Tag: ಕರವೇ ನಾರಾಯಣಗೌಡ

  • ಕಮಲ್ ಹಾಸನ್ ಚಿತ್ರ ರಿಲೀಸ್ ಆದ್ರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ತೀವಿ: ನಾರಾಯಣಗೌಡ ಎಚ್ಚರಿಕೆ

    ಕಮಲ್ ಹಾಸನ್ ಚಿತ್ರ ರಿಲೀಸ್ ಆದ್ರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ತೀವಿ: ನಾರಾಯಣಗೌಡ ಎಚ್ಚರಿಕೆ

    – ಶಿವರಾಜ್‌ಕುಮಾರ್ ಸಮರ್ಥನೆ ಬಿಟ್ಟು ಕಮಲ್‌ಗೆ ಬುದ್ದಿ ಹೇಳಲಿ: ಕರವೇ ಅಧ್ಯಕ್ಷ

    ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್‌ಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ (Narayana Gowda) ಎಚ್ಚರಿಕೆ ನೀಡಿದರು.

    ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣಗೌಡ, ಆಗಾಗ ಕನ್ನಡಿಗರ ವಿಚಾರದಲ್ಲಿ ಮಾತು ಜಾಸ್ತಿ ಆಗಿದೆ. ಹೊರಗಿಂದ ಬಂದವರು ಕರ್ನಾಟಕ, ಕನ್ನಡದವರ ವಿರುದ್ಧ ಮಾತು ಆಡುತ್ತಿದ್ದಾರೆ. ತಮಿಳುನಾಡು ಆಗಾಗ ಕಾವೇರಿ ವಿಚಾರದಲ್ಲಿ ಸಂಘರ್ಷ ನಡೆಸುತ್ತಿತ್ತು. ಸಂಘರ್ಷಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ದ್ರಾವಿಡ ರಾಜ್ಯದ ಪ್ರಮುಖ ಸಾಹಿತ್ಯ ಜೊತೆ ಮಾತನಾಡಿದ್ದೆ. ಆದರೆ ಇದೇ ಸಂದರ್ಭದಲ್ಲಿ ಕಮಲ್ ಹಾಸನ್ ಈ ರೀತಿ ಹೇಳಿದ್ದಾರೆ. ನಟನ ಬಗ್ಗೆ ಅಭಿಮಾನ ಇತ್ತು. ಆದರೆ ಮೊನ್ನೆ ಆಡಿದ ಮಾತು ಕನ್ನಡಿಗರನ್ನ ಕೆರಳಿಸುವ, ಕನ್ನಡಿಗರನ್ನ ಒಗ್ಗೂಡಿಸುವ, ಪ್ರತಿಭಟಿಸುವ ಸಂದರ್ಭಕ್ಕೆ ಬಂದಿದ್ದಾರೆ. ಯಾವ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಏಕಾಏಕಿ ತಮಿಳುಗರನ್ನ ಓಲೈಸುವ ನಿಟ್ಟಿನಲ್ಲಿ ದುರಹಂಕಾರ, ದುರಾಭಿಮಾನದ ಹೇಳಿಕೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ- ಕಮಲ್ ಹಾಸನ್ ಹೇಳಿಕೆಗೆ ರಚಿತಾ ರಾಮ್ ಕಿಡಿ

    ತಮಿಳಿನ ಬಗ್ಗೆ ಅವರು ಏನು ಬೇಕಾದರೂ ಹೇಳಲಿ. ಇನ್ನೊಂದು ಭಾಷೆ ಬಗ್ಗೆ ಮಾತನಾಡುವಾಗ ಕನಿಷ್ಠ ಅರಿವು ಇರಬೇಕಿತ್ತು. ಅದೇ ಸಂದರ್ಭದಲ್ಲಿ ಕನ್ನಡಿಗರನ್ನ ಒಗ್ಗೂಡಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದವರ ಸುಪುತ್ರ ಶಿವರಾಜ್ ಕುಮಾರ್ ಇದ್ದರು. ಅವರು ಅಲ್ಲಿಯೇ ಹೇಳಬಹುದಾಗಿತ್ತು. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ ಅಂತ ಹೇಳಬಹುದಾಗಿತ್ತು. ವಿಶ್ವದ ಲಿಪಿ ರಾಣಿ ಅಂತ ಕರೆದಿರೋದು ಕನ್ನಡ ಅಂತ ಹೇಳಬಹುದಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಮಾಹಿತಿ ಇಲ್ಲದೆ ಇದ್ದಿರಬಹುದು. ಆದರೆ ಇವತ್ತಿಗೂ ಶಿವರಾಜ್ ಕುಮಾರ್ ಕಮಲ್ ಹಾಸನ್‌ರನ್ನ ವಹಿಸಿಕೊಳ್ಳುತ್ತಿರೋದನ್ನ ಸಹಿಕೊಳ್ಳೋಕೆ ಆಗಲ್ಲ. ಶಿವರಾಜ್ ಕುಮಾರ್ ಆಗಿದ್ದರೆ ದೊಡ್ಡ ವಿಷಯ ಯಾವುದು? ಏಳೂವರೆ ಕೋಟಿ ಕನ್ನಡಿಗರ ಭಾವನೆ ದೊಡ್ಡದು ಅನ್ನಿಸಲಿಲ್ಲವಾ? ಅಥವಾ ಇದನ್ನ ನೇರವಾಗಿ ಹೇಳುವ ಧೈರ್ಯ ಇಲ್ಲವಾ ಎಂದು ಶಿವರಾಜ್‌ಕುಮಾರ್ ನಡೆಗೂ ಅಸಮಾಧಾನ ವ್ಯಕ್ತಪಡಿಸಿದರು.

    ಶಿವರಾಜ್ ಕುಮಾರ್ ಸಮರ್ಥನೆ ಬಿಟ್ಟು, ಕಮಲ್ ಹಾಸನ್‌ಗೆ ಹೇಳಿ. ಕ್ಷಮೆಯಾಚಿಸುವಂತೆ ಹೇಳಿ. ಅದನ್ನ ಬಿಟ್ಟು ಕನ್ನಡಿಗರಿಗೆ ಹೇಳೋದು ಸರಿಯಲ್ಲ. ದೊಡ್ಮನೆಗೆ ಇದು ಧಕ್ಕೆಯಾಗುತ್ತೆ. ನೀವೇ ಬುದ್ದಿ ಹೇಳಿ ಕ್ಷಮೆ ಕೇಳಿಸಿ. ಇದನ್ನ ಶಿವರಾಜ್ ಕುಮಾರ್ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕ್ಷಮೆ ಕೇಳಲ್ಲ ಅಂದಾಗ ಬಿಸಿ ಮುಟ್ಟಿಸಬೇಕು- ಕಮಲ್ ಹಾಸನ್ ವಿರುದ್ಧ ವಸಿಷ್ಠ ಸಿಂಹ ಆಕ್ರೋಶ

    ಯದುವೀರ್ ಒಡೆಯರ್ ರಾಜ್ಯವಿಲ್ಲದ ರಾಜ. ಇವರು ಹೇಳುತ್ತಾರೆ. ಇವರಿಗೆ ಕರ್ನಾಟಕದ ಭಾಷ ಇತಿಹಾಸ ಗೊತ್ತಿಲ್ಲ. ಕನ್ನಡ ಸಂಸ್ಕೃತದಿAದಲೂ ಬಂದಿಲ್ಲ, ತಮಿಳಿನಿಂದಲೂ ಬಂದಿಲ್ಲ ಅನ್ನೋದನ್ನ ಇತಿಹಾಸ ಸಾರಿ ಸಾರಿ ಹೇಳುತ್ತದೆ. ಕನ್ನಡಕ್ಕೆ ತನ್ನದೇ ಸ್ವಂತಿಕೆ ಇದೆ. ಕೆಲವು ಪದಗಳು ಹೊರ ಭಾಷೆಯಿಂದ ಬಂದಿರಬಹುದಷ್ಟೇ. ಕನ್ನಡದ ಮೂಲ ಯಾವುದೇ ಭಾಷೆ ಅಲ್ಲ ಅನ್ನೋದನ್ನ ಯದುವೀರ್ ಒಡೆಯರು ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.

    ರಮ್ಯ ಹೇಳಿಕೆ ಸರಿಯಲ್ಲ. ತಮಿಳಿನ ಯಾವುದೇ ಸಾಮಾನ್ಯ ಕಲಾವಿದರನ್ನ ಮಾತನಾಡಿಸಿ. ಆದರೆ ನಮ್ಮಲ್ಲಿ ಎಲ್ಲರೂ ತಜ್ಞರು ಆಗುತ್ತಾರೆ. ರಮ್ಯ ಉಪದೇಶ ಮಾಡಬೇಡಿ, ಇಲ್ಲಿ ಉಪದೇಶ ತೆಗೆದುಕೊಳ್ಳೋಕೆ ಯಾರೂ ಇಲ್ಲ. ನಮ್ಮ ನೆಲದಲ್ಲಿ ಕನ್ನಡವೇ ದೊಡ್ಡದು. ಮೂರ್ಖತನದ ವಿಚಾರವನ್ನ ಸಮರ್ಥನೆ ಮಾಡಿಕೊಳ್ಳುವಾಗ ಉಪಯೋಗಿಸಬೇಡಿ. ಬುದ್ದಿ ಹೇಳೋ ಆಗಿದ್ದರೆ ಕಮಲ್ ಹಾಸನ್‌ಗೆ ಹೇಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಮಲ್ ಹಾಸನ್ ಚಾಲ್ತಿಯಲ್ಲಿಲ್ಲದ ನಾಣ್ಯ, ವ್ಯಾಲ್ಯೂ ಇಲ್ಲ: ಶೋಭಾ ಕರಂದ್ಲಾಜೆ ವ್ಯಂಗ್ಯ

    ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾಗಬೇಕಾದ್ರೆ ಕ್ಷಮೆಯಾಚಿಸಲೇಬೇಕು. ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ಬಿಡಲ್ಲ. ನಮ್ಮ ರಾಜ್ಯದ ನಟರು ತಮಿಳು ಕನ್ನಡಿದಿಂದ ಹುಟ್ಟಿದೆ ಅಂದಿದ್ದರೆ ತಮಿಳುನಾಡು ಹತ್ತಿ ಉರಿಯುತ್ತಿತ್ತು. ನಾವು ಎಲ್ಲವನ್ನ ಸಹಿಸಿಕೊಳ್ಳುವವರು. ಹಾಗಾಗಿ ತಾಳ್ಮೆಯಿಂದ ಇದ್ದೇವೆ. ಶಿವರಾಜ್ ಕುಮಾರ್ ಈಗಲೂ ಕಮಲ್ ಹಾಸನ್ ಬುದ್ದಿ ಹೇಳಿ. ಕನ್ನಡಿಗರಿಗೆ ಹೇಳೋದನ್ನ ಬಿಟ್ಟು ಬಿಡಿ. ಎಲ್ಲಾ ಕನ್ನಡದ ನಟ-ನಟಿಯರು ಕಮಲ್ ಹಾಸನ್ ಹೇಳಿಕೆಯನ್ನ ಖಂಡಿಸಿಬೇಕು. ಇಲ್ಲದಿದ್ದರೆ ನಿಮ್ಮನ್ನ ರಣಹೇಡಿಗಳು ಅಂತ ತೀರ್ಮಾನ ಮಾಡಿ, ಕನ್ನಡಿಗರು ಪಾಠ ಕಲಿಸುತ್ತಾರೆ. ಶಿವರಾಜ್ ಕುಮಾರ್‌ರನ್ನ ಭೇಟಿ ಮಾಡುತ್ತೇವೆ. ಒಂದಷ್ಟು ಕನ್ನಡದ ಇತಿಹಾಸದ ಪುಸ್ತಕಗಳನ್ನ ತೆಗೆದುಕೊಂಡು ಹೋಗಿ ಇತಿಹಾಸದ ಬಗ್ಗೆ ಹೇಳುತ್ತೇವೆ ಎಂದು ತಿರುಗೇಟು ನೀಡಿದರು.

  • ನಾರಾಯಣಗೌಡ ಸೇರಿದಂತೆ ಎಲ್ಲಾ ಕಾರ್ಯಕರ್ತರ ಬಿಡುಗಡೆ ಮಾಡಿ – ಡಿಸಿಎಂಗೆ ಕರವೇ ಮನವಿ

    ನಾರಾಯಣಗೌಡ ಸೇರಿದಂತೆ ಎಲ್ಲಾ ಕಾರ್ಯಕರ್ತರ ಬಿಡುಗಡೆ ಮಾಡಿ – ಡಿಸಿಎಂಗೆ ಕರವೇ ಮನವಿ

    ಬೆಂಗಳೂರು: ನಾರಾಯಣಗೌಡ (KaRaVe Narayana Gowda) ಸೇರಿದಂತೆ ಬಂಧಿಸಲಾಗಿರುವ ಕರವೇ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ನಾರಾಯಣಗೌಡ ಬಣದಿಂದ ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿಗೌಡ ನೇತೃತ್ವದ ನಿಯೋಗ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಿನಿಗೌಡ ಅವರು, ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಜೈಲಿಗೆ ಕಳುಹಿಸಲಾಗಿದೆ. ಹೋರಾಟಗಾರರ ಮನೆಗೆ ಪೊಲೀಸರು ನುಗ್ಗಿ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಪೊಲೀಸರ ದಬ್ಬಾಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನೀರಿನ ಅಭಾವ, ಕಬ್ಬಿಣ ಉತ್ಪಾದನೆಗೆ ಪೆಟ್ಟು – ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು

    ನಾರಾಯಣಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿ ಬಂಧನ ಮಾಡಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕರವೇ ಹಿತೈಷಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ನಾರಾಯಣಗೌಡ್ರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ಅವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಚಿಕಿತ್ಸೆ ಕೊಡಿಸಬೇಕು. ಜಾಮೀನು ಕೊಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ವಕೀಲರ ಬಳಿ ಚರ್ಚೆ ಮಾಡಿದ್ದೇವೆ. ಕಾನೂನಾತ್ಮಕ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಅವರನ್ನು ಹೊರಗೆ ಕರೆದುಕೊಂಡು ಬರುವ ಪ್ರಯತ್ನ ಸತತವಾಗಿ ನಡೆಯುತ್ತಿದೆ. ಕೇಸ್ ಕೈಬಿಡುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಬಂಧನ ಆಗಿರುವವರು ಬಿಡುಗಡೆಯಾಗಬೇಕು, ಆ ಬಳಿಕ ನಾವು ಮಾತನಾಡುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಕನ್ನಡ ಹೋರಾಟಗಾರರ ಕೇಸ್‍ನ್ನ ಪಾವಸ್ ಪಡೆಯುತ್ತೇವೆ ಎಂದು ಪ್ರತಿ ಸರ್ಕಾರ ಹೇಳಿಕೊಂಡು ಬಂದಿವೆ. ಅದನ್ನು ಎಷ್ಟರ ಮಟ್ಟಿಗೆ ನಂಬಬೇಕು ಎಂಬುದು ಗೊತ್ತಿಲ್ಲ. ಕನ್ನಡಿಗರ ಮೇಲೆ ಹಾಕಿರುವ ಕೇಸ್‍ನ್ನು ವಾಪಸ್ ಪಡೆಯಬೇಕು ಎಂದು ಡಿಸಿಎಂ ಬಳಿ ಹೇಳಿದ್ದೇವೆ. ಜೊತೆಗೆ ನಾರಾಯಣಗೌಡರಿಗೆ ಜೈಲಿನಲ್ಲಿ ಒಳ್ಳೆಯ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.

    ಹೋರಾಟಗಾರರಿಂದ ಸಾರ್ವಜನಿಕರ ಆಸ್ತಿ ಹಾನಿ ಎಂದು ಹೇಳುತ್ತಿದ್ದಾರೆ. ಅಲ್ಲಿ ಹಾಕಿರುವ ನಾಮಫಲಕಗಳು ಇಂಗ್ಲಿಷ್‍ನಲ್ಲಿ ಇದ್ದವು, ಬಿಬಿಎಂಪಿ ಆದೇಶದ ಪ್ರಕಾರ ನೋಡಿದರೆ ಅದು ಸಾರ್ವಜನಿಕ ಆಸ್ತಿಯಲ್ಲ. ನಾಮಫಲಕಗಳಲ್ಲಿ ಕನ್ನಡವೇ ಇಲ್ಲ, ಅದನ್ನು ಹೇಗೆ ಅಧಿಕೃತ ಎಂದು ಘೋಷಣೆ ಮಾಡುತ್ತೀರಾ? ಅದು ಅಧಿಕೃತ ಅಲ್ಲ ಎಂದ ಮೇಲೆ ಅದು ಸಾರ್ವಜನಿಕ ಆಸ್ತಿ ಹೇಗಾಗುತ್ತದೆ? ಬಿಬಿಎಂಪಿ ಅಧಿಕಾರಿಗಳು ಇದನ್ನು ನೋಡಬೇಕಿತ್ತು. ಎಲ್ಲಿ 60% ಕನ್ನಡ ಬೋರ್ಡ್ ಇರಲ್ವೋ ಅದನ್ನು ತೆಗೆಯುವ ಕೆಲಸ ಮಾಡಬೇಕಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಲೈಸೆನ್ಸ್ ರದ್ದು ಮಾಡಬೇಕಿತ್ತು. ಅದನ್ನ ಮಾಡಲಿಲ್ಲ, ಪೊಲೀಸರು ನಮ್ಮ ಮೇಲೆ ಕೇಸ್ ಹಾಕೋದಲ್ಲ, ಬಿಬಿಎಂಪಿ ಅಧಿಕಾರಿಗಳ ಮೇಲೆ ಕೇಸ್ ಹಾಕಿ ಒಳಗಡೆ ಕಳಿಸಬೇಕು. ಅಧಿಕಾರಿಗಳು ಮಾಡಬೇಕಾದ ಕೆಲಸ ನಾವು ಮಾಡಿದ್ದೇವೆ. ನಾವು ಬಹಳ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೆವು. ನಮ್ಮ ಹೋರಾಟವನ್ನು ಹತ್ತಿಕುವಂತಹ ಕೆಲಸವನ್ನು ಪೊಲೀಸರೇ ಮಾಡಿದ್ದಾರೆ. ಸಿವಿಲ್ ಡ್ರೆಸ್‍ನಲ್ಲಿ ಬಂದು ಕಾರ್ಯಕರ್ತರ ಜೊತೆ ಕಾರ್ಯಕರ್ತರಾಗಿ ನಿಂತು ಪ್ರಚೋದನೆ ಮಾಡುವ ಕೆಲಸ ಮಾಡಿದ್ದಾರೆ. ಇದೆಲ್ಲ ದಾಖಲೆಗಳು ನಮ್ಮ ಬಳಿ ಇವೆ ಎಂದಿದ್ದಾರೆ.

    ಇಷ್ಟು ವರ್ಷಗಳ ಹೋರಾಟಗಳಲ್ಲಿ ಎಲ್ಲಾ ತರದ ಕೇಸ್‍ಗಳು ಎಲ್ಲಾ ಸರ್ಕಾರಗಳನ್ನೂ ನೋಡಿದ್ದೇವೆ. ಪೊಲೀಸರ ಮೇಲೆ ದಾಳಿ ಮಾಡಿ ದಬ್ಬಾಳಿಕೆ ಮಾಡಿದ್ವಿ, ಕಲ್ಲೆಸೆದ್ವಿ ಅನ್ನೋದಕ್ಕೆ ದಾಖಲೆ ಕೊಡಲಿ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ 5 ಸಾವಿರ ವೇತನ ಹೆಚ್ಚಳ: ಸಚಿವ ಸುಧಾಕರ್‌

  • MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    ಧಾರವಾಡ: ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರನ್ನು ಬಗ್ಗು ಬಡಿಯಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಕಾರ್ಯಕರ್ತರು ರಾತ್ರೋರಾತ್ರಿ ಬೆಳಗಾವಿಗೆ ಬಂದಿದ್ದಾರೆ, ಇನ್ನು ಹಲವು ಕಾರ್ಯಕರ್ತರು ಬರುತ್ತಿದ್ದಾರೆ. ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ 12 ಗಂಟೆಗೆ ಸುವರ್ಣ ಸೌಧಕ್ಕೆ ಪಾದಯಾತ್ರೆ ಮೂಲಕ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರು ಈಗ ಕನ್ನಡದ ಬಾವುಟ ಸುಡುವುದು, ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡುವುದು, ಕನ್ನಡಿಗರ ವಾಹನ ಸುಡುವ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ. ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾವು ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ

    ನಮ್ಮ ಸರ್ಕಾರಗಳು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ. ಇದರಿಂದ ಅವರು ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತ್ತಿದ್ದಾರೆ. ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಈಗ ಬಂದಿದ್ದೇವೆ. 1999 ರಿಂದ ಇದನ್ನು ಎದುರಿಸಿಕೊಂಡೇ ಬಂದಿದ್ದೇವೆ. ಬೆಳಗಾವಿಗೆ 7 ಜನ ಎಂಇಎಸ್ ಶಾಸಕರು ಆಯ್ಕೆ ಆಗುತ್ತಿದ್ದರು, ಪಾಲಿಕೆಯಲ್ಲಿ ಸದಸ್ಯರು ಇರುತ್ತಿದ್ದರು. ಈಗ ಅವರು ಯಾರೂ ಇಲ್ಲ, ನೆಲಕಚ್ಚಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೇ ಅವರು ಗುಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಇವರನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ಸರ್ಕಾರ ರಣ ಹೇಡಿ ಸರ್ಕಾರ ಆಗಬಾರದು. ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ, ಇವರು ಪಾಕಿಸ್ತಾನದ ಭಯೋತ್ಪಾದಕರಂತೆ ಶಿವಸೇನೆ ಹಾಗೂ ಎಂಇಎಸ್‍ನವರು ಮಾಡುತ್ತಿದ್ದಾರೆ. ಅದಕ್ಕೆ ಇವರನ್ನು ಬಗ್ಗು ಬಡಿಯ ಬೇಕು. ಪೊಲೀಸರು ಏನಾದರೂ ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ, ಉದ್ದೇಶದಂತೆ ಬೆಳಗಾವಿಗೆ ಹೋಗಿ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.