Tag: ಕಮ್ಮನಹಳ್ಳಿ

  • ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಲೈಂಗಿಕ ಕಿರುಕುಳ – ಕಮ್ಮನಹಳ್ಳಿಯಲ್ಲಿ ಕಾಮುಕರ ಅಟ್ಟಹಾಸ!

    ಬೆಂಗಳೂರು: ಕ್ಯಾಬ್ ಬುಕ್ ಮಾಡಿದ್ದ ಯುವತಿಯ ಮೇಲೆ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ (Bengaluru) ಕಮ್ಮನಹಳ್ಳಿಯಲ್ಲಿ (Kammanahalli)) ನಡೆದಿದೆ.

    ಜ.27ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಯುವತಿಯೊಬ್ಬಳು ಕಮ್ಮನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಬರುತ್ತಿದ್ದಂತೆ ಯುವತಿ ಕಾರಿನೊಳಗೆ ಕುಳಿತುಕೊಂಡಿದ್ದಾಳೆ. ಇದೇ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಕಾರಿನೊಳಗೆ ಕೂತಿದ್ದಾರೆ.ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ

    ಆಗ ಭಯಗೊಂಡ ಯುವತಿ ಕಾರಿನಿಂದ ಇಳಿದು ಓಡಿದ್ದಾಳೆ. ಆಕೆಯ ಬೆನ್ನಟ್ಟಿ ಹೋದ ಕಾಮುಕರು ಕುತ್ತಿಗೆ ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಮತ್ತೊಬ್ಬ ಬಟ್ಟೆ ಬಿಚ್ಚಲು ಯತ್ನಿಸಿ, ಯುವತಿಯ ಎದೆಭಾಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಯುವತಿ ಜೋರಾಗಿ ಕಿರುಚಿಕೊಳ್ಳುತ್ತಿದಂತೆ ಅಕ್ಕಪಕ್ಕದಲ್ಲಿದ್ದ ಜನರು ಬಂದಿದ್ದಾರೆ. ಬರುವಷ್ಟರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ.

    ಘಟನೆ ಬಗ್ಗೆ ಬಣಸವಾಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಇಬ್ಬರು ಯುವಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದನ್ನೂ ಓದಿ: Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ

  • Bengaluru| ಮಳೆಗೆ ಕಮ್ಮನಹಳ್ಳಿಯಲ್ಲಿ ಹೊತ್ತಿ ಉರಿದ ಟ್ರಾನ್ಸ್‌ಫಾರ್ಮರ್

    Bengaluru| ಮಳೆಗೆ ಕಮ್ಮನಹಳ್ಳಿಯಲ್ಲಿ ಹೊತ್ತಿ ಉರಿದ ಟ್ರಾನ್ಸ್‌ಫಾರ್ಮರ್

    ಬೆಂಗಳೂರು: ಮಳೆಯ ಹಿನ್ನೆಲೆ ಶಾರ್ಟ್ ಸರ್ಕ್ಯೂಟ್ ಆಗಿ ಟ್ರಾನ್ಸ್‌ಫಾರ್ಮರ್ (Transformer) ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಕಮ್ಮನಹಳ್ಳಿಯಲ್ಲಿ ನಡೆದಿದೆ.

    ಭಾನುವಾರ ಮಧ್ಯರಾತ್ರಿ 12:20ರ ಸುಮಾರಿಗೆ ಘಟನೆ ನಡೆದಿದೆ. ಹೋಟೆಲ್ ಎಂಪೈರ್ ಬಳಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕ್ರಮ ಕೈಗೊಂಡು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್‌ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!

    ಮಳೆ ಆದ ಕಾರಣ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ

  • ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: ಕೊನೆಗೂ ಆರೋಪಿಗಳನ್ನು ಪತ್ತೆಹಚ್ಚಿದ ಸಂತ್ರಸ್ತೆ

    ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: ಕೊನೆಗೂ ಆರೋಪಿಗಳನ್ನು ಪತ್ತೆಹಚ್ಚಿದ ಸಂತ್ರಸ್ತೆ

    ಬೆಂಗಳೂರು: ಇತ್ತೀಚೆಗೆ ನಗರದ ಕಮ್ಮನಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂತ್ರಸ್ತ ಯುವತಿ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾಳೆ.

    ಘಟನೆ ಬಳಿಕ ಶಾಕ್‍ಗೆ ಒಳಗಾಗಿದ್ದ ಯುವತಿ ಪೊಲೀಸ್ ತನಿಖೆಗೆ ಸ್ಪಂದಿಸ್ತಾ ಇರ್ಲಿಲ್ಲ. ಮಾತ್ರವಲ್ಲದೇ ಆರೋಪಿಗಳ ಗುರುತು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು 2 ಬಾರಿ ಪರೇಡ್ ಮಾಡುವುದಾಗಿ ಹೇಳಿದ್ದು, ಇದಕ್ಕೆ ಯುವತಿ ಹಾಜರಾಗದೇ ಪೆರೇಡ್ ರದ್ದಾಗಿತ್ತು.

    ಪೊಲೀಸರು ಎಷ್ಟೇ ಬಾರಿ ಮನವೊಲಿಕೆ ಯತ್ನ ಮಾಡಿದ್ರು ಡೋಂಟ್ ಡಿಸ್ಟರ್ಬ್ ಮೀ ಅಂತಲೇ ಮೆಸೇಜ್ ಕಳಿಸ್ತಾ ಇದ್ಲು. ಯುವತಿಯ ಈ ವರ್ತನೆಯಿಂದ ಭಯಗೊಂಡಿದ್ದ ಪೊಲೀಸ್ರು ತನಿಖೆ ಹಳ್ಳ ಹಿಡಿಯುತ್ತೆ ಅಂದುಕೊಂಡಿದ್ರು. ಹೀಗಾಗಿ ಮೂರನೇ ಬಾರಿ ಪೆರೇಡ್‍ಗೆ ಹಾಜರಾಗದಿದ್ದಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಚಿಂತನೆ ನಡೆಸಿದ್ದರು. ಕೊನೆಗೆ ಕೂಡ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಮಾಡಿದ್ದು, ಆರೋಪಿಗಳ ಪತ್ತೆಗೆ ಆದ ಕಷ್ಟ ಎಲ್ಲವನ್ನೂ ಯುವತಿಗೆ ಹೇಳಿ ಮನವೊಲಿಕೆ ಮಾಡಿದ್ದಾರೆ. ಮಾತ್ರವಲ್ಲದೇ ಪೆರೇಡ್‍ನಲ್ಲಿ ಹಾಜರಾಗಿ ಆರೋಪಿಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೇಳಿದ್ದಾರೆ. ಪೊಲೀಸರ ಮನವೊಲಿಕೆಯ ಬಳಿಕ ಮಂಗಳವಾರ ಸಂತ್ರಸ್ತ ಯುವತಿ ಪೆರೇಡ್‍ನಲ್ಲಿ ಹಾಜರಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆಗೆ ಸಹಕಾರ ನೀಡಿದ್ದಾಳೆ.

    ಏನಿದು ಪ್ರಕರಣ?: ಜನವರಿ 1ರ ಬೆಳಗಿನ ಜಾವ ಯುವತಿ ನ್ಯೂ ಇಯರ್ ಪಾರ್ಟಿ ಮುಗಿಸಿಕೊಂಡು ಆಟೋದಿಂದ ಇಳಿದು 50 ಮೀಟರ್ ದೂರದಲ್ಲಿದ್ದ ಮನೆಗೆ ತೆರಳುತ್ತಿದ್ದಾಗ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಯುವಕರು ಆಕೆಯನ್ನು ಚುಡಾಯಿಸಿ ಮುಂದಕ್ಕೆ ಹೋಗಿದ್ದರು. ಇದಾದ ಬಳಿಕ ಹಿಂದಿರುಗಿ ಬಂದ ಯುವಕರಲ್ಲಿ ಒಬ್ಬಾತ ಆಕೆಯನ್ನು ಗಟ್ಟಿಯಾಗಿ ತಬ್ಬಿ ದೌರ್ಜನ್ಯ ಎಸಗಿದ್ದ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಾಗ ಅವರು ಪರಾರಿಯಾಗಿದ್ದರು. ದೌರ್ಜನ್ಯ ಎಸಗುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಲೆನೋ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

     

  • ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ಬೆದರಿಕೆಗೆ ನಾಪತ್ತೆಯಾಗಿದ್ದಾಳೆ ಸಂತ್ರಸ್ತೆ!

    ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ಬೆದರಿಕೆಗೆ ನಾಪತ್ತೆಯಾಗಿದ್ದಾಳೆ ಸಂತ್ರಸ್ತೆ!

    ಬೆಂಗಳೂರು: ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ನಾಪತ್ತೆಯಾಗಿ ಪ್ರಕರಣದ ತನಿಖೆಗೆ ಪೊಲೀಸರಿಗೆ ಸಹಕಾರ ನೀಡದೇ ಇರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು, ಪೊಲೀಸರಿಗೆ ಮಾಹಿತಿ ನೀಡದೇ ಯುವತಿ ಈಗ ಮನೆಯನ್ನು ಖಾಲಿ ಮಾಡಿದ್ದು, ಎಲ್ಲಿ ನೆಲೆಸಿದ್ದೇನೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಪೊಲೀಸರ ಸಂಪರ್ಕಕ್ಕೂ ಸಿಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ. ಆರೋಪಿಗಳ ಕಡೆಯಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಮಂಗಳವಾರ ಜೈಲಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ದಿನಾಂಕ ನಿಗದಿಯಾಗಿದೆ. ಗುರುತು ಪತ್ತೆ ಮಾಡಲು ಮೂರನೇ ಬಾರಿ ಪೆರೇಡ್ ನಡೆಯಲಿದ್ದು, ಒಂದು ವೇಳೆ ಯುವತಿ ಹಾಜರಾಗದೇ ಇದ್ದಲ್ಲಿ ತನಿಖೆಗೆ ಭಾರೀ ಹಿನ್ನಡೆಯಾಗಲಿದೆ.

    ಯುವತಿ ಪೆರೇಡ್‍ಗೆ ಹಾಜರಾಗದ ಕಾರಣ ಎರಡು ಬಾರಿ ಪೆರೇಡ್ ರದ್ದಾಗಿತ್ತು. ಯುವತಿ ಮೂರನೇ ಬಾರಿಯೂ ಪೆರೇಡ್ ಗೆ ಬಾರದೇ ಇದ್ದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.

    ಏನಿದು ಪ್ರಕರಣ?
    ಜನವರಿ ಒಂದರ ಬೆಳಗಿನ ಜಾವ ಯುವತಿ ಪಾರ್ಟಿ ಮುಗಿಸಿಕೊಂಡು ಆಟೋದಿಂದ ಇಳಿದು 50 ಮೀಟರ್ ದೂರದಲ್ಲಿದ್ದ ಮನೆಗೆ ತೆರಳುತ್ತಿದ್ದಾಗ ಸ್ಕೂಟರ್‍ನಲ್ಲಿ ಬಂದಿದ್ದ ಇಬ್ಬರು ಯುವಕರು ಆಕೆಯನ್ನು ಚುಡಾಯಿಸಿ ಮುಂದಕ್ಕೆ ಹೋಗಿದ್ದರು. ಇದಾದ ಬಳಿಕ ಹಿಂದಿರುಗಿ ಬಂದ ಯುವಕರಲ್ಲಿ ಒಬ್ಬಾತ ಆಕೆಯನ್ನು ಗಟ್ಟಿಯಾಗಿ ತಬ್ಬಿ ದೌರ್ಜನ್ಯ ಎಸಗಿದ್ದ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಾಗ ಅವರು ಪರಾರಿಯಾಗಿದ್ದರು. ದೌರ್ಜನ್ಯ ಎಸಗುತ್ತಿದ್ದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಲೆನೋ ಸೇರಿದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

     

    https://www.youtube.com/watch?v=RJuNBL03x4A

    https://www.youtube.com/watch?v=-8b67OHUS-Y

  • ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗ್ಳೂರಲ್ಲಿ ಮತ್ತೆ ಕಾಮುಕರ ಅಟ್ಟಹಾಸ- ಗಗನ ಸಖಿ ಎದೆ ಮೇಲಿನ ಬಟ್ಟೆ ಎಳೆದು ಎಸ್ಕೇಪ್ ಆದ್ರು!

    ಬೆಂಗಳೂರು:  ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಮಾಸುವ ಮುನ್ನವೇ ನಗರದ ಹೆಚ್ ಆರ್ ಬಿಆರ್ ಲೇಔಟ್ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ಭಾನುವಾರ ರಾತ್ರಿ ಹೆಚ್ ಬಿಆರ್ ಲೇಔಟ್‍ನ 99 ದೋಸಾ ಹೋಟೆಲ್ ನಿಂದ ಊಟ ಮುಗಿಸಿದ ಯುವತಿ ತನ್ನ ಗೆಳೆಯ ಅನೀಶ್ ಜೊತೆ ನಡೆದುಕೊಂಡು ಬರುತ್ತಿದ್ದಾಗ ಎರಡು ಬೈಕಿನಲ್ಲಿ ಬಂದಂತಹ ಹೆಲ್ಮೆಟ್ ಧಾರಿ ದುಷ್ಕರ್ಮಿಗಳು ಗಗನಸಖಿಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ.

    ಕೂಡಲೇ ಯುವತಿ ಕಿರಿಚಿಕೊಂಡಿದ್ದರಿಂದ ಬೈಕ್‍ನಲ್ಲಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ಆಕೆಯ ಸ್ನೇಹಿತ ಅನೀಶ್ ಕೂಡ ದುಷ್ಕರ್ಮಿಗಳನ್ನು ತಡೆದಿದ್ದರಿಂದ ಹೆಚ್ಚಿನ ಅನಾಹುತವಾಗಲಿಲ್ಲ. ಇನ್ನು ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.