Tag: ಕರಣ್ ಜೋಹರ್

  • ‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ಬಹುನಿರೀಕ್ಷಿತ ‘ದೇವರ’ (Devara Film) ಚಿತ್ರಕ್ಕೆ ನಿರ್ಮಾಪಕ ಕರಣ್ ಜೋಹರ್ ಕೈಜೋಡಿಸಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಸೌತ್‌ನಲ್ಲಿಯೂ ಉತ್ತಮ ಒಡನಾಟ ಹೊಂದಿರುವ ಕರಣ್ (Karan Johar) ಇದೀಗ ದೇವರ ಚಿತ್ರವನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ.

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ‘ದೇವರ’ ಚಿತ್ರದ ಮೇಲೆ ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ನಡುವೆ ದೇವರ ಚಿತ್ರದ ಉತ್ತರ ಭಾರತದ ಹಕ್ಕನ್ನು ಕರಣ್ ಜೋಹರ್ ಖರೀದಿಸಿದ್ದಾರೆ. ಇದನ್ನೂ ಓದಿ:‘ಸಿದ್ಲಿಂಗು 2’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರ

     

    View this post on Instagram

     

    A post shared by Karan Johar (@karanjohar)

    ‘ಯುವಸುಧಾ ಆರ್ಟ್ಸ್’ ಮತ್ತು ‘ಎನ್‌ಟಿಆರ್ ಆರ್ಟ್ಸ್’ ಸಂಸ್ಥೆಗಳ ಮೂಲಕ ‘ದೇವರ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಂಸ್ಥೆಗಳ ಜೊತೆ ಕರಣ್ ಜೋಹರ್ ಅವರು ಮಾತುಕತೆ ನಡೆಸಿದ್ದಾರೆ. ಈ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದಾರೆ. ಜ್ಯೂ.ಎನ್‌ಟಿಆರ್ ಅಭಿನಯದ ‘ದೇವರ’ ಸಿನಿಮಾದ ಭಾಗವಾಗಲು ಸಂತೋಷವಾಗುತ್ತಿದೆ ಎಂದು ಕರಣ್ ಪೋಸ್ಟ್ ಮಾಡಿದ್ದಾರೆ. ತಾರಕ್ ಜೊತೆಗಿನ ಫೋಟೋ ಕೂಡ ಕರಣ್ ಜೋಹರ್ ಶೇರ್ ಮಾಡಿದ್ದಾರೆ.

    ಇದೇ ಅಕ್ಟೋಬರ್ 10ಕ್ಕೆ ಬಹುಭಾಷೆಗಳಲ್ಲಿ ‘ದೇವರ’ ಸಿನಿಮಾ ರಿಲೀಸ್ ಆಗುತ್ತಿದೆ. ತಾರಕ್‌ಗೆ ಜೋಡಿಯಾಗಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ನಟಿಸಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ.

  • ಡಿಜಿಟಲ್ ವರ್ಷನ್‌ನಲ್ಲಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’

    ಡಿಜಿಟಲ್ ವರ್ಷನ್‌ನಲ್ಲಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’

    ‘ಸ್ಟುಡೆಂಡ್ ಆಫ್ ದಿ ಇಯರ್’ (Student Of The Year) ಸಿನಿಮಾಗೆ ಇಂದಿಗೂ ಕ್ರೇಜ್ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 3 ಅನ್ನು ವೆಬ್ ಸಿರೀಸ್ ಮೂಲಕ ತೋರಿಸಲು ನಿರ್ಮಾಪಕ ಕರಣ್ ಜೋಹರ್ (Karan Johar) ನಿರ್ಧರಿಸಿದ್ದಾರೆ.

    ಈ ವೆಬ್ ಸಿರೀಸ್‌ಗೆ ರೀಮಾ ಮಾಯಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕರಣ್ ಜೋಹರ್ ಮಾಹಿತಿ ನೀಡಿದ್ದಾರೆ. ಈಗಾಗಲೇ ‘ಸ್ಟುಡೆಂಡ್ ಆಫ್ ದಿ ಇಯರ್’ ಫ್ರಾಂಚೈಸ್ ಮೂಲಕ ಹಲವು ಸೆಲೆಬ್ರಿಟಿ ಮಕ್ಕಳನ್ನು ಕರಣ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೀಗ ಈ ಚಿತ್ರದ ಪಾರ್ಟ್ 3 ಮೂಲಕ ಮತ್ತುಷ್ಟು ಸೆಲೆಬ್ರಿಟಿ ಮಕ್ಕಳು ಲಾಂಚ್ ಆಗಲಿದ್ದಾರೆ.

    ‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 1 ಮತ್ತು ಪಾರ್ಟ್ 2 ಕಥೆಗಿಂತ ವಿಭಿನ್ನವಾಗಿ ಪಾರ್ಟ್ 3 ಮೂಡಿ ಬರಬೇಕು ಎಂಬುದು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ. ಮುಂದಿನ ವರ್ಷ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಇದನ್ನೂ ಓದಿ:ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರಕ್ಕೆ ಶಿವಣ್ಣ ಹೀರೋ

    ಅಂದಹಾಗೆ, ಆಲಿಯಾ ಭಟ್ (Alia Bhatt), ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್ ‘ಸ್ಟುಡೆಂಡ್ ಆಫ್ ದಿ ಇಯರ್’ ಪಾರ್ಟ್ 1 ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಈ ಮೂವರು ಸ್ಟಾರ್‌ಗಳಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಪಾರ್ಟ್ 2ನಲ್ಲಿ ಅನನ್ಯಾ ಪಾಂಡೆ, ತಾರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರು. ಅವರಿಗೂ ಕೂಡ ಚಿತ್ರರಂಗದಲ್ಲಿ ಡಿಮ್ಯಾಂಡ್‌ ಇದೆ.

  • ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಶ್ರೀದೇವಿ ಪುತ್ರಿ ಜಾನ್ವಿ

    ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಶ್ರೀದೇವಿ ಪುತ್ರಿ ಜಾನ್ವಿ

    ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚೆಚ್ಚು ತಮ್ಮ ಖಾಸಗಿ ವಿಚಾರವಾಗಿಯೇ ಚಾಲ್ತಿಯಲ್ಲಿರುತ್ತಾರೆ. ಇದೀಗ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಜ್ಜಾದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಸೆನ್ಸೇಷನಲ್ ಶೋ ಅಂದರೆ ಅದು ಕಾಫಿ ವಿತ್ ಕರಣ್ ಕಾರ್ಯಕ್ರಮ. ಏನಾದರೂ ವಿವಾದಗಳ ಅಥವಾ ಸ್ಟಾರ್‌ಗಳ ಸೀಕ್ರೆಟ್ ರಿವೀಲ್ ಆಗುವ ಮೂಲಕ ಶೋ ಅಭಿಮಾನಿಗಳ ಗಮನ ಸೆಳೆದಿದೆ. ಹೀಗಿರುವಾಗ ಕರಣ್ ಶೋಗೆ ಶ್ರೀದೇವಿ ಪುತ್ರಿಯರು ಜಾನ್ವಿ-ಖುಷಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ತಮ್ಮ ರಿಯಲ್ ಲೈಫ್ ಲವ್ ಬಗ್ಗೆ ಜಾನ್ವಿ (Janhvi Kapoor) ರಿವೀಲ್ ಮಾಡಿದ್ದಾರೆ.

    ಜಾನ್ವಿ ಕಪೂರ್-ಶಿಖರ್ ಪಹಾಡಿಯಾ ಡೇಟಿಂಗ್ ದೃಢವಾಗಿದೆ. ಕಾರ್ಯಕ್ರಮದಲ್ಲಿ ನೀವು ಹೆಚ್ಚಾಗಿ ಫೋನಿನಲ್ಲಿ ಮಾತನಾಡೋದು ಯಾರ ಜೊತೆ, ನಿಮಗೆ ಯಾರು ತುಂಬಾ ಕ್ಲೋಸ್ ಎಂದು ಕರಣ್ ಜೋಹರ್ (Karan Johar) ಪ್ರಶ್ನೆ ಕೇಳಿದ್ದಾರೆ.

    ಅದಕ್ಕೆ ಜಾನ್ವಿ, ಮೊದಲಿಗೆ ಅಪ್ಪ, ತಂಗಿ ಖುಷಿ, ಶಿಖು ಎಂದು ಹೇಳಿದ್ದರು. ಶಿಖು ಎಂದು ಶಿಖರ್ ನಿಕ್ ನೇಮ್ ಅನ್ನು ಮಿಸ್ ಆಗಿ ಹೇಳಿದ್ದಕ್ಕೆ ಸ್ವತಃ ಜಾನ್ವಿಯೇ ಶಾಕ್ ಆದರು.

    ನಾನು ಶಿಖರ್ ಹೆಸರನ್ನು ತಪ್ಪಾಗಿ ತೆಗೆದುಕೊಂಡೆ ಎಂದು ಜಾನ್ವಿ ನಕ್ಕರು. ಶಿಖರ್ ಹೆಸರನ್ನು ಹೇಳುತ್ತಿದ್ದಂತೆ ಖುಷಿ ಮತ್ತು ಕರಣ್ ಜೋಹರ್ ಜೋರಾಗಿ ನಕ್ಕರು. ಆಗ ಜಾನ್ವಿ ಕೂಡ ನಾಚಿಕೆಯಿಂದ ತಲೆತಗ್ಗಿಸಿದ್ದಾರೆ. ಈ ಮೂಲಕ ಶಿಖರ್ ಜೊತೆಗಿನ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

  • Jigra: ಕರಣ್ ಜೋಹರ್ ಜೊತೆ ನಿರ್ಮಾಣಕ್ಕೆ ಸಾಥ್ ನೀಡಿದ ಆಲಿಯಾ ಭಟ್

    Jigra: ಕರಣ್ ಜೋಹರ್ ಜೊತೆ ನಿರ್ಮಾಣಕ್ಕೆ ಸಾಥ್ ನೀಡಿದ ಆಲಿಯಾ ಭಟ್

    ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಕ್ಸಸ್ ಬಳಿಕ ಸಹ ನಿರ್ಮಾಪಕಿಯಾಗಿ ಕರಣ್ ಜೋಹರ್‌ಗೆ ಆಲಿಯಾ ಸಾಥ್ ನೀಡುತ್ತಿದ್ದಾರೆ. ನಟಿ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಜಿಗ್ರಾ (Jigra Film) ಸಿನಿಮಾದಲ್ಲಿ ನಟನೆ ಮಾತ್ರವಲ್ಲ ಸಹ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ.

    ಕರಣ್ ಜೋಹರ್ (Karan Johar) ನಿರ್ಮಾಣದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಗೆಲುವಿನ ಬಳಿಕ ಜಿಗ್ರಾ ಎಂಬ ಹೊಸ ಚಿತ್ರದಲ್ಲಿ ಆಲಿಯಾ ಭಟ್ (Alia Bhatt) ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಾಸನ್‌ ಬಾಲ ನಿರ್ದೇಶನ ಮಾಡ್ತಿದ್ದಾರೆ. ವಿಶೇಷ ಅಂದರೆ, ಕರಣ್ ಜೋಹರ್ ನಿರ್ಮಾಣಕ್ಕೆ ಆಲಿಯಾ ಕೂಡ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

     

    View this post on Instagram

     

    A post shared by Alia Bhatt ???? (@aliaabhatt)

    ‘ಜಿಗ್ರಾ’ ಚಿತ್ರದ ಸಣ್ಣದೊಂದು ಟೀಸರ್ ರಿಲೀಸ್ ಆಗಿದೆ. ಆಲಿಯಾ ಲುಕ್ ಕೂಡ ಭಿನ್ನವಾಗಿದೆ. ಧರ್ಮ ಪ್ರೊಡಕ್ಷನ್‌ನಿಂದ ನನ್ನ ಕೆರಿಯರ್ ಶುರು ಮಾಡಿದೆ. ಈಗ ಇದೇ ಸಂಸ್ಥೆಯ ಜೊತೆ ಸಹ- ನಿರ್ಮಾಣ ಮಾಡ್ತಿದ್ದೇನೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಒಬ್ಬಳು ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿ ಜೀವ ತುಂಬುತ್ತಿದ್ದೇನೆ ಎಂದು ನಟಿ ಖುಷಿಯಿಂದ ಹೇಳಿಕೊಂಡಿದ್ದಾರೆ. ‘ಜಿಗ್ರಾ’ ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ವರ್ಷ ಸೆ.27ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಮ್‌ಗೆ ಬಿಗ್ ಆಫರ್- ಸಲ್ಮಾನ್ ಖಾನ್‌ಗೆ ಸಮಂತಾ ಜೋಡಿ

    ಸ್ಯಾಮ್‌ಗೆ ಬಿಗ್ ಆಫರ್- ಸಲ್ಮಾನ್ ಖಾನ್‌ಗೆ ಸಮಂತಾ ಜೋಡಿ

    ಸೌತ್ ನಟಿ ಸಮಂತಾಗೆ (Samantha) ಬಾಲಿವುಡ್‌ನಿಂದ (Bollywood) ಬಂಪರ್ ಆಫರ್ ಅರಸಿ ಬಂದಿದೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ಗೆ ಸಮಂತಾ ನಾಯಕಿಯಾಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸ್ಯಾಮ್‌ಗೆ ಸಿಹಿಸುದ್ದಿ ಸಿಕ್ಕಿದೆ.

    ‘ಖುಷಿ’ (Kushi Film) ಸಕ್ಸಸ್ ಅಲೆಯಲ್ಲಿ ಸಮಂತಾ ತೇಲುತ್ತಿದ್ದಾರೆ. ಈ ಬೆನ್ನಲ್ಲೇ ಸಲ್ಮಾನ್ ಖಾನ್ (Salman Khan) ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಸಿಕ್ಕಿದೆ. ಈ ಚಿತ್ರವನ್ನು ವಿಷ್ಣು ವರ್ಧನ್ ನಿರ್ದೇಶನ ಮಾಡಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಲಿದ್ದಾರೆ.

    ‘ಸಿಟಾಡೆಲ್’ (Citadel) ವೆಬ್‌ಸಿರೀಸ್‌ನಲ್ಲಿ ಸ್ಯಾಮ್ ವರುಣ್ ಧವನ್ ಜೊತೆ ನಟಿಸಿದ್ದಾರೆ. ಆ್ಯಕ್ಷನ್ ಥ್ರಿಲರ್ ಕಥೆಯಲ್ಲಿ ಸಮಂತಾ ನಟಿಸಿದ್ದಾರೆ. ಸದ್ಯದಲ್ಲೇ ಈ ಪ್ರಾಜೆಕ್ಟ್ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ಬಣ್ಣದ ಲೋಕದಿಂದ ಈಗಾಗಲೇ ಬ್ರೇಕ್ ತೆಗೆದುಕೊಂಡಿರುವ ಸಮಂತಾ, 2024ರಲ್ಲಿ ಸಲ್ಮಾನ್ ಜೊತೆಗಿನ ಸಿನಿಮಾ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಕೊಂಚ ಆರೋಗ್ಯದಲ್ಲಿ ಫಿಟ್ & ಫೈನ್ ಆದ ಮೇಲೆ ಸ್ಯಾಮ್ ಕ್ಯಾಮೆರಾ ಮುಂದೆ ಬರಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕ ಕರಣ್ ಜೋಹರ್ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

    ನಿರ್ಮಾಪಕ ಕರಣ್ ಜೋಹರ್ ಜೊತೆ ಕೈಜೋಡಿಸಿದ ಸಲ್ಮಾನ್ ಖಾನ್

    ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾವನ್ನ ಕರಣ್ ಜೋಹರ್ (Karan Johar) ನಿರ್ದೇಶನ ಮಾಡಿದ್ದರು. ರಣ್‌ವೀರ್-ಆಲಿಯಾಗೆ (Alia Bhatt) ಆ್ಯಕ್ಷನ್ ಕಟ್ ಹೇಳಿದ್ದರು. ಸಿನಿಮಾ ಈಗ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಜೊತೆ ಸಿನಿಮಾ ಮಾಡಲು ಕರಣ್ ಮುಂದಾಗಿದ್ದಾರೆ.

    ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸೋಲಿನಿಂದ ತತ್ತರಿಸಿರೋ ಸಲ್ಲು ಬಾಯ್‌ಗೆ ಬಿಗ್ ಬ್ರೇಕ್ ಬೇಕಾಗಿದೆ. ಹಾಗಾಗಿ ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಸಲ್ಲು ನಟಿಸಲು ಓಕೆ ಎಂದಿದ್ದಾರೆ. 1988ರ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದರು. ಇದೀಗ ಹಲವು ವರ್ಷಗಳ ನಂತರ ಕರಣ್ ಜೋಹರ್ ನಿರ್ಮಾಣದಲ್ಲಿ ಸಿನಿಮಾ ಮಾಡಲು ಸಲ್ಲು ಮನಸ್ಸು ಮಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

    ಸಲ್ಮಾನ್- ಕರಣ್ ಚಿತ್ರಕ್ಕೆ ನಿರ್ದೇಶಕ ವಿಷ್ಣು ವರ್ಧನ್ (Vishnuvardhan) ಅವರು ನಿರ್ದೇಶನ ಮಾಡ್ತೀದ್ದಾರೆ.  2021ರಲ್ಲಿ ಸೂಪರ್ ಹಿಟ್ ಸಿನಿಮಾ ‘ಶೇರ್ಷಾʼ ಚಿತ್ರವನ್ನು ವಿಷ್ಣು ವರ್ಧನ್ ನಿರ್ದೇಶನ ಮಾಡಿದ್ದರು. ಕಳೆದ ಆರು ತಿಂಗಳಿಂದ ಈ ಸಿನಿಮಾದ ಮಾತುಕತೆ ನಡೆಯುತ್ತಲೇ ಇತ್ತು. ಕೊನೆಗೂ ಈ ಚಿತ್ರದಲ್ಲಿ ನಟಿಸಲು ಸಲ್ಮಾನ್ ಖಾನ್ ಅವರು ಒಪ್ಪಿದ್ದಾರೆ.

    ಈ ಚಿತ್ರದ ಶೂಟಿಂಗ್ ಈ ವರ್ಷ ನವೆಂಬರ್‌ನಿಂದ ಆರಂಭ ಆಗಲಿದೆ. ಒಟ್ಟೂ 8 ತಿಂಗಳು ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್ ಸಮಯ ಮೀಸಲಿಡಲಿದ್ದಾರೆ ಎನ್ನಲಾಗಿದೆ. 2024ರ ಕ್ರಿಸ್‌ಮಸ್‌ಗೆ ಚಿತ್ರ ರಿಲೀಸ್ ಆಗಲಿದೆ. ಮೊದಲೇ ಕರಣ್, ರೊಮ್ಯಾಂಟಿಕ್- ಆ್ಯಕ್ಷನ್ ಸಿನಿಮಾ ಮಾಡ್ರೋದಲ್ಲಿ ಎತ್ತಿದ ಕೈ. ಈ ಸಿನಿಮಾ ಮೂಲಕ ಭಿನ್ನ ಕಥೆಯನ್ನೇ ನಿರ್ದೇಶಕರು ತೆರೆಯ ಮೇಲೆ ತೋರಿಸಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರಣ್ ಜೋಹರ್‌ಗೆ ಬ್ರಿಟನ್ ಸಂಸತ್‌ನಿಂದ ಗೌರವ ಪ್ರದಾನ

    ಕರಣ್ ಜೋಹರ್‌ಗೆ ಬ್ರಿಟನ್ ಸಂಸತ್‌ನಿಂದ ಗೌರವ ಪ್ರದಾನ

    ಬಾಲಿವುಡ್ (Bollywood) ನಟ ಕರಣ್ ಜೋಹರ್ (Karan Johar) ಅವರು ಸಿನಿಮಾರಂಗದಲ್ಲಿ ನಿರ್ದೇಶಕ, ನಿರ್ಮಾಪಕ, ನಿರೂಪಕನಾಗಿ ಗುರುತಿಸಿಕೊಂಡಿದ್ದಾರೆ. 25 ವರ್ಷಗಳು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸೇವೆ, ಸಾಧನೆ ಗುರುತಿಸಿ ಬ್ರಿಟನ್ ಸಂಸತ್ತು ಗೌರವಿಸಿದೆ.

    ಕರಣ್ ಜೋಹರ್ ಅವರು ಸ್ಟಾರ್ ಕಿಡ್, ಯುವ ನಟ-ನಟಿಯರನ್ನ ಲಾಂಚ್ ಮಾಡೋದ್ರಲ್ಲಿ ಎತ್ತಿದ ಕೈ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಸಾಕಷ್ಟು ಚಿತ್ರಗಳನ್ನ ನಿರ್ಮಿಸಿ ಗೆದ್ದಿದ್ದಾರೆ. ತಮ್ಮ ಅದ್ಭುತ ನಿರೂಪಣೆ ಮೂಲಕ ಕರಣ್ ಮನೆ ಮಾತಾಗಿದ್ದಾರೆ. ಈಗ ಬ್ರಿಟನ್ ಸಂಸತ್ತು ಗೌರವಿಸಿರೋದರ (Honor) ಬಗ್ಗೆ ಕರಣ್ ಪೋಸ್ಟ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮದುವೆಯಾದ್ಮೇಲೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ತಿರೋ ಕಿಯಾರಾ

    ಬ್ಯಾರನೆಸ್ ಸ್ಯಾಂಡಿ ಅವರು ಕರಣ್‌ಗೆ ಗೌರವ ಪ್ರದಾನ ಮಾಡಿದರು. ಇಂದು ನನಗೆ ವಿಶೇಷ ದಿನ. ಲಂಡನ್‌ನಲ್ಲಿರುವ ಬ್ರಿಟಿಷ್ ಹೌಸ್ ಆಫ್ ಪಾರ್ಲಿಮೆಂಟ್‌ನಲ್ಲಿ ಗೌರವಾನ್ವಿತ ಬ್ಯಾರನೆಸ್ ವರ್ಮಾರಿಂದ ಗೌರವ ಸಿಕ್ಕಿರೋದು ನನ್ನ ಅದೃಷ್ಟ. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಕರಣ್ ಬರೆದುಕೊಂಡಿದ್ದಾರೆ.

    ಶಾರುಖ್ ಖಾನ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಚಿತ್ರಕ್ಕೆ ನಿರ್ದೇಶಕನಾಗುವ ಮೂಲಕ ಸಿನಿಮಾ ಜಗತ್ತಿಗೆ ಕರಣ್ ಎಂಟ್ರಿ ಕೊಟ್ಟಿದ್ದರು. ಕರಣ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷಗಳ ಸಂಭ್ರಮದಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಮೂಡಿ ಬರುತ್ತಿದೆ. ಚಿತ್ರಕ್ಕೆ ಕರಣ್ ನಿರ್ದೇಶನ & ನಿರ್ಮಾಣ ಮಾಡಿದ್ದಾರೆ.

  • ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ವಿವಾದದ ಬೆನ್ನಲ್ಲೇ ಅನುಷ್ಕಾ ಶರ್ಮಾ (Anushka Sharma) ಸಿನಿಮಾ ಕೆರಿಯರ್ (Career) ನಾಶ ಮಾಡಿಬಿಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಕರಣ್‌ ಜೋಹರ್ ಒಪ್ಪಿಕೊಂಡಿದ್ದಾರೆ.

    Rab Ne Bana Di Jodi ಸಿನಿಮಾ 2008ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಶಾರುಖ್ ಖಾನ್- ಅನುಷ್ಕಾ ಶರ್ಮಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಆದರೆ ತೆರೆಯ ಹಿಂದೆ, ಈ ಸಿನಿಮಾ ಶೂಟಿಂಗ್‌ಗಿಂತ ಮುಂಚೆ ನಿರ್ದೇಶಕ ಆದಿತ್ಯಾ ಚೋಪ್ರಾಗೆ ತಮ್ಮ ಸಿನಿಮಾದಿಂದ ಅನುಷ್ಕಾರನ್ನು ಕೈ ಬಿಡುವಂತೆ ಸಲಹೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನುಷ್ಕಾ ಬೇಡ ಎಂದಿದ್ದೇಕೆ? ಬೇರೆ ಯಾವ ನಟಿಯ ಹೆಸರನ್ನು ಸೂಚಿಸಿದ್ದರು? ಅಸಲಿ ವಿಚಾರವೇನು ಎಂಬುದನ್ನ ಕರಣ್ ಜೋಹರ್ ಬಾಯ್ಬಿಟ್ಟಿದ್ದಾರೆ.

    ನಿರ್ದೇಶಕ ಆದಿತ್ಯ ಚೋಪ್ರಾ ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಮಾಡಲು ಹೊರಟಿದ್ದರು. ಶಾರುಖ್ ಖಾನ್‌ಗೆ (Sharukh Khan) ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿತ್ತು. ಇತ್ತ ಹೀರೊಯಿನ್ ಹುಡುಕಾಟ ನಡೆಯುತ್ತಿತ್ತು. ಈ ವೇಳೆ ಆದಿತ್ಯ ಚೋಪ್ರಾ, ಕರಣ್ ಬಳಿ ಅನುಷ್ಕಾ ಶರ್ಮಾ ಫೋಟೊ ತೋರಿಸಿ ಅಭಿಪ್ರಾಯ ಕೇಳಿದ್ದರು. ಆಗ ಕರಣ್ ಮತ್ತೊಬ್ಬ ನಟಿ ಸೋನಮ್ ಕಪೂರ್ (Sonam Kapoor) ಹೆಸರನ್ನು ಸೂಚಿಸಿದ್ದರು. ಇದನ್ನೂ ಓದಿ:ರಾಜಕೀಯಕ್ಕೆ ಶುಭಾ ಪೂಂಜಾ ಎಂಟ್ರಿ ಕೊಡ್ತಾರಾ? ಸ್ಪಷ್ಟನೆ ನೀಡಿದ ನಟಿ

    ಬೇಡ ಬೇಡ.. ಅನುಷ್ಕಾರನ್ನ ಸಿನಿಮಾಗೆ ಹಾಕಿಕೊಳ್ಳೋಕೆ ಹುಚ್ಚು ಹಿಡಿದಿದೆಯಾ? ಈ ಸಿನಿಮಾಗಾಗಿ ಅನುಷ್ಕಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ ಈ ಬಗ್ಗೆ ಕರಣ್ ಜೋಹರ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅನುಷ್ಕಾ ಶರ್ಮಾ ಸಿನಿಮಾ ಬದುಕು ನಾಶವಾಗುತ್ತಿತ್ತು ಎಂದು ಮಾತನಾಡಿದ್ದಾರೆ. ರಿಲೀಸ್ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದ್ದೆ, ಆ ಚಿತ್ರದ ಯಶಸ್ಸನ್ನ ತಡೆಯಲಾಗಲಿಲ್ಲ. ಈ ವಿಚಾರವಾಗಿ ಅನುಷ್ಕಾ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

    ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಬಳಿಕ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಟನೆ ನೋಡಿ ಮೆಚ್ಚಿಕೊಂಡರು. ಮುಂದೆ ತಮ್ಮದೇ ನಿರ್ಮಾಣದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಅನುಷ್ಕಾ ಶರ್ಮಾರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಣ್‌ಬೀರ್ ಕಪೂರ್, ಐಶ್ವರ್ಯ ರೈ ಜೊತೆ ಅನುಷ್ಕಾ ಶರ್ಮಾ ಅದ್ಭುತವಾಗಿ ನಟಿಸಿದರು.

  • ಸೈಫ್ ಆಲಿ ಖಾನ್ ಪುತ್ರನನ್ನು ಲಾಂಚ್ ಮಾಡ್ತಿದ್ದಾರೆ ನಿರ್ಮಾಪಕ ಕರಣ್‌ ಜೋಹರ್

    ಸೈಫ್ ಆಲಿ ಖಾನ್ ಪುತ್ರನನ್ನು ಲಾಂಚ್ ಮಾಡ್ತಿದ್ದಾರೆ ನಿರ್ಮಾಪಕ ಕರಣ್‌ ಜೋಹರ್

    ಬಾಲಿವುಡ್(Bollywood) ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಸಾಕಷ್ಟು ಸ್ಟಾರ್ ಕಿಡ್ಸ್‌ನ ಲಾಂಚ್ ಮಾಡಿದ್ದಾರೆ. ಆಲಿಯಾ ಭಟ್, ವರುಣ್ ಧವನ್ ಹೀಗೆ ಸಾಕಷ್ಟು ಸ್ಟಾರ್ ಮಕ್ಕಳ ಎಂಟ್ರಿಗೆ ಕರಣ್ ಜೋಹರ್ ಸಾಥ್ ನೀಡಿದ್ದಾರೆ. ಇದೀಗ ಸೈಫ್ ಆಲಿ ಖಾನ್ (Saif Ali Khan) ಪುತ್ರ ಇಬ್ರಾಹಿಂ ಆಲಿ ಖಾನ್ ಲಾಂಚ್‌ಗೆ ಕರಣ್ ಜೋಹರ್ (Karan Johar) ಸಾಥ್ ನೀಡುತ್ತಿದ್ದಾರೆ.

    ಬಿಟೌನ್‌ನ ಅದೆಷ್ಟೋ ಸೂಪರ್ ಸ್ಟಾರ್‌ಗಳ ಮಕ್ಕಳ ಎಂಟ್ರಿಗೆ ಕಾರಣವಾಗಿರೋದೇ ಕರಣ್ ಜೋಹರ್ ಹೀಗಿರುವಾಗ ಮತ್ತೊಬ್ಬ ಸ್ಟಾರ್ ನಟ ಪುತ್ರನಿಗೆ ಗ್ರ್ಯಾಂಡ್ ಆಗಿ ಲಾಂಚ್ ಮಾಡಲು ಮುಂದಾಗಿದ್ದಾರೆ. ಡಿಫರೆಂಟ್ ಕಥೆಯ ಮೂಲಕ ಇಬ್ರಾಂಹಿಂಗೆ (Ibrahim Ali Khan) ಲಾಂಚ್ ಮಾಡಲು ತೆರೆಮರೆಯಲ್ಲಿ ಸಖತ್ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ʻಸಿಂಧೂರ ಲಕ್ಷ್ಮಣʼನಾಗಿ ಬರಲಿದ್ದಾರೆ ನಟ ಧನಂಜಯ

    ಈಗಾಗಲೇ ಕರಣ್ ನಿರ್ಮಾಣದ ರಣ್‌ವೀರ್, ಆಲಿಯಾ ನಟನೆಯ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಇಬ್ರಾಹಿಂ ಆಲಿ ಖಾನ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.ಈಗ ಅವರ ನಿರ್ಮಾಣದ ಹೊಸ ಚಿತ್ರದಲ್ಲಿ ನಾಯಕನಾಗಿ ಮಿಂಚಲು ರೆಡಿಯಾಗಿದ್ದಾರೆ.

    ಇನ್ನೂ ಸೈಫ್ ಪುತ್ರಿ ಸಾರಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ ಈ ಬೆನ್ನಲ್ಲೇ ಚಿತ್ರರಂಗಕ್ಕೆ ಮಗನ ಎಂಟ್ರಿ ಕೂಡ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ (Bigg Boss Hindi) ಸೀಸನ್ 16 ಹಿಂದಿ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗುತ್ತಿದೆ. ಸಲ್ಮಾನ್ ಖಾನ್(Salman Khan) ನೇತೃತ್ವದಲ್ಲಿ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ ಈಗ ದೊಡ್ಮನೆಯಿಂದ ಹೊರಗೆ ಇರಬೇಕಾದ ಪರಿಸ್ಥಿತಿಯನ್ನ ಸಲ್ಮಾನ್ ಎದುರಿಸುತ್ತಿದ್ದಾರೆ. ಅನಾರೋಗ್ಯದ ನಿಮಿತ್ತ ಸಲ್ಲು ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    ಹಿಂದಿ ಬಿಗ್ ಬಾಸ್‌ಗೆ(Bigg Boss) ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ವೀಕೆಂಡ್‌ನಲ್ಲಿ ಸಲ್ಲುನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಇದೀಗ ಫ್ಯಾನ್ಸ್‌ಗೆ ಸ್ಯಾಡ್ ನ್ಯೂಸ್‌ವೊಂದು ಸಿಕ್ಕಿದೆ. ಸಲ್ಮಾನ್ ಖಾನ್ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್‌ನಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ನಾನು ಸಿಂಗಲ್, ನಂಗೂ ಜೋಡಿ ಬೇಕು ಎಂದು ಬಿಗ್ ಬಾಸ್‌ಗೆ ಕಾವ್ಯಶ್ರೀ ಬೇಡಿಕೆ

    ಸಲ್ಲು ಡೆಂಗ್ಯೂ ಇರುವುದು ಪತ್ತೆಯಾಗಿದೆ. ಹಾಗಾಗಿ ಅವರ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಬಿಗ್ ಬಾಸ್ ನಿರೂಪಣೆಗೆ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳು ಗುರುವಾರವೇ ಶೂಟ್ ಮಾಡುತ್ತಾರೆ. ಈ ಶೂಟ್‌ಗೆ ನಟ ಗೈರಾಗಿದ್ದಾರೆ. ಇನ್ನೂ ನೆಚ್ಚಿನ ನಟ ಸಲ್ಲು ಶೀಘ್ರದಲ್ಲಿ ಗುಣಮುಖವಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ೧೬ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಮೂಲಗಳು ತಿಳಿಸಿವೆ. ಕರಣ್ ಅವರು ಸಲ್ಮಾನ್ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್‌ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]