ಸ್ಟೈಲೀಶ್ ಸ್ಟಾರ್ ವಿಜಯ್ ದೇವರಕೊಂಡ `ಲೈಗರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಚಾರದ ವೇಳೆ, ಈ ಹಿಂದೆ ಕರಣ್ ಜೋಹರ್ ಚಿತ್ರವನ್ನು ಕೈಬಿಟ್ಟಿದರ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

ಈಗ ಏಲ್ಲೆಲ್ಲೂ `ಲೈಗರ್ ಸಿನಿಮಾ ಪ್ರಚಾರ ಜೋರಾಗಿದೆ ಸೌಂಡ್ ಮಾಡುತ್ತಿದೆ. ವಿಜಯ್ ದೇವರಕೊಂಡ ವೃತ್ತಿ ಜೀವನದ ನಿರೀಕ್ಷಿತ `ಲೈಗರ್’ ಚಿತ್ರ ಟೀಸರ್, ಟ್ರೆöÊಲರ್, ಪೊಸ್ಟರ್ ಲುಕ್‌ನಿಂದ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಇನ್ನು ಈ ಚಿತ್ರದ ಪ್ರಚಾರ ಕಾರ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಕರಣ್ ಜೋಹರ್ ಸಿನಿಮಾ ಆಫರ್ ಅನ್ನು ಕೈಬಿಟ್ಟ ವಿಚಾರದ ಬಗ್ಗೆ ವಿಜಯ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

`ಅರ್ಜುನ್ ರೆಡ್ಡಿ’ ಚಿತ್ರದ ಸಕ್ಸಸ್ ನಂತರ ಕರಣ್ ಜೋಹರ್ ಕಡೆಯಿಂದ ಬಾಲಿವುಡ್ ಸಿನಿಮಾ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ನಾನು ಸಿದ್ಧನಾಗಿರಲಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇರುವ ಕಾರಣ ಲೈಗರ್ ಚಿತ್ರ ಒಪ್ಪಿಕೊಂಡೆ ಎಂದು ಮಾತನಾಡಿದ್ದಾರೆ. ಇನ್ನು ಲೈಗರ್ ಚಿತ್ರವು ಸ್ಲಂ ಹುಡುಗರ ಕಥೆಯಾಗಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಿಜಯ್ ಮಿಂಚಿದ್ದಾರೆ. ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆಗಸ್ಟ್ ೨೫ಕ್ಕೆ ಲೈಗರ್ ಚಿತ್ರ ತೆರೆಗೆ ಅಪ್ಪಳಿಸಲಿದೆ.


ಟಾಲಿವುಡ್‌ನ ಸಿನಿಮಾಗಳಲ್ಲಿ ಸ್ಟಾರ್ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಮಧ್ಯೆ ಎನೋ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಸುದ್ದಿಯಾಗುತ್ತಿದೆ. ಇದೇ ಪ್ರಶ್ನೆಯನ್ನ ಕರಣ್ ಜೋಹರ್ ಕೂಡ ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, `ರಶ್ಮಿಕಾ ನನ್ನ ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಇದನ್ನೂ ಓದಿ:
ನಾನು ರಶ್ಮಿಕಾ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ರಶ್ಮಿಕಾ ನನ್ನ ಡಾರ್ಲಿಂಗ್. ಅವರನ್ನ ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ರಶ್ಮಿಕಾ ನಿಜವಾಗಿಯೂ ಒಳ್ಳೆಯ ಸ್ನೇಹಿತೆ. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ನಮ್ಮ ಮಧ್ಯೆ ಉತ್ತಮ ಬಂಧ ಸೃಷ್ಟಿಯಾಯಿತು. ಸಾಮಾನ್ಯವಾಗಿ ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ನಾನು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು ಎಂದಿದ್ದಾರೆ.
ವಿಜಯ್ ದೇವರಕೊಂಡ ರಿಲೇಷನ್‌ಶಿಪ್ ಸ್ಟೇಟಸ್ ಕೇಳಿದಾಗ, ಒಂದಲ್ಲಾ ಒಂದು ದಿನ ನನಗೆ ಮದುವೆಯಾಗಿ, ಮಕ್ಕಳಾಗುತ್ತದೆ. ಆ ದಿನ ನನ್ನ ಪಾರ್ಟರ್ ಬಗ್ಗೆ ಜೋರಾಗಿ ಹೇಳುತ್ತೇನೆ. ಅಲ್ಲಿಯವರೆಗೂ ನನ್ನನ್ನು ಇಷ್ಟಪಡುವವರಿಗೆ ನಾನು ನೋವು ಕೊಡಬಾರದು. ಎಲ್ಲರೂ ಇಷ್ಟೊಂದು ಪ್ರೀತಿ ಕೊಡುವಾಗ ನಾನು ಇನ್ನೊಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಕಡೆಗೂ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ.




ಸಮಂತಾ ಮತ್ತು ನಾಗಚೈತನ್ಯ ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಆದರೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರು ದೂರ ದೂರ ಆದರು. ಸಾಕಷ್ಟು ನೆಗೆಟಿವ್ ಟ್ರೋಲ್‌ಗಳಿಗೆ ಗುರಿಯಾಗಿದ್ದ ಸಮಂತಾಗೆ ಕರಣ್ ಜೋಹರ್ ಶೋನಲ್ಲಿ ಸಮಂತಾ ಖಾಸಗಿ ವಿಚಾರವೊಂದನ್ನು ಕೇಳಿದ್ದಾರೆ. ಪ್ರಸ್ತುತ ನಿಮ್ಮ ಮತ್ತು ನಾಗಚೈತನ್ಯ ನಡುವೆ ರಿಲೇಷನ್ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದು ಕರಣ್‌ಗೆ ಉತ್ತರಿಸಿದ್ದಾರೆ. ನಮ್ಮ ನಡುವೆ ಈಗ ಸ್ನೇಹಕ್ಕೆ ಭಾವನೆಗೆ ಜಾಗವಿಲ್ಲ ಅಂತಾ ಪರೋಕ್ಷವಾಗಿ ಸಮಂತಾ ತಿಳಿಸಿದ್ದಾರೆ. ನಾಗಚೈತನ್ಯ ಅವರನ್ನ ಕಂಡ್ರೆ ಸಮಂತಾಗೆ ಕೊಲ್ಲುವಷ್ಟು ಕೋಪವಿದ್ಯಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:
ಸಮಂತಾ ಅವರನ್ನು ತುಂಬಾ ನೋಯಿಸಿದ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಯಾವುದು ಎಂದು ಕರಣ್ ಕೇಳಿದರು. ನಾಗ ಚೈತನ್ಯಗೆ ವಿಚ್ಛೇದನ ನೀಡಲು ೨೫೦ ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಮಂತಾ ಹೇಳಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು.. ಖುಷಿಯಿಂದ ನಾವು ಡಿವೋರ್ಸ್ ಪಡೆದಿಲ್ಲ. ನೋವಿನಿಂದಲೇ ದೂರ ಆಗಿದ್ದೇವೆ ಜತೆಗೆ ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.
ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬಿನೇಷನ್‌ನ ಹೈವೋಲ್ಟೇಜ್ ಕಾಂಬಿನೇಶನ್ `ಲೈಗರ್’ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್‌ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ `ಲೈಗರ್’ ಟ್ರೈಲರ್ ರಿಲೀಸ್ ಆಗಿ, ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್‌ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್‌ಗೆ ನಾಯಕಿಯಾಗಿ ಬ್ಯೂಟಿ ಕ್ವೀನ್ ಅನನ್ಯಾ ಪಾಂಡೆ ನಟಿಸಿದ್ದಾರೆ. ʻಲೈಗರ್ʼನಲ್ಲಿ ವಿಜಯ್ ರಗಡ್ ಆಗಿ ನಟಿಸಿದ್ದು, ಟ್ರೈಲರ್ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬರುತ್ತಿದ್ದಾರೆ. ಇದನ್ನೂ ಓದಿ:










