Tag: ಕರುಗಳು

  • ಟೆಕ್ಕಿ ಜೋಡಿಗೆ ಉಡುಗೊರೆಯಾಗಿ ಸಿಕ್ತು ದೇಶಿ ತಳಿಯ ಹಸುವಿನ ಕರುಗಳು

    ಟೆಕ್ಕಿ ಜೋಡಿಗೆ ಉಡುಗೊರೆಯಾಗಿ ಸಿಕ್ತು ದೇಶಿ ತಳಿಯ ಹಸುವಿನ ಕರುಗಳು

    ಮಂಡ್ಯ: ನವ ದಂಪತಿಗೆ ಹಣ, ಚಿನ್ನಾಭರಣವನ್ನು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ನೂತನ ಜೋಡಿಗೆ ದೇಶಿ  ತಳಿಯ ಹಸುವಿನ ಕರುಗಳನ್ನು ಉಡುಗೊರೆ ನೀಡಲಾಗಿದೆ.

    ವರ ಕಿರಣ್ ಕುಮಾರ್ ಹಾಗೂ ವಧು ನಾಗಶ್ರೀ ಇಂದು ಮಂಡ್ಯ ಜಿಲ್ಲೆಯ ಮದ್ದೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿರಣ್ ಕುಮಾರ್ ಮತ್ತು ನಾಗಶ್ರೀ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಾಗಿದ್ದು, ಇವರಿಗೆ ಸಾವಯವ ಕೃಷಿ ಮಾಡುವ ಸ್ನೇಹಿತರು ಎರಡು ಗಿಡ್ಡ ತಳಿಯ ಎರಡು ಕರುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

    ಭಾನುವಾರ ಕಳೆದ ರಾತ್ರಿ ಆರಕ್ಷತೆಗೆ ನಿಂತಿದ್ದ ಜೋಡಿಯನ್ನು ಕಲ್ಯಾಣ ಮಂಟಪದಿಂದ ಹೊರಗೆ ಕರೆತಂದು ಕರುಗಳನ್ನು ಗಿಫ್ಟ್ ನೀಡಿದ್ದಾರೆ. ಈ ವಿಶಿಷ್ಟ ಉಡುಗೊರೆಯನ್ನು ನೂತನ ವಧು ವರರು ಖುಷಿಯಿಂದ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ವಧು ನಾಗಶ್ರೀ, ತಮಗೆ ದೊರೆತಿರುವ ಇಂತಹ ವಿಶೇಷ ಗಿಫ್ಟ್ ಇದುವರೆಗೂ ಯಾರು ಕೊಟ್ಟಿರಲು ಸಾಧ್ಯವೇ ಇಲ್ಲ. ಮೊದಲ ಬಾರಿಗೆ ಈ ರೀತಿ ಉಡುಗೊರೆ ಕೊಟ್ಟಿದ್ದಾರೆ. ಇದು ತುಂಬಾ ನೆನಪಿನಲ್ಲಿ ಇಟ್ಟುಕೊಳ್ಳುವ ಗಿಫ್ಟ್ ಆಗಿದ್ದು, ತುಂಬಾ ಖುಷಿಯಾಗಿದೆ ಎಂದು ಸಂತಸದಿಂದ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಓವರ್ ಟೇಕ್ ಮಾಡಲು ಹೋಗಿ ಲಾರಿ-ಮಿನಿ ಲಾರಿ ಡಿಕ್ಕಿ : 30 ಕರುಗಳ ರಕ್ಷಣೆ

    ಓವರ್ ಟೇಕ್ ಮಾಡಲು ಹೋಗಿ ಲಾರಿ-ಮಿನಿ ಲಾರಿ ಡಿಕ್ಕಿ : 30 ಕರುಗಳ ರಕ್ಷಣೆ

    ಹಾಸನ: ಲಾರಿ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸುಮಾರು 30 ಕರುಗಳನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆ ಬಳಿ ನಡೆದಿದೆ.

    ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮಿನಿ ಲಾರಿಯಲ್ಲಿ ಸುಮಾರು 30 ಕರುಗಳನ್ನು ಬೆಂಗಳೂರಿನ ಕಡೆಗೆ ಸಾಗಿಸಲಾಗುತ್ತಿತ್ತು. ಆದರೆ ಇದರ ಹಿಂದೆ ಇನ್ನೊಂದು ಲಾರಿ ಬಂದಿದ್ದು, ಚಾಲಕ ಮಿನಿ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಎರಡು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ.

    ಅಪಘಾತ ಸಂಭವಿಸಿದ ಸ್ಥಳ್ಕಕೆ ಬೀಟ್ ಪೊಲೀಸರು ಬಂದಿದ್ದು, ಈ ವೇಳೆ ಕರುಗಳನ್ನು ಬಿಟ್ಟು ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಸದ್ಯಕ್ಕೆ ಲಾರಿಯಲ್ಲಿದ್ದ ಕರುಗಳನ್ನು ಹಿರಿಸಾವೆ ಪೊಲೀಸ್ ಠಾಣೆಯ ಬಳಿ ಕರೆದುಕೊಂಡು ಬಂದು ಆರೈಕೆ ಮಾಡಲಾಗುತ್ತಿದೆ.

    ಗೃಹರಕ್ಷಕ ದಳದ ಸಿಬ್ಬಂದಿ ಇಂದು ಬೆಳಗ್ಗೆ ಕರುಗಳಿಗೆ ಸುಮಾರು 50 ಲೀಟರ್ ಹಾಲನ್ನು ತಂದು ಕುಡಿಸಿವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.