಿಗಳೊಂದಿಗೆ ಊಟ ಮಾಡಿದರು. ಶಾಲೆಯಲ್ಲಿ ಸಾಮಾನ್ಯ ಛಾಪೆಯಲ್ಲಿಯೇ ಮಲಗಿದ ಮುಖ್ಯಮಂತ್ರಿ ನಿದ್ದೆಗೆ ಜಾರಿದರು.

    https://www.youtube.com/watch?v=H8s1zyKFRVk

  • ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ – ಸಿಎಂ ಕಿಡಿ

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು  ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.

    ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

    ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

    ನಂತರ ಬಸ್‍ನಲ್ಲೇ ಕುಳಿತು ಮನವಿ ಸ್ವೀಕಾರ ಮಾಡಿದ ಮುಖ್ಯಮಂತ್ರಿಗಳು, ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.