Tag: ಕರಾವಳಿ ಸಿನಿಮಾ

  • ಬೆಂಗಳೂರಿನಲ್ಲಿ ಮಂಗಳೂರು ʻಕರಾವಳಿʼ – ರಾಜ್‌ ಬಿ ಶೆಟ್ಟಿ ಹೊಗಳಿದ ಪ್ರಜ್ವಲ್ ದೇವರಾಜ್‌

    ಬೆಂಗಳೂರಿನಲ್ಲಿ ಮಂಗಳೂರು ʻಕರಾವಳಿʼ – ರಾಜ್‌ ಬಿ ಶೆಟ್ಟಿ ಹೊಗಳಿದ ಪ್ರಜ್ವಲ್ ದೇವರಾಜ್‌

    ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ವಿಭಿನ್ನ ಕಥಾಹಂದರವಿರುವ ಸಿನಿಮಾ `ಕರಾವಳಿ’ (Karavali Cinema). ಈ ಚಿತ್ರದ ವಿಶೇಷ ದೃಶ್ಯದ ಶೂಟಿಂಗ್‌ ಅನ್ನು ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಸಂಪದಾ, ನಟ ಮಿತ್ರ, ಶ್ರೀಧರ್, ನಿರ್ದೇಶಕ ರವಿ ಗಾಣಿಗ ಸೇರಿ ಇಡೀ ಚಿತ್ರತಂಡ ಹಾಜರಿತ್ತು. ಕರಾವಳಿ ಸಿನಿಮಾದ ವಿಶೇಷ ದೃಶ್ಯದ ಶೂಟಿಂಗ್ ವೇಳೆ ʻಪಬ್ಲಿಕ್ ಟಿವಿʼ (Public TV) ಜೊತೆ ನಟ ಪ್ರಜ್ವಲ್ ದೇವರಾಜ್ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ʻಕರಾವಳಿʼ ಸಿನಿಮಾದ ಶೂಟಿಂಗ್‌ ಅನ್ನು ಕರಾವಳಿ ಭಾಗದಲ್ಲೇ 99 ಭಾಗದ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸೀನ್ ಮಾತ್ರ ಬೆಂಗಳೂರಿನಲ್ಲಿ (Bengaluru) ಮಾಡ್ತಿದ್ದೀವಿ. ಕರಾವಳಿ ಸಿನಿಮಾ ನನ್ನ ಕರಿಯರ್‌ನಲ್ಲೇ ಫಿಸಿಕಲಿ ಮೆಂಟಲಿ ಸ್ಟ್ರೇನಿಂಗ್‌ ಕ್ಯಾರೆಕ್ಟರ್. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಇಂಜುರಿ.. ಬ್ರೇಕ್ಸ್.. ಕಟ್ಸ್ ಆಯ್ತು ಸರಿ ಮಾಡ್ಕೊಂಡು ಚಿತ್ರೀಕರಣ ಮಾಡಿದ್ದೇವೆ. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ ಸಿನಿಮಾ ಕರಾವಳಿಯಾಗಿದೆ. ಅಮ್ಮ ನನ್ನ ಯಾವುದೇ ಶೂಟಿಂಗ್ ಇದ್ದಾಗಲೂ ಸೆಟ್‌ಗೆ ಬರುತ್ತಿದ್ದರು. ಆದರೆ ಈಗ ಅಮ್ಮನಿಗೆ ಹುಷಾರಿಲ್ಲ ಹಾಗಾಗಿ ಅಮ್ಮನಿಗಾಗಿ ಕೆಲ ದೃಶ್ಯಗಳನ್ನ ತಗೊಂಡು ಹೋಗಿ ತೋರಿಸಿದೆ. ಈ ಸಿನಿಮಾದ ಕೆಲವು ದೃಶ್ಯ ನೋಡಿ ಶಾಕ್ ಆದ್ರು. ಅಮ್ಮ ಪ್ರಸಂಶೆ ಕೊಟ್ಟಿದ್ದಾರೆ. ಅಷ್ಟೇ ಸಾಕು ಎನ್ನಿಸಿತು ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್.

    ಇಂತಹ ವಿಭಿನ್ನ ಸಿನಿಮಾ ಮಾಡಬೇಕಾದಾಗ ಟೈಂ ತೆಗೆದುಕೊಳ್ಳುತ್ತೆ. ಈ ಸಿನಿಮಾದಲ್ಲಿ ಡಿಫರೆಂಟ್ ಶೇಡ್ಸ್ ಇವೆ. ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನ ಮೊದಲೇ ಮಾಡಿಕೊಂಡಿದ್ದೆ. ರಾಜ್ ಬಿ ಶೆಟ್ಟಿಯವರ (Raj B Shetty) ಜೊತೆ ಅಭಿನಯ ಮಾಡಿದ್ದು ಖುಷಿಕೊಟ್ಟಿದೆ. ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ನೋಡಿದ್ರೆ ತುಂಬಾ ಖುಷಿ ಅನ್ನಿಸುತ್ತೆ. ಈ ಸಿನಿಮಾವನ್ನ ಕನ್ನಡದ ಜನರಿಗಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಾಗಿಯೇ ಬೇರೆ ಭಾಷೆಗೆ ಡಿಮ್ಯಾಂಡ್ ಬಂದಾಗ ಮಾಡುವ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಉದ್ದೇಶ ನಮ್ಮ ಪ್ರಾದೇಶಿಕ ಜನರಿಗೆ ಈ ಸಿನಿಮಾವನ್ನ ತಲುಪಿಸಬೇಕು ಎಂದಿದ್ದಾರೆ ಡೈನಾಮಿಕ್ ಪ್ರಿನ್ಸ್.

    ಪ್ರಜ್ವಲ್ ಸಿನಿಮಾ ಜರ್ನಿಯಲ್ಲೇ ಈ ಸಿನಿಮಾ ತುಂಬಾ ಸ್ಪೆಷಲ್ ಅಂತಾ ಹೇಳಲಾಗ್ತಿದೆ. ಇನ್ನು ಇಡೀ ಚಿತ್ರತಂಡ ಮಾತನಾಡಿ, ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡಿದೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿರುವ ಕರಾವಳಿ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  • ಮೈ ಜುಮ್ ಎನ್ನುವಂತಿದೆ ‘ಕರಾವಳಿ’ ಟೀಸರ್: ‘ಪ್ರತಿಷ್ಠಿಯ ಪಿಶಾಚಿ’ಗೆ ಫ್ಯಾನ್ಸ್ ಫಿದಾ

    ಮೈ ಜುಮ್ ಎನ್ನುವಂತಿದೆ ‘ಕರಾವಳಿ’ ಟೀಸರ್: ‘ಪ್ರತಿಷ್ಠಿಯ ಪಿಶಾಚಿ’ಗೆ ಫ್ಯಾನ್ಸ್ ಫಿದಾ

    ‘ಕರಾವಳಿ’ (Karavali) ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. 2025ರ ಬಹುನಿರೀಕ್ಷೆಯ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕರಾವಳಿ ಸಿನಿಮಾ ಕೂಡ ಜಾಗ ಗಿಟ್ಟಿಸಿಕೊಂಡಿರುವುದು ವಿಶೇಷ. ಇದೀಗ ಪ್ರಜ್ವಲ್ ದೇವರಾಜ್ ನಟನೆಯ ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ಯ (Karavali) ವಿಭಿನ್ನವಾದ ಟೀಸರ್ ರಿಲೀಸ್‌ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

    ಸಾಮಾನ್ಯವಾಗಿ ಟೀಸರ್ ನಾಯಕ, ನಾಯಕಿ ಅಥವ ಸಿನಿಮಾದ ಒಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಕರಾವಳಿಯಿಂದ ಬಂದಿರುವ ಹೊಸ ಟೀಸರ್ ಒಂದು ಪ್ರತಿಷ್ಠಿಯ ವಸ್ತುವಿನ ಮೇಲೆ ಇರುವುದು ವಿಶೇಷ. ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪ್ರತಿಷ್ಠಿಯ ಕುರ್ಚಿ ಹೈಲೆಟ್. ಅದು ಬರಿ ಕುರ್ಚಿಯಲ್ಲ ಪ್ರತಿಷ್ಠೆಯ ಪಿಶಾಚಿ ಎನ್ನುವ ಸಂಭಾಷಣೆಯಿಂದ ಟೀಸರ್ ಪ್ರಾರಂಭವಾಗುತ್ತೆ. ಪ್ರತಿಷ್ಠೆಯ ಕುರ್ಚಿ ಮೇಲೆ ಕೂರುವುದಿರಲಿ ಕಣ್ಣಿಟ್ಟವರನ್ನು ಬಿಡಲ್ಲ ಎಂದು ನಟ ಮಿತ್ರ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೀಸರ್ ಮೈ ಜುಮ್ ಎನ್ನುವಂತಿದೆ. ಇದನ್ನೂ ಓದಿ:3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಅಂದಹಾಗೆ, ಕರಾವಳಿ ಕಂಬಳ ಪ್ರಪಂಚದ ಬಗ್ಗೆ ಇರುವ ಸಿನಿಮಾ. ಈ ಮೊದಲು ರಿಲೀಸ್ ಆಗಿರುವ ಟೀಸರ್‌ನಲ್ಲಿ ಒಂದು ಮಗು ಜನಿಸುತ್ತದೆ ಅದೇ ಸಮಯಕ್ಕೆ ಕೊಟ್ಟಿಗೆಯಲ್ಲಿ ಒಂದು ಕರುವಿನ ಜನನವು ಆಗುತ್ತೆ. ಸದ್ಯ ರಿಲೀಸ್ ಆಗಿರುವ ಟೀಸರ್ ಮುಂದುವರೆದ ಭಾಗ ಎಂಬಂತೆ ಆ ಮಗು ಹುಟ್ಟಿದಾಗಿನಿಂದ ಪ್ರತಿಷ್ಠಿಯ ಕುರ್ಚಿಯನ್ನು ನೋಡುತ್ತಾ ಬೆಳೆದವನು, ಆ ಕುರ್ಚಿಯ ಮೇಲೆ ಎಲ್ಲರ ಕಣ್ಣು ಬಿದ್ದಿರುವುದು ಈ ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ನಟ ಮಿತ್ರ ಘರ್ಜನೆ, ರಮೇಶ್ ಇಂದಿರ ಅವರ ಕ್ರೌರ್ಯತ್ವ ಕೂಡ ಟೀಸರ್‌ನಲ್ಲಿ ಕಾಣಬಹುದು. ಕೆಕೆ ಮಠ ಹಾಗೂ ಟೀಸರ್‌ನ ಕೊನೆಯಲ್ಲಿ ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಪ್ರಜ್ವಲ್ ದೇವರಾಜ್ (Prajawal Devaraj) ಕೂಡ ತುಂಬಾ ಇಂಟ್ರಸ್ಟಿಂಗ್ ಎನಿಸುತ್ತಿದ್ದಾರೆ.

    ಈ ಸಿನಿಮಾದಿಂದ ಈಗಾಗಲೇ ಪ್ರಜ್ವಲ್ ದೇವರಾಜ್ ಅವರ ಮೂರು ರೀತಿಯ ಲುಕ್ ರಿವೀಲ್ ಆಗಿದೆ. ಯಕ್ಷಗಾನ, ಕಂಬಳ, ಮಹಿಷಾಸುರ ಹೀಗೆ 3 ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಪ್ರಜ್ವಲ್ ಇಲ್ಲಿ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಇವರ ಪಾತ್ರ ಯಾವುದು ಎನ್ನುವ ಕುತೂಹಲ ಕೂಡ ಮೂಡಿಸಿದೆ.

    ‘ಕರಾವಳಿ’ ಈಗಾಗಲೇ 80ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ‘ಕರಾವಳಿ’ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಅಭಿಮನ್ಯು ಸದಾನಂದನ್ ಕ್ಯಾಮೆರಾ ವರ್ಕ್ ಇದೆ.

  • ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ‘ಜುಗಾರಿ ಕ್ರಾಸ್’ ಈ ಪ್ರಸಿದ್ಧ ಕಾದಂಬರಿಯನ್ನು ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ ‘ಜುಗಾರಿ ಕ್ರಾಸ್’ ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ ‘ಜುಗಾರಿ ಕ್ರಾಸ್’. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ.

    ಓದುಗರ ನೆಚ್ಚಿನ ಶ್ರೇಷ್ಠ ಕಾದಂಬರಿ ‘ಜುಗಾರಿ ಕ್ರಾಸ್’ ಇದೀಗ ಸಿನಿಮಾವಾಗುತ್ತಿದೆ. ಬೆಳ್ಳಿಪರದೆಯ ಮೇಲೆ ತೇಜಸ್ವಿಯವರ ಜುಗಾರಿ ಕ್ರಾಸ್ ರಾರಾಜಿಸಲು ಸಿದ್ಧವಾಗುತ್ತಿದೆ. ಅಂದಹಾಗೆ, ಈ ಕಾದಂಬರಿಯನ್ನು ತೆರೆಯ ಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ ‘ಕರಾವಳಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ. ಇಂದು ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾ ಅನೌನ್ಸ್ ಮಾಡಿ ಬಿಗ್ ಸರ್ಪ್ರೈಸ್ ನೀಡಿದ್ದಾರೆ ನಿರ್ದೇಶಕರು. ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಹೆರಿಗೆ ಆಸ್ಪತ್ರೆಗೆ ಅಡ್ಮಿಟ್ ಆದ ದೀಪಿಕಾ ಪಡುಕೋಣೆ

    ‘ಜುಗಾರಿ ಕ್ರಾಸ್’ (Jugari Cross) ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಸ್ಯಾಂಡಲ್‌ವುಡ್‌ನ ದೊಡ್ಡ ದೊಡ್ಡ ನಿರ್ದೇಶಕರು, ಕಲಾವಿದರು ಪ್ರಯತ್ನ ಪಟ್ಟಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ಜುಗಾರಿ ಕ್ರಾಸ್ ಕಾಂದಬರಿಯನ್ನು ಸಿನಿಮಾ ರೂಪದಲ್ಲಿ ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ. ಜುಗಾರಿ ಕ್ರಾಸ್ ನಲ್ಲಿ ಬರುವ ಪಾತ್ರಗಳಿಗೆ ಯಾರೆಲ್ಲ ಜೀವ ತುಂಬಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಸುಪ್ರಸಿದ್ಧ ಕಾದಂಬರಿಯನ್ನು ತೆರೆ ಮೇಲೆ ತರುವುದೆ ಅತೀ ದೊಡ್ಡ ಜವಾಬ್ದಾರಿ. ಹಾಗಾಗಿ ಈ ಶ್ರೇಷ್ಠ ಕಾದಂಬರಿಯ ಸಿನಿಮಾದಲ್ಲಿ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಾರಾ ಅಥವಾ ಸ್ಟಾರ್ ನಟರು ಬಣ್ಣ ಹಚ್ಚುತ್ತಾರಾ ಕಾದುನೋಡಬೇಕು.

    ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಕ್ಯಾಮೆರಾ ವರ್ಕ್ ಇರಲಿದೆ. ಇನ್ನು ತಾಂತ್ರಿಕ ವರ್ಗ, ಉಳಿದ ಎಲ್ಲಾ ಕಲಾವಿದರ ಬಗ್ಗೆ ಸಂಪೂರ್ಣ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ. ‘ಜುಗಾರಿ ಕ್ರಾಸ್’ ಸಿನಿಮಾಗುತ್ತಿದೆ ಎನ್ನುವ ಸುದ್ದಿ ಕೇಳಿಯೇ ತೇಜಸ್ವಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇನ್ನೂ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಕುತೂಹಲ, ನಿರೀಕ್ಷೆ, ಕಾತರ ಎಲ್ಲರಲ್ಲೂ ಕಾಯುತ್ತಿದ್ದಾರೆ.

  • ಕಾಮಿಡಿ ಸ್ಟಾರ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಖಡಕ್ ವಿಲನ್

    ಕಾಮಿಡಿ ಸ್ಟಾರ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಖಡಕ್ ವಿಲನ್

    ಮಿತ್ರ (Mithra) ಅಂದರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಲಯಾಳಂ ‘ಪಡಕ್ಕಳಂ’ ಚಿತ್ರಕ್ಕೆ ಚಾಲನೆ ನೀಡಿದ ಕೆ.ಆರ್.ಜಿ.ಸ್ಟುಡಿಯೋಸ್

    ಆದರೆ ಈಗ ನಟ ಮಿತ್ರ ಅವರ ಖದರ್ ಬದಲಾಗಿದೆ. ಲುಕ್ ಬೇರೆಯದ್ದೇ ರೀತಿ ಇದೆ. ಯೆಸ್, ಮಿತ್ರ‌ ಅವರು ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ (Karavali Film) ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಅಭಿನಯ ಮಾಡ್ತಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡರು. ಒಂದು ಸಿನಿಮಾಗಾಗಿ ಮಾಡಿಕೊಂಡ ಲುಕ್ ಈಗ ಮಿತ್ರ ಅವರ ಕೆರಿಯರ್‌ನಲ್ಲಿ ಟರ್ನಿಂಗ್ ಪಾಯಿಂಟ್ ಕೊಡ್ತಿದೆ.

    ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್‌ವುಡ್‌ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತಿ ಪಾತ್ರಗಳು ಹುಡುಕಿ ಬರುತ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲೀಶ್ ವಿಲನ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಮಿತ್ರ.

    ಸದ್ಯ ಮಿತ್ರ ಅವರು ಮಾಡಿಸಿರೋ ಫೋಟೋಶೂಟ್ ಫೋಟೋಗಳನ್ನ ನೋಡ್ತಿದ್ರೆ ವಾವ್ಹ್ ಮಿತ್ರ ಅವರು ಹೀಗೂ ಕಾಣ್ತಾರಾ ಅಂತ ಅನ್ನಿಸೋದು ಗ್ಯಾರೆಂಟಿ. ವಿಲನ್ ಲುಕ್ ನಲ್ಲಿ ಸಾಕಷ್ಟು ವಿಭಿನ್ನ ಶೇಡ್ ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಈ ಫೋಟೋಶೂಟ್ ಮಾಡಿರೋದು ‘ಕರಾವಳಿ’ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್.

    ಮಿತ್ರ ಅವರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ. ‘ಕರಾವಳಿ’ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ. ಕಲಾವಿದ ಆದವರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಅನ್ನೋದನ್ನ ಮಿತ್ರ ಅವರು ಫಾಲೋ ಮಾಡಿದಂತಿದೆ. ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್‌ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ.

  • ಪ್ರಜ್ವಲ್ ದೇವರಾಜ್‌ ಹುಟ್ಟುಹಬ್ಬಕ್ಕೆ ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್

    ಪ್ರಜ್ವಲ್ ದೇವರಾಜ್‌ ಹುಟ್ಟುಹಬ್ಬಕ್ಕೆ ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್

    ‘ಕರಾವಳಿ’ (Karavali) ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವ ಮತ್ತು ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತದೆ. ಕರಾವಳಿ ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಮತ್ತೊಂದು ಭರ್ಜರಿ ಪೋಸ್ಟ್ ಅನಾವರಣವಾಗಿದೆ.

    ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ಕರಾವಳಿ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ವೈರಲ್ ಆಗಿದೆ. ಇದೀಗ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಮತ್ತೊಂದು ಲುಕ್ ಗಮನ ಸೆಳೆಯುತ್ತದೆ.

    ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್‌ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್‌ನ ಪೋಸ್ಟರ್‌ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.

    ಬರ್ತಡೇ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ. ಇದನ್ನೂ ಓದಿ:ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

    ‘ಕರಾವಳಿ’ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್‌ಗೆ ನಾಯಕಿಯಾಗಿ ನಟಿ ಸಂಪದಾ (Sampaada) ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್‌ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

  • ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ಪ್ರಜ್ವಲ್ ದೇವರಾಜ್‌ಗೆ ಅಮೂಲ್ಯ ನಾಯಕಿ- ಯಾವ ಸಿನಿಮಾ?

    ‘ಚೆಲುವಿನ ಚಿತ್ತಾರ’ದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಅಮೂಲ್ಯ, ಮದುವೆ ನಂತರ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗೆ ಮತ್ತೆ ಅವರು ಸಿನಿಮಾ ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದರು. ಯಾವ ಸಿನಿಮಾ ಏನು ಎಂಬುದರ ಬಗ್ಗೆ ಇದೀಗ ಅಪ್‌ಡೇಟ್ ಸಿಕ್ಕಿದೆ. ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ಸಿನಿಮಾದಲ್ಲಿ ಗೋಲ್ಡನ್ ಕ್ವೀನ್ ನಟಿಸುತ್ತಿದ್ದಾರೆ.

    ಸಿನಿಮಾ ರಂಗಕ್ಕೆ ಅಮೂಲ್ಯ ಮತ್ತೆ ಮರು ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಅದಕ್ಕೆ ಅಧಿಕೃತ ಮಾಹಿತಿ ಇರಲಿಲ್ಲ. ಕೆಲ ದಿನಗಳ ಹಿಂದೆ ಸ್ವತಃ ಅಮೂಲ್ಯ (Amulya) ಅವರೇ ಸಿನಿಮಾ ರಂಗಕ್ಕೆ ಮತ್ತೆ ಬರುವ ಕುರಿತು ಮಾತನಾಡಿದ್ದರು. ಅಭಿಮಾನಿಗಳಿಗೆ ಈ ಮೂಲಕ ಖುಷಿ ಸುದ್ದಿ ಕೊಟ್ಟಿದ್ದರು.

    ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ (Karavali) ಸಿನಿಮಾದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

    ಪ್ರಜ್ವಲ್ ದೇವರಾಜ್ ನಟನೆಯ ಈ ಸಿನಿಮಾದಲ್ಲಿ ಅಮೂಲ್ಯಗೆ ವಿಭಿನ್ನವಾದ ಪಾತ್ರವಿದೆಯಂತೆ. ಶೀಘ್ರದಲ್ಲೇ ಅಮೂಲ್ಯ ಆಯ್ಕೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ. ಒಟ್ನಲ್ಲಿ ಅಭಿಮಾನಿಗಳ ಆಸೆಗೆ ನಿರಾಸೆ ಮಾಡದೇ ಉತ್ತಮ ಕಥೆಯ ಮೂಲಕ ನಟಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡ್ತಿದ್ದಾರೆ.