Tag: ಕರಣ್ ಮೆಹ್ರಾ

  • ರಾಜೀವ್ ಸೇನ್ ಪತ್ನಿ ಜೊತೆ ನನಗೆ ಅನೈತಿಕ ಸಂಬಂಧವಿಲ್ಲ: ನಟ ಕರಣ್ ಮೆಹ್ರಾ

    ರಾಜೀವ್ ಸೇನ್ ಪತ್ನಿ ಜೊತೆ ನನಗೆ ಅನೈತಿಕ ಸಂಬಂಧವಿಲ್ಲ: ನಟ ಕರಣ್ ಮೆಹ್ರಾ

    ತನ್ನ ಪತ್ನಿಯ ಜೊತೆ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾಗೆ (Karan Mehra) ಅನೈತಿಕ ಸಂಬಂಧವಿದೆ ಎಂದು ಸುಸ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಆರೋಪ ಮಾಡಿದ್ದರು. ತಮ್ಮ ಪತ್ನಿ ಚಾರು(Charu) ಮತ್ತು ಕರಣ್ ಮೆಹ್ರಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಕರಣ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೂ ಚಾರುಗೂ ಯಾವುದೇ ಸಂಬಂಧವಿಲ್ಲ. ಹತ್ತು ವರ್ಷಗಳಿಂದ ಅವರನ್ನು ನಾನು ಭೇಟಿ ಕೂಡ ಆಗಿರಲಿಲ್ಲ. ಜೂನ್ ನಲ್ಲಿ ಪ್ರಚಾರದ ವೇಳೆ ಕೆಲವೇ ನಿಮಿಷಗಳ ಭೇಟಿ ಆಗಿತ್ತು ಅಷ್ಟೆ. ಆದರೆ, ಅವರು ಯಾವ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ.  ಅಲ್ಲದೇ ರಾಜೀವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

    ರಾಜೀವ್ (Rajeev Sen) ಮತ್ತು ಚಾರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಕಲಹ ಬೀದಿಗೂ ಬಿದ್ದಿದೆ. ರಾಜೀವ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕಾಗಿ ಚಾರು ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಹೀಗಾಗಿ ರಾಜೀವ್ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಎನ್ನುವವರ ಜೊತೆ ಸಂಬಂಧ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚಾರು ತಾಯಿಯೇ ತಮಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಅವಳಿಂದಾಗಿ ನನಗೆ ಮೋಸವಾಗಿದೆ ಎನ್ನುವ ಆರೋಪ ಕೂಡ ರಾಜೀವ್ ಅವರದ್ದು. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ಚಾರು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಾನು ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಪತಿಯಿಂದ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ದಾಂಪತ್ಯದಲ್ಲಿ ನನಗೆ ದ್ರೋಹ ಮಾಡಿದ್ದನ್ನು ಕ್ಷಮಿಸುವುದಿಲ್ಲ ಎಂದು ಚಾರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಇಬ್ಬರ ಜಗಳ ಈಗಾಗಲೇ ಬೀದಿರಂಪ ಆಗಿದೆ. ಆರೋಪ ಪ್ರತ್ಯಾರೋಪ ಇಬ್ಬರ ಜೀವನವನ್ನು ಯಾವ ಕಡೆ ತಗೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯಿಂದ ಬಹಿರಂಗವಾಯ್ತು ನಟ ಕರಣ್ ಮೆಹ್ರಾ ಅನೈತಿಕ ಸಂಬಂಧ

    ಪತ್ನಿಯಿಂದ ಬಹಿರಂಗವಾಯ್ತು ನಟ ಕರಣ್ ಮೆಹ್ರಾ ಅನೈತಿಕ ಸಂಬಂಧ

    ಮುಂಬೈ: ಹಿಂದಿ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ನಟ ಕರಣ್ ಮೆಹ್ರಾರವರ ಪತ್ನಿ ನಿಶಾ ಗಂಡನ ಅನೈತಿಕ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಶಾರವರು, ನಾನು ಕರಣ್ ಮೆಹ್ರಾ 5 ವರ್ಷ ಪ್ರೀತಿಸಿ ನಂತರ ಮದುವೆಯಾಗಿ ಈಗ 9 ವರ್ಷ ಕಳೆದಿದೆ. ಒಂದು ತಿಂಗಳ ಹಿಂದೆ ಕರಣ್ ಚಂಡೀಗಢದಲ್ಲಿದ್ದರು. ಈ ವೇಳೆ ಕರಣ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಚಾರ ಬಯಲಾಯಿತು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ ಕರಣ್ ಕೂಡ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದರು. ಇದನ್ನು ಓದಿ:ಪತ್ನಿಯನ್ನು ಕೊಂದ ಆರೋಪದ ಮೇಲೆ ಯೂಟ್ಯೂಬರ್ ಬಂಧನ

    ಕರಣ್ ಚಂಡೀಗಢಕ್ಕೆ ಚಿತ್ರೀಕರಣಕ್ಕೆ ಹೋದಾಗಲೆಲ್ಲಾ ದೆಹಲಿ ಮೂಲದ ಮಹಿಳೆ ಭೇಟಿ ಮಾಡುತ್ತಿದ್ದಳು. ಹೀಗೆ ಇಬ್ಬರು ಪ್ರೀತಿಸಿ, ದೈಹಿಕ ಸಂಪರ್ಕವನ್ನು ಕೂಡ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಮೊದಲಿಗೆ ಕರಣ್ ಆಫೇರ್ ಇಟ್ಟುಕೊಂಡಿದ್ದ ಬಗ್ಗೆ ಗೊತ್ತಾದಾಗ ನಾನು ಅವರ ಮೇಲೆ ಕೂಗಾಡಲಿಲ್ಲ. ಜಗಳ ಮಾಡಲಿಲ್ಲ. ಬದಲಿಗೆ ಸಮಾಧಾನದಿಂದ ಪ್ರಶ್ನಿಸಿದೆ. ಆಗ ಅವರು ಸತ್ಯ ಒಪ್ಪಿಕೊಂಡರು. ಮೊದಲಿನಂತೆ ಬದಲಾಗಿದ್ದಾರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಕರಣ್ ಬದಲಾಗಲಿಲ್ಲ. ಅಲ್ಲದೆ ಕರಣ್ ನನಗೆ ಸದಾ ಹೊಡೆಯುತ್ತಿದ್ದರು. ಇಷ್ಟು ವರ್ಷ ಕರಣ್ ಮೇಲಿನ ಪ್ರೀತಿಗಾಗಿ ಸಹಿಸಿಕೊಂಡಿದ್ದೆ. ಆದರೆ ಈಗ ಏನು ಉಳಿದಿಲ್ಲ ಎಂದು ಹೇಳಿ ಭಾವುಕರಾದರು.