Tag: ಕಮಾಲ್ ಖಾನ್

  • ನನ್ನ ಪತಿ ಹಿಂದೂ, ನಾನಿನ್ನೂ ಮುಸ್ಲಿಂ : ಮತ್ತೆ ಗುಡುಗಿದ ಖುಷ್ಭೂ

    ನನ್ನ ಪತಿ ಹಿಂದೂ, ನಾನಿನ್ನೂ ಮುಸ್ಲಿಂ : ಮತ್ತೆ ಗುಡುಗಿದ ಖುಷ್ಭೂ

    ಬಾಲಿವುಡ್ ಚಿತ್ರೋದ್ಯಮದ ಬಗ್ಗೆ ಸದಾ ಕೊಂಕುಗಳನ್ನು ಬರೆಯುವ ಮತ್ತು ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಮಾಡುವ ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್ (Kamal Khan), ಈ ಬಾರಿ ನಟಿ ಖುಷ್ಬೂ ಬೆನ್ನುಬಿದ್ದಿದ್ದಾರೆ. ಖುಷ್ಭೂ ಮದುವೆ ಕುರಿತು ಮತ್ತು ಅವರ ನಿಜವಾದ ಹೆಸರಿನ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಸ್ವತಃ ಖುಷ್ಭೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಖುಷ್ಭೂ (Khushbhu) ಅವರ ಮದುವೆ ಮತ್ತು ಮತಾಂತರ (Conversion) ಕುರಿತಾಗಿ ಪ್ರಶ್ನೆ ಮಾಡಿರುವ ಕೆ.ಆರ್.ಕೆ, ‘ನೀವು ಹಿಂದೂ (Hindu) ಧರ್ಮಕ್ಕೆ ಮತಾಂತಗೊಂಡಿದ್ದೀರಾ? ಮತಾಂತರ ಆದ ನಂತರ ನಿಮ್ಮ ಹೆಸರನ್ನು ಖುಷ್ಭೂ ಅಂತ ಬದಲಾಯಿಸಿಕೊಂಡಿದ್ದೀರಾ’ ಎಂದು ಕೇಳಿದ್ದಾರೆ. ನಖತ್ ಎಂದಿದ್ದ ನಿಮ್ಮ ಹೆಸರು ಖುಷ್ಣೂ ಅಂತ ಬದಲಾಗಿದ್ದು ಯಾವಾಗ ಎಂದೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಕಸ್ಟಡಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆದ ನಾಗ ಚೈತನ್ಯ

    ಕಮಾಲ್ ಕೇಳಿದ ಪ್ರಶ್ನೆಗೆ ಖುಷ್ಭೂ ಉತ್ತರಿಸಿದ್ದು, ‘ನೀವು ನನ್ನ ಹೆಸರು ನಿಖಿತ್ ಎಂದು ಬರೆದಿದ್ದೀರಿ. ಆದರೆ, ನನ್ನ ಹೆಸರು ನಖತ್. ಈ ಹೆಸರಿನ ಅರ್ಥ ಖುಷ್ಭೂ ಅಂತಾನೆ. ಖುಷ್ಭೂ ಅಂತ ಹೆಸರಿಟ್ಟಿದ್ದು ಬಿ.ಆರ್.ಚೋಪ್ರಾ ಅವರು. ನಿಮಗೆ ವಿಶೇಷ ಮದುವೆ ಕಾಯ್ದೆ ಬಗ್ಗೆ ಗೊತ್ತಾ? ಆ ಕಾಯ್ದೆ ಅಡಿ ಮದುವೆ ಆಗಿದ್ದೇನೆ. ನನ್ನ ಗಂಡ ಹಿಂದೂ ಆಗಿ, ನಾನು ಮುಸ್ಲಿಂ (Muslim) ಆಗಿಯೇ ಇದ್ದೇನೆ. ಗಂಡ ನನ್ನ ಅರ್ಧ ಜೀವ. ಹಾಗಾಗಿ ಅವರ ಹೆಸರು ಸೇರಿಸಿಕೊಂಡಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

    ಧರ್ಮ ಮತ್ತು ಮದುವೆ (Marriage) ವಿಚಾರವಾಗಿ ಖುಷ್ಭೂಗೆ ಇತ್ತೀಚಿನ ದಿನಗಳಲ್ಲಿ ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರಶ್ನೆ ಕೇಳಿದವರಿಗೆಲ್ಲ ಬೋಲ್ಡ್ ಆಗಿಯೇ ಉತ್ತರ ನೀಡುತ್ತಿದ್ದಾರೆ ಖುಷ್ಭೂ. ಯಾವುದೇ ವಿಷಯವನ್ನೂ ಅವರು ಮುಚ್ಚಿಡದೇ ಎಲ್ಲವೂ ಹಂಚಿಕೊಳ್ಳುತ್ತಿದ್ದಾರೆ.

  • ನಟ ಕಮಾಲ್ ಖಾನ್ ಹತ್ಯೆಗೆ ಜೈಲಿನಲ್ಲೇ ಸ್ಕೆಚ್ ಹಾಕಿದ್ದರಂತೆ: ಮಗನಿಂದಲೇ ಸ್ಪೋಟಕ ಆರೋಪ

    ನಟ ಕಮಾಲ್ ಖಾನ್ ಹತ್ಯೆಗೆ ಜೈಲಿನಲ್ಲೇ ಸ್ಕೆಚ್ ಹಾಕಿದ್ದರಂತೆ: ಮಗನಿಂದಲೇ ಸ್ಪೋಟಕ ಆರೋಪ

    ಬಾಲಿವುಡ್ ನಟ, ನಿರ್ಮಾಪಕ ಕಮಾಲ್ ಖಾನ್ (Kamal Khan) ಅವರನ್ನು ಜೈಲಿನಲ್ಲೇ ಕೊಲ್ಲಲು ಪ್ಲ್ಯಾನ್ ಮಾಡಲಾಗಿತ್ತು ಎಂದು ಕಮಾಲ್ ಪುತ್ರ ಫೈಸಲ್ ಕಮಾಲ್ ಗಂಭೀರ ಆರೋಪ ಮಾಡಿದ್ದಾರೆ. ಲಂಡನ್ ನಿಂದಲೇ ಅಪ್ಪನ ಟ್ವಿಟರ್ ಖಾತೆಯ ಮೂಲಕ ಟ್ವಿಟ್ ಮಾಡಿರುವ ಪುತ್ರ ಫೈಸಲ್, ತಮ್ಮ ತಂದೆಯ ರಕ್ಷಣೆಗೆ ಬರುವಂತೆ ಹಲವು ನಟರನ್ನೂ ಕೇಳಿಕೊಂಡಿದ್ದಾರೆ. ಅಪ್ಪನ ಹತ್ಯೆ ಮಾಡಲು ಮುಂಬೈನಲ್ಲಿ ಭಾರೀ ಸಂಚು ನಡೆದಿರುವ ಕುರಿತೂ ಅವರು ಹೇಳಿದ್ದಾರೆ.

    ಕಮಾಲ್ ರಷಿದ್ ಕುಮಾರ್ ಟ್ವಿಟರ್ ಖಾತೆಯಿಂದ ಪುತ್ರ ಫೈಸಲ್ (Faisal Khan) ಈ ಸಂದೇಶವನ್ನು ಬರೆದಿದ್ದು, ನನ್ನ ತಂದೆಯನ್ನು ಮುಂಬೈನಲ್ಲಿ ಕೊಲ್ಲಲು ಟಾರ್ಚರ್ ಮಾಡಲಾಗುತ್ತಿದೆ. ನಾನು ಲಂಡನ್ ನಲ್ಲಿ (London) ಇರುವೆ. ಅಪ್ಪನನ್ನು ಹೇಗೆ ಉಳಿಸಿಕೊಳ್ಳಬೇಕು ಅಂತ ಗೊತ್ತಾಗುತ್ತಿಲ್ಲ. ನನ್ನ ತಂದೆಗೆ ಏನಾದರೂ ಆದರೆ, ನಾನು ನನ್ನ ತಂಗಿ ಇಬ್ಬರೂ ಸಾಯಬೇಕಾಗುತ್ತದೆ. ಹಾಗಾಗಿ ನನ್ನ ತಂದೆಯನ್ನು ಉಳಿಸಿಕೊಡಿ, ಅವರಿಗೆ ಏನೂ ಆಗದಂತೆ ನೋಡಿಕೊಳ್ಳಿ’ ಎಂದು ಫೈಸಲ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ಸಾಮಾಜಿಕ ಜಾಲತಾಣದಲ್ಲಿ ಹಲವರಿಗೆ ಅವಮಾನ ಮಾಡುತ್ತಲೇ ಬಂದಿರುವ ಕಮಾಲ್, ಇದೇ ಕಾರಣಕ್ಕಾಗಿ ಜೈಲು ಸೇರಿದ್ದಾರೆ. ಜೈಲಿನಲ್ಲಿರುವಾಗಲೇ ನಟಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕಾಗಿ ಮತ್ತೆ ಅರೆಸ್ಟ್ ಆಗಿ ಜೈಲಿನಲ್ಲಿದ್ದರು (Jail) ಕಮಾಲ್. ಈ ವೇಳೆಯಲ್ಲಿ ಅಲ್ಲಿಯೇ ಅವರನ್ನು ಹತ್ಯೆ ಮಾಡುವ ಪ್ಲ್ಯಾನ್ ಆಗಿತ್ತಾ? ಈ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಕೋರಿದ್ದಾರೆ.

    ತಮ್ಮ ತಂದೆಯ ರಕ್ಷಣೆಗೆ ಬರುವಂತೆ ದೇವೇಂದ್ರ ಫಡ್ನಿಸ್ (Devendra Fadnis), ಅಭಿಷೇಕ್ ಬಚ್ಚನ್ (Abhishek Bachchan), ರಿತೇಶ್ ದೇಶಮುಖ ಅವರಿಗೆ ಟ್ವಿಟರ್ ಮೂಲಕವೇ ಮನವಿ ಮಾಡಿರುವ ಫೈಸಲ್, ತಂದೆಗೆ ಏನಾದರೂ ತೊಂದರೆ ಆದರೆ, ತಂಗಿಯೊಂದಿಗೆ ತಾನೂ ಸಾಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ತಮ್ಮ ತಂದೆಯ ಟ್ವಿಟರ್ ಖಾತೆಯಿಂದಲೇ ಇದೆಲ್ಲವನ್ನೂ ಅವರು ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]