Tag: ಕರಣ್ ಒಬೆರಾಯ್

  • ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಮುಂಬೈ: ಕಿರುತೆರೆ ನಟ ಮತ್ತು ನಿರೂಪಕ ಕರಣ್ ಒಬೆರಾಯ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದ ಮಾಡೆಲ್‍ಗೆ ಶನಿವಾರ ಬೆಳಗ್ಗೆ ಇಬ್ಬರು ಅಪರಿಚಿತರು ಚಾಕು ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಬೆಳಗ್ಗೆ ವಾಕಿಂಗ್ ಎಂದು ಹೋಗಿದ್ದ 34 ವರ್ಷದ ಮಾಡೆಲ್‍ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯನ್ನು ಹರಿತವಾದ ಅಯುಧದಿಂದ ಇರಿದು ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    2017ರಲ್ಲಿ ನನ್ನ ಮೇಲೆ ಕರಣ್ ಅತ್ಯಾಚಾರ ಮಾಡಿದ್ದಾನೆ ಎಂದು ಮಾಡೆಲ್ ಮೇ 6 ರಂದು ದೂರು ನೀಡಿದ್ದಳು. ಈ ದೂರಿನ ಪ್ರಕಾರ ಕರಣ್ ಪೋಲಿಸರು ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣ ಕೋರ್ಟ್‍ನಲ್ಲಿ ಇರುವಾಗಲೇ ಲೋಖಂಡ್ವಾಲಾ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ವಾಕಿಂಗ್ ಹೋಗಿದ್ದ ಮಾಡೆಲ್ ಮೇಲೆ ಇಬ್ಬರು ಅಪರಿಚಿತ ದಾಳಿ ಮಾಡಿ ಚಾಕುವಿನಿಂದ ಇರಿದು ಹೋಗುವಾಗ ಒಂದು ಪತ್ರವನ್ನು ಎಸೆದು ಹೋಗಿದ್ದಾರೆ. ಇದನ್ನು ಓದಿ: ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಈ ಸಮಯದಲ್ಲಿ ಮಾಡೆಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಬಂದು ಸಹಾಯ ಮಾಡಿದ್ದಾರೆ. ನಂತರ ಒಶಿವಾರದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾರ್ ಅವರಿಗೆ ಮಾಡೆಲ್ ದೂರು ನೀಡಿದ್ದು ತನಿಖೆ ಮಾಡಲಾಗುತ್ತಿದೆ.

    ಏನಿದು ಪ್ರಕರಣ?
    ಕರಣ್ ಮಾಡೆಲ್‍ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ರ ಆಡಿ ಪ್ರಕರಣ ದಾಖಲಾಗಿದ್ದು ಕರಣ್ ನನ್ನು ಪೊಲೀಸರು ಬಂಧಿಸಿದ್ದರು.