Tag: ಕರಗ ಮಹೋತ್ಸವ

  • ಏ. 6ರಂದು ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ

    ಏ. 6ರಂದು ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ

    ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ (Bengaluru Karaga Mahotsav) ಕ್ಕೆ ದಿನಾಂಕ ನಿಗದಿಯಾಗಿದೆ. 2023ರ ಕರಗ ಉತ್ಸವ 11 ದಿನಗಳ ಕಾಲ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ನಡೆದಿದ್ದು, ಬಿಬಿಎಂಪಿ (BBMP) ಕೂಡ ಅನುದಾನ ಬಿಡುಗಡೆ ಒಪ್ಪಿದೆ.

    ಇದೇ ತಿಂಗಳ 29 ರಿಂದ ಕರಗ ಆರಂಭ ಆಗಲಿದ್ದು, 11 ದಿನಗಳ ಕಾಲ ಕರಗೋತ್ಸವ ನಡೆಯಲಿದೆ. ಐತಿಹಾಸಿಕ ಬೆಂಗಳೂರು ಕರಗಕ್ಕೆ ಭರಾಟೆ ಸಿದ್ಧತೆ ನಡೆದಿದೆ. ಬೆಂಗಳೂರು ಕರಗ ಮಹೋತ್ಸವಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಜನ ಆಗಮಿಸಿ ಕರಗೋತ್ಸೋವಕ್ಕೆ ಸಾಕ್ಷಿಯಾಗಲಿದ್ದಾರೆ.

    11 ದಿನಗಳ ಕಾಲ ಕರಗ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಾರ್ಚ್ 29 ರಥೋತ್ಸವ ದ್ವಜಾರೋಹಣ, ಮಾ. 30-ಏ.2ರವರೆಗೆ ವಿಶೇಷ ಪೂಜೆ;ಮಹಾಮಂಗಳಾರತಿ, ಏಪ್ರಿಲ್ 03 – ಆರತಿ ಕಾರ್ಯಕ್ರಮ, ಏಪ್ರಿಲ್ 04 – ಹಸಿ ಕರಗ, ಏಪ್ರಿಲ್ 05 – ಹೊಂಗಲು ಸೇವೆ ಹಾಗೂ ಏಪ್ರಿಲ್ 06 – ಕರಗ ಶಕ್ತ್ಯೋತ್ಸವ ನಡೆಯಲಿದೆ.

    ಮಸ್ತಾನ್ ದರ್ಗಾಕ್ಕೆ ಕರಗ ಸಾಗಬಾರದು ಅಂತಾ ಕೆಲವರು ವಿರೋಧ ಮಾಡುತ್ತಿದ್ದಾರೆ. ಕರಗ ಸಮಿತಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ. ಮಸ್ತಾನ್ ದರ್ಗಾಕ್ಕೆ ಹೋಗಬಾರದು ಅನ್ನೋದು ಸರಿಯಲ್ಲ. ಪರಂಪರೆಯಿಂದ ನಡೆದುಕೊಂಡು ಬಂದಿರೋದನ್ನ ತಪ್ಪಿಸೋಕೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: WPL 2023: ಮುಂಬೈಗೆ ಜಯ – RCB ಸೋಲಿನ ವಿದಾಯ

    ಬೆಂಗಳೂರು ಕರಗ ಸಮಿತಿ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಸಭೆ ನಡೆಸಿದರು. ಕರಗ ಸಾಗುವ ರಸ್ತೆಯಲ್ಲಿ ಸ್ವಚ್ಛ ಮಾಡಲು ಬಿಬಿಎಂಪಿಗೆ ಕರಗ ಸಮಿತಿ ಮನವಿ ಮಾಡಿಕೊಂಡಿದೆ. ಕರಗೋತ್ಸವಕ್ಕೆ ಬಿಬಿಎಂಪಿ 40.35 ಲಕ್ಷ ನೀಡೋದಾಗಿ ತಿಳಿಸಿದೆ. ಆರ್ಥಿಕ ವರ್ಷ ಮಾರ್ಚ್‍ಗೆ ಕೊನೆಗೊಳ್ಳುತ್ತಿದ್ದು, ಉಳಿದ 75 ಲಕ್ಷ ಹಣ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡೋದಾಗಿ ಬಿಬಿಎಂಪಿ ಆಯುಕ್ತರು ಭರವಸೆ ನೀಡಿದೆ.

  • ವಿಜೃಂಭಣೆಯಿಂದ ಜರುಗಿದ ಬೆಂಗ್ಳೂರು ಕರಗ- ಮೆರವಣಿಗೆಯಲ್ಲಿ ಅಪ್ಪುಗೆ ಜೈಕಾರ

    ವಿಜೃಂಭಣೆಯಿಂದ ಜರುಗಿದ ಬೆಂಗ್ಳೂರು ಕರಗ- ಮೆರವಣಿಗೆಯಲ್ಲಿ ಅಪ್ಪುಗೆ ಜೈಕಾರ

    ಬೆಂಗಳೂರು: ವಿಶ್ವ ವಿಖ್ಯಾತ, ಐತಿಹಾಸಿಕ ಬೆಂಗಳೂರು ಕರಗ ಅದ್ದೂರಿಯಾಗಿ ನೆರವೇರಿದೆ. ಕಳೆದೆರಡು ವರ್ಷದಿಂದ ಕೊರೊನಾ ಹೊಡೆತದಿಂದ ಕಳೆಗುಂದಿದ್ದ ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವ ಈ ವರ್ಷ ಅದ್ಧೂರಿಯಾಗಿ ನೆರವೇರಿದೆ. ಮಳೆಯ ಕಾರಣದಿಂದಾಗಿ ನಿಗದಿತ ಸಮಯಕ್ಕಿಂತ ಕೊಂಚ ತಡವಾಗಿ ಕರಗ ಉತ್ಸವವನ್ನು ಆರಂಭಿಸಲಾಯ್ತು.

    2 ವರ್ಷಗಳ ಬಳಿಕ ನಡೆದ ಬೆಂಗಳೂರು ಕರಗ ಉತ್ಸವಕ್ಕೆ ಭಕ್ತಸ್ತೋಮವೇ ಭಾಗಿ ಆಗಿತ್ತು. ಇನ್ನು ಈ ಬಾರಿಯೂ ವೀರಕುಮಾರ ಜ್ಞಾನೇಂದ್ರ ಅವರೇ ಕರಗ ಹೊತ್ತು ಸಾಗಿದ್ರು. ಮಳೆಯಿಂದಾಗಿ ತಡವಾಗಿ ಆರಂಭವಾದ ಕರಗ ಮೆರವಣಿಗೆ ಬೆಳಗ್ಗಿನ ಜಾವದವರೆಗೂ ನಡೆಯಿತು. ಚಿತ್ತ ಹುಣ್ಣಿಮೆದಿನ ದುಂಡು ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ಆದಿಶಕ್ತಿ ಸ್ವರೂಪಿಣಿಯಾದ ದ್ರೌಪದಿಯನ್ನು ಭಕ್ತರು ಕಣ್ತುಂಬಿಕೊಂಡರು.

    ಕಬ್ಬನ್‍ಪೇಟೆಯ ಗಲ್ಲಿಗಳು, ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನಕ್ಕೆ ದ್ರೌಪದಿ ಕರಗ ವಾಪಸಾಯ್ತು. ಇದನ್ನೂ ಓದಿ: ಡಿಕೆ ಸ್ಫೋಟಕ ಫಿಫ್ಟಿ – ಕೊಹ್ಲಿ ಸ್ಟನ್ನಿಂಗ್ ಕ್ಯಾಚ್‌ – ಡೆಲ್ಲಿ ವಿರುದ್ಧ ಆರ್​ಸಿಬಿಗೆ 16 ರನ್‍ಗಳ ಜಯ

    ಒಟ್ಟಿನಲ್ಲಿ ಕೊರೊನಾ ಕಂಟಕದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಬೆಂಗಳೂರು ಐತಿಹಾಸಿಕ ಕರಗ ಅದ್ಧೂರಿಯಾಗಿ ನೆರವೇರಿದೆ. ಭಕ್ತ ಸಮೂಹ ದ್ರೌಪದಿ ಕರಗವನ್ನು ಕಣ್ತುಂಬಿಕೊಂಡು ಕೃಪೆಗೆ ಪಾತ್ರರಾದ್ರು.

  • ಬೆಂಗಳೂರು ಕರಗಕ್ಕೆ ಹೈಕೋರ್ಟಿನಿಂದ ತಡೆ

    ಬೆಂಗಳೂರು ಕರಗಕ್ಕೆ ಹೈಕೋರ್ಟಿನಿಂದ ತಡೆ

    ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಸಭೆ, ಸಮಾರಂಭ ಮುಂತಾದ ಕಾರ್ಯಕ್ರಮಗಳು ನಡೆಯಬಾರದೆಂದು ಸರ್ಕಾರ ಆದೇಶಿಸಿದೆ. ಈ ಮಧ್ಯೆ ಬೆಂಗಳೂರು ಕರಗಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಇದೀಗ ವಿಶ್ವ ವಿಖ್ಯಾತ ಸಿಲಿಕಾನ್ ಸಿಟಿಯ ಕರಗಕ್ಕೆ ಬ್ರೇಕ್ ಬಿದ್ದಿದ್ದು, ಕರಗ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.

    ಕೇಂದ್ರ ಸರ್ಕಾರದ ಆದೇಶದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿಲ್ಲ. ಹೀಗಾಗಿ ಬೆಂಗಳೂರು ಕರಗ ಸಹ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಆದೇಶ ಪಾಲನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಇದನ್ನು ದಾಖಲಿಸಿಕೊಂಡಿದ್ದು, ಕರಗ ನಡೆಸದಂತೆ ಆದೇಶಿಸಿದೆ.

    ಕೊರೊನಾ ಭೀತಿಯ ನಡುವೆಯೂ ಬೆಂಗಳೂರಿನ ಧರ್ಮರಾಯ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹಸಿಕರಗ ನಡೆದಿದೆ. ಆದರೆ ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಕರಗದ ಪೂಜಾರಿ, ನಾಲ್ಕು ಜನ ವೀರಕುಮಾರರು ಮಾತ್ರ ಭಾಗಿಯಾಗಿದ್ದರು. ಮುಖ್ಯಮಂತ್ರಿಯವರು ಸರಳವಾಗಿ ಕರಗ ಮಹೋತ್ಸವ ಆಚರಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಸಿ ಕರಗ ಬಹಳ ಸರಳವಾಗಿಯೇ ನಡೆದಿದೆ.

    ಕರಗ ಮಹೋತ್ಸವಕ್ಕೂ ಎರಡು ದಿನಗಳ ಹಿಂದೆ ಈ ಹಸಿಕರಗ ನಡೆಯುತ್ತದೆ. ಬುಧವಾರ ರಾತ್ರಿ ಸರಳವಾಗಿ ಧರ್ಮರಾಯನ ದೇವಸ್ಥಾನದಲ್ಲಿ ಸರಳವಾಗಿ ಕರಗ ಮಹೋತ್ಸವ ನಡೆಯಲಿತ್ತು. ಈ ವೇಳೆ ಯಾವುದೇ ಭಕ್ತರಿಗೆ ದೇವಸ್ಥಾನ ಮತ್ತು ಪೂಜೆ ಪುರಸ್ಕಾರಗಳಿಗೆ ಪ್ರವೇಶವಿಲ್ಲ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಈ ಮಧ್ಯೆ ಹೈಹೋರ್ಟ್ ಕರಗ ನಡೆಸದಂತೆ ಆದೇಶಿಸಿದೆ.

  • ಕೊರೊನಾ ಎಫೆಕ್ಟ್ – ಬೆಂಗಳೂರು ಕರಗ ರದ್ದು

    ಕೊರೊನಾ ಎಫೆಕ್ಟ್ – ಬೆಂಗಳೂರು ಕರಗ ರದ್ದು

    ಬೆಂಗಳೂರು: ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಪ್ರತಿ ವರ್ಷ ನಡೆಯುತ್ತಿದ್ದ ಬೆಂಗಳೂರು ಕರಗ ಮಹೋತ್ಸವವನ್ನು ಈ ಬಾರಿ ರದ್ದುಗೊಳಿಸಲಾಗಿದೆ.

    ದೇಶಾದ್ಯಂತ ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆ ಜನರು ಮನೆಯಿಂದ ಹೊರ ಬರಬಾರದೆಂದು ಸೂಚನೆ ಇದೆ. ಹಾಗೆಯೇ ಯಾವುದೇ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸಬಾರದು ಎಂದು ತಿಳಿಸಲಾಗಿದೆ. ಹೀಗಾಗಿ ಗೃಹ ಇಲಾಖೆಯ ಆದೇಶದ ಅಡಿ ಕರಗ ಮಹೋತ್ಸವವನ್ನು ರದ್ದುಗೊಳಿಸಲಾಗಿದ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಕಳೆದ ಬಾರಿ ಚೈತ್ರ ಪೂರ್ಣಿಮೆಯ ದಿನದಂದು ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಂಗಳೂರು ಕರಗ ಮಹೋತ್ಸವ ವೈಭವಪೂರ್ಣವಾಗಿ ನಡೆದಿತ್ತು.

    ಕರಗ ಹೊತ್ತಿದ್ದ ಅರ್ಚಕ ಎನ್. ಮನು ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ, ಮಂಗಳ ವಾದ್ಯಗಳು ಮೊಳಗಿದ್ದವು. ಖಡ್ಗ ಹಿಡಿದಿದ್ದ ನೂರಾರು ವೀರಕುಮಾರರು ಗೋವಿಂದಾ ಗೋವಿಂದಾ ಎಂದು ನಾಮಸ್ಮರಣೆ ಮಾಡುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದ್ದರು.

  • ಅದ್ಧೂರಿ ಕರಗ ಮಹೋತ್ಸವ – ಅಗ್ನಿಕೊಂಡ ಹಾಯ್ದ ದೇವಿಯ ಪ್ರಧಾನ ಅರ್ಚಕ

    ಅದ್ಧೂರಿ ಕರಗ ಮಹೋತ್ಸವ – ಅಗ್ನಿಕೊಂಡ ಹಾಯ್ದ ದೇವಿಯ ಪ್ರಧಾನ ಅರ್ಚಕ

    ರಾಮನಗರ: ಐತಿಹಾಸಿಕ ಹಾಗೂ ಆಷಾಢ ಮಾಸದಲ್ಲಿ ನಡೆಯುವ ಕರಗ ಮಹೋತ್ಸವಗಳಲ್ಲಿ ಒಂದಾದ ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

    ನಾಡದೇವತೆ ಚಾಮುಂಡೇಶ್ವರಿ ದೇವಿಯ ಪ್ರಧಾನ ಅರ್ಚಕ ದೇವಿಪ್ರಸಾದ್ ಸಿಂಗ್ ಅಗ್ನಿಕೊಂಡವನ್ನು ಹಾಯ್ದರು. ಆಷಾಢ ಮಾಸದಲ್ಲಿ ನಡೆಯುವ ಚಾಮುಂಡೇಶ್ವರಿ ಕರಗ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ನಗರದ ಏಳು ದೇವತೆಗಳ ಕರಗಮಹೋತ್ಸವವೂ ಕೂಡ ಆಷಾಢದಲ್ಲಿಯೇ ನಡೆಯುತ್ತದೆ.

    ಮಂಗಳವಾರ ರಾತ್ರಿ ಚಾಮುಂಡೇಶ್ವರಿ ಕರಗ ಸಮಿತಿ ವತಿಯಿಂದ ಗಾಯಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಮ್ಯೂಸಿಕಲ್ ನೈಟ್ಸ್ ನಡೆಸಲಾಯಿತು. ಸಂಗೀತ ರಸಸಂಜೆಯಲ್ಲಿ ಗಾಯಕರ ಗೀತೆಗೆ ಸಾರ್ವಜನಿಕರು ಹುಚ್ಚೆದ್ದು ಸ್ಟೆಪ್ಸ್ ಹಾಕಿದರು.

    ಇಂದು ಬೆಳಗ್ಗೆ ನಡೆದ ಅಗ್ನಿಕೊಂಡವನ್ನ ನೋಡಲು ಜಿಲ್ಲೆಯ ವಿವಿಧ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು.