Tag: ಕರಾಟೆ

  • ಕರಾಟೆ | ಕಾಶಿಯಲ್ಲಿ ಕರ್ನಾಟಕ ತಂಡಕ್ಕೆ ಪದಕಗಳ ರಾಶಿ

    ಕರಾಟೆ | ಕಾಶಿಯಲ್ಲಿ ಕರ್ನಾಟಕ ತಂಡಕ್ಕೆ ಪದಕಗಳ ರಾಶಿ

    – ಫೆಡರೇಷನ್ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಸೆಕೆಂಡ್ ರನ್ನರ್ ಅಪ್

    ಬಾಗಲಕೋಟೆ: ಡಿ. 28 ಮತ್ತು 29 ರಂದು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಹಿಂದೂ ವಿಶ್ವಾವಿದ್ಯಾಲಯ (Banaras Hindu University) ಒಳಾಂಗಣ ಕ್ರೀಡಾಂಗಣ ನಡೆದ ಆಲ್ ಇಂಡಿಯಾ ಇಂಟರ್ ಸ್ಕೂಲ್ ಮತ್ತು ಸೀನಿಯರ್ ಕರಾಟೆ ಚಾಂಪಿಯನ್‌ಶಿಪ್‌ (Karate Championship) ಫೆಡೆರೇಷನ್ ಕಪ್ ಪಂದ್ಯಾವಳಿಯಲ್ಲಿ ಕರ್ನಾಟಕದ (Karnataka) 18 ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳ ರಾಶಿಯನ್ನೇ ಬೇಟೆಯನ್ನಾಡಿದ್ದಾರೆ.

    ದೆಹಲಿ, ಪಶ್ಚಿಮ ಬಂಗಾಳ, ಹರ್ಯಾಣ, ಆಸ್ಸಾಂ, ಮಣಿಪುರ, ಜಾರ್ಖಂಡ್ ಬಿಹಾರ, ತಮಿಳುನಾಡು, ಪಂಜಾಬ್ ಸೇರಿದಂತೆ 17 ರಾಜ್ಯಗಳಿಂದ ಸುಮಾರು 2500 ಕ್ಕೂ ಹೆಚ್ಚು ಕರಾಟೆ ಪಟುಗಳ ಪಾಲ್ಗೊಂಡಿದ್ದು, ನಮ್ಮ ರಾಜ್ಯದ ಕರಾಟೆ ಪಟುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧಿಸಿ 8 ಚಿನ್ನದ ಪದಕ, 12 ಬೆಳ್ಳಿ ಪದಕ ಹಾಗೂ 09 ಕಂಚು ಒಟ್ಟು 29 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಾಂಪಿಯನ್‌ಶೀಪ್‌ನಲ್ಲಿ “ಸೆಕೆಂಡ್ ರನ್ನರ್ ಅಪ್” ಪ್ರಶಸ್ತಿಯನ್ನು ಕರ್ನಾಟಕ ತಂಡ ಪಡೆದುಕೊಂಡಿದೆ.

    ಕರ್ನಾಟಕದ ವಿದ್ಯಾರ್ಥಿಗಳ ಸಾಧನೆಗೆ ಭಾರತದ ಡಬ್ಲುಎಂಕೆಎಫ್‌ ಮುಖ್ಯ ರೇಫ್ರಿ ಹಾನ್ಸಿ ಪ್ರೇಮಜಿತ್ ಸೇನ್, ನಾರ್ತ್ ಇಂಡಿಯಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಹಾನ್ಸಿ ರಜನಿಶ್ ಚೌಧರಿ, ಬಾಗಲಕೋಟೆ ಶಾಸಕ ಎಚ್.ವೈ ಮೇಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜಿ ಡೂಗನವರ, ಮೇಲ್ವಿಚಾರಕ ರಂಗಪ್ಪ ಕ್ಯಾಲಕೊಂಡ, ಕ್ರೀಡಾ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿ ಸಾಧಕರಿಗೆ ಅಭಿನಂದಿಸಿದ್ದಾರೆ ಎಂದು ರಾಜ್ಯದ ಚೀಫ್‌ ಕೋಚ್ ಎಸ್.ಆರ್.ರಾಠೋಡ ತಿಳಿಸಿದ್ದಾರೆ.

    ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಜಯಿಸಿ ತಾಯ್ನಾಡಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಕರಾಟೆ ಅಭಿಮಾನಿಗಳು ಹಾಗೂ ಪಾಲಕರು ಸ್ವಾಗತಿಸಿದರು.

    ಪದಕ ಪಡೆದ ಕ್ರೀಡಾಪಟುಗಳು : ಮಹಮ್ಮದ್ ಮಾಜ್ ಗಲಗಲಿ (2 ಚಿನ್ನ) ಆನಂದ ನಾಯ್ಕ್ (ಚಿನ್ನ ಮತ್ತು ಬೆಳ್ಳಿ) ಶ್ರೇಯಸ್ಸ್ ನಾಗರವಳ್ಳಿ (ಚಿನ್ನ ಮತ್ತು ಬೆಳ್ಳಿ) ಅರುಣ ಧನ್ನೂರ (ಚಿನ್ನ ಮತ್ತು ಬೆಳ್ಳಿ) ಪ್ರಭುಸ್ವಾಮಿ ಆರಾಧ್ಯಮಠ (ಚಿನ್ನ ಮತ್ತು ಕಂಚು) ಸಾಗರ ಚವ್ಹಾಣ (ಚಿನ್ನ) ಪ್ರಜ್ವಲ ರಾಠೋಡ (ಚಿನ್ನ) ಸಾತ್ವಿಕ ಶೇಬನ್ನವರ (2 ಬೆಳ್ಳಿ) ಸಾಗರಕುಮಾರ ಮರಕುಂಬಿ (ಬೆಳ್ಳಿ ಮತ್ತು ಕಂಚು) ರಾಮಕೃಷ್ಣ ದಾಸರ (ಬೆಳ್ಳಿ ಮತ್ತು ಕಂಚು) ಸಾಯಿಪ್ರಸಾದ ಪೂಜಾರಿ (ಬೆಳ್ಳಿ ಮತ್ತು ಕಂಚು) ಶರಣಗೌಡ ಪಾಟೀಲ (ಬೆಳ್ಳಿ) ಕರಣ ರಾಠೋಡ (ಬೆಳ್ಳಿ) ಅಕ್ಷಿತ ರಾಠೋಡ (ಬೆಳ್ಳಿ) ಜಯಂತ ಗೋರಗುಂಡಗಿ (ಬೆಳ್ಳಿ) ಈಶ್ವರಯ್ಯ ಗುರುಶಾಂತನವರ (2 ಕಂಚು) ತನ್ಮಯ ರಾವ್ (2 ಕಂಚು) ಯಶವಂತ ನಾಯಕ (2 ಕಂಚು) ಪಡೆದಿದ್ದಾರೆ.

    ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ರೆಫ್ರಿಯಾಗಿ ಚೀಫ್‌ ಕೋಚ್ ಎಸ್.ಆರ್ ರಾಠೋಡ, ಶಾಂತು ಚವ್ಹಾಣ, ಸಾಗರಕುಮಾರ್ ಮರಕುಂಬಿ, ರಾಮಕೃಷ್ಣ ದಾಸರ ಮತ್ತು ಆನಂದ ನಾಯ್ಕ ಭಾಗವಹಿಸಿದ್ದರು.

  • ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ ಕೋಲಾರದ ಮಹಿಳೆ ಆಯ್ಕೆ

    ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ ಕೋಲಾರದ ಮಹಿಳೆ ಆಯ್ಕೆ

    ಕೋಲಾರ: ಮೇ ತಿಂಗಳಿನಲ್ಲಿ ಮಲೇಷ್ಯಾದ (Malaysia) ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆಯಲಿರುವ 20ನೇ ಅಂತಾರರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ (International Karate Championship) ನಗರದ (Kolar) ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.

    ಈಗಾಗಲೇ ರುಮಾನಾ ಕೌಸರ್ ಬೇಗ್, ಹೈದರಾಬಾದ್‍ನಲ್ಲಿ ನಡೆದ 2024ರ ಚಾಂಪಿಯನ್‍ಶಿಪ್ ಹಾಗೂ ಮೆರಿಟ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಅಲ್ಲದೇ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಕರಾಟೆ 2023, ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಗಳ ಜೊತೆಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ

    ಇವರು ವಸತಿ ಶಾಲೆಗಳಲ್ಲಿ ಸುಮಾರು 3000 ಬಾಲಕಿಯರಿಗೆ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಜಿಲ್ಲೆಯ ಜನ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ʻಯಶಸ್ವಿʼ ದ್ವಿಶತಕ – ಟೀಂ ಇಂಡಿಯಾ ಪರ ಜೈಸ್ವಾಲ್‌ ವಿಶೇಷ ಸಾಧನೆ

  • ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಅಂತರ್ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್, ಕರಾಟೆ ಸ್ಪರ್ಧೆ- ಬೀದರ್ ಮಹಿಳಾ ಕಾಲೇಜು ಚಾಂಪಿಯನ್

    ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪೆಂಕಾಕ್ ಸಿಲಾತ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ನಗರದ ‘ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು’ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಕಾಲೇಜಿನ 14 ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಸ್ನೇಹಾ ಸಂಜುಕುಮಾರ್, ನಂದಿನಿ ಶರಣಪ್ಪ, ಸ್ವಾತಿ ಪಾಂಡಪ್ಪ, ಕೋಮಲ್ ಗೋಪಾಲರಾವ್, ಮಾಲಾಶ್ರೀ ಶರಣಪ್ಪ, ದಿವ್ಯಶ್ರೀ, ದಶರಥ, ಸವಿತಾ, ಭಾಗ್ಯಶ್ರೀ, ಕಲ್ಪನಾ, ಅಶೋಕ್, ಜ್ಯೋತಿ, ವೈಶಾಲಿ, ಪ್ರಿಯಾಂಕಾ ರಾಜಕುಮಾರ್, ಸರಸ್ವತಿ ಹಾಗೂ ರೇಣುಕಾ ಚಿನ್ನದ ಸಾಧನೆ ಮಾಡಿದ ಮಕ್ಕಳು. ಇದನ್ನೂ ಓದಿ: ಕಲಬುರಗಿ ನಾಲವಾರ ಜಾತ್ರೆ – ಆಡಳಿತ ಮಂಡಳಿ ಸದಸ್ಯರ ವಿರುದ್ಧ FIR

    ಮೂರು ಚಿನ್ನದ ಪದಕಗಳನ್ನು ಬಾಚಿಕೊಂಡ ವಿಜಯಪುರ ಕಾಲೇಜು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಬೆಳಗಾವಿ, ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

    ವಿದ್ಯಾರ್ಥಿನಿಯರು ಆತ್ಮರಕ್ಷಣೆಗೆ ಪೆಂಕಾಕ್ ಸಿಲಾತ್, ಕರಾಟೆ ಕಲೆಗಳನ್ನು ಕಲಿಯಬೇಕು ಎಂದು ಸ್ಪರ್ಧೆಯನ್ನು ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ತರಬೇತುದಾರ ಖುದ್ದುಸ್ ಹೇಳಿದರು. ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಭಯದಿಂದ ‘ಬಾಬಾಜಿ’ ಒತ್ತಡದಲ್ಲಿದ್ದಾರೆ: ಅಖಿಲೇಶ್

    ಪೆಂಕಾಕ್ ಸಿಲಾತ್ ಆರನೇ ಶತಮಾನದಲ್ಲಿ ಇಂಡೋನೇಷ್ಯಾದಲ್ಲಿ ಯುದ್ಧ ಕಲೆಯಾಗಿ ಬಳಸಲಾಗುತ್ತಿತ್ತು. ನಂತರ ದಕ್ಷಿಣ ಏಷ್ಯಾದ ದೇಶಗಳಲ್ಲೂ ಪ್ರಾಮುಖ್ಯತೆ ಪಡೆದುಕೊಂಡಿತು ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಮನೋಜ್‍ಕುಮಾರ್ ತಿಳಿಸಿದರು.

  • ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ  ಸೇರ್ಪಡೆಗೊಂಡ ಕೊಡಗಿನ ಕುವರ ಕೆ.ರಾಹುಲ್

    ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡ ಕೊಡಗಿನ ಕುವರ ಕೆ.ರಾಹುಲ್

    ಮಡಿಕೇರಿ: ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಹಂಬಲವಿರುತ್ತದೆ. ಆದರೆ ಕೆಲವರು ಅವರ ದಾರಿಯಲ್ಲಿ ಸಫಲರಾಗುತ್ತಾರೆ, ಕೆಲವರು ವಿಫಲರಾಗುತ್ತಾರೆ. ಇದು ಪ್ರಕೃತಿ ನಿಯಮ. ಆದರೆ ಕೊಡಗಿನ ಯುವಕ ಸಾಧನೆ ಮೇಲೆ ಸಾಧನೆಯನ್ನು ಮಾಡಿದ್ದು, ಅವರ ವಿಶೇಷ ಸಾಧನೆಗಾಗಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

    ಹೌದು, ವಿರಾಜಪೇಟೆ ನಗರದ ವಿಜಯನಗರದ ನಿವಾಸಿ ಕೆ.ಕುಮಾರ್ ಮತ್ತು ವರಲಕ್ಷ್ಮಿ ದಂಪತಿ ಪುತ್ರ ಕೆ.ರಾಹುಲ್ ಅವರಿಗೆ 20 ವರ್ಷ. ಅವರು ಒಂದು ನಿಮಿಷದಲ್ಲಿ ಏಕಕಾಲಕ್ಕೆ ಒಟ್ಟು 262 ಬಾರಿ ಪಂಚ್ ಮತ್ತು ಕಿಕ್ಸ್ ಮಾಡಿ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ

    ರಾಹುಲ್ ಅವರ ಸಾಧನೆಯನ್ನು ಗುರುತಿಸಿ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನ ಪುಟದಲ್ಲಿ ಹೆಸರನ್ನು ನೊಂದಾಯಿಸಿದ್ದಾರೆ. ರಾಹುಲ್ ಅವರಿಗೆ ಪ್ರಮಾಣ ಪತ್ರ, ಪದಕ, ಗುರುತಿನ ಚೀಟಿ ಹಾಗೂ ಸಾಧಕರಿಗಾಗಿ ನೀಡುವ ವಿಶೇಷ ಲೇಖನಿಯನ್ನು ಪಡೆದುಕೊಂಡಿದ್ದಾರೆ.

    ರಾಹುಲ್ ಅವರು ವಿರಾಜಪೇಟೆ ನಗರದ ಯುಚೇರಿಯೋ ಕರಾಟೆ ಶಾಲೆ ವಿದ್ಯಾರ್ಥಿಯಾಗಿದ್ದು, ಮುಖ್ಯ ತರಬೇತು ಶಿಕ್ಷಕರಾದ ಸೇನ್ಸಾಯಿ ಹೆಚ್.ಆರ್.ಶಿವಪ್ಪ ಅವರ ಗರಡಿಯಲ್ಲಿ ಪಳಗಿ ರಾಜ್ಯ ಮತ್ತು ಅಂತರ ರಾಜ್ಯದ ಕರಾಟೆ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನ, ಮತ್ತು ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

    ಇತ್ತೀಚೆಗೆ ನಡೆದ ಪ್ರಥಮ ಅಂತರ್ ರಾಷ್ಟ್ರೀಯ ಆನ್‍ಲೈನ್ ಇ-ಖಾತೆ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನಕ್ಕೆ ಬಂದು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ಸಾಧನೆಯ ಬಗ್ಗೆ ಮಾತನಾಡಿದ ರಾಹುಲ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ನಮೂದಾಗಬೇಕು ಎಂದು ಮಹಾದಾಸೆಯನ್ನು ಹೊಂದಿದ್ದೇನೆ. ಸಾಧನೆಗಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದೇನೆ. ಕರಾಟೆ ಎಂಬುದು ಕೇವಲ ಆತ್ಮ ರಕ್ಷಣೆಯ ಕ್ರೀಡೆಯಲ್ಲ. ಕ್ರೀಡೆಯಲ್ಲೇ ವಿವಿಧ ಸಾಧನೆಯನ್ನು ಮಾಡುವ ವಿಫಲ ಅವಕಾಶಗಳಿವೆ. ಕ್ರೀಡೆಯಲ್ಲಿ ಕಠಿಣವಾದ ಅಭ್ಯಾಸ, ಮನೋಧೈರ್ಯವನ್ನು ಸಮಾನಾಂತರವಾಗಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಿದರೆ ಗುರಿ ಮುಟ್ಟುವುದು ಶಥ ಸಿದ್ಧ ಎಂದು ಹೇಳಿದ್ದಾರೆ.

  • ರೋಡ್ ರೋಮಿಯೋಗೆ ಕರಾಟೆ ಪಂಚ್ ಕೊಟ್ಟ ಮಹಿಳಾ ಪತ್ರಕರ್ತೆ

    ರೋಡ್ ರೋಮಿಯೋಗೆ ಕರಾಟೆ ಪಂಚ್ ಕೊಟ್ಟ ಮಹಿಳಾ ಪತ್ರಕರ್ತೆ

    ಹುಬ್ಬಳ್ಳಿ: ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ಪತ್ರಕರ್ತೆಗೆ ರಸ್ತೆಯಲ್ಲಿ ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ ರೋಡ್ ರೋಮಿಯೋಗೆ ಸ್ಥಳೀಯರು ಸೇರಿದಂತೆ ಮಹಿಳಾ ಪತ್ರಕರ್ತೆ ಬಿಸಿ, ಬಿಸಿ ಕಜ್ಜಾಯ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇದನ್ನೂ ಓದಿ: ತಾತನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕಳು – ತಾತನಿಗೆ ನೆರವಾದ ಜ್ಯೋತಿಷಿ ಕಮಲಾಕರ್ ಭಟ್

    ಹುಬ್ಬಳ್ಳಿಯ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಮಹಿಳಾ ಪತ್ರಕರ್ತೆ ಶುಕ್ರವಾರ ಸಂಜೆ ಕೆಲಸ ಮುಗಿಸಿಕೊಂಡು ತೆರಳುತ್ತಿರುತ್ತಾರೆ. ಈ ವೇಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಜನನಿಬಿಡ ಪ್ರದೇಶದ ಬಳಿ ರೋಡ್ ರೋಮಿಯೋ ಮಹಿಳಾ ಪತ್ರಕರ್ತೆಯನ್ನ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಗ ಪೊಲೀಸರು ಹಾಗೂ ಕಚೇರಿಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ ಪತ್ರಕರ್ತೆ ಸ್ಥಳೀಯರ ಸಹಾಯದಿಂದ ರೋಡ್ ರೋಮಿಯೋನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ರೋಡ್ ರೋಮಿಯೋಗೆ ಮಹಿಳಾ ಪತ್ರಕರ್ತೆ ಕರಾಟೆ ಪಂಚ್ ನೀಡಿರುವುದಾಗಿ ತಮ್ಮ ಫೇಸ್‍ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿರುವ ಬೆಂಗಳೂರು ಮೆಟ್ರೋ

    20 ವರ್ಷದ ಹಿಂದೆ ಕಲಿತ ಕರಾಟೆ ನಿನ್ನೆ ಕೆಲಸಕ್ಕೆ ಬಂತು: ಅದು ನಿರ್ಜನ ಪ್ರದೇಶವಲ್ಲ. ಸದಾ ವಾಹನ, ಜನರಿಂದ ಗಿಜುಗುಡುವ ಕಿಮ್ಸ್ ಸರ್ಕಲ್ ಏರಿಯಾ. ಮಧ್ಯರಾತ್ರಿಯೂ ಅಲ್ಲ. ಸಂಜೆ ನಸುಗತ್ತಲ 7 ಗಂಟೆ ಸಮಯ. ಅಷ್ಟಕ್ಕೂ ನಾನು ಕಚೇರಿಗೆ ಹೊರಟ ಸಮಯವದು. ಮನೆಯಿಂದ ಹೊರಟು, ರೋಡ್ ಕ್ರಾಸ್ ಮಾಡಿ ಹೆಜ್ಜೆ ಹಾಕಿದರೆ ಒಟ್ಟು 10 ನಿಮಿಷದ ಹಾದಿ. ಈ ಹಾದಿಯ ಅರ್ಧದಲ್ಲಿ ಈ ಯುವಕ ನನ್ನ ಫಾಲೋ ಮಾಡಲು ಶುರುಮಾಡಿದ. ಫೋನಿನಲ್ಲಿ ಮಾತಾಡೋ ನೆಪದಲ್ಲಿ ಅಶ್ಲೀಲ ಮಾತು, ಅಸಭ್ಯ ವರ್ತನೆ ನನಗೆ ಸಿಟ್ಟು ನೇತ್ತಿಗೇರಿಸಿತ್ತು. ಕಿಮ್ಸ್ ಸರ್ಕಲ್ ನಲ್ಲಿ ನಿಂತರೆ ಆತನು ನಿಂತ. ಫೋಲಿಸರಿಗೆ ಇನ್ಫಾರ್ಮ್ ಮಾಡಿದರೂ ನನ್ನ ಪಕ್ಕ ಬಿಟ್ಟು ಕದಲಲಿಲ್ಲ. ನಾನು ನನ್ನ ಆಫೀಸ್‌ಗೆ ಫೋನ್ ಮಾಡಿ ವಿಷಯ ತಿಳಿಸಿದರೂ ಕದಲಲಿಲ್ಲ. ನಂತರ ನನ್ನ ಸಹೋದ್ಯೋಗಿಗಳು ಬರುತ್ತಲೇ ಕಾಲ್ಕಿತ್ತ. ಅವನನ್ನು ಹಿಡಿದು ಒಂದಷ್ಟು ಬಿಸಿ ಬಿಸಿ ಕಜ್ಜಾಯ ಕೊಟ್ಟೆ. 20 ವರ್ಷಗಳ ಹಿಂದೆ ಕಲಿತಿದ್ದ ಕರಾಟೆ ಪ್ರಯೋಗ ಮಾಡಿರಲಿಲ್ಲ. ನಿನ್ನೆ ಮಾತ್ರ ಆತನ ಮೇಲೆ ಪಂಚ್, ಕಿಕ್ ಸರ್ಯಾಗ್ ಕೊಟ್ಟೆ. ಅಲ್ಲಿದ್ದವರೂ ಒಂದಷ್ಟು ತದಕಿದ ಮೇಲೆ ಪೊಲೀಸರು ಬಂದು ಕರೆದೊಯ್ದರು.


    ಈ ಘಟನೆ ಹಂಚಿಕೊಳ್ಳಲು ಕಾರಣವಿಷ್ಟೆ. ಆತ ಒಂದೊಂದು ಬಾರಿ ಒಂದೊಂದು ರಾಜ್ಯದ ಹೆಸರು ಹೇಳುತ್ಯಿದ್ದ. ಒಮ್ಮೆ ಬೆಂಗಳೂರು, ಒಮ್ಮೆ ಬಿಹಾರ, ಮತ್ತೊಮ್ಮೆ ಜಾರ್ಖಂಡ್… ಇವರ ಒಂದು ಗ್ಯಾಂಗೇ ಇರಬಹುದು. ನಾಳೆ ನಿಮ್ಮ ಮನೆಯ ಹೆಣ್ಮಕ್ಕಳಿಗೂ ಇಂಥ ಅನುಭವ ಆಗಬಹುದು. ಕಿಮ್ಸ್ ಸರ್ಕಲ್ ನಂಥ ಜನಸಂದಣಿಯ ಪ್ರದೇಶದಲ್ಲೇ ಅಸಭ್ಯ ವರ್ತನೆ ತೋರುವ ಇಂತಹ ನೀಚ ಪರರಾಜ್ಯದವರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಸಿಗುವವರನ್ನು ಬಿಟ್ಟಾರೆಯೇ. ಇಂಥ ಘಟನೆಗಳನ್ನು ಪೊಲೀಸರು ಹಗುರವಾಗಿ ಪರಿಗಣಿಸಿದರೆ ಮುಂದೊಂದು ದಿನ ದೆಹಲಿ ಮುಂಬಯಿ ಮೈಸೂರಿನಲ್ಲೆಲ್ಲಾ ನಡೆದ ಘಟನೆ ಹುಬ್ಬಳ್ಳಿಯಲ್ಲೂ ಘಟಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಂಗೆ ಕಣ್ಣು ಕಾಣಿಸಲ್ಲ, ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ಲಸಿಕೆಗೆ ಅಜ್ಜಿ, ಅಜ್ಜ ನಿರಾಕರಣೆ

    ಒಟ್ಟಾರೆ ಮಹಿಳಾ ಪತ್ರಕರ್ತೆಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಸ್ಥಳೀಯರು ಹಿಡಿದು ಥಳಿಸಿದಲ್ಲದೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಶದಲ್ಲಿರುವ ಯುವಕ ಒಮ್ಮೆ ತಾನೂ ಬೆಂಗಳೂರು. ಇನ್ನೊಮ್ಮೆ ಬಿಹಾರ. ಮತ್ತೊಮ್ಮೆ ಕೇಳಿದಾಗ ಜಾರ್ಖಂಡ್ ಮೂಲದವನು ಎಂದು ಹೇಳುತ್ತಿರುವ ಕಾರಣ ಯುವಕನನ್ನು ವಶಕ್ಕೆ ಪಡೆದಿರುವ ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸರು ಆತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕರಾಟೆಯಲ್ಲಿ 56 ಪದಕ ಗೆದ್ದ ರಿಷಬ್ ಶೆಟ್ಟಿ – ಏಷ್ಯನ್ ಬುಕ್ ಆಫ್ ರೆಕಾರ್ಡ್

    ಕರಾಟೆಯಲ್ಲಿ 56 ಪದಕ ಗೆದ್ದ ರಿಷಬ್ ಶೆಟ್ಟಿ – ಏಷ್ಯನ್ ಬುಕ್ ಆಫ್ ರೆಕಾರ್ಡ್

    ಉಡುಪಿ: ಜಿಲ್ಲೆಯ ದೊಂಡೇರಂಗಡಿ ಮೂಲದ ರಿಷಬ್ ಶೆಟ್ಟಿ ಮಾರ್ಷಲ್ ಆರ್ಟ್ಸ್ ನಲ್ಲಿ ವಿಶಿಷ್ಟ ಸಾಧನೆ ಮಾಡಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ರಿಷಬ್ ತನ್ನ ಹದಿಮೂರನೇ ವಯಸ್ಸಿಗೆ ದೇಶ ಮೆಚ್ಚುವ ಕೆಲಸ ಮಾಡಿದ್ದಾನೆ. ರಿಷಬ್ ಕರಾಟೆಯಲ್ಲಿ 56 ಪದಕಗಳನ್ನು ಗೆದ್ದಿದ್ದಾನೆ.

    ರಿಷಬ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ದೊಂಡೇರಂಗಡಿಯ ವಿಮಲಾ ಮತ್ತು ಅರುಣ್ ಶೆಟ್ಟಿ ದಂಪತಿಯ ಪುತ್ರನಾಗಿದ್ದಾನೆ. ದೇಶಕ್ಕೆ ಹಾಗೂ ಊರಿಗೆ ಹೆಮ್ಮೆ ತಂದಿದ್ದಾನೆ. ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ 2021 ಸಾಧನೆಯನ್ನು ಮಾಡಿದ್ದಾನೆ. ಎದುರಾಳಿಗಳನ್ನು ಕೆಲವೇ ಕ್ಷಣಗಳಲ್ಲಿ ಸೋಲಿಸುವ ಚಾಕಚಕ್ಯತೆ ರಿಷಬ್‍ಗಿದೆ. ಚಿಕ್ಕಂದಿನಿಂದ ಮುಂಬೈನಲ್ಲಿ ಬೆಳೆದಿರುವ ಕಾರಣ ಕನ್ನಡ ಆತನಿಗೆ ಗೊತ್ತಿಲ್ಲ.

    ನನಗೆ ಚಿಕ್ಕಂದಿನಿಂದಲೇ ಕರಾಟೆ ಮೇಲೆ ಆಸಕ್ತಿ. ತಂದೆ ತಾಯಿ ಬಹಳ ಸಪೋರ್ಟ್ ಮಾಡಿದ್ದಾರೆ. ನನ್ನ ಗುರುಗಳು ಕೂಡಾ ಹೆಚ್ಚು ಮುತುವರ್ಜಿ ವಹಿಸಿದ್ದಾರೆ. ಮುಂದೆ ಇಂಟರ್ ನ್ಯಾಶನಲ್ ಲೆವೆಲ್ ಕಾಂಪಿಟೇಶನ್ ಹೋಗಬೇಕು ಎಂಬ ಆಸೆಯಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾನೆ.

    ಲಾಕ್‍ಡೌನ್ ಸಂದರ್ಭವನ್ನು ರಿಷಬ್ ಸದುಪಯೋಗಪಡಿಸಿಕೊಂಡಿದ್ದಾನೆ. ದಿನಪೂರ್ತಿ ಕರಾಟೆ ಅಭ್ಯಾಸವನ್ನು ಮಾಡುತ್ತಿದ್ದನು. ಮಾರ್ಷಲ್ ಆರ್ಟ್ಸ್ ವೀಡಿಯೋಗಳನ್ನು ನೋಡೋದು. ತಮ್ಮ ಶಿಕ್ಷಕರ ಜೊತೆ ಅದನ್ನು ಪ್ರ್ಯಾಕ್ಟೀಸ್ ಮಾಡುವುದು. ಆನ್ ಲೈನ್ ಕ್ಲಾಸ್ ಮುಗಿಸಿ ಮನೆಯಲ್ಲೂ ನಿರಂತರ ಶ್ರಮವಹಿಸಿದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಕುಟುಂಬಸ್ಥರು, ಊರಿನ ಗ್ರಾಮಸ್ಥರು ರಿಷಬ್ ಸಾಧನೆಗೆ ಶುಭ ಹಾರೈಸಿದ್ದಾರೆ.

    ದೀಕ್ಷಿತ್ ದೊಂಡೇರಂಗಡಿ ಮಾತಮಾಡಿ, ರಿಷಬ್ ನಮ್ಮ ಊರಿನ ಹೆಮ್ಮೆ. ಏಷ್ಯಾ ಬುಕ್ ರೆಕಾರ್ಡ್ ಮಾಡಿರುವುದು ಸಣ್ಣ ಸಾಧನೆ ಅಲ್ಲ. ನಮ್ಮ ಊರಿನ ಹುಡುಗ ಎಂದು ಹೇಳಲು ಹೆಮ್ಮೆ ಎಂದರು. ಈಗ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್‍ಗಳಿಗೆ ಪೂರ್ವ ತಯಾರಿಗಳನ್ನು ಮಾಡುತ್ತಿದ್ದಾನೆ. ರಿಷಬ್ ಶೆಟ್ಟಿ ಮತ್ತಷ್ಟು ಪದಕ ಬಾಚಿಕೊಳ್ಳಲಿ ಅನ್ನೋದು ನಮ್ಮ ಆಶಯ.

  • ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಬಳ್ಳಾರಿ/ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಹಿರಿಯ ಕರಾಟೆ ತರಬೇತುದಾರರು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿಂದು ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಕರಾಟೆ ಹಿರಿಯ ತರಬೇತುದಾರರ ನಿಯೋಗ, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಹೆಚ್ಚಿಸುವ ಸಲುವಾಗಿ ಈ ಕರಾಟೆ ತರಬೇತಿ ಮುಖ್ಯವಾಗಿದೆ. ಹೀಗಾಗಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಸಚಿವರಲ್ಲಿ ಕೋರಿದ್ದಾರೆ.

    ಹಿರಿಯ ತರಬೇತುದಾರರ ಮನವಿಯನ್ನು ಆಲಿಸಿದ ಸಚಿವ ಸುರೇಶ್ ಕುಮಾರ್, ಕರಾಟೆ ತರಬೇತಿ ಪುನರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಳ್ಳಾರಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ, ಸುಭಾಷ್ ಚಂದ್ರ, ಕೊಪ್ಪಳದ ಹಿರಿಯ ತರಬೇತುದಾರ ಮೌನೇಶ ವಡ್ಡಟಿ, ವಿಜಯಪುರದ ಹಿರಿಯ ತರಬೇತುದಾರ ಶಿವಕುಮಾರ ಶಾರದಳ್ಳಿ ಸೇರಿದಂತೆ ಅನೇಕರು ಸಚಿವರಿಗೆ ಈ ಮನವಿ ಮಾಡಿದ್ದಾರೆ.

  • ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ಶ್ರೀಲಂಕಾದಲ್ಲಿ ಕರಾಟೆ ಸ್ಪರ್ಧೆ – ಬಂಗಾರದ ಪದಕ ಗೆದ್ದ ಚನ್ನಪಟ್ಟಣದ ವಿದ್ಯಾರ್ಥಿಗಳು

    ರಾಮನಗರ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೊಂಬೆನಗರಿ ಚನ್ನಪಟ್ಟಣ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಬಂಗಾರದ ಪದಕಕ್ಕೆ ಕೊರಳೊಡ್ಡುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕೊಂಡಾಪುರ ಗ್ರಾಮದ ಪೂರ್ಣಿಮಾ ಹಾಗೂ ಪಟ್ಟಣದ ಕೇಂಬ್ರಿಡ್ಜ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಣ್ಣಘಟ್ಟ ಗ್ರಾಮದ ನಿಖಿಲ್ ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಕಳೆದ 28 ರಂದು ಶ್ರೀಲಂಕಾದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕರಾಟೆ ಶಿಕ್ಷಕ ಆನಂದ್ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಹ ಕರಾಟೆಯ ತರಬೇತಿ ಪಡೆದು ಶ್ರೀಲಂಕಾಗೆ ಪಯಣಿಸಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ತಂದಿದ್ದಾರೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ. ಅಲ್ಲದೇ ಬಡಕುಟುಂಬದ ಹೆಣ್ಣು ಮಗಳೊಬ್ಬಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿರುವುದು ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡುವಂತಾಗಿದೆ.

    ಬಡತನ ಮೆಟ್ಟಿ ನಿಂತ ಕರಾಟೆ ಪಟು
    ಆರ್ಥಿಕ ಸಂಕಷ್ಟದಲ್ಲಿದ್ದ ಕರಾಟೆಪಟು ಪೂರ್ಣಿಮಾಗೆ ಶ್ರೀಲಂಕಾದಲ್ಲಿ ನಡೆಯಲಿದ್ದ ಚಾಂಪಿಯನ್ ಶಿಪ್‍ನಲ್ಲಿ ಪಾಲ್ಗೊಳ್ಳಲು ಹಣದ ಸಮಸ್ಯೆ ಎದುರಾಗಿತ್ತು. ಪ್ರಯಾಣದ ಖರ್ಚನ್ನು ಬರಿಸುವುದಿಲ್ಲ ಎಂದು ರಾಜ್ಯದ ಕರಾಟೆ ಸಂಸ್ಥೆ ತಿಳಿಸಿದ್ದರಿಂದ ಪೂರ್ಣಿಮಾ ಸಾಕಷ್ಟು ಆತಂಕ್ಕೆ ಒಳಗಾಗಿದ್ದರು. ಅಲ್ಲದೇ ಈಗಾಗಲೇ ಸಾಕಷ್ಟು ಸಾಲ ಮಾಡಿ ಮಗಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿದ್ದ ತಂದೆ-ತಾಯಿ ಸಹ ಹಣವಿಲ್ಲದೇ ಮಗಳನ್ನು ಶ್ರೀಲಂಕಾಗೆ ಕಳುಹಿಸಲು ಹಿಂದೇಟು ಹಾಕಿದ್ದರು.

    ಇದೇ ವೇಳೆ ಜಿಲ್ಲೆಯ ಹಲವು ದಾನಿಗಳು ಪೂರ್ಣಿಮಾಳ ನೆರವಿಗೆ ನಿಂತು ಧನ ಸಹಾಯ ಮಾಡಿದ್ರು. ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್ ಶಂಕರಪ್ಪ ತಮ್ಮ ಕಚೇರಿಗೆ ಪೂರ್ಣಿಮಾಳ ಕುಟುಂಬದವರನ್ನು ಕರೆಸಿಕೊಂಡು ತಮ್ಮ ವೇತನದ ಹಣದಲ್ಲಿ ಪ್ರಯಾಣಕ್ಕೆ ನೆರವಾಗಿದ್ರು. ಇದೇ ವೇಳೆ ವಾರ್ತಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದ ಕ್ರೀಡಾಸಕ್ತರೋರ್ವರು ಕೂಡ ವೈಯಕ್ತಿಕವಾಗಿ 10 ಸಾವಿರ ರೂಪಾಯಿಗಳನ್ನು ನೀಡಿ ಪೂರ್ಣಿಮಾಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾಗಿದ್ರು.

    ಬಂಗಾರದ ಪದಕ ಗೆದ್ದ ಖುಷಿಯಲ್ಲಿರುವ ಪೂರ್ಣಿಮಾ ತನ್ನ ಆಸೆಗೆ ನೀರೆರೆಯುವ ಮೂಲಕ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ನೆರವಾದ ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ ಮುಂದೆ ದೇಶಕ್ಕಾಗಿ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆದ್ದು ತ್ರಿವರ್ಣ ಧ್ವಜವನ್ನ ಹಿಡಿಯಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾಳೆ.

  • 3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    3ರ ಬಾಲಕಿ ಮೇಲೆ ಕರಾಟೆ ಶಿಕ್ಷಕನಿಂದಲೇ ಅತ್ಯಾಚಾರ!

    ಪಾಟ್ನಾ: ಕರಾಟೆ ಹೇಳಿಕೊಡಬೇಕಾದ ಶಿಕ್ಷಕನೇ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಸಂಜೆ 4.30ರ ವೇಳೆಗೆ ನಡೆದಿದೆ. ಮುಖೇಶ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ. ಈ ಪ್ರಕರಣ ಬೆಳಕಿಗೆ ಬಂದ ಪೊಲೀಸರು ತನಿಖೆಯನ್ನು ನಡೆಸಿ ಒಂದು ಗಂಟೆಯ ಒಳಗಡೆ ಆರೋಪಿಯನ್ನು ಬಂಧಿಸಿದ್ದಾರೆ.

    ಏನಿದು ಘಟನೆ?
    3 ವರ್ಷದ ಬಾಲಕಿ ಸಂಬಂಧಿಕರ ಮನೆಯಿಂದ ತನ್ನ ಮನೆಗೆ ಮರಳಿ ಬರುತ್ತಿರುವಾಗ ಮುಖೇಶ್ ಕರಾಟೆ ಹೇಳಿಕೊಡುವುದಾಗಿ ಬಾಲಕಿಯನ್ನು ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ಕೃತ್ಯವನ್ನು ಎಸಗಿ ಅಲ್ಲಿಂದ ಪರಾರಿಯಾಗಿದ್ದ. ಮಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಶೋಧ ಕಾರ್ಯ ನಡೆಸುತ್ತಿದ್ದಾಗ ಶಿಕ್ಷಕನ ಮನೆಯಲ್ಲಿ ಬಾಲಕಿ ಪ್ರಜ್ಞಾ ತಪ್ಪಿ ಬಿದ್ದಿರುವುದನ್ನು ಗಮನಿಸಿದ್ದಾರೆ.

    ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಬಾಲಕಿಯನ್ನು ದಾನಪುರದ ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪ್ರಜ್ಞೆ ಬಂದ ಮೇಲೆ ಏನಾಯ್ತು ಎಂದು ಬಾಲಕಿಯನ್ನು ಪ್ರಶ್ನಿಸಿದಾಗ ಕರಾಟೆ ಶಿಕ್ಷಕನ ಅಸಲಿ ಮುಖ ಬಯಲಾಗಿದೆ.

    ಈ ಘಟನೆಗೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರಾಟೆ ಶಿಕ್ಷಕ ಪಾಟ್ನಾದ ಅನೇಕ ಕಡೆ ಕರಾಟೆ ತರಬೇತಿ ನೀಡುತ್ತಿದ್ದ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಹೋದ್ಯೋಗಿ ಪಂಚ್ – ಕರಾಟೆ ಕಲೆ ಉಳಿಸಿತು ಟೆಕ್ಕಿಯ ಮಾನ!

    ಸಹೋದ್ಯೋಗಿ ಪಂಚ್ – ಕರಾಟೆ ಕಲೆ ಉಳಿಸಿತು ಟೆಕ್ಕಿಯ ಮಾನ!

    ಬೆಂಗಳೂರು: ಶಾಲೆಯಲ್ಲಿ ಕಲಿತ್ತಿದ್ದ ಕರಾಟೆಯಿಂದ ಯುವತಿಯೊಬ್ಬರು ಸಹೋದ್ಯೋಗಿಗೆ ಪಾಠ ಕಲಿಸಿ, ಮಾನ ಉಳಿಸಿಕೊಂಡು ಮನೆಗೆ ಮರಳಿದ ಘಟನೆ ನಗರದ ಎಚ್‍ಎಸ್‍ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಯುವತಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದು, ಸಹೋದ್ಯೋಗಿ ರಾಹುಲ್ ಸಿಂಗ್ ಎಂಬವರ ಜೊತೆ ಊಟಕ್ಕೆ ಹೋಗಿದ್ದರು. ಈ ವೇಳೆ ಯುವತಿಯ ಜೊತೆ ರಾಹುಲ್ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದನು. ಆಗ ಯುವತಿ ತಾನು ಶಾಲೆಯಲ್ಲಿ ಕಲಿತ್ತಿದ್ದ ಕರಾಟೆಯಿಂದ ರಾಹುಲ್‍ಗೆ ಥಳಿಸಿ, ಅಲ್ಲಿಂದ ಓಡಿ ಹೋಗಿದ್ದರು.

    ಬಳಿಕ ಯುವತಿ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ಬಂದು, ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv