Tag: ಕರೀನಾ ಕಪೂರ್ ಖಾನ್

  • ಪತ್ನಿ ಕರೀನಾ ಕಪೂರ್, ಮಗನ ವಿರುದ್ಧ ಸೈಫ್ ಅಲಿ ಖಾನ್ ದೂರು!

    ಪತ್ನಿ ಕರೀನಾ ಕಪೂರ್, ಮಗನ ವಿರುದ್ಧ ಸೈಫ್ ಅಲಿ ಖಾನ್ ದೂರು!

    ಮುಂಬೈ: ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಮಗ ತೈಮೂರ್ ನನಗೆ ಮುತ್ತು ನೀಡುತ್ತಿಲ್ಲ ಎಂದು ಅಭಿಮಾನಿಗಳಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ದೂರು ನೀಡಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಸೈಫ್ ಅಲಿ ಖಾನ್ ನನ್ನ ಪತ್ನಿ ಇನ್ನುಂದೆ ನನಗೆ ಮುತ್ತು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ.

    ನಾನು ತೈಮೂರ್ ಗೆ ಒಂದು ಮುತ್ತು ನೀಡು ಎಂದು ಕೇಳಿದರೆ, ಆತ ನನ್ನ ಕೈಗೆ ಮತ್ತು ನೀಡುತ್ತಾನೆ. ಕೆನ್ನೆಗೆ ನೀಡು ಎಂದಾಗ ಆತ ಕೆನ್ನೆಗೆ ಮುತ್ತು ನೀಡುವ ರೀತಿ ನಾಟಕವಾಡುತ್ತಾನೆ. ಅಲ್ಲದೇ ಕರೀನಾ ಕೂಡ ಇದೇ ರೀತಿ ಮಾಡುತ್ತಾಳೆ ಎಂದು ಸೈಫ್ ಅಲಿ ಖಾನ್ ತಮ್ಮ ಅಭಿಮಾನಿಗಳಲ್ಲಿ ಹೇಳಿದ್ದಾರೆ.

    ಕಿಸ್ ಯಾಕೆ ಕೊಡುತ್ತಿಲ್ಲ ಎನ್ನುವುದನ್ನು ಹೇಳಿದ ಅವರು, ನನ್ನ ಮುಂದಿನ ಚಿತ್ರಕ್ಕೆ ಗಡ್ಡ ಬಿಟ್ಟಿದ್ದೇನೆ. ಈ ಕಾರಣಕ್ಕೆ ಪತ್ನಿ ಮತ್ತು ಮಗ ಮುತ್ತು ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. ಗಡ್ಡ ಬಿಡುವುದರ ಜೊತೆಗೆ ಕೂದಲಿಗೆ ಸೈಫ್ ಡ್ರೆಡ್ ಲಾಕ್ ಕೂಡ ಮಾಡಿಸಿದ್ದಾರೆ.

    ಮುಂದಿನ ಚಿತ್ರದಲ್ಲಿ ನಾನು ನಾಗಾ ಸಾಧು ಹಂಟರ್ ಪಾತ್ರದಲ್ಲಿ ಅಭಿನಯಿಸಲಿದ್ದೇನೆ. ಹಾಗಾಗಿ ನನಗೆ ಉದ್ದ ಗಡ್ಡ ಬೇಕಾಗಿದೆ ಎಂದು ಸೈಫ್ ಹೇಳಿದ್ದಾರೆ.

  • ಪತ್ನಿ, ಮಗನ ಫೋಟೋ ತೆಗೆದಿದ್ದಕ್ಕೆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದ ಸೈಫ್- ವಿಡಿಯೋ ನೋಡಿ

    ಪತ್ನಿ, ಮಗನ ಫೋಟೋ ತೆಗೆದಿದ್ದಕ್ಕೆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದ ಸೈಫ್- ವಿಡಿಯೋ ನೋಡಿ

    ಮುಂಬೈ: ತನ್ನ ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಮಗ ತೈಮೂರ್ ಫೋಟೋ ತೆಗೆದಿದ್ದಕ್ಕೆ ಸೈಫ್ ಅಲಿ ಖಾನ್ ಅಭಿಮಾನಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಸೈಫ್ ತನ್ನ ಪತ್ನಿ ಹಾಗೂ ಮಗನ ಜೊತೆ ರಜೆ ಕಳೆಯಲು ಲಂಡನ್‍ಗೆ ಹೋಗಿದ್ದರು. ಅಲ್ಲಿ ಸೈಫ್ ಹಾಗೂ ಕರೀನಾ ತನ್ನ ಮಗ ತೈಮೂರ್ ಜೊತೆ ಲಂಡನ್‍ನ ರಸ್ತೆಗಳಲ್ಲಿ ತಿರುಗಾಡುತ್ತಿದ್ದರು.

    ಸೈಫ್, ಕರೀನಾ ರಸ್ತೆಯನ್ನು ದಾಟುವಾಗ ಅಭಿಮಾನಿಯೊಬ್ಬರು ತೈಮೂರ್ ನ ಫೋಟೋ ಕ್ಲಿಕಿಸಲು ಮುಂದಾದರು. ಆಗ ಸೈಫ್ ಆ ಅಭಿಮಾನಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸೈಫ್ ರೊಚ್ಚಿಗೆದಿದ್ದನ್ನು ನೋಡಿದ ಅಭಿಮಾನಿ ತೈಮೂರ್ ಫೋಟೋ ಕ್ಲಿಕಿಸುವ ಬದಲು ಕೋಪದಲ್ಲಿರುವ ಸೈಫ್ ಫೋಟೋ ಕ್ಲಿಕಿಸಿದ್ದಾರೆ.

    ಸದ್ಯ ಸೈಫ್ ಹಾಗೂ ಕರೀನಾ ರಜೆ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದಾರೆ. ಈಗ ಈ ಸ್ಟಾರ್ ಜೋಡಿ ದೊಡ್ಡ ಬ್ರಾಂಡ್‍ವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳತ್ತಿದ್ದಾರೆ. ಇದೇ ಜಾಹೀರಾತಿನಲ್ಲಿಯೇ ಸೈಫ್ ಪತ್ನಿಗೆ ಸಾಥ್ ನೀಡಲಿದ್ದಾರೆ ಎಂದು ವರದಿಯಾಗಿದೆ.

     

    ಸೈಫ್ ಅಲಿ ಖಾನ್ ನಟಿಸುತ್ತಿರುವ ಸಿನಿಮಾಗಳು ಪ್ರೇಕ್ಷಕರನ್ನು ತಲುಪವಲ್ಲಿ ವಿಫಲವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರೀನಾ ಪತಿಯ ಜೊತೆಯೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.