Tag: ಕರವೆ ಕಾರ್ಯಕರ್ತರು

  • ದೇವರ ಉತ್ಸವದ ವೇಳೆ ಸ್ಥಳೀಯರು, ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ

    ದೇವರ ಉತ್ಸವದ ವೇಳೆ ಸ್ಥಳೀಯರು, ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ

    ಬೆಂಗಳೂರು: ಕನ್ನಡ ಹಾಡುಗಳನ್ನು ಬಳಸಿಲ್ಲ ಎಂಬ ಕಾರಣಕ್ಕೆ ಸ್ಥಳೀಯರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಜೆಜೆ ನಗರ ಬಳಿಯ ಮಾರ್ಕಂಡೇಶ್ವರ ನಗರದಲ್ಲಿ ಗಂಗಮ್ಮ ದೇವಿ ಉತ್ಸವ ವೇಳೆ ಮನರಂಜನೆಗಾಗಿ ಆರ್ಕೆಸ್ಟ್ರಾ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಕದೇ ಕೇವಲ ತಮಿಳು ಹಾಡನ್ನು ಹಾಕಿದ್ದನ್ನು ಕರವೇ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

    ಈ ಆರ್ಕೆಸ್ಟ್ರಾದ ಉಸ್ತುವಾರಿಯನ್ನು ರೌಡಿಶೀಟರ್‍ ಗಳಾದ ಲವ, ಕುಶ ನೋಡಿಕೊಳ್ಳುತ್ತಿದ್ದು, ತಮಿಳು ಹಾಡುಗಳನ್ನು ಹಾಡದಂತೆ ಕರವೇ ಕಾರ್ಯಕರ್ತರು ಮನವಿ ಮಾಡಿಕೊಂಡರು ಅವರ ಮಾತಿಗೆ ಕಿವಿ ಕೊಡದೆ ತಮಿಳು ಸಾಂಗ್ ಹಾಕಿದ್ದ ಕಾರಣ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

    ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಜೆಜೆ ನಗರ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.