ಕಮಲಿ, ಬಿಗ್ ಬಾಸ್ (Bigg Boss Kannada) ಖ್ಯಾತಿಯ ಅಮೂಲ್ಯ ಗೌಡ (Amulya) ಇದೀಗ ತೆಲುಗಿನ (Telagu) ಕಿರುತೆರೆಯತ್ತ ಮುಖ ಮಾಡಿದ್ದಾರೆ. ಬಿಗ್ ಬಾಸ್ ಶೋ ಆದ್ಮೇಲೆ ಮೊದಲ ಬಾರಿಗೆ ಟಿವಿಪರದೆಯಲ್ಲಿ ಅಮೂಲ್ಯ ದರ್ಶನ ಕೊಡ್ತಿದ್ದಾರೆ.
‘ಗುಂಡೇನಿಂದ ಗುಡಿ ಗಂಟಲು’ ಎಂಬ ತೆಲುಗಿನ ಸೀರಿಯಲ್ ಮೂಲಕ ಅಮೂಲ್ಯ ಕಾಣಿಸಿಕೊಳ್ತಿದ್ದಾರೆ. ಗೃಹಿಣಿಯಾಗಿ ಅಮೂಲ್ಯ ಸೀರಿಯಲ್‌ನಲ್ಲಿ ಜೀವತುಂಬಿದ್ದಾರೆ. ಕುಡುಕ ಗಂಡನನ್ನು ಸರಿ ದಾರಿಗೆ ತರುವ ಪಾತ್ರದಲ್ಲಿ ನಟಿಸಿದ್ದಾರೆ.
ಕಮಲಿಯಾಗಿ (Kamali) ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ಅಮೂಲ್ಯ ಬಳಿಕ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಫಿನಾಲೆ ತಲುಪುವ ಒಂದು ವಾರದ ಮುನ್ನ ದೊಡ್ಮನೆಯಿಂದ ಔಟ್ ಆದರು. ಇದನ್ನೂ ಓದಿ:ಸಮಂತಾ ಔಟ್, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್ ಚಾನ್ಸ್
‘ಬಿಗ್ ಬಾಸ್’ ಶೋ ಬಳಿಕ ತೆಲುಗಿನ ಧಾರಾವಾಹಿ ಒಪ್ಪಿಕೊಳ್ಳುವ ಮೂಲಕ ನಟನೆಗೆ ಮರಳಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸಲು ಕಥೆ ಕೇಳ್ತಿದ್ದಾರೆ ಎನ್ನಲಾಗುತ್ತಿದೆ.
‘ಕಮಲಿ’ (Kamali) ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಯಶಸ್ವಿನಿ ರವೀಂದ್ರ (Yashaswini Ravindra) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಟಿವಿ ಪ್ರೇಕ್ಷಕರಿಗೆ ರಚನಾ ಆಗಿ ಗಮನ ಸೆಳೆದವರು ನಟಿ ಯಶಸ್ವಿನಿ ರವೀಂದ್ರ, ಜನಪ್ರಿಯ ‘ಕಮಲಿ’ ಧಾರಾವಾಹಿಯಲ್ಲಿ ಹೀರೋ ರಿಷಿ (Rishi) ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ರಚನಾ ಎಂಬ ಪಾತ್ರಕ್ಕೆ ಯಶಸ್ವಿನಿ ಜೀವ ತುಂಬಿದ್ದರು.
ನಟಿ ಯಶಸ್ವಿನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದಾರೆ. ಆಪ್ತರ ಸಮ್ಮುಖದಲ್ಲಿ ಯಶಸ್ವಿನಿ- ಚೇತನ್ ರಾಜ್ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ನವ ಜೋಡಿಗೆ ಹೊಸ ಬಾಳಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.
`ಕಮಲಿ'(Kamali Serial) ಧಾರಾವಾಹಿ ಮೂಲಕ ಖಳನಾಯಕಿಯಾಗಿ ಮಿಂಚಿದ ಅನಿಕಾ ಅಲಿಯಾಸ್ ಗೇಬ್ರಿಯೆಲ್ಲಾ (Gabriella) ಮತ್ತು ನಟ ಸುಹಾಸ್(Suhas) ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸ್ನೇಹಿತರ ಜೊತೆ ಅದ್ದೂರಿ ಆರತಕ್ಷತೆ ನೆರವೇರಿಸಿಕೊಂಡಿದ್ದಾರೆ. ಸದ್ಯ ರಿಸೆಪ್ಷನ್(Reception) ಫೋಟೋ ಸಖತ್ ವೈರಲ್ ಆಗುತ್ತಿದೆ.
ಕಿರುತೆರೆ ಜನಪ್ರಿಯ ಸೀರಿಯಲ್ `ಕಮಲಿ’ ಕಲಾವಿದರಾದ ಅನಿಕಾ ಮತ್ತು ಸುಹಾಸ್ ಇದೀಗ ರಿಯಲ್ ಲೈಫ್‌ನಲ್ಲಿ ಒಂದಾಗಿದ್ದಾರೆ. ಈ ಸೀರಿಯಲ್ ಮೂಲಕ ಪರಿಚಿತರಾದ ಗೇಬ್ರಿಯೆಲ್ಲಾ, ಸುಹಾಸ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇದೀಗ ಗುರು ಹಿರಿಯರ ಸಮ್ಮತಿಯ ಮೇರೆಗೆ ಸರಳವಾಗಿ ರಿಜಿಸ್ಟರ್ ಮ್ಯಾರೇಜ್(Wedding) ಆಗಿದ್ದಾರೆ. ಇದೀಗ ಕುಟುಂಬಸ್ಥರು, ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್
ನವಜೋಡಿಗೆ ಶುಭಹಾರೈಸಲು `ಕಮಲಿ’ ಸೀರಿಯಲ್ ತಂಡ ಮತ್ತು ವಾಹಿನಿಯ ಇತರೆ ಸೀರಿಯಲ್‌ನ ಕಲಾವಿದರು ಆರತಕ್ಷತೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇನ್ನೂ ನೆಚ್ಚಿನ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕ ಫ್ಯಾನ್ಸ್ ವಿಶ್ಸ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಓಟಿಟಿ ಮುಗಿಯುತ್ತಿದ್ದಂತೆ ಟಿವಿ ಬಿಗ್ ಬಾಸ್ ನ (Bigg Boss Season 9) ಹವಾ ಜೋರಾಗಿದೆ. ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕೂತೂಹಲಕ್ಕೆ ತೆರೆಗೆ ಬಿದ್ದಿದೆ. ಇದೀಗ ಅಸಲಿ ಆಟ ಕೂಡ ಶುರುವಾಗಿದ್ದು, ನಿಧಾನಕ್ಕೆ ಒಬ್ಬರ ಪರಿಚಯದ ಜತೆ ಸ್ನೇಹ ಕೂಡ ಚಿಗುರುತ್ತಿದೆ. ರಾಕೇಶ್ ಮತ್ತು ಅಮೂಲ್ಯ (Amulya Gowda) ನಡುವೆ ಸ್ನೇಹದ ಬೆಸುಗೆ ಶುರುವಾಗಿದ್ದು, ಅಮೂಲ್ಯ ಪಾತ್ರೆ ತೊಳೆಯುವುದನ್ನು ನೋಡಿ, ಗಾಡಿ ತೊಳಿತಿದ್ದೀರಾ ಎಂದು ರಾಕೇಶ್ ಕಾಲೆಳೆದಿದ್ದಾರೆ.
ದೊಡ್ಮನೆಯಲ್ಲಿ ಆಟ ಜೋರಾಗಿದ್ದ, ಭಿನ್ನ ರೀತಿಯ 18 ಸ್ಪರ್ಧಿಗಳನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ಅಮೂಲ್ಯ ಮತ್ತು ರಾಕೇಶ್ (Rakesh Adiga) ನಡುವಿನ ಮಾತುಕತೆ ನೋಡುಗರಿಗೆ ಮನರಂಜನೆ ಕೊಟ್ಟಿದೆ. ರಾಕೇಶ್ ಪಾತ್ರೆ ತೊಳೆಯುತ್ತಾ ಇದ್ದರು. ನೀವು ಕೆಲಸ ಮಾಡುತ್ತೀರಾ ಎಂದು ಅಮೂಲ್ಯ ಗೆ ಕೇಳಿದ್ದಾರೆ. ಆಗ ಹೌದು.. ಫ್ರಿ ಇದ್ದಾಗ ಕೆಲಸ ಮಾಡುತ್ತೀನಿ ಎಂದಿದ್ದಾರೆ. ಹಬ್ಬದ ಸಮಯದಲ್ಲಿ ಕೆಲಸ ಮಾಡುತ್ತೀರಾ ಎಂದು ಮತ್ತೆ ರಾಕಿ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್
ಬಳಿಕ ಅಮೂಲ್ಯ ಪಾತ್ರೆ ತೊಳೆಯುವ ವೈಖರಿ ನೋಡಿ ನೀವು ಗಾಡಿ ತೊಳಿಯುತ್ತಿದ್ದೀರಾ ಎಂದು ರಾಕೇಶ್ ತಮಾಷೆ ಮಾಡಿದ್ದಾರೆ. ಅದಕ್ಕೆ ಅಮೂಲ್ಯ, ರಾಕಿಗೆ ಸ್ಮೈಲ್ ಮಾಡಿದ್ದಾರೆ. ಈ ಹಿಂದಿನ ಓಟಿಟಿಯಲ್ಲಿ ಸೋನು (Sonu Srinivas Gowda) ಜತೆಗಿನ ರಾಕೇಶ್ ಸಂಭಾಷಣೆ ನೋಡುಗರಿಗೆ ಮನರಂಜನೆ ನೀಡಿತ್ತು. ಅದೇ ರೀತಿ ಟಿವಿ ಸೀಸನ್ ನಲ್ಲಿ ರಾಕಿ ಮತ್ತು ಅಮೂಲ್ಯ ಜೋಡಿ ಮೋಡಿ ಮಾಡಬಹುದಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ `ಕಮಲಿ'(Kamali) ಈ ಸೀರಿಯಲ್‌ನಲ್ಲಿ ಕಮಲಿಯಾಗಿ ಅಭಿನಯಿಸಿರೋ ಅಮೂಲ್ಯ ಗೌಡ (Amulya Gowda) ಹೆಸರು ಚಿರಪರಿಚಿತ.
ಮೂಲತಃ ಮೈಸೂರಿನವರೇ ಆದ ಅಮೂಲ್ಯ ಸ್ವಾತಿ ಮುತ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜೀ ವಾಹಿನಿಯ ಕಮಲಿ ಧಾರವಾಹಿ ಇವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮೂರು ಅಚ್ಚರಿಯ ಹೆಸರುಗಳು
ಅಷ್ಟೇ ಅಲ್ಲ ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು, ಈ ಬೆನ್ನಲ್ಲೇ ಅಮೂಲ್ಯಗೌರಡ ಹಾಟ್ ಫೋಟೋಗಳು ವೈರಲ್ ಆಗಿವೆ.
Live Tv
[brid partner=56869869 player=32851 video=960834 autoplay=true]
ಪ್ರತಿ ವರ್ಷವೂ ಬಿಗ್ ಬಾಸ್ (Bigg Boss Season 9) ಮನೆಯಲ್ಲಿರುವ ಸದಸ್ಯರಲ್ಲಿ ಅತೀ ಹೆಚ್ಚು ಕಿರುತೆರೆಯ ಲೋಕದವರೇ ಇರುತ್ತಾರೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾದ ನಾನಾ ಧಾರಾವಾಹಿಗಳ ಫೇಮಸ್ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ತಾರೆಯರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಯಾರೆಲ್ಲ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಇವತ್ತಷ್ಟೇ ಗೊತ್ತಾಗಲಿದೆ. ಅದಕ್ಕೂ ಮುನ್ನ ಕೆಲವು ಹೆಸರುಗಳು ಹರಿದಾಡುತ್ತಿವೆ.
ನೇಹಾ ಗೌಡ (ಲಕ್ಷ್ಮಿ ಬಾರಮ್ಮ)
ಆರು ವರ್ಷಗಳ ಅಧಿಕ ಕಾಲ ಪ್ರಸಾರವಾದ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಅಂತಾನೇ ಫೇಮಸ್ ಆಗಿರುವ ನಟಿ ನೇಹಾ ಗೌಡ (Neha Gowda). ಈ ಬಾರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಅವರ ಸಹೋದರಿ ಕೂಡ ಇವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿರುವ ನೇಹಾ ಗೌಡ, ಇದೀಗ ಧಾರಾವಾಹಿ ಲೋಕದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲವಾದರೂ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರಿಂದ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೂ ಓದಿ :ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು
ರಮೋಲಾ (ಕನ್ನಡತಿ)
ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಕನ್ನಡತಿ (Kannadathi)ಧಾರಾವಾಹಿಯ ಸಾನಿಯಾ ಪಾತ್ರದ ಮೂಲಕ ಫೇಮಸ್ ಆದವರು ರಮೋಲಾ. ಈ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಅದೊಂದು ನೆಗೆಟಿವ್ ಪಾತ್ರವಾದರೂ, ರಮೋಲಾ (Ramola) ಒಪ್ಪಿಕೊಂಡು ಪಾತ್ರ ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದರೂ, ಈವರೆಗೂ ಒಂದೂ ಸಿನಿಮಾ ಬಿಡುಗಡೆ ಆಗಿಲ್ಲ. ಮೊನ್ನೆಯಷ್ಟೇ ಕನ್ನಡತಿ ಧಾರಾವಾಹಿಯಿಂದ ಈ ನಟಿ ಹೊರ ನಡೆದಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗುವ ಕಾರಣಕ್ಕಾಗಿಯೇ ಆದ ಘಟನೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಸದ್ಯ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಮಾಡುತ್ತಿದ್ದಾರೆ ರಮೋಲಾ.
ಕಾವ್ಯಶ್ರೀ ಗೌಡ (ಮಂಗಳಗೌರಿ ಮದುವೆ)
ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳಗೌರಿಯಾಗಿ ನಟಿಸಿದವರು ಕಾವ್ಯಶ್ರೀ ಗೌಡ (Kavyashree Gowda). ಕಥಾನಾಯಕಿಯ ಪಾತ್ರವೇ ಅದಾಗಿದ್ದರಿಂದ ಅತೀ ಬೇಗ ಜನರಿಗೆ ಹತ್ತಿರವಾದರು. ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಶ್ರೀ, ಮೂಲತಃ ಚನ್ನಪಟ್ಟಣದವರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಾವ್ಯಶ್ರೀ, ಇದೀಗ ಬಿಗ್ ಬಾಸ್ ಮನೆಯನ್ನೂ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ ಅದು ಕನಸಾಗಿಯೇ ಉಳಿಯಿತು.
ಅಮೂಲ್ಯ ಗೌಡ (ಕಮಲಿ)
ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ಚಿರಪರಿಚಿತ ಹೆಸರು ಅಮೂಲ್ಯ ಗೌಡ (Amulya Gowda) ಅವರದ್ದು. ಕನ್ನಡದ ಪ್ರೇಕ್ಷಕರಿಗೆ ಕಮಲಿ (Kamali) ಆಗಿಯೇ ಪರಿಚಯವಾದವರು. ಅದೊಂದು ಸಾಂಪ್ರದಾಯಿಕ ಹುಡುಗಿಯ ಪಾತ್ರವಾಗಿದ್ದರಿಂದ ನೋಡುಗರಿಗೆ ಬೇಗನೇ ಹತ್ತಿರವಾದ ನಟಿ. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
ಓಟಿಟಿ ಬಿಗ್ ಬಾಸ್(Bigg boss) ಆಟಕ್ಕೆ ಬ್ರೇಕ್ ಬಿದ್ದಿದೆ. ಟಿವಿ ಸೀಸನ್‌ನ ಬಿಗ್ ಬಾಸ್ ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಸೀಸನ್ 9ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬುದರ ಬಗ್ಗೆ ಈಗಾಗಲೇ ಅಭಿಮಾನಿಗಳ ವಲಯದಲ್ಲಿ ಚರ್ಚೆ ಶುರುವಾಗಿದೆ.
ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಬರಲು, ಕೇವಲ ಒಂದು ವಾರ ಬಾಕಿ ಉಳಿದಿದೆ. ಈ ಹಿಂದಿನ 8 ಸೀಸನ್‌ಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳು ಇರಲಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ರೂಪೇಶ್, ಸಾನ್ಯ, ಆರ್ಯವರ್ಧನ್, ರಾಕೇಶ್ ಟಿವಿ ಬಿಗ್ ಬಾಸ್‌ನಲ್ಲಿರದ್ದಾರೆ. ಈ ಸೀಸನ್‌ನಲ್ಲಿ ನಟ ಅನಿರುದ್ಧ ಹೆಸರು ಕೇಲಿ ಬಂದ ಬೆನ್ನಲ್ಲೇ `ಕಮಲಿ’ ಖ್ಯಾತಿಯ ನಟಿ ಅಮೂಲ್ಯ ಓಂಕಾರ್ ಗೌಡ (Amulya Omkar Gowda) ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಾನ್ಯ ಶೆಟ್ಟಿ ಎಂದು ಕರೆದರೆ ನನಗಿಷ್ಟ: ಸಾನ್ಯ ಅಯ್ಯರ್
ಕಿರುತೆರೆ `ಕಮಲಿ’ (Kamali Serial) ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಅಮೂಲ್ಯ ಇದೀಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಮುದ್ದು ಮುಖ, ಖಡಕ್ ನಟನೆಯ ಕರ್ನಾಟಕದ ಮನಗೆದ್ದಿರುವ ನಟಿ ಟಿವಿ ಬಿಗ್ ಬಾಸ್‌ಗೆ ಬರೋದು ಪಕ್ಕಾ ಎನ್ನಲಾಗುತ್ತಿದೆ.
ಅಷ್ಟಕ್ಕೂ ನಟಿ ಅಮೂಲ್ಯ ಬಿಗ್ ಬಾಸ್‌ಗೆ ಬರೋದು ನಿಜಾನಾ ಅಥವಾ ಸುಳ್ಳು ಸುದ್ದಿನ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಇನ್ನೂ ಟಿವಿ ಬಿಗ್ ಬಾಸ್ ಸೆಪ್ಟೆಂಬರ್ 24ರಿಂದ ಖಾಸಗಿ ವಾಹಿನಿಯಲ್ಲಿ ಶುರುವಾಗಲಿದೆ.
Live Tv
[brid partner=56869869 player=32851 video=960834 autoplay=true]
ಕಿರುತೆರೆಯ ಜನಪ್ರಿಯ ಧಾರಾವಾಹಿ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ ಮತ್ತು ಸುಹಾಸ್ ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ತಮ್ಮ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.
ತೆರೆಯ ಮೇಲಿನ ಕಥೆಯೇ ಬೇರೆ, ತೆರೆಹಿಂದಿನ ಅಸಲಿ ವಿಚಾರವೇ ಬೇರೆ ಅನ್ನೋದಕ್ಕೆ ಈ ಜೋಡಿ ತಾಜಾ ಉದಾಹರಣೆ. ಕಮಲಿ ಧಾರಾವಾಹಿಯಲ್ಲಿ ಶತ್ರುಗಳಾಗಿ ಕಾಣಿಸಿಕೊಂಡಿರುವ ಅನಿಕಾ ಮತ್ತು ಶಂಭು ಇದೀಗ ರಿಯಲ್ ಲೈಫ್‌ನಲ್ಲಿ ಪ್ರೇಮಿಗಳಾಗಿದ್ದಾರೆ. ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಕಪಲ್ ಫೋಟೋಶೂಟ್ ಮೂಲಕ ಮೋಡಿ ಮಾಡ್ತಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್
ಅನಿಕಾ ಅಲಿಯಾಸ್ ಗೇಬ್ರಿಯೆಲಾ ಕಮಲಿ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಮಿಂಚಿದ್ದಾರೆ. ಇನ್ನು ಶುಂಭು ಅಲಿಯಾಸ್ ಸುಹಾಸ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ಮೂಲಕ ಗೆಳೆತನ ಶುರುವಾಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮಟ್ಟಿಗೆ ಬಂದು ನಿಂತಿದೆ. ಇನ್ನು ಫೋಟೋದಲ್ಲಿ ಗೇಬ್ರಿಯೆಲಾ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಥೇಟ್ ಸಿಂಡ್ರೆಲ್ಲಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಹಾಸ್ ಕೂಡ ವೈಟ್ ಶರ್ಟ್ ಮತ್ತು ನೀಲಿನಲ್ಲಿ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇತ್ತಿಚೆಗಷ್ಟೇ `ಕಮಲಿ’ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಹಸೆಮಣೆ ಏರಿದ ಬೆನ್ನಲ್ಲೇ ಇದೇ ಧಾರಾವಾಹಿಯ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅನಿಕಾ ಅಲಿಯಾಸ್ ಗೇಬ್ರಿಯೆಲಾ ಮತ್ತು ಸುಹಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.
ಈ ಜೋಡಿ `ಕಮಲಿ’ ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅನಿಕಾ ಪಾತ್ರಧಾರಿಯಾಗಿ ಗೇಬ್ರಿಯೆಲಾ ಕಾಣಿಸಿಕೊಂಡ್ರೆ, ಸುಹಾಸ್ ಅವರು ಶಂಭು ಪಾತ್ರ ಮಾಡುತ್ತಿದ್ದಾರೆ. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು ನಂತರ ಔಟ್‌ಡೋರ್ ಶೂಟಿಂಗ್ ವೇಳೆಯಲ್ಲಿ ಸುಹಾಸ್ ಮತ್ತು ಅನಿಕಾ ಮಧ್ಯೆ ಮಾತು ಹೆಚ್ಚಾಗಿ ಸ್ನೇಹ ಬೆಳೆದು, ಪ್ರೀತಿಯಾಗಿ ತಿರುಗಿತು. ಕಳೆದ ೩ ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಇನ್ನು ನಟ ಸುಹಾಸ್ ಅವರೇ ಗೇಬ್ರಿಯೆಲಾ ಪ್ರೇಮ ನಿವೇದನೆ ಮಾಡಿದ್ದರು. ನಟಿ ಕೂಡ ಒಪ್ಪಿ, ಪರಸ್ಪರ ಮೂರು ವರ್ಷಗಳ ಕಾಲ ಪ್ರೀತಿ ಮಾಡಿ ಈಗ ಗುರುಹಿರಿಯರ ಸಮ್ಮತಿಯ ಮೇರೆ ಹೊಸ ಬಾಳಿಗೆ ಕಾಲಿಡುತ್ತಿಡುತ್ತಿದ್ದಾರೆ. ಇದೀಗ ಸುಹಾಸ್ ಪ್ರಪೋಸ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ನಟಿ ಶೇರ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]