Tag: ಕಮಿಷನ್ ಆರೋಪ

  • ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ: ಹೆಚ್‌ಡಿಕೆ

    – ಗುತ್ತಿಗೆದಾರರಿಂದ ಕಮಿಷನ್‌ ಆರೋಪ; ಸರ್ಕಾರದ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

    ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಕಿಡಿಕಾರಿರುವ ಹೆಚ್‌ಡಿಕೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಘನತವೇತ್ತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯೂಟರ್ನ್ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ (!?) ಎಂಬುದಕ್ಕೆ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ.

    ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆಗೆ ನಾಂದಿ ಹಾಡಿದ್ದು, ಅನ್ಯಪಕ್ಷಗಳ ಸರ್ಕಾರಗಳೇ ಹೊರತು ಜೆಡಿಎಸ್ ಸರ್ಕಾರವಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ.

    ಸೋ ಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಪಾಪ ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ.

    ಸನ್ಮಾನ್ಯ ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸಿ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ. ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಸರಣಿ ಹಗರಣಗಳ ಸಿದ್ವಿಲಾಸಿ. ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

  • ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ

    ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ

    ಬೆಂಗಳೂರು: ರಾಜ್ಯ ಸರ್ಕಾರದ (State Government) ಮೇಲೆ ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

    ಗುತ್ತಿಗೆದಾರರ ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ, ಬೋಸರಾಜು ಮೇಲೆ ಆರೋಪ ಮಾಡಿರುವ ವಿಚಾರ ಹಾಗೂ ಸಿಎಂ, ಡಿಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರು ಏನಾದರೂ ಆರೋಪ ಮಾಡಿದರೆ, ಅದಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಗುತ್ತಿಗೆದಾರರ ದೂರು ಪರಿಶೀಲನೆ ಮಾಡುತ್ತೇವೆ. ಮಧ್ಯವರ್ತಿಗಳು ಯಾರು ಎಂದು ಅವರು ಮಾಹಿತಿ ಕೊಡಲಿ. ಯಾರ ಕುಟುಂಬದ ಹಸ್ತಕ್ಷೇಪ ಎಂದು ದಾಖಲಾತಿ ಕೊಡಲಿ. ಅವರು ಕೊಟ್ಟರೆ ದೂರು ಪರಿಶೀಲನೆ ಮಾಡುತ್ತೇವೆ. ಸಚಿವರು ಯಾರು? ಕುಟುಂಬದವರು ಯಾರು? ಎಂದು ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.

    ಯಾರ ಹಸ್ತಕ್ಷೇಪ ಎಂದು ಹೇಳಿದರೆ ತನಿಖೆ ಮಾಡಿಸಬಹುದು. ಬಿಜೆಪಿ ಮೇಲೆ 40% ಕಮಿಷನ್ ಆರೋಪದ ನ್ಯಾಯಾಂಗ ತನಿಖೆ ಆಗುತ್ತಿದೆ. ಕೋವಿಡ್‌ನಲ್ಲಿ ಅಕ್ರಮ ಆಗಿರುವ ಬಗ್ಗೆ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇದರ ತನಿಖೆಯೂ ನಡೆಯುತ್ತಿದೆ. ಅದೇ ರೀತಿ ಗುತ್ತಿಗೆದಾರರು ಏನಾದರೂ ಈ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

  • 40% ಕಮಿಷನ್ ಆರೋಪ ಪ್ರಕರಣ- ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

    40% ಕಮಿಷನ್ ಆರೋಪ ಪ್ರಕರಣ- ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ

    ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ (40% Commission) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವಾರದಲ್ಲಿ ವಿಚಾರಣಾ ಆಯೋಗ ತನಿಖೆ ಮುಗಿಯದಿದ್ದಲ್ಲಿ 100% ಬಿಲ್ ಮಂಜೂರಿಗೆ ಆದೇಶ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

    40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಇಂದು ಹೈಕೋರ್ಟ್‍ನ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೀತು. ಈ ವೇಳೆ ಫೆ. 6ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. 45 ದಿನ ಆದರೂ ತನಿಖೆ ಯಾಕೆ ನಡೆಸಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್ (Highcourt) ಪ್ರಶ್ನೆ ಮಾಡಿತು.

    ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಗುತ್ತಿಗೆಯ 75% ಹಣವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ, ಆದರೂ ಹಣ ಬಿಡುಗಡೆ ಮಾಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಂತ ಹಣ ತಡೆ ಹಿಡಿದಿಲ್ಲ, ಕೆಲವು ವಿಚಾರ ಕೇಳಿ ನಮಗೆ ಆಘಾತವಾಗಿದೆ. ಆ ವಿಚಾರಗಳನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಜ.3 ರಂದು ಆಯೋಗಕ್ಕೆ 45 ಕಾಮಗಾರಿಗಳ ದಾಖಲೆ ನೀಡಲಾಗಿದೆ ಎಂದು ಹೈಕೋರ್ಟ್ ಗೆ ತಿಳಿಸಿದರು.

    ಈ ವೇಳೆ ಜಡ್ಜ್, ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಆಗಿದೆ ಎಂದು ಹಣ ಬಿಡುಗಡೆ ಮಾಡಿಲ್ವಾ?. ವಿಚಾರಣೆಗಾಗಿ ರಚಿಸಿರುವ ಏಕಸದಸ್ಯ ಆಯೋಗಕ್ಕೆ ಮಾಹಿತಿ ನೀಡಿ. ಕೆಲಸ ಮಾಡಿಸಿಕೊಂಡು ಹಣ ನೀಡಲು ಏಕೆ ಸಮಸ್ಯೆ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈಗ ಪರ್ಸಂಟೇಜ್ ಕಡಿಮೆ ಆಗಿದೆ, ಆದ್ರೆ ಎಷ್ಟಾಗಿದೆ ಗೊತ್ತಿಲ್ಲ- ಉಲ್ಟಾ ಹೊಡೆದ ಕೆಂಪಣ್ಣ

    ಸರ್ಕಾರದ ವಿಳಂಬ ನೀತಿಗೆ ನ್ಯಾ.ಎಂ. ನಾಗಪ್ರಸನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಆಯೋಗದ ವಿಚಾರಣೆ ಪೂರ್ಣಗೊಳಿಸಲು 45 ಸಾಕಾಗುವುದಿಲ್ಲವೇ..?, ಫೆ. 6 ರೊಳಗೆ ಆಯೋಗ ವಿಚಾರಣೆ ಪೂರ್ಣಗೊಳಿಸಬೇಕಿತ್ತು. ಆಯೋಗಕ್ಕೆ ದಾಖಲೆ ಒದಗಿಸಲು ಅಧಿಕಾರಿಗಳು ತಡ ಮಾಡಿದ್ದೇಕೆ ಎಂದು ಪ್ರಶ್ನಿಸಿದರು. ಜೊತೆಗೆ ಬಿಬಿಎಂಪಿ ಎಂಜಿನಿಯರ್ ಇನ್ ಚೀಫ್ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು. ಕೆಲಸ ಮಾಡದ ಅಧಿಕಾರಿಗಳನ್ನು ಬದಲಾಯಿಸಿ. ಕಾಮಗಾರಿ ಮಾಡದೇ ಬಿಲ್ ಕೇಳಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

    ಪೀಠ ಆರು ತಿಂಗಳುಗಳಿಂದ ಯಾಕೆ ತನಿಖೆ ಮಾಡಿಲ್ಲ. ಬೇಗ ತನಿಖೆ ಮಾಡಿ. 45 ದಿನಗಳಲ್ಲಿ ಏನು ಮಾಡಿಲ್ಲ. ನಿಮಗೆ ಇದರ ಬಗ್ಗೆ ಉತ್ಸಾಹ ಇಲ್ಲ ಅನಿಸ್ತಾ ಇದೆ. 6 ವಾರದಲ್ಲಿ ವಿಚಾರಣಾ ಆಯೋಗ ತನಿಖೆ ಮುಗಿಯದಿದ್ದಲ್ಲಿ 100% ಬಿಲ್ ಮಂಜೂರಿಗೆ ಆದೇಶ ಮಾಡಬೇಕಾಗುತ್ತದೆ ಹೈಕೋರ್ಟ್ ಎಚ್ಚರಿಕೆ ನೀಡಿತು.

  • ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

    ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

    ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ (Pay DCM) ಹೆಸರಿನಲ್ಲಿ ಕಮಿಷನ್‌ ಹಗರಣ ನಡೀತಿದೆ. ಕಮಿಷನ್ ಪಡೆದು ಆಂಧ್ರದ ಗುತ್ತಿಗರದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಸರ್ಕಾರದ ವಿರುದ್ಧ ಮತ್ತೆ ಕಮಿಷನ್‌ ಬಾಂಬ್‌ ಸಿಡಿಸಿದ್ದಾರೆ.

    ವಿಧಾನಸಭೆ ಕಲಾಪ (Belagavi Session) ಶೂನ್ಯವೇಳೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್‌, ಟೆಂಡರ್/ಕಾಮಗಾರಿ ಬಾಕಿ ಬಿಲ್‌ಗಳಿಗೆ ಆಗ್ರಹಿಸಿದ್ದು, ಈ ವೇಳೆ ಕಮೀಷನ್ ಆರೋಪದ (Corruption Allegation) ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಸಿಎಂ ತವರಲ್ಲೇ ಇಂದಿರಾ ಕ್ಯಾಂಟಿನ್ ನಡೆಸಲು ನಿರಾಸಕ್ತಿ; ಬಯಲಾಯ್ತು ಕಳ್ಳ ಲೆಕ್ಕ – ʻಪಬ್ಲಿಕ್ʼ ವರದಿಯಿಂದ ಎಚ್ಚೆತ್ತ ಪಾಲಿಕೆ

    ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸರ್ಕಾರ ಕಾಮಗಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಿಲ್ಲ, ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಅನ್ಯ ರಾಜ್ಯಗಳ ಗುತ್ತಿಗೆದಾರರಿಗೆ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. ಈ ಮೂಲಕ ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸರಿನಲ್ಲಿ ಕಮಿಷನ್‌ ಹಗರಣ ನಡೀತಿದೆ. ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲಾಗಿದೆ. ಕಮಿಷನ್ ಪಡೆದು ಆಂಧ್ರದ ಗುತ್ತಿಗರದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಹಗರಣ ನಡೆದಿದೆ, ಸರ್ಕಾರ ಇದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಯತ್ನಾಳ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ಯತ್ನಾಳ್‌ ಆರೋಪಗಳಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಕೆಲಕಾಲ ಸದನದಲ್ಲಿ ಗದ್ದಲ, ಕೋಲಾಹಲ ನಡೆಯಿತು. ಬಳಿಕ ಸ್ಫೀಕರ್‌ ಗದ್ದಲವನ್ನು ಸಹಜ ಸ್ಥಿತಿಗೆ ತಂದರು. ಇದನ್ನೂ ಓದಿ: ಕಾರು-ಬಸ್‌ ನಡುವೆ ಮುಖಾಮುಖಿ ಡಿಕ್ಕಿ – ಶಿರಸಿಯಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

    ಅಲ್ಲದೇ ವಿಜಯಪುರದಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆಯಾಗುತ್ತಿದೆ. 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಬೇಸಿಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 52 ಕೋಟಿ ರೂ. ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಿತ್ತು. ವಿಜಯನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡಿ ಸಮಸ್ಯೆಗೆ ಪರಿಹಾರ ಕೊಡಬೇಕು ಮನವಿ ಮಾಡಿದರು.

  • ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಡಿ.ಕೆ ಶಿವಕುಮಾರ್

    ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಡಿ.ಕೆ ಶಿವಕುಮಾರ್

    ಬೆಂಗಳೂರು: ನಾನು 15% ಕಮೀಷನ್ ಕೇಳಿದ್ದೇನೆ ಅಂತ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬೊಮ್ಮಾಯಿ (Basavaraj Bommai) ಅಶೋಕ್ (R Ashok) ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ. 5 ಸಾವಿರ ಕೋಟಿ 3 ಸಾವಿರ ಕೋಟಿ ಬಿಲ್ ಏಕೆ ಉಳಿಸಿಕೊಂಡ್ರಿ. ನಿಮ್ಮ ಅವಧಿಯಲ್ಲಿ ಏಕೆ ಬಿಲ್ ನಿಲ್ಲಿಸಿದ್ರಿ?. ಮುಖ್ಯಮಂತ್ರಿಗಳು ಕೆಂಪಣ್ಣ ನೈಜತೆ ನೋಡಿದ್ದಾರೆ. ಕೆಂಪಣ್ಣ ನಮ್ರತೆಯಿಂದ ಮನವಿ ಮಾಡಿಕೊಂಡ್ರು. ಐಎಎಸ್ ಆಫೀಸರ್ ನೇತೃತ್ವದಲ್ಲಿ ಕಮಿಟಿ ಏರ್ಪಡಿಸಲಾಗಿದೆ. ಈಗ ಯಾಕೆ ಅಜೆರ್ಂಟ್ ಮಾಡ್ತಿದ್ದಾರೆ?. ಯಾಕೆ ನೀವು ಬಿಲ್ ಕೊಡಲಿಲ್ಲಾ..? ಅವರು ಫಸ್ಟ್ ಉತ್ತರ ಕೊಡಬೇಕು. 10-15 ಪ್ರಶ್ನೆ ಕೇಳಿದ್ರು, ಮೊದಲು ಯಾರು ಕೇಳಿದ್ರು ಹೇಳಿ ಎಂದು ವಾಗ್ದಾಳಿ ನಡೆಸಿದರು.

    ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ. ತನಿಖೆ ಎಲ್ಲಾ ಕಡೆ ಮಾಡುತ್ತಾರೆ. ಕೆಲಸ ಮಾಡಿದ್ರೆ ಹಣ ಕೊಡುತ್ತಾರೆ. ಬಿಜೆಪಿ (BJP) ಅಧಿಕಾರದಲ್ಲಿ ಮೂರನಾಲ್ಕು ವರ್ಷ ತಡೆದುಕೊಂಡಿದ್ದಾರೆ. ಈಗ ಯಾಕೆ ಅರ್ಜೆಂಟ್. ಪ್ರಜಾಪ್ರಭುತ್ವದಲ್ಲಿ ಕೇಳುವ ಹಕ್ಕಿದೆ. ಯಾರು ಆ ದುಡ್ಡು ಕೇಳಿದ್ದು..? ನಮ್ಮ ಆಫೀಸರ್ ಗೆ ರಿಪೋರ್ಟ್ ಕೇಳಿದ್ದೀನಿ. ಯಾರು ಯಾರು ಮಾತಾಡ್ತಿದ್ದಾರೆ.. ಯಾರು ಯಾರ ಹಿಂದಿದ್ದಾರೆ ಎಲ್ಲಾ ಗೊತ್ತು. ಸಾಮ್ರಾಟ್ ಅಶೋಕ್ ಏನು ಮಾತನಾಡಿದರು, ಬೊಮ್ಮಾಯಿ ಏನು ಮಾತನಾಡಿದರು, ಕುಮಾರಣ್ಣ ಹೋ ಅಣ್ಣ ಅನ್ನೋ ಹಾಗಿಲ್ವಲ್ಲ. ಕುಮಾರಸ್ವಾಮಿ (HD Kumaraswamy)  ಅವರು ಏನು ಮಾತಾಡಿದರು ಯಾಕೆ ಮಾತನಾಡಿದರು..? ಬೊಮ್ಮಾಯಿ, ಅಶೋಕ್ ಅವರ ಅವಧಿಯಲ್ಲಿ ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ಕೆಂಪಣ್ಣ ಎಲ್ಲೂ ಅಧಿಕಾರಿಗಳು ಹಣ ಕೇಳಿದ್ದಾರೆ ಅಂತ ಹೇಳಿಲ್ಲ. ಹಾಗೇನಾದರು ಯಾರಾದರು ಕೇಳಿದರೆ ಆ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದರು.

    ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲಿಗೆ ಪ್ರತಿಕ್ರಿಯಿಸಿದ ಡಿಸಿಎಂ, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲ ಉತ್ತರ ಕೊಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಿಷನ್ ಬೇಡಿಕೆ ಆರೋಪ- ಹುಬ್ಬಳ್ಳಿಯ ಗುತ್ತಿಗೆದಾರ ದಯಾಮರಣಕ್ಕೆ ಅರ್ಜಿ

    ಕಮಿಷನ್ ಬೇಡಿಕೆ ಆರೋಪ- ಹುಬ್ಬಳ್ಳಿಯ ಗುತ್ತಿಗೆದಾರ ದಯಾಮರಣಕ್ಕೆ ಅರ್ಜಿ

    ಹುಬ್ಬಳ್ಳಿ: ಅದ್ಯಾಕೋ ಏನು ಗುತ್ತಿಗೆದಾರರಿಗೆ ಮತ್ತು ಬಿಜೆಪಿ ಸರ್ಕಾರ (BJP Government) ಕ್ಕೆ ಸರಿಬರುತ್ತಿಲ್ಲ. 40% ಕಮಿಷನ್ ದಂಧೆ ಹೊರಬಂದು ಬಿಜೆಪಿ ನಾಯಕರು ರಾಜ್ಯದ ಜನತೆ ಮುಂದೆ ತಲೆ ತಗ್ಗಿಸುವಂತಾಯಿತು. ಈಗ ಇಂತದ್ದೇ ಮತ್ತೊಂದು ಪ್ರಕರಣ ಹೊರಬಂದಿದ್ದು, 40% ಕಮಿಷನ್ ಬೇಡಿಕೆ ವಿಚಾರ ರಾಷ್ಟ್ರಪತಿ (Presidemt) ಭವನ ತಲುಪಿದೆ. ಇಷ್ಟೇ ಅಲ್ಲದೇ ಗುತ್ತಿಗೆದಾರ ದಯಾಮರಣಕ್ಕೂ ಬೇಡಿಕೊಂಡಿದ್ದಾರೆ.

    ರಾಜ್ಯ ಬಿಜೆಪಿ ಸರ್ಕಾರಕ್ಕೂ 40% ಕಮೀಷನ್‍ಗೂ ಬಿಡಿಸಲಾರದ ನಂಟು ಅನಿಸುತ್ತೆ. ಈ ಮಾತನ್ನ ಹೇಳೊಕೆ ಈಗ ಮತ್ತೊಂದು ಪುರಾವೆ ಸಿಕ್ಕಿದೆ. ಕೈನಿಂದ ಬಂಡವಾಳ ಹಾಕಿ ಮಾಡಿದ್ದ ಕಾಮಗಾರಿಗೆ ಬಿಲ್ ಆಗದೆ ಮಾನನೊಂದ ಗುತ್ತಿಗೆದಾರನೊಬ್ಬ ನೇರವಾಗಿ ಪ್ರಧಾನಿ ಮೋದಿ (Narendra Modi) ಅವರ ಮೊರೆಹೋಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಕಡೂರು ಮತ್ತು ಮೂಡಗೆರೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಗುತ್ತಿಗೆದಾರ ಎ.ಬಸವರಾಜು 2020-21ರಲ್ಲಿ ಕೋವಿಡ್ ಪರಿಕರಗಳನ್ನ ಸರಬರಾಜು ಮಾಡಿದ್ದರು. ಅದರಲ್ಲಿ ಮೂಡಗೆರಿ ತಾಲೂಕಿಗೆ 27 ಲಕ್ಷ ಕಡೂರು ತಾಲೂಕಿಗೆ 85 ಲಕ್ಷ ರೂಪಾಯಿಯ ಪರಿಕರ ಪೂರೈಕೆ ಮಾಡಿದ್ದರು. ಆದರೆ ಪರಿಕರ ಸರಬರಾಜು ಮಾಡಿ 2ವರ್ಷ ಗತಿಸಿದರೂ ಬಿಲ್ ಪಾವತಿ ಮಾತ್ರ ಆಗಿಲ್ಲ. ಇದಕ್ಕೆ ಕಾರಣ ಕಮೀಷನ್ ಕರಾಳತೆ. ಇದನ್ನೂ ಓದಿ: ಇನ್ಮುಂದೆ KSRTCಯಲ್ಲಿ ನಾಯಿ ಕೊಂಡೊಯ್ದರೆ ಫುಲ್, ನಾಯಿ ಮರಿಯಾದರೆ ಹಾಫ್ ಟಿಕೆಟ್

    ಹೌದು, ಬಸವರಾಜುಗೆ ಬರಬೇಕಾದ ಬಿಲ್ ಪಾವತಿ ಮಾಡಲು ಇಓ ಕಮಿಷನ್‍ಗೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಲ್ಲದೆ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ ಹೆಸರಿನಲ್ಲಿ 40 ಪರ್ಸಂಟೇಜ್‍ಗಿಂತ ಹೆಚ್ಚಿನ ಹಣಕ್ಕೆ ಕಡೂರು ಇಓ ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಬಸವರಾಜ್‍ಗೆ ಸಾಲಗಾರರ ಕಾಟ ಸಹ ಹೆಚ್ಚಾಗಿದ್ದು, ಇದ್ರಿಂದ ಮಾನಸಿಕವಾಗಿ ನೊಂದ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಅರ್ಜಿ ಬರೆದಿದ್ದಾರೆ.

    ಈ ಅರ್ಜಿ ಜೊತೆಗೆ ಕಾಮಗಾರಿಯ ಎಲ್ಲಾ ದಾಖಲೆ ಮತ್ತು ಪರ್ಸಂಟೇಜ್‍ಗಾಗಿ ಬೇಡಿಕೆ ಇಟ್ಟ ಆಡಿಯೋ ರೆಕಾಡ್ರ್ನನನ್ನು ರಿಜಿಸ್ಟರ್ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಪ್ರಕರಣ ರಾಜ್ಯದಲ್ಲಿ ಮತ್ಯಾವ ರೀತಿಯ ಸಂಚಲನ ಹುಟ್ಟು ಹಾಕುತ್ತೆ ಅಂತ ಕಾದುನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ನಾನು ಕಮಿಷನ್ ಪಡೆದಿದ್ರೆ ಕಾನೂನು ಹೋರಾಟ ಮಾಡ್ಲಿ, ಸಿದ್ದರಾಮಯ್ಯ ಬಳಿ ಯಾಕೆ ಹೋಗ್ಬೇಕು- ಮುನಿರತ್ನ ಪ್ರಶ್ನೆ

    ನಾನು ಕಮಿಷನ್ ಪಡೆದಿದ್ರೆ ಕಾನೂನು ಹೋರಾಟ ಮಾಡ್ಲಿ, ಸಿದ್ದರಾಮಯ್ಯ ಬಳಿ ಯಾಕೆ ಹೋಗ್ಬೇಕು- ಮುನಿರತ್ನ ಪ್ರಶ್ನೆ

    ನವದೆಹಲಿ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆರೋಪಗಳನ್ನು ಮಾಡುವುದು ಬಿಟ್ಟು ಲೋಕಾಯುಕ್ತಕ್ಕೆ ಯಾಕೆ ದೂರು ನೀಡುತ್ತಿಲ್ಲ. ಕಾನೂನತ್ಮಾಕ ಹೋರಾಟ ಮಾಡುತ್ತಿಲ್ಲ ಎಂದು ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.

    ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮನೆಗೆ ಹೋಗಿ ಒಂದೂವರೆ ಗಂಟೆಗಳ ಕಾಲ ಚರ್ಚೆ ಮಾಡಿ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೆಲ್ಲ ಸಿದ್ದರಾಮಯ್ಯ ಮಾರ್ಗದರ್ಶನದಂತೆ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು ಮನೆಯಲ್ಲಿ ಡ್ರಾಫ್ಟ್ ರೆಡಿ ಮಾಡಿ, ಮೋದಿಗೆ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ: ರೇಣುಕಾಚಾರ್ಯ

    ಯಾರಿಗಾದ್ರು ತೊಂದರೆಯಾದ್ರೆ ಕೋರ್ಟ್‍ಗೆ, ಲೋಕಾಯುಕ್ತಕ್ಕೆ ಹೋಗಿರೋದು ನೋಡಿದ್ದೆನೆ. ಆದರೆ ಇವರು ಸಿದ್ದರಾಮಯ್ಯ ಬಳಿ ಹೋಗಿದ್ದಾರೆ. ಯಾರಿಗೆ ಎಷ್ಟು ಅನ್ಯಾಯವಾಗಿದೆ, ಹೇಗೆ ಅನ್ಯಾಯವಾಗಿದೆ, ಯಾವ ಅಧಿಕಾರಿಗಳು ಕಮಿಷನ್ ಪಡೆದಿದ್ದಾರೆ. ದಾಖಲೆ ಸಹಿತ ಹೇಳಬೇಕು, 12 ತಿಂಗಳಿನಿಂದ ಸುಳ್ಳು ಆರೋಪ ಮಾಡೊದು, ಗಾಳಿಯಲ್ಲಿ ಗುಂಡು ಹೊಡೆಯೋದೆ ಆಗಿದೆ ಎಂದು ಮುನಿರತ್ನ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಜೀವನದಲ್ಲಿ ನೋಡಿದ ಅತ್ಯಂತ ಭ್ರಷ್ಟ ಸರ್ಕಾರ ಇದು: ಕೆಂಪಣ್ಣ

    ವಿರೋಧ ಪಕ್ಷದ ಕೈಗೊಂಬೆಯಾಗಿ ಗುತ್ತಿಗೆದಾರರ ಸಂಘ ಕೆಲಸ ಮಾಡುತ್ತಿದೆ. ನಿಜಕ್ಕೂ ಅವರಿಗೆ ಅನ್ಯಾಯವಾಗಿದ್ದರೆ ನಾನು ಅವರ ಜೊತೆ ಇರುತ್ತೇನೆ. ಸುಖಾಸುಮ್ಮನೆ ಹೇಳಿದ ಕೆಂಪಣ್ಣ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ, ನಾನು ನಮ್ಮ ವಕೀಲರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೆ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ: ಸಿದ್ದು ಕಿಡಿ

    ಸಿದ್ದರಾಮಯ್ಯನವರೇ ಅಂಕಿ ಅಂಶ ಪಡೆದು ದಾಖಲೆ ಕಲೆಹಾಕಬೇಕಿತ್ತು. ನಾನು ವಿಧಾನಸೌಧದಲ್ಲಿ ಮಾತಾಡುತ್ತೇನೆ ಎಂದು ಹೇಳಬೇಕಿತ್ತು. ಸಿದ್ದರಾಮಯ್ಯನವರು ದಾಖಲೆ ಬಿಡುಗಡೆ ಮಾಡುತ್ತಿಲ್ಲ. ದಾಖಲೆ ಸಹಿತ ವಿಧಾನಸಭೆಯಲ್ಲಿ ಮಾತಮಾಡಬೇಕಿತ್ತು.? ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು ಅಂದುಕೊಂಡಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವನಾಗಿರುವ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

    Live Tv
    [brid partner=56869869 player=32851 video=960834 autoplay=true]