Tag: ಕರಿಷ್ಮಾ ಕಪೂರ್

  • ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

    ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

    ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Karisma Kapoor) ಮಾಜಿ ಪತಿ ಸಂಜಯ್ ಕಪೂರ್ (Sunjay Kapur) ಅಂತ್ಯಕ್ರಿಯೆ ದೆಹಲಿಯಲ್ಲಿ ಇಂದು ನೆರವೇರಿತು. ದಂಪತಿ ವಿಚ್ಛೇದನ (Divorce) ಪಡೆದು ಅನೇಕ ವರ್ಷಗಳೇ ಉರುಳಿದ್ದರೂ ಮಕ್ಕಳಿಗಾಗಿ ಮಾಜಿ ದಂಪತಿ ಆಗಾಗ ಒಟ್ಟಾಗುತ್ತಿದ್ದರು. ಇದೀಗ ದೆಹಲಿಯಲ್ಲಿ (Delhi) ನಡೆದ ಸಂಜಯ್ ಕಪೂರ್ ಅಂತಿಮ ಸಂಸ್ಕಾರ ಪ್ರಕ್ರಿಯೆಯನ್ನು ಸಂಜಯ್ ಕರಿಷ್ಮಾ ದಂಪತಿಯ ಮಕ್ಕಳು ನಡೆಸಿದ್ದಾರೆ. ಕರಿಷ್ಮಾ ಕೂಡ ಸಹಜವಾಗಿಯೇ ಬಹಳ ಬೇಸರದಿಂದ ಮಾಜಿ ಪತಿಯ ಅಂತ್ಯಕ್ರಿಯೆ ನಡೆಸಿದ್ದಾರೆ.

    53 ವರ್ಷದ ಸಂಜಯ್ ಕಪೂರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೇ ಜೂನ್ 12ರಂದು ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ (England) ಪೊಲೋ ಮ್ಯಾಚ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಅಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದೀಗ ಅವರ ಪಾರ್ಥೀವ ಶರೀರವನ್ನು ದೆಹಲಿಗೆ ತರಲಾಗಿತ್ತು. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

    2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾಗಿದ್ದ ಕರಿಷ್ಮಾ ಬಳಿಕ 2016ರಲ್ಲಿ ದೂರಾಗಿದ್ದರು. ಈ ದಂಪತಿ ಸಮೈರಾ ಹೆಸರಿನ ಪುತ್ರಿ ಹಾಗೂ ಕಿಯಾನ್ ಹೆಸರಿನ ಪುತ್ರನನ್ನ ಹೊಂದಿದ್ದಾರೆ. ಕರಿಷ್ಮಾ ಕಪೂರ್‌ರಿಂದ ವಿಚ್ಚೇದನ ಪಡೆದ ಬಳಿಕ ಸಂಜಯ್ ಕಪೂರ್ ಮಾಡೆಲ್ ಪ್ರಿಯಾ ಸಚ್‌ದೇವ್ ಜೊತೆ ವಿವಾಹವಾಗಿರುತ್ತಾರೆ.

    ಕಪೂರ್ ಕುಟುಂಬಸ್ಥರು ಅಗಲಿದ ಸಂಜಯ್ ಕಪೂರ್‌ರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಕರಿಷ್ಮಾ ಸಹೋದರಿ ಕರೀನಾ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

    13 ವರ್ಷಗಳ ಕಾಲ ದಾಂಪತ್ಯ ನಡೆಸಿ ಸಂಜಯ್‌ರಿಂದ ಕರಿಷ್ಮಾ ದೂರಾಗಿದ್ದರು. ಹೀಗಾಗಿ ಅತ್ಯಂತ ಭಾವುಕತೆಯಿಂದ ಮಾಜಿ ಪತಿಯನ್ನ ಬೀಳ್ಕೊಟ್ಟಿದ್ದಾರೆ. ತಂದೆಯ ಅಂತ್ಯಕ್ರಿಯೆನ್ನು ಪುತ್ರ ಕಿಯಾನ್ ನೆರವೇರಿಸಿದ್ದಾರೆ. ಸಂಜಯ್ ಕಪೂರ್ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

  • ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ

    ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ

    – ವಿಮಾನ ದುರಂತದ ಬಗ್ಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವು

    ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ (Karisma Kapoor) ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ (Sunjay Kapur) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಸಂಜಯ್‌ ಕಪೂರ್‌ ಯುಕೆಯಲ್ಲಿದ್ದರು. ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಕೈಗಾರಿಕೋದ್ಯಮಿ ಪೋಲೊ ಆಡುತ್ತಿದ್ದಾಗ ತೀವ್ರ ಹೃದಯಾಘಾತವಾಯಿತು. ಸಾವಿಗೂ ಮುನ್ನ ಸಂಜಯ್ ಅವರು ಅಹಮದಾಬಾದ್-ಲಂಡನ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪೋಸ್ಟ್‌ ಹಾಕಿದ್ದರು.‌ ಇದನ್ನೂ ಓದಿ: Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

    ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ದುರಂತದ ಭಯಾನಕ ಸುದ್ದಿ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತ ಎಲ್ಲಾ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ನೋವು ಭರಿಸುವ ಶಕ್ತಿ ಪಡೆಯಲಿ ಎಂಬುದು ಅವರ ಕೊನೆಯ ಟ್ವೀಟ್‌ ಆಗಿತ್ತು.

    ಸಂಜಯ್ ಬಾಲಿವುಡ್ ನಟಿ ಕರಿಷ್ಮಾ ಅವರನ್ನು 2003 ರಲ್ಲಿ ವಿವಾಹವಾದರು. 2016 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ. ಇಬ್ಬರೂ ಮಕ್ಕಳು ಕರಿಷ್ಮಾ ಅವರ ಜೊತೆಗಿದ್ದಾರೆ. ಸಂಜಯ್ ನ್ಯೂಯಾರ್ಕ್‌ನಲ್ಲಿ ಭೇಟಿಯಾದ ಪ್ರಿಯಾ ಸಚ್‌ದೇವ್ ಅವರನ್ನು ಪ್ರೀತಿಸುತ್ತಿದ್ದರು. ಐದು ವರ್ಷಗಳ ಡೇಟಿಂಗ್ ನಂತರ, ಅವರು ದೆಹಲಿಯಲ್ಲಿ ವಿವಾಹವಾದರು. ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ.

    ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾ, ಸಂಜಯ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ‘ಸಂಜಯ್ ಒಬ್ಬ ಅದ್ಭುತ ಮನುಷ್ಯ. ತನ್ನ ಮಕ್ಕಳಿಗೆ ತುಂಬಾ ಒಳ್ಳೆಯ ತಂದೆ. ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ನಾವು ಮಾಜಿ ಸಂಗಾತಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಯಾವುದೇ ನಕಾರಾತ್ಮಕ ಭಾವನೆ ಮೂಡಿಸಲು ಎಂದಿಗೂ ಪ್ರಯತ್ನಿಸಿಲ್ಲ’ ಎಂದು ತಿಳಿಸಿದ್ದರು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

  • ಸೆಲೆಬ್ರಿಟಿಗಳ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ

    ಸೆಲೆಬ್ರಿಟಿಗಳ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ

    ವಿಶ್ವಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ, ಸಡಗರ ಜೋರಾಗಿದೆ. ಹಾಗೆಯೇ ಸೆಲೆಬ್ರೆಟಿಗಳ ಮನೆಯಲ್ಲೂ ಕ್ರಿಸ್‌ಮಸ್ ಹಬ್ಬ (Christmas Festival) ಕಳೆಗಟ್ಟಿದೆ. ರಾಧಿಕಾ ಪಂಡಿತ್, ರಶ್ಮಿಕಾ, ಐಶ್ವರ್ಯ ರೈ ಸೇರಿದಂತೆ ಹಲವರು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ಪ್ರತಿ ವರ್ಷದಂತೆ ಈ ವರ್ಷವು ಕೂಡ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದಾರೆ. ಇತ್ತೀಚೆಗೆ ಐರಾ ಮತ್ತು ಯಥರ್ವ್ ಕ್ರಿಸ್‌ಮಸ್‌ಗೆ ಕುಕ್ಕೀಸ್ ಮಾಡ್ತಿರುವ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು.

    ಐಶ್ವರ್ಯ ರೈ (Aishwarya Rai) ಕೂಡ ಮುದ್ದು ಮಗಳು ಆರಾಧ್ಯ ಜೊತೆಗಿನ ಕ್ರಿಸ್‌ಮಸ್ ಸಂಭ್ರಮದ ಫೋಟೋವನ್ನ ಹಂಚಿಕೊಂಡಿದ್ದರು. ಈ ಮೂಲಕ ಎಲ್ಲರಿಗೂ ನಟಿ ಶುಭ ಹಾರೈಸಿದ್ದರು. ಇದನ್ನೂ ಓದಿ: ಬಾಯ್‌ಫ್ರೆಂಡ್ ಜಾಕಿ ಭಗ್ನಾನಿ ಬರ್ತ್‌ಡೇಗೆ ನಟಿ ರಾಕುಲ್ ಲವ್ಲಿ ವಿಶ್

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ರಶ್ಮಿಕಾ(Rashmika Mandanna), ಸಿನಿಮಾಗಳಿಗೆ ಬ್ರೇಕ್ ಕೊಟ್ಟು ಕ್ರಿಸ್‌ಮಸ್ ಫೆಸ್ಟಿವಲ್ ಆಚರಣೆ ಮಾಡಿದ್ದಾರೆ. ಕ್ರಿಸ್‌ಮಸ್ ಟ್ರಿ ಪಕ್ಕ ನಿಂತಿರುವ ಚೆಂದದ ಫೋಟೋವನ್ನ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Preity G Zinta (@realpz)

    ಬಾಲಿವುಡ್ ನಟಿ ಪ್ರೀತಿ ಜಿಂಟಾ (Preethi Zinta) ಮನೆಯಲ್ಲಿ ಕ್ರಿಸ್‌ಮಸ್ ಹಬ್ಬ ಆಚರಿಸಲಾಗಿದೆ. ಈ ಕುರಿತ ವಿಡಿಯೋವನ್ನ ನಟಿ ಶೇರ್ ಮಾಡಿದ್ದಾರೆ. ಹಬ್ಬದ ಪ್ರಯುಕ್ತ ಎಲ್ಲರಿಗೂ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

    ನಟಿ ಕರಿಷ್ಮಾ ಕಪೂರ್ (Karishma Kapoor) ಅವರು ಸಾಂತಾ ಕ್ಲಾಸ್ ರೀತಿ ಡ್ರೆಸ್ ಮಾಡಿಕೊಂಡಿದ್ದಾರೆ. ಕ್ರಿಸ್‌ಮಸ್ ಟ್ರೀ ಎದುರು ಕುಳಿತು, ತಮ್ಮ ಮುದ್ದು ಶ್ವಾನದ ಜೊತೆ ಅವರು ಪೋಸ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ

    ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ

    ಮುಂಬೈ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಫಿಟ್ನೆಸ್ ಬಗ್ಗೆ ಬಾಲಿವುಡ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ಹೊಗಳಿದ್ದಾರೆ.

    ಕರಿಷ್ಮಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದರು. ಈ ಫೋಟೋ ನೋಡಿದ ಫಿಟ್ನೆಸ್ ಪ್ರೀಯೆ ಮಲೈಕಾ, ನಿಮ್ಮ ಅಬ್ಸ್ ಸೂಪರ್ ಎಂದು ಫೈಯರ್ ಎಮೋಜಿ ಕಳುಹಿಸಿದ್ದಾರೆ. ಮಲೈಕಾ ಅವರ ಸಹೋದರಿ ಅಮೃತಾ ಅರೋರಾ ಕೂಡ ನಾನು ನಿಮ್ಮ ಅಬ್ಸ್ ನೋಡುತ್ತೀದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಅಮೀರ್ ಪುತ್ರಿ ಇರಾ – ಸೋನಾ ಮೋಹಪತ್ರಾ ಸಾಥ್

    ಫೋಟೋದಲ್ಲಿ ಕರಿಷ್ಮಾ ಕಪ್ಪು ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ಅವರ ಅಬ್ಸ್ ಫಿಟ್ ಆಗಿದೆ. ಅದಕ್ಕೆ ಮಲೈಕಾ ನಿಮ್ಮ ಫಿಟ್ನೆಸ್ ಚೆನ್ನಾಗಿದೆ ಎಂದು ಇನ್‍ಸ್ಟಾಗಾಮ್ ನಲ್ಲಿ ಪ್ರಶಂಸಿದ್ದಾರೆ. ಈ ಫೋಟೋಗೆ ಕರಿಷ್ಮಾ, ನೀವು ಏನನ್ನು ಸಾಧಿಸುತ್ತೀರೋ ಅದರ ಮೂಲಕ ಬೆಳೆಯಿರಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಕರಿಷ್ಮಾ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ತಮ್ಮ ಪ್ರತಿನಿತ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತಮ್ಮ ವರ್ಕೌಟ್, ವಿಶೇಷದಿನಗಳು ಮತ್ತು ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಇದನ್ನೂ ಓದಿ: ವಿದೇಶದಿಂದ ಮರಳಿದ ಅಲ್ಲು ಅರ್ಜುನ್‍ಗೆ ಮಗಳ ಮುದ್ದು ಸ್ವಾಗತ

    ಕರಿಷ್ಮಾ ಕಪೂರ್ ಬಾಲಿವುಡ್‍ನಲ್ಲಿ ನಮ್ಮದೆ ಛಾಪು ಮೂಡಿಸಿದ್ದು, 1991 ರಲ್ಲಿ ‘ಪ್ರೇಮ್ ಖೈದಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕರಿಷ್ಮಾ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಾಲ್ಕು ಫಿಲ್ಮ್‍ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರಿಷ್ಮಾ ಕೊನೆಯದಾಗಿ 2020ರ ವೆಬ್ ಸರಣಿ ಮೆಂಟಲ್‍ಹುಡ್‍ನಲ್ಲಿ ಕಾಣಿಸಿಕೊಂಡಿದ್ದರು.

  • ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ನನಗೂ ಅಮೀರ್‌ಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು: ಕರಿಷ್ಮಾ ಕಪೂರ್

    ಮುಂಬೈ: ನನಗೂ ಅಮೀರ್ ಖಾನ್ ಅವರಿಗೂ ಆ ದೃಶ್ಯ ಮಾಡುವಾಗ ಸಾಕಾಗಿ ಹೋಗಿತ್ತು ಎಂದು ಬಾಲಿವುಡ್‍ನ 90ರ ದಶಕದ ಬೆಡಗಿ ಕರಿಷ್ಮಾ ಕಪೂರ್ ಅವರು ಹೇಳಿದ್ದಾರೆ.

    1996ರಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ ರಾಜಾ ಹಿಂದೂಸ್ತಾನಿ ಎಂಬ ಚಿತ್ರ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರಿಷ್ಮಾ ಮತ್ತು ಅಮಿರ್ ಖಾನ್ ಅವರ ಕೆಮಿಷ್ಟ್ರಿ ವರ್ಕ್ ಆಗಿತ್ತು. ಅದರಲ್ಲೂ ಚಿತ್ರದಲ್ಲಿ ಈ ಇಬ್ಬರ ಲಿಪ್‍ಲಾಕ್ ದೃಶ್ಯ ಸಖತ್ ಸದ್ದು ಮಾಡಿತ್ತು. ಈಗ ಇದೇ ದೃಶ್ಯದಲ್ಲಿ ನಮಗಿಬ್ಬರಿಗೂ ಅಭಿನಯಿಸುವುದರಲ್ಲಿ ಸಾಕಾಗಿ ಹೋಗಿತ್ತು ಎಂದು ಕಪೂರ್ ಹೇಳಿದ್ದಾರೆ.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಕರಿಷ್ಮಾ, ಅಂದು ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಮೂಡಿಬಂದಿದ್ದ ಆ ಚುಂಬನದ ದೃಶ್ಯ ಸಖತ್ ಮೋಡಿ ಮಾಡಿತ್ತು. ಈಗ ಎಲ್ಲ ಸಿನಿಮಾಗಳಲ್ಲೂ ಲಿಪ್‍ಲಾಕ್ ಮಾಡುತ್ತಾರೆ. ಆದರೆ ಅಂದು ಕಿಸ್ಸಿಂಗ್ ಸೀನ್‍ಗಳು ಹೆಚ್ಚು ಬರುತ್ತಿರಲಿಲ್ಲ. ಆದರೆ ಆ ಚಿತ್ರದಲ್ಲಿ ನಾವು ಕಿಸ್ಸಿಂಗ್ ಸೀನ್ ಅಲ್ಲಿ ಅಭಿನಯಿಸಬೇಕಿತ್ತು. ಜನರು ಚಿತ್ರದಲ್ಲಿ ನೋಡಿದಷ್ಟು ಸುಲಭವಾಗಿ ಆ ದೃಶ್ಯವನ್ನು ನಾವು ಚಿತ್ರೀಕರಣ ಮಾಡಿರಲಿಲ್ಲ. ಆ ದೃಶ್ಯದಲ್ಲಿ ನಟಿಸಲು ನನಗೂ ಮತ್ತು ಅಮೀರ್ ಗೂ ಸಖತ್ ಕಷ್ಟವಾಗಿತ್ತು ಎಂದು ಹೇಳಿದ್ದಾರೆ.

    ಈ ದೃಶ್ಯದ ಚಿತ್ರೀಕರಣವನ್ನು ನಾವು ಫೆಬ್ರವರಿ ತಿಂಗಳಲ್ಲಿ ಊಟಿಯಲ್ಲಿ ಮಾಡಿದ್ದೇವು. ಜೊತೆಗೆ ಈ ಒಂದು ದೃಶ್ಯವನ್ನು ಮೂರು ದಿನ ಶೂಟ್ ಮಾಡಿದ್ದೇವು. ನಾನು ಮತ್ತು ಅಮೀರ್ ಖಾನ್ ಈ ದೃಶ್ಯದ ಚಿತ್ರೀಕರಣ ಯಾವಾಗ ಮುಗಿಯುತ್ತೋ ಎಂದು ಸೆಟ್‍ನಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಂದು ಊಟಿಯಲ್ಲಿ ಸಖತ್ ಚಳಿ ಅದರಲ್ಲೂ ನಮ್ಮಿಬ್ಬರ ಮೇಲೆ ತಣ್ಣೀರನ್ನು ಸುರಿಯಲಾಗಿತ್ತು. ಜೊತೆಗೆ ಗಾಳಿ ಬರಲೆಂದು ದೊಡ್ಡ ಫ್ಯಾನ್ ಕೂಡ ಹಾಕಿದ್ದರು. ಆ ಚಳಿಯಲ್ಲಿ ಸಿನಿಮಾ ಶೂಟ್ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು ಎಂದು ಕರಿಷ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    1996 ನವೆಂಬರ್ 15 ರಂದು ಬಿಡುಗಡೆಯಾಗಿದ್ದ ರಾಜಾ ಹಿಂದೂಸ್ತಾನಿ ಚಿತ್ರ ಬಾಲಿವುಡ್ ಚಿತ್ರರಂಗದಲ್ಲೇ ಸಖತ್ ಹಿಟ್ ಆಗಿತ್ತು. ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಅಮಿರ್ ಖಾನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅವರ ರೊಮ್ಯಾನ್ಸ್ ನೋಡಿದ್ದ ಪ್ರೇಕ್ಷಕ ಚಿತ್ರವನ್ನು ಒಪ್ಪಿ ಅಪ್ಪಿಕೊಂಡಿದ್ದ. ಈ ಚಿತ್ರ 2002ರಲ್ಲಿ ಕನ್ನಡಕ್ಕೆ ‘ನಾನು ನಾನೇ’ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ್ದರು.