Tag: ಕರೀನಾ ಕಪೂರ್ ಖಾನ್

  • ಪರೀಕ್ಷೆಯಲ್ಲಿ ಕರೀನಾ ಕಪೂರ್‌ ಮಗನ ಬಗ್ಗೆ ಪ್ರಶ್ನೆ – ಫೋಟೋ ವೈರಲ್‌

    ಪರೀಕ್ಷೆಯಲ್ಲಿ ಕರೀನಾ ಕಪೂರ್‌ ಮಗನ ಬಗ್ಗೆ ಪ್ರಶ್ನೆ – ಫೋಟೋ ವೈರಲ್‌

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖ್ಯಾತ ಸ್ಟಾರ್ ದಂಪತಿಗಳ ಸಾಲಿನಲ್ಲಿ ಇದ್ದಾರೆ. ಅವರ ಮಕ್ಕಳನ್ನು ಅಭಿಮಾನಿಗಳು ಸ್ಟಾರ್‌ಗಳಂತೆ ನೋಡುತ್ತಾರೆ. ಕರೀನಾ ಕಪೂರ್ ಮಗನ  ಕುರಿತಾದ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಮುದ್ದಿನ ಮಗ ಪುತ್ರ ತೈಮೂರ್ ಅಲಿ ಖಾನ್ ಸ್ಟಾರ್ ಕಿಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. 6ನೇ ತರಗತಿ ಪರೀಕ್ಷೆಯಲ್ಲಿ ತೈಮೂರು ಕುರಿತಾಗಿ ಪ್ರಶ್ನೆ ಕೇಳಲಾಗಿದೆ. ಆ ಪ್ರಶ್ನೆ ಪತ್ರಿಕೆ ಕೂಡ ಈಗ ವೈರಲ್ ಆಗಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

    ಮಧ್ಯಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಮಕ್ಕಳಿಗೆ ಪ್ರಚಲಿತ ಘಟನೆಗಳು ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ʻಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರನ ಪೂರ್ತಿ ಹೆಸರು ಏನು?ʼ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆಯ ಫೋಟೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಈ ರೀತಿ ಪ್ರಶ್ನೆ ಕೇಳಿರುವ ಶಾಲೆಯ ವಿರುದ್ಧ ಅನೇಕರು ಆಶ್ಚರ್ಯದ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಡೆದಾಡುವ ಅಪರೂಪದ ಮೀನು ಪತ್ತೆ – ವೀಡಿಯೋ ವೈರಲ್

    ತೈಮೂರ್ ಅಲಿ ಖಾನ್ ಹುಟ್ಟಿದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾನೆ. ತೈಮೂರ್ ಫೋಟೋವನ್ನು ಗೂಗಲ್‍ನಲ್ಲಿ ಹೆಚ್ಚು ಸರ್ಚ್‌ ಮಾಡಲಾಗುತ್ತಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ತೈಮೂರ್ ಕುರಿತಾಗಿ ಒಂದು ಪ್ರಶ್ನೆ ಬರುತ್ತದೆ ಎಂದು ಯಾರೂ ನೀರಿಕ್ಷೆ ಮಾಡಿರುವುದಿಲ್ಲ. ಇದನ್ನೂ ಓದಿ: ಮೋದಿ ಫೋಬಿಯಾ ಎನ್ನುವಂತೆ ಕಾಂಗ್ರೆಸ್‍ನವರು ನಡೆದುಕೊಳ್ಳುತ್ತಿದ್ದಾರೆ: ಪ್ರಹ್ಲಾದ್ ಜೋಶಿ

  • ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಸ್ನೇಹಿತೆ ಅಮೃತಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬ್ರಾಹನ್‍ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿದೆ.

    ಕರೀನಾ ಕಪೂರ್ ಖಾನ್ ಮತ್ತು ಅಮೃತಾ ಅರೋರಾ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇಬ್ಬರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಹಲವಾರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇಬ್ಬರು ನಟಿಯರ ಸಂಪರ್ಕಕ್ಕೆ ಬಂದವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಬಿಎಂಸಿ ಆದೇಶಿಸಿದೆ. ಇದನ್ನೂ ಓದಿ: ‘ಕಭಿ ಖುಷಿ ಕಭಿ ಗಮ್’ ಸೀನ್ ರೀ ಕ್ರಿಯೇಟ್ ಮಾಡಿದ ಆಲಿಯಾ-ರಣವೀರ್

    ಕರೀನಾ ಮತ್ತು ಅಮೃತಾ ಈ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಅಮೃತಾ ಮತ್ತು ಕರೀನಾ ಇಬ್ಬರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.

    ಕರೀನಾ ಮತ್ತು ಅಮೃತಾ ಇತ್ತೀಚೆಗೆ ಮುಂಬೈನಲ್ಲಿರುವ ರಿಯಾ ಕಪೂರ್ ಅವರ ಮನೆಯಲ್ಲಿ ಪಾರ್ಟಿಯನ್ನು ಮಾಡಿದ್ದರು. ಈ ವೇಳೆ ಈ ನಟಿಯರು ಕ್ಯಾಮೆರಾಗೆ ಪೋಸ್ ಸಹ ನೀಡಿದ್ದರು. ಅವರೊಂದಿಗೆ ಮಲೈಕಾ ಅರೋರಾ, ಪೂನಂ ದಮಾನಿಯಾ ಮತ್ತು ಮಸಾಬಾ ಗುಪ್ತಾ ಸಹ ಇದ್ದರು.

    ಪ್ರಸ್ತುತ ಕರೀನಾ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದು, ಅಮೀರ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಅದವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಉಸ್ತುವಾರಿ ಬದಲಾಗದಿದ್ದರೆ ಜನವರಿಯಲ್ಲಿ ಸತ್ಯಾಗ್ರಹ ಆರಂಭಿಸುತ್ತೇನೆ: ಸೋಮಶೇಖರ್ ರೆಡ್ಡಿ

  • ಬಾಡಿಗೆ ತಾಯ್ತನದ ಆಲೋಚನೆ  ಮಾಡಿದ್ದೆನು: ಕರೀನಾ

    ಬಾಡಿಗೆ ತಾಯ್ತನದ ಆಲೋಚನೆ ಮಾಡಿದ್ದೆನು: ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬಾಡಿಗೆ ತಾಯ್ತನದ ಆಲೋಚನೆ ಮಾಡಿದ್ದೆನು ಎಂದು ಹೇಳುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ನಾನು ಹಾಗೂ ಸೈಫ್ ಇಬ್ಬರೂ ಬಾಡಿಗೆ ತಾಯ್ತನದ ಬಗ್ಗೆ ಮಾತುಕತೆ ನಡೆಸಿದ್ದೆವು. ನಾರ್ಮಲ್ ಆಗಿ ಮಗುವನ್ನು ಪಡೆಯುವ ಪ್ರಯತ್ನ ಮಾಡೋಣ, ಆಗದಿದ್ದರೆ ಬಾಡಿಗೆ ತಾಯ್ತನದ ಬಗ್ಗೆ ಆಲೋಚಿಸೋಣ ಎಂದು ನಾವಿಬ್ಬರೂ ನಿರ್ಧರಿಸಿದ್ದೆವು. ಆದರೆ, ದೇವರ ದಯೆಯಿಂದ ಮಗುವಾಗಿದೆ. ಬಾಡಿಗೆ ತಾಯ್ತನ ಅನ್ನೋದು ನಮ್ಮ ಎರಡನೇ ಆಯ್ಕೆ ಆಗಿತ್ತು ಎಂದಿದ್ದಾರೆ ಅವರು.

    ನಾನು ಸೈಫ್ ಮದುವೆ ಆದ ನಂತರದಲ್ಲಿ ನನ್ನ ಕರಿಯರ್ ಅಂತ್ಯಗೊಂಡಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮದುವೆ ನಂತರವೂ ವೃತ್ತಿಜೀವನಕ್ಕೆ ಧಕ್ಕೆ ಆಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮದುವೆ ಆದಾಗ ನನಗೆ ಅವಕಾಶ ಸಿಗುವುದಿಲ್ಲ ಎಂದುಕೊಂಡಿದ್ದರು. ಆದರೆ, ಈಗ ಅದು ಸುಳ್ಳು ಎಂಬುದು ಸಾಬೀತಾಗಿದೆ.  ಇದನ್ನೂ ಓದಿ: ಮುಂದಿನ ತಿಂಗಳೇ ಮಕ್ಕಳಿಗೆ ಕೊರೊನಾ ಲಸಿಕೆ ಸಾಧ್ಯತೆ: ಐಸಿಎಂಆರ್

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಮಾಡಿದ್ದು ಬಹಳ ಚರ್ಚೆಗೆ ಕಾರಣವಾಗಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಕರೀನಾ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ತೈಮೂರ್ ಅಲಿ ಖಾನ್ ಜನಿಸಿದ ನಾಲ್ಕು ವರ್ಷಗಳ ನಂತರದಲ್ಲಿ ಕರೀನಾಗೆ ಮತ್ತೊಂದು ಮಗು ಜನಿಸಿದೆ. ಫೆಬ್ರವರಿ ತಿಂಗಳಲ್ಲಿ ಹೊಸ ಸದಸ್ಯನ ಆಗಮನ ಆಗಿತ್ತು. ಇದಕ್ಕೂ ಮೊದಲು ಸೈಫ್ ಹಾಗೂ ಕರೀನಾ ಬಾಡಿಗೆ ತಾಯ್ತನದ ಬಗ್ಗೆ ಆಲೋಚನೆ ಮಾಡಿದ್ದರಂತೆ.

  • ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಕರೀನಾ 2ನೇ ಪುತ್ರ

    ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಕರೀನಾ 2ನೇ ಪುತ್ರ

    ಮುಂಬೈ: ಬಾಲಿವುಡ್‍ನ ಕರೀನಾ, ಸೈಫ್ ಜೋಡಿ ಇಷ್ಟು ದಿನ ತಮ್ಮ ಎರಡನೇ ಮಗ ಜೆಹ್ ಅಲಿ ಖಾನ್ ಫೋಟೋವನ್ನು ಕರೀನಾ ಕಪೂರ್ ಖಾನ್ ರಿವೀಲ್ ಮಾಡಿರಲಿಲ್ಲ. ಇದೀಗ ರಣಧೀರ್ ಕಪೂರ್ ಮನೆಗೆ ಫ್ಯಾಮಿಲಿ ಭೇಟಿಕೊಟ್ಟಿದ್ದಾರೆ. ಈ ವೇಳೆ ಆರು ತಿಂಗಳ ಕಂದಮ್ಮ ಜೆಹ್‍ನನ್ನು ಸೈಫ್ ಅಲಿ ಖಾನ್ ಎತ್ತಿಕೊಂಡಿದ್ದು, ಕ್ಯಾಮರಾ ಕಣ್ಣುಗಳು ಪುಟಾಣಿಯನ್ನು ಸೆರೆ ಹಿಡಿದಿವೆ.

    ಕರೀನಾ ಮೊದಲನೇ ಪುತ್ರ ತೈಮೂರ್ ಅಲಿ ಖಾನ್ ಹಾಗೂ ಎರಡನೇ ಪುತ್ರ ಜೆಹ್ ಅಲಿ ಖಾನ್ ಲಾಲನೆ ಪಾಲನೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಾಲಿವುಡ್‍ನ ಸ್ಟಾರ್ ದಂಪತಿಗಳ ಮಕ್ಕಳ ಪೈಕಿ ತೈಮೂರ್ ಅಲಿ ಖಾನ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿದ್ದಾನೆ. ಮೀಡಿಯಾ ಹಾಗೂ ಕ್ಯಾಮರಾ ಕಣ್ಣುಗಳಿಂದ ಎರಡನೇ ಪುತ್ರನನ್ನು ದೂರವಿಡಲು ದಂಪತಿ ಪ್ರಯತ್ನಿಸಿದರು. ಇದೇ ಕಾರಣಕ್ಕೆ ಈವರೆಗೂ ತಮ್ಮ ದ್ವಿತೀಯ ಪುತ್ರನ ಫೋಟೋವನ್ನು ಕರೀನಾ-ಸೈಫ್ ಬಹಿರಂಗಪಡಿಸಿರಲಿಲ್ಲ. ಆದ್ರೀಗ ಪುಟಾಣಿ ಜೆಹ್ ಅಲಿ ಖಾನ್ ಕ್ಯಾಮರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದಾನೆ. ಇದನ್ನೂ ಓದಿ: ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

     

    View this post on Instagram

     

    A post shared by Viral Bhayani (@viralbhayani)

    ಪುಟಾಣಿ ಜೆಹ್ ಅಲಿ ಖಾನ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಡಲು ಥೇಟ್ ತೈಮೂರ್ ಅಲಿ ಖಾನ್‍ನಂತೆಯೇ ಜೆಹ್ ಇದ್ದಾನೆ, ಅಮ್ಮನ ಪಡಿಯಚ್ಚು, ಜೆಹ್ ನೋಡಲು ತುಂಬಾ ಮುದ್ದಾಗಿದ್ದಾನೆ ಅಂತೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಇದೀಗ ರಣಧೀರ್ ಕಪೂರ್ ಮನೆಗೆ ಕರೀನಾ ಕುಟುಂಬ ಸಮೇತರಾಗಿ ಭೇಟಿಕೊಟ್ಟಿದ್ದಾರೆ. ಈ ವೇಳೆ ಆರು ತಿಂಗಳ ಕಂದಮ್ಮ ಜೆಹ್‍ನನ್ನು ಸೈಫ್ ಅಲಿ ಖಾನ್ ಎತ್ತಿಕೊಂಡಿದ್ದು, ಕ್ಯಾಮರಾ ಕಣ್ಣುಗಳು ಪುಟಾಣಿಯನ್ನು ಸೆರೆ ಹಿಡಿದಿವೆ. ಕರೀನಾ ಕಪೂರ್ ಖಾನ್ ಹಾಗೂ ತೈಮೂರ್ ಅಲಿ ಖಾನ್ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

  • ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಜಹಾಂಗೀರ್ ಎಂದು ಪುತ್ರನಿಗೆ ಹೆಸರಿಟ್ಟ ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2 ನೇ ಪುತ್ರನಿಗೆ ಜಹಾಂಗೀರ್ ಎಂದು ಹೆಸರು ಇಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಅಲಿ ಖಾನ್ ಎಂದು ಹೆಸರು ಇಟ್ಟಿದ್ದು ಬಹಳ ಚರ್ಚೆಯಾಗಿತ್ತು. ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ದರು. ಅದು ದಾಳಿಕೋರ, ಕ್ರೂರ ರಾಜನ ಹೆಸರು ಎಂಬ ಕಾರಣಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ತಮ್ಮ ಎರಡನೇ ಮಗನಿಗೆ ಹೆಸರು ಇಡುವಾಗ ಸೈಫ್-ಕರೀನಾ ತುಂಬ ಎಚ್ಚರಿಕೆ ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈಗ ಸೈಫ್-ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ:  ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಈ ವರ್ಷ ಫೆಬ್ರವರಿಯಲ್ಲಿ ಎರಡನೇ ಪುತ್ರನಿಗೆ ಕರೀನಾ ಜನ್ಮ ನೀಡಿದ್ದರು.  ಏನು ಹೆಸರು ಇಟ್ಟಿದ್ದಾರೆ ಎಂಬುದು ಕೂಡ ಬಹಿರಂಗ ಆಗಿರಲಿಲ್ಲ. ಇತ್ತೀಚೆಗೆ ಅವರ ಎರಡನೇ ಪುತ್ರನಿಗೆ ಅವರು ಜೇ (Jeh) ಎಂದು ಹೆಸರು ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

    ಕರೀನಾ ಅವರು ಪ್ರಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ಎರಡನೇ ಮಗುವಿನ ಬಗ್ಗೆ ಕರೀನಾ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ಕರೀನಾ ಎರಡನೇ ಮಗುವಿಗೆ ಜಹಾಂಗೀರ್ ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಮಗುವಿನ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

  • ಕರೀನಾ ಬೇಬಿ ಬಂಪ್ ಫೋಟೋ ವೈರಲ್

    ಕರೀನಾ ಬೇಬಿ ಬಂಪ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬೇಬೋ, ಸೈಫ್ ಮಡದಿ ಕರೀನಾ ಕಪೂರ್ ಬೇಬಿ ಬಂಪ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಆರೋಗ್ಯದ ಬಗ್ಗೆ ನಿಗಾ ಇರಲಿ ಎಂದು ಸಲಹೆ ನೀಡುತ್ತಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಕರೀನಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನ ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ಖಾನ್, ಕೆಲ ದಿನಗಳ ಹಿಂದೆ ಮುಂಬೈಗೆ ವಾಪಸ್ ಆಗಿದ್ದಾರೆ. ಖಾಸಗಿ ಕಂಪನಿಯ ಜಾಹೀರಾತಿನ ಶೂಟಿಂಗ್ ತೊಡಗಿಕೊಂಡಿರುವ ಕರೀನಾ ಕಪೂರ್, ನಾವಿಬ್ಬರು ಚಿತ್ರೀಕರಣದ ಸೆಟ್ ನಲ್ಲಿದ್ದೇವೆ ಎಂದು ಬರೆದು ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಜನವರಿಯಲ್ಲಿ ಮಗುವಿನ ಆಗಮನವಾಗಲಿದೆ ಎಂದು ಪಟೌಡಿ ಕುಟುಂಬ ತಿಳಿಸಿದೆ. ಅಕ್ಟೋಬರ್ 16, 2012ರಂದು ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮದುವೆಯಾಗಿದ್ದರು. ದಂಪತಿಗೆ ಡಿಸೆಂಬರ್ 20, 2016ರಂದು ಗಂಡು ಮಗು ಜನನವಾಗಿತ್ತು. ಇದೀಗ ದಂಪತಿ ಎರಡನೇ ಮಗುವಿನ ಆಗಮನದ ಸಂಭ್ರಮದಲ್ಲಿದ್ದಾರೆ.

     

  • ಬೇಬೋ ಬರ್ತ್ ಡೇಗೆ ಚುಂಬನದ ವಿಶ್

    ಬೇಬೋ ಬರ್ತ್ ಡೇಗೆ ಚುಂಬನದ ವಿಶ್

    ಮುಂಬೈ: ಬಾಲಿವುಡ್ ಬೇಬೋ, ಪೂ ಕರೀನಾ ಕಪೂರ್ ಖಾನ್ ಇಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪತಿ ಸೈಫ್ ಅಲಿ ಖಾನ್ ಚುಂಬಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ರೊಮ್ಯಾಂಟಿಕ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕರೀನಾ ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B2qUfvAF92G/

    ಕರೀನಾ ಹಿರಿಯ ಸೋದರಿ ಕರೀಷ್ಮಾ ಕಪೂರ್ ಸಹ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಬರ್ತ್ ಡೇ ಗರ್ಲ್ ಬೇಬೋ, ಬೆಸ್ಟ್ ಸಿಸ್ಟರ್ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಕರೀನಾ ಕಪೂರ್ ಶ್ವೇತ ವರ್ಣದ ಫ್ಲಾಜ್ ಮತ್ತು ಕುರ್ತಾ ಧರಿಸಿ ಸಿಂಪಲ್ ರಾಯಲ್ ಲುಕ್ ನಲ್ಲಿ ಮಿಂಚಿದ್ದಾರೆ. ಪತಿ ಸೈಫ್ ಅಲಿಖಾನ್ ಸಹ ವೈಟ್ ಆ್ಯಂಡ್ ವೈಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ವೈಟ್ ಆ್ಯಂಡ್ ವೈಟ್ ನಲ್ಲಿ ಡ್ರೆಸ್ ನಲ್ಲಿ ಲಿಪ್ ಲಾಕ್ ಮಾಡಿರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ.

    ಒಂದು ಮಗುವಿನ ತಾಯಿಯಾಗಿರುವ ಕರೀನಾ ಕಪೂರ್ ಇಂದಿಗೂ ತಮ್ಮ ಮೈಮಾಟವನ್ನು ಹಾಗೆ ಉಳಿಸಿಕೊಂಡಿದ್ದಾರೆ. ನಿರಂತರ ಜಿಮ್, ಯೋಗ ಮಾಡುವ ಕರೀನಾ ಕಪೂರ್ ಸೌಂದರ್ಯ ಟೀನೇಜ್ ಯುವತಿಯರಿಗೆ ಸೆಡ್ಡು ಹೊಡೆಯುವಂತಿದೆ.

    https://www.instagram.com/p/B2pLp3fF1Qk/

  • ಟ್ರೋಲ್ ಆದ್ರೂ ಮತ್ತೆ ಮೇಕಪ್ ಇಲ್ಲದ ಫೋಟೋ ಕ್ಲಿಕ್ಕಿಸಿದ ಕರೀನಾ

    ಟ್ರೋಲ್ ಆದ್ರೂ ಮತ್ತೆ ಮೇಕಪ್ ಇಲ್ಲದ ಫೋಟೋ ಕ್ಲಿಕ್ಕಿಸಿದ ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಇತ್ತೀಚೆಗೆ ಮೇಕಪ್ ಇಲ್ಲದ ಫೋಟೋ ಕ್ಲಿಕ್ಕಿಸಿಕೊಂಡು ಟ್ರೋಲ್ ಆಗಿದ್ದರು. ಹೀಗಿದ್ದರೂ ಸಹ ಕರೀನಾ ಮತ್ತೆ ಮೇಕಪ್ ಇಲ್ಲದ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈಗ ಅದು ವೈರಲ್ ಆಗುತ್ತಿದೆ.

    ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಹಾಗೂ ಮಗ ತೈಮೂರ್ ಜೊತೆ ಲಂಡನ್‍ನಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ. ಕರೀನಾ ಕಪೂರ್ ಜೊತೆ ಅವರ ಸಹೋದರಿ, ನಟಿ ಕರೀಷ್ಮಾ ಕಪೂರ್ ಹಾಗೂ ಅವರ ಮಕ್ಕಳಾದ ಸಮೈರಾ ಕಪೂರ್ ಹಾಗೂ ಕಿಯಾನ್ ರಾಜ್ ಕೂಡ ರಜೆ ದಿನಗಳನ್ನು ಕಳೆಯುತ್ತಿದ್ದಾರೆ.

    ಇಡೀ ಕುಟುಂಬ ಲಂಡನ್‍ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅಲ್ಲದೆ ನಟಿ ಕರೀಷ್ಮಾ ಅವರು ರಜೆಯಲ್ಲಿ ತೆಗೆದ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳ ನಡುವೆ ಕರೀನಾ ಅವರ ಮೇಕಪ್ ಇಲ್ಲದ ಫೋಟೋ ಕೂಡ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಕರೀನಾ ತಮ್ಮ ಪತಿ ಸೈಫ್ ಅಲಿ ಖಾನ್ ಹಾಗೂ ಮಗ ತೈಮೂರ್ ಜೊತೆ ಇಟಲಿಯ ಟಸ್ಕನಿಯಲ್ಲಿ ರಜೆಯನ್ನು ಕಳೆಯುತ್ತಿದ್ದರು. ಈ ವೇಳೆ ಕರೀನಾ ಮೇಕಪ್ ಇಲ್ಲದಿರುವ ಫೋಟೋವನ್ನು ಅವರ ಅಭಿಮಾನಿಗಳು ಫ್ಯಾನ್ಸ್ ಪೇಜ್‍ನಲ್ಲಿ ಹಂಚಿಕೊಂಡಿದ್ದರು.

    ಈ ಫೋಟೋದಲ್ಲಿ ಕರೀನಾ ಯಾವುದೇ ಮೇಕಪ್ ಹಾಕಿರಲಿಲ್ಲ. ಆ ಫೋಟೋ ನೋಡಿ ಜನರು `ಹೌದು. ನಿಮಗೆ ಈಗ ವಯಸ್ಸಾಗಿದೆ’, `ಅಯ್ಯೋ, ದೇವರೇ ಭಯಂಕರ’, `ಭಯಂಕರವಾದ ಮುಖ’ ಎಂದು ಟ್ರೋಲ್ ಮಾಡಿದ್ದರು.

  • ಬೋಲ್ಡ್ ಲುಕ್‍ನಲ್ಲಿ ಡೀಪ್ ಡ್ರೆಸ್ ಧರಿಸಿ ಹಾಟ್ ಆಗಿ ಮಿಂಚಿದ್ರು ಕರೀನಾ!

    ಬೋಲ್ಡ್ ಲುಕ್‍ನಲ್ಲಿ ಡೀಪ್ ಡ್ರೆಸ್ ಧರಿಸಿ ಹಾಟ್ ಆಗಿ ಮಿಂಚಿದ್ರು ಕರೀನಾ!

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಬೋಲ್ಡ್ ಲುಕ್‍ನಲ್ಲಿ ಹಾಟ್ ಆಗಿ ಮಿಂಚಿದ್ದಾರೆ.

    ಕರೀನಾ ಕಪೂರ್ ‘ವಾಗ್ ವೂಮೆನ್ ಆಫ್ ದ ಇಯರ್ 2018’ರ ಅವಾರ್ಡ್ ಕಾರ್ಯಕ್ರಮದಲ್ಲಿ ಯುವನಟಿಯರನ್ನು ನಾಚಿಸುವಂತೆ ಉಡುಪನ್ನು ಧರಿಸಿದ್ದಾರೆ. ಸದ್ಯ ಕರೀನಾ ಧರಿಸಿರುವ ಗೌನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕರೀನಾ ಕಪೂರ್ ಯಾವಾಗಲೂ ಜಿಮ್‍ನ ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವಾರ್ಡ್ ಕಾರ್ಯಕ್ರಮದಲ್ಲಿ ಹೊಳೆಯುವ ಡೀಪ್ ನೆಕ್‍ನ ಗೌನ್ ಧರಿಸಿ ತಮ್ಮ ಹಾಟ್ ನೆಸ್ ಪ್ರದರ್ಶಿಸುತ್ತಾ ಇನ್ನಷ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಕರೀನಾ ಬೋಲ್ಡ್ ಡ್ರೆಸ್ ಧರಿಸಿ ಸ್ವಲ್ಪವೂ ಕೂಡ ನರ್ವಸ್ ಆಗಿರಲಿಲ್ಲ. ಆದರೆ ಕರೀನಾ ಅವರ ಬೋಲ್ಡ್ ಅವತಾರ ನೋಡಿ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಆಶ್ಚರ್ಯಪಟ್ಟರು. ಈ ಅವಾರ್ಡ್ ಕಾರ್ಯಕ್ರಮದಲ್ಲಿ ಕರೀನಾ ತಮ್ಮ ಸಹೋದರಿ ಕರೀಷ್ಮಾ ಕಪೂರ್ ಅವರಿಂದ ಮೋಸ್ಟ್ ಸ್ಟೈಲಿಸ್ಟ್ ಅವಾರ್ಡ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ಫಾಲ್ಗುನಿ ಹಾಗೂ ಶೇನ್ ಪೀಕಾಕ್ ಅವರ ಇಂಡಿಯಾ ಕೌಚುರ್ ವೀಕ್ 2018ರ ಕಾರ್ಯಕ್ರಮದಲ್ಲಿ ಡಿಸೈನರ್ ತಾವು ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸುತ್ತಿದ್ದರು. ಈ ವೇಳೆ ನಟಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿ ಶೋ ಸ್ಟಾಪರ್ ಆಗಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಡಿಸೈನರ್ ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸಲಾಗುತ್ತಿತ್ತು. ಮಾಡೆಲ್‍ಗಳು ರ‍್ಯಾಂಪ್ ವಾಕ್ ಮಾಡಿದ ಮೇಲೆ ಕರೀನಾ ಕಪೂರ್ ರನ್ ವೇ ಮೇಲೆ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಕರೀನಾ ರ‍್ಯಾಂಪ್ ವಾಕ್ ಮಾಡುವಾಗ ಗೋಲ್ಡನ್ ಲೆಹೆಂಗಾ ಧರಿಸಿದ್ದರು. ಈ ಲೆಹೆಂಗಾ ಬರೋಬ್ಬರಿ 30 ಕೆ.ಜಿ ತೂಕವಿದೆ. ಈ ಲೆಹೆಂಗಾಗೆ ಕರೀನಾ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ ನ್ಯೂಡ್ ಗ್ಲಿಟರಿಂಗ್ ದುಪಟ್ಟಾ ಧರಿಸಿದ್ದರು. ಈ ಲೆಹೆಂಗಾ ಧರಿಸಿ ಕರೀನಾ ತಮ್ಮ ಕೂದಲನ್ನು ಕರ್ಲ್ ಮಾಡಿಕೊಂಡಿದ್ದರು.

    ಈ ಲೆಹೆಂಗಾ ಧರಿಸಿ ನಾನು ಶೈನಿಂಗ್ ಸ್ಟಾರ್ ತರಹ ಕಾಣಿಸುತ್ತಿದ್ದೇನೆ. ಇದು ಪಾಲ್ಗುನಿ ಹಾಗೂ ಶಾನ್ ಪೀಕಾಕ್ ಅವರ ಕಾರ್ಯಕ್ರಮವಿಲ್ಲದಿದ್ದರೆ ನಾನು ಇಷ್ಟು ತೂಕವಿರುವ ಲೆಹೆಂಗಾವನ್ನು ಧರಿಸುತ್ತಿರಲಿಲ್ಲ. ನಾನು 10 ವರ್ಷಗಳಿಂದ ರ‍್ಯಾಂಪ್ ವಾಕ್ ಮಾಡುತ್ತಿದ್ದು, ಆದರೆ ಇದೇ ಮೊದಲ ಬಾರಿಗೆ ನಾನು 30 ಕೆ.ಜಿ ತೂಕದ ಉಡುಪು ಧರಿಸಿದ್ದೇನೆ ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.