Tag: ಕರಣ್ ಜೋಹಾರ್

  • ಸುಶಾಂತ್ ಸಿಂಗ್ ಸಾವಿಗೆ ರಣಬೀರ್, ಕರಣ್ ಜೋಹರ್ ಕಾರಣ : ಬೆಂಕಿ ಉಗುಳಿದ ಕಂಗನಾ

    ಸುಶಾಂತ್ ಸಿಂಗ್ ಸಾವಿಗೆ ರಣಬೀರ್, ಕರಣ್ ಜೋಹರ್ ಕಾರಣ : ಬೆಂಕಿ ಉಗುಳಿದ ಕಂಗನಾ

    ಬಾಲಿವುಡ್ ನಟರಾದ ರಣಬೀರ್ ಕಪೂರ್ ಹಾಗೂ ನಿರ್ದೇಶಕ ಕರಣ್ ಜೋಹರ್ (Karan Johar) ಮೇಲೆ ನಟಿ ಕಂಗನಾ ರಣಾವತ್ ನಿರಂತರ ದಾಳಿ ಮಾಡುತ್ತಲೇ ಇದ್ದಾರೆ. ನಿನ್ನೆಯಷ್ಟೇ ರಣಬೀರ್ ಕಪೂರ್ ಅವರನ್ನು ಬಿಳಿ ಇಲಿಗೆ ಹೋಲಿಸಿದ್ದ ಕಂಗನಾ ಇವತ್ತು ಸುಶಾಂತ್ ಸಿಂಗ್ ಸಾವನ್ನು ಎಳೆತಂದಿದ್ದಾರೆ. ಸುಶಾಂತ್ (Sushant Singh) ಸಾವಿಗೆ ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಕಾರಣವೆಂದು ಬರೆದುಕೊಂಡಿದ್ದಾರೆ. ಅಲ್ಲದೇ ರಣಬೀರ್ ಅವರನ್ನು ದುರ್ಯೋಧನನಿಗೆ ಕರಣ್ ಜೋಹರ್ ಅವರನ್ನು ಶಕುನಿ ಹೋಲಿಸಿದ್ದಾರೆ.

    ನಿನ್ನೆಯಷ್ಟೇ ರಣಬೀರ್ ಕಪೂರ್, ಆಲಿಯಾ ಭಟ್ ನಟಿಸುತ್ತಾರೆ ಎನ್ನಲಾದ ರಾಮಾಯಣ ಸಿನಿಮಾ ಬಗ್ಗೆಯೂ ಕಂಗನಾ ಮಾತನಾಡಿದ್ದರು. ಬಾಲಿವುಡ್ ನಲ್ಲಿ ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್‍ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.

    ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.

    ಇದರ ಜೊತೆಗೆ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದಾರೆ. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದಾರೆ. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದಾರೆ. ಇದನ್ನೂ ಓದಿ:ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದಾರೆ.

     

    ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಗೆ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದಾರೆ.

  • ಕರಣ್ ಜೋಹಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ

    ಕರಣ್ ಜೋಹಾರ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ

    ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧದ ವಾಗ್ದಾಳಿಯನ್ನು ನಟಿ ಕಂಗನಾ ರಣಾವತ್ (Kangana Ranaut) ಮುಂದುವರೆಸಿದ್ದಾರೆ. ನಿರಂತರವಾಗಿ ಕರಣ್ ವಿರುದ್ಧ ಪೋಸ್ಟ್ ಮಾಡುತ್ತಿರುವ ಅವರು, ಇದೀಗ ‘ಚಾಚಾ ಚೌಧರಿ’ ಎಂದು ಜರಿದಿದ್ದಾರೆ. ನಾನು ನಿರ್ಮಾಪಕಿಯಾಗಿ ಯಶಸ್ವಿಯಾದರೆ ನಿನ್ನ ಮುಖಕ್ಕೆ ಉಜ್ಜುತ್ತೇನೆ ಎಂದು ಗುಡುಗಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಂಗನಾ, ನೇರವಾಗಿ ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಕರಣ್ ಕೂಡ ಇದ್ದಾರೆ ಎಂದಿದ್ದಾರೆ. ಈ ಮಾತು ಸಾಕಷ್ಟು ವಿವಾದವನ್ನು (controversy) ಎಬ್ಬಿಸಿತ್ತು. ಅಲ್ಲಿಂದ ಕಂಗನಾ ಮತ್ತು ಕರಣ್ ಹಾವು ಮುಂಗಸಿ ರೀತಿಯಲ್ಲಿ ಕಿತ್ತಾಡುವುದಕ್ಕೆ ಶುರು ಮಾಡಿದರು. ಕರಣ್ ಬಗ್ಗೆ ಯಾರೇ ನೆಗೆಟಿವ್ ಕಾಮೆಂಟ್ ಮಾಡಿದರೂ, ಕಂಗನಾ ಅವರ ಪರವಾಗಿ ನಿಂತುಕೊಳ್ಳುತ್ತಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಮೊನ್ನೆಯಷ್ಟೇ ಕರಣ್ ವಿಚಾರವಾಗಿ ಅನುಷ್ಕಾ ಶರ್ಮಾ ಬೆನ್ನಿಗೆ ನಿಂತಿದ್ದರು ಕಂಗನಾ.  2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್  ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.

    ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದರು. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದರು.

    ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.

  • ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಬಾಲಿವುಡ್ (Bollywood) ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್ (Karan Johar) ಕಂಡರೆ ಕಂಗನಾ ರಣಾವತ್ (Kangana Ranaut) ಗೆ ಅದೇನಾಗತ್ತೋ ಗೊತ್ತಿಲ್ಲ. ಕರಣ್ ಹೆಸರು ಕೇಳಿ ಬಂದಾಗೆಲ್ಲ ಕಂಗನಾ ಕೆಂಡವಾಗುತ್ತಾರೆ. ಅದರಲ್ಲೂ ಕರಣ್ ಬಗ್ಗೆ ಯಾರಾದರೂ ನೆಗೆಟಿವ್ ಮಾತನಾಡಿದರೆ, ಅವರ ಬೆನ್ನಿಗೆ ನಿಲ್ಲುತ್ತಾರೆ. ಇದೀಗ ಹಳೆ ವಿಡಿಯೋ ವಿಚಾರವಾಗಿ ಮತ್ತೆ ಗುಡುಗಿದ್ದಾರೆ ಬಿಟೌನ್ ಅಂದಗಾತಿ ಕಂಗನಾ.

    2016ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ಕರಣ್ ಜೋಹಾರ್ ವೇದಿಕೆಯ ಮೇಲಿದ್ದರು. ಆ ಸಮಯದಲ್ಲಿ ಕರಣ್ ಮಾತನಾಡುತ್ತಾ, ‘ಅನುಷ್ಕಾಳ ಕರಿಯರ್  ನಾಶ ಮಾಡಬೇಕು ಎಂದುಕೊಂಡಿದ್ದೆ’ ಎನ್ನುತ್ತಾರೆ. ಅದಕ್ಕೆ ಅವರು ಕಾರಣವನ್ನೂ ಕೊಡುತ್ತಾರೆ. ಅನುಷ್ಕಾ ನಟನೆಯ ಚೊಚ್ಚಲು ಚಿತ್ರಕ್ಕೆ ಆಯ್ಕೆ ಆಗುವ ಮುನ್ನ, ಅವರ ಫೋಟೋವನ್ನು ನಿರ್ದೇಶಕರು ನನ್ನ ಬಳಿ ತಂದಿದ್ದರು. ಅನುಷ್ಕಾ ಫೋಟೋ ನೋಡಿ, ಇವರು ಬೇಡ ಅಂದಿದ್ದೆ. ನನ್ನ ಹತ್ತಿರವೇ ಒಬ್ಬಳು ನಾಯಕಿ ಇದ್ದಾಳೆ ಎಂದೂ ಹೇಳಿದ್ದೆ. ಕೊನೆಗೂ ಅನುಷ್ಕಾ ಅವರೇ ಆಯ್ಕೆಯಾದರು’ ಎಂದಿದ್ದರು.

    ಈ ವಿಚಾರವಾಗಿ ಕಂಗನಾ ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ‘ಕರಣ್ ಜೋಹಾರ್ ಇಂತಹ ಕೆಲಸಗಳನ್ನು ಮಾಡಲು ಫೇಮಸ್. ಯಾರದ್ದೆಲ್ಲ ಕರಿಯರ್ ನಾಶ ಮಾಡಿದ್ದಾರೆ ಎನ್ನುವ ಪಟ್ಟಿ ನನ್ನ ಬಳಿ ಇದೆ. ಇಂತಹ ಕೆಲಸ ಮಾಡಲೆಂದು ಅವರು ಇರುವುದು’ ಎಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಕಂಗನಾ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರಣ್ ಜೋಹಾರ್ ಬಗ್ಗೆ ಮತ್ತಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಬರೆಯಲಾಗುತ್ತಿದೆ. ಯಾರಿಗೆಲ್ಲ ಕರಣ್ ತೊಂದರೆ ಕೊಟ್ಟಿದ್ದಾರೆ ಎನ್ನುವ ಒಂದೊಂದೇ ಹೆಸರುಗಳನ್ನು ನೆಟ್ಟಿಗರು ಹಾಕುತ್ತಿದ್ದಾರೆ. ಅಲ್ಲಿಗೆ ಕಂಗನಾ ಹೊಡೆದ ಕಲ್ಲು ಹಲವು ದಿಕ್ಕುಗಳನ್ನು ಆವರಿಸುತ್ತಿದೆ.

  • ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ಕರಣ್ ಜೋಹಾರ್ ನ ತಬ್ಬಿಕೊಂಡ ಪ್ರಿಯಾಂಕಾ : ಕಂಗನಾ ಈಗ ಏನ್ ಹೇಳ್ಬೋದು?

    ದ್ಯ ಹಾಲಿವುಡ್ ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಬಿಡುವುದಕ್ಕೆ ನಿರ್ಮಾಪಕ, ನಿರ್ದೇಶಕ ಕರಣ್ ಜೋಹಾರ್ (Karan Johar) ಕಾರಣ ಎಂದು ಮೊನ್ನೆಯಷ್ಟೇ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಇದಕ್ಕೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಧ್ವನಿಗೂಡಿಸಿದ್ದರು. ಈ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಕಂಗನಾ ಹಚ್ಚಿರುವ ಬೆಂಕಿ ಇನ್ನೂ ಉರಿಯುತ್ತಿರುವಾಗಲೇ ಬಾಲಿವುಡ್ ಗೆ ಬಂದಿಳಿದಿದ್ದಾರೆ ಪ್ರಿಯಾಂಕಾ ಚೋಪ್ರಾ.

    ಅಂಬಾನಿ (Ambani) ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮೊದಲ ಬಾರಿಗೆ ಮಗಳ ಜೊತೆ ಆಗಮಿಸಿರುವ ಪ್ರಿಯಾಂಕಾ ಚೋಪ್ರಾಗೆ ಅಚ್ಚರಿಯ ಕ್ಷಣವೊಂದು ಎದುರಾಯಿತು. ಕಂಗನಾ ಯಾರು ಮೇಲೆ ಆರೋಪ ಮಾಡಿದ್ದರೋ, ಅವರೇ ಪ್ರಿಯಾಂಕಾಗೆ ಎದುರಾಗಿ ತಬ್ಬಿಕೊಂಡ ಘಟನೆ ನಡೆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರಣ್ ಜೋಹಾರ್ ಮತ್ತು ಪ್ರಿಯಾಂಕಾ ಪರಸ್ಪರ ತಬ್ಬಿಕೊಂಡು ಮತ್ತೊಂದು ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

    ಈ ದೃಶ್ಯವನ್ನು ಕ್ಯಾಮೆರಾಗಳು ಕೂಡ ಅಚ್ಚರಿಯಿಂದಲೇ ಸೆರೆ ಹಿಡಿದಿವೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿವೆ. ಅಲ್ಲದೇ, ಈ ದೃಶ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೆಲವರು ಕಂಗನಾ ರಣಾವತ್ ಅವರಿಗೆ ಕಾಲೆಳೆದಿದ್ದಾರೆ. ಈ ವಿಡಿಯೋ ಕುರಿತಾಗಿ ಈವರೆಗೂ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏನು ಹೇಳುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ.

    ನಿನ್ನೆ ನಡೆದ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಹಾಜರಿದ್ದರು. ದೀಪಿಕಾ ಪಡುಕೋಣೆ, ರಣವೀರ್ ಸೇರಿದಂತೆ ಇಡೀ ಚಿತ್ರೋದ್ಯಮವೇ ಈ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಈ ಕಾರ್ಯಕ್ರಮದ ಸಲುವಾಗಿಯೇ ಪತಿ ಮತ್ತು ಮಗಳ ಜೊತೆ ಪ್ರಿಯಾಂಕಾ ಚೋಪ್ರಾ ಕೂಡ ಆಗಮಿಸಿದ್ದರು.

  • ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಬಾಂಬ್ ಸಿಡಿಸಿದ ಕಂಗನಾ

    ಪ್ರಿಯಾಂಕಾ ಬಾಲಿವುಡ್ ಬಿಡೋಕೆ ಕರಣ್ ಜೋಹಾರ್ ಕಾರಣ: ಬಾಂಬ್ ಸಿಡಿಸಿದ ಕಂಗನಾ

    ಬಾಲಿವುಡ್ (Bollywood) ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ವಿದೇಶದಲ್ಲಿ ನೆಲೆಸಲು ಹಾಗೂ ಬಾಲಿವುಡ್ ನಿಂದ ದೂರವಾಗಲು ಕಾರಣ ಕರಣ್ ಜೋಹಾರ್ ಎಂದು ಹೇಳುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ನಟಿ ಕಂಗನಾ ರಣಾವತ್ (Kangana Ranaut). ನೇರವಾಗಿ ಕಂಗನಾ ಸೋಷಿಯಲ್ ಮೀಡಿಯಾದಲ್ಲೇ ಈ ಕುರಿತು ಬರೆದುಕೊಂಡಿದ್ದಾರೆ. ಕರಣ್ ಜೋಹಾರ್ (Karan Johar) ಮೇಲೆ ಮಾಡಿರುವ ಗಂಭೀರ ಆರೋಪ ಬಾಲಿವುಡ್ ನಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕಾ, ‘ನಾನು ಬಾಲಿವುಡ್ ನಿಂದ ದೂರವಾಗಲು ಮತ್ತು ಅಲ್ಲಿನ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ರಾಜಕೀಯ. ಎಲ್ಲೋ ಒಂದು ಕಡೆ ನನ್ನನ್ನು ತುಳಿಯುವುದಕ್ಕೆ ಶುರು ಮಾಡಿದ್ದಾರೆ ಅನಿಸಿತು. ಅವಕಾಶ ಇಲ್ಲದಂತೆ ಮಾಡಲಾಗುತ್ತಿದೆ ಎನ್ನುವ ವಿಚಾರ ಗೊತ್ತಾಯಿತು. ಹೀಗಾಗಿ ನಾನು ಹಾಲಿವುಡ್ ಚಿತ್ರಗಳನ್ನು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಪ್ರಿಯಾಂಕಾ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆಯೇ ಈ ಅಖಾಡಕ್ಕೆ ಕಂಗನಾ ಇಳಿದಿದ್ದು, ನೇರವಾಗಿ ಕರಣ್ ಜೋಹಾರ್ ಬಗ್ಗೆಯೇ ಆರೋಪ ಮಾಡಿದ್ದಾರೆ. ‘ಕರಣ್ ಜೋಹಾರ್ ನಿಮ್ಮನ್ನು ಬ್ಯಾನ್ ಮಾಡಿದ್ದರು. ಹಲವರು ಗುಂಪು ಕಟ್ಟಿಕೊಂಡು ಓಡಿಸಿದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಬಾಲಿವುಡ್ ಬಿಟ್ಟರು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಕಂಗನಾ ರಣಾವತ್.

    ನೇರ ಮಾತುಗಳಿಂದಾಗಿಯೇ ಕಂಗನಾ ಸುಖಾಸುಮ್ಮನೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಅದರಲ್ಲೂ ಕರಣ್ ಜೋಹಾರ್ ವಿಷಯದಲ್ಲಿ ಸದಾ ಆರೋಪ ಮಾಡುತ್ತಲೇ ಇದ್ದಾರೆ. ಈ ಬಾರಿಯೂ ಕರಣ್ ಮೇಲೆಯೇ ಆರೋಪ ಮಾಡಿರುವ ಕಂಗನಾ, ಒಂದು ಕಾಲದ ವಿರೋಧಿಯಾಗಿದ್ದ ಪ್ರಿಯಾಂಕಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.

  • ‘ಸೆಲ್ಫೀ’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗಪಡಿಸಿದ ಕಂಗನಾ: ಅಕ್ಷಯ್ ಚಿತ್ರಗಳಿಸಿದ್ದು 10 ಲಕ್ಷವಾ?

    ‘ಸೆಲ್ಫೀ’ ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗಪಡಿಸಿದ ಕಂಗನಾ: ಅಕ್ಷಯ್ ಚಿತ್ರಗಳಿಸಿದ್ದು 10 ಲಕ್ಷವಾ?

    ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತೆ ನಿರ್ಮಾಪಕ ಕರಣ್ ಜೋಹಾರ್ (Karan Johar) ವಿರುದ್ಧ ಯುದ್ಧ ಸಾರಿದ್ದಾರೆ. ಕರಣ್ ಕೂಡ ಹಣ ಹೂಡಿರುವ ‘ಸೆಲ್ಫೀ’ (Selfie) ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ ಈ ಪ್ರಮಾಣದಲ್ಲಿ ಹೀನಾಯವಾಗಿ ಸೋಲ್ತಿದೆಯಾ ಎಂದು ಅನುಮಾನ ಬರುವಂತೆ ಹಣದ ಲೆಕ್ಕಹಾಕಿದ್ದಾರೆ.

    ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದಂತೆ ಸೆಲ್ಫೀ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಮೂರು ಕೋಟಿ ಎಂದು ಅಂದಾಜಿಸಲಾಗಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಹಣ ಗಳಿಸಿದ ಸಿನಿಮಾ ಎನ್ನುವ ಅಪಕೀರ್ತಿಗೂ ಕಾರಣವಾಗಿದೆ. ಈ ನಡುವೆ ಉರಿವ ಬೆಂಕಿಗೆ ತುಪ್ಪ ಹಾಕುವಂತೆ ಕಂಗನಾ ತಮ್ಮದೇ ಆದ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ ಹತ್ತು ಲಕ್ಷ ರೂಪಾಯಿ ಮಾತ್ರ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ ಯುವ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿನಾ? ಸ್ಪಷ್ಟನೆ ನೀಡಿದ ನಟಿ

    ಕಂಗನಾ ನಟನೆಯ ‘ಧಾಕಡ್’ ಸಿನಿಮಾ ರಿಲೀಸ್ ಆದಾಗ ಬಾಲಿವುಡ್ ನ ಅನೇಕರು  ಚಿತ್ರವನ್ನು ಸೋಲಿಸಲು ನಾನಾ ರೀತಿಯಲ್ಲಿ ಪ್ರಯತ್ನಪಟ್ಟರಂತೆ. ಮೊದಲ ದಿನದ ಕಲೆಕ್ಷನ್ ಬಗ್ಗೆ ಮಾತನಾಡಿದರಂತೆ. ಮೊದಲ ದಿನವೇ ಸಿನಿಮಾ ಸೋತಿದೆ ಎಂದು ಅಪಪ್ರಚಾರ ಮಾಡಿದರಂತೆ. ಆದರೆ, ಸೆಲ್ಫೀ ಬಗ್ಗೆ ಯಾರೂ, ಏಕೆ ಮಾತನಾಡುತ್ತಿಲ್ಲ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ. ತಮಗೆ ಅಪಹಾಸ್ಯ ಮಾಡಿದಂತೆ ಸೆಲ್ಫೀ ತಂಡಕ್ಕೆ ಯಾರೂ ಏಕೆ ಅಪಹಾಸ್ಯ ಮಾಡುತ್ತಿಲ್ಲ ಎಂದು ಕೇಳಿದ್ದಾರೆ.

  • ಆಲಿಯಾ ರಣಬೀರ್ ಮಗು ನೋಡೋಕೆ ಕೋವಿಡ್ ಟೆಸ್ಟ್ ಕಡ್ಡಾಯ

    ಆಲಿಯಾ ರಣಬೀರ್ ಮಗು ನೋಡೋಕೆ ಕೋವಿಡ್ ಟೆಸ್ಟ್ ಕಡ್ಡಾಯ

    ಬಾಲಿವುಡ್ ತಾರಾ ಜೋಡಿ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ದಂಪತಿ ಮಗು ನೋಡಲು ಕೋವಿಡ್ (Covid) ಟೆಸ್ಟ್ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ಹೇಳಲಾಗುತ್ತಿದೆ. ಮನೆಯವರೂ ಸೇರಿದಂತೆ ಮಗು ನೋಡಲು ಬರುವ ಪ್ರತಿಯೊಬ್ಬರೂ ಈ ನಿಯಮವನ್ನು ಚಾಚೂ ತಪ್ಪದೇ ಪಾಲಿಸಲೇಬೇಕು ಎಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಿರ್ಧರಿಸಿದ್ದಾರೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು, ಈಗಾಗಲೇ ಮನೆ ಸೇರಿರುವ ಆಲಿಯಾ, ಮಗುವಿನೊಂದಿಗೆ ಖುಷಿ ಕ್ಷಣಗಳನ್ನು ಕಳೆಯುತ್ತಿದ್ದಾರೆ.

    ಆಲಿಯಾ ಭಟ್ ಮಗುವಿಗೆ ಜನ್ಮ ಕೊಟ್ಟಾಗ ಬಾಲಿವುಡ್ ನಿರ್ಮಾಪಕ ಕಂ ನಿರ್ದೇಶಕ ಕರಣ್ ಜೋಹಾರ್ (Karan Johar) ಈ ದೇಶದಲ್ಲೇ ಇರಲಿಲ್ಲವಂತೆ. ಹಾಗಾಗಿ ಅಂದು ಆಲಿಯಾ ಭಟ್ ನ ಮೀಟ್ ಮಾಡಿ, ಮಗುವನ್ನು ನೋಡುವುದಕ್ಕೆ ಆಗಿರಲಿಲ್ಲ. ದೇಶಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಗು ನೋಡಲು ಹೋಗಿದ್ದಾರೆ ಕರಣ್ ಜೋಹಾರ್. ಇದನ್ನೂ ಓದಿ:ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

    ಕೋವಿಡ್ ಈಗಲೂ ಅಲ್ಲಲ್ಲಿ ಇರುವಾಗ, ಆಲಿಯಾ ಭಟ್ ತಮ್ಮ ಮಗುವನ್ನು ನೋಡಲು ಯಾರಿಗೂ ಬಿಡುತ್ತಿಲ್ಲವಂತೆ. ಸ್ವತಃ ಕುಟುಂಬದ ಸದಸ್ಯರು ಕೂಡ ಮಗುವಿನ ಹತ್ತಿರಕ್ಕೆ ಬರಲು ಒಪ್ಪುತ್ತಿಲ್ಲವಂತೆ. ಈ ಕಾರಣದಿಂದಾಗಿಯೇ ಕರಣ್ ಜೋಹಾರ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನಂತರ ಮಗುವನ್ನು ನೋಡಿದ್ದಾರಂತೆ. ಆಲಿಯಾ ಭಟ್ ಮಗುವನ್ನು ಪ್ರಥಮ ಬಾರಿಗೆ ಎತ್ತಿಕೊಂಡ ಸಿಲೆಬ್ರಿಟಿ ಕರಣ್ ಎನ್ನುವುದು ವಿಶೇಷ.

    ಆಲಿಯಾ ಭಟ್ ಮೇಲೆ ಕರಣ್ ಜೋಹಾರ್ ಗೆ ವಿಶೇಷ ಪ್ರೀತಿ. ಆಲಿಯಾ ಮದುವೆಯಾದ ದಿನ ಕರಣ್ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟರ ಮಟ್ಟಿಗೆ ಆಲಿಯಾರನ್ನು ಅಭಿಮಾನಿಸುತ್ತಾರೆ ಕರಣ್. ಹೀಗಾಗಿ ತಮ್ಮ ಮಗುವನ್ನು ನೋಡಲು ಕರಣ್ ಗೆ ಅವಕಾಶ ನೀಡಿದ್ದಾರೆ ಆಲಿಯಾ ಮತ್ತು ಕಪೂರ್. ಹೆಣ್ಣು ಮಗುವನ್ನು ಕಂಡು ಕರಣ್ ಮುದ್ದಾಡಿದ್ದಾರೆ. ವಿಶೇಷ ಉಡುಗೊರೆಯನ್ನೂ ಅವರು ನೀಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಆಲಿಯಾ ಭಟ್ ಮಗುನ ನೋಡೋಕೆ ಬಂದ ಕರಣ್

    ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಆಲಿಯಾ ಭಟ್ ಮಗುನ ನೋಡೋಕೆ ಬಂದ ಕರಣ್

    ಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ದಂಪತಿಗೆ ಮೊನ್ನೆಯಷ್ಟೇ ಹೆಣ್ಣು ಮಗುವಾಗಿದೆ. ಈಗಾಗಲೇ ಮಗುವನ್ನು ಕರೆದುಕೊಂಡು ಆಸ್ಪತ್ರೆಯಿಂದ ಮನೆಗೂ ಬಂದಾಗಿದೆ. ಆಲಿಯಾ ಭಟ್ ಮಗುವಿಗೆ ಜನ್ಮ ಕೊಟ್ಟಾಗ ಬಾಲಿವುಡ್ ನಿರ್ಮಾಪಕ ಕಂ ನಿರ್ದೇಶಕ ಕರಣ್ ಜೋಹಾರ್ ಈ ದೇಶದಲ್ಲೇ ಇರಲಿಲ್ಲವಂತೆ. ಹಾಗಾಗಿ ಅಂದು ಆಲಿಯಾ ಭಟ್ ನ ಮೀಟ್ ಮಾಡಿ, ಮಗುವನ್ನು ನೋಡುವುದಕ್ಕೆ ಆಗಿರಲಿಲ್ಲ. ದೇಶಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಗು ನೋಡಲು ಹೋಗಿದ್ದಾರೆ ಕರಣ್ ಜೋಹಾರ್.

    ಕೋವಿಡ್ ಈಗಲೂ ಅಲ್ಲಲ್ಲಿ ಇರುವಾಗ, ಆಲಿಯಾ ಭಟ್ ತಮ್ಮ ಮಗುವನ್ನು ನೋಡಲು ಯಾರಿಗೂ ಬಿಡುತ್ತಿಲ್ಲವಂತೆ. ಸ್ವತಃ ಕುಟುಂಬದ ಸದಸ್ಯರು ಕೂಡ ಮಗುವಿನ ಹತ್ತಿರಕ್ಕೆ ಬರಲು ಒಪ್ಪುತ್ತಿಲ್ಲವಂತೆ. ಈ ಕಾರಣದಿಂದಾಗಿಯೇ ಕರಣ್ ಜೋಹಾರ್ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನಂತರ ಮಗುವನ್ನು ನೋಡಿದ್ದಾರಂತೆ. ಆಲಿಯಾ ಭಟ್ ಮಗುವನ್ನು ಪ್ರಥಮ ಬಾರಿಗೆ ಎತ್ತಿಕೊಂಡ ಸಿಲೆಬ್ರಿಟಿ ಕರಣ್ ಎನ್ನುವುದು ವಿಶೇಷ. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಆಲಿಯಾ ಭಟ್ ಮೇಲೆ ಕರಣ್ ಜೋಹಾರ್ (Karan Johar) ಗೆ ವಿಶೇಷ ಪ್ರೀತಿ. ಆಲಿಯಾ ಮದುವೆಯಾದ ದಿನ ಕರಣ್ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟರ ಮಟ್ಟಿಗೆ ಆಲಿಯಾರನ್ನು ಅಭಿಮಾನಿಸುತ್ತಾರೆ ಕರಣ್. ಹೀಗಾಗಿ ತಮ್ಮ ಮಗುವನ್ನು ನೋಡಲು ಕರಣ್ ಗೆ ಅವಕಾಶ ನೀಡಿದ್ದಾರೆ ಆಲಿಯಾ ಮತ್ತು ಕಪೂರ್. ಹೆಣ್ಣು ಮಗುವನ್ನು ಕಂಡು ಕರಣ್ ಮುದ್ದಾಡಿದ್ದಾರೆ. ವಿಶೇಷ ಉಡುಗೊರೆಯನ್ನೂ ಅವರು ನೀಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್

    ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್

    ಣಬೀರ್ ಕಪೂರ್ ಮುಖ್ಯ ಭೂಮಿಕೆಯ ಬ್ರಹ್ಮಾಸ್ತ್ರ ಸಿನಿಮಾದ ಮುಂದುವರೆದ ಭಾಗ ಕೂಡ ಅತೀ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ಹೇಳಲಾಗಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಕಾಂಬಿನೇಷನ್ ನ ಈ ಸಿನಿಮಾದಲ್ಲಿ ದೇವ್ ಎನ್ನುವ ಪ್ರಮುಖ ಪಾತ್ರವೊಂದು ಬರಲಿದ್ದು, ಈ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಅದರಲ್ಲೂ ಖುದ್ದಾಗಿ ನಿರ್ಮಾಪಕ ಕರಣ್ ಜೋಹಾರ್ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಜೊತೆಯಾಗಿ ಬಂದು ಯಶ್ ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

    ಕರಣ್ ಜೋಹಾರ್ (Karan Johar) ಮತ್ತು ಅಯಾನ್ ಬೆಂಗಳೂರಿಗೆ ಬಂದು ಯಶ್ (Yash) ಅವರನ್ನು ಭೇಟಿ ಮಾಡಿ, ಕಥೆ ಹೇಳಿದರೂ ಯಶ್ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ಹೇಳಲಾಗುತ್ತಿದೆ. ದೇವ್ ಈ ಸಿನಿಮಾದಲ್ಲಿ ಮಹತ್ವದ ಪಾತ್ರವಾದರೂ, ಯಶ್ ಅವರು ಕೇಳಿದಷ್ಟು ಸಂಭಾವನೆಯನ್ನು ಕೊಡಲು ಕರಣ್ ಸಿದ್ಧವಿದ್ದರೂ, ಆ ಪಾತ್ರವನ್ನು ತಾವು ಮಾಡುವುದಿಲ್ಲ ಎಂದು ಯಶ್ ಹೇಳಿರುವ ಸುದ್ದಿ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಯಶ್ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್

    ಕೆಜಿಎಫ್ 2 ಸಿನಿಮಾದ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತು ಸಖತ್ ಚರ್ಚೆ ಶುರುವಾಗಿದೆ. ಯಾವಾಗ ಯಶ್ ಸಿನಿಮಾ ಶುರುವಾಗಲಿದೆ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಈ ಹೊತ್ತಿನಲ್ಲಿ ಯಶ್ ಬ್ರಹ್ಮಾಸ್ತ್ರ (Brahmastra) ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಖುಷಿ ಸಂಗತಿ ಆಗಿತ್ತು. ಆದರೆ, ಆ ಸಿನಿಮಾದಲ್ಲೂ ಯಶ್ ನಟಿಸುತ್ತಿಲ್ಲ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    ಇತ್ತ ಬೇರೆ ಸಿನಿಮಾವನ್ನೂ ಯಶ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಅವರ ಸಿನಿಮಾಗೆ ಬಂಡವಾಳ ಹೂಡಲು ಹಲವು ಕಂಪೆನಿಗಳು ಮುಂದೆ ಬಂದರೂ, ಇನ್ನೂ ಯಶ್ ಕತೆ ಒಪ್ಪಿಕೊಂಡಿಲ್ಲವಂತೆ. ಅಲ್ಲದೇ,  ನಿರ್ದೇಶಕರಿಗಾಗಿಯೂ ಹುಡುಕಾಟ ಶುರು ಮಾಡಿದ್ದಾರಂತೆ. ಕಥೆ ಮತ್ತು ನಿರ್ದೇಶಕರು ಪಕ್ಕಾ ಆದ ನಂತರವೇ ಹೊಸ ಸಿನಿಮಾದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನುವುದು ನಯಾ ಸಮಾಚಾರ. ಅಂದುಕೊಂಡಂತೆ ಆಗಿದ್ದರೆ ನರ್ತನ್ ಜೊತೆಗಿನ ಸಿನಿಮಾ ಇಷ್ಟೊತ್ತಿಗಾಗಲೇ ಸೆಟ್ಟೇರಬೇಕಿತ್ತು. ಅದು ಕೂಡ ಆಗಿಲ್ಲ ಎನ್ನುವುದು ನಿರಾಸೆ ಸಂಗತಿ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಪತ್ನಿ ಜೊತೆ ಸೆಕ್ಸ್ ಎಂಜಾಯ್ ಮಾಡ್ತೀನಿ, ಕರಣ್ ಜೋಹಾರ್ ರೀತಿ ಅಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಟಾಂಗ್

    ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ (Karan Johar) ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಗ್ಗೆ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೆಂಡ ಕಾರಿದ್ದಾರೆ. ಅಂತಹ ಸೆಕ್ಸ್ ಆಧರಿಸಿದ ಕಾರ್ಯಕ್ರಮಕ್ಕೆ ನನ್ನನ್ನು ಕರೆಯುವುದೂ ಇಲ್ಲ, ನಾನು ಹೋಗುವುದೂ ಇಲ್ಲ ಎಂದು ಹೇಳಿದ್ದಾರೆ. ಕರಣ್ ಜೋಹಾರ್ ಕೇಳುವ ಪ್ರಶ್ನೆಗಳಿಗೂ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ (Vivek Agnihotri) ಕಾರ್ಯಕ್ರಮಕ್ಕೆ ಹೋಗುವವರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಾಫಿ ವಿತ್ ಕರಣ್ (Koffee With Karan) ಕಾರ್ಯಕ್ರಮಕ್ಕೆ ಹೋಗುವುದು ಎಂದರೆ ನಮ್ಮ ಮರ್ಯಾದೆಯನ್ನು ನಾವೇ ಕಳೆದುಕೊಂಡಂತೆ. ನಮ್ಮ ಸೆಕ್ಸ್ ಲೈಫ್ ಹೇಳಿಕೊಳ್ಳುವುದಕ್ಕೆ ಅಲ್ಲಿಗೆ ಹೋಗಬೇಕಾ? ಅದು ಹೇಳಿಕೊಳ್ಳುವಂತಹ ವಿಷಯವಾ? ಡೇಟಿಂಗ್, ಲವ್, ಬ್ರೇಕ್ ಅಪ್, ಸೆಕ್ಸ್ ಬರೀ ಇದರ ಸುತ್ತಲೇ ಇಡೀ ಕಾರ್ಯಕ್ರಮ ರೂಪುಗೊಂಡಿರುತ್ತದೆ. ಅದೊಂದು ರೀತಿಯಲ್ಲಿ ಅಸಹ್ಯ ಅನಿಸುವಂಥದ್ದು ಎಂದಿದ್ದಾರೆ ವಿವೇಕ್. ಇದನ್ನೂ ಓದಿ:ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

    ನನ್ನ ಲೈಫ್ ಸೆಕ್ಸ್ ಸುತ್ತ ಇಲ್ಲ. ನಾನು ಮಾಡಬೇಕಿರುವ ಕೆಲಸ ತುಂಬಾ ಇದೆ. ಸೆಕ್ಸ್ ಅನ್ನುವುದು ತುಂಬಾ ಮಹತ್ವವಾದದ್ದು ಏನೂ ಇಲ್ಲ. ನಾನು ಸೆಕ್ಸ್ (Sex) ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡುತ್ತೇನೆ. ಕರಣ್ ಜೋಹಾರ್ ತರಹ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇಂತಹ ಕಾರಣಗಳಿಗಾಗಿಯೇ ನಾನು ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹೋಗಲಾರೆ ಎಂದು ಹೇಳಿದ್ದಾರೆ ಅಗ್ನಿಹೋತ್ರಿ.

    ಕರಣ್ ಜೋಹಾರ್ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಅಗ್ನಿಹೋತ್ರಿ ಕಾಮೆಂಟ್ ಮಾಡಿದ್ದರು. ಬೈಕಾಟ್ ಬ್ರಹ್ಮಾಸ್ತ್ರಕ್ಕೆ ಪರೋಕ್ಷೆವಾಗಿ ಇವರು ಬೆಂಬಲ ಸೂಚಿಸಿದ್ದರು. ಕಂಗನಾ ರಣಾವತ್ ಮಾತಿಗೆ ಬೆಂಬಲವನ್ನೂ ಸೂಚಿಸಿದ್ದರು. ನಂತರ ಬ್ರಹ್ಮಾಸ್ತ್ರಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನನ್ನು ಬಿಟ್ಟು ಬಿಡಿ ಎಂದು ನೆಟ್ಟಿಗರನ್ನು ಕೇಳಿದ್ದರು. ಇದೀಗ ಮತ್ತೆ ಕರಣ್ ಬಗ್ಗೆ ಗುಡುಗಿದ್ದಾರೆ. ಸೆಕ್ಸ್ ವಿಚಾರ ಇಟ್ಕೊಂಡು ತಿವಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]