Tag: ಕಮಲಾಪುರ

  • ರಣ ಬಿಸಿಲಿನಿಂದ ವನ್ಯ ಮೃಗಗಳ ರಕ್ಷಣೆಗೆ ಸ್ಪ್ರಿಂಕ್ಲರ್ ವ್ಯವಸ್ಥೆ – ನೀರಿನಲ್ಲಿ ಚಿರತೆಗಳ ಚೆಲ್ಲಾಟ

    ರಣ ಬಿಸಿಲಿನಿಂದ ವನ್ಯ ಮೃಗಗಳ ರಕ್ಷಣೆಗೆ ಸ್ಪ್ರಿಂಕ್ಲರ್ ವ್ಯವಸ್ಥೆ – ನೀರಿನಲ್ಲಿ ಚಿರತೆಗಳ ಚೆಲ್ಲಾಟ

    ವಿಜಯನಗರ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ (Vijayanagara) ಜಿಲ್ಲೆಯಲ್ಲಿ ಬಿರು ಬಿಸಿಲು ದಿನೇದಿನೇ ಹೆಚ್ಚಾಗುತ್ತಲೇ ಇದೆ. ಅದಕ್ಕಾಗೇ ಮೃಗಾಲಯದಲ್ಲೂ ಪ್ರಾಣಿ, ಪಕ್ಷಿಗಳು ಹಾಗೂ ವನ್ಯಮೃಗಗಳಿಗೆ ಬಿಸಿಲಿನ ತಾಪ ತಟ್ಟದಂತೆ ಜಿಲ್ಲೆಯ ಕಮಲಾಪುರದ (Kamalapura) ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳು, ವನ್ಯಮೃಗಗಳಿಗೆ ಸ್ಪ್ರಿಂಕ್ಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿಲಿನ ತಾಪ ತಟ್ಟದಂತೆ ಹಾಗೂ ಪ್ರಾಣಿಗಳು ಆಯಾಸಗೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ.

    ಈ ಕಮಲಾಪುರದ ಮೃಗಾಲಯದಲ್ಲಿನ ಪ್ರಾಣಿ, ಪಕ್ಷಿ, ಹುಲಿ ಸಫಾರಿ, ಲಯನ್ ಸಫಾರಿ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ವನ್ಯ ಜೀವಿಗಳ ಕಣ್ತುಂಬಿಕೊಳ್ಳಲು ಬಂದಾಗಲೆಲ್ಲಾ ಈ ಮೃಗಗಳು ಕಣ್ಣಿಗೆ ಕಾಣುತ್ತವೆ. ಇದೇ ಕಾರಣಕ್ಕೆ ಪ್ರಾಣಿಗಳು ಆಯಾಸವಾಗಬಾರದು ಎಂದು ಬಿಸಿಲಿನಿಂದ ರಕ್ಷಣೆ ಪಡೆಯಲು ಮೃಗಾಲಯದಲ್ಲೀಗ ತಂಪಾದ ವಾತಾವರಣದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಸೌದಿ ಆಗಸದಲ್ಲಿ ಮೋದಿಗೆ ಯುದ್ಧ ವಿಮಾನಗಳ ಸ್ವಾಗತ!

    ಮೃಗಾಲಯದಲ್ಲಿ ಗಿಡಮರಗಳನ್ನ ಬೆಳೆಸಲಾಗಿದ್ದರೂ ಪ್ರಾಣಿಗಳು, ವನ್ಯಮೃಗಗಳು ಬಿಸಿಲಿನ ತಾಪಕ್ಕೆ ಹೈರಾಣಾಗದಂತೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಜಿಂಕೆ, ಹುಲಿ, ಸಿಂಹ, ನೀರಾನೆ, ಜಿರಾಫೆಗಳಿಗೆ ಬೇಸಿಗೆ ವೇಳೆ ವಿಶೇಷ ಆಹಾರ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಇದು ಬಿಸಿಲಿನ ತಾಪಮಾನದಿಂದ ವನ್ಯಜೀವಿಗಳನ್ನು ಕಾಪಾಡುವ ರಕ್ಷಣಾ ಕವಚವಾಗಿದೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣ – ಗನ್ ಮ್ಯಾನ್ ವಿಠ್ಠಲ್ ಪೊಲೀಸರ ವಶಕ್ಕೆ

    ಮೃಗಾಲಯದಲ್ಲಿ (Zoo) ಪ್ರಾಣಿಗಳು, ವನ್ಯಮೃಗಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಾಣಿಗಳು ಸಹ ಚಿಮ್ಮುವ ನೀರಿನ ಜೊತೆ ಚೆಲ್ಲಾಟವಾಡುವ ದೃಶ್ಯಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವುದು ವಿಶೇಷವಾಗಿದೆ.

  • 13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ

    13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ

    ಕಲಬುರಗಿ: 13 ವರ್ಷ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಮತ್ತೊಬ್ಬನ ಜೊತೆ ಮದುವೆಯಾದ ಕಾರಣಕ್ಕೆ ಡೆತ್ ನೋಟ್ ಬರೆದಿಟ್ಟು ಪ್ರಿಯಕರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಕಮಲಾಪುರ (Kamalapura) ತಾಲೂಕಿನ ಮಡಕಿ ಗ್ರಾಮದಲ್ಲಿ ನಡೆದಿದೆ.

    ದೇವೇಂದ್ರಪ್ಪ ಕಲಕೇರಿ (32) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಡಕಿ ಗ್ರಾಮದ ಯುವತಿಯೋರ್ವಳನ್ನು ದೇವೇಂದ್ರಪ್ಪ ಪ್ರೀತಿಸಿದ್ದ. ಕಳೆದ ನಾಲ್ಕು ವರ್ಷದ ಹಿಂದೆ ಬೇರೊಬ್ಬನೊಂದಿಗೆ ಯುವತಿ ಮದುವೆಯಾಗಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿಯಲ್ಲಿ ಚಿಕ್ಕಪ್ಪ ಹಾಗೂ ಗಂಡನ ಜೊತೆ ವಾಸವಾಗಿದ್ದಳು. ಆಗಾಗ ದೇವೇಂದ್ರನಿಗೆ ಫೋನ್ ಮಾಡಿ ತನ್ನನ್ನು ಮದುವೆ ಆಗದೆ ಹೋದರೆ ಜೀವ ಕಳೆದುಕೊಳ್ಳುವುದಾಗಿ ದುಂಬಾಲು ಬೀಳುತ್ತಿದ್ದಳು ಎಂದು ದೇವೇಂದ್ರಪ್ಪ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ

    ಹೀಗಾಗಿ, ಆತ ಬೆಂಗಳೂರಿಗೆ ತೆರಳಿ ಯುವತಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ಹೋದಾಗ ಆಕೆ ಇದುವರೆಗೆ ತನ್ನ ಚಿಕ್ಕಪ್ಪ ಎಂದು ಪರಿಚಯಿಸಿದ್ದ ವ್ಯಕ್ತಿಯೊಂದಿಗೆ ಮಲಗಿರುವುದನ್ನು ನೋಡಿ ತಾನು ಆಘಾತಗೊಂಡಿದ್ದಾಗಿಯೂ, ನಂತರ ನಡೆದ ಮಾತಿನ ಚಕಮಕಿ ವೇಳೆ ಆ ವ್ಯಕ್ತಿಗೆ ಚಾಕು ಇರಿದ ಕಾರಣಕ್ಕಾಗಿ ತನ್ನ ಮೇಲೆ ಸ್ಥಳದಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರಿಂದ ತಾನು ಅಲ್ಲಿಂದ ಓಡಿ ಬಂದಿದ್ದಾಗಿಯೂ ಪತ್ರದಲ್ಲಿ ದಾಖಲಿಸಿದ್ದಾನೆ. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು

    ಈ ಮಧ್ಯೆ, ತನ್ನ ಪ್ರೇಯಸಿ ಹೀಗೆ ಅನ್ಯ ವ್ಯಕ್ತಿಯೊಂದಿಗೆ ಮಲಗಿರುವುದನ್ನು ಕಣ್ಣಾರೆ ಕಂಡ ಬಳಿಕ ತಾನು ಬೇರೊಂದು ಹುಡುಗಿಯನ್ನು ಮದುವೆಯಾಗುವುದಾಗಿ ಆಕೆಗೆ ತಿಳಿಸಿದ್ದಾಗಿಯೂ, ಇದಕ್ಕೆ ಸಹಮತಿ ವ್ಯಕ್ತಪಡಿಸದ ಆಕೆ ತಾನು ಪೊಲೀಸ್ ಕಂಪ್ಲೆಂಟ್ ನೀಡುವುದಾಗಿ ಬೆದರಿಕೆ ಹಾಕಿದ್ದಾಗಿಯೂ ಡೆತ್ ನೋಟ್ ನಲ್ಲಿ ದೇವೇಂದ್ರಪ್ಪ ಉಲ್ಲೇಖಿಸಿದ್ದಾನೆ.
    ಚಾಕು ಇರಿತ ಕೇಸ್ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ದೇವೇಂದ್ರಪ್ಪನನ್ನು ಹುಡುಕಿಕೊಂಡು ಹೋಗಿದ್ದರು. ಆರೋಪಿಯನ್ನು ಬಂಧಿಸಲು ಆಗಮಿಸುವ ಮುನ್ನವೇ ಆತ ನೇಣಿಗೆ ಶರಣಾಗಿದ್ದ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್
  • ಕಲಬುರಗಿ| ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ – 1.4 ಲಕ್ಷ ರೂ. ಮೌಲ್ಯದ 2.15 ಕೆಜಿ ಗಾಂಜಾ ಜಪ್ತಿ

    ಕಲಬುರಗಿ| ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ – 1.4 ಲಕ್ಷ ರೂ. ಮೌಲ್ಯದ 2.15 ಕೆಜಿ ಗಾಂಜಾ ಜಪ್ತಿ

    ಕಲಬುರಗಿ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಕಮಲಾಪುರ ತಾಲೂಕಿನ ಪಟವಾದ ತಾಂಡಾದಲ್ಲಿ ನಡೆದಿದೆ.

    ಕಿಶನ್ ಚೌವ್ಹಾಣ್ ಬಂಧಿತ ವ್ಯಕ್ತಿ. ಈತ ತಮ್ಮದೇ ಜಮೀನಿನಲ್ಲಿ ತೊಗರಿ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ. ಪೊಲೀಸರ ದಾಳಿ ವೇಳೆ 1.4 ಲಕ್ಷ ರೂ. ಮೌಲ್ಯದ 2.15 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ಮುಗಿಸಲು ಬೈರತಿ ಸುರೇಶ್ ಸೇರಿಕೊಂಡಿದ್ದಾರೆ: ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಈ ಘಟನೆಗೆ ಸಂಬಂಧಿಸಿದಂತೆ ಕಮಲಾಪುರ (Kamalapura) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಬಂದಿದ್ದೆ, ಕೊನೆಯ ಬಾರಿಗೆ ಪ್ರಜ್ಞೆಯಲ್ಲಿದ್ದಾಗ ನೋಡಲಾಗಲಿಲ್ಲ: ತಾಯಿಯ ಅಗಲಿಕೆಗೆ ಕಿಚ್ಚ ಭಾವುಕ

  • ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡವನ್ನು ಬೆಚ್ಚಿ ಬೀಳಿಸಿದ್ದ ಮರ್ಡರ್ ಪ್ರಕರಣ: ಪಿಸ್ತೂಲ್ ಕೊಟ್ಟವ ಅರೆಸ್ಟ್

    ಧಾರವಾಡ: ಹುಬ್ಬಳ್ಳಿ (Hubballi) ಹಾಗೂ ಧಾರವಾಡದ (Dharwad) ಜನತೆಯನ್ನು ಬೆಚ್ಚಿ ಬೀಳಿಸಿದ್ದ ಕಮಲಾಪುರದ (Kamalapur) ಜೋಡಿ ಕೊಲೆಗೆ (Murder) ಪಿಸ್ತೂಲ್ ಕೊಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ರೌಡಿಶೀಟರ್ ಮಂಜು ಸಾವಂತ ಎಂದು ಗುರುತಿಸಲಾಗಿದೆ. ಇದುವರೆಗೂ ಪ್ರಕರಣದಲ್ಲಿ ಒಟ್ಟು 7 ಅರೋಪಿಗಳನ್ನು ಬಂಧಿಸಲಾಗಿತ್ತು. ಈತನ ಬಂಧನದಿಂದಾಗಿ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಕಳೆದ ಮೇ 25 ರಂದು ಹಣದ ವಿಚಾರಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ (Real Estate) ಮಹ್ಮದ್ ಕುಡಚಿ ಎಂಬುವವರನ್ನು ಕೊಲೆ ಮಾಡಲಾಗಿತ್ತು. ಈ ವೇಳೆ ಇನ್ನೋರ್ವ ಗಣೇಶ ಎಂಬಾತ ಕೂಡ ಸಾವಿಗೀಡಾಗಿದ್ದ. ನಂತರ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಂಜು ಸಾವಂತ ಬಳಿ ಪಿಸ್ತೂಲ್ ಪಡೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಉರುಳಿಸಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ

  • ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡದಲ್ಲಿ ಡಬಲ್ ಮರ್ಡರ್ – ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

    ಧಾರವಾಡ: ರಿಯಲ್ ಎಸ್ಟೇಟ್ (Real Estate) ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಧಾರವಾಡದಲ್ಲಿ (Dharwad) ತಡರಾತ್ರಿ ನಡೆದಿದೆ.

    ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಹಾಗೂ ಮತ್ತೊರ್ವ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ನಗರದ ಕಮಲಾಪುರ (Kamalapur) ಹೊರವಲಯದ ಮನೆ ಎದುರು ಮಹಮ್ಮದ್ ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು

    ಮಹಮ್ಮದ್ ಅವರ ಅವರ ಮನೆಯಲ್ಲಿದ್ದ ಮತ್ತೋರ್ವನ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆತ ಓಡಿ ಹೋಗಿದ್ದು, ಮನೆಯಿಂದ ರಸ್ತೆಯುದ್ದಕ್ಕೂ ರಕ್ತ ಚೆಲ್ಲಾಡಿದೆ. ಆತ ಕೂಡ ಸ್ವಲ್ಪ ದೂರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಹೆಸರು ತಿಳಿದು ಬಂದಿಲ್ಲ.

    ಸ್ಥಳಕ್ಕೆ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಸೇರಿದಂತೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೋಡಿ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಈ ಹತ್ಯೆ ಹಿಂದಿನ ಕಾರಣ ಏನು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಗುಪ್ತಾ ಅವರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಾರಕಾಸ್ತ್ರಗಳು ಪತ್ತೆಯಾಗಿವೆ. ಆರೋಪಿಗಳ ಪತ್ತೆಗೆ ತನಿಖಾ ತಂಡ ರಚನೆ ಮಾಡಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ – ಮಾರ್ಗಸೂಚಿಯಲ್ಲಿ ಏನಿರಬಹುದು?

  • ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆ – ಆತ್ಮಹತ್ಯೆ ಶಂಕೆ?

    ಕಲಬುರಗಿ: ಯುವತಿಯೊಬ್ಬಳ ಶವ ಕಮಲಾಪುರ(Kamalapura) ತಾಲೂಕಿನ ಕುರಿಕೋಟಾ ಸೇತುವೆ(Kurikota Bridge) ಬಳಿ ಪತ್ತೆಯಾಗಿದೆ.

    ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ಸೃಷ್ಟಿ ಮಾರುತಿ (21) ಡಿಗ್ರಿ ಐದನೇ ಸೆಮಿಸ್ಟರ್ ಓದುತ್ತಿದ್ದಳು. ಡಿ.13 ರಂದು ಕಾಲೇಜಿಗೆ ಹೋಗಿದ್ದವಳು ವಾಪಸ್‌ ಮನೆಗೆ ಬಂದಿರಲಿಲ್ಲ. ಇದನ್ನೂ ಓದಿ: ಬಿನ್ ಲಾಡೆನ್ ಸತ್ತಿದ್ದರೂ ಗುಜರಾತ್‌ನ ಕಟುಕ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್ ವಿದೇಶಾಂಗ ಸಚಿವ ವಿವಾದಿತ ಹೇಳಿಕೆ

    ಕುರಿಕೋಟಾ ಸೇತುವೆ ಬಳಿ ಶುಕ್ರವಾರ ಸೃಷ್ಟಿ ಶವ ಸಿಕ್ಕಿದೆ. ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕುಟುಂಬಸ್ಥರು ಯಾರ ಬಗ್ಗೆಯೂ ಅನುಮಾನ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸೃಷ್ಟಿ ಸಾವಿಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರ ಕಣ್ಣು ತಪ್ಪಿಸಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲು

    ಶಿಕ್ಷಕರ ಕಣ್ಣು ತಪ್ಪಿಸಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲು

    – ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ

    ಕಲಬುರಗಿ: ಶಿಕ್ಷಕರ ಕಣ್ಣು ತಪ್ಪಿಸಿ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಮಲಾಪುರ ತಾಲೂಕಿನ ಬೆಳಕೋಟಾ ಕೆರೆಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಲಕ್ಮಣ ಭೀಮರಾಯ ಡೊಣ್ಣುರ, ಶುಭಂ ಸೋಸುರ ಮತ್ತು ಮಂಜುನಾಥ ಮೃತ ವಿದ್ಯಾರ್ಥಿಗಳು. ಶೈಕ್ಷಣಿಕ ಪ್ರವಾಸಕ್ಕೆ ಬಂದಾಗ ದುರ್ಘಟನೆ ನಡೆದಿದೆ.

    ಇಂಡಿ ತಾಲೂಕಿನ ಸತ್ಯಸಾಯಿ ಶಾಲೆಯ ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಕಮಲಾಪುರದ ಸತ್ಯಸಾಯಿ ಶಾಲೆಗೆ ಬಂದಿದ್ದರು. ಈ ವೇಳೆ ಲಕ್ಮಣ, ಶುಭಂ ಹಾಗೂ ಮಂಜುನಾಥ ಮೂವರು ಸೇರಿ ಶಿಕ್ಷಕರ ಕಣ್ಣು ತಪ್ಪಿಸಿ ಬೆಳಕೋಟಾ ಕೆರೆಗೆ ಈಜಲು ಹೋಗಿದ್ದರು. ಆದರೆ ಮೂವರಲ್ಲಿ ಯಾರಿಗೂ ಸಹ ಈಜು ಬಾರದಿದ್ದರೂ ನೀರಿಗೆ ಇಳಿದು ಮೋಜು ಮಾಡಲು ಮುಂದಾಗಿದ್ದರು. ಈ ವೇಳೆ ಆಳವಾದ ನೀರನ್ನು ಅರಿಯದ ವಿದ್ಯಾರ್ಥಿಗಳು ಈಜಲು ಯತ್ನಿಸಿದ ಪರಿಣಾಮ ಒಬ್ಬರ ನಂತರ ಒಬ್ಬರು ನೀರಿನಲ್ಲಿ ಮುಳುಗಿ  ಸಾವನ್ನಪ್ಪಿದ್ದಾರೆ.

    ವಿದ್ಯಾರ್ಥಿಗಳು ನೀರಿನಲ್ಲಿ ಬಿದ್ದಿರುವುದು ಬೆಳಕೋಟಾ ಗ್ರಾಮದ ಜನರ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಹಾಗೂ ಗ್ರಾಮಸ್ಥರು ಬಾಲಕರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.