Tag: ಕರಾಳ ದಿನ

  • ಎಂಇಎಸ್‍ನಿಂದ ಮತ್ತೆ ಗಡಿ ಖ್ಯಾತೆ – ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ ಸಿದ್ಧತೆ

    ಎಂಇಎಸ್‍ನಿಂದ ಮತ್ತೆ ಗಡಿ ಖ್ಯಾತೆ – ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ ಸಿದ್ಧತೆ

    ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ (MES) ಮತ್ತೆ ಗಡಿ ಖ್ಯಾತೆ ಆರಂಭವಾಗಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು (Kannada Rajyotsava) ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ.

    ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡಲು ಜನರು ಬೆಳಗಾವಿಗೆ ಆಗಮಿಸುತ್ತಾರೆ. ಆದ್ರೆ, ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಎಂಇಎಸ್ ಮುಂದಾಗಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಯಲು ಸಿದ್ಧತೆ ಹಾಗೂ ನವೆಂಬರ್ 1 ರಂದು ಎಂಇಎಸ್‍ನಿಂದ ಕರಾಳ ದಿನಕ್ಕೆ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನದ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಫೇಸ್‍ಬುಕ್ ಪೇಜ್‍ನಲ್ಲಿ ನಾಡದ್ರೋಹಿಗಳಿಂದ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ಇದಲ್ಲದೇ ಡಿಸೆಂಬರ್‌ನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ಮಾಡಲು ಎಂಇಎಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಧಿವೇಶನದ ಸಂದರ್ಭದಲ್ಲಿ ಗಡಿ ಖ್ಯಾತೆ ತೆಗೆಯಲು ಎಂಇಎಸ್ ಪ್ಲಾನ್ ಮಾಡಿಕೊಂಡಿದೆ. ಚುನಾವಣಾ ವರ್ಷ ಆಗಿದ್ದರಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸಲಾಗುತ್ತಿದೆ. ಎಂಇಎಸ್‍ನ ಮಾಜಿ ಶಾಸಕ ಮನೋಹರ ಕಿಣೇಕರ ನೇತೃತ್ವದ ಎಂಇಎಸ್ ಮುಖಂಡರಿಂದ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನೂ ಓದಿ: ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ

    ಕಳೆದ ಹಲವಾರು ವರ್ಷಗಳಿಂದ ಎಂಇಎಸ್‍ನವರು ಕರಾಳ ದಿನಾಚರಣೆ, ಮಹಾಮೇಳಾವ್ ನಡೆಸುತ್ತಿದ್ದರು. ಈವರೆಗೂ ಯಾವುದೇ ಸರ್ಕಾರ ಕೂಡ ಬ್ರೇಕ್ ಹಾಕಿಲ್ಲ. ಈ ಬಾರಿಯಾದರೂ ರಾಜ್ಯ ಸರ್ಕಾರ ಬ್ರೇಕ್ ಹಾಕುತ್ತಾ ಕಾದು ನೋಡಬೇಕಿದೆ. ಪ್ರತಿವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್‍ನಿಂದ ಪುಂಡಾಟ ಪ್ರದರ್ಶನ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    – ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ ಟೀಕೆ

    ಬೆಳಗಾವಿ: ಕುಂದಾನಗರಿಯಲ್ಲಿ ಒಂದೆಡೆ ಮಧ್ಯರಾತ್ರಿಯೇ ಕನ್ನಡಿಗರು, ಕನ್ನಡ ಅಭಿಮಾನಿಗಳು 64ನೇ ಕನ್ನಡ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಆದರೆ ಇನ್ನೊಂದೆಡೆ ರಾಜ್ಯೋತ್ಸವವನ್ನು ವಿರೋಧಿಸಿ, ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಗಳನ್ನ ಕೊಟ್ಟು ಎಂಇಎಸ್(ಮಹಾರಾಷ್ಟ್ರ ಏಕಿಕರಣ ಸಮಿತಿ) ಪುಂಡಾಟ ಮೆರೆದಿದೆ.

    ರಾಜ್ಯೋತ್ಸವ ವಿರುದ್ಧ ಎಂಇಎಸ್ ಇಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಣೆ ಮಾಡುತ್ತಿದೆ. ನಗರದ ಸಂಭಾಜಿ ವೃತ್ತದಿಂದ ಬಸವೇಶ್ವರ ಸರ್ಕಲ್‍ವರೆಗೆ ಸೈಕಲ್ ರ‍್ಯಾಲಿಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮನೋಹರ ಕಿಣೇಕರ್, ದೀಪಕ್ ದಳವಿ ಹಾಗೂ ಅನೇಕ ಎಂಇಎಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೆರವಣಿಗೆಯಲ್ಲಿ ಕಿಡಿಕೇಡಿಗಳು ಕರ್ನಾಟಕ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ವ್ಯಂಗ್ಯ ಚಿತ್ರ ಪ್ರದರ್ಶನ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ದುಶ್ಯಾಸನಿಗೆ ಹೋಲಿಸಿ, ಕೇಂದ್ರ ಸರ್ಕಾವನ್ನು ದೃತರಾಷ್ಟ್ರನಿಗೆ ಹೋಲಿಸಿದ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಅಷ್ಟೇ ಅಲ್ಲದೆ ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದ್ದು ಎಂದು ಪ್ರಶ್ನೆ ಮಾಡಿರುವ ವ್ಯಂಗ್ಯ ಬರಹ ಹಾಗೂ ಚಿತ್ರಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಎಂಇಎಸ್ ನಾಯಕರು ಕರ್ನಾಟವನ್ನು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ:ಕುಂದಾನಗರಿಯಲ್ಲಿ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ

    ಇವೆಲ್ಲರ ನಡುವೆ ಮೆರವಣಿಗೆಯಲ್ಲಿ ಎಂಇಎಸ್ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿರುವುದು ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮರಾಠಿ ಮತದಾರರ ಒಗ್ಗೂಡಿಸುವ ಎಂಇಎಸ್ ಯತ್ನ ವಿಫಲವಾಗಿದ್ದು, ಮಹಾರಾಷ್ಟ್ರದ ನಾಯಕರು ಎಂಇಎಸ್‍ಗೆ ಕೈಕೊಟ್ಟಿದ್ದಾರೆ. ಪ್ರತಿ ಕರಾಳ ದಿನ ಆಚರಣೆಗೆ ಬರುತ್ತಿದ್ದ ಮಹಾರಾಷ್ಟ್ರ ನಾಯಕರು ಈ ವರ್ಷ ಎಂಇಎಸ್ ಮನವಿಗೆ ಸ್ಪಂದಿಸಿಲ್ಲ.

  • ನಿಷೇಧಾಜ್ಞೆ ನಡುವೆಯೇ ಮಂಜಿನ ನಗರಿಯಲ್ಲಿ ವಿಜಯೋತ್ಸವ ಆಚರಣೆ

    ನಿಷೇಧಾಜ್ಞೆ ನಡುವೆಯೇ ಮಂಜಿನ ನಗರಿಯಲ್ಲಿ ವಿಜಯೋತ್ಸವ ಆಚರಣೆ

    ಮಡಿಕೇರೆ: ಬಾಬ್ರಿ ಮಸೀದಿಯನ್ನು ದ್ವಂಸಗೊಳಿಸಿದ 26ನೇ ವರ್ಷವನ್ನು ನಗರದ ವಿಶ್ವ ಹಿಂದೂಪರಿಷತ್, ಭಜರಂಗದಳ ಸಂಘಟನೆಗಳು ವಿಶೇಷ ಪೂಜೆ ಹಾಗೂ ಸಿಹಿ ಹಂಚೋ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ.

    ಒಂದೆಡೆ ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದರೆ ಇನ್ನೊಂದೆಡೆ ಕೆಲ ಮುಸ್ಲಿಂ ಸಂಘಟನೆಗಳು ಕರಾಳ ದಿನ ಆಚರಿಸಲು ಮುಂದಾದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮಡಿಕೇರಿಯ ಕಾಲೇಜು ರಸ್ತೆಯಲ್ಲಿರೋ ಪೇಟೆ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಜನೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಪೂಜೆ ನಂತರ ಎಲ್ಲರೂ ಪರಸ್ಪರ ಸಿಹಿ ತಿನ್ನೋ ಮೂಲಕ ಸಂಭ್ರಮಿಸಿದರು.

    ಪೂಜೆಯ ನಂತರ ಮಾತನಾಡಿದ ವಿಶ್ವ ಹಿಂದೂಪರಿಷತ್ ಪ್ರಮುಖ ನರಸಿಂಹ, 26 ವರ್ಷಗಳ ಹಿಂದೆ ಧೈರ್ಯವಂತ ಹಿಂದೂ ಹುತಾತ್ಮರು ವಿವಾದಿತ ಕಟ್ಟಡವನ್ನು ಕೆಡವಿದ ದಿನವಿದು. ಇದು ಸಮಸ್ತ ಹಿಂದೂ ಬಾಂಧವರಿಗೆ ಶೌರ್ಯ ದಿನವಾಗಿದೆ. ಇಂದು ವಿಶೇಷ ಪೂಜೆ ಸಲ್ಲಿಸೋ ಮೂಲಕ ಅಂದು ವಿವಾದಿತ ಕಟ್ಟಡ ಕೆಡವಿದ ಹುತಾತ್ಮರು ಹಾಗೂ ಹಿರಿಯರನ್ನು ನೆನೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇನ್ನು ಎಸ್‍ಡಿಪಿಐ ಕಾರ್ಯಕರ್ತರು ನಗರದ ಇಂದಿರಾಗಾಂಧಿ ಸರ್ಕಲ್ ಬಳಿ ಇಂದು ಕರಾಳ ದಿನವನ್ನು ಆಚರಣೆ ಮಾಡಲು ಮೆರವಣಿಗೆ ಮೂಲಕ ಬರುತ್ತಿದ್ದರು. ಈ ಸಂದರ್ಭದಲ್ಲಿ ಪೋಲಿಸರು ಹಾಗೂ ಎಸ್‍ಡಿಪಿಐ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿಯನ್ನು ಪೋಲಿಸರು ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv