Tag: ಕಮಲ ಹಾಸನ್

  • ಕಮಲ್‌ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

    ಕಮಲ್‌ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

    ಬೆಂಗಳೂರು: ನಟ ಕಮಲ್‌ ಹಾಸನ್ (Kamal Haasan) ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಯ ಇಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ನಟ ಕಮಲ್ ಹಾಸನ್ ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆ ರಾಜ್ಯದಲ್ಲಿ ತ್ರೀವ ಆಕ್ರೋಶ ಹುಟ್ಟುಹಾಕಿದೆ. ಹೇಳಿಕೆ ಖಂಡಿಸಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಸವೇಶ್ವರ ನಗರದ (Basaveshwar Nagar) ಪವಿತ್ರ ಪ್ಯಾರಡೈಸ್ ಬಳಿ ನಟನ ಭಾವಚಿತ್ರಕ್ಕೆ ಬೆಂಕಿ ಹಾಕಿ ಪ್ರತಿಭಟಿಸಿದ್ದರು.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಗುಡ್ಡ ಕುಸಿತ, ಪ್ರಾಣಹಾನಿ – ರಕ್ಷಣಾ ಕಾರ್ಯಕ್ಕೆ ಯು.ಟಿ ಖಾದರ್ ಸೂಚನೆ

    ಪೊಲೀಸರ ಅನುಮತಿ ಪಡೆಯದೇ ರಸ್ತೆಯಲ್ಲಿ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಆರೋಪದ ಬೆನ್ನಲ್ಲೇ ಇದೀಗ ಕನ್ನಡ ಪರ ಸಂಘಟನೆಯ ಕಾರ್ಯಕರ್ತರಾದ ರವಿಕುಮಾರ್ ಹಾಗೂ ಬಸವೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ನೋಟಿಸ್ ಕೊಟ್ಟು ಕಳುಹಿಸಿದ್ದಾರೆ.

    ಏನಿದು ವಿವಾದ?
    ಮೇ 27ರಂದು `ಥಗ್ ಲೈಫ್’ (Thug Life) ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು.ಇದನ್ನೂ ಓದಿ: ಕಮಲ್ ಹಾಸನ್ ಬ್ಯಾನರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

  • ಎಚ್‍ಡಿಕೆಗೆ ಶುಭ ಕೋರಿದ ಕಮಲ ಹಾಸನ್

    ಎಚ್‍ಡಿಕೆಗೆ ಶುಭ ಕೋರಿದ ಕಮಲ ಹಾಸನ್

    ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಕಮಲ ಹಾಸನ್ ಆಗಮಿಸಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಶುಭಕೋರಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಎರಡು ರಾಜ್ಯಗಳ ನಡುವಿನ ಮಾತುಕತೆ ಉತ್ತಮ ಆರಂಭ ಇದು. ಅಲ್ಲದೇ ವಿವಿಧ ರಾಜಕೀಯ ನಾಯಕರ ಅಭಿಪ್ರಾಯವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

    ಕುಮಾರಸ್ವಾಮಿ ಅವರು ದೇವರು ಮತ್ತು ರಾಜ್ಯದ ಜನತೆ ಹೆಸರಲ್ಲೂ ಪರಮೇಶ್ವರ್ ಅವರು ದೇವರ ಹೆಸರಲ್ಲೂ ಪ್ರತಿಜ್ಞಾವಿಧಿ ಪಡೆದರು. ಈ ವೇಳೆ, ಅಭಿಮಾನಿಗಳು, ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬಿಜೆಪಿಯ ಬಹುಮತ ಹೈಡ್ರಾಮಾ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈ ಮೂಲಕ ಅಸ್ತಿತ್ವಕ್ಕೆ ಬಂದಿದೆ. 12 ವರ್ಷಗಳ ಬಳಿಕ ಕುಮಾರಸ್ವಾಮಿ ಇದೀಗ ಮತ್ತೆ ಸಿಎಂ ಕುರ್ಚಿ ಮೇಲೆ ಆಸೀನರಾಗಿದ್ದಾರೆ.