Tag: ಕರೀಂಲಾಲ್ ತೆಲಗಿ

  • Scam 2003- ವೆಬ್ ಸರಣಿ ರೂಪದಲ್ಲಿ ತೆಲಗಿ ಛಾಪಾ ಕಾಗದ ಹಗರಣ: ಟ್ರೈಲರ್ ರಿಲೀಸ್

    Scam 2003- ವೆಬ್ ಸರಣಿ ರೂಪದಲ್ಲಿ ತೆಲಗಿ ಛಾಪಾ ಕಾಗದ ಹಗರಣ: ಟ್ರೈಲರ್ ರಿಲೀಸ್

    ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ನಕಲಿ ಛಾಪಾ ಕಾಗದ ಹರಣವನ್ನು (Stamp Paper Scam) ವೆಬ್ ಸರಣಿಗೆ ಅಳವಡಿಸಿದ್ದಾರೆ ನಿರ್ದೇಶಕ ಹನ್ಸಲ್ ಮೆಹ್ತಾ. ಇದೀಗ ಸರಣಿಯ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಈ ಹಗರಣದ (Scandal) ರೂವಾರಿ ಕರೀಂ ಲಾಲ್ ತೆಲಗಿಯ (Karimlal Telgi) ಹಲವು ರೂಪಗಳನ್ನು ಈ ಸರಣಿಯಲ್ಲಿ ತೋರಿಸಲಾಗುತ್ತಿದೆ.

    ಭಾರತೀಯ ಅತೀ ದೊಡ್ಡ ಹರಗಣದಲ್ಲಿ ಛಾಪಾ ಕಾಗದ ಹರಣವೂ ಒಂದು. ಸರಿಸುಮಾರು 32 ಸಾವಿರ ಕೋಟಿ ಮೊತ್ತದ ಹಗರಣ ಇದಾಗಿದ್ದು, ಈ ಹರಣದಲ್ಲಿ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು. ಈ ಹಗರಣವನ್ನೇ ವೆಬ್ ಸರಣಿ ರೂಪದಲ್ಲಿ ತರಲಾಗುತ್ತಿದೆ. ಈ ಸರಣಿಗೆ ‘ಸ್ಕ್ಯಾಮ್ 2003’ (Scam 2003)ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಈ ತೆಲಗಿ ಕರ್ನಾಟಕದವನು ಆಗಿದ್ದರಿಂದ ಮತ್ತು ಆತನನ್ನು ಬಂಧಿಸಿದ್ದು, ವಿಚಾರಣೆ ಮಾಡಿದ್ದು, ಜೈಲಿನಲ್ಲಿ ಇರಿಸಿದ್ದು ಕರ್ನಾಟಕದಲ್ಲೇ ಆಗಿರುವುದರಿಂದ ಕನ್ನಡಿಗರಿಗೆ ಈ ಸರಣಿ (Web Series) ತುಂಬಾ ಕುತೂಹಲ ಮೂಡಿಸಿದೆ. ಈ ಹಗರಣದೊಂದಿಗೆ ಬೆಸೆದುಕೊಂಡಿದ್ದ ಅಧಿಕಾರಿಗಳು, ಪತ್ರಕರ್ತರು, ರಾಜಕಾರಣಿಗಳ ಕಥೆಯೂ ಇರಲಿದೆಯಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.

    ಈ ಸರಣಿಯು ಸೆಪ್ಟೆಂಬರ್ 2 ರಿಂದ ಸ್ಟ್ರೀಮಿಂಗ್ ಆಗಲಿದ್ದು, ತೆಲಗಿ ಪಾತ್ರದಲ್ಲಿ ಮುಖೇಶ್ ತಿವಾರಿ (Mukesh Tiwari) ನಟಿಸಿದ್ದಾರೆ. ಉಳಿದ ಪಾತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ, ಹಿನ್ನೆಲೆಯಲ್ಲಿ ಸಂಭಾಷಣೆ ಬಳಸಿಕೊಂಡು, ಟ್ರೈಲರ್ ಕುತೂಹಲ ಮೂಡಿಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಮುಂಬೈ: ನಕಲಿ ಛಾಪಾಕಾಗದ ಹಗರಣದ ಮಾಸ್ಟರ್ ಮೈಂಡ್ ಅಬ್ದುಲ್ ಕರೀಂಲಾಲ್ ತೆಲಗಿ ಪತ್ನಿ ಶಹಿದಾ ತಮ್ಮ ಬಳಿಯಿರುವ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಲು ಮುಂದಾಗಿದ್ದಾರೆ.

    ಪುಣೆ ಸೆಷನ್ ಕೋರ್ಟ್ ನಲ್ಲಿ ಕೇಸ್ ಫೈಲ್ ಮಾಡುವ ಮುಂಚೆಯೇ ಸ್ವಪ್ರೇರಿತವಾಗಿ 100 ಕೋಟಿಯ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಶಹಿದಾ ಅವರು ದಾನ ನೀಡಲಿರುವ ಆಸ್ತಿಗಳಲ್ಲಿ 9 ಪ್ರಾಪರ್ಟಿಗಳು ಕರ್ನಾಟಕದಲ್ಲಿವೆ.

    ಕೋಟ್ಯಾಂತರ ರೂಪಾಯಿ ಮೌಲ್ಯದ ಛಾಪಾಕಾಗದ ಹಗರಣದಲ್ಲಿ ಸಿಬಿಐ, ತೆಲಗಿಯ ಕೋಟ್ಯಾಂತರ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತ್ತು. ಆದರೆ ಕರ್ನಾಟಕದಲ್ಲಿರುವ 9 ಪ್ರಾಪರ್ಟಿಗಳು ಶಹಿದಾ ಒಡೆತನದಲ್ಲಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿಲ್ಲ. ಕೃಷಿ ಭೂಮಿ, ವಾಣಿಜ್ಯ ಮಳಿಗೆಗಳು, ಫ್ಲ್ಯಾಟ್ ಗಳು ಸೇರಿದಂತೆ ಒಟ್ಟು 9 ಆಸ್ತಿಗಳು ಕರ್ನಾಟಕದಲ್ಲಿವೆ.

    ದಾನ ಮಾಡುತ್ತಿರುವುದು ಏಕೆ?: ನನಗೆ ಇರುವುದು ಒಬ್ಬಳೇ ಮಗಳು. ಆದರೆ ಆಕೆಗೆ ಮದುವೆಯಾಗಿದ್ದು, ಹಗರಣದಿಂದ ಗಳಿಸಿರುವ ಆಸ್ತಿ ನಮಗೆ ಬೇಡ ಎಂದು ಮಗಳ ಮನೆಯವರು ಹೇಳಿದ್ದಾರೆ. ಹಾಗಾಗಿ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಲು ಇಚ್ಚಿಸಿದ್ದೇನೆ ಎಂದು ಶಾಹಿದಾ ತಿಳಿಸಿದ್ದಾರೆ.

    ಸಿಬಿಐ ಕೆಲವು ದಿನಗಳಲ್ಲಿ ಶಹಿದಾರ ಒಡೆತನದಲ್ಲಿರುವ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಿತ್ತು. ಆದರೆ ಅದಕ್ಕೂ ಮುಂಚೆಯೇ ಶಾಹಿದಾ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ ಆಕ್ಟೋಬರ್ 26ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. 2006ರ ಜನವರಿ 17ರಂದು ನಕಲಿ ಛಾಪಾ ಕಾಗದ ಹಗರಣದಲ್ಲಿ ತೆಲಗಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಲಭಿಸಿತ್ತು. ಅಲ್ಲದೇ ಇನ್ನೊಂದು ಪ್ರಕರಣದಲ್ಲಿ ತೆಲಗಿಗೆ 2007ರ ಜೂನ್ 28ರಂದು 13 ವರ್ಷ ಶಿಕ್ಷೆಯಾಗಿತ್ತು.