Tag: ಕರಾಟೆ ಬ್ಲ್ಯಾಕ್ ಬೆಲ್ಟ್

  • ರಷ್ಯಾ ಅಧ್ಯಕ್ಷನಿಂದ ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ

    ರಷ್ಯಾ ಅಧ್ಯಕ್ಷನಿಂದ ಬ್ಲ್ಯಾಕ್ ಬೆಲ್ಟ್ ವಾಪಸ್ ಪಡೆದ ವಿಶ್ವ ಟೇಕ್ವಾಂಡೋ

    ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ದಿನದಿಂದ ದಿನಕ್ಕೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಈ ಯುದ್ಧದ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ (Vladimir Putin) ಅವರು ಪಡೆದುಕೊಂಡಿದ್ದ ಟೇಕ್ವಾಂಡೋ ಬ್ಲ್ಯಾಕ್‌ (black belt) ಬೆಲ್ಟ್‌ನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ.

    ಟ್ವೀಟ್‍ನಲ್ಲಿ ಏನಿದೆ?:  ಉಕ್ರೇನ್‍ನಲ್ಲಿ ಮುಗ್ಧ ಜೀವಗಳ ಮೇಲಿನ ಕ್ರೂರ ದಾಳಿಯನ್ನು ವಿಶ್ವ ಟೇಕ್ವಾಂಡೋ ಬಲವಾಗಿ ಖಂಡಿಸುತ್ತದೆ.  ವಿಶ್ವ ಟೇಕ್ವಾಂಡೋ ದೃಷ್ಟಿಕೋನದಲ್ಲಿ ವಿಜಯಕ್ಕಿಂತ ಶಾಂತಿ ಹೆಚ್ಚು ಅಮೂಲ್ಯವಾಗಿದೆ. ಗೌರವ ಮತ್ತು ಸಹಿಷ್ಣುತೆ ಹೊಂದಿರುವ ವಿಶ್ವ ಟೇಕ್ವಾಂಡೋ ಮೌಲ್ಯಗಳಿಗೆ ಇದು ವಿರುದ್ಧವಾಗಿದೆ ಎಂದು ಟ್ವೀಟ್ ಮಾಡಲಾಗಿದೆ. ಈ ಮೂಲಕವಾಗಿ ನವೆಂಬರ್ 2013ರಲ್ಲಿ ವಾಡ್ಲಿಮಿರ್ ಪುಟಿನ್ ಅವರಿಗೆ ನೀಡಲಾಗಿದ್ದ 9ನೇ ಬ್ಲ್ಯಾಕ್ ಬೆಲ್ಟ್ ಹಿಂಪಡೆಯಲು ನಿರ್ಧರಿಸಿದೆ ಎಂದು ವಿಶ್ವ ಟೇಕ್ವಾಂಡೋ ಆಡಳಿತ ಮಂಡಳಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಮೂಲಕವಾಗಿ ತಿಳಿಸಿದೆ.

    ಪುಟಿನ್ ಕ್ರೀಡಾ ಆಸಕ್ತಿ: ಪುಟಿನ್ 11ನೇ ವಯಸ್ಸಿನಲ್ಲಿ ಸ್ಯಾಂಬೊದಲ್ಲಿ ತೊಡಗಿಕೊಂಡರು. ನಂತರ 13ನೇ ವಯಸ್ಸಿನಲ್ಲಿ ಜೂಡೋದಲ್ಲಿ ಆಸಕ್ತಿ ಹೊಂದಿದ್ದರು. ನಂತರ ಸದಾ ಒಂದಲ್ಲ ಒಂದು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಕರಾಟೆ ಬ್ಲ್ಯಾಕ್ ಬೆಲ್ಟ್ ಆಗಿರುವ ಪುಟಿನ್ ಅಂತರಾಷ್ಟ್ರೀಯ ಜುಡೋ ಫೆಡರೇಶನ್ ಗೌರವಾಧ್ಯಕ್ಷ ಸ್ಥಾನದಲ್ಲಿದ್ದರು. ಇದು ವಿಶ್ವದ ಕರಾಟೆ ಪಟುಗಳು ಅತ್ಯಂತ ಗೌರವದಿಂದ ಕಾಣುವ ಹುದ್ದೆಯಾಗಿತ್ತು. ಆದರೆ ಇದೀಗ ರಷ್ಯಾ ಉಕ್ರೇನ್ ಮೇಲೆ ಮಾಡಿರುವ ದಾಳಿಯಿಂದಾಗಿ ಉಕ್ರೇನ್ ಅಧ್ಯಕ್ಷರು ಈ ಪದವಿಯನ್ನು ಕಳೆದುಕೊಂಡಿದ್ದಾರೆ.

    ರಷ್ಯಾಗೆ ಕ್ರೀಡಾ ಜಗತ್ತಿನಿಂದ ಬಹಿಷ್ಕಾರ: ಇದಿಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ ಒಗ್ಗಟ್ಟಿನಿಂದ, ಯಾವುದೇ ರಷ್ಯನ್ ಅಥವಾ ಬೆಲರೂಸಿಯನ್ ರಾಷ್ಟ್ರೀಯ ಧ್ವಜಗಳು ಅಥವಾ ಗೀತೆಗಳನ್ನು ವಿಶ್ವ ಟೇಕ್ವಾಂಡೋ ಈವೆಂಟ್‍ಗಳಲ್ಲಿ ಪ್ರದರ್ಶಿಸಲಾಗುವುದಿಲ್ಲ ಅಥವಾ ನುಡಿಸಲಾಗುವುದಿಲ್ಲ. ವಿಶ್ವ ಟೇಕ್ವಾಂಡೋ ಮತ್ತು ಯುರೋಪಿಯನ್ ಟೇಕ್ವಾಂಡೋ ಯೂನಿಯನ್ ರಷ್ಯಾ ಮತ್ತು ಬೆಲಾರಸ್‍ನಲ್ಲಿ ಟೇಕ್ವಾಂಡೋ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.