Tag: ಕರುಳು

  • ವ್ಯಕ್ತಿಯ ಕರುಳಲ್ಲಿ ನೊಣ ಕಂಡು ದಂಗಾದ ವೈದ್ಯರು!

    ವ್ಯಕ್ತಿಯ ಕರುಳಲ್ಲಿ ನೊಣ ಕಂಡು ದಂಗಾದ ವೈದ್ಯರು!

    ನ್ಯೂಯಾರ್ಕ್: ಅಮೆರಿಕಾದ ಮಿಸೌರಿಯಲ್ಲಿ 63 ವರ್ಷ ವಯಸ್ಸಿನ ರೋಗಿಯ ದೊಡ್ಡ ಕರುಳಿನೊಳಗೆ  (Intestines) ನೊಣ  ಇರುವುದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ.

    ಈ ನೊಣ (House Fly) ಹೊಟ್ಟೆಯೊಳಗೆ ಹೇಗೆ ಸೇರಿಕೊಂಡಿದೆ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಯಾಕೆಂದರೆ ರೋಗಿಗೆ ನೊಣವನ್ನು ನುಂಗಿರುವಂತಹ ಯಾವುದೇ ಸಂದರ್ಭ ನೆನಪಿಲ್ಲ. ಅಲ್ಲದೇ ಅವರು ಯಾವುದೇ ಅಸ್ವಸ್ಥತೆಯ ಲಕ್ಷಣ ಕಾಣಿಸಿಕೊಂಡಿಲ್ಲ ಎಂದು ಮಿಸೌರಿ ವಿಶ್ವವಿದ್ಯಾನಿಲಯದ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯಸ್ಥ ಮ್ಯಾಥ್ಯೂ ಬೆಚ್ಟೋಲ್ಡ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ರೋಗಿಯು ಆರೋಗ್ಯ ಪರೀಕ್ಷೆಯ ಎರಡು ದಿನಗಳ ಹಿಂದೆ ಪಿಜ್ಜಾ ಮತ್ತು ಲೆಟಿಸ್ ಅನ್ನು ಸೇವಿಸಿರುವುದಾಗಿ ತಿಳಿಸಿದ್ದಾರೆ. ಆದರೆ ತಾನು ಸೇವಿಸಿದ ಆಹಾರದಲ್ಲಿ ನೊಣ ಕಂಡ ನೆನಪಿಲ್ಲ. ಇದು ಕೊಲೊನೋಸ್ಕೋಪಿ ಸಮಯದಲ್ಲಿ ಅತ್ಯಂತ ಅಪರೂಪದ ಆವಿಷ್ಕಾರ ಎಂದು ವಿವರಿಸುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಸಂಶೋಧನೆಯಲ್ಲಿ ವರದಿಯಾಗಿದೆ. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್‌ ಆ್ಯಪ್‌ ಪ್ರಿಯತಮೆಗೆ ಜೀವಾವಧಿ ಶಿಕ್ಷೆ

    ರೋಗಿಯು ಆಕಸ್ಮಿಕವಾಗಿ ಅದನ್ನು ನುಂಗಿದ್ದಾನೆಯೋ ಅಥವಾ ಕೆಳಗಿನಿಂದ ನೊಣ ಪ್ರವೇಶಿಸಿದೆಯೋ ಎಂಬ ಪ್ರಶ್ನೆಯೂ ಎದ್ದಿದೆ. ಯಾಕೆಂದರೆ ನೊಣ ಕರುಳು ಸೇರಿಕೊಳ್ಳಲು ಈ ಎರಡು ಸಾಧ್ಯತೆಗಳಿವೆ. ವ್ಯಕ್ತಿಯು ನೊಣವನ್ನು ನುಂಗಿರುವ ಸಾಧ್ಯತೆ ಕಡಿಮೆ ಇದೆ. ಕೆಳಗಿನಿಂದ ಬಂದಿದ್ದರೆ ನೊಣವು ದೊಡ್ಡ ಕರುಳಿನಲ್ಲಿ ಕತ್ತಲೆಯಾದ ಮತ್ತು ಅಂಕುಡೊಂಕಾದ ಮಾರ್ಗವನ್ನು ನ್ಯಾವಿಗೇಟ್ ಮಾಡಬೇಕಾಗಿತ್ತು. ಆದರೆ ಇಲ್ಲಿ ಇದು ಕೂಡ ಅಸಂಭವವೆಂದು ತೋರುತ್ತದೆ ಎಂದು ಡಾ. ಬೆಚ್ಟೋಲ್ಡ್ ಹೇಳಿದರು.

    ಒಟ್ಟಿನಲ್ಲಿ ಜೀರ್ಣಾಂಗವ್ಯೂಹದ ಮೂಲಕ ಈ ನೊಣ ಹೇಗೆ ಜೀವಂತವಾಗಿ ಉಳಿದುಕೊಂಡಿತು ಎಂದು ಇಡೀ ವೈದ್ಯಲೋಕವೇ ತಲೆಕೆಡಿಸಿಕೊಂಡಿದೆ.

  • ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ತಾಪಮಾನ ಹೆಚ್ಚಾಗುತ್ತಿದ್ದಂತೆ ನಿಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಅಗತ್ಯವಾಗಿರುತ್ತೆ. ಅದರಲ್ಲೂ ಕರುಳಿನ ಬಗ್ಗೆ ವಿಶೇಷ ಗಮನ ಕೊಡಬೇಕು. ಬೇಸಿಗೆಯಲ್ಲಿ ನಿಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಚೆನ್ನಾಗಿ ತಿನ್ನುವುದು ಹಾಗೂ ಆಹಾರದಲ್ಲಿ ನಿರ್ದಿಷ್ಟ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಕರುಳಿನ ಆರೋಗ್ಯದಿಂದ ಮಾನಸಿಕ ಆರೋಗ್ಯ, ಮನಸ್ಥಿತಿ, ಸಣ್ಣ ಪುಟ್ಟ ಕಾಯಿಲೆಗಳು, ಹಾರ್ಮೋನ್‍ನಲ್ಲಿ ವ್ಯತ್ಯಾಸ, ಚರ್ಮದ ಪರಿಸ್ಥಿತಿಗಳು ಸುಧಾರಿಸುತ್ತವೆ.

    ನೀರನ್ನು ಹೆಚ್ಚಾಗಿ ಕುಡಿಯಿರಿ: ಬೇಸಿಗೆಯಲ್ಲಿ ಉಳಿದ ದಿನಗಳಿಗಿಂತ ಹೆಚ್ಚಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಮುಖ್ಯವಾಗಿರುತ್ತದೆ. ನೀರಿನ ಜೊತೆಗೆ ಮಜ್ಜಿಗೆ, ಎಳೆನೀರನ್ನು ಅಧಿಕವಾಗಿ ಸೇವಿಸಿ. ಇದರಿಂದಾಗಿ ನಿಮ್ಮ ದೇಹದಲ್ಲಿ ಆಯಾಸವಾಗುವುದು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಜೊತೆಗೆ ಕರುಳಿನ ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ. ಅಷ್ಟೇ ಅಲ್ಲದೇ ಸೂರ್ಯನ ಶಾಖದಿಂದ ನಿಮ್ಮನ್ನು ರಕ್ಷಿಸಿ ನಿಮ್ಮ ತ್ವಚೆಯನ್ನು ಸುಂದರವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ

    ಹಸಿರು ತರಕಾರಿಯನ್ನು ಹೆಚ್ಚಾಗಿ ಸೇವಿಸಿ: ನೀವು ಪ್ರತಿನಿತ್ಯ ಸೇವಿಸುವ ಆಹಾರವನ್ನು ಸೇವಿಸುವಾಗ ಹಸಿರು ತರಕಾರಿ ಹಾಗೂ ತಾಜಾ ಹಣ್ಣನ್ನು ತಿನ್ನುವುದು ಉತ್ತಮ. ಇದರಿಂದ ಕರುಳಿನ ಆರೋಗ್ಯ ಉತ್ತಮವಾಗಲು ಸಹಾಯವಾಗುತ್ತದೆ. ಇದರ ಜೊತೆಗೆ ಮಸಾಲೆಯುಕ್ತ ಹಾಗೂ ಅತಿ ಹೆಚ್ಚು ಊಟ ಮಾಡುವುದರಿಂದ ಆದಷ್ಟು ದೂರವಿರಿ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಮೊಸರನ್ನು ಸೇವಿಸಿ: ಮೊಸರಿನಂತಹ ನೈಸರ್ಗಿಕ ಪ್ರೋಟಿನ್‍ಯುಕ್ತ ಆಹಾರವನ್ನು ಸೇವಿಸಿ. ಇದರಿಂದ ನಿಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬಿಸಿಲಿನ ಬೇಗೆಯಿಂದ ನಿಮ್ಮ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಸರಿಯಾಗಿ ನಿದ್ದೆ ಮಾಡಿ: ಪ್ರತಿಯೊಬ್ಬರಿಗೂ ಪ್ರತಿನಿತ್ಯ ಕನಿಷ್ಠ 7ರಿಂದ 8 ತಾಸುಗಳ ಕಾಲ ನಿದ್ದೆ ಬೇಕಾಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯೂ ಸರಿಯಾಗಿ ಆಗುತ್ತದೆ. ಜೊತೆಗೆ ಕರುಳಿನ ಆರೋಗ್ಯದ ಉತ್ತಮವಾಗಿಡುತ್ತದೆ. ಜೊತೆಗೆ ನಿಮ್ಮ ಇಡೀ ದಿನ ಫ್ರೆಶ್ ಆಗಿರುತ್ತದೆ. ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?