Tag: ಕರಣ್ ಜೋಹರ್

  • ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಕರಣ್ ಜೋಹರ್ ಜೊತೆ ಇರುವ ತನ್ನ ಸಂಬಂಧದ ರಹಸ್ಯ ಬಿಚ್ಚಿಟ್ಟ ಶಾರೂಖ್ ಖಾನ್!

    ಮುಂಬೈ: ನಿರ್ದೇಶಕ ಕರಣ್ ಜೋಹರ್ ನಟ ಶಾರೂಖ್ ಖಾನ್ ಅವರ ಜೊತೆ ಮಾಡಿರುವ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದೆ. ಆದರೆ ಈಗ ಈ ಇಬ್ಬರು ಜೊತೆಯಾಗಿ ಸಿನಿಮಾ ಮಾಡಿ ಹಲವು ವರ್ಷಗಳು ಆಗಿದೆ. ಈ ಹಿಂದೆ 2010ರಲ್ಲಿ ಕರಣ್ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ‘ಮೈ ನೇಮ್ ಈಸ್ ಖಾನ್’ ಚಿತ್ರದಲ್ಲಿ ಶಾರೂಖ್ ನಟಿಸಿದ್ದರು.

    ಇತ್ತೀಚಿಗೆ ನಡೆದ ‘ಇಫ್ತೆಫಾಕ್’ ಚಿತ್ರದ ಪ್ರೆಸ್ ಮೀಟ್ ನಲ್ಲಿ ಶಾರೂಖ್ ಖಾನ್ ಆಗಮಿಸಿದ್ದರು. ಆಗ ಅಲ್ಲಿದ ಮಾಧ್ಯಮದವರು ನಿಮ್ಮ ಹಾಗೂ ಕರಣ್ ಅವರ ಸಿನಿಮಾ ಯಾವಾಗ ಬರಲಿದೆ ಎಂದು ಶಾರೂಖ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾವು ಸಾಕಷ್ಟು ಚಿತ್ರದ ಕಥೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಯಾವುದು ಈಗ ಫೈನಲ್ ಆಗಿಲ್ಲ ಎಂದು ಶಾರೂಖ್ ಉತ್ತರಿಸಿದ್ದಾರೆ.

    ತಮ್ಮ ಪ್ರೊಡಕ್ಷನ್ ವೆಂಚರ್ ಬಗ್ಗೆ ಮಾತನಾಡುತ್ತಾ ಕರಣ್, “ನಾನು ಹಾಗೂ ಶಾರೂಖ್ ಕೇವಲ ಒಳ್ಳೆಯ ಸ್ನೇಹಿತರು ಅಥವಾ ಒಳ್ಳೆ ಕುಟುಂಬದವರು ಅಷ್ಟೇ ಅಲ್ಲ ಒಳ್ಳೆಯ ಸಹದ್ಯೋಗಿ ಕೂಡ” ಎಂದು ಮಾಧ್ಯಮದವರಿಗೆ ತಿಳಿಸಿದರು.

    ಕರಣ್ ಹಾಗೂ ಶಾರೂಖ್ ನಡುವೆ ಜಗಳ ನಡೆದಿದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂದು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತಿತ್ತು. ಈಗ ಇವರಿಬ್ಬರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ಮೂಲಕ ಇಬ್ಬರ ಸಂಬಂಧದ ಬಗ್ಗೆ ಹರಡಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

    ಕರಣ್ ಅವರಿಂದ ನನಗೆ ಯಾವುದೇ ತೊಂದರೆ ಇಲ್ಲ. ನಾನು ಯಾವಾಗಲೂ ಅವರನ್ನು ಪ್ರೀತಿಯಿಂದ ನೋಡುತ್ತೇನೆ. ಅವರ ಪ್ರೀತಿಯ ಹಲವು ಮುಖಗಳನ್ನು ನಾನು ನೋಡಿದ್ದೇನೆ. ನನಗೆ ಸ್ನೇಹಿತನಿಂದ ಒಬ್ಬ ಸಹೋದರನ ರೀತಿಯಲ್ಲಿ ಅವರು ನನಗೆ ನೋಡುತ್ತಾರೆ ಎಂದು ಶಾರೂಖ್ ಖಾನ್ ಕರಣ್ ಅವರನ್ನು ಹೊಗಳಿದರು.

  • ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

    ದುಬಾರಿ ಸಂಭಾವನೆ ಕೇಳಿದ ಪ್ರಭಾಸ್: ಬಾಲಿವುಡ್‍ ನಲ್ಲಿ ಲಾಂಚ್ ಮಾಡಲು ಕರಣ್ ಹಿಂದೇಟು

    ಮುಂಬೈ: ಬಾಹುಬಲಿಯ ಹೀರೋ ಪ್ರಭಾಸ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಲಾಂಚ್ ಮಾಡಲು ಮುಂದಾಗಿದ್ದ ನಿರ್ಮಾಪಕ ಕರಣ್ ಜೋಹರ್ ಈಗ ತಮ್ಮ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದಾರೆ.

    ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಹಿಂದಿ ಆವೃತ್ತಿಯ ಬಾಹುಬಲಿ ಸಿನಿಮಾವನ್ನು ಕರಣ್ ಜೋಹರ್ ಬಿಡುಗಡೆ ಮಾಡಿದ್ದರು. ಹೀಗಾಗಿ ಬಾಲಿವುಡ್ ನಲ್ಲಿ ಪ್ರಭಾಸ್ ನನ್ನು ಕರೆತರಲು ಕರಣ್ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದ್ದರು.

    ಪ್ರಭಾಸ್ ನನ್ನು ಬಾಲಿವುಡ್ ನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲು ಕರಣ್ ನಿರ್ಧರಿಸಿದ್ದರು. ಆದರೆ ಬಾಹುಬಲಿ ಸಿನಿಮಾದ ಯಶಸ್ಸಿನಿಂದಾಗಿ ದಿಢೀರನ್ನೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಪ್ರಭಾಸ್ ಅವರನ್ನು ಲಾಂಚ್ ಮಾಡುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಬಾಲಿವುಡ್ ನಲ್ಲಿ ನಟಿಸಲು ಪ್ರಭಾಸ್ ಬರೋಬ್ಬರಿ ರೂ. 20 ಕೋಟಿ ಸಂಭಾವನೆ ಕೇಳಿದ್ದರಂತೆ. ಪ್ರಭಾಸ್ ಬೇಡಿಕೆಗೆ ಕರಣ್ ಏನೂ ಹೇಳದೆ ಸುಮ್ಮನಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಭಾಸ್ ಹೆಸರು ಮಾಡಿದ್ದರೂ ಹಿಂದಿಯಲ್ಲಿ ಅಷ್ಟೊಂದು ಪ್ರಸಿದ್ಧಿ ಇಲ್ಲದ ಕಾರಣ ಕರಣ್ ಜೋಹರ್ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

    ಬಾಲಿವುಡ್ ನಲ್ಲಿ ನಟಿಸಲು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕೂಡ ಇಷ್ಟು ಸಂಭಾವನೆ ನೀಡಿರಲಿಲ್ಲ ಎಂದು ವರದಿಯೊಂದು ತಿಳಿಸಿದೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ದಕ್ಷಿಣ ಭಾರತದಲ್ಲಿ ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

    ಪ್ರಭಾಸ್ ಈಗ ‘ಸಾಹೋ’ ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚಿಗೆ ಅವರ ಹುಟ್ಟುಹಬ್ಬದ ದಿನದಂದು ಚಿತ್ರದ ಮೊದಲ ಲುಕ್ ಅನ್ನು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಪ್ರಭಾಸ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.